ಪಂಜು ಕಾವ್ಯಧಾರೆ

ಸಾಧನಕೇರಿಯ ಬೇಂದ್ರೆ ಅಜ್ಜ ಕನ್ನಡ ನುಡಿಸೇವೆ ನಿನ್ನ ಕಜ್ಜ. ಪದ್ಯ ಕಟ್ಟಿ ಹಾಡಿದ್ಯಂದ್ರೆ ಕೇಳೋ ಕಿವಿಗಳಿಗೆ ಇಲ್ಲ ತೊಂದ್ರೆ… ಅಜ್ಜ ನಿನ್ನ ಬರೆಯೋ ಕೋಲ್ಗೆ ಎಂಥ ಶಕ್ತಿ ಇತ್ತು. ಅದ್ನೆ ನೀನು ಎತ್ತಿ ಹಿಡಿದೆ ನಿನ್ನ ಕೈ ಕಲ್ಪವೃಕ್ಷವಾಯ್ತು… ನಗ್ ನಗ್ತ್ ಹೇಳ್ದೀ ಬುದ್ಧಿಮಾತು ನಿನ್ ದುಃಖ ನೀನ್ ನುಂಗಿ. ಅಜ್ಜ ಅಂದ್ರ ನೆನಪಿಗ್ ಬರ್ತದ ತಲೆಗೆ ಪಟಗ ನಿಲುವಂಗಿ.. ಅಜ್ಜ ನಿನ್ ಪದಗಳಂತು ಸಜ್ಜಿತೆನಿ ತೊನೆದ್ಹಾಂಗ. ಕೇಳ್ತಾ ಕೇಳ್ತಾ ತಲೆದೂಗ್ತಾವಾ ಹಸುಕಂದಮ್ಗಳು ಹಾಂಗಾ.. ಬಾಳ್ಗೆ ನಾಕು … Read more

ಜೋಕರ್ ಮತ್ತು ಅವನ ಹಿಂದಿನ ತಲೆಮಾರಿನವರು!!: ಸಂತೋಷ್ ಕುಮಾರ್ ಎಲ್.ಎಂ.

೨೦೧೯ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆದು, ವಿಮರ್ಶಕರಿಂದ ಶಹಬ್ಬಾಷ್ ಅನ್ನಿಸಿಕೊಂಡ ಇಂಗ್ಲೀಷ್ ಸಿನಿಮಾ “ಜೋಕರ್”. ಈ ಸಿನಿಮಾ ನೋಡಿದ ಮೇಲೆಯೂ ಸಿಕ್ಕಾಪಟ್ಟೆ ಕಾಡುತ್ತದೆ. ಅಸಹಾಯಕತೆ, ಅವಮಾನ, ಹಿಂಸೆ, ತಾನು ಬೆಳೆದ ರೀತಿ, ಕೆಟ್ಟ ಬಾಲ್ಯ.. ಎಲ್ಲವೂ ಒಬ್ಬನನ್ನು ಹೇಗೆ ಹಿಂಸೆಗೆ ತಳ್ಳುತ್ತದೆ ಅನ್ನುವ ಸಿನಿಮಾ. ಗಮನಿಸಿದರೆ ಜೋಕರ್ ಮಾಡುವ ಪ್ರತೀ ಕೊಲೆಗೂ ಒಂದೊಂದು ಕಾರಣವಿದೆ ಈ ಸಿನಿಮಾ ನೋಡಿದ ಮೇಲೆ ಅದರ ವಿವರಗಳ ಬಗ್ಗೆ ಕಣ್ಣಾಯಿಸಿದಾಗ ಸಿಕ್ಕ ಎರಡು ಸಿನಿಮಾಗಳು “ಟ್ಯಾಕ್ಸಿ ಡ್ರೈವರ್(೧೯೭೬)” ಮತ್ತು “ದ ಕಿಂಗ್ … Read more

ಕತೆ: ಸೂರಿ ಹಾರ್ದಳ್ಳಿ

ಕಂಪನಿಯೊಂದರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಆರಂಕಿಯ ಸಂಬಳ ಪಡೆಯುತ್ತಿದ್ದ ಕಾಶೀಪತಿಗೆ ಸಾಲದ ತುರ್ತು ಅವಶ್ಯಕತೆಯೇನೂ ಇರದಿದ್ದರೂ ಆ ಜಾಹಿರಾತು ಅವನ ತಲೆಯಲ್ಲಿ ದುಷ್ಟ ಯೋಚನೆಗಳನ್ನು ತುಂಬಿದ್ದಂತೂ ನಿಜ. ಪತ್ರಿಕೆಯೊಂದರಲ್ಲಿ ಪ್ರಕಟವಾದ ‘ವೈಯಕ್ತಿಕ ಸಾಲ ಬೇಕಾಗಿದೆಯೇ? ಕೇವಲ ಮೂರು ಪರ್ಸೆಂಟ್ ಬಡ್ಡಿಯಲ್ಲಿ ಎರಡು ಕೋಟಿ ರೂ.ಗಳ ತನಕ ಸಾಲ ಪಡೆಯಿರಿ. ಸಂಪರ್ಕಿಸಿ..’ ಎಂಬ ಕ್ಲಾಸಿಫೈಡ್ ಜಾಹೀರಾತು ಬೆಳಗಿನ ಬಿಸಿ ಬಿಸಿ ಕಾಫಿ ಹೀರುತ್ತಿದ್ದ ಕಾಶೀಪತಿಯ ಕಣ್ಣಿಗೂ ಬಿದ್ದಿತ್ತು, ಅವನ ಹೆಂಡತಿ ಮಾದೇವಿಯ ಕಣ್ಣಿಗೂ ಬಿದ್ದಿತ್ತು. ಕಾಶೀಪತಿ ಪತ್ರಿಕೆಯ ಇತರ ಸುದ್ದಿಗಳನ್ನು … Read more

ಕಟಾವು: ವೀಣಾ ನಾಗರಾಜು

‘ಲಚ್ಚೀ ಏ ಲಚ್ಚೀ ಅದೇನು ಮಾಡ್ತಾ ಇದ್ದೀಯಮ್ಮೀ ಒಳಗೇ ಆಗಲೇ ಏಟೋತ್ತಾಗದೆ ಬಿರನೆ ಒಂದೆರಡು ತುತ್ತು ಉಂಡು ಬರಬಾರದಾ.? ಮಧ್ಯಾಹ್ನಕ್ಕೆ ಅಂತಾ ಒಂದು ಮುದ್ದೆ ಹೆಚ್ಚಾಗಿ ಬುತ್ತಿ ಕಟ್ಕೋ ಉಂಬಕೆ ವಸಿ ಸಮಯ ಆದರೂ ಸಿಗ್ತದೇ. ನೀ ಹಿಂಗೇ ಉಂಡಿದ್ದೆಲ್ಲಾ ಕೈಗೆ ಕಾಲಿಗೆ ಇಳಿಸ್ಕೊಂಡು ಕುಂತರೇ ಇವೊತ್ತೂ ಆ ಗುತ್ತಿಗೆದಾರ ಶಾಮಣ್ಣನ ತಾವ ಉಗಿಸಿಕೊಳ್ಳೋದರ ಜೊತಿಗೆ ಒಂದು ಗಂಟೆ ಸಂಬಳಕ್ಕೂ ಕತ್ತರಿ ಹಾಕಿಸ್ಕೋಬೇಕಾಗುತ್ತೆ. ಮೊದಲೇ ನಮ್ಮ ಗ್ರಹಚಾರ ಬೇರೆ ಸರಿ ಇಲ್ಲಾ ನಿನ್ನೆ ಸ್ವಲ್ಪ ತಡವಾಗಿ ಹೋಗಿದ್ದಕ್ಕೆ … Read more

ಇಬ್ಬರು ಗೆಳೆಯರು: ಆಶಾರಾಣಿ

ಮನೆಯ ಹೊರಗಿನ ಹೂದೋಟದಲ್ಲಿ ಒಂದು ಹೆಗ್ಗಣ ಮತ್ತು ಇಲಿ ವಾಸವಾಗಿದ್ದವು. ದಿನವೂ ಮನೆಯ ಯಜಮಾನಿ ಹೊರಗೆ ಚೆಲ್ಲುವ ಮುಸುರೆಯಲ್ಲಡಗಿರುವ ಅನ್ನ, ಕಾಳು, ತರಕಾರಿಗಳನ್ನು ಆಯ್ದಾಯ್ದು ತಿಂದುಂಡು ಸಂತೋಷದಿಂದ ದಿನಗಳನ್ನು ದೂಡುತ್ತಿದ್ದವು. ಹೀಗಿರಬೇಕಾದರೆ ಒಂದು ದಿನ ಹೆಗ್ಗಣಕ್ಕೊಂದು ಕೆಟ್ಟ ಆಲೋಚನೆ ಹೊಳೆಯಿತು. ಅದು ತನ್ನ ಗೆಳೆಯನಿಗೆ, “ಏಯ್, ಗೆಳೆಯಾ. . ಎಷ್ಟು ದಿನವೆಂದು ಈ ಮುಸುರೆಯನ್ನವನ್ನು ತಿಂದುಂಡು ಜೀವಿಸುವುದು!?ಹೊಟ್ಟೆಬಿರಿಯುವ ಹಾಗೆ ತಿನ್ನಲು ಏನಾದರೂ ಹೊಸ ಉಪಾಯ ಹುಡುಕೋಣ” ಎಂದಿತು. ಇಲಿಗೆ ಆಶ್ಚರ್ಯದೊಂದಿಗೆ ಸಂದೇಹವುಂಟಾಯಿತು “ಅಲ್ಲಾ ಗೆಳೆಯ, ಹೇಗೊ ಸಿಕ್ಕಿದ್ದನ್ನು … Read more

ಕಾಗೆಯ ಕೊಳಲು: ರೇಣುಕಾ ಕೋಡಗುಂಟಿ

ಅದೊಂದು ದಟ್ಟ ಅರಣ್ಯ. ಆ ಅರಣ್ಯದ ಒಂದು ಭಾಗವು ಗುಂಪು ಗುಂಪಾದ ಹಚ್ಚ ಹಸಿರಿನಿಂದ ಕೂಡಿತ್ತು. ಅಲ್ಲಿ ಎಲ್ಲಾ ಬಗೆಯ ಮರಗಳು ಬೆಳೆದು ನಿಂತು ತಂಪು ಸೂಸುತ್ತಾ, ಹೂವುಗಳ ಪರಿಮಳ ಬೀರುತ್ತಾ ಕಣ್ಣಿಗೆ ಮುದ ನೀಡುವಂತಿದ್ದವು. ಆ ಗಿಡಗಳ ಕಾಲ ಅಡಿಯಲ್ಲಿ ನೀರಿನ ಸಣ್ಣ ಹಳ್ಳ ಜುಳು ಜುಳು ಸದ್ದು ಮಾಡುತ್ತಾ ಹರಿಯುತ್ತಿತ್ತು. ಇದರೊಂದಿಗೆ ಹಕ್ಕಿಗಳ ಕಲರವವೂ ಜೊತೆಗೂಡಿ ಸಂಗೀತ ಹೊಮ್ಮಿದಂತಿತ್ತು. ಅರಣ್ಯದ ಈ ಒಂದು ಭಾಗವು ಹಕ್ಕಿಗಳಿಗೆ ಮೀಸಲಾಗಿತ್ತು. ಎಲ್ಲಾ ಬಗೆಯ ಹಕ್ಕಿಗಳು ಅಲ್ಲಿ ನೆಲೆಸಿದ್ದವು. … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೫): ಎಂ. ಜವರಾಜ್

-೫- ಅಯ್ಯೋ ದೇವ್ರೇ ಯಾಕಪ್ಪ ಈ ಕ್ವಾಟ್ಲ ಕೊಟ್ಟ ನಂಗ ಈ ಅಯ್ನೋರು ಒಳಗ ಹೋದೋರು ಇನ್ನುವ ಅದೇನ್ಮಾಡ್ತಿದ್ದರೋ.. ಈ ಅಯ್ನೋರ್ ದೆಸೆಯಿಂದ ಈ ಕತ್ಲೊಳ್ಗ ನಾ ಒಬ್ನೆ ಆದ್ನಲ್ಲೊ.. ಒಳಗೆ ಅದೇನೋ ಸದ್ದು ನಾ ನೋಡವ ಅಂದ್ರ ಬಾಗಿಲು ಮುಚ್ಚಿತ್ತು “ನೋಡು ಅವತ್ತು ಬಂದಾಗ ಏನಂದೆ ನೀನು ಬಂದು ಬಂದು ಹೋದ್ರ ನಾ ಬುಟ್ಟಿನಾ ತಂದು ಕೊಡಗಂಟ ನನ್ನ ಮುಟ್ಟಂಗಿಲ್ಲ” ಮಾತು ಬಾಗಿಲು ಸೀಳಿ ಬಂದದ್ದು ಗೊತ್ತು. ಈ ನಾಯಿ ಬಡ್ಡೆತದು ಈ ಕತ್ತಲ ಸಾಮ್ರಾಜ್ಯದಲಿ … Read more

ಅಂಬಿಕಾತನಯನ ಕಾವ್ಯಾನುಸಂಧಾನ: ಅಶ್ಫಾಕ್ ಪೀರಜಾದೆ

ದಿನಾಂಕ ೦೭/೦೧/೨೦೨೦ ರಂದು ಧಾರವಾಡದ ಬೇಂದ್ರೆ ಭವನದಲ್ಲಿ ವಿಜಯಶ್ರೀ ಸಾಹಿತ್ಯ ಪ್ರಶಸ್ತಿ ವಿಜೇತ ಯುವ ಸಾಹಿತಿ ಶ್ರೀ ಮಾರ್ತಾಂಡಪ್ಪ ಎಂ. ಕತ್ತಿಯವರು ರಚಿಸಿದ “ಅಂಬಿಕಾತನಯನ ಕಾವ್ಯಾನುಸಂಧಾನ” ಗ್ರಂಥ ಲೋಕಾರ್ಪಣೆಗೊಂಡಿತು. ಈ ಪ್ರಯುಕ್ತ ಕೃತಿ ಪರಿಚಯ ಇಲ್ಲಿದೆ. ಈ ಕೃತಿಯಲ್ಲಿ ಕತ್ತಿಯವರು ಒಟ್ಟು ಮೂವತ್ತಾರು ಬೇಂದ್ರೆ ಕವಿತೆಗಳೊಂದಿಗೆ ಹೃದಯ ಸಂಪರ್ಕ ಸಾಧಿಸಿದ್ದಾರೆ. ವರ ಕವಿ ಬೇಂದ್ರೆಯವರ ವಿವಿಧ ಕಾವ್ಯ ಸಂಕಲನಗಳಿಂದ ಅತಿಮುಖ್ಯ ಅನಿಸುವ ಕವಿತೆಗಳನ್ನು ಅಯ್ದುಕೊಂಡು ಅದರೊಂದಿಗೆ ಅನುಸಂಧಾನ ನಡೆಸಿದ್ದಾರೆ. ನಾಕು ತಂತಿ, ಜೋಗಿ, ಪರಾಗ, ಏಲಾಗೀತ, ನನ್ನವಳು, … Read more

3rd ಕ್ಲಾಸ್ ಕನ್ನಡ ಸಿನಿಮಾ ಫೆ. 7ಕ್ಕೆ ಬಿಡುಗಡೆ: ವೀರಣ್ಣ ಮಂಠಾಳಕರ್

ನಟ, ನಿರ್ಮಾಪಕ ನಮ್ ಜಗದೀಶ ಅಭಿನಯದ ಹಣೆ ಬರಹಕ್ಕೆ ಹೊಣೆ ಯಾರು? ಅಡಿ ಬರಹದ 3rd ಕ್ಲಾಸ್ ಕನ್ನಡ ಸಿನಿಮಾ ಫೆ. 7ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ಎಂದರೆ ಇಂದಿನ ಯುವಪೀಳಿಗೆಗೆ ತುಂಬಾ ಅಚ್ಚುಮೆಚ್ಚು. ಅಂಥದರಲ್ಲಿ ಇತ್ತೀಚಿಗೆ ಹಲವು ಪ್ರತಿಭಾವಂತರು ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಲೇ ತಮ್ಮ ಭವಿಷಕ್ಕೆ ತಾವೇ ಮುನ್ನುಡಿಯನ್ನು ಬರೆದುಕೊಳ್ಳುತಿದ್ದಾರೆ. ಆ ಒಂದು ದಾರಿಯಲ್ಲಿ ಸಾಗುತ್ತಿರುವ ನಮ್ ಜಗದೀಶ ಅವರು 3rd ಕ್ಲಾಸ್ (ಹಣೆ ಬರಹಕ್ಕೆ ಹೊಣೆ ಯಾರು?) ಎಂಬ ಅಡಿ ಬರಹದ ಹೊಚ್ಚ ಹೊಸ … Read more

ಸ್ನೇಹಿತೆ….ಪತ್ನಿ…ಗೆಳತಿ…ಮಡದಿ..: ಸಹನಾ ಪ್ರಸಾದ್

ಶೀರ್ಷಿಕೆ ವಿಚಿತ್ರವಾಗಿದೆ ಅಂದಿರಲ್ಲಾ? ಹೌದು, ಗೆಳತಿಯೊಬ್ಬಳು ಮಡದಿಯಾದ ಮೇಲೂ ಮತ್ತೆ ಸ್ನೇಹಿತೆಯಾಗಬಲ್ಲಳೇ? ಈಗಿನ ಯುವ ಪೀಡಿಗೆಯಲ್ಲಿ ಗಂಡ ಹೆಂಡಿರ ನಡುವೆ ಸಾಕಷ್ಟು ಸ್ನೇಹವಿರುತ್ತದೆ. ನಾ ಇತ್ತೀಚಿಗೆ ಕಂಡಿರುವ ಚಿಕ್ಕ ವಯಸ್ಸಿನ ದಂಪತಿಗಳಲ್ಲಿ, ನಮ್ಮ ಜ಼ಮಾನದಲ್ಲಿ ಇದ್ದ ಕೆಲವು ಸಂಗತಿಗಳು ಕಾಣಸಿಗುವುದಿಲ್ಲ. ಅದೂ ನಗರಗಳಲ್ಲಿ. ಗಂಡನನ್ನು ” ನೀವು” ಅನ್ನುವುದು ಈ ಕಾಲದಲ್ಲಿ ಅಪರೂಪ. ಕೆಲಸಗಳನ್ನು ಇಬ್ಬರೂ ಸರಿ ಸಮಾನವಾಗಿ ಹಂಚಿಕೊಂಡು ಮಾಡುವುದೂ ಕೂಡ ಕಾಣಸಿಗುತ್ತದೆ. ಇಬ್ಬರೂ ಕೆಲಸಕ್ಕೆ ಹೋಗುವಾಗ ಇದು ಅತ್ಯಗತ್ಯ ಕೂಡ. ನಮ್ಮ ಕಾಲದ ” … Read more

ಪರಸಗಡ ನಾಟಕೋತ್ಸವ 2020: ವೈ. ಬಿ. ಕಡಕೋಳ

ಜನೇವರಿ 25 ರಿಂದ ಪೆಬ್ರವರಿ 2 ರ ವರೆಗೆ ಸವದತ್ತಿ ಕೋಟೆಯಲ್ಲಿ ಪರಸಗಡ ನಾಟಕೋತ್ಸವ 2020 ಈ ವರ್ಷ ಸವದತ್ತಿ ಕೋಟೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಮತ್ತು ರಂಗ ಆರಾಧನಾ ಸಾಂಸ್ಕøತಿಕ ಸಂಘಟನೆ(ರಿ) ಸವದತ್ತಿ ಇವರ ಸಹಯೋಗದಲ್ಲಿ ಪರಸಗಡ ನಾಟಕೋತ್ಸವ ಇದೇ ಜನೇವರಿ 25 ರಿಂದ ಆರಂಭವಾಗುತ್ತಿದೆ. ಈ ಸಂಘಟನೆಯವರು ಶ್ರೀ ವಿಶ್ವೇಶ್ವರತೀರ್ಥ ಪೇಜಾವರ ಶ್ರೀಗಳ ಹಾಗೂ ಶ್ರೀ ಗಿರೀಶ್ ಕಾರ್ನಾಡ್ ಸ್ಮರಣೆಯೊಂದಿಗೆ ಈ ನಾಟಕೋತ್ಸವವನ್ನು ಹಮ್ಮಿಕೊಂಡಿದ್ದು. ಸವದತ್ತಿ ಸ್ವಾದಿಮಠದ ಶ್ರೀ ಶಿವಬಸವ … Read more

ಮಕ್ಕಳ ಕವನ: ವೆಂಕಟೇಶ್ ಚಾಗಿ, ದೀಪು

ನನ್ನ ತಂಗಿ ಪುಟ್ಟ ಪುಟ್ಟ ಹೆಜ್ಜೆ ಇಡುತಾ ನನ್ನ ತಂಗಿ ಬರುವಳು ಅಣ್ಣಾ ಎಂದು ತೊದಲುನುಡಿದು ನನ್ನ ಮನವ ಸೆಳೆವಳು || ತಿನ್ನಲು ಒಂದು ಹಣ್ಣು ಕೊಡಲು ನನ್ನ ಬಳಿಗೆ ಬರುವಳು ಅಲ್ಪಸ್ವಲ್ಪ ಹಣ್ಣು ತಿಂದು ಮನೆಯ ತುಂಬಾ ಎಸೆವಳು || ಕಣ್ಣೇ ಮುಚ್ಚೆ ಕಾಡೆಗೂಡೆ ಆಟ ಆಡು ಎನುವಳು ಅಮ್ಮನಿಂದ ಅಡಗಿ ಕುಳಿತು ನಕ್ಕು ನನ್ನ ಕರೆಯುವಳು || ನನ್ನ ಕಾರು ನನ್ನ ಗೊಂಬೆ ತನಗೂ ಬೇಕು ಎನುವಳು ಕೊಡುವ ತನಕ ಹಠವಮಾಡೇ ಅಪ್ಪ ಅಮ್ಮ … Read more

ಬಾಲ್ಯದಲ್ಲಿ ಪ್ರಭಾವಿತವಾದ ಯಕ್ಷಗಾನ ಕಲೆ-ಕರ್ನಾಟಕದ ಜಾನಪದ ಕಲೆ: ಚಂದ್ರಿಕಾ ಆರ್ ಬಾಯಿರಿ

ಕಂಬಳಿ ಹೊದ್ದು ತೆಂಗಿನ ಗರಿಯ ಚಾಪೆಯ ಮೇಲೆ ಕುಳಿತು ತೂಕಡಿಸುತ್ತ ಕಡಲೆಬೀಜ, ಚುರುಮುರಿ ತಿನ್ನುತ್ತ ಯಕ್ಷಗಾನ ನೋಡುವ ಪರಿ ಆಹಾ! ಎಷ್ಟು ಸುಂದರ. ರಾತ್ರಿ 7 ಗಂಟೆಗೆ ಊರಿನವರೆಲ್ಲಾ ಸೇರಿ ಕಿಲೋಮೀಟರ್ ಗಟ್ಟಲೆ ಟಾರ್ಚ್ ಹಿಡಿದು ನಡೆದೇ ಹೋಗುವುದು ನನಗಿನ್ನೂ ನೆನಪಿದೆ. ಹಾಗೆಯೇ ಅಪ್ಪನೊಂದಿಗೆ ಯಕ್ಷಗಾನ ತರಗತಿಗೆ ಹೋಗಿ ಅವರೊಂದಿಗೆ ಒಂದೆರಡು ಹೆಜ್ಜೆ ಹಾಕಿದ ಆ ರಸಮಯ ಕ್ಷಣಗಳು ನಿಜಕ್ಕೂ ಅವಿಸ್ಮರಣೀಯ. ಇಂತಹ ಬಾಲ್ಯ ಖಂಡಿತ ಇನ್ನೊಮ್ಮೆ ಸಿಗದು. ಆ ಕಾಲಘಟ್ಟದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು. ಕಂಬಳ, … Read more

ಏಳನೇ ಬಾರಿಗೆ ಕಸ ರವಾನೆ: ಸಂತೋಷ್‌ ಗುಡ್ಡಿಯಂಗಡಿ

ಇತ್ತೀಚಿಗಷ್ಟೆ ಹೆಗ್ಗಡಹಳ್ಳಿಯ ಮಕ್ಕಳ “ನಿಮ್ಮ ಕಸ ನಿಮಗೆ” ಅಭಿಯಾನಕ್ಕೆ ಪ್ರತಿಕ್ರಿಯೆ ನೀಡಿ ಇದೊಂದು ಶ್ಲಾಘನೀಯ ಕೆಲಸ, ನಿಮ್ಮ ಪರಿಸರ ಕಾಳಜಿಯನ್ನು ನಾವು ಮೆಚ್ಚಿಕೊಂಡಿದ್ದೇವೆ, ನಾವೂ ಕೂಡ ಈ ಪರಿಸರವನ್ನು ಉಳಿಸಲು ಮತ್ತು ನಮ್ಮ ಕಂಪೆನಿಯಿಂದ ಈ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ ಬೆನ್ನಲ್ಲೆ ಮಕ್ಕಳು ಮತ್ತೆ ಹನ್ನೊಂದು ಕಂಪೆನಿಗಳಿಗೆ ಇಂದು ಕಸ ರವಾನೆ ಮಾಡಿದ್ದಾರೆ. ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಮಕ್ಕಳು 2019ರ ಏಪ್ರಿಲೆ ತಿಂಗಳಿಂದ ನಿಮ್ಮ ಕಸ ನಿಮಗೆ ಎಂಬ ದೇಶದಲ್ಲೇ … Read more

ಮಂಗಳತ್ತೆಯ ಮಿ ಟೂ ಅಭಿಯಾನ!: ಹುಳಗೋಳ ನಾಗಪತಿ ಹೆಗಡೆ

ಇತ್ತೀಚೆಗೆ ಟಿ.ವಿ. ಚಾನೆಲ್‍ಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಸಾರವಾಗುತ್ತಿರುವ ‘ಮಿ ಟೂ’ ಅಭಿಯಾನ ದೇಶದೆಲ್ಲೆಡೆ ಭಾರೀ ಸಂಚಲನವನ್ನೇ ಸೃಷ್ಟಿಸಿತು. ಕೆಲವರು ರಾಜಕೀಯ ಮುಖಂಡರ ಕೈಗೆ ಕರವಸ್ತ್ರ ಕೊಡಿಸಿದರು; ಮಂತ್ರಿಗಳು ಮನೆಯ ಹಾದಿ ಹಿಡಿಯುವಂತಹ ಕಳವಳಕಾರೀ ಸನ್ನಿವೇಶÀವನ್ನೇ ಸೃಷ್ಟಿಸಿಬಿಟ್ಟರು. ಇನ್ನೂ ಕೆಲವು ಚಲನಚಿತ್ರ ರಂಗದ ಮಹಿಳೆಯರು ಹೆಸರು ಮಾಡಿದ ನಿರ್ದೇಶಕರು, ಸುಪ್ರಸಿದ್ಧ ನಾಯಕ ನಟರನ್ನು ಪಿಶಾಚಿಯಂತೆ ಬೆನ್ನತ್ತಿ ಕಾಡಿದರು. ಅವರು ಇವರ ಮೇಲೆ ಗೂಬೆ ಕೂಡ್ರಿಸಿದರು; ಇವರು ಅವರ ಮುಖಕ್ಕೆ ಮಸಿ ಬಳಿದರು. ಚಾನೆಲ್‍ಗಳಿಗಂತೂ ರೊಟ್ಟಿಯಲ್ಲ, ಹೋಳಿಗೆಯೇ ತುಪ್ಪದಲ್ಲಿ ಜಾರಿಬಿದ್ದಂತಾಗಿತ್ತು. … Read more

ಬೇಂದ್ರೆಯವರ ಸಿರಿವಂತಳೆನಿಸುವ ‘ ನಾನು ಬಡವಿ ‘ !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಯುಗದ ಕವಿ ಜಗದ ಕವಿ ಶಬ್ದ ಗಾರುಡಿಗ ನಾದಬ್ರಹ್ಮ ನಾಕು ತಂತಿಯಿಂದ ಜ್ಞಾನಪೀಠಕ್ಕೇರಿದವರೂ ಆದ ಡಾ. ದ ರಾ ಬೇಂದ್ರೆಯವರ ‘ ನಾನು ಬಡವಿ ‘ ಎಂಬ ಪ್ರೀತಿಯ ಮಹತ್ವ ಸಾರುವ ಒಲವಿನ ಗೀತೆ ನನ್ನ ಮಿತಿಯೊಳಗೆ ನಾನು ಕಂಡಂತೆ! ಈ ಗೀತೆಯನ್ನು ಕವಿ ಬಡವಿಯ ಮೂಲಕ ತನ್ನ ಒಲವಿನ ದಾಂಪತ್ಯದ ವರ್ಣನೆ ಮಾಡುತ್ತಿರುವಂತೆ ರಚಿಸಿದ್ದಾರೆ. ಬಡವಿಯ ಸ್ವಗತದಂತಿದೆ. ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು. ಹತ್ತಿರಿರಲಿ … Read more

ಪಂಜು ಕಾವ್ಯಧಾರೆ

ಅಪ್ಪ ಅಂದರೆ…… ಏನೇ ಕೇಳಿದರೂ ಏನೇ ಹೇಳಿದರೂ ಕೋರ್ಟ್ ಲ್ಲಿ ದಾವೆ ಹೂಡಿದಂತೆ ಚೌಕಾಸಿ ಮೇಲೆ ಚೌಕಾಸಿ ಪರ ವಿರೋಧದ ತೀರ್ಪಿನ ಮೇಲೆ ನೂರಾರು ಕರಾರಿನ ಅಪ್ಪನ ಮೊಹರು….. ಹೆಜ್ಜೆ ಹೊಸ್ತಿಲ ಹೊರಗಿಟ್ಟರೂ ಒಳಗಿಟ್ಟರೂ ತೀವ್ರ ಹದ್ದಿನ ಕಣ್ಣು ಇಟ್ಟಂತೆ ಶೋಧ ಪ್ರತಿಶೋಧಗಳ ಕಾರ್ಯಾಚರಣೆ ತಪ್ಪೊಪ್ಪುಗಳ ಸರ್ಪಗಾವಲಿನಲ್ಲಿ ಖುಲಾಸೆಯೇ ಸಿಗದ ಅಪ್ಪನ ಕಾಯ್ದೆ …… ಎಲ್ಲೇ ಇದ್ದರೂ ಹೇಗೆ ಇದ್ದರೂ ಕುದುರೆಗೆ ಲಗಾಮು ಹಾಕಿಟ್ಟಂತೆ ಸಾಗುವ ಪಥದಿ ತಿರುವು ಏನೇ ಬಂದರು ಸ್ಥಿರ ಸಿದ್ದಾಂತಗಳ ಗಡಿ ಮೀರಲು … Read more

ಕುಯಿರನ ಕನಸು ಮತ್ತು ಮಗಳು: ಜಗದೀಶ ಗೊರೋಬಾಳ

ಅಂದು ಸಾವಂತಿಗೆ ಅದೇಕೋ ತಲೆನೋವು ವಿಪರೀತವಾಗಿತ್ತು. ಮನೆಯಂದಾಚೆ ಹೋಗಲಾರದಷ್ಟು ಅಸ್ವಸ್ಥಳಾಗಿದ್ದಳು. ರಾತ್ರಿಯಿಡಿ ಅವಳ ತಲೆಯಲ್ಲಿ ಅನಿರೀಕ್ಷಿತ ಯೋಚನೆಗಳು ಲಗ್ಗೆ ಇಟ್ಟಿದ್ದೇ ಇದಕ್ಕೆ ಕಾರಣವಿರಬಹುದು. “ ನನಗೂ ಅವರಂತಾದರೇ ನನ್ನ ಗುಲಾಬಿಯ ಗತಿಯೇನು? ಗುಲಾಬಿಗೆ ಊಟ ಯಾರು ಕೊಡ್ತಾರೆ? ಗುಲಾಬಿಯನ್ನು ಶಾಲೇಗ್ ಕಳಿಸೋರ್ಯಾರು? ಗುಲಾಬಿಗೆ ರಾತ್ರಿ ಕತೆ ಹೇಳಿ ಮಲಗಿಸೋರ್ಯಾರು” ಎಂಬ ಆಲೋಚನೆಗಳಿಂದ ಸಾವಂತಿಯ ತಲೆ ಚಿತ್ರವಿಚಿತ್ರವಾಗಿತ್ತು. ಈ ರೀತಿ ಯೋಚನೆಗಳಿಂದ ಸಾವಂತಿ ಬೆಚ್ಚಿಬೀಳಲು ಕಾರಣವಿತ್ತು. ಸಾವಂತಿಯದು ಚಿಕ್ಕ ಬಡ ಕುಟುಂಬ. ಗಂಡ ಕುಯಿರ ಮತ್ತು ಎಂಟು ವರ್ಷದ … Read more

ದಾಳ..: ಸತೀಶ್ ಶೆಟ್ಟಿ ವಕ್ವಾಡಿ..

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೇಸಿಗೆಯ ಬಿಸಿಲಿನ ಭರಕ್ಕೆ ಬಳಲಿದ ಧರೆ ತಂಪಾಗಿತ್ತು. ಮಧ್ಯಾಹ್ನವಾದರೂ , ಆಗಸದಲ್ಲಿ ಕಪ್ಪುಗಟ್ಟಿದ ಮೋಡಗಳ ದಾಳಿಗೆ ಬೆದರಿ ಸೂರ್ಯ ಕಣ್ಣು ತೆರೆದಿರಲಿಲ್ಲ. ಇಂದು ಸಹ ಭುವಿಯ ಮೇಲೆ ಮತ್ತೆ ದಾಳಿ ಮಾಡಲು ಮೋಡಗಳ ದಂಡು ಸಜ್ಜಾಗುತ್ತಿತ್ತು, ಪಡುವಣದ ಕಡಲ ಕಡೆಯಿಂದ ಬೀಸುತ್ತಿರುವ ಗಾಳಿ ಸಂಜೆಯ ಮೇಘರಾಜನ ಅಬ್ಬರಕ್ಕೆ ಪಕ್ಕವಾದ್ಯವೆಂಬಂತೆ ಜೋರಾಗಿ ಬೀಸುತ್ತಿತ್ತು. ಇಂತಹ ತಣ್ಣಗಿನ ವಾತಾವರಣದಲ್ಲೂ ಅಲ್ಲಿ ನೆರೆದವರೆಲ್ಲ ಬೆವತ್ತಿದ್ದರು. ನರಹರಿ ಒಳಬೈಲು ಅವರ ಮನೆಯ ಫ್ಯಾನುಗಳು ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದರೂ … Read more

ಕನ್ನಡಿಗಂಟದ ಬಿಂದಿ: ಡಾ.ಅಜಿತ್ ಹರೀಶಿ

ಜೇಡ ತನ್ನೊಳಗಿನಿಂದ ತಾನು ಅಂಟನ್ನು ಸ್ರವಿಸುತ್ತಾ ಬಲೆ ನೇಯುತ್ತಲೇ ಇತ್ತು. ಸೂರ್ಯನ ಕಿರಣಗಳು ಬಲೆಯ ಮೇಲೆ ಬಿದ್ದಾಗ ಕಣ್ಣಿಗೆ ಬಣ್ಣದೋಕುಳಿಯಾಗುತ್ತಿತ್ತು. ದಿನವೂ ಅದೊಂದು ಚಿತ್ತಾಪಹಾರಿಯಾದ ದೃಶ್ಯವಾಗಿತ್ತು. ಆದರೆ ಇಂದೇಕೋ ಕಿರಿಕಿರಿ ಉಂಟುಮಾಡುತ್ತಿದೆ ಎಂದು ಅನ್ನಿಸಿತು. ಕೆಲಸದ ರಾಜಮ್ಮ ಅದಾಗಲೇ ನನ್ನ ರೂಮಿಗೆ ಬಂದು ನೆಲ ಗುಡಿಸುತ್ತಿದ್ದಳು. ರಾಜಮ್ಮ, ಮೇಲೆಲ್ಲಾ ನೋಡು, ಕಸ ಹೊಡೆಯೋದೇ ಇಲ್ಲ. ಹೇಳದೇ ಯಾವ ಕೆಲಸವನ್ನೂ ಇತ್ತೀಚೆಗೆ ನೀನು ಮಾಡಲ್ಲ’ ತುಸು ಗಡಸು ಧ್ವನಿಯಲ್ಲಿ ಜೇಡರ ಬಲೆ ತೋರಿಸುತ್ತಾ ಹೇಳಿದೆ. ಅಯ್ಯೋ, ಇದೊಳ್ಳೆ ಆಯ್ತಲ್ಲಾ … Read more

ಅಗ್ನಿ ಸ್ಪರ್ಶ: ಭಾರ್ಗವಿ ಜೋಶಿ

ಅಲ್ಲಿ ಜನಸಾಗರ ನೆರೆದಿತ್ತು, ಜಾತಿ ಮತದ ಬೇಧವಿಲ್ಲದೆ ನೆರೆದಿದ್ದ ಜನ.. ಎಲ್ಲರಲ್ಲೂ ಮನೆ ಮಾಡಿದ ಮೌನ, ತುಂಬಿದ ಕಣ್ಣೀರು. ಕಳೆದುಕೊಂಡ ಮಾಣಿಕ್ಯ ಬದುಕಿದ ರೀತಿಯೇ ಹಾಗಿತ್ತು. ಶ್ರೀನಿವಾಸ ರಾಯರು ತಮ್ಮ 60ವರ್ಷ ಸಾರ್ಥಕ ಬದುಕಿನ ಪಯಣ ಮುಗಿಸಿ ಪರಲೋಕ ಸೇರಿದ್ದರು. ಬದುಕಿರುವಷ್ಟು ದಿನ ಆದರ್ಶ ಜೀವನ ನಡೆಸಿದ್ದರು, ಜಾತಿ ಭೇಧವಿಲ್ಲದೆ, ಮೇಲು ಕೀಳು, ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರನ್ನು ಪ್ರೀತಿಸುತ್ತಿದ್ದರು. ಪರೋಪಕಾರಕ್ಕೆ ಹೆಸರಾಗಿದ್ದರು. ಅನಾರೋಗ್ಯ, ಮಕ್ಕಳ ವಿದ್ಯಾಭ್ಯಾಸ ಹೀಗೆ ಹಲವಾರು ಇವರಿಂದ ಸಹಾಯ ಪಡೆದಿದ್ದರು. ಇವರ … Read more

ಸಂಗಾತಿ ಬ್ಲಾಗ್‌ ನ ಸಂಪಾದಕರಾದ ಕು.ಸ.ಮಧುಸೂದನರವರ ಒಂದೆರಡು ನುಡಿ

‘ಸಂಗಾತಿ’ ಸಾಹಿತ್ಯದ ಬ್ಲಾಗ್ ಶುರುವಾಗಿ ಕೇವಲ ಎರಡು ತಿಂಗಳು ಮಾತ್ರ ಆಗಿರುವುದರಿಂದ ಈ ಕ್ಷೇತ್ರದಲ್ಲಿ ಹೆಚ್ಚು ಬರೆಯಲು ನಾನು ಅರ್ಹನೆಂದು ಭಾವಿಸಿಲ್ಲ.ಪತ್ರಿಕೋಧ್ಯಮ ನನ್ನ ಕಾಲೇಜು ದಿನಗಳ ಕನಸಾಗಿತ್ತು.ಆದರೆ ನನ್ನ ವೈಯುಕ್ತಿಕ ಬದುಕಿನ ಸಮಸ್ಯೆಗಳಿಂದ ಅನಿವಾರ್ಯವಾಗಿ ಸರಕಾರಿ ನೌಕರಿಗೆ ಸೇರಬೇಕಾಯಿತು. ಆಗೀಗ ಕತೆ ಕವಿತೆಗಳನ್ನು ಬರೆದು ಪತ್ರಿಕೆಗಳಿಗೆ ಕಳಿಸಿ ಕಾಯುವಷ್ಟಕ್ಕೆ ನನ್ನ ಸಾಹಿತ್ಯದ ಆಸಕ್ತಿ ಸೀಮಿತವಾಯಿತು. ನಾಲ್ಕು ವರ್ಷಗಳ ಹಿಂದೆ ಸ್ವಯಂನಿವೃತ್ತಿ ಪಡೆದ ನಂತರ ಪೂರ್ಣಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಕೊಂಡು ಒಂದು ಕವನಸಂಕಲನ ಒಂದು ಕಥಾ ಸಂಕಲನ ಎರಡು ರಾಜಕೀಯ … Read more

ಉದಯನ್ಮುಖ ಬರಹಗಾರ್ತಿ ವೀಣಾ ನಾಗರಾಜ್: ವೈ. ಬಿ. ಕಡಕೋಳ

ಶ್ರೀಮತಿ ವೀಣಾ ನಾಗರಾಜು ಉತ್ತಮ ಶಿಕ್ಷಕಿ, ಪ್ರತಿಭಾವಂತೆ, ಸಮಾಜಶಾಸ್ತ್ರ ವಿಷಯದಲ್ಲಿ ಎಂ. ಎ. ಪದವೀಧರೆ. ಇವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಳಜ್ಜಿ ಹಟ್ಟಿಯಲ್ಲಿ ಕಳೆದ 12 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ. ಚನ್ನಬಸವಯ್ಯ ಸಾವಿತ್ರಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಹಿರಿಯ ಸುಪುತ್ರಿ. ಇವರ ಪತಿ ನಾಗರಾಜು ಕೂಡ ಪ್ರೌಢಶಾಲಾ ಶಿಕ್ಷಕ. ಎಂ. ಎ(ಸಮಾಜಶಾಸ್ತ್ರ) ಓದಿರುವ ಶಿಕ್ಷಕಿ ವೀಣಾ ನಾಗರಾಜು ವೃತ್ತಿಯೊಡನೆ ಬರವಣಿಗೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡು 15 ಕ್ಕೂ ಹೆಚ್ಚು ಕತೆಗಳನ್ನು … Read more

ನನ್ನವಳ ನೆನಪು: ಶ್ರೀರಂಗ. ಕೆ. ಆರ್

ಅದೇನೋ ಅಂದು ಮನಸ್ಸು ತಳಮಳಗೊಂಡಿತ್ತು. ಮಲಗಿ ಮೂರು ಸುತ್ತು ಹೊರಳಾಡಿದರೂ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಆಗ ನಿನ್ನಪ್ಪನಿಂದ ಕರೆಬಂದದ್ದು. ನಿನಗೆ ಹೆರಿಗೆ ನೋವು, ಆಸ್ಪತ್ರೆಯಲ್ಲಿದ್ದೇವೆ ಎಂದು. ಆಗಲೇ ಓಡಿ ಬರಬೇಕೆಂದುಕೊಂಡೆ. ಪರವಾಗಿಲ್ಲ ನಾವೆಲ್ಲರೂ ಇದ್ದೇವೆ ತೊಂದರೆಯಿಲ್ಲ, ಬೆಳಗ್ಗೆ ಬಂದರಾಯಿತು ಎಂದರು ಮಾವ. ಆದರೂ ನನಗೆ ಸಮಾಧಾನವಿರಲಿಲ್ಲ. ನಿನ್ನ ಕನಸುಗಳಿಲ್ಲದೆ ಮಲಗಿದವನೇ ಅಲ್ಲ ನಾನು, ಅಂದೇಕೋ ಕಣ್ಣುಗಳು ಮುಚ್ಚಲೇ ಇಲ್ಲ. ಮಲಗಿದ್ದ ಕೋಣೆಯ ಮೇಲ್ಛಾವಣಿಯ ಪರದೆಯ ಮೇಲೆ ನಿನ್ನ ಜೊತೆ ಕಳೆದ ಕ್ಷಣಗಳ ನೆನಪುಗಳು ಮೂಡಿಬರುತ್ತಿದ್ದವು. ಅವನ್ನೇ ನೋಡುತ್ತ … Read more

ಪ್ರೇಮ ಪ್ರವಾದಿಯ ಪರಿಸರ ಪ್ರೇಮ: ಅಶ್ಫಾಕ್ ಪೀರಜಾದೆ

ತನ್ನ ಪ್ರಥಮ ಕೃತಿ ” ಮಮದಾಪೂರ ಚುಟುಕುಗಳು ” ಮೂಲಕ ಪ್ರೇಮ ಪ್ರವಾದಿ ಎಂದು ನಾಡಿನಾದ್ಯಂತ ಪ್ರಸಿದ್ದಿ ಪಡೆದಿರುವ ಈಶ್ವರ ಮಮದಾಪುರ ಅವರು ಇತ್ತೀಚೆಗೆ ಇನ್ನೊಂದು ಕೃತಿ “ಮಮದಾಪೂರ ಹನಿಗವಿತೆಗಳು” ಓದುಗರ ಕೈಗಿಟ್ಟಿದ್ದಾರೆ. ಚುಟುಕು, ಹನಿಗವಿತೆ, ಹಾಯ್ಕು, ಕಿರುಪದ್ಯ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಈ ಸಾಹಿತ್ಯ ಪ್ರಕಾರ ಕವಿಯ ಮನದ ಪರದೆಯ ಮೇಲೆ ಆ ಕ್ಷಣಕ್ಕೆ ಮಿಂಚಿ ಮಾಯವಾಗುವ ಭಾವ ಸ್ಪಂದನ.. ಅದೇ ಬರಹದ ರೂಪ ಪಡೆದುಕೊಂಡು ಓದುಗರ ಹೃದಯ ತಾಕುವ ತಂತುವಾಗಿ ಮಾರ್ಪಡುತ್ತದೆ. ಈಶ್ವರ ಮಮದಾಪುರ … Read more

ಹುಟ್ಟು ಹಬ್ಬದ ಶುಭಾಶಯಗಳು ಪಂಜು: ವರದೇಂದ್ರ ಕೆ.

ಪಂಜು ಸಾಹಿತ್ಯದ ಚಿಲುಮೆ, ಅಂತರ್ಜಾಲದಲ್ಲಿ ಹೆಸರು ಮಾಡಿದಕ್ಕಿಂತಲೂ ಅಂತರಂಗದಲ್ಲಿ ಸದ್ದಿಲ್ಲದೆ ಸೇರಿಕೊಂಡ ಸಿಹಿ ಪನ್ನೀರು. ಸಾಹಿತ್ಯ ರಚಿಸಿ ಮಸ್ತಕದಿಂದ ಪುಸ್ತಕಕ್ಕೆ ಇಳಿಸಿ ಕೂತವರಿಗೆ; ಪುಸ್ತಕದಿಂದ ಓದುಗರ ಮನೆಗೆ ಮನಸಿಗೆ ತಲುಪಿಸುವಂತಹ ಪರಿಪೂರ್ಣ ಕೆಲಸ ಪಂಜುವಿನಿಂದಾಗಿದೆ. ಪಂಜು ಎಂದರೆ ಬೆಳಕು, ಕತ್ತಲಲ್ಲಿದ್ದವರಿಗೆ ಪಂಜುಹಿಡಿದು ಸಾಹಿತ್ಯ ಬೆಳೆಸುವ ದಾರಿತೋರಿಸಿದೆ ನಾಡಿಗೆ ಪರಿಚಯಿಸಿ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳಲು ಸಹಾಯವಾಗಿ ನಿಂತಿದೆ. ಯುವ, ಎಲೆ ಮರೆ ಕಾಯಿಯಂತಹ ಸಾಹಿತಿಗಳಿಗೆ ಉತ್ತಮ ವೇದಿಕೆಯಾಗಿ ನಿಂತು ೭ ವಸಂತಗಳನ್ನು ಪೂರೈಸಿದೆ. ಈ ಸಪ್ತ ವರ್ಷದಲ್ಲಿ ಸಾಕಷ್ಟು … Read more

ಒಂಟಿತನ – ಪರಿಣಾಮ – ಮುಕ್ತಿ: ಗೀತಾ ಜಿ.ಹೆಗಡೆ, ಕಲ್ಮನೆ.

ಬದುಕನ್ನು ಒಂಟಿಯಾಗಿ ಎದುರಿಸುತ್ತಿದ್ದೇವಾ? ನಿಜಕ್ಕೂ ನಮಗೆ ಏನು ಬೇಕು ಜೀವಿಸಲು? ಯಾರ ಅಗತ್ಯ ನಮಗೆ ಹೆಚ್ಚು? ಒಂಟಿತನ ಕಾಡುವುದು ಯಾವಾಗ? ಅಥವಾ ಒಂಟಿತನ ಕಾಡಿದಾಗಲೆಲ್ಲ ನಮ್ಮ ಜೊತೆಗಿರುವವರು ಯಾರು ಗಂಡನಾ, ಮಕ್ಕಳಾ, ಸ್ನೇಹಿತರಾ ಬಂಧುಗಳಾ ಅಥವಾ ನೆರೆಹೊರೆಯವರಾ? ಇದರಿಂದ ಹೇಗೆ ಮುಕ್ತಿ ಹೊಂದಬೇಕು? ಇವೆಲ್ಲ ಆಗಾಗ ಕಾಡುವ ಪ್ರಶ್ನೆ. ಇವೆಲ್ಲವೂ ಸತ್ಯವಾಗಿ ಅರಿವಾಗಬೇಕು ಅಂದರೆ ಕೆಲವು ಸಂದರ್ಭದಲ್ಲಿ ಮಾತ್ರ ಸಾಧ್ಯ. ಅದು ಕಷ್ಟ ಕಾಲದಲ್ಲೂ ಅಲ್ಲ ಅಥವಾ ಕಾಯಿಲೆ ಬಿದ್ದು ನರಳುವಾಗಲೂ ಅಲ್ಲ. ಹಾಗಾದರೆ ಇನ್ಯಾವಾಗ? ; … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೪): ಎಂ. ಜವರಾಜ್

೪- ನನ್ನ ಮೆಟ್ಟಿ ಗಿರಿಕ್ಕು ಗಿರಿಕ್ಕನೆ ಆ ಸಂತ ಸಾಮ್ರಾಜ್ಯವ ಬುಟ್ಟು ಅಯ್ನೋರ್ ಪಾದ ಹೋಗ್ತಾ ಹೋಗ್ತಾ ಕತ್ತಲು ಆವರಿಸಿಕೊಳ್ತ ರಸ್ತೆ ಮಾರ್ಗ ಬುಟ್ಟು ಕಿರು ದಾರಿ ಕಾಣ್ತಲ್ಲೊ… ಆ ಕಿರು ದಾರೀಲಿ ಅಯ್ನೋರ್ ಮನೇನಾ? ಅಂತಂದರೆ ಅದು ಸುಳ್ಳಾಗಿ ಹೋಯ್ತಲ್ಲೋ.. ಆ ಕತ್ತಲ ಸಾಮ್ರಾಜ್ಯದಲಿ ಅಯ್ನೋರ್ ಉಟ್ಟ ಪಂಚೆ ಅಂಚು ನನ್ನ ಸುತ್ತ ಸುತ್ಕಂಡು ನಾಜೂಕಲ್ಲಿ ನಗ್ತಾ ನಗ್ತಾ ‘ನನ್ ಒಡಿಯನ ವೈಭೋಗ ನಿಂಗೊತ್ತಾ ಮೆಟ್ಟೇ..? ನಿಂಗೇನ್ ಗೊತ್ತು.. ನೀ ಹೊಸಿಲಾಚೆ ಬುಟ್ಟು ಒಂದಿಂಚು ಬರಗಿದ್ದುದಾ..? … Read more