ರೈತನ ಮಗಳ ಎಂ.ಬಿ.ಬಿ.ಎಸ್. : ಕೊಟ್ರೇಶ್ ಕೊಟ್ಟೂರು
ನಾಳೆ ಹೇಗಾದರೂ ಮಾಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಯೇ ತೀರುವೆ ಎನ್ನುವ ಭರವಸೆಯಿಂದ ಜಗದೀಶ ಭಾನುವಾರ ರಾತ್ರಿ 7.00 ಗಂಟೆಗೆ ತನ್ನೆಲ್ಲಾ ಬಟ್ಟೆಯನ್ನು ಪ್ಯಾಕ್ ಮಾಡಿ ರಾತ್ರಿ 10.30 ಕ್ಕೆ ಬಸ್ ಇರುವುದು ಅದಕ್ಕೆ ಹೊರಟರಾಯಿತು ಎಂದು ಅಂದುಕೊಂಡು ತನ್ನ ಹೆಂಡತಿ ಮುಬೀನಾಗೆ ಹೇಳಿದ “ಏನೆ ನಾನು ಬೆಳಿಗ್ಗೆ ಬೆಂಗಳೂರು ಹೋಗ್ತಿದ್ದೀನಿ ಮಗಳಿಗೆ ಏನಾದ್ರೂ ಇದ್ರೆ ಕೊಡು ಅಂದ” ಅದಕ್ಕೆ ಮುಬೀನಾ “ಅಲ್ರೀ ಇಲ್ಲಿ ಉಣ್ಣಾಕ ಏನೂ ಗತಿಯಿಲ್ಲ, ಮಳೆ ನೋಡಿದ್ರ ಕಣ್ಮರೆಯಾಗ್ಯಾತಿ ಏನು ಅದ ಮನ್ಯಾಗ ಬರೀ … Read more