ಯೋಚನೆಗಳು ಸ್ವತಂತ್ರವಾಗದ ಹೊರತು ಪ್ರಜಾಪ್ರಭುತ್ವ ಅತಂತ್ರ: ಮಧುಕರ್ ಬಳ್ಕೂರ್

ಇದು ಭಾರತೀಯರ ಹುಟ್ಟುಗುಣವೋ ಇಲ್ಲಾ ಕೆಟ್ಟಚಾಳಿಯೋ, ಒಂದಿಷ್ಟು ಗೌಜು ಗಲಾಟೆ ಜಟಾಪಟಿಯಂತ ಸ್ಥಳಗಳಲ್ಲಿ ಜೋರಾದ ಮಾತುಗಳು ಕೇಳಿಬಂದರೆ ಸಾಕು, ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಅಲ್ಲಿ ನೆರೆದು ಬಿಡುವುದು. ಒಂದು ಬಗೆಯ ಕೆಟ್ಟ ಕೂತೂಹಲದಲ್ಲಿ ಬಿಟ್ಟಿ ಎಂಟರ್ಟೈನ್ ಮೆಂಟ್ ಅಂತ ಮಜಾ ತಗೊಳ್ಳೊರು ಕೆಲವರಾದರೆ, ಜಗಳದ ಕಾರಣವನ್ನೆ ಅರಿಯದೆ ಮಧ್ಯೆ ಪ್ರವೇಶಿಸಿ ಹಿರೋಯಿಸಂ ತೊರಿಸಲು ಹಾತೊರೆಯುವ ಇನ್ನು ಕೆಲವರು. ಬಹುತೇಕ ಸಂಧರ್ಭಗಳಲ್ಲಿ ಅಲ್ಲಿ ವಿಷಯವೇ ಇರುವುದಿಲ್ಲ. ಏನ್ ಲುಕ್ ಕೊಡ್ತಾ ಇದ್ದೀಯಾ, ಹೆಂಗೈತೆ ಮೈಗೆ ಅನ್ನೊ ರೇಂಜ್ ನಲ್ಲೆ … Read more

ಕವಿ ಮನಸ್ಸಿನ ಭಾವಯಾನ ‘ಮೌನಸೆರೆ’ ಕಾದಂಬರಿ: ಅಶ್ಫಾಕ್ ಪೀರಜಾದೆ

ಒಂದು ಕಥೆ ಓದಿಸಿಕೊಳ್ಳಬೇಕು ಮತ್ತು ಓದುಗನನ್ನು ಕಾಡಬೇಕು. ಇಂತಹ ವಿಚಾರವುಳ್ಳ ಕಥೆಗಳು ಎಂದೆಂದಿಗೂ ಅಮರತ್ವ ಪಡೆದುಕೊಳ್ಳುತ್ತವೆ. ಈ ದಿಶೆಯಲ್ಲಿ ಇಲ್ಲಿರುವ ಕಥಾವಸ್ತು ಅಮರತ್ವ ಪಡೆದುಕೊಳ್ಳುವತ್ತ ಸಾಗಿರುವುದು ಉತ್ತಮ ಬೆಳವಣಿಗೆಯ ಹಂತವೆಂದು ಖ್ಯಾತ ಸಾಹಿತಿ ಕವಿ ಮುದಲ್ ವಿಜಯ್ ಬೆಂಗಳೂರು ಅವರು ಯುವ ಸಾಹಿತಿ ಗಣಪತಿ ಹೆಗಡೆ ಅವರ ಚೊಚ್ಚಲ ಕಾದಂಬರಿ ಮೌನಸೆರೆಗೆ ಮುನ್ನುಡಿಯ ರೂಪದಲ್ಲಿ ನೀಡಿರುವ ಪ್ರಮಾಣ ಪತ್ರ. ಈ ಹಿನ್ನಲೆಯಲ್ಲಿ ಕಾದಂಬರಿ ಮೊದಲಿನಿಂದ ಕೊನೆಯವರೆಗೂ ಯಾವುದೇ ಅಡೆತಡೆಗಳು ಇಲ್ಲದೇ ಓದಿಸಿಕೊಂಡು ಹೋಗುವುದರಿಂದ ಇಲ್ಲಿ ಮುದಲ್ ವಿಜಯ್ … Read more

ಪಂಜುವಿನ ಯೂ ಟ್ಯೂಬ್ ಚಾನಲ್ ನಲ್ಲಿ ಕವನ ಓದುವ ಅವಕಾಶ

ಕನ್ನಡದ ಉತ್ತಮವಾದ ಕವಿತೆಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ ಪಂಜು ಯೂ ಟ್ಯೂಬ್ ಚಾನಲ್ ಶುರು ಮಾಡಿದ್ದೇವೆ. ತಮ್ಮ ಕವಿತೆಗಳಿಗಿಂತ ಬೇರೆ ಕವಿಗಳ ಕವಿತೆಗಳನ್ನು ವಾಚಿಸುವ ಅವಕಾಶ ಪಂಜುವಿನ ಯೂ ಟ್ಯೂಬ್ ಚಾನಲ್ಲಿನಲ್ಲಿದೆ. ಬೇರೆಯವರ ಕವಿತೆಯನ್ನು ವಾಚಿಸುವ ಇಚ್ಚೆಯಿದ್ದರೆ ನೀವು ವಾಚಿಸಿರುವ ಕವಿತೆಯ voice ಸ್ಯಾಂಪಲ್ ಕಳಿಸಿ. ಉತ್ತಮವಾಗಿ ವಾಚನ ಮಾಡುವವರಿಗೆ ನಮ್ಮ ಯೂ ಟ್ಯೂಬ್ ಚಾನಲ್ ನಲ್ಲಿ ಕವಿತೆ ವಾಚಿಸುವ ಅವಕಾಶ ನೀಡಲಾಗುವುದು. ನಿಮ್ಮ ಕವಿತೆಯನ್ನು ಬೇರೆಯವರಿಂದ ವಾಚಿಸುವ ಇಚ್ಚೆ ಇದ್ದರೆ ನಿಮ್ಮ ಕವನ ಸಂಕಲನವನ್ನು ನಮಗೆ … Read more

ಪಂಜುವಿನ ಯೂಟ್ಯೂಬ್‌ ಚಾನೆಲ್‌ ಶುರು

ಕನ್ನಡದ ಅತ್ಯುತ್ತಮ ಕವಿತೆಗಳನ್ನು ಕೇಳಿಸಲು ಪಂಜುವಿನ ಯೂಟ್ಯೂಬ್‌ ಚಾನೆಲ್‌ ಶುರು ಮಾಡಿದ್ದೇವೆ. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ. ಕವಿತೆ ವಾಚಿಸುವ ಇಚ್ಚೆಯುಳ್ಳವರು ಒಂದು ಮೇಲ್‌ ಮಾಡಿ. ನಮ್ಮ ಮೇಲ್‌ ವಿಳಾಸ: editor.panju@gmail.com, smnattu@gmail.com

ಒಂದಷ್ಟು ವೈನ್ ಕುಡಿದು ಪಕ್ಕಾ ಕುಡುಕರ ಹಾಗೆ ಅಳಬೇಕು: ಪುನರ್ವಸು

ಮುಗಿಲೂರ ದೊರೆ ಮಗನಿಗೆ. ಓಯ್ ಚಲ್ವಾ, ಹೇಗಿದೀಯಾ, ನಿನ್ನೆ ಬರ್ದಿದ್ದ ಪತ್ರ ಇಡೋಕೆ ಅಂತ ನಿನ್ ಮನೆಗೆ ಹೋದಾಗ, ನೀನು ನಮ್ಮೂರ ಸರಹದ್ದಿನಲ್ಲೆಲ್ಲೋ ಅದ್ಯಾವುದೋ ಕಿವುಡ ದೇವರ ಜಾತ್ರೆಯೊಳಗೆ, ಮೂಕ ಮೈಕಿಗೆ ದನಿಯಾಗಿ, “ದೇವತೆ ನಿನ್ನ ನೋಡಲು ಪ್ರತಿ ಕ್ಷಣವೂ ಕಾಯುವೆನು,ಅರೆ ಕ್ಷಣ ನೀ ಸಿಕ್ಕರೂ ನಾ ನಗುತಲೇ ಸಾಯುವೆನು.” ಅಂತ ಹಾಡ್ತಿದ್ದೆ ನೋಡು, ಜೀವ ನಿನ್ನ ದನಿಯ ದಾರಿಯಗುಂಟ ಸುಳಿಯಾಗಿ ಹರಿದು ಹೋದಂಗಾಯ್ತು, ಆ ನಡುರಾತ್ರಿ ಹನ್ನೆರಡರಲ್ಲೂ ಅಷ್ಟೆಲ್ಲ ಜೀವದ ತುಣುಕಿನೊಳಗೆ ಸೇರಿದ ಗುಂಗೀ ಹುಳದ … Read more

ತಿಳಿದೋ ತಿಳಿಯದೆಯೋ ಶರಣಾಗಿರುವೆ ಇಂದು ನಾನು ನಿನಗೆ: ಗಾಯತ್ರಿ ಭಟ್‌, ಶಿವಮೊಗ್ಗ

ನನ್ನೊಲವ ಪತ್ರ, ಹೌದು ನನಗೆ ಗೊತ್ತು. ಪ್ರೇಮ ಪತ್ರ ಬರೆಯಬೇಕಿಲ್ಲವೆಂದು ನಮ್ಮ ಪ್ರೀತಿಗೆ.ನಿನಗೂ ತಿಳಿದಿದೆ ನನ್ನ ಬಾಳ ಪಯಣದಲ್ಲಿ ನಿನ್ನ ನಾನು ಪ್ರೇಮಿಯಾಗಿ ಕಂಡೇ ಇಲ್ಲ. ತಿಳಿದಿಲ್ಲ ಅದು ಹೇಗೆ ಪ್ರೇಮಾಂಕುರವಾಗಿದೆ ಹಾಗೂ ಅಂದೆಂದಾಯಿತೆಂದು ? ಪ್ರೀತಿಯಿರುವುದಂತೂ ಸತ್ಯವೇ, ಅದಕ್ಕಾಗಿಯೇ ಮನದ ಲಹರಿಯನ್ನೆಲ್ಲಾ ಅಕ್ಷರಗಳಲ್ಲಿ ಬಿತ್ತಿಡುವ ಮನಸ್ಸಾಗಿದೆ ಯಾಕೋ ಇಂದು. ನನ್ನ ಮನದಂಗಳದ ಮಾತುಗಳನ್ನೆಲ್ಲಾ ನಿನ್ನ ಮನಸ್ಸೊಳಗೆ ಬಿತ್ತಿ ಅದಕ್ಕೊಂದು ಪ್ರೀತಿರೂಪಕ ಕೊಡುತ್ತಿರುವೆ. ಏನೆಂದು ಕರೆಯಲಿ ನಿನ್ನ ಗೆಳೆಯ, ಇನಿಯ ಇವೆಲ್ಲಾ ಯಾವುವೂ ಸರಿಹೊಂದುತ್ತಿಲ್ಲ. ಯಾರೂ ಇರದ … Read more

“ನನ್ನೊಲವಿಗೊಂದು ಒಲವಿನ ಓಲೆ.”: ವರದೇಂದ್ರ ಕೆ.

ನನ್ನ ನೆಚ್ಚಿನ, ನಲ್ಮೆಯ, ಪ್ರೀತಿಯ ಮುದ್ದು ಮಖದ ಗೆಳತಿ. ಸದಾ ನಗುತ್ತಲೇ ಇರುವ ಸುಮದೇವತೆ. ಹೇಗಿದ್ದೀಯಾ? . ನಿನ್ನನ್ನು ನಿತ್ಯವೂ ನನ್ನ ಮನದ ದೇಗುಲದಲ್ಲಿ ಪ್ರೇಮದಭಿಷೇಕ ಮಾಡಿ ಪೂಜಿಸುತ್ತ, ನಾನು ಪ್ರೇಮಭಕ್ತನೇ ಆಗಿಬಿಟ್ಟಿದ್ದೇನೆ. ಸದ್ದಿಲ್ಲದೇ ಶುರುವಾದ ಈ ಪ್ರೇಮಕ್ಕೆ ನೀನೇ ಸ್ಪೂರ್ತಿ. ಅದಕ್ಕೆ ಅನುರಾಗದ ಜೇನು ಹರಿಸಿ ಪೋಷಿಸಿ ಗಗನದಷ್ಟು ಪ್ರೇಮವನ್ನು ಬೆಳೆಸೆದವಳು ನೀನು. ಅದ್ಹೇಗೆ ನಿನ್ನನ್ನು ಮೋಹಿಸಿದೆನೋ ನಂಗೇ ಗೊತ್ತಿಲ್ಲ‌. ಮುದ್ದು, ನಿನ್ನ ಅಂದಕ್ಕೆ ಮರುಳಾಗಿ ನಿನ್ನ ಹಿಂದೆ ಬಿದ್ದು; ಪ್ರೇಮಿಸಿರುವುದು ಎಷ್ಟು ಸತ್ಯವೋ, ನಿನ್ನ … Read more

ಮುಸ್ಸಂಜೆಯ ಪ್ರೇಮ ಪ್ರಸಂಗ…: ಅಭಿಷೇಕ್ ಎಂ. ವಿ.

ಪ್ರೀತಿಯ ಮುಸ್ಸಂಜೆಯ ಒಡಲಾಳದ ಗೆಳತಿ ಮಧುರ, ನಿನ್ನ ಶ್ರಾವಣ ತಂಗಾಳಿಯ ನಗು, ನನ್ನ ವಸಂತ ಋತುವಿನ ಹೃದಯದ ಚಿಗುರಿನಲ್ಲಿ ಮುದುಡದೆ ಇಂದಿಗೂ ಹಸಿರಾಗಿದೆ. ಗೆಳತಿ ಎಂದಿದ್ದಕ್ಕೆ ಕ್ಷಮೆ ಇರಲಿ. ಅಂದು ನಾನು ಮೌನಿಯಾಗಿದ್ದೆ. ವರ್ಷಗಳು ಉರುಳಿದ ಮೇಲೆ ಮೌನದ ಬಯಲಿಂದ ಹೊರಬಂದು ಈ ಪತ್ರ ಬರೆಯುತ್ತಿದ್ದೇನೆ. ನೀ ಇರುವ ವಿಳಾಸವನ್ನು ನಿನ್ನ ಸ್ನೇಹಿತೆಯಾದ ಪ್ರಿಯಾಳ ಬಳಿ ಪಡೆದೆ. ಅವಳೂ ನಿನ್ನ ಜೊತೆಯಲ್ಲೇ ಕೆಲಸ ಮಾಡುತ್ತಿರುವ ವಿಷಯ ತಿಳಿಯಿತು. ಮೊನ್ನೆ ಊರಿಗೆ ಬಂದ್ದಿದ್ದಳು. ಹೇಗಿದ್ದೀಯ? ಮನಸಿನ ಅಂತರಾಳದ ಇತಿಹಾಸ … Read more

ನಾನು ನಿನ್ನವಳಾಗಿ ನಿನ್ನ ನೆರಳಿನ ನೆರಳಾಗಿ..: ನಂದಾದೀಪ, ಮಂಡ್ಯ

ಗೆಳೆಯಾ.. ನಿನ್ನ ನೆನೆದಾಗ ನನಗರಿವಿಲ್ಲದೆ ಮನಸಿನ ಯಾವುದೋ ಮೂಲೆಯಲ್ಲಿ ಸಂವೇದನ ಭಾವವೊಂದು ಆಗ ತಾನೇ ಬಿದ್ದ ಮಳೆಗೆ ಎಳೆ ಗರಿಕೆ ಚಿಗುರೊಡೆದಂತೆ ಚಿಗುರಿ ಬಿಡುತ್ತದೆ.. ಆ ಭಾವದ ಪರಿಯ ಹುಡುಕಲೊರಟರೆ ಪ್ರೇಮ ಲಹರಿಯೊಂದು ಮನದ ಕಣಿವೆಯೊಳಗೆ ಹರಿದು ಹಸಿರಾಗಿಸಿ ಬಿಡುತ್ತದೆ.. ನಿನ್ನೆಡೆಗಿನ ಮಧುರ ಭಾವವೊಂದು ನನ್ನೊಳಗೆ ಹರವಿಕೊಂಡು ಪ್ರೀತಿ ಹೇಳುವ ಆ ಕ್ಷಣಕೆ ಪ್ರತಿ ಘಳಿಗೆಯೂ ಹಾತೊರೆಯುವಂತೆ ಮಾಡಿಬಿಡುತ್ತದೆ.. ಮೊದಲ ನೋಟದ ಬೆಸುಗೆ ಹೃದಯದ ಅಂತರಂಗದಲ್ಲಿ ಒಲವಿನ ತರಂಗ ಎಬ್ಬಿಸಿ ಭಾವಗಳ ಬಂಧನದಲ್ಲಿ ಬಂಧಿಸಿ ಪ್ರೇಮಾಂಕುರವಾಗಿಸಿತು.. ನಿನ್ನ … Read more

ಬದುಕಲ್ಲಿ ಸ್ಪಷ್ಟತೆ ಇರಲಿ, ಪಡೆಯುವ ಉತ್ತರದಲ್ಲೂ ಏಳುವ ಪ್ರಶ್ನೆಗಳಲ್ಲೂ: ಮಧುಕರ್ ಬಳ್ಕೂರ್

ಅವನು : “ನನಗೂ ಬರೀಬೇಕು ಅಂತಾ ತುಂಬಾ ಆಸೆ ಸರ್. ಆದರೆ ಏನ್ಮಾಡೋದು? ಕೆಲಸದ ಒತ್ತಡ, ಬ್ಯುಸಿ. ಟೈಮೆ ಸಿಗಲ್ಲ ನೋಡಿ. ಡ್ಯೂಟಿ ಮುಗಿಸಿ ಮನೆಗ್ ಬಂದ್ ಮೇಲಂತೂ ಅದು ಇದು ಅಂತಲೆ ಆಗೊಗುತ್ತೆ. ಇನ್ನೆಲ್ಲಿ ಸರ್ ಬರೆಯೋದು..?” ಅವರು : “ಓ ಹೌದಾ, ಮನೆಗೆ ಬಂದ್ ಮೇಲೆ ಬಹಳ ಕೆಲ್ಸ ಇರುತ್ತೆ ಅನ್ನಿ ..?” ಅವನು : ” ಹಾಗೆನಿಲ್ಲ, ಡ್ಯೂಟಿ ಮಾಡಿ ದೇಹ ದಣಿದಿರತ್ತೆ ನೋಡಿ. ಹಾಸಿಗೆಗೆ ಹೋಗಿ ಒಂದ್ ಅರ್ಧ ಗಂಟೆ ಮಲಗಿರ್ತಿನಿ. … Read more

ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ: ಪೂಜಾ ಗುಜರನ್

ಮನುಷ್ಯನ ಒಳ್ಳೆತನ ಕೆಟ್ಟತನ ಎಲ್ಲದಕ್ಕೂ ಕಾಲ ಕ್ಷಣ ಕ್ಷಣವೂ ಉತ್ತರಿಸುತ್ತಿದೆ. ನನಗೆ ಎಲ್ಲವೂ ಗೊತ್ತು. ನಾನು ನನ್ನಿಂದಲೇ ಎಲ್ಲ ಅಂದಾಗಲೆಲ್ಲ ನೀನು ಅನ್ನುವುದು ಬರಿ ಒಂದು ಅಣು ಮಾತ್ರ ನಿನ್ನಿಂದ ಏನೇನೂ ಇಲ್ಲ ಅಂತ ಸೃಷ್ಟಿಕರ್ತ ಉತ್ತರಿಸುತ್ತಿದ್ದಾನೆ. ಬ್ರಹ್ಮಾಂಡವೇ ಅವನಗಿರುವಾಗ ಈ ಹುಳು ಮಾನವ ಏನೂ ತಾನೇ ಮಾಡಬಲ್ಲ. ಇಲ್ಲಿ ಏನಿದ್ದರೂ ಅದೂ ಕಾಕತಾಳೀಯ. ನೀನು ನಿನಗಾಗಿ ಮಾಡಿಕೊಂಡಿದ್ದು ಎಲ್ಲವೂ ತಾತ್ಕಾಲಿಕ. ಇವತ್ತು ನೀನು ಏನೇ ಅನುಭವಿಸುತ್ತಿದ್ದರೂ ಅದೆಲ್ಲವೂ ನಿನ್ನ ಉಪಯೋಗಕ್ಕಾಗಿ ಮಾಡಿಕೊಂಡಿದ್ದು. ಅತಿಯಾದ ಬುದ್ಧಿ ಎಲ್ಲವನ್ನೂ … Read more

ಪಂಜು ಕಾವ್ಯಧಾರೆ

ಮೂಕರೋಧನೆ ವರುಷದಿಂದ ವರುಷಕ್ಕೆಹೆಚ್ಚಿದೆ ನೇಸರನ ತಾಪಉರಿಬಿಸಿಲಿಗೆ ನಲುಗಿತಾಳ್ಮೆಯ ತಾಯಿಗೆ ಬಂದಿದೆ ಕೋಪ || ಬರದ ನೆಲದಲ್ಲಿ ಜಲವಿಲ್ಲಉಳುವ ಯೋಗಿಗೆ ಒಲವಿಲ್ಲನಿಸರ್ಗದೊಳಂತೂ ಚೆಲುವಿಲ್ಲಸೃಷ್ಟಿ ಸಂಕುಲಕ್ಕೆ ಉಳಿವಿಲ್ಲ || ಅಳಿಯುತಿದೆ ಪಾವನದ ಎಲರುಬಣಬಣಗುಟ್ಟುತಿದೆ ಹಸಿರಿನ ಉಸಿರುಒಡಲ ಕ್ಷಾಮಕೆ ವೈದ್ಯನಾರುಖಗ ಮೃಗಗಳಿಗೆ ಎಲ್ಲಿದೆ ಸೂರು? || ಗೋಳಿನ ಬಾಳೊಳಗೂ ನೀನಾದೆ ಮಾನ್ಯತೆಸಜೆಯಾದರೂ ಧರೆಯೂಡಿದೆ ನಿನಗೆ ಧನ್ಯತೆಪ್ರತಿಯೊಂದಕ್ಕೂ ನಿನ್ನದೇ ಮಾರ್ನುಡಿಬೆಲೆಯಿಲ್ಲದ ಹೊತ್ತಿಗೆಗೆ ಬೇಕಿಲ್ಲ ಮುನ್ನುಡಿ || -ಕ.ಲ.ರಘು. ಮೆಟ್ಟಿನ ಹುಡುಗ ಹತ್ತಲ್ಲದ ಹೊತ್ತಿನಲ್ಲೂಹೊಲಿಯುತ್ತಿದ್ದಾನೆ… ತಿಕ್ಕುತ್ತಿದ್ದಾನೆ …ಕಂಡವರ ಕೆರ ಹಿಡಿದ ಶೂಗಳನ್ನು.ಉರಿಬಿಸಿಲಿಗೆ ಮೈಯ್ಯೊಡ್ಡಿ,ಹರಕು ಮುರುಕಿನ … Read more

‘ಕುಂದಾಪ್ರ ಕನ್ನಡ ನಿಘಂಟು’ ಪುಸ್ತಕದ ಕುರಿತು: ಸಾವಿತ್ರಿ ಶ್ಯಾನುಭಾಗ

ಪುಸ್ತಕ: ‘ಕುಂದಾಪ್ರ ಕನ್ನಡ ನಿಘಂಟು’ಪ್ರಧಾನ ಸಂಪಾದಕರು: ಪಂಜು ಗಂಗೊಳ್ಳಿಸಂಪಾದಕರು: ಸಿ. ಎ. ಪೂಜಾರಿ, ರಾಮಚಂದ್ರ ಉಪ್ಪುಂದಬೆಲೆ: ೬೦೦ ರೂಪಾಯಿ ಕರ್ನಾಟಕದಲ್ಲಿ ಕನ್ನಡವನ್ನು ಪ್ರಾದೇಶಿಕವಾಗಿ ೧೮ ಶೈಲಿಯಲ್ಲಿ ಬಳಸಲಾಗುತ್ತದೆ ಎಂದು ಕೇಳಿದ್ದೇನೆ. ಧಾರವಾಡ ಕನ್ನಡ, ಮಂಗಳೂರು, ಹಾಸನ, ಉತ್ತರ ಕನ್ನಡದ ಕನ್ನಡ ಹೀಗೆ ನಾನಾ ಶೈಲಿಗಳು. ಮಂಗಳೂರು ಭಾಷೆ ಶುದ್ಧ ವ್ಯಾಕರಣದಂತೆ ಎಲ್ಲಿಗೆ ಹೋಗುವುದು ಮಾರಾಯ ಎಂದು, ಧಾರವಾಡದಲ್ಲಿ ಎಲ್ಲಿಗ್ ಹೊಂಟಿ, ಉತ್ತರ ಕನ್ನಡದಲ್ಲಿ ಹವ್ಯಕ ಭಾಷೆಯಲ್ಲಿ ಒಂದು ರೀತಿ, ಹೀಗೆ ಬೇರೆ ಬೇರೆ ಶೈಲಿಯಲ್ಲಿ ಮಾತನಾಡಲಾಗುವುದು ಕನ್ನಡ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 73): ಎಂ. ಜವರಾಜ್

-೭೩- ಸರೊತ್ತು ಸರೀತಿತ್ತು ಆ ಸರೊತ್ತಲ್ಲಿವಯ್ನುಗ್ಗ ಮರದ ಕೊಂಬ ಮ್ಯಾಲಗೂಕ್ಕ್.. ಗೂಕ್ಕ್.. ಗೂಕ್ಕ್..ಗೂಗ ಗೂಕಾಕದು ಕೇಳ್ತಿತ್ತು ಕತ್ಲು ಕವಿಕಂಡು ಏನೇನೂ ಕಾಣ್ದು ನಾನು ತಡಿ ಮೂಲಲಿಬೆಚ್ಗ ಬಿದ್ದಿರತರ ಅನ್ನುಸ್ತಿತ್ತು ಆ ಮಾರ ಅದ್ಯಾವ್ ಮಾಯ್ದಲ್ಲಿನಂಗೂ ಅರುವಾಗ್ದೆ ಇರತರಕಿತ್ತೊಗಿದ್ದ ನನ್ ಮೂಲ ಮುಡ್ಕಕೂದು ಕ್ವರುದುಗುದ್ದಿ ಹೊಲ್ದುಹದ ಮಾಡಿಎದ್ದೋಗಿ ದಿಬ್ಗ ತಲ ಕೊಟ್ನ ಕಾಣಿ ಆ ಮರದ ಕೊಂಬಲಿಆ ಗೂಗ ಬುಟ್ಟೂ ಬುಡ್ದೆಒಂದೆ ಸಮ್ಕ ಗೂಕಾಕ್ತಆ ಗೂಕಾಕ ಗೂಗ ಸದ್ಗಈ ಜೀವೂ ಅಳುಕ್ತ ಬೆಚ್ತಎಚ್ರ ಆದಂಗಾಯ್ತು ಎಚ್ರ ಆದ ಗಳುಗ್ಗಇತ್ತಗ,‘ಮೀಂಯ್ಞ್ಯಾಂವ್ … Read more

ಲಾಕ್ ಡೌನ್: ಹಾಡ್ಲಹಳ್ಳಿ ನಾಗರಾಜ್

ಚೆಲುವೇಗೌಡನಿಗೆ ಮಾಮೂಲಿನಂತೆ ಬೆಳಗ್ಗೆ ಆರಕ್ಕೆ ಎಚ್ಚರವಾಯಿತು. ಹೊದಿಕೆಯೊಳಗೆ ಸದ್ದಾಗದಂತೆ ಮೆಲ್ಲಗೆ ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡ. ನಿದ್ದೆ ಹರಿದಿದ್ದರೂ ಏಳುವ ಮನಸ್ಸಾಗಲಿಲ್ಲ. ಕಣ್ಣು ಮುಚ್ಚಿಕೊಂಡವನು ಕಿವಿ ತೆರೆದುಕೊಂಡು ಸದ್ದಿಲ್ಲದೇ ಮಲಗಲು ಯತ್ನಿಸಿದ. ತಾನು ಮಲಗಿರುವ ಪ್ಯಾಸೇಜಿನ ಹಿಂದಿನ ಬಚ್ಚಲು ಕಡೆ ಸೊಸೆಯ ಚಟುವಟಿಕೆ ನಡೆದಿತ್ತು. ಅವಳ ಗಂಡ ಹಾಗು ಮಕ್ಕಳು ಬಂದು ಹೋದ ನಂತರ ಕಕ್ಕಸ್ಸುಕೋಣೆಯನ್ನು ಬರಲಿನಿಂದ ರಪ್ ರಪ್ ಎಂದು ತೊಳೆದಳು. ಅಲ್ಲಿಂದ ಬಚ್ಚಲಿಗೆ ದಾವಿಸಿದವಳು ಬಟ್ಟೆ ಬಿಚ್ಚಿ ನಿಂತಿದ್ದ ಮಕ್ಕಳಿಗೆ ನೀರೆರೆದು ಹೊರಕಳಿಸಿ ತಾನೂ ಮೈತೊಳೆದುಕೊಂಡಳು. … Read more

“ಮರಳಿ ಮನಸಾಗಿದೆ…”: ಪಿ.ಎಸ್. ಅಮರದೀಪ್

ಅಂತೂ ಎರಡು ಸಾವಿರದ ಇಪ್ಪತ್ತೊಂದೂ ಪರೀಕ್ಷೆ ಇಲ್ಲದೇ ಮುಗಿದು ಹೋಯಿತು; 2020ರಂತೆ. ಕಳೆದ ವರ್ಷ ಮಗ ಒಂಭತ್ತನೇ ಕ್ಲಾಸಿನಲ್ಲಿದ್ದ. ಅರ್ಧ ಪರೀಕ್ಷೆಗಳೂ ಮುಗಿದಿದ್ದವು, ಇನ್ನೊಂದೆರಡು ಪರೀಕ್ಷೆ ಮುಗಿದಿದ್ದರೆ ಬರೆದ ಖುಷಿಯಾದರೂ ಇರುತ್ತಿತ್ತು. ಅದಾಗಲಿಲ್ಲ. ಪೀಡೆ ಕರೋನಾ ತಗುಲಿಕೊಂಡಿತು. 2019ರ ಡಿಸೆಂಬರ್ ನಲ್ಲಿ ಶಾಲಾ ವಾರ್ಷಿಕೋತ್ಸವದ ದಿನ ನನ್ನ ಮಗ ಮತ್ತವನ ತಂಡ ಡಾನ್ಸ್ ಮಾಡ್ಕೊಂಡು ಖುಷಿಯಾಗಿ ಕಳೆದಿದ್ದರು. ಪರೀಕ್ಷೆಯೂ ಇಲ್ಲ. ಸರಾಸರಿ ಮೇಲೆ ಪಾಸೂ ಆಗಿಬಿಟ್ಟ. ಆದರೆ, ಅವನಿಗೆ ಒಂದಾಸೆ ಇತ್ತು. ಮುಂದಿನ ವರ್ಷ ಹತ್ತನೇ ತರಗತಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 72): ಎಂ. ಜವರಾಜ್

-೭೨- ಕತ್ಲು ಕವಿಕಂಡಿತ್ತು ಕಾರಮುಳ್ಳು ಚುಚ್ಚುಸ್ಕಂಡುಕುಂದ್ರಕಾಗ್ದೆ ನಿಂದ್ರಕಾಗ್ದೆನಳ್ತ ಮುಕ್ಕರಿತನಿಂತು ಕಾಲೂರಿ ಕುಂಟ್ತಿದ್ದಆ ಅಯ್ನೋರ ಕೈಹಿಡ್ಕಂಡುಮನ್ಗಂಟ ಬುಟ್ಟುಎಡಗೈಲಿ ನನ್ನಿಡ್ಕಂಡುದಾಪುಗಾಲಾಕಿ ಬಂದ ಮಾರಅದೇ ರಬುಸ್ದಲ್ಲಿನನ್ನ ತೂದಿತಡ್ಕ ಮೂಲ್ಗ ಎಸ್ದುಜಗುಲಿಗ ತಿಕ ಊರ್ದ ಲಾಟಿನ್ಲಿ ಬತ್ತಿ ಮ್ಯಾಕ್ಕೆದ್ದುಬತ್ತಿ ಮ್ಯಾಲಿನ್ ಬೆಳುಕ್ಕುನ್ ನಾಲ್ಗಕೆಂಪಾಗಿ ಮೇಲ್ಚಾಚಿ ವಾಲಾಡ್ತಹೊಗ ಸಯಿತ್ವಾಗಿಬೆಳ್ಕು ಬೆಳುಗ್ತಾ ಇತ್ತು ಆ ಮಾರನೆಡ್ತಿಆ ಬೆಳ್ಕ ನೋಡ್ತಲಾಟಿನ್ ಕೀಲಿ ಹಿಡ್ದುಬತ್ತಿ ಇಳಿಸಿಈಚ್ಗ ಬಂದುಲೊಚಲೊಚ ಲೊಚಗುಡ್ತಬಂದವ್ನ್ ಮುಂದ ಕುಂತುಕಿರಿಕಿರಿ ಎಟ್ಟಿಎರುಡು ಬಾಟ್ಲಿ ಹೆಂಡನ ಕುಕ್ಕಿ‘ಆ ಕಿತ್ತೊದ್ ಎಕ್ಡುವೇಕಾಲ್ ಕಾಲ್ದಿಂದೂಯಾವ್ ಕಾಲ ಆಯ್ತು ಅವ ಮಾಡ್ಸಿತೂ..ಒಂದ್ಜೊತ ಮಾಡುಸ್ಕಳಕ … Read more

ಕಾಲದ ಜೊತೆ ನಾವು ಬದಲಾಗುತ್ತಿದ್ದೇವಾ..?: ಪೂಜಾ ಗುಜರನ್ ಮಂಗಳೂರು

“ಬದುಕನ್ನು ಒಮ್ಮೆ ತಿರುಗಿ ನೋಡು”.‌ ಅಂದರೂ ಸಾಕು ಎಲ್ಲವೂ ನೆನಪಾಗಿ ಬಿಡುತ್ತದೆ.ನಾವು ನಡೆದು ಬಂದ ದಾರಿ. ಕಷ್ಟ ಪಟ್ಟ ದಿನಗಳು, ಬದುಕಿನ ಉದ್ದಕ್ಕೂ ಸಹಿಸಿದ ಈ ಸಹನೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡಿದ ತಪ್ಪುಗಳು, ಒಪ್ಪುಗಳು. ನೋವು ನಲಿವುಗಳು. ಅತಿಯಾದ ತುಂಟಾಟ, ತಿಂದ ಏಟುಗಳು, ಗೆಳೆಯರ ಜೊತೆ ಮಾಡಿದ ಜಗಳಗಳು. ತಿನ್ನಲು ಏನು ಇಲ್ಲದಾಗ ಸಹಿಸಿಕೊಂಡ ಹಸಿವು. ಮುಗ್ಧತೆಗೆ ಜೋತುಬಿದ್ದ ಮುಗ್ಧ ಮನಸ್ಸುಗಳು. ಯಾರದ್ದೋ ಕುಹಕ ನೋಟ. ಇನ್ಯಾರದ್ದೋ ಮತ್ಸರದ ಮಾತು. ಬಡತನದ ಬವಣೆ. ಎಲ್ಲವೂ ಬಂದು ಮುತ್ತಿಕೊಂಡು … Read more

ಪಂಜುವಿನ ಸಾವಿರ ಬರಹಗಾರರು

ಪಂಜುವಿನ ಸಾವಿರ ಬರಹಗಾರರು1 ಅಂಜಲಿ ರಾಮಣ್ಣ2 ಅಂಬಿಕಾ ಪ್ರಸಾದ್3 ಅಕ್ಕಿಮಂಗಲ ಮಂಜುನಾಥ4 ಅಕ್ಷತಾ ಕೃಷ್ಣಮೂರ್ತಿ5 ಅಕ್ಷಯ ಕಾಂತಬೈಲು6 ಅಕ್ಷಯಕುಮಾರ ಜೋಶಿ7 ಅಖಿಲೇಶ್ ಚಿಪ್ಪಳಿ8 ಅಜಯ್9 ಅಜಿತ್ ಭಟ್10 ಅಜ್ಜಿಮನೆ ಗಣೇಶ್11 ಅಣ್ಣಪ್ಪ ಆಚಾರ್ಯ12 ಅದಿತಿ ಎಂ. ಎನ್.13 ಅನಂತ ರಮೇಶ್14 ಅನಂತ್ ಕಳಸಾಪುರ15 ಅನಿತಾ16 ಅನಿತಾ ಕೆ. ಗೌಡ17 ಅನಿತಾ ನರೇಶ್ ಮಂಚಿ18 ಅನಿತಾ ಪಿ.ಪೂಜಾರಿ ತಾಕೊಡೆ19 ಅನಿರುದ್ಧ ಕುಲಕರ್ಣಿ20 ಅನಿಲ ತಾಳಿಕೋಟಿ21 ಅನಿಲ್ ಕುಮಾರ್ ವೆರ್ಣೇಕರ್22 ಅನಿಲ್ ಕುಲಕರ್ಣಿ23 ಅನೀಶ್ ಬಿ24 ಅನುಪಮಾ ಎಸ್ ಗೌಡ25 … Read more