ನಮ್ಮೂರ ದಸರಾ: ಪ್ರಶಸ್ತಿ
ಹಬ್ಬಗಳೆಂದ್ರೆ ಅದೇನೋ ಖುಷಿ.ಅದು ನಮ್ಮನ್ನೆಲ್ಲಾ ಸ್ವಂತಂತ್ರ್ಯರನ್ನಾಗಿಸಿದ ಆಗಸ್ಟ್ ಹಬ್ಬವಾಗಿರಬಹುದು. ಗಣತಂತ್ರರನ್ನಾಗಿಸಿದ ಜನವರಿ ಹಬ್ಬವೂ ಆಗಿರಬಹುದು. ನಾಡಹಬ್ಬ ದಸರಾವಾಗಿರಬಹುದು, ಬೆಳಕಹಬ್ಬ ದೀಪಾವಳಿಯಾಗಿರಬಹುದು. ಯಾವಾಗ ಬರುತ್ತಪ್ಪಾ ರಜಾ ಎಂದನಿಸೋ ಬಕ್ರೀದು, ರಂಜಾನ್, ಕ್ರಿಸ್ಮಸ್ಸುಗಳಾದ್ರೂ ಸರಿಯೇ.ಹಬ್ಬವೆಂದ್ರೆ, ಆ ರಜೆಗಳೆಂದ್ರೆ ಅದೆಂತದೋ ಖುಷಿ ಬಾಲ್ಯದಿಂದಲೂ. ಕೆಲವೆಡೆಯೆಲ್ಲಾ ಶಾರದಾಪೂಜೆ, ಲಕ್ಷ್ಮೀ ಪೂಜೆ, ಆಯುಧಪೂಜೆ, ಗೂಪೂಜೆ ಅಂತ ಹಲವಾರು ಪೂಜೆಯಿರೋ ದಸರಾ ದೊಡ್ಡ ಹಬ್ಬವಾದರೆ ನಮ್ಮೆಡೆ ಅದರ ಹೆಚ್ಚಿನವೆಲ್ಲಾ ಬರೋ ದೀಪಾವಳಿಯೇ ದೊಡ್ಡಬ್ಬ. ದಸರಾವೆಂದರೆ ದೊಡ್ಡವರಿಗೆ ಶಮೀ ಪತ್ರೆ ಕೊಟ್ಟು, ಬನ್ನಿ ಕಡಿಯೋದು , ಬಾಳೆಮರ … Read more