ಎ.ಟಿ.ಎಂ. ನಲ್ಲೊಂದು ದಿನ……: ಪಿ.ಎಸ್. ಅಮರದೀಪ್

“ಥೋ…….. ನಮ್ದೇನ್ ಕರ್ಮನಪ್ಪ… ಎಸೆಲ್ಸಿ ಕಂಡೋರ್ ಕೈಲಿ ಪರೀಕ್ಷೆ ಬರೆಸಿ ಪಾಸಾಗಿ ಅವರಪ್ಪನ ನೌಕ್ರೀನ ಅಯ್ಯೋ ಪಾಪ ಅಂತ ಅನುಕಂಪದ ಆಧಾರದ ಮೇಲೆ ತಗಂಡಿದ್ದೇ ಬಂತು… ಒಂದ್ ಸೆಂಟೆನ್ಸ್ ಇಂಗ್ಲೀಷು, ಒಂದ್ ಸೆಂಟೆನ್ಸ್ ಕನ್ನಡಾನ ಒಂದು ಸ್ಪೆಲಿಂಗ್ ಮಿಸ್ಟೇಕ್ ಇಲ್ದೇ ಒಂದಕ್ಷರ ತಪ್ಪಿಲ್ದೇ ಬರೆಯೋಕ್ ಯೋಗ್ತೆ ಇಲ್ದಂತವರಿಗೆ ಎಲ್ಡೆಲ್ಡ್ ಪ್ರಮೋಷನ್ನೂ, ದೊಡ್ಡ ಹುದ್ದೆ ಬೇರೆ ಕೇಡು.. ಅಂತ ಹೆಬ್ಬೆಟ್ಟು “ಎಲ್ಲಪ್ಪ”ನಿಗೆ ನಾವು ಕೊಳ್ಳಿಗೊಂದ್ ಹಾರ ಹಾಕಬೇಕು… ಸ್ವೀಟು, ಖಾರ ತಂದು ಪುಗಸಟ್ಟೆ ಬಹುಪರಾಕ್ ಹೇಳಿ, ಚಪ್ಪಾಳೆ ತಟ್ಟಿ … Read more

ಮರೆಯಲಾಗದ ಮದುವೆ (ಭಾಗ 14): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ ತಿಂಡಿ ಮುಗಿಸಿ ಸುಬ್ಬು, ಮುರಳಿ, ಸೀತಮ್ಮನವರು, ಮೋಹನ ಮತ್ತು ಕೃಷ್ಣಯ್ಯರ್ ಸ್ವಾಮಿ ಸರ್ವೋತ್ತಮಾನಂದರ ಆಶ್ರಮಕ್ಕೆ ಕಾರಿನಲ್ಲಿ ಹೊರಟರು. ಸುಮಾರು ಹದಿನೈದು ಮೈಲು ದೂರದ ಆಶ್ರಮವನ್ನು ತಲುಪಲು ಅರ್ಧ ಘಂಟೆಯಾಗಬಹುದೆಂದು ಡ್ರೈವ್ ಮಾಡುತ್ತಿದ್ದ ಮೋಹನ ಹೇಳಿದ. ಸ್ವಾಮೀಜಿಯೊಂದಿಗೆ ಸಮಾಲೋಚಿಸಿ ಮದುವೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮುರಳಿಯವರ ನಿರ್ಧಾರ ಸುಬ್ಬುವಿಗೆ ಸಮಾಧಾನ ತಂದಿರಲಿಲ್ಲ. ಆದರೆ ಸಾಧುಸಂತರ ಬಗ್ಗೆ ತನ್ನ ತಾಯಿಗಿದ್ದ ಅಪಾರ ಶ್ರದ್ಧಾಭಕ್ತಿಯ ಅರಿವಿದ್ದುದರಿಂದ ಈ ವಿಚಾರದಲ್ಲಿ ತನಗೆ ಅಮ್ಮನ ಬೆಂಬಲ ಸಿಕ್ಕುವ ನಂಬಿಕೆಯಿರಲಿಲ್ಲ. ಇನ್ನು ಮುರಳಿ ಚಿಕ್ಕಪ್ಪನ … Read more

ನನ್ನೊಳಗಿನವಳು ಅವಳು: ಮಸಿಯಣ್ಣ ಆರನಕಟ್ಟೆ.

ಕೂಡ್ಲಹಳ್ಳಿಯಲ್ಲಿ ಸಂಗಮೇಶ್ವರನ ಜಾತ್ರೆ ಸಾಗಿತ್ತು. ಕರೋನ ಅಬ್ಬರದಿಂದ ಜನ ಸೇರಿರಲಿಲ್ಲ. ಜಾತ್ರೆ ಎಂದರೆ ತಪ್ಪಾಗಬಹುದೇನೋ! ಒಂದು ದೇವಸಂತೆ ಎಂದರೆ ಸಮಂಜಸ ಅನ್ನಬಹುದು.ಆದ್ರೂ ಸಹ ಪೂಜೆ ಪುನಸ್ಕಾರಗಳೆಲ್ಲಾ ವಿಧಿವಿಧಾನದಂತೆ ಯತವತ್ತಾಗಿ ನಡೆಯುತ್ತಿದ್ದವು.ನಾನು ಹೋಗಿದ್ದೆ.ಸಾಮಾಜಿಕ ಅಂತರ ಕಾಯ್ದುಕೊಂಡೆ ಅಂದುಕೊಳ್ತಿನಿ ಕಾರಣ ನನಗೆ ಕರೋನ ಸಂಬಂಧ ಯಾವುದೇ ಪಾಸಿಟೀವ್ ತಂಟೆ ತಕರಾರೆದ್ದಿಲ್ಲ. ದರ್ಶನ ಆಯ್ತು, ಅವ್ವ ರೊಟ್ಟಿ ಕಟ್ಟಿ ಕೊಟ್ಟಿದ್ಲು . ಕಜ್ಜಾಯ ಸಹ ಮಾಡಿ ಕೊಟ್ಟಿದ್ಲು. ದೇವಸ್ಥಾನ ಬಿಟ್ಟು ಹತ್ತತ್ರ ೧ ಮೈಲಿ ನಡೆದರೆ ಅಜ್ಜಯ್ಯನ ಆಲದಮರದ ತೋಪು ಸಿಗುತ್ತೆ. … Read more

ಊದ್ಗಳಿ ಕವನ ಸಂಕಲ: ನಂದಾದೀಪ, ಮಂಡ್ಯ

ಉದ್ಗಳಿ ಕವನ ಸಂಕಲನ ಪುಸ್ತಕದ ಹೆಸರೇ ವಿಭಿನ್ನ ಎನಿಸಿತು.. ಆ ಹೆಸರೇ ಕೇಳಿಲ್ಲ ಹಾಗಂದರೆ ಅರ್ಥ ಏನು ಎನ್ನುವ ಕುತೂಹಲದಲ್ಲೆ ಪುಸ್ತಕವನ್ನು ಕೈಗೆತ್ತಿಕೊಂಡಾಗ ಮೊದಲು ಪುಸ್ತಕದ ಮುಖಪುಟದಲ್ಲಿದ್ದ ಅಗ್ಗಿಷ್ಟಿಕೆ, ಕೊಳವೆ ನೋಡಿ ಇದಕ್ಕೂ ಹೆಸರಿಗೂ ಏನು ಸಂಬಂಧ ಎಂದು ಮುನ್ನುಡಿ ಓದಿದಾಗಲೇ ತಿಳಿದಿದ್ದು ‘ಊದ್ಗಳಿ’ ಎಂದರೆ ಒಲೆಯ ಊದುವ ಪುಟ್ಟದಾದ ಒಂದು ಕೊಳವೆ ಎಂದು..(ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ ಹಾಗಾಗಿ ಹೊಸ ಪದ ಎನಿಸಿದ್ದು) ನಿಜಕ್ಕೂ ಒಬ್ಬ ಹೆಣ್ಣು ಮಗಳು ಪುಟ್ಟ ಗ್ರಾಮದಲ್ಲಿ ಹುಟ್ಟಿ ಶಿಕ್ಷಣ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 51 & 52): ಎಂ. ಜವರಾಜ್

-೫೧-ಕಣ್ಬುಟ್ಟಾಗ ತ್ವಾಟುದ್ತುಂಬಜನ ಜಗನ್ಜಾತ್ರ್ಯಾಗಿ ಕಾಣ್ತುಬರೋರು ಬತ್ತನೇ ಅವ್ರಇಡಿ ಊರೇ ಇತ್ತುಈ ಊರೇನುಅಕ್ಕಪಕ್ದ ಊರೋರ್ ಜನಾನು ಕಂಡ್ರು ಆ ಆಳುಆ ಜನ್ಗಳ ಸಂದಿಲಿಅತ್ತಗು ಇತ್ತಗು ಓಡಾಡ್ತ ಇದ್ನ‘ಮಗ ಮಾಡ್ದ ತಪ್ಗ ಅಪ್ಪುನ್ಗ ಶಿಕ್ಷ..’‘ಅಯ್ನೋರೇನ ಅನ್ತ ಈಗ್ಲಾರುಗೊತ್ತಿರ್ಬೇಕು ಪೋಲೀಸ್ರುಗ’‘ಆದ್ರ ಊರಾಳ್ದಂವ್ರು ಅವ್ಮಾನ ಅಲ್ವ’‘ಎಲ್ಯ ನಾ ವಸಿ ನೋಡ್ತಿನಿ ಅಯ್ನೋರಾರಾತ್ರ್ಯಲ್ಲ ಟೇಸನಲ್ಲೆ ಇರುಸ್ಕಂಡಿದ್ರಂತಅಂವ ಶಂಕ್ರ ಇನ್ನು ಸಿಕ್ಕಿಲ್ವಂತನೋಡಕ ಮಂಗ್ಯಾಗಿದ್ನನೋಡು ಎನ್ತ ಕೆಲ್ಸ ಮಾಡನಹೋಗಿ ಹೋಗಿ ಕುಲ್ಗೆಟ್ಟವ್ಳ ಮದ್ವ ಆದ್ನಆಗ್ಲು ಅಯ್ನೋರು ಸಯಿಸ್ಕಂಡ್ರುಕೇರಿನೇ ತಲ ತಗ್ಸ ತರ ಮಾಡುದ್ನಆಗ ಅಯ್ನೋರುಹೆಂಗ್ ನ್ಯಡ್ಕಂಡ್ರು ಅನ್ತ … Read more

ಕಳೆದು ಹೋಗುವ ಸುಖ (ಭಾಗ 2): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ ಏನಾದರೊಂದು ಕೆಲಸಗಳಲ್ಲಿ ಅದರಲ್ಲೂ ರಚನಾತ್ಮಕ ಕಾರ‍್ಯಗಳಲ್ಲಿ ತೊಡಗಿಸಿಕೊಳ್ಳುವ ಮನೋಧರ್ಮ ಇಂದಿನ ಅಗತ್ಯವಾಗಿದೆ. ‘ಕೆಲಸದ ಬಗ್ಗೆ ಮಾತಾಡಿದರೆ ಕೆಲಸ ಮಾಡಿದಂತಾಗುವುದಿಲ್ಲ’ ಎಂದು ಬಹು ಹಿಂದೆಯೇ ವಕ್ರೋಕ್ತಿಯೊಂದನ್ನು ಹೊಸೆದಿದ್ದೆ. ಇಂದು ನಾವು ಕೆಲಸ ಮಾಡುವುದು ಕಡಮೆ; ಅದನ್ನು ಕುರಿತು ಮಾತಾಡುವುದು ಹೆಚ್ಚು. ಬದುಕುವುದು ಕಡಮೆ; ಬದುಕಲು ಮಾಡಿಕೊಳ್ಳುವ ಸಿದ್ಧತೆಯೇ ಹೆಚ್ಚು. ‘ಕಂಪ್ಯೂಟರ್ ಬಳಸಿ ಕೆಲಸ ಮಾಡಬೇಕು; ಕಂಪ್ಯೂಟರ್ ಬಳಸುವುದೇ ಕೆಲಸವಾಗಬಾರದು’ ಎಂದೂ ಇನ್ನೊಮ್ಮೆ ಬರೆದಿದ್ದೆ. ಅಂದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತಾಗಿದೆ ನಮ್ಮಗಳ ಪರಿಸ್ಥಿತಿ! ಬಹುತೇಕ ಸಭೆ/ಮೀಟಿಂಗುಗಳ ನಿರ್ಧಾರವೇನೆಂದರೆ … Read more

ಪಂಜು ಕಾವ್ಯಧಾರೆ

ಆಗ – ಈಗನೀವು ಕರೆ ಮಾಡುತ್ತಿರುವ ಚಂದಾದಾರರು.. ಆಗನನ್ನ ನಿನ್ನ ನಡುವೆ ಸಂಬಂಧ ಸೃಷ್ಟಿಸಿದ್ದು ಈಈ ಸೆಲ್ ಫೋನ್ ಗೆಳತಿಈಗನನ್ನ ನಿನ್ನ ನಡುವಿನ ಮೌನಕ್ಕೆ ಕಾರಣವುಈ ಸೆಲ್ ಫೋನ್ ಗೆಳತಿತವಕಿಸುವ ಮನಸಿಗೆ ಸಮಾಧಾನವನ್ನ ನೀಡುವುದೇಈ ಸೆಲ್ ಫೋನ್ ಗಳತಿ….. ಆಗಮಾತನಾಡಲು ಮಾತುಗಳು ಸಾಲುತ್ತಿರಲಿಲ್ಲಇರುವ ಡಾಟಾ ಪ್ಯಾಕ್ ಸಾಲುತ್ತಿರಲಿಲ್ಲಪದೆ ಪದೆ ಚಾರ್ಜ್ರಿಗೂ ಅಂಟಿಕೊಂಡಿರುತ್ತಿದ್ದೆಟೈಪಿಸಿ ಟೈಪಿಸಿ ಬೆರಳುಗಳಿಗೆ ನೋವು ತಿಳಿಯುತ್ತಿರಲಿಲ್ಲದಿನ ಘಂಟೆ ಲೆಕ್ಕೆ ಮರತೆಹೋಗಿದ್ದುವುಕುಳಿತು ನಿಂತು ಅಡ್ಡಬಿದ್ದು ಕೆಳದರೂ ಸಮಯ ಸಾಲುತ್ತಿರಲಲ್ಲಿ ಈಗಮಾತನಾಡಲು ಮಾತುಗಳೆ ಇಲ್ಲಇರುವ ಡಾಟಾ ಪ್ಯಾಕ್ ಖಾಲಿ … Read more

ವ್ಯಾಘ್ರತೀರ್ಥ ಮತ್ತು ಕೆಂಚಿ ಕಟ್ಟೆ: ಜಗದೀಶ ಸಂ.ಗೊರೋಬಾಳ

ಭುವನೇಶ್ವರದಿಂದ ಇನ್ನೂರೈವತ್ತು ಮೈಲು ದೂರದಲ್ಲಿ ವ್ಯಾಘ್ರತೀರ್ಥವೆಂಬ ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಇರುವುದೇ ಬೆರಳೆಣಿಕೆಯಷ್ಟು ಮನೆಗಳು. ಇರುವ ಮನೆಗಳಲ್ಲೂ ದುಡಿವ ಶಕ್ತಿ ಇರುವವರೆಲ್ಲ ಸಮೀಪದ ನಗರಗಳಿಗೆ ವಲಸೆ ಹೋಗಿದ್ದರು. ಬರಗಾಲದ ಬಾದೆಯಿಂದ ಬೆಂದ ಕುಟುಂಬಗಳು ಇತ್ತ ಹಳ್ಳಿಯನ್ನೂ ಬಿಡದೆ ಗತಕಾಲದ ವೈಭವವನ್ನು ನೆನೆಯುತ್ತಾ ದಿನಕಳೆಯುತ್ತಿದ್ದವು. “ಹಿಂದೆ ಈ ಊರಲ್ಲಿ ಭಯಂಕರವಾದ ಕಾಡಿತ್ತು. ಕಾಡಿನಲ್ಲಿ ಕ್ರೂರಮೃಗಗಳಿದ್ದವು. ಅಲ್ಲಲ್ಲಿ ನೀರಿನ ಹೊಂಡಗಳೂ ಸಾಕಷ್ಟಿದ್ದವು. ಊರಾಚೆ ಇರುವ ದೊಡ್ಡ ಹೊಂಡವೇ ವ್ಯಾಘ್ರತೀರ್ಥ. ಇದಕ್ಕ ಆ ಹೆಸರು ಬರಲು ಕಾರಣ ಯಾವಾಗಲೂ ಈ … Read more

ಮರೆಯಲಾಗದ ಮದುವೆ (ಭಾಗ 13): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೧೨- ಚಿನ್ನಪ್ಪ ಮತ್ತು ಅಯ್ಯರ್ ಮುಂಜಾನೆ ಬೇಗನೆದ್ದು ನಿತ್ಯಕರ್ಮಗಳನ್ನು ಮುಗಿಸಿ ಉಪಹಾರ ಸೇವಿಸಿ ಗೂಡೂರಿಗೆ ಹೊರಟಾಗ ಅಯ್ಯರ್ ಭಾವುಕರಾದರು. ಅಯ್ಯರ್ ಕಣ್ಣಲ್ಲಿ ನೀರಾಡಿದ್ದು ಕಂಡು ಚಿನ್ನಪ್ಪನ ಹೆಂಡತಿಗೆ ಮುಜುಗರವಾಗಿ ಕಸಿವಿಸಿಗೊಂಡಳು. ಅಯ್ಯರ್ ಚಿನ್ನಪ್ಪನ ಮಗುವನ್ನೆತ್ತಿಕೊಂಡು ಮುತ್ತಿಕ್ಕಿ ತಮ್ಮ ಮನದಾಳದಿಂದ ಒಮ್ಮೆ ಹೆಂಡತಿ ಮಗುವಿನೊಂದಿಗೆ ತಮ್ಮ ಮನೆಗೆ ಬರಬೇಕೆಂದು ಚಿನ್ನಪ್ಪನಿಗೆ ಆಗ್ರಹಮಾಡಿ ಹೇಳಿದರು. ರಾತ್ರಿ ಚಿನ್ನಪ್ಪನ ಋಣ ತೀರಿಸಲಾಗದಿದ್ದರೂ ಪಡೆದ ಉಪಕಾರಕ್ಕೆ ಪ್ರತಿಯಾಗಿ ಏನಾದರೂ ಮಾಡಬೇಕೆಂದುಕೊಂಡದ್ದು ನೆನಪಾಗಿ ಒಂದು ಕಾಗದದಲ್ಲಿ ಅವನ ವಿಳಾಸ ಬರೆದುಕೊಡುವಂತೆ ಚಿನ್ನಪ್ಪನಿಗೆ ಹೇಳಿದರು. … Read more

ಕಳೆದು ಹೋಗುವ ಸುಖ (ಭಾಗ 1): ಡಾ. ಹೆಚ್ಚೆನ್ ಮಂಜುರಾಜ್

ಗುರುತಿಸಿಕೊಳ್ಳುವುದಕಿಂತ ಕಳೆದು ಹೋಗುವುದೇ ಈ ಅಖಂಡ ವಿಶ್ವದ ಮೂಲತತ್ತ್ವವಾಗಿದೆ ಅಥವಾ ಗುರುತಿಸಿಕೊಂಡ ಮೇಲೆ ಕಳೆದು ಹೋಗುವುದೇ ಸೃಷ್ಟಿಯ ನಿಯಮವಾಗಿದೆ. ಅದು ಆಕಾಶಕಾಯವೇ ಇರಲಿ, ಜೀವಸೃಷ್ಟಿಯೇ ಇರಲಿ, ಮಾನವ ನಿರ್ಮಿತ ತತ್ತ್ವಸಿದ್ಧಾಂತಗಳೇ ಇರಲಿ, ಪದವಿ-ಪ್ರತಿಷ್ಠೆ-ಹುದ್ದೆ-ಅಧಿಕಾರ-ಅಂತಸ್ತು-ಸಾಧನೆಗಳೇ ಇರಲಿ ಎಲ್ಲವೂ ಕಾಲ ಕ್ರಮೇಣ ಕಳೆದು ಹೋಗುತ್ತವೆ ಮತ್ತು ಹಾಗೆ ಕಳೆದು ಹೋಗಬೇಕು. ಹಳತು ನಶಿಸುತಾ, ಹೊಸತು ಹುಟ್ಟುತಿರಬೇಕು. ‘ನಿದ್ದೆಗೊಮ್ಮೆ ನಿತ್ಯ ಮರಣ; ಎದ್ದ ಸಲ ನವೀನ ಜನನ’ ಎಂದಿಲ್ಲವೇ ಕವಿನುಡಿ. ಅಂದರೆ ಅಸ್ತಿತ್ವವು ವ್ಯಕ್ತಿತ್ವವನ್ನು ಹೊಂದಿದ ಮೇಲೆ ಸಾವು ಶತಸಿದ್ಧ ; … Read more

ಟೆನಿಸನ್‍ನ ಎರಡು ಕವಿತೆಗಳು: ನಾಗರೇಖಾ ಗಾಂವಕರ

ಗ್ರೀಕ ಮಹಾಕವಿ ಹೋಮರನ ಒಡೆಸ್ಸಿಯಲ್ಲಿ ಬರುವ ದಿ ಗ್ರೇಟ್ ಗ್ರೀಕ್ ಹೀರೋ Ithacaದ ರಾಜ ಒಡಿಸೆಸ್ ಅಥವಾ ಯೂಲಿಸಿಸ್‍ನ ಸಮುದ್ರಯಾನದ ರೋಚಕ ಅನುಭವದ ಕಥೆಯನ್ನೆ ಹಾಡುವ ಟೆನಿಸನ್‍ನ “ದಿ ಲೋಟಸ್ ಇಟರ್” ಕವಿತೆ ಮೊದಲು ಪ್ರಕಟವಾದದ್ದು 1832ರಲ್ಲಿ. ಟ್ರೋಜನ್ ಯುದ್ಧದ ನಂತರ ಯೂಲಿಸಿಸ್ ತನ್ನ ಗ್ರೀಕ್ ಸೈನಿಕರೊಂದಿಗೆ ಮರಳಿ ನಾಡಿಗೆ ವಾಪಸಾಗುತ್ತಿದ್ದ ದಾರಿಯಲ್ಲಿ ಮಾರ್ಗಮಧ್ಯೆ ಭೀಕರ ಬಿರುಗಾಳಿಗೆ ಸಿಕ್ಕು ತತ್ತರಿಸತೊಡಗಿದರು. ಜಲಮಾರ್ಗದ ಉದ್ದಗಲಕ್ಕೂ ಅಲೆದಾಡಿದರು. ಒಂಬತ್ತು ದಿನಗಳು ಹಾಗೂ ಹೀಗೂ ಸುತ್ತಿ ಸುಳಿದು ಹತ್ತನೇಯ ದಿನ ನಡುಗಡ್ಡೆಯೊಂದು … Read more

ಈ ಪಟ್ಟಣಗಳಿಗೆ ಏನಾಗಿದೆ?: ಗೌರಿ ಚಂದ್ರಕೇಸರಿ.

ಬಾಲ್ಯದಲ್ಲಿ ನಾವು ಕಂಡುಂಡ ಪಟ್ಟಣಗಳು ಈಗಿನಂತಿರಲಿಲ್ಲ. ಥೇಟ್ ಆದಿ ಕವಿ ಪಂಪ ಬನವಾಸಿಯನ್ನು ಬಣ್ಣಸಿದ ರೀತಿಯಲ್ಲಿ ಕಾಣಿಸುತ್ತಿದ್ದವು. ಹಸಿರುಡುಗೆ ತೊಟ್ಟ ಪ್ರಕೃತಿ, ಕೀ ಕೀ ಎನ್ನುವ ಹಕ್ಕಿಗಳ ಕಲರವದೊಂದಿಗೆ ತೆರೆದುಕೊಳ್ಳುತ್ತಿದ್ದ ಬೆಳಗು, ಮನೆ ಮನೆಯ ಮುಂದೆಯೂ ಬೃಂದಾವನ, ಅಲ್ಲಿ ಚುಕ್ಕೆ ಇಟ್ಟು ರಂಗೋಲಿ ಎಳೆಯುತ್ತಿರುವ ಹೆಂಗಳೆಯರು, ರೇಡಿಯೋದಿಂದ ಹೊರ ಹೊಮ್ಮುತ್ತಿದ್ದ “ಈ ಮಣ್ಣು ನಮ್ಮದು ಈ ಗಾಳಿ ನಮ್ಮದು, ಕಲಕಲನೆ ಹರಿಯುತಿಹ ನೀರು ನಮ್ಮದು” ಎಂಬಂತಹ ಹಾಡುಗಳು, ಬೀದಿ ನಲ್ಲಿಗಳಲ್ಲಿ ನೀರು ಹಿಡಿಯುತ್ತ ನಿಂತ ಗಂಡಸರು, ಹೆಂಗಸರು, … Read more

ಸಂಬಂಧಗಳು: ವೈ. ಬಿ. ಕಡಕೋಳ

ಆ ದಿನ ಎಂದಿನಂತಿರಲಿಲ್ಲ. ವಿಜಯ ಪೂರ್ಣ ಆಯಾಸಗೊಂಡಿದ್ದ. ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಇವರ ಆರೋಗ್ಯದ ಕುರಿತು ಚಿಂತೆ ಆರಂಭವಾಗಿತ್ತು. ತಮ್ಮ ಪುಟ್ಟ ಹಳ್ಳಿಯಲ್ಲಿನ ವೈದ್ಯರು ‘ನಿಮೋನಿಯ’ ಆಗಿದೆ ಎಂದು ಮೂರು ದಿನಗಳ ಕಾಲ ಸೈಲಾಯಿನ್ ಹಚ್ಚಿದ್ದರು. ಆರೋಗ್ಯ ಬಿಗಡಾಯಿಸತೊಡಗಿತು. ಪಕ್ಕದ ಶಹರಕ್ಕೆ ಹೋದರೆ ಅವರು ಕೋವಿಡ್ ಟೆಸ್ಟ ಮಾಡಿಸಿಕೊಂಡು ಬರಲು ಸೂಚಿಸಿದರು. ಅಲ್ಲಿ ‘ನೆಗೆಟಿವ್’ ಬಂದರೂ ‘ನ್ಯೂಮೇನಿಯ’ ಇದೆ ಎಂದು ಗೊತ್ತಾದ ಮೇಲೂ ತಮ್ಮ ಆಸ್ಪತ್ರೆಯಲ್ಲಿ ಸೌಲಭ್ಯಗಳು ಇಲ್ಲ ನಗರ ಪ್ರದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 49 & 50): ಎಂ. ಜವರಾಜ್

-೪೯-ಬೆಚ್ಚಿದೆಬೆಚ್ಚಿ ಅಂಗಾತ ಕೆಳಕ್ಕೆ ಬಿದ್ದೆದಡದಡದಡಗುಟ್ಟೊ ಗುಡುಗಿಗೆ.‘ಹ್ಹಹ್ಹಹ್ಹಹ್ಹ…ಅನ್ನೊ ಗಹಗಹಿಸೊ ನಗುವೊಂದು.ಅದುರಿದೆ ನಡುಗಿದೆಸೊಂಯ್ಯನೆ ಎರಗಿದ ಮಿಂಚಿಗೆಕಣ್ಣು ಕುಕ್ಕಿತುತಲೆ ಎತ್ತಿದೆಎದುರಿಗೆ ಬೀದೀಲಿಬೆಂಕಿಯ ಜ್ವಾಲೆ ಆಳೆತ್ತರಕೆ‘ಹ್ಹಹ್ಹಹ್ಹ..’ ಮೆಟ್ಟಿನ ನಗು ನನಗೆ ದಿಕ್ಕು ತೋಚದಾಯ್ತುಈ ಮೆಟ್ಟಿನ ಕತೆಎಲ್ಲೊ ಆಗಿ ಎಲ್ಲೊ ಹೋಯ್ತಿದೆ ಈ ಮೆಟ್ಟು‘ಅಲ್ಲಈ ಮಿಂಚ್ಗಈ ಗುಡುಗ್ಗಬೆಚ್ಚಿ ನಡ್ಗದೇನ’ಅಂತ ಹಂಗಿಸೋ ಹಾಗೆ ಅಂತು ನಾನು,‘ನಿನ್ ಕತೆನೆ ಅರ್ಥ ಆಗ್ತಿಲ್ಲಎಲ್ಲೊ ಹೋಗಿ ಎಲ್ಲೊ ಬಂದನಾ ಬೆಚ್ಲುಬಾರ್ದು ಬೆದುರ್ಲುಬಾರ್ದು’ಅಂತಂದೆ.ಅದ್ಕ ಅದು‘ನೀನು ಬೆಚ್ಚಿ ಬೆದ್ರದ ಆಡ್ನಿಲ್ಲಇನ್ನು ಏನಿಲ್ಲ ಯತ್ತಿಲ್ಲಈಗ್ಲೆ ಬೆಚ್ಚದ ಬೆದ್ರದಾ ಅಂದ್ರೇನಾ’ಅಂತ ಮುಲಾಜಿಲ್ದೆ ಕಿಚಾಯ್ಸದಾ..ಥೂ ಅನ್ಸಿ ನಾನೂ … Read more

ಒತ್ತಡಮುಕ್ತ ಜೀವನ ಸಾಧ್ಯವೇ ?: ಗಾಯತ್ರಿ ನಾರಾಯಣ ಅಡಿಗ

ಇಂದಿನ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಒತ್ತಡಯುಕ್ತ ಜೀವನವನ್ನು ನಾವು ನಮಗೆ ಅರಿವಿಗೆ ಬಂದೋ ಬಾರದೆಯೋ ಅದನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೇವೆ. ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದೇವೆ. ಸ್ವಲ್ಪ ಹೊತ್ತು ಕುಳಿತು ಕಾಫಿ ಹೀರಲು ನಮ್ಮಲ್ಲಿ ಸಮಯವಿಲ್ಲ. ತಂದೆ – ತಾಯಿ, ಬಂಧು – ಬಳಗವನ್ನು ಹತ್ತಿರದಿಂದ ಮಾತನಾಡಲು ನಮ್ಮ ಉದ್ಯೋಗ ಬಿಡುತ್ತಿಲ್ಲ. ಮೊಬೈಲ್ ನಲ್ಲಿ ನಾವು ಗಂಟೆಗಟ್ಟಲೆ ವ್ಯವಹರಿಸುತ್ತೇವೆ. ಆದರೆ ನಮ್ಮ ಮಕ್ಕಳ ಜೊತೆ, ಅವರ ಆಸಕ್ತಿ – ಅಭಿರುಚಿಗಳೊಂದಿಗೆ ಬೆರೆಯುವ ಆಸ್ಥೆ ನಮಗಿಲ್ಲ. ಅವರ ಅನುಭವಗಳನ್ನು ನಮ್ಮೊಡನೆ … Read more

ಹಗಲು ದರೋಡೆಕೋರರು…: ಗುರುಪ್ರಸಾದ ಕುರ್ತಕೋಟಿ

ನಾನು ಮದ್ಯಾಹ್ನ ಮಲಗೋದೇ ಅಪರೂಪ. ಆದರೂ ಅವಕಾಶ ಸಿಕ್ಕಾಗ ಬಿಡೋಲ್ಲ. ನಾನು ಹಾಗೆ ಮಲಗಿದಾಗ ನನ್ನ ಫೋನಿಗೆ ನನ್ನ ಮೇಲೆ ತುಂಬಾ ಅಸೂಯೆ! ಅವತ್ತೂ ಬೊಬ್ಬೆ ಹೊಡೆದು ನನ್ನ ಬಡಿದೆಬ್ಬಿಸಿತ್ತು. ನಮ್ಮ “ಬೆಳೆಸಿರಿ”ಯಲ್ಲಿ ಕೆಲಸ ಮಾಡುತ್ತಿದ್ದವ ಮಾಡಿದ ಫೋನ ಅದು. ಕಟ್ ಮಾಡಿದರೂ ಮತ್ತೆ ಮತ್ತೆ ಮಾಡತೊಡಗಿದ. ಒಂದಿಷ್ಟು ತರಕಾರಿಗಳ ಡೆಲಿವರಿ ಮಾಡಲು ನನ್ನ ಸ್ಕೂಟರ್ ನಲ್ಲಿ ಯೆಲಹಂಕಾದ ಬಳಿಯ ಒಂದು ಅಪಾರ್ಟ್ಮೆಂಟ್ ಗೆ ಹೋಗಿದ್ದ. ಆಗ ತಾನೇ ಜೋಂಪು ಹತ್ತಿದ್ದ ಬ್ರಾಹ್ಮಣನ ನಿದ್ದೆ ಭಂಗ ಮಾಡುವುದು … Read more

ಬರಹ – ನೂರು ನೂರು ತರಹ: ಡಾ. ಹೆಚ್ಚೆನ್ ಮಂಜುರಾಜ್

ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು. ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು … Read more

ದಯೆಯ ಯಾದೃಚ್ಛ ಕ್ರಿಯೆ (Random act of kindness): ದಿನೇಶ್ ಉಡಪಿ

ಶುಕ್ರವಾರ ಕಾಲೇಜಿನ ಕೆಲಸಕ್ಕೆ ರಜೆ ಹಾಕಿಕೊಂಡು, ಕೆಲವು ಅಗತ್ಯ ಕೆಲಸಕ್ಕಾಗಿ ಕೆ.ಆರ್.ನಗರಕ್ಕೆ ಹೋಗಬೇಕಿತ್ತು. ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು, ಅತಿಯಾದ ತೇವಾಂಶದ ಕಾರಣ ವಿಪರೀತ ಶೆಕೆಯೂ ಇತ್ತು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕೆಲಸ ಮುಗಿಸಿಕೊಂಡು ಮೈಸೂರಿನತ್ತ ಹೊರಟೆ. ಬಿಳಿಕೆರೆ ಹತ್ತಿರ ಬರುವಷ್ಟರಲ್ಲಿ ಮಳೆ ಸುರಿಯತೊಡಗಿತು, ಕುಂಭದ್ರೋಣ ಮಳೆ ಅಂತಾರಲ್ಲ ಹಾಗೆ. ಕಾರಿನ ವೈಪರ್ ಪೂರ್ತಿ ವೇಗದಲ್ಲಿ ನೀರನ್ನು ತಳ್ಳುತ್ತಿದ್ದರೂ ರಸ್ತೆ ಕಾಣದಷ್ಟು ಮಳೆ. ಬಹುತೇಕ ಎಲ್ಲ ವಾಹನಗಳೂ ರಸ್ತೆ ಪಕ್ಕ ಹಾಕಿಕೊಂಡು ನಿಂತಿದ್ದರು. ನನ್ನ ಚಿರಪರಿಚಿತ ರಸ್ತೆ … Read more