ಮೌನ ಮುರಿದು ಬಾರೇ……: ಮೆಹಬೂಬ ಮುಲ್ತಾನಿ

ನನ್ನ ಪ್ರೀತಿಯ ಭುವಿ ಒಂದು ಕ್ಷಣ ನೀನು ಸಿಕ್ಕರೆ ಏನೆಲ್ಲಾ ಹೇಳಬೇಕಾಗಿದೆಯೋ ಅದ್ನೆಲ್ಲಾ ಹೇಳಲಾಗುವುದಿಲ್ಲವೆಂದು ಹೃದಯದಲ್ಲಿನ ಮಾತುಗಳನ್ನು ಬರವಣಿಗೆ ರೂಪದಲ್ಲಿ ಭಟ್ಟಿ ಇಳಸಿದ್ದೇನೆ. ನನಗೆ ಪತ್ರ ಬರೆಯುವ ಅಭ್ಯಾಸವೇ ಮರೆತುಹೊಗಿದೆ. ದಿನಾಲೂ ನೂರೈವತ್ತು ಮೆಸೇಜು ಮಾಡಿ ರೂಢಿಯಾಗಿರುವ ನನಗೆ ಇದೇ ಮೊದಲ ಪ್ರೇಮಪತ್ರವೆನಿಸಿ, ಬರೆಯಲು ಕೂತು ಕೊನೆಗೆ ಇದೇ ಕೊನೆಯ ಪತ್ರವೂ ಎನಿಸಿದೆ. ಸುಮಾರು ಬಾರಿ ಮನಸು ಬಿಚ್ಚಿ ಮಾತಾಡಿದ್ರೂ ನಮ್ಮ ಪ್ರೀತಿಗೆ ಹೊಸ ಭಾಷ್ಯ ಬರೆಯುವ ಬಗ್ಗೆ ನಿನ್ನ ಮನಸ್ಸೇಕೋ ಹೇಡಿಯಂತೆ ಹೆದರಿ ಓಡುತ್ತಿದೆ. ಇದಕ್ಕೆ … Read more

ನನ್ನೆದೆಯ ಒಲವಿನ ಒಡತಿಗೆ: ಡಾ.ಉಮೇಶ್

ನನ್ನೆದೆಯ ಒಲವಿನ ಒಡತಿಗೆ, ಮೂಗಿನತ್ತದ ಸಿಂಗಾರವಿಲ್ಲದಿದ್ದರೂ ಮೂಗಿನ ಮೇಲೆಯೇ ಕೋಪವೆಂಬ ಆಭರಣದ ಅಲಂಕಾರದಿಂದ ಮುದ್ದಾಗಿ ಮಿನುಗುವ ಪ್ರೀತಿಯ ಕೋಪದ ಸುಂದರಿಯೆ, ಕೋಪದ ಹೆಸರನ್ನಿಟ್ಟು ಯಾಕೆ ಕರೆಯುತ್ತಿದ್ದಾನೆ ಅಂತ ಆಶ್ಚರ್ಯವಾಗಿರಬೇಕಲ್ಲ? ನಿನ್ನ ಪೆದ್ದು ಕೋಪದಲ್ಲಿ ಅವಿತಿರುವ ನಿನ್ನ ಪ್ರೀತಿಗೆ ಸೆಳೆತಗೊಂಡವನು ನಾನು, ನನ್ನ ಪ್ರೇಮದ ಭಾವನೆಗಳನ್ನ ನೀನು ಅರಿತರು ಏನೂ ತಿಳಿಯದವಳಂತೆ ಪ್ರೀತಿಯ ಕೋಪದಲ್ಲಿ ನನ್ನ ತುಂಟ ಪ್ರಶ್ನೆಗಳಿಗೆ ಉತ್ತರ ಕೊಟ್ಟಾಗ ನೀನೆಷ್ಟು ಚೆಂದ… ನಿನ್ನ ತುಟಿಯ ಹಿಂದಿನ “ಆ” ಮಾತನ್ನು ನೀನು ಹೇಳದೆಯೇ ಬಲ್ಲವನು ನಾನು. ಆದರು … Read more

ಭಾವಭಿತ್ತಿಯಲ್ಲಿ ಅಚ್ಚೊತ್ತಿದ ಮುದ್ದೂ: ಭವಾನಿ ಲೋಕೇಶ್

ಭಾವಭಿತ್ತಿಯಲ್ಲಿ ಅಚ್ಚೊತ್ತಿದ ಮುದ್ದೂ, ಹೃದಯದೂರಿನ ಭಾವ ಬೀದಿಗಳೆಲ್ಲಬಿಕೋ ಎನ್ನುತ್ತಿವೆ ಗೆಳೆಯಇಂದು ನೀನಿಲ್ಲದೆ , ನಿನ್ನ ಬಿಸಿ ಉಸಿರಿಲ್ಲದೆ , ನಿನ್ನಕನಸಿಲ್ಲದೆ, ನಿನ್ನನ್ನೇ ನೆನೆಸಿದ ನನ್ನ ಮನಸಿಲ್ಲದೆ. . ಒಲವೇ, ಬೇಡ ಬೇಡವೆಂದರೂ ಕೇಳದೆ ನನ್ನ ಮನಸ್ಸು ಲೇಖನಿಯಲ್ಲಿ ಭಾವನೆಗಳ ಚಿತ್ರ ಬಿಡಿಸೋಕೆ ಹೇಳಿ ಒತ್ತಾಯದಿಂದ ಕೂರಿಸಿದೆ. ಈಗ ರಾತ್ರಿ 12.00 ಗಂಟೆ. ನಿದ್ರೆ ಕಣ್ಣೆವೆಗಳನ್ನು ಮುತ್ತಿಡುವ ಸಮಯ. ಆದರೂ ಅದರ ಸುಳಿವೇ ಇಲ್ಲದಂತೆ ಮಾಡಿಬಿಟ್ಟಿದೆ ನಿನ್ನ ನೆನಪು. ಅದರ ಒನಪು. ನಿನಗೆ ಗೊತ್ತಿದೆ ನಾನು ಭಾವುಕ ಜೀವಿ.. … Read more

ಪಿಜ್ಜಾ ಹುಡುಗಿಗೆ: ವಿಜಯ್ ದಾರಿಹೋಕ

ನನ್ನ ಪ್ರೀತಿಯ ಪಿಜ್ಜಾ ಹುಡುಗಿಗೆ,ಸದಾ ಅಂತರಂಗದಲ್ಲಿ ಸ್ಫುರಿಸುತ್ತಿರುವ ಪ್ರೇಮ, ವ್ಯಾಲೆಂಟೈನ್ಸ್ ಡೇ ಬರುವ ಹೊತ್ತಿಗೆ ಅಕ್ಷರ ರೂಪದಲ್ಲಿ ಇಣುಕುವ ಹಂಬಲ ತೋರುತ್ತಿದೆ. ಹಿಂದೆಲ್ಲ ಪ್ರೇಮ ಪತ್ರಗಳನ್ನು ಬರೆದು ಪಾರಿವಾಳ ಇಲ್ಲವೇ ದೂತನ, ಅಂಚೆ ಮಾಮನ ಮೂಲಕ ತಲುಪಿಸುತ್ತಿದ್ದುದನ್ನು ನೀನು ಕೇಳಿಯೇ ಇರುತ್ತಿ.. !.. . ಈಗೆಲ್ಲ, ಕೆಲ ವರ್ಷಗಳಿಂದ ಎಂದಿನಂತೆಯೇ ನಾನು ನಿನ್ನ ವಾಟ್ಸಪ್ಪ್ ನಂಬರಿಗೆ ನೇರವಾಗಿ ಕಳಿಸುತ್ತಿರುವೆ…. . ! ಒಮ್ಮೆ ಓದಿ ನೋಡು.. ಆ ದಿನ ಸ್ಪಷ್ಟವಾಗಿ ನೆನಪಿದೆ. ವೀಕೆಂಡ್ ನ ಶುಕ್ರವಾರದ ಸಂಜೆ … Read more

ಹಚ್ಚಿಟ್ಟ ಒಲವಿನ ಹಣತೆ: ಪಲ್ಲವಿ ಬಿ ಎನ್.

ಲೋ ಕರಿಯ, ಹೀಗೆ ಅಲ್ಲವೆ ನಿನ್ನನ್ನು ನಾನು ಅಂದು ಕರೆಯುತ್ತಿದ್ದು. ಗೋದಿ ಬಣ್ಣದ ನೀನು ಅದೆಷ್ಟು ಕೋಪಿಸಿಕೊಳ್ಳುತ್ತಿದ್ದೆ. ಪ್ರೀತಿಯನ್ನ ಅರ್ಥೈಸಲು, ವ್ಯಾಖ್ಯಾನಿಸಲು ನನಗೆ ಬರುವುದಿಲ್ಲ ಆದರೆ ನಿನ್ನ ಮೇಲಿನ ಪ್ರೀತಿಯಲ್ಲಿ ಒಡಮೂಡುವ ನಾನಾ ಪರಿಯ ಬಯಕೆ, ಹಂಬಲಗಳನ್ನ ನಿರೂಪಿಸಬಲ್ಲೆ. “ಇಂದು ನಾನು ನನ್ನ ದಿನವನ್ನು ಅತ್ಯಂತ ಖುಷಿಯಿಂದ ಕಳೆಯುತ್ತೇನೆ” ಎಬೊಂದು ಅಸ್ಥಿರವಾದ ಸಾಲನ್ನೇಳಿಕೊಂಡು ಮಧುರ ಮುಂಜಾವಿಗೆ ಹೆಜ್ಜೆ ಇಡುತ್ತಿದ್ದ ನನ್ನನ್ನ ಹಾದಿ ತಪ್ಪಿಸಿ ನಿನ್ನ ನೆನಪೆ ಸುಮದುರ ಶುಭಾಶಯ ಕೊರುವ ಹಾಗೆ ಮಾಡುಬಿಟ್ಟೆಯಲ್ಲ ಕರಿಯ. ನನ್ನ ನಿನ್ನ … Read more

ಪಂಜು ಕಾವ್ಯಧಾರೆ

ಕೊರಳ ಕರೆ ಯಾವ ದಾರಿಯಲಿ ಹೇಗೆ ಸಾಗಿದರುಬಂದು ಸೇರುವೆ ಇಲ್ಲಿಗೆದುಂಬಿ ಕಳವಳ ಹೂವು ಬಲ್ಲದುಕರೆಯದಿರುವುದೆ ಮೆಲ್ಲಗೆ? ರಾತ್ರಿ ರಮಣಿಯ ಚಂದ್ರ ಬಿಡುವನೆಎಳೆದು ತರುವನು ಗಲ್ಲಿಗೆಚಂದ್ರಿಕೆಯ ಆ ಇರುಳ ಹೆರಳಿಗೆಮುಡಿಸದಿರುವನೆ ಮಲ್ಲಿಗೆ? ಕಡಲ ಚುಂಬನ ಮಧುರ ಬಂಧನಬಿಡದೆ ಇರಿವುದು ಎನ್ನೆದೆರಾಗರಂಜಿನಿ ಗುಪ್ತಗಾಮಿನಿಬಿಡುವುದೇನೆ ನಿನ್ನೆದೆ? ಒಲವಗಾಳಿಯು ಸೆರಗು ಹಾಸಿದೆಭಾವ ಬೆಸೆದಿದೆ ಹರುಷದೆಬಾರದಿರುವ ಮಳೆಯ ತಂದುಸುರಿಸೆಯೇನೆ ಸರಸದೆ? ನಮ್ಮ ನಡುವಿನ ಹಮ್ಮುಬಿಮ್ಮುತೂರಿ ಹೋಗಲಿ ಬಾರದೆಬಮ್ಮ ಹಾಕಿದ ನಮ್ಮ ಗಂಟನುನಮಗೆ ಅದನು ತೋರದೆ ತಾಕುಗಣ್ಣಿನ ದುರುಳ ನೋಟವುಇಂಗಿಹೋಗಲಿ ಉಳಿಯದೆಉಸಿರಿಗುಸಿರನು ಬೆರೆಸಿ ಬದುಕುವನಾಕ ನರಕವನಳೆಯದೆ … Read more

ಕರೋನಾ ಕೋಲ್ಮಿಂಚು: ರವಿ ಶಿವರಾಯಗೊಳ

ನಮ್ಮೂರಿನ ಒಣಿಯ ಮನೆಯೊಂದರ ಜಗುಲಿಯಲ್ಲಿ ಕೂತ ಎರಡು ಪುಟಾಣಿ ಮಕ್ಕಳು ತಮ್ಮ ತೊದಲು ನುಡಿಯಲ್ಲೇ ಜುಗಲ್ಭಂದಿ ನಡೆಸುತಿದ್ದರು ಅದು ಹೀಗಿತ್ತು. “ಕರೋನಾ ಬಂತು ಕರೋನಾ” ಒಂದು ಮಗು ಅಂತು.‘ಜೀವನ ಆಯ್ತು ಹೈರಾಣ ’ ಮತ್ತೊಂದು ಮಗು ನುಡಿಯಿತು. ಮುಂದೆನ್ಮಾಡ್ತು ಕರೋನಾದಾರಿ ಬದಿಯಲ್ಲಿ ಶೌಚ ಮಾಡೋವರ್ನ್ನ ಓಡಿಸಿ ಬಿಟ್ತು ನೋಡಣ್ಣ. ಆ ಕ್ಷಣದಲ್ಲಿ ಅವರಿಬ್ಬರ ಆ ಜುಗಲ್ಭಂದಿ ಕೇಳಿದಾಗ ನಗು ಬಂತಾದರೂ ಅವರ ಮಾತು ಸತ್ಯವಾದವುಗಳು ಎಂದು ಅನ್ನಿಸದೇ ಇರಲಿಲ್ಲ. ಹೇಳಲಿಕ್ಕೆ ನನಗೆ ಮುಜುಗರ ಇಲ್ಲ ಓದಲಿಕ್ಕೆ ನಿಮಗೆ … Read more

“ಸಂಗಾತಿ” ದೇಹಕ್ಕೋ ಮನಸ್ಸಿಗೊ…: ಪೂಜಾ ಗುಜರನ್. ಮಂಗಳೂರು

“ಸಂಗಾತಿ” ಬೇಕಾಗಿರುವುದು ಮನಸ್ಸಿಗೊ ದೇಹಕ್ಕೊ.. ಇದನ್ನು ಅರ್ಥ ಮಾಡಿಕೊಂಡರೆ ಈ ಸಂಗಾತಿ ಅನ್ನುವ ಪದಕ್ಕೊಂದು ಅರ್ಥ ಸಿಗುತ್ತದೆ. ಯಾವಾಗ ನಾವು ಈ ಸಂಗಾತಿಯ ಅನ್ವೇಷಣೆಯನ್ನು ಮಾಡುತ್ತೇವೆ.? ನಮ್ಮ ಮನಸ್ಸು ಒಂಟಿತನದ ಬೇಗೆಯಲ್ಲಿ ಬೇಯುವಾಗ ಮನಸ್ಸಿಗೊಂದು ಆಸರೆಬೇಕು ಅನಿಸುತ್ತದೆ. ನಿಜವಾಗಿಯೂ ಮಾಗಿದ ವಯಸ್ಸು ಬಯಸುವ ಸಂಗಾತಿ ಅದು ದೇಹಕ್ಕಲ್ಲ. ತನ್ನ ಮನಸ್ಸಿಗೆ. ಯಾರು ಇಲ್ಲದಾಗ ತನಗಾಗಿ ಮಿಡಿಯುವ ಆತ್ಮೀಯ ಜೀವವೊಂದು ಬೇಕು ಅನಿಸುತ್ತದೆ. ಕೆಲವರು ಇದನ್ನು ಹೇಳಲಾಗದೆ ಮಾನಸಿಕವಾಗಿ ಕುಗ್ಗುತ್ತಾರೆ. ಬೆಳೆದ ಮಕ್ಕಳು ಅವರವರ ವೈಯಕ್ತಿಕ ಜೀವನದಲ್ಲಿ ಬ್ಯುಸಿ … Read more

ಕನಸೆಂದರೆ ಅದು ನೀನೆ ತಾನೇ?: ಸರಿತಾಮಧುಕುಮಾರ್

ಪ್ರೀತಿಯ ಹನಿ (ಮಧು), ಮೊದಲ ಪ್ರೇಮ ಪತ್ರ ಬರೆಯೋ ಅವಕಾಶವೇ ಇರಲಿಲ್ಲ ನನಗೆ. ಕಾರಣ ಸದಾ ಜೊತೆಯಲ್ಲಿ ನನ್ನೊಂದಿಗೆ ನೀನಿದ್ದೆಯಲ್ಲ. ಅದು ನಿನಗೂ ಗೊತ್ತು. ಏನೆಂದು ಹೇಳಲಿ ನಲ್ಲ ಮೊದಲ ಭೇಟಿಯ ತವಕ ನನಗಿಂತಲೂ ನಿನಗೇ ಹೆಚ್ಚಿತ್ತು, ಅಲ್ವಾ? ನಮ್ಮ ಭೇಟಿ ನಿರೀಕ್ಷಿತವಾಗಿದ್ದರೂ ಅದು ವಿಶೇಷ ವಾಗಿತ್ತು. ಅದಕ್ಕಾಗಿ ನೀನು ಚಾತಕಪಕ್ಷಿಯಂತೆ ಕಾದಿದ್ದು ನನಗೆ ತಿಳಿದಿದೆ. ಹೀಗಂತ ಅದೆಷ್ಟೋ ಸಲ ನನ್ನ ಬಳಿ ಹೇಳಿದರೂ ಮತ್ತೆ ಮತ್ತೆ ಕೇಳುವಾಸೆ ಈ ಹೃದಯಕೆ. ನೀನಾಡಿದ ಮಾತು ಪ್ರತಿಧ್ವನಿಸುತ್ತಿದೆ , … Read more

ಸಿದ್ರಾಮ್ ಪಾಟೀಲರ ಜಂಗಮಕ್ಕಳಿವಿಲ್ಲ ಪುಸ್ತಕದ ವಿಮರ್ಶೆ: ಭಾರ್ಗವಿ ಜೋಶಿ

ಇತ್ತೀಚಿಗೆ ಓದಿದ ಪುಸ್ತಕ. ಪುಸ್ತಕದ ಹೆಸರು ನೋಡಿದ ಕೂಡಲೇ ಓದಬೇಕು ಅನಿಸಿತು. ಜಂಗಮಕ್ಕಳಿವಿಲ್ಲ ಅನ್ನೋದೇ ಒಂದು ದೊಡ್ಡ ವಿಷಯ. ಅರ್ಥ ಮಾಡಿಕೊಳ್ಳೋಕೆ ತುಂಬಾ ವಿವೇಕ ಇರಬೇಕು. ಇನ್ನು ಆ ಶೀರ್ಷಿಕೆ ಹೊತ್ತ ಪುಸ್ತಕದಲ್ಲಿನ ಕಥೆಗಳು ಹೇಗೆ ಇರಬಹುದು ಅನ್ನೋ ಕುತೂಹಲದಿಂದಲೇ ಪುಸ್ತಕ ಕೊಂಡುಕೊಂಡೆ. ಖಂಡಿತ ನನ್ನ ಊಹೆ ಸುಳ್ಳಾಗಲಿಲ್ಲ. ಹನ್ನೆರೆಡು ವೈವಿಧ್ಯಮಯ ಕಥೆಗಳನ್ನು ಹೊಂದಿದ ಈ ಪುಸ್ತಕ ನಿಜಕ್ಕೂ ತುಂಬಾ ಅರ್ಥ ಗರ್ಭಿತ ಕಥೆಗಳು. ಮೊದಲನೇ ಕಥೆ ಬಿಡಿ-ಕೊಂಡಿಗಳು. ತಂದೆ, ತಾಯಿ ಅಸೆ, ಕನಸುಗಳು, ಅವುಗಳನ್ನು ಮಿರಿ … Read more

ಮನಸ್ಸಿನಾಳದ ಪ್ರೀತಿ: ನಾಗರತ್ನಾ ಗೋವಿಂದನ್ನವರ.

ಜೀವದ ಗೆಳೆಯಾ, ನೀನು ಹೇಗಿರುವೆ? ಬಾಲ್ಯದಿಂದ ಸ್ನೇಹಿತೆಯಾಗಿದ್ದವಳು, ಪ್ರೇಮಿಯಾಗಿ, ಬದುಕಿಗೆ ಬಾಳ ಸಂಗಾತಿಯಾಗಿ ನಿನ್ನನ್ನು ಅದೆಷ್ಟು ಹಚ್ಚಿಕೊಂಡಿರುವೆ, ನೀನಂದ್ರೆ ನಂಗೆ ಅದೆಷ್ಟು ಇಷ್ಟಾ ಎಂದು ಹೇಳೋಕೆ ಶಬ್ದಗಳಿಲ್ಲಾ. ಒಂದೆ ಮಾತಲ್ಲಿ ಹೇಳುವುದಾದರೆ ನನ್ನ ಹೃದಯದಲ್ಲಿ ಮೊಳಕೆಯೊಡೆದ ಮೊದಲ ಹಾಗೂ ಕೊನೆಯ ಪ್ರೀತಿ ನೀನು. ನನ್ನ ತುಂಟಾಟಗಳು ಕೆಲವೊಂದು ಸಲ ನಿನಗೆ ಇಕ್ಕಟ್ಟಿಗೆ ಸಿಲುಕಿಸಿದ್ದು ನಿಜ, ಆಗ ಮದುವೆಯಾದ ಮೇಲಾದರೂ ನಿನ್ನ ತುಂಟತನ ಬಿಡು ಎಂದು ಹುಸಿಮುನಿಸು ತೋರಿದ್ದೆ. ಮದುವೆಯಾದ ಮೇಲು ಪ್ರೇಮಿಗಳಾಗಿಯೆ ಇರಬೇಕು ಎಂದಿದ್ದೆ ಅದಕ್ಕೆ ನೀನು … Read more

ನೀನು ವಂಚಕಿ ಅಲ್ಲ, ಮೋಸಗಾತಿ ಅಲ್ಲ, ನಿರ್ದಯಿ ಹೆಣ್ಣಲ್ಲ, ನೀನೊಬ್ಬಳು ಮಾಟಗಾತಿ ಅಲ್ಲ…: ರವಿ ಶಿವರಾಯಗೊಳ

ಪ್ರೀತಿಯ? ಹುಡಗಿ. ನಾನಿಲ್ಲಿ ಕ್ಷೇಮವೋ! ಅಲ್ಲವೋ! ನಿನಗೆ ತಿಳಿಯದ ವಿಷಯ. ಆದರೂ ನಾನು ಕ್ಷೇಮ. ನೀನು ಹೋದ ಮರುಗಳಿಗೆಯಿಂದ ಒದ್ದಾಡಿದೆ , ಚಡಪಡಿಸಿದೆ, ಊಟ ಸೇರಲಿಲ್ಲ , ನಿದ್ದೆ ಬರಲಿಲ್ಲ, ಹಿಮಾಲಯದ ಸನ್ಯಾಸಿಯಂತೆ ಮುಖದ ತುಂಬೆಲ್ಲಾ ಗಡ್ಡ ಬೆಳೆದವು, ನೀರು ಕಾಣದ ಮುಖ ಕಪ್ಪಿಟ್ಟಿತು, ನನ್ನ ನೋಡಿದವರು ಹುಚ್ಚನೆಂದರು, ಇನ್ನೂ ಕೆಲವರು ಅನಾಥನೆಂದರು, ಉಳಿದವರು ಮಾನಸಿಕ ಅಸ್ವಸ್ಥನೆಂದರು. ಆದರೆ ನಾನೇನಾಗಿದ್ದೆ ? ಉಹುಂ ನನಗೂ ತಿಳಿಯದು. ಅವರೆಲ್ಲರೂ ಕೊಟ್ಟ ಸರ್ಟಿಫಿಕೇಟ್ ನಲ್ಲಿ ಯಾವುದಾದರೂ ಒಂದು ವ್ಯಕ್ತಿತ್ವ ಇರಬಹುದೇನೋ! … Read more

ನಿಮ್ಮ ಧ್ವನಿ ಕೇಳದ ಒಂದೊಂದು ಕ್ಷಣವೂ: ಚೇತನ್‌ ಬಿ ಎಸ್.‌

ಎಲ್ಲರೂ ನನ್ನ ಬಹಳ ಮಾತುಗಾರನೆನ್ನುತ್ತಾರೆ ಆದರೆ ಅದೇಕೊ ಗೊತ್ತಿಲ್ಲ ನಿಮ್ಮನ್ನು ಕಂಡೊಡನೆ ಹೃದಯದಲ್ಲಿ ಕಂಪನಗಳು ಶುರುವಾಗಿಬಿಡುತ್ತವೆ. ಅದ್ಯಾವುದೋ ಆತಂಕ, ಹೇಳಿಕೊಳ್ಳಲಾಗದ ಭಯ ಆವರಿಸಿ ಮನಸು ತನ್ನ ಸ್ಥಿಮಿತವನ್ನೇ ಕಳೆದುಕೊಂಡು‌ ಮೌನಕ್ಕೆ ಶರಣಾಗಿಬಿಡುತ್ತಿದೆ. ಅತ್ತ ಹೇಳಲಾಗದೆ ಇತ್ತ ಸುಮ್ಮನಿರಲಾರದೆ ಚಡಪಡಿಸುತ್ತಾ ಉಳಿದ ಮಾತುಗಳೆಲ್ಲಾ ದಿನೇ ದಿನೇ ಹೃದಯವನ್ನು ಭಾರವಾಗಿಸುತ್ತಾ ಹೋಗಿವೆ. ಹಾಗಾಗಿಯೇ ಈ ಪತ್ರದ ಮೂಲಕ ನನ್ನ ಮನದ ಮಾತುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ. ನೀವು ಸುಸಂಸ್ಕೃತ ಕುಟುಂಬದಿಂದ ಬಂದವರು. ಈ ಪತ್ರ ಕಂಡೊಡನೆ ನಿಮಗೆ ಕೋಪ ಬರಬಹುದು ಅಥವಾ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 71): ಎಂ. ಜವರಾಜ್

-೭೧-ಅವತ್ತು ಸಂದವತ್ಲಿತ್ವಾಟ್ಗೇರಿ ಮಾರಿಗುಡಿಲಿಮರಿಗಿರಿ ಹೊಡ್ದು ಪರ ಮಾಡ್ತಿದ್ರು.. ಅದ ನಾ ಉಣ್ಣಗಿದ್ದಾ.. ಉಣ್ದೆದ್ ಮ್ಯಾಲಇನ್ಯಾಕ ಅನ್ಕಂಡುಹಂಗೆ ಬೀಸ್ಕಾಲ ಹಾಕಂಡುಬತ್ತಿರವತ್ಲಿಬಸ್ಟ್ಯಾಂಡು ಬಣ್ಗುಡ್ತಿತ್ತು.. ಮ್ಯಾಲ ತಿಂಗ್ಳು ಬೆಳುಗ್ತಿತ್ತು ಆ ಬೆಳ್ಗ ಬೆಳುಕ್ಲಿಆ ತಿಂಗ್ಳು ತರನೇ ಇರ ಮೊಖ ಕಾಣ್ತುಆ ಮೊಖ ನೋಡುದ್ಮೇಲನಂಗ ಎತ್ತಗು ದಿಗ್ಲಾಗ್ದೆಅತ್ತಗ ಇತ್ತಗ ಎಡ್ತಾಕಿಸುಮ್ನ ದಂಡುಕ್ಕ ಹೋಗಿ‘ಎಲ್ಲಿಗ್ಯಾ’ ಅಂದಿಅವ್ಳು ಸುಮ್ನ ನೋಡಿ ತಿರಿಕಂಡ ಆಮ್ಯಾಲ ಅವ್ಳೆ‘ಕಲ್ಲೂರ್ ಮುಳ್ಳೂರ್ ಕಡ ಬಸ್ಸಿಲ್ವ’ಅಂದ್ಲು ‘ಇಲ್ಲ ಕೇತಳ್ಳಿ ಕೆರ ಹೊಡ್ದುಸಂತಮಾಳ್ದಲಿ ನೀರು ತುಂಬ್ಕಂಡುರೋಡು ಕೊಚ್ಗ ಹೋಗದ’ಅಂದಿ ‘ಅಯ್ಯೋ ನಾನೇನ್ಮಾಡ್ಲಿನಾ ಹೆಂಗ್ಯಾ ಊರ್ … Read more

ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟದ ವಿವಿಧ ಸ್ಪರ್ಧೆಗಳು

ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟ“ಇದು ಕನ್ನಡ ಸಾಹಿತ್ಯಾಸಕ್ತರ ಜೀವಾಳ” 23 ಏಪ್ರಿಲ್‍ 2020 ರಲ್ಲಿ ರಚಿತವಾದ ಈ ತಂಡವು ಈವರೆಗೆ ಯಶಸ್ವಿಯಾಗಿ ಸಾಹಿತ್ಯ ಸೇವೆಯಲ್ಲಿ ಒಂದು ವರ್ಷವನ್ನು ಪೂರೈಸಲಿದೆ. ಆ ನಿಟ್ಟಿನಲ್ಲಿ ಮೂರು ದಿನಗಳ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 20-ಏಪ್ರಿಲ್-2021 : ನ್ಯಾನೋ ಕಥಾ ಸ್ಪರ್ಧೆ*) 150 ಪದಮಿತಿಯ ಸ್ವತಂತ್ರ ವಿಷಯದ ಮೇಲೆ ಕಥೆ ರಚಿಸಿ (mobileನಲ್ಲಿ unicode fontನಲ್ಲಿ ಟೈಪ್ ಮಾಡಿದ ಕಥೆ) ಏಪ್ರಿಲ್ 20 ರಂದು avvapustakaalaya@gmail.com ಗೆ ಕಳಿಸಿಕೊಡಬೇಕು. 21-ಏಪ್ರಿಲ್-2021 : ಸ್ವರಚಿತ ಕವನ … Read more

ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಕುರಿತು ಲೇಖನ ಸ್ಪರ್ಧೆಗೆ ಲೇಖನಗಳ ಆಹ್ವಾನ

ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆ ಯಾಪಲದಿನ್ನಿ, ರಾಯಚೂರು ಕಲಾಂ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಯೋಗ ಶಿಬಿರ ರಕ್ತದಾನ ಶಿಬಿರ ವ್ಯಕ್ತಿತ್ವ ವಿಕಸನ ಬಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ಕಲಾಂ ಕಲ್ಪ ವೃಕ್ಷವನ ಕಲಾಂ ಸ್ಮಾರಕ ಇನ್ನೂ ಹಲವಾರು ಸಾಮಾಜಿಕ ಚಟುವಟಿಕೆಗಳಮೂಲಕ ಗ್ರಾಮೀಣ ಪ್ರದೇಶದಲ್ಲಿ ಪ್ರತಿವರ್ಷ ವಿವಿಧ ಕಾರ್ಯಕ್ರಮವನ್ನು ಮಾಡುತ್ತಾ, ಸಮಾಜದ ಸುಧಾರಣೆಗಾಗಿ ವಿವಿಧ ರೀತಿಯ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ಪ್ರತಿವರ್ಷ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿಯಂದು … Read more

ಧಾರವಾಡ ಎನ್ನುವ ಶಹರದೊಳಗೆ ಹಳೆ ಹುಡುಗಿಯ ನೆನೆಪಿನ ಜಾತ್ರೆ: ವೃಶ್ಚಿಕ ಮುನಿ

ಧಾರವಾಡ ಸವಿ ನೆನಪುಗಳುಕಾಡಕತ್ತವಾಧಾರವಾಡ ಮಳೆಯಂಗಆದರೇನು ಮಾಡುವುದೂಮಳೆಗಾಲಕ್ಕೆ ಇನ್ನೂ ಎರಡು ತಿಂಗಳ ಬಾಕಿ ಅದಅಲ್ಲಿವರೆಗೂಹಾಳಾದ ಈ ಬಿಸಿಲಿನ ಕಾಟಕ್ಕೆನಡುನಡುವೆ ನೆನಪುಗಳಬೆವರಿನ ಜಳಕ…! ಹೀಗಿತ್ತು ಧಾರವಾಡದ ಬದುಕುಬೇಕಾಗಿದ್ದು ಎಲ್ಲ ಇತ್ತುಹಸಿವು ಇತ್ತು, ಓದಿನ ಖುಷಿ ಇತ್ತುಹಣದ ಕೊರತೆ ಇತ್ತುಬದುಕಿನ ಚಿಂತಿ ಇತ್ತುಆದರೂ ಏನಾದರೂ ಮಾಡಬೇಕು ಎನ್ನುವ ಛಲ ಇತ್ತುಒಳ್ಳೆಯ ಗೆಳೆಯರು ಬಳಗ ಇತ್ತುಚಿಂತನೆ ಇತ್ತು ಚಿಂತಿಸುವಜೀವಗಳಿದ್ದವುರಾತ್ರಿ ಕನಸುಗಳಿಗೆ ಜೊತೆಯಾಗುವ ನನಸಿನ ಸರಮಾಲೆ ಇತ್ತು…! ಧಾರವಾಡ ಬಿಟ್ಟ ಬಂದ ನಂತರವೂ ಬಿಡದೆ ಕಾಡುವ ಮೋಹವಿತ್ತುಧಾರವಾಡ ಹಳೆ ಗೆಳತಿಯಂಗ ಕಾಡಾತ್ತೀತುಆಕಿ ನಗು, ಹುಡುಗಾಟ, … Read more

ಕಾವ್ಯದ ಆದಿ ಮತ್ತು ಅಂತ್ಯದಂತೆ…: ಅಶ್ಫಾಕ್ ಪೀರಜಾದೆ.

ಕಾವ್ಯದ ಹುಟ್ಟು ಒಂದುವಿಚಿತ್ರವಾದ ಸೃಷ್ಟಿ ಕ್ರಿಯೆಹುಟ್ಟು ಮತ್ತು ಸಾವಿನಂತೆಯಾವುದೇ ಸಮಯದಲ್ಲಿಹುಟ್ಟಬಹುದು ಹಾಗೇಸಾಯಲೂ ಬಹುದುಆದರೆ ಅದರಾತ್ಮಅಮರವಾಗಬಹುದುಅಥವಾಹೇಳು ಹೆಸರಿಲ್ಲದಂತೆಅಳಿದೂ ಹೋಗಬಹುದು ಅದೊಂದು ರಾತ್ರಿದಟ್ಟ ಕತ್ತಲೆಯಲ್ಲಿವೈಬ್ರೇಟ ಆಗಿಬೆಳಗಿದ ಮೊಬೈಲ್‌ಪರದೆಯ ಮೇಲೆಎಲ್ಲಿಂದಲೋ ಹಾರಿಬಂದು ಬಂದು ಕುಳಿತಕೀಟಕ್ಕೇನು ಗೊತ್ತುಅರಿಸಿ ಬಂದ ಬೆಳಕಿನಲ್ಲೆಜವರಾಯ ಇರುವ ಸತ್ಯ ಸಾಯಬೇಡ ಹೋಗುಹೋಗೆಂದರು ಕೇಳದುಎಷ್ಟು ಊದಿದರೂಹಾರಿ ಹೋಗದುಮತ್ತೆ ಮತ್ತೆ ಅದೇಬೆಳಕಿನ ತೆರೆಗೆ ಡಿಕ್ಕಿಹೊಡೆಯುವುದುಮೋಜಿನಾಟ ಅವಿರತ ಪ್ರೇಮಿ ತನ್ನಪ್ರೇಯಸಿಯನುಮತ್ತೆ ಮತ್ತೆತಬ್ಕೊಳ್ಳುವಂತೆಮತ್ತೆ ಮತ್ತೆಮುತ್ತಿಕ್ಕುವುದು……………….. ಈ ಚೆಲ್ಲಾಟದಿಂದಮೊಬೈಲಿಗೇನುಬೇಜಾರಿಲ್ಲಆದರೆ ಮೊಬೈಲನೋಡುವಕಂಗಳಿಗೆ ಸ್ವಲ್ಪ ಕಿರಿಕಿರಿಮನದ ಅಣತಿಯಂತೆಮೈ- ಕಡವಿ ನಿಂತಘಟೋದ್ಗಜ ಹೆಬ್ಬರಳುಬೆಳಕಿಗೆ ಮುತ್ತಿಡುತ್ತಿದ್ದಕೀಟವನ್ನು ಸ್ಕ್ರೀನಿಗೆಒತ್ತಿ ಒರೆಸಿ ಹಾಕಿದೆ ಬೆಳಕನು … Read more

ನಿನ್ನ ಮಧುರ ಮಾತುಗಳ ಅಮಲಲ್ಲಿ: ಮನೋಹರ್‌ ಜನ್ನು

ಪ್ರಿಯೆ, ಬೆಳ್ಳಿ ಮೋಡದ ಮರೆಯಲ್ಲಿ ಹಪಹಪಿಸೋ ಚೆಂದ್ರಮನ ಹಾಗೆ, ಆ ನೀಳ ಗಗನದಲ್ಲಿ ಹೊಳೆವ ಚೆಂದ್ರನ ಹಾಗೆ ನಿನ್ನ ಹಣೆಯ ಕೆಂಪುಬಿಂದು ಮೈ ಪುಳಕಿತ ಗೊಳಿಸುತ್ತಿದೆ. ಮನ ಮಿಂಚುವ ಕೋಲ್-ಮಿಂಚಿನ ಥರ ಸದ್ದು ಮೊಳಗಿಸುತ್ತಿದೆ. ನಿನ್ನ ನಗುವಿನ ನೆನಪಲ್ಲಿ ಹಲ್ಲುಗಳ ಹೊಳಪು ಮನಸ್ಸನ್ನು ಉತ್ತೇಜಿಸುತ್ತಿದೆ. ಅಗಲಿಕೆ ಜೀವ ಹಿಂಡುತ್ತಿದೆ. ಅಂದು ಮೊದಲಸಲ ತುಂಬಿದ ಜಾತ್ರೆಯಲ್ಲಿ ನೀನು ನನ್ನ ಕಂಡು ಮಿಂಚುಳ್ಳಿಯಂತೆ ಮರೆಯಾದಾಗ ಹೃದಯ ರೋಧನದಲ್ಲಿ ನರಳಿತ್ತು ಗೆಳತಿ! ಮತ್ತೆ ಮತ್ತೆ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಅದು ನೀನೆ … Read more

ಗಣಕರಂಗ (ರಿ), ಧಾರವಾಡ ಆಯೋಜಿಸಿರುವ ಕವನ ವಾಚನ ಅಥವಾ ಜನಪದ ಶೈಲಿಯಲ್ಲಿ ಗಾಯನ ಸ್ಪರ್ಧೆ

  #ಗಣಕರಂಗ (ರಿ), ಧಾರವಾಡ ಆಯೋಜಿಸುವ ವಿಶ್ವಜ್ಞಾನ ದಿನ ದ ಪ್ರಯುಕ್ತ ‘ಬಾಬಾಸಾಹೇಬ ಡಾ.ಅಂಬೇಡ್ಕರ್ ಕುರಿತ ಜಾನಪದ ಶೈಲಿಯ ಮುಕ್ತ ಕವನ ವಾಚನ ಮತ್ತು ಗಾಯನ ಸ್ಪರ್ಧೆಗೆ ಸ್ವಾಗತ . ಎಲ್ಲರಿಗೂ ಮುಂಚಿತವಾಗಿ (ಏಪ್ರಿಲ್-14) ವಿಶ್ವಜ್ಞಾನ ದಿನದ ಶುಭಾಶಯಗಳು. ಆತ್ಮೀಯರೇ, ನಿಮಗೆ ಈಗಾಗಲೇ ಗೊತ್ತಿರುವಂತೆ ಗಣಕರಂಗ (ರಿ), ಧಾರವಾಡ ಸಂಸ್ಥೆಯು ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳನ್ನು ಸಭಾವೇದಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳ ಆನ್-ಲೈನ್ ದಲ್ಲಿ ಯಶಸ್ವಿಯಾಗಿ ನಡೆಸಿದೆ. ಅದರ ಮುಂದುವರಿಕೆಯಾಗಿ, ಈಗ ಬರುವ ಏಪ್ರಿಲ್-14ರಂದು ‘ವಿಶ್ವಜ್ಞಾನ ದಿನ’ದ ಪ್ರಯುಕ್ತ ವಾಟ್ಸಪ್ … Read more