ಮಕ್ಕಳ ಕವಿತೆ

*ಹಕ್ಕಿಯ ಮನೆ* ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಜೀವ ಜೀವಿಗಳ ಮೆಟ್ಟಿ ನಿಲ್ಲದೆ ಧರೆಯನೆಂದು ಬಿಟ್ಟು ಹೋಗದೆ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ತಂಪಾದ ಗಾಳಿ ಮನೆಯ ತೂಗಿ ಹಸಿರಾದ ಗರಿಕೆ ತುಸು ಬೆಚ್ಚಗಿರಿಸಿ ಗುಟುಕುಗಳೇ ಆಸ್ತಿ ಉಳಿದೆಲ್ಲ ನಾಸ್ತಿ ಜೋಕಾಲಿ ಜೀಕಲಿ ಜೋಗುಳದ ದೋಸ್ತಿ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಹೊಸ ಬೆಳಕಿನ ಹೊಸ ಹುಟ್ಟಿಗೆ ಜೊತೆಗಿದೆ ಭೂಮಾತೆಯ … Read more

ಶಿಕ್ಷಣವು ಕನಸಿನ ಕುದುರೆಯಾಗದಿರಲಿ!: ಆರ್.ಬಿ.ಗುರುಬಸವರಾಜ ಹೊಳಗುಂದಿ     

ಜಾಗತೀಕರಣದ ಪರಿಣಾಮವಾಗಿ ಭಾರತವು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಬೆಳೆಯುತ್ತಿದೆ. ಆರ್ಥಿಕತೆ, ನವೀನ ತಂತ್ರಜ್ಞಾನ ಹಾಗೂ ಉತ್ತಮ ಮೂಲಭೂತ ವ್ಯವಸ್ಥೆಗಳ ಅಭಿವೃದ್ದಿಗಳು ದೇಶದ ಹೆಮ್ಮೆಯಾಗಿವೆ. ದೇಶವು ಎಲ್ಲಾ ಕ್ಷೇತ್ರಗಳ ಆಧುನಿಕತೆಯಲ್ಲಿ ಸಕ್ರಿಯವಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಆಮೆ ವೇಗದ ಪ್ರಗತಿ ಆಗುತ್ತಿರುವುದು ದೇಶದ ಏಳಿಗೆಗೆ ಕಂಟಕವಾಗಿದೆ. ಜನಸಂಖ್ಯೆಯಲ್ಲಿ ಪ್ರಪಂಚದ ಎರಡನೇ ಸ್ಥಾನ ಇದ್ದರೂ ಪ್ರಗತಿಗೆ ಬೇಕಾದಷ್ಟು ಮಾನವ ಸಂಪನ್ಮೂಲವನ್ನು ಸೃಷ್ಠಿಸುವಲ್ಲಿ ದೇಶದ ಶಿಕ್ಷಣ ವಿಫಲವಾಗಿದೆ. ಒಂದೆಡೆ ಪ್ರತಿಭೆಗಳು ವಿದೇಶಗಳಿಗೆ ಪಲಾಯನವಾಗುತ್ತಿವೆ. ಮತ್ತೊಂದೆಡೆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಮತ್ತು … Read more

ತಂದೆ ತಾಯಿ ದೇವರ ಮುಂದೆ, ಮತ್ತಾವ ದೇವರುಂಟು !: ರವಿ ರಾ ಕಂಗಳ

ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ರೂಪಿಸುತ್ತಿರುವ ಶಿಕ್ಷಣವು ವಿಶಾಲವಾದ ಜಗತ್ತನ್ನು ಸಂಕುಚಿಸುತ್ತ ಸಾಗಿದೆ. ತಂತ್ರಜ್ಞಾನದ ಪ್ರಭಾವದಿಂದಾಗಿ ಮಾನವ ಏನೆಲ್ಲ ಸಾಧಿಸಿದ್ದಾನೆ. ಅಂಗೈಯೊಳಗೆ ವಿಶ್ವವನ್ನು ಹಿಡಿದಿಟ್ಟುಕೊಂಡಿದ್ದಾನೆ. ಆದರೆ ಸ್ವಾರ್ಥತೆಯಿಂದ ಬದುಕಿ ತನ್ನ ಕುಟುಂಬವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಅಸಹಾಯಕನಾಗಿದ್ದಾನೆ. ಕುಟುಂಬದ ಆಧಾರ ಸ್ತಂಭಗಳಂತಿರುವ ತಂದೆ ತಾಯಿಯರನ್ನು ಹೊರಹಾಕಿ ಇಲ್ಲವೇ ತಾನೆ ಹೊರಹೋಗಿ ಬದುಕುತ್ತಿದ್ದಾನೆ. ಇದರ ಮಧ್ಯೆ ತಂದೆ ತಾಯಿಯರನ್ನು ಶ್ರವಣಕುಮಾರನ ಪಿತೃಭಕ್ತಿಯಂತೆ ಪ್ರೀತಿ ವಾತ್ಸಲ್ಯದಿಂದ ಸಲುಹುತ್ತಿರುವವರು ಕಾಣಸಿಗುತ್ತಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅಷ್ಟಕ್ಕೂ ತಂದೆ ತಾಯಿಯರನ್ನು ಬಿಟ್ಟು ಬದುಕುವ ಧಾವಂತ ಹೇಗೆ ಬರುತ್ತದೆ? … Read more

ದೇವರೆ ಇಲ್ಲ ಎಂದವನ ಬದುಕಿನಲ್ಲಿ ದೇವತೆಯಾಗಿ ಬಂದೆ ನೀ…!: ಸಿದ್ದುಯಾದವ್ ಚಿರಿಬಿ…,

ಪ್ರೀತಿಯ ಪ್ರಿಯಲತೆಯೇ ಯಾಕೋ ಏನೂ ಬರೆಯಲಾಗಿರಲಿಲ್ಲ ತುಂಬಾ ದಿನ. ಇವತ್ತು ಮನಸ್ಸು ಯಾಕೋ ತಂತಾನೆ ಪ್ರಪುಲ್ಲ. ಮಂಜು ಬಿದ್ದ ಗೂಡಿನಲ್ಲಿ ಮುದುರಿ ಮಲಗಿದ ಗುಬ್ಬಿ ಮರಿಯನ್ನು ಸೂರ್ಯ ತಾಕಿ ಎಚ್ಚರಿಸಿದಂತೆ ನನ್ನ ಮುಂಗೈ ಮೇಲೆ ನಿನ್ನ ಬಿಸಿಯುಸಿರು. ನಿನ್ನ ನೆನಪುಗಳನ್ನು ಎದೆಯಂತರಾಳದಿಂದ ಎಕ್ಕಿ ಮನದ ಪುಟದ ಮೇಲೆ ತಂದು ತೋರಿಸುತ್ತಲೆ ಇತ್ತು. ಎರಡು ವಿರಹದ ಕವಿತೆಗಳನ್ನು ಬರೆದರು ಸಮಧಾನವೆನ್ನಿಸಲಿಲ್ಲ. ಈ ಸಂಜೆಯ ಶ್ರಾವಣದ ಝಡಿ ಮಳೆಯು ನಿನ್ನ ನೆನಪುಗಳ ತಂದು ಮನೆಯಂಗಳದಲ್ಲಿ ಎಡೆಬಿಡದೆ ಸುರಿಯುತ್ತಿದೆ. ಯಾಕೊ ಬೇಸರ … Read more

ಕು.ಸ.ಮಧುಸೂದನ ರಂಗೇನಹಳ್ಳಿ ಅವರ ‘ದುರಿತಕಾಲದ ದನಿ’ ಕವನಸಂಕಲನ ಬಿಡುಗಡೆ ಸಮಾರಂಭ

ದಿನಾಂಕ: 02-09-2018ರ ಬಾನುವಾರ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ‘ದುರಿತಕಾಲದ ದನಿ’ಕವನಸಂಕಲನವನ್ನು ಅನ್ವೇಷಣೆ ಪತ್ರಿಕೆಯ ಸಂಪಾದಕರಾದ ಶ್ರೀ ಆರ್.ಜಿ.ಹಳ್ಳಿ ನಾಗರಾಜ್ ಲೋಕಾರ್ಪಣೆಗೊಳಿಸಲಿದ್ದಾರೆ. ಕೃತಿಯನ್ನು ಕುರಿತು ಖ್ಯಾತ ವಿಮರ್ಶಕರಾದ ಶ್ರೀ ಡಾ. ಪ್ರಕಾಶ್ ಹಲಗೇರಿ, ಕನ್ನಡ ಪ್ರಾದ್ಯಾಪಕರು, ಕುವೆಂಪು ವಿ.ವಿ.ಯ ಸ್ನಾತಕೋತ್ತರ ಕೇಂದ್ರ, ದಾವಣಗೆರೆ, ಅವರು ಮಾತಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕವಿಯಿತ್ರಿ ಶ್ರೀಮತಿ ಡಾ.ಹೆಚ್.ಎಲ್.ಪುಷ್ಪಾ ರವರು( ಪ್ರಾಚಾರ್ಯರು, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಗಳೂರು) ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ. ವೃಷಭೇದ್ರಪ್ಪ, ನಿದೇಶಕರು, ಬಾಪೂಜಿ ಇಂಜಿಯರಿಂಗ ಕಾಲೇಜು, ದಾವಣಗೆರೆ … Read more

ಅಪೂರ್ಣ ಹೋರಾಟ !: ಅಶ್ಫಾಕ್ ಪೀರಜಾದೆ

-1- ದೇಶ ಸ್ವಾತಂತ್ರವಾಗಿ ದಶಕಗಳೇ ಕಳೆದು ಹೋದರೂ ದೇಶದ ಪ್ರಜೆಗಳು ಮಾತ್ರ ಇನ್ನೂ ಗುಲಾಮರಾಗಿಯೇ ಉಳಿದಿರುವದು ನಮ್ಮ ದೇಶದ ಅತಿದೊಡ್ಡ ದುರಂತ. ಆಜಾದ ದೇಶದ ಗುಲಾಮ ಪ್ರಜೇಗಳು ನಾವು!. ಬ್ರಿಟೀಷರ ಕಾಲದಿಂದಲೂ ನಾವು ಶೋಷಣೆಯ ಹಳ್ಳಕ್ಕೆ ಬಿದ್ದು ಒದ್ದಾಡ್ತಾ ಇದ್ದೇವೆ. ಆಗ ಬ್ರಿಟೀಷರು ನಮ್ಮನ್ನು ಶೋಷಿಸುತ್ತಿದ್ದರೆ, ಈಗ ನಮ್ಮವರೆ ನಮ್ಮನ್ನು ಶೋಷಿಸುತ್ತಿದ್ದಾರೆ. ಸ್ವತಂತ್ರ್ಯಪೂರ್ವ ಮತ್ತು ಸ್ವಾತಂತ್ರದ ನಂತರದ ದಿನಗಳು ಕಂಡಿರು ಹಿರಿಯರನ್ನು ಕೇಳಿದರೆ ಸ್ವತಂತ್ರ್ಯಪೂರ್ವದ ದಿನಗಳೇ ಚೆನ್ನಾಗಿದ್ದವು. ಈಗೀನ ರಾಜಕಾರಣಿಗಳು ವೋಟಿನಾಸೆಗೆ ದೇಶದ ಜ್ವಲಂತ ಸಮಸ್ಯೆಗಳನ್ನೆಲ್ಲ ಹಾಗೇ … Read more

ಕಪ್ಪೆಯೊಂದರ ಅಂತಿಮಯಾತ್ರೆ: ಡಾ. ಗಿರೀಶ್ ಬಿ.ಸಿ.

ನಮ್ಮೂರಿನ ಹೆಸರನ್ನು ಒಂದ್ ಬಾರಿ ಹೇಳಿದ್ರೆ ಯಾರ್ಗು ಅರ್ಥಾನೇ ಆಗಲ್ಲ. ‘ಏನೂ .. ಕೊಕ್ಕರೇನಾ ?’ ಅನ್ನೊ ಪ್ರಶ್ನೇನ ಜರೂರು ಕೇಳ್ತಾರೆ. ಮೊದ್ಲು ಮೊದ್ಲು ಹೀಗಿ ಕೇಳಿದ್ರೆ ಕೋಪ ಮಾಡ್ಕೊತಿದ್ದ ನಾನು ಇತ್ತೀಚಿಗಂತು ತಾಳ್ಮೆಯಿಂದಲೆ ‘ಅಲ್ರಿ, ಬೆಕ್ಕರೆ ಅಂತ, ಪುಟ್ಟಣ್ಣ ಕಣ್‍ಗಾಲ್ ಅವರನ್ನ ಕರ್ನಾಟಕಕ್ಕೆ ಕೊಡುಗೆ ಇತ್ತ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿರೊ ಹಳ್ಳಿ ಇದು’ ಅಂತಾನೊ ಇಲ್ಲ …. ‘ನೀವು ಬೈಲುಕುಪ್ಪೆ ಬುದ್ದಿಸ್ಟ್ ಟೆಂಪಲ್‍ಗೆ ಹೋಗೋವಾಗ ಹತ್ತಿರದಲ್ಲಿ ಸಿಗುತ್ತೆ’ ಅಂತಾನೊ, ಕೆಲವೊಮ್ಮೆ ಮೂಡ್ ಇಲ್ದೆ ಇದ್ರೆ, ‘ಬೆಟ್ಟದಪುರದ … Read more

ಪಂಜು ಸಂಚಾಲಕರು

ನಲ್ಮೆಯ ಗೆಳೆಯರೇ, ಪಂಜು ಬಳಗದ ಪರವಾಗಿ ನಿಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಪಂಜು ಈಗಾಗಲೇ ತನ್ನದೇ ಓದುಗ ಹಾಗು ಬರಹಗಾರರ ಬಳಗ ಹೊಂದಿದೆಯಾದರೂ ಪಂಜು ಇನ್ನೂ ಹೆಚ್ಚು ಓದುಗರಿಗೆ ತಲುಪಬೇಕೆನ್ನುವ ಉದ್ದೇಶದಿಂದ ಪಂಜು ಬಳಗಕ್ಕೆ ಪಂಜು ಸಂಚಾಲಕರನ್ನು ಸೇರಿಸಿಕೊಳ್ಳುವ ಆಸೆ ಇದೆ. ಆಸಕ್ತಿ ಉಳ್ಳವರು ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಮತ್ತು ಫೋಟೋ ಕಳುಹಿಸಿಕೊಡಿ. ನಮ್ಮ ಇ ಮೇಲ್: smnattu@gmail.com, editor.panju@gmail.com ನಮ್ಮ ವಾಟ್ಸ್ ಅಪ್ ನಂಬರ್: 9844332505 ಧನ್ಯವಾದಗಳೊಂದಿಗೆ ಪಂಜು ಬಳಗ

ಮುತ್ತಿನ(0ಥ)ಸರ: ಎಂ.ಎಚ್.ಮೊಕಾಶಿ

ನನ್ನ ಮಿತ್ರರು, ಆತ್ಮೀಯರು ನನ್ನ ಲೇಖನಗಳನ್ನು ಓದಿ ಯಾವಾಗಲೂ ಬೇರೆ ಬೇರೆ ವಿಷಯದ ಬಗ್ಗೆ ಬರಿತಾ ಇದೀರಲ್ಲ ಯಾಕೆ ನೀವು ನಿಮ್ಮ ಜೀವನದಲ್ಲಿ ನಡೆದ ಯಾವುದಾದರೊಂದು ವಿಶೇಷ ಘಟನೆಯ ಬಗ್ಗೆ ಬರೆಯಬಾರದೇಕೆ? ಎಂದಾಗ ನಾನು ಒಂದು ಘಟನೆಯನ್ನು ಇಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನಷ್ಟೆ. ಗಂಡುಮೆಟ್ಟಿದ ನಾಡು ಉತ್ತರ ಕರ್ನಾಟಕ. ಇಲ್ಲಿ ಪಂಜಾಬ (ಪಂಚ ನದಿಗಳ ಬೀಡು) ಎಂದೇ ಖ್ಯಾತಿಯಾದ ಬಿಜಾಪೂರ (ಇಂದು ವಿಜಯಪುರ ಆಗಿದೆ) ಜಿಲ್ಲೆಯ ಒಂದು ಗ್ರಾಮದಲ್ಲಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಹಲವು ವರ್ಷಗಳ ಹಿಂದೆ … Read more

“ಒಂದು ಸಾಂತ್ವನಪರ ನುಡಿ ಚಳಿಗಾಲದ ಮೂರು ತಿಂಗಳನ್ನು ಬೆಚ್ಚಗಿಡಬಲ್ಲದು”: ಜಯಶ್ರೀ ಭ.ಭಂಡಾರಿ.

ಇಂದಿನ ಆಧುನಿಕ ಜೀವನದ ಧಾವಂತದ ಬದುಕಿನಲ್ಲಿ ಮಾನವೀಯ ಹಾಗೂ ಸಂವೇದನಾಶೀಲ ಗುಣಗಳ ಕೊರತೆ ಎದ್ದುಕಾಣುತ್ತಿದೆ.ಪರಸ್ಪರ ಕಾಲೇಳದಾಟದಲ್ಲಿ ಮೌಲ್ಯಯುತ ಜೀವನ ಕಾಣದಂತಾಗಿದೆ.ನಮ್ಮ ಪೂರ್ವಜರ ಬದುಕನ್ನು ಕಂಡಾಗ ಮನಸ್ಸು ಹಳಹಳಿಸುತ್ತದೆ.ಇಂದು ದಯಾಪರ ಜೀವನ ಎಂದಿಗಿಂತ ತುಂಬ ಆವಶ್ಯಕವೆನಿಸುತ್ತಿದೆ. ಮನುಷ್ಯ ಮನುಷ್ಯರ ಮಧ್ಯ ಪರಸ್ಪರ ಕೊಡಮಾಡಲು ಸಾಧ್ಯವಿರುವ ಉಡುಗೊರೆಗಳೆಲ್ಲ ಮೌಲ್ಯಯುತವಾದುದು ಎಂದರೆ ದಯೆ. ಅದು ಕಾರುಣ್ಯ,ಸಹಾನುಭೂತಿ,ಅನುಕಂಪ ಎಂಬ ಇತರ ಹೆಸರುಗಳಿಂದಲೂ ಕರೆಯಲ್ಪಡುತ್ತದೆ.ಮನುಷ್ಯ ತೋರ್ಪಡಿಸುವ ದಯೆ ಹುಟ್ಟುಗುಣವಾಗಿದ್ದರೂ ಅದು ಆತನಲ್ಲಿ ಸ್ಥಿರವಾಗಿ ನೆಲೆಗೊಳ್ಳಲು ಅದನ್ನು ಮಾದರಿಯಾದ ಗುಣವಿಶೇಷಗಳಿಂದ ಬೆಳೆಸಬೇಕಾಗುತ್ತದೆ. ಮನುಷ್ಯ ಸ್ವತಂತ್ರ ಜೀವನವನ್ನು … Read more

ಚೇತನ್ ನಾಗರಾಜರ ಖಾಲಿ ಕೋಣೆಯ ಹಾಡು: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

ಗಜಲ್ ಸಂಕಲನ: ಖಾಲಿಕೋಣೆಯ ಹಾಡು ಲೇಖಕರು: ಚೇತನ್ ನಾಗರಾಳ ಅವಲೋಕನ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ. ಆತ್ಮೀಯ, ಪ್ರೀತಿಯ ಗೆಳೆಯ ಚೇತನ್ ನಾಗರಾಳ ಬರೆದ #ಖಾಲಿಕೋಣೆಯ_ಹಾಡು” ಗಜಲ್ ಸಂಕಲನ ಓದಿದಾಗ ನನ್ನ ಓದಿಗೆ ದಕ್ಕಿದ್ದಿಷ್ಟು… ಶೃಂಗಾರಕಾವ್ಯ, ರಮ್ಯಕಾವ್ಯ, ರಮಣೀಯ ಕಾವ್ಯ, ಮನಮೋಹಕ ಕಾವ್ಯ ಪ್ರಕಾರ ಎಂದು ಕರೆಸಿಕೊಳ್ಳುವ ಗಜಲ್ ಚೇತನ್ ನಾಗರಾಳನ ಭಾವದ ತೆಕ್ಕೆಯಲಿ ಸಿಕ್ಕು ದಿಕ್ಕು ದಿಕ್ಕುಗಳನ್ನೇ ಸಂಚರಿಸಿ ಎಲ್ಲ ಪ್ರಕಾರದ ಭಾವಗಳನ್ನು ವಿಶೇಷವಾಗಿ, ವಿಶಿಷ್ಟವಾಗಿ ಮತ್ತು ವಿಸ್ಮಯವಾಗಿ ಕಟ್ಟಿಕೊಟ್ಟ ಬಗೆ ಇಷ್ಟವಾಗುತ್ತದೆ. ಎಲ್ಲವನ್ನು ಹೇಳುವಾಸೆ ಆಗಿದೆ … Read more

ಬಂಜೆ: ಚೈತ್ರಾ ವಿ.ಮಾಲವಿ

‘ಹೇ..ಪೆದ್ದು ನೋಡಲ್ಲಿ ಒಲೆ ಮುಂದೆ ನಿಂತ್ಕೊಂಡು ಏನು ಯೋಚನೆ ಮಾಡ್ತಿದಿಯಾ. ತಲೆ ಸರಿಗಿದಿಯೋ..ಇಲ್ವೋ. ಹಾಲು ಉಕ್ತಿರೋದು ಕಾಣ್ತಿಲ್ವ’ ಕೊಂಕು ನುಡಿದಳು ಅತ್ತೆ. ಅತ್ತೆಯ ಮಾತಿನಿಂದ ಯಾವುದೋ ಲೋಕದಿಂದ ಹೊರ ಬಂದಳು ಭಾರತಿ. ‘ನಿನ್ನ ಯೋಗ್ಯತೆಗೆ ಮದುವೆ ಆಗಿ ಹತ್ತು ವರ್ಷ ಆದರೂ ಮಗು ಕೊಡೋಕೆ ಆಗಿಲ್ಲ ನಿನ್ನ ಕೈಲಿ.’ ಮತ್ತೆ ಅತ್ತೆಯ ಕೊಂಕು ನುಡಿಗಳು ಶುರುವಾದವು. ಭಾರತಿಗೆ ಹೊಸದೇನೂ ಅಲ್ಲ ಇದು. ಪ್ರತಿದಿನ ಅತ್ತೆಯ ಕೊಂಕು ನುಡಿಗಳನ್ನು ಕೇಳಿ ಬೇಸತ್ತಿದ್ದಳು. ‘ನನ್ನ ಅಂತರಂಗ ಬಲ್ಲವರು ಯಾರು? ನನ್ನ … Read more

ಹುಚ್ಚು ಖೋಡಿ ವಯಸ್ಸು: -ಗೌರಿ.ಚಂದ್ರಕೇಸರಿ, ಶಿವಮೊಗ್ಗ.

  ವಿದ್ಯಾರ್ಥಿ ಜೀವನವೇ ಹಾಗೆ. ನಿತ್ಯ ಸಂತೋಷ, ಸಂಭ್ರಮ, ತಮಾಷೆಗಳಿಂದ ಕೂಡಿರುತ್ತದೆ. ಒಬ್ಬರಿನ್ನೊಬ್ಬರ ಕಾಲೆಳೆಯುವುದು, ಚುಡಾಯಿಸುವುದು, ಮೂರ್ಖರನ್ನಾಗಿಸುವುದು ನಡೆದೇ ಇರುತ್ತದೆ. ಆಗ ತಾನೆ ಹೈಸ್ಕೂಲನ್ನು ಹಿಂದೆ ಬಿಟ್ಟು ಕಾಲೇಜಿಗೆ ಅಡಿ ಇಡುವ ವಿದ್ಯಾರ್ಥಿಗಳಂತೂ ಅಪ್ಪಟ ಮದ್ಯ ಹೀರಿದ ಮಂಗಗಳಂತಾಡುತ್ತವೆ. ನಾವು ಏನೇ ಮಾಡಿದರೂ ಅದು ಕೇವಲ ತಮಾಷೆಗಾಗಿ ಎಂದು ಇವರು ತಮ್ಮಷ್ಟಕ್ಕೆ ತಾವೇ ದೃಢೀಕರಿಸಿಕೊಂಡು ಬಿಟ್ಟಿರುತ್ತಾರೆ. ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸ್ಸು ಎಂಬ ಮಾತನ್ನು ಅಕ್ಷರಷ: ಸತ್ಯ ಎಂಬುದನ್ನು ಸಾಬೀತು ಪಡಿಸುತ್ತಾರೆ. ಮಾಡುವ ತಮಾಷೆಗಳು … Read more

ಎಲ್ಲಿ ಹೋದವು ಆ ದಿನಗಳು…!: ಅಕ್ಷಯಕುಮಾರ ಜೋಶಿ

ಹಿಂದಿನ ಕಾಲದಲ್ಲಿ ಸಂಬಂಧಗಳು, ಆತ್ಮೀಯರ ಸ್ನೇಹಪರ ಬಾಂದವ್ಯಗಳು ಗಟ್ಟಿಯಾಗಿರುತ್ತಿದ್ದವು. ಇಂದಿನ ಆಧುನಿಕ ದಿನಮಾನಗಳಲ್ಲಿ ಆರೋಗ್ಯಕರ, ಪ್ರೀತಿಯ ಸಂಬಂಧಗಳು ನಶಿಸುತ್ತ ಅನಾರೋಗ್ಯಕರ ಚಿಂತನೆಗಳತ್ತ ಸಾಗುತ್ತಿರುವುದು ವಿಷಾಧನೀಯ, ದೇಶಸುತ್ತು – ಕೋಶಓದು ಎಂಬ ವಾಣಿಯೂ ಪೂರ್ವಿಕರು ಹೇಳಿದವಾಣಿ ನೂರಕ್ಕೆ-ನೂರು ಸತ್ಯ ಹಿಂದಿನ ಕಾಲದಲ್ಲಿ ಪ್ರೇಕ್ಷಣೀಯ ಸ್ಥಳಗಳ ಚಿತ್ರಣವನ್ನು ಕೆಲವರು ಬಲ್ಲವರಿದ ತಿಳಿದು ಇನ್ನು ಕೆಲವರು ಸ್ವತಃ ಅಲ್ಲಿಗೆ ಭೇಟಿನೀಡಿ ಅಲ್ಲಿಯ ಶಿಲ್ಪಕಲೆಗಳ ಸೌಂದರ್ಯದ ಸೊಬಗನ್ನು ಸವಿಯುವ ದಿನಗಳಿದ್ದವು. ಆಧುನಿಕತೆ, ತಂತ್ರಜ್ಞಾನ ಬೆಳೆಯುತ್ತ ಸಾಗಿದಂತೆ ಅಂಗೈಯಲ್ಲೇ ಆಗಸ ವೆಂಬಂತೆ ಮೋಬೈಲ್‍ನಲ್ಲಿಯೇ ಸ್ಥಳಗಳ … Read more

ತಮ್ಮ ಭಾವಚಿತ್ರದ ಸೌಂದರ್ಯ ಹೆಚ್ಚಿಸುವ ಸ್ವಯಂ ಕಟ್ಟುಗಳು !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಎಲ್ಲರೂ ತಮ್ಮ ತಮ್ಮ ಭಾವಚಿತ್ರಗಳಿಗೆ ಸಾಮಾನ್ಯವಾಗಿ ಕಟ್ಟನ್ನು ಹಾಕುತ್ತಾರೆ, ಹಾಕಿಸುತ್ತಾರೆ. ಯಾಕೆಂದರೆ ಎಲ್ಲರಿಗೂ ತಮ್ಮ ಭಾವಚಿತ್ರಗಳು ಸುಂದರವಾಗಿ ಕಾಣಬೇಕೆಂಬ ಆಸೆ. ಅದಕ್ಕೆ ಹಾಕಿಸುತ್ತಾರೆ. ಕಟ್ಟುಗಳು ಭಾವಚಿತ್ರದ ಶೋಭೆಯನ್ನು ಹೆಚ್ಚಿಸುತ್ತವೆ. ಭಾವಚಿತ್ರವನ್ನು ವಿರೂಪಗೊಳ್ಳದಂತೆ ಬಹಳ ವರುಷಗಳ ಕಾಲ ಹಾಳಾಗದಂತೆ ರಕ್ಷಿಸುತ್ತವೆ. ಕಟ್ಟು ಹಾಕಿದ ಭಾವಚಿತ್ರಗಳು ತಮ್ಮನ್ನು ಇರಿಸಿದ ಸ್ಥಳ, ಶೋಕೇಸಿನ, ನೇತು ಹಾಕಿದ ಗೋಡೆಯ, ತಾವಿರುವ ಟೇಬಲ್ಲಿನ ಅಂದವನ್ನು ಹೆಚ್ಚಿಸುತ್ತವೆ . ಭಾವಚಿತ್ರಗಳು ಯಾವ ವಯೋಮಾನದಲ್ಲಿನ ಭಾವಚಿತ್ರಗಳೋ ಆ ವಯೋಮಾನದಲ್ಲಿನ, ಯಾವ ಸಂದರ್ಭದಲ್ಲಿನ ಭಾವ ಚಿತ್ರಗಳೋ ಆ ಸಂದರ್ಭದಲ್ಲಿನ … Read more

ವೆಜ್ ಬಿರಿಯಾನಿ ಮತ್ತು ತರಕಾರಿ ರಾಯಿತಾ: ವೇದಾವತಿ ಹೆಚ್.ಎಸ್.

1.ವೆಜ್ ಬಿರಿಯಾನಿ. ಬೇಕಾಗುವ ಸಾಮಾಗ್ರಿಗಳು: ತುಪ್ಪ ನಾಲ್ಕು ಚಮಚ ಪಲಾವ್ ಎಲೆ ಎರಡು ಚಕ್ಕೆ ಒಂದಿಂಚು ಸ್ಟಾರ್ ಅನೈಸ್ ಒಂದು ಲವಂಗ ಆರು ಏಲಕ್ಕಿ ನಾಲ್ಕು ಕಾಳುಮೆಣಸು ಒಂದು ಚಮಚ ಜೀರಿಗೆ ಒಂದು ಚಮಚ ಈರುಳ್ಳಿ ಎರಡು/ಕತ್ತರಿಸಿ ಕೊಳ್ಳಿ. ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ ಹುರುಳಿ ಕಾಳಿ ಆರು/ಒಂದಿಂಚಿಗೆ ಕತ್ತರಿಸಿ ಕೊಳ್ಳಿ ಹೂಕೋಸು ಹತ್ತು ಎಸೆಳು ಬಟಾಣಿ ಅರ್ಧ ಕಪ್ ಕ್ಯಾರೆಟ್ ಒಂದು/ಒಂದಿಂಚಿಗೆ ಕತ್ತರಿಸಿ. ಆಲೂಗಡ್ಡೆ ಎರಡು/ಒಂದಿಂಚಿಗೆ ಕತ್ತರಿಸಿ ಪನ್ನೀರ್ 200ಗ್ರಾಂ/ಚೌಕಾಕಾರವಾಗಿ ಒಂದೇ ರೀತಿಯಲ್ಲಿ ಕತ್ತರಿಸಿ. ಸಿಹಿ … Read more

ನಾ ಯಾರು… ನನ್ನವರು ಯಾರು… : ಸಹನಾ ಪ್ರಸಾದ್

ಜೀವ ಹಿಡಿಯಾಗುತ್ತಿದೆ. ಅವರ ಮೆಲು ನಗೆ, ಕಣ್ಣಲ್ಲಿ ಕಾಣದ ಆದರೆ ತುಟಿಯಲ್ಲಿ ತೇಲುವ ನಗೆ ಅಸಹ್ಯ ಹುಟ್ಟಿಸುತ್ತಿದೆ. ಮಾತು ಮಾತಿಗೆ “ಗ್ರಾನೀ” ಅನ್ನುವ, ಚಾಕೊಲೇಟ್ ಬಾಯಿಗೆ ಹಿಡಿಯುವ ಪರಿಗೆ, ಅದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುವ ತವಕಕ್ಕೆ ಕೆಟ್ಟ ಕೋಪ ಬರುತ್ತಿದೆ. ಇಲ್ಲಿಂದ ಓಡಿ ಹೋಗಬೇಕು, ನನ್ನ ಮನೆಗೆ, ಆದರೆ ಅದು ಎಲ್ಲಿದೆ? ನನ್ನವರು ಯಾರು? ಅಸಲು ನಾನು ಯಾರು? ತಲೆ ತಿರುಗುತ್ತಿದೆ. ” ಸಾಕು ಇನ್ನು ಫ಼ೋಟೋ ತೆಗೆದಿದ್ದು. ಬೇಗ ಬೇಗ ಉಡುಗೊರೆ ಹಂಚಿ. ಉಪಹಾರ ಮುಗಿಸಿ … Read more

ದೋಷ: ಅಶ್ಫಾಕ್ ಪೀರಜಾದೆ

ಏಳು ಹಳ್ಳಿಗಳಿಂದ ಆವೃತ್ತಗೊಂಡು ಏಳು ಸುತ್ತಿನ ಕೋಟೆಯಂತಿರುವ ಊರು ಯಾದವಾರ! ನಾನು ಅಲ್ಲಿನ ಪಶು ಆಸ್ಪತ್ರೆಗೆ ಪಶು ಪರೀಕ್ಷಕನಾಗಿ ಹಾಜರಾದ ಹೊಸದರಲ್ಲಿ ಒಬ್ಬಳು ಅಂದರೆ ವಯಸ್ಸು ಸುಮಾರು ಇಪ್ಪತ್ತೆರಡರಿಂದ ಇಪ್ಪತ್ತೈದರ ನಡುವೆ ಇರಬಹುದು. ಕಣ್ಣು ಕೊರೈಸುವಂತಿರಬೇಕಾದ ಈ ಹರೆಯದಲ್ಲಿ ಅದ್ಯಾವುದೋ ಬಿರುಗಾಳಿಗೆ ಸಿಕ್ಕು ತತ್ತರಿಸಿದಂತಿದ್ದಳು. ಆಳಕ್ಕಿಳಿದ ನಿಸ್ತೇಜ ಕಣ್ಣುಗಳೇ ಜೀವನದಲ್ಲಿ ಅವಳು ಸಾಕಷ್ಟು ನೊಂದಿರುವ ಬಗ್ಗೆ ಸಂಕೇತ ನೀಡುತ್ತಿದ್ದವು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸೃಷ್ಟಿಯ ಯಾವುದೋ ವಿಕೋಪಕ್ಕೆ ಸಿಲುಕಿ ಭಗ್ನಾವಶೇಷವಾಗಿ ಇತಿಹಾಸ ಸೇರಿದಂತಿದ್ದಳು. ನಮಸ್ಕರಿಸುತ್ತ ಒಳಬಂದ ಅವಳನ್ನು … Read more

ಜಾಣಸುದ್ದಿ 13: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

π ಗೊಂದು ದಿನ ಮಾರ್ಚ್ 14: ಜಲಸುತ

ಗಣಿತ ಸರ್ವ ವಿಜ್ಞಾನಗಳ ಅಧಿನಾಯಕಿ – – ಖ್ಯಾತ ಜರ್ಮನ್ ಗಣಿತಜ್ಞ ಕಾರ್ಲ್ ಫ್ರೆಡ್ರಿಕ್ ಗಾಸ್. ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನಾದರೂ ವಿವರಿಸಿ ಹೇಳಲು ಗಣಿತ ಬೇಕೇ ಬೇಕು. ಗಣಿತವಿಲ್ಲದೆ ವಿಜ್ಞಾನ ಇಲ್ಲ ವಿಜ್ಞಾನವನ್ನು ಒಂದು ಭಾಷೆ ಎಂದು ಪರಿಗಣಿಸಿದರೆ, ಗಣಿತ ಆ ಭಾಷೆಗೆ ಲಿಪಿಯಿದ್ದಂತೆ. ಇದು ಗಣಿತದ ಹೆಗ್ಗಳಿಕೆ. ಗಣಿತದಲ್ಲಿ ಕೆಲವೊಂದು ವಿಶೇಷ ಸಂಖ್ಯೆಗಳಿವೆ. ಇವಿಲ್ಲದೆ ವಿಜ್ಞಾನ-ತಂತ್ರಜ್ಞಾನವಿಲ್ಲ, ಕಲೆ-ವಾಸ್ತುಶಿಲ್ಪವಿಲ್ಲ. ಜಗದ ಜನರ ಮೊಗದಲಿ ಮಂದಹಾಸ ಮೂಡಲು ಯಾವುದ್ಯಾವುದು ಅಗತ್ಯವೋ ಅಲ್ಲೆಲ್ಲಾ ಈ ಸಂಖ್ಯೆಗಳು ಇರಲೇಬೇಕು. ಕೆಲವೊಮ್ಮೆ … Read more

ಅವಕಾಶಗಳು ಬಾಗಿಲು ಬಡಿದಾಗ: ಎಸ್, ಎಸ್, ಭರಮನಾಯ್ಕರ

ಯಾರು ಬದುಕೆಂಬ ಫಲವತ್ತಾದ ನೆಲದಲ್ಲಿ, ಸಾಮರ್ಥ್ಯ ಎಂಬ ಪೈರನ್ನು ನೆಟ್ಟು, ಅದನ್ನು ಆಸಕ್ತಿಯೆಂಬ ಗೊಬ್ಬರ ಮತ್ತು ಶ್ರದ್ಧೆ ಎಂಬ ನೀರನ್ನು ಹಾಕಿ ಬೆಳೆಸುತ್ತಾರೋ ಅವರು ಸಂಪತ್ತು, ಸೌಭಾಗ್ಯ, ಸುಖ, ಸಂತೋಷ ಎಂಬ ಇಳುವರಿಗಳನ್ನು ಅಧಿಕ ಪ್ರಮಾಣದಲ್ಲಿ ಪಡೆಯಬಹುದಾಗಿರುತ್ತದೆ. ವ್ಯಕ್ತಿಯು ತನ್ನಲ್ಲಿ ಸುಪ್ತವಾಗಿ ಹುದುಗಿರುವ ಶಕ್ತಿ ಸಾಮಥ್ರ್ಯಗಳನ್ನು ಗೊತ್ತು ಮಾಡಿಕೊಂಡು ಭಾಷಾಕಲಿಕೆ ಹಾಗೂ ಅಭಿವ್ಯಕ್ತಿಯಲ್ಲಿ ಅಗತ್ಯವಾದ ಶಿಕ್ಷಣ ತರಬೇತಿ ಹಾಗೂ ಸತತ ಅಭ್ಯಾಸದ ಮೂಲಕ ತಾನು ಅದನ್ನು ಗರಿಷ್ಟ ಪ್ರಮಾಣದಲ್ಲಿ ಅಭಿವ್ಯಕ್ತಿಪಡಿಸಲು ಸಮರ್ಥನಾಗಿ/ಳಾಗಿ ಸಾಧನೆ ಮಾಡಬೇಕು. ತನ್ನಲ್ಲಿಯೇ ಅಗಾಧ … Read more

ಪುಸ್ತಕ ಕೊಳ್ಳಿರಿ: ಮುಖವಾಡದ ಮಾಫಿಯಾದಲ್ಲಿ

ಶಿವಕುಮಾರ ಚನ್ನಪ್ಪನವರ ಇವರು ಬರೆದ ಮುಖವಾಡದ ಮಾಫಿಯಾದಲ್ಲಿ ಕಥಾಸಂಕಲನವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.. https://www.instamojo.com/panjuprakashana/mukhavadada-mafiyadalli/  

ರಾಜಹಂಸ ನಿರ್ದೆಶನದ ಕಿರುಚಿತ್ರ

ನನ್ನ ಹೆಸರು ರಾಜಹಂಸ. ಮೂಲತಃ ಬೀದರ್ ದವನು. ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ನೆಲೆಸಿದ್ದೇನೆ. ಓರ್ವ ಕವಿ ಕೂಡ. ಈಗಾಗಲೇ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದೇನೆ. ಸಿನಿಮಾ ನಿರ್ದೇಶಕನಾಗಬೇಕೆಂಬುದು ನನ್ನ ಜೀವಮಾನದ ಕನಸು. ಈ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಈಗ “ನೋಡ್ ಬೇಡ” ಎಂಬ ಶೀರ್ಷಿಕೆಯ ಕಿರುಚಿತ್ರವೊಂದಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದೇನೆ. ಜೊತೆಗೆ ನಾಯಕನಟನಾಗಿ ಅಭಿನಯಿಸಿದ್ದೇನೆ. ಇದು ನನ್ನ ಮೊದಲ ಪುಟ್ಟಪ್ರಯತ್ನ. ದಯವಿಟ್ಟು ಒಮ್ಮೆ ನೋಡಿ ಮತ್ತು ಸಾಧ್ಯವಾದರೆ ಈ ಕಿರುಚಿತ್ರದ ಕುರಿತು ಸರಿ ತಪ್ಪುಗಳ … Read more

ಬಿಟ್ಟೇನೆಂದರೂ ಬಿಡದೀ ಮಾಯೆ: ಗೌರಿ. ಚಂದ್ರಕೇಸರಿ, ಶಿವಮೊಗ್ಗ.

  ಮೂರ್ಖ ಪೆಟ್ಟಿಗೆ, ಮಾಯಾ ಪೆಟ್ಟಿಗೆ ಎಂದು ಕರೆಸಿಕೊಳ್ಳುವ ದೂರದರ್ಶನ ಎಂಥವರ ಮೇಲೂ ಸಮ್ಮೋಹನವನ್ನು ಮಾಡಿ ಬಿಡುತ್ತದೆ. ಇದು ರೂಪದಲ್ಲಿ ಹೊಸ ಹೊಸ ಬಿನ್ನಾಣಗಳನ್ನು ಬದಲಿಸುತ್ತ ಅಬಾಲವೃದ್ಧರಾದಿಯಾಗಿ ತನ್ನತ್ತ ಸೆಳೆದುಕೊಂಡು ಬಿಟ್ಟಿದೆ. ಮೊದ ಮೊದಲು ಕಪ್ಪು-ಬಿಳುಪು ಸುಂದರಿಯಾಗಿ ಅವತರಿಸಿ ಈಗ ರಂಗು ರಂಗಿನ ಮಿಂಚುಳ್ಳಿಯಂತೆ ಬಣ್ಣಮಯವಾಗಿದೆ. ಹಿಂದೆ ಧಡೂತಿ ದೇಹವನ್ನು ಹೊಂದಿದ ಈ ಮಾಯೆ ಇತ್ತೀಚೆಗೆ ಸ್ಲಿಮ್ ಆಗಿ, ಗೋಡೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಸಾವಿಲ್ಲದ ಮನೆಯ ಸಾಸುವೆ ದಕ್ಕುವುದು ಎಷ್ಟು ದುಸ್ತರವೋ ಟಿ.ವಿ.ಇಲ್ಲದ ಮನೆ ಸಿಕ್ಕುವುದೂ ಅಷ್ಟೇ ದುಸ್ತರ. … Read more

ಕೃಷ್ಣೆಯಿಂದ ಸಾಗಿ ಕೃಷ್ಣೆಯವರೆಗೆ: ಶ್ರೀ.ಎಂ.ಎಚ್.ಮೊಕಾಶಿ

ಒಂದು ದಿನ ಸಂಜೆ ತಂಪಾದ ಗಾಳಿ ಬೀಸುತ್ತಿತ್ತು, ಆಕಾಶದಲ್ಲಿ ಮೋಡಕವಿದ ವಾತಾವರಣವಿತ್ತು. ಇಂಥ ಚುಮುಚುಮು ಚಳಿಯಲ್ಲಿ ನಾವೆಲ್ಲ ನಾಲ್ಕೈದು ಗೆಳೆಯರು ಕೂಡಿ ಹರಟೆ ಹೊಡೆಯುತ್ತಿದ್ದೆವು. ಕೆಲ ಸಮಯದ ನಂತರ ಗೆಳೆಯರೆಲ್ಲರೂ ಕೂಡಿ ಟೀ ಕುಡಿಯಲು ಹೋಟೆಲ್ ಗೆ ಹೋದೆವು. ಅಲ್ಲಿ ಹಲವಾರು ವಿಷಯಗಳ ಚರ್ಚೆನಡೆಸುತ್ತಿರುವಾಗ ಗೆಳೆಯನೊಬ್ಬನು ಇಂಥ ಒಳ್ಳೆಯ ಕ್ಲೈಮೇಟ್ ನಲ್ಲಿ ಯಾಕೆ ನಾವೆಲ್ಲರೂ ಒಂದೆರಡು ದಿನ ಟೂರ್ ಗೆ ಹೋಗಬಾರದು ಎಂದನು. ಅದಕ್ಕೆ ಒಬ್ಬ ಗೆಳೆಯನು ಸಧ್ಯ ಮಳೆಗಾಲದಲ್ಲಿ ಟೂರ್ ಬೇಡ ಎಂದನು. ಆಗ ಇನ್ನೊಬ್ಬ … Read more

ಯಾವ ವೃತ್ತಿಗೆ ಅತಿ ಹೆಚ್ಚು ವೇತನ ಸಿಗಬೇಕು ಮತ್ತು ಏಕೆ?: ವೇದಾವತಿ ಹೆಚ್. ಎಸ್.

ಈ ಪ್ರಶ್ನೆಯನ್ನು ವಿಶ್ವಸುಂದರಿ ಸ್ಫರ್ಧೆಯಲ್ಲಿ “ಮಾನುಷಿ ಛಿಲ್ಲರ್”ಗೆ ಕೇಳಿದ ಪ್ರಶ್ನೆ ಆಗಿತ್ತು. ಇದಕ್ಕೆ ಉತ್ತರವಾಗಿ “ನಾನು ನಮ್ಮ ಅಮ್ಮನಿಗೆ ತುಂಬಾ ಹತ್ತಿರವಾಗಿರುವುದರಿಂದ,ನನ್ನ ಪ್ರಕಾರ ತಾಯಿಗೇ ಆತಿ ಹೆಚ್ಚಿನ ಗೌರವ ಸಿಗಬೇಕು. ವೇತನ ಅಂದರೆ,ಅದು ಹಣ ಮಾತ್ರವಲ್ಲ,ಬೇರೆಯವರಿಗೆ ತೋರಿಸುವ ಪ್ರೀತಿ-ಗೌರವವೂ ಕೂಡ ಆ ಲೆಕ್ಕಕ್ಕೆ ಬರುತ್ತದೆ. ಅಮ್ಮನೇ ನನ್ನ ಜೀವನದ ದೊಡ್ಡ ಸ್ಫೂರ್ತಿ.ಎಲ್ಲ ತಾಯಂದಿರೂ ತಮ್ಮ ಮಕ್ಕಳಿಗಾಗಿ ತುಂಬಾ ತ್ಯಾಗ ಮಾಡುತ್ತಾರೆ,ಅತಿ ಹೆಚ್ಚು ವೇತನ, ಗೌರವ ಮತ್ತು ಪ್ರೀತಿ ಸಿಗಬೇಕಾಗಿದ್ದು ತಾಯಿಂದಿರಿಗೆ.”ಈ ಉತ್ತರದಿಂದ ಇಡೀ ವಿಶ್ವಕ್ಕೆ ವಿಶ್ವ ಸುಂದರಿ … Read more

ಪಂಜು ಕಾವ್ಯಧಾರೆ

ಕನಸು ಕನ್ನಡಿಯೊಳಗೆ… ನಮ್ಮ ಖಾಸಗೀ ಕನಸಿನ ಲೋಕದೊಳಗೆ ಪ್ರವೇಶ ಮಾಡುವರು ನಮ್ಮ ಖಾಸಾ ಮಂದಿ ಅಚ್ಚು ಮೆಚ್ಚಿನವರು ಪ್ರೀತಿಪಾತ್ರರು ಸಂಬಂಧಿಕರು ಸ್ನೇಹಿತರು ಮುಂತಾದವರು ಒಮೊಮ್ಮೇ ನಾವು ಕಂಡು ಹೃನ್ಮನ ತುಂಬಿಕೊಂಡ ಸಿನೇಮಾದವರು ಸಿಲೇಬ್ರಟಿಗಳು ಆದರ್ಶ ವ್ಯಕ್ತಿಗಳು ಸಮಾಜಕ್ಕೆ ಮಾದರಿ, ಮಾರಿಯಾದವರು ಹಾಗೇ ಒಮ್ಮೊಮ್ಮೇ ನಮ್ಮ ಸ್ವಪ್ನ ಲೋಕಕ್ಕೆ ಲಗ್ಗೆ ಇಟ್ಟು ಬೆಚ್ಚಿ ಬೀಳಿಸುವರು ಭಯಾನಕ ಚಹರೆಗಳು ವಿಕೃತ ಮನಸ್ಸುಗಳು ದುಷ್ಟರು, ಭ್ರಷ್ಟರು ಸಮಾಜ ಘಾತುಕರು ಖೂಳರು, ಪಿಶಾಚಿಗಳು ಧುತ್ತೆಂದು ಪ್ರಕಟವಾಗುವರು ಎಲ್ಲೋ ಮಾತಾಡಿ ಮರೆತು ಬಿಟ್ಟವರು ಹಗಲ್ಹೋತ್ತು … Read more

ಹುದುಗಲಾರದ ದುಃಖ: ಜಯಶ್ರೀ.ಜೆ.ಅಬ್ಬಿಗೇರಿ

ಸಾಯಂಕಾಲ ಆಯಿತೆಂದರೆ ಗಾರ್ಡನ್ನಿನಲ್ಲಿ ಮಕ್ಕಳ ಚೆಲ್ಲಾಟದ ಸದ್ದು, ಜೋಕಾಲಿ ಜೀಕುವ ಸಪ್ಪಳ, ಮಹಿಳೆಯರ ಮಾತಿನ ಕಾವು ಏರುತ್ತಲೇ ಇರುತ್ತದೆ. ಆದರೆ ಅಂದು ಸಂಜೆ ಹೊತ್ತು ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆಯಾಗಿದ್ದರಿಂದ ಗಾರ್ಡನ್ ಯಾವುದೇ ಸದ್ದು ಗದ್ದಲವಿಲ್ಲದೇ ಬಿಕೋ ಎನ್ನುತ್ತಿತ್ತು. ಬೆಂಚುಗಳು ಸೀನಿಯರ್ ಸಿಟಿಜನ್ಸ್ ಮತ್ತು ಮಾತು ಹೇಳುವ ಮಾತೆಯರಿಲ್ಲದೇ ಬಣಗುಡುತ್ತಿದ್ದವು. ಜೋರಾಗಿ ಬೀಸಿದ ಗಾಳಿಗೆ ಉದುರಿ ಬಿದ್ದ ಗಿಡದ ಎಲೆ-ಹೂಗಳು ಬೆರಳಣಿಕೆಯಲ್ಲಿ ವಾಕಿಂಗ್ ಮಾಡುತ್ತಿದ್ದ ನಮ್ಮನ್ನು ಸ್ವಾಗತಿಸುವಂತೆ ಭಾಸವಾಗುತ್ತಿತ್ತು.ಮಳೆಯಾದುದರಿಂದ ತಂಗಾಳಿ ಮೈಗೆ ತಂಪೆರೆಯುತ್ತಿತ್ತು. ಅದೇ ಸಮಯದಲ್ಲಿ ವಯಸ್ಸಾದವರೊಬ್ಬರು … Read more

ಗುರಿ ಮುಟ್ಟಿಸಲು ಅವಶ್ಯಕ ಸಮಚಿತ್ತದ ಸಾರಥಿ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಾನವನ ಬದುಕು ಸಾರ್ಥಕ ಆಗಬೇಕಾದರೆ ಅವನು ಏನನ್ನಾದರೂ ಸಾಧಿಸಬೇಕು! ತನ್ನ ಜೀವನದಲ್ಲಿ ಉತ್ತಮವಾದುದನ್ನು ಸಾಧಿಸಿದರೆ ಅವನ ಜೀವನ ಸಾರ್ಥಕವಾಗುತ್ತದೆ. ಅವನಿಗೆ ಸಂತೃಪ್ತಿ ದೊರೆಯುತ್ತದೆ. ಸಾಧನೆಗೆ ಉತ್ತಮ ಸಲಕರಣೆ ಎಂದರೆ ಆರೋಗ್ಯವಂತ ಮನಸ್ಸು, ಸದೃಢ ದೇಹ. ಪ್ರಯುಕ್ತ ಆರೋಗ್ಯವನ್ನು ಕಾಪಾಡಿಕೊಂಡು ದೃಢ ಕಾಯವನ್ನು ಸಂಪಾದಿಸಿ ಸಾಧಿಸಲು ಲಪ್ರಯತ್ನಿಸಿದರೆ ಸಮಾಜದಲ್ಲಿ ಮಾನ ಮನ್ನಣೆಗಗಳು ದೊರೆಯುತ್ತವೆ. ಸಾಧಿಸಬೇಕಾಗಿರುವವನು ಮಾನಸಿಕ ದೈಹಿಕ ಸಾಮರ್ಥ್ಯ ಇರುವಾಗಲೇ ಗುರಿಯನ್ನು ಗುರುತಿಸಿಕೊಂಡು ಸಾಧಿಸಲು ಮುಂದಾಗಬೇಕು!. ಯೋಗ್ಯ ಗುರಿ ನಿರ್ಣಯವಾಗುತ್ತಿದ್ದಂತೆ ಅದನ್ನು ಸಾಧಿಸಲು ಅನೇಕ ದಾರಿಗಳು ಗೋಚರಿಸಲು ಆರಂಭಿಸುತ್ತವೆ. … Read more