ಕನ್ನಡದ ನವೋದಯ ಸಾಹಿತ್ಯದ ಮೇಲೆ ಡಾ. ಬಿ.ಎಂ. ಶ್ರೀಯವರ ‘ಇಂಗ್ಲೀಷ್ ಗೀತಗಳು’ ಹಾಗೂ ಡಾ. ಹಟ್ಟಿಯಂಗಡಿಯವರ ‘ಆಂಗ್ಲ ಕವಿತಾವಳಿ’ಯ ಪುಸ್ತಕಗಳ ಪ್ರಭಾವ !: ಎಚ್. ಆರ್. ಲಕ್ಷ್ಮೀ ವೆಂಕಟೇಶ್

ಇಪ್ಪತ್ತನೇ ಶತಮಾನದ ಆದಿಯಲ್ಲಿ ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದ ಕನ್ನಡ ಸಾಹಿತ್ಯವು ಹೊಸ ಹುಟ್ಟನ್ನು ಪಡೆದು ಹಳೆಗನ್ನಡ -ನಡುಗನ್ನಡ ಸಾಹಿತ್ಯಕ್ಕಿಂತ ಬೇರೆಯಾದ ‘ನವೋದಯ ಸಾಹಿತ್ಯ’ ವೆಂದು ಹೊಸ ಸಾಹಿತ್ಯ ಪ್ರಕಾರದಲ್ಲಿ ಕಾಣಿಸಿಕೊಂಡಿತು. ಇದು ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯ, ಕವನ, ಭಾವಗೀತೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಬಹುಬೇಗ ಅಭಿವೃದ್ಧಿ ಪಡೆದು ವಿಫುಲ ಸಾಹಿತ್ಯ ಬೆಳವಣಿಗೆಗೆ ಕಾರಣವಾಯಿತು. ಇದರಲ್ಲಿ ಮುಖ್ಯವಾದ ಕಾವ್ಯ ಪ್ರಕಾರಗಳಲ್ಲಿ, ಭಾವಗೀತೆ, ಕವನ, ಕಗ್ಗ, ವಚನದ ಲಕ್ಷಣದ ಮತ್ತು ರಗಳೆ, ಛಂದಸ್ಸಿನ ಸಾನೆಟ್, ಮಾದರಿಯ ಪದ್ಯಗಳು … Read more

ಕಾಲಾಯ ತಸ್ಮೈ ನಮಃ: ಪೂಜಾ ಗುಜರನ್ ಮಂಗಳೂರು

“ಸಂಬಂಧಗಳು ಸಮಯವನ್ನು ಬೇಡುತ್ತದೆ.ಸಮಯವಿಲ್ಲದೆ ಸಂಬಂಧಗಳು ಸಾಯುತ್ತದೆ”.. ನಿಜ ಈ ಸುಂದರ ಕ್ಷಣಗಳು ಬದುಕಿಗೆ ಅದೆಷ್ಟು ಮುಖ್ಯವಾಗಿರುತ್ತದೆ. ಈ ಸಮಯ ಅನ್ನುವುದು ಎಂತಹ ಅದ್ಭುತವನ್ನು ಸೃಷ್ಟಿಸಬಲ್ಲದು. ಹಾಗೇ ಎಂದೂ ಅಳಿಯದ ವಿಚಿತ್ರವನ್ನು ಉಳಿಸಬಲ್ಲದು. ಈ ಕ್ಷಣಗಳು ಕಳೆದು ಹೋದರೆ ಮತ್ತೆ ಬರುವುದೇ? ಅದಕ್ಕೆ ಉತ್ತರ ಯಾರಲ್ಲೂ ಇಲ್ಲ. ನಿಜ ಇಲ್ಲಿ ಸಮಯಕ್ಕೆ ತುಂಬಾ ಬೆಲೆ. ಒಂದು ಕ್ಷಣ ಕಳೆದು ಹೋದರು ಅದು ಮತ್ತೆ ಬರಲಾರದು. ಆ ಸಮಯಕ್ಕೆ ಏನು ಆಗಬೇಕು ಅದು ಆಗಿಯೇ ಆಗುತ್ತದೆ. ಕಾಲವನ್ನು ತಡೆಯೋರು ಯಾರು … Read more

ಮತ್ತೆ ಉದಯಿಸಿದ ಸೂರ್ಯ: ವೆಂಕಟೇಶ ಪಿ.ಗುಡೆಪ್ಪನವರ

“ವಿಶ್ವವನ್ನೇ ತಲ್ಲಣಗೊಳಿಸಿ, ಈಗ ನಮ್ಮ ದೇಶಕ್ಕ ಗಂಡಾಂತರ ತಂದ ಕೋರೋನಾ ವೈರಸ್ ಹಾವಳಿಯಿಂದ ನಮ್ಮನ್ನು ರಕ್ಷಣೆ ಮಾಡಲು, ಸರ್ಕಾರ ರಾಜ್ಯದಲ್ಲಿ ಇಂದಿನಿಂದ ಹದಿನಾಲ್ಕು ದಿನಗಳ ವರೆಗೆ ಲಾಕ್‍ಡೌನ್ ಜಾರಿಗೊಳಿಸಿದೆ.ಅತ್ಯಗತ್ಯ ಸಾಮಗ್ರಿಗಳನ್ನು ಸಂಗ್ರಹ ಮಾಡಿಕೊಳ್ಳಿ,ಒಬ್ಬರಿಂದ ಒಬ್ಬರಿಗೆ ಬೇಗ ಹರಡುವ ಈ ವೈರಸ್ ಹೆಚ್ಚಾದರೆ, ಲಾಕ್‍ಡೌನ್ ಅವಧಿ ವಿಸ್ತರಣೆ ಸಹ ಆಗಬಹುದು,ಯಾರೊಬ್ಬರೂ ಯಾವೂದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು, ಹೊರಗೆ ಕಾಣಿಸಿಕೊಂಡರೆ ಶಿಕ್ಷೆ ತಪ್ಪಿದಲ್ಲಿ….” ಪೋಲಿಸ್ ಜೀಪ್ ಮೇಲೆ ಹಾಕಿರುವ ಚಿಕ್ಕ ಸ್ಪೀಕರ್‍ದಲ್ಲಿನ ಮಾತುಗಳನ್ನು ಕೇಳಿಸಿಕೊಂಡ ತಿಮ್ಮಪ್ಪ ಮಾಸ್ತರ ಬೆಚ್ಚಿಬಿದ್ದನು. … Read more

ಓದುವ ಹಕೀಕತ್ತಿಗೆ ನೂಕಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವ ಅಜ್ಜ ನೆಟ್ಟ ಹಲಸಿನ ಮರ”: ಎಂ. ಜವರಾಜ್

ಕನ್ನಡದ ಪ್ರಗತಿಶೀಲ, ನವ್ಯ, ಬಂಡಾಯ ಸಾಹಿತ್ಯಗಳ ನಾನಾ ಸ್ತರಗಳ ಪ್ರಭಾವಗಳ ಪ್ರಗತಿಪರ ಚಿಂತನಶೀಲ ಲೇಖಕ ವ್ಯಾಸರಾಯ ಬಲ್ಲಾಳರು “ನಾನು ಒಂದು ಕಥೆಯೊ ಕಾದಂಬರಿಯೊ ಬರೆಯಲು ಆತುರ ತೋರುವುದಿಲ್ಲ. ಅದು ಒಳಗೆ ಗುದ್ದಿದಾಗ ಬರೆಯಲು ತೊಡಗುವೆ. ಹಾಗೆ ಸಮಯದ ಹೊಂದಾಣಿಕೆಯೂ ಇರಬೇಕು. ಈ ಮುಂಬಯಿ ಜೀವನ ವಿಧಾನಕ್ಕು ಬೆಂಗಳೂರಿನ ಜೀವನಕ್ಕು ವ್ಯತ್ಯಾಸ ಇದೆ. ಬೆಂಗಳೂರಿನ ಜೀವನ ವಿಧಾನಕ್ಕು ಉಡುಪಿಯ ಜೀವನಕ್ಕು ವ್ಯತ್ಯಾಸ ಇದೆ. ಜೊತೆಗೆ ಉಡುಪಿಯ ಜೀವನ ವಿಧಾನಕ್ಕು ಅಂಬಲಪಾಡಿಯ ಜೀವನಕ್ಕು ವ್ಯತ್ಯಾಸವಿದೆ. ಹೀಗೆ ನಾನು ಇಲ್ಲೆಲ್ಲ ಸುತ್ತಾಡಿದ … Read more

ಪ್ರಕೃತಿಯೊಂದಿಗೆ ಅನುಬಂಧ ; ಕೋವಿಡ್ ಗೆ ನಿರ್ಬಂಧ: ಗಾಯತ್ರಿ ನಾರಾಯಣ ಅಡಿಗ

ಅದ್ಭುತ ಮತ್ತು ಅಪೂರ್ವವಾದ ಈ ಭೂಮಂಡಲ ಆನೇಕ ವೈಚಿತ್ರ್ಯಗಳಿಂದ ಕೂಡಿದ ಸಕಲ ಜೀವರಾಶಿಗಳಿಗೂ ಆಶ್ರಯತಾಣವಾಗಿದೆ. ಆದರೆ ಹದಗೆಟ್ಟಿರುವುದು ಕೇವಲ ಮಾನವನಿಂದ ಮಾತ್ರ. ಪ್ರಕೃತಿ ನೀಡುವ ಮೂಲ ಅವಶ್ಯಕತೆಗಳಾದ ನೀರು, ಆಹಾರ, ಗಾಳಿಯನ್ನು ನಂಬಿಕೊಂಡು ಸಕಲ ಚೈತನ್ಯಗಳು ಜೀವನ ನಡೆಸುತ್ತಿವೆ. ಪ್ರಕೃತಿ ಮಾತೆಯೂ ಕೂಡ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರ್ವಸಂಕುಲಗಳನ್ನು ರಕ್ಷಿಸುತ್ತಿದ್ದಾಳೆ. ಆದರೆ ಇಂದೇಕೋ ಆಕೆ ರೌದ್ರಾವತಾರ ತಾಳಿದಂತಿದೆ. ಮನುಷ್ಯನ ಮಿತಿಮೀರಿದ ಸ್ವಾರ್ಥ ಚಟುವಟಿಕೆಗಳು ಆಕೆಯ ಸಹನೆಯನ್ನು ಕದಡಿವೆ. ಆಧುನಿಕತೆಯ ಮೊರೆಹೊಕ್ಕ ಮಾನವ ತಂಗಾಳಿಯ ವೃಕ್ಷಗಳನ್ನು ಕಡಿದು ಗಗನಚುಂಬಿ … Read more

ಏನಂತ ಸಂಭೋದಿಸಲಿ ನಾ ನಿನ್ನ?: ಮಧು ಅಕ್ಷರಿ

ಏನಂತ ಸಂಭೋದಿಸಲಿ ನಾ ನಿನ್ನ? ಇದೇ ಪ್ರಶ್ನೆಯೊಂದಿಗೆ ಅದೆಷ್ಟು ಪತ್ರಗಳು ನಿನ್ನ ಮನೆಯಂಗಳವನ್ನಿರಲಿ, ಅಂಚೆಪೆಟ್ಟಿಗೆಯ ಮುಖವನ್ನೂ ಕಾಣದೆ, ಹರಿದು ಬರಿದಾಗಿ ಕಸದ ಬುಟ್ಟಿಯಲ್ಲಿ ಮೋಕ್ಷ ಪಡೆದಿವೆಯೋ? ಸಿಕ್ಕಿಬೀಳುವ ಭಯಕ್ಕೆ ಹೆದರಿ, ಅವಶೇಷವನ್ನೂ ಬಿಡದಂತೆ ಸುಟ್ಟು ಸಂಸ್ಕಾರ ಮಾಡಿದ್ದೂ ಆಯ್ತು. ಅಲ್ಲಿಗೆ ಎದೆಯಲ್ಲೋ, ತಲೆಯಲ್ಲೋ, ಅಸಲು ಸರಿಯಾದ ವಿಳಾಸವಿಲ್ಲದೇ, ನನ್ನಲ್ಲಿ ಉದಯಿಸಿದ ನವಿರಾದ ಭಾವನೆಗಳಿಗೆ ಕಾರಣನಾದ ನಿನ್ನ ಪರಿಚಯಿಸುವ ಮೊದಲೇ ಸಂಸ್ಕಾರವಾದದ್ದಾಯಿತು. ಮತ್ತೆ ಕುಳಿತಿರುವೆ ಉಕ್ಕಿಬರುವ ಭಾವಗಳ‌ ಅದುಮಿಡಲಾಗದೇ. ನಿನ್ನೆದೆಗೆ ತಲುಪಿಸಿ ನಿರುಮ್ಮಳವಾಗಿ ಬಿಡುವ ಹಂಬಲದಿಂದ. ವಾಟ್ಸಪ್, ಟಿಂಡರ್, … Read more

ಮಾತಾಡು ಓ ಗೆಳೆಯಾ… ಮಾತಾಡು: ಸಹನಾ ಕಾಂತಬೈಲು

ಮಾತಾಡು ಓ ಗೆಳೆಯಾ… ಮಾತಾಡು ಇದು ನನ್ನ ಮೊದಲ ಪ್ರೇಮ ಪತ್ರ. ನೀನು ನನ್ನ ಜೀವದ ಜೀವವಾದರೂ ನಾನು ನಿನಗೆ ಇದುವರೆಗೆ ಒಂದೂ ಪತ್ರ ಬರೆಯಲಿಲ್ಲ. ಬರೆಯುವ ಅಗತ್ಯವೇ ಬಿದ್ದಿರಲಿಲ್ಲ. ಏಕೆ ಗೊತ್ತ? ನೀನೇ ಆಗಾಗ ನನಗೆ ಫೋನ್ ಮಾಡುತ್ತಿದ್ದೆ. ಮೆಸ್ಸೇಜ್ ಮಾಡುತ್ತಿದ್ದೆ ಮತ್ತು ನನ್ನನ್ನು ತುಂ…….ಬ…… ಪ್ರೀತಿ ಮಾಡುತ್ತಿದ್ದೆ. ನಿನ್ನ ಪ್ರೇಮದಲ್ಲಿ ಮೀಯುತ್ತಿದ್ದ ನನಗೆ ಪತ್ರ ಬರೆಯುವ ಅವಶ್ಯಕತೆಯೇ ಬರಲಿಲ್ಲ. ಈ ವರ್ಷದ ಮುನ್ನಾ ದಿನ ನನಗಿಂತ ಮೊದಲೇ ನೀನು ನನಗೆ ಹೊಸ ವರ್ಷದ ಶುಭಾಶಯ … Read more

ನಾನು ನಿನ್ನ ಹುಚ್ಚು ಪ್ರೇಮಿಯೇ ಆದರೆ…: ಜಗದೀಶ ಸಂ.ಗೊರೋಬಾಳ

ಪ್ರೀತಿಯ ಚಂದ್ರಕಲಾ, ಹುಡುಕುತ್ತಾ ಹೋದ ನನ್ನಂತವನಿಗೆ ನಿನ್ನಂತ ಚೆಲುವೆ ಸಿಕ್ಕಿರಲಿಲ್ಲ.ಎಷ್ಟು ಹುಡುಕಿದರೂ ನನಗೆ ನಿನ್ನಂತ ರೂಪವತಿ ದರ್ಶನವಾಗಿರಲಿಲ್ಲ.ಹೃದಯದ ಬಡಿತ ನಾಟ್ಯವಾಡಿದೆ ಪ್ರೇಮದ ಮೊಗ್ಗು ಚಿಗುರಿದೆಕನಸೊಂದ ಕಟ್ಟಿರುವೆ ಕೊಲ್ಲದಿರು ಗೆಳತಿ ಒಲವ ಸುಧೆಯನು ಹರಿಸು ಬಾ. ನಿನ್ನ ಕಣ್ಣೋಟದ ಬಾಣ ನನಗೆ ತಾಕಿದಾಗಿನಿಂದ ನಾನು ನಿನ್ನ ಸೌಂದರ್ಯವೆಂಬ ಸವಿಯನ್ನು ಸವಿಯುತ್ತಾ ಹುಚ್ಚನಂತಾಗಿದ್ದೇನೆ. ನಿನ್ನ ಬೊಗಸೆ ಕಂಗಳ ಸೌಂದರ್ಯಕ್ಕೆ ಬೇರಿಲ್ಲ ಕಣೆ ಸಾಟಿ. ನನ್ನ ಹೃದಯ ಗೆದ್ದ ಚೆಂದದ ಚೆಲುವೆ ನೀನು. ಸಾವಿರ ಹೂಗಳ ಚೆಲುವು ನಿನ್ನ ಸೌದರ್ಯದ ಮುಂದೆ … Read more

ಪುಟ್ಟ ಕಾಫಿ ಕಪ್ ನಲ್ಲೂ ಕಡಲಷ್ಟು ಸ್ವಾದವಿದೆ: ಕಿರಣ ದೇಸಾಯಿ

ನನ್ನೊಲವಿಗೆ….ಏನೆಂದು ಸಂಬೋಧಿಸಲಿ….? ಜಾನು, ಡಿಯರ್, ಹೃದಯದ ಒಡತಿ.. ಮುದ್ದು ಗೆಳತಿ.. ಪ್ರೇಮಪತ್ರಕೆ ಒಕ್ಕಣೆ ಬೇಕೆ ? ಒಲವಿದ್ದರಷ್ಟೆ ಸಾಕಲ್ಲವೇ.. ? ಹೌದು ಶಾಲೆಯಲ್ಲಿ ಪತ್ರಲೇಖನಗಳ ಕಲಿಸುತ್ತಾರೆ ಅದಕೊಂದಿಷ್ಟು ನಿಯಮಗಳು ಅದಕ್ಕೆ ಮಾರ್ಕ್ಸು ಪ್ರೇಮಪತ್ರಕ್ಕೆನು ನಿಯಮವಿಲ್ಲ ಒಲವು ತುಂಬಿ ಬರೆದ ಪದಗಳೆ ಇಲ್ಲಿ ಅಂಕವನ್ನು ನಿರ್ಧರಿಸುತ್ತವೆ…ಆ ಅಂಕ ಕೊಡುವ “ಸ್ಟ್ರಿಕ್ಟ ಟೀಚರ್” ನನಗಿಗ.. ನನ್ನೊಲವಿನ ಹೋಮವರ್ಕು ನಿನ್ನ ಮುಂದೆ ಹಿಡಿದು ನಿಂತಿರುವೆ ನಿನ್ನ ವಿಧೇಯ ವಿದ್ಯಾರ್ಥಿಯಂತೆ.. ಓದು ಅಂಕನೀಡು… ಹಾಹಾ..ವಿಷಯಕ್ಕೆ ಬರ್ತಿನಿ… ಬೇಸಿಗೆಯ ಬಿಸಿಲಿಗೆ ಮಾಡಿಟ್ಟ ಅಟ್ಟದ ಮೇಲೆ … Read more

ವಂದನೆಗಳು ನಿನಗೆ ವಂದನೆಗಳು: ಲಕ್ಷ್ಮೀಬಾಯಿ ಅಪ್ಪನಗೌಡ ಪಾಟೀಲ

ನಿನ್ನ ಹೃದಯದರಸಿಯ ವಂದನೆಗಳು ನಾನು ನಿನ್ನ ಕುರಿತಾಗಿ ಬರೆದದ್ದು, ಏಳನೇ ತರಗತಿಯಲ್ಲಿ ಓದುತ್ತಿದ್ದಾಗ. ವಯಸ್ಸು ಅಂತಹದ್ದಲ್ಲ ಮನಸ್ಸು ಬಯಸಿರಲಿಲ್ಲ, ಬರೆದ ಸಾಲುಗಳು ನನಗೆ ವಿಚಿತ್ರವೂ, ಬರೆದವಳು ನಾನೇನ? ಎನ್ನುವಂತಿದ್ದವು. ಯಾರ ಕಣ್ಣಿಗೂ ಬೀಳ ಬಾರದು ಎಂದು ಮುಚ್ಚಿ ಮುಚ್ಚಿ ಇಟ್ಟರೂ, ಬರೆದ ಸಾಲುಗಳು ತಾವೇ ತೆರೆದು ಕೊಳ್ಳು ತ್ತಿವೆ ಎನ್ನುವಂತೆ ಭಾಸವಾಗುತ್ತಿತ್ತು. ಗೆಳತಿಯರು ಸುಮ್ಮನೆ ಇದ್ದಾರೆ, ಮುಚ್ಚಿ ಇಟ್ಟದ್ದನ್ನು ಕೆಣಕಿ ತೆಗೆಯುವ ಗಟ್ಟಿಗಿತ್ತಿಯರು. ತೆಗೆದು ಓದಿ ನನ್ನನ್ನು ನಿನ್ನನ್ನು ಹೋಲಿಕೆ ಮಾಡಿ ಜೋಡಿ ಮಾಡಿಬಿಟ್ಟರು. ಅಷ್ಟಕ್ಕೂ ನಿನ್ನನ್ನು … Read more

ಒಲವ ಮುಗಿಲೊಳಗೆ ಪ್ರೀತಿ ನುಡಿದ ಕಾವ್ಯ: ಅನಿತಾ ಪಿ ತಾಕೊಡೆ

ಪ್ರೀತಿಯ ಪುಟ್ಟ… ಬದುಕಿನ ಭಾವಗತಿಯಲಿ ಬಿಡದೆ ಕಾಡುವವನ ಎಂದು ಕಾಣುವೆನೆಂದು ಕಾದುಕೊಂಡಿರುವಾಗ ಅಂದು ಮೊದಲ ಬಾರಿ ನೀನು ಬಳಿಸಾರಿ ಬಂದೆ. ಹಿಂದೆಂದೂ ಮೂಡದ ಒಲವೊಂದು ಅನುವಾದಾಗ, ನಿನ್ನ ಹಿರಿತನವನು ಮರೆತು ನನ್ನ ಮಗುತನವನೇ ಪೆÇರೆದು ಇತಿಮಿತಿಯ ರೇಖೆಗಳಿಂದ ಮುಕ್ತವಾಗಿ ಹಕ್ಕಿ ಹಾಡನು ಮನಬಿಚ್ಚಿ ಹಾಡಿದಾಗಲೆಲ್ಲಾ ನೀನು ಕೇಳುತ್ತಿದ್ದುದೊಂದೇ ‘ಎಲೈ ಮುದ್ದು ಬಂಗಾರಿ ನಾನೆಂದರೆ ನಿನಗ್ಯಾಕೆ ಇಷ್ಟೊಂದು ಪ್ರೀತಿ…’ ಆಗ…ನನ್ನಾಲಯದಲ್ಲಿ ನೀನು ಇನ್ನಷ್ಟು ಪ್ರಕಾಶವಾಗುತ್ತಿದ್ದೆ. ಬೆಳ್ಳನೆ ಹೊಳಪು ಕೇಸರಿ ಕದಪಿನಲಿ ರಂಗು ಮೂಡಿ ನಿನ್ನಿರುವಿನಲಿ ಇನಿತಿನಿತಾಗಿ ಕರಗುತ್ತಲೇ ‘ನಾನೆಂದಿಗೂ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 74 & 75): ಎಂ. ಜವರಾಜ್

-೭೪- ಸೂರ್ಯ ಮುಳುಗ ಹೊತ್ತು ಆ ಆಳು ತ್ವಾಟ್ದಲ್ಲಿ ಓಡಾಡ್ತಿದ್ನಆ ಆಳ್ನೆಡ್ತಿ ತಿಗುನ್ ಗರಿ ಕಟ್ಗಂಟುತಲಮ್ಯಾಲ ಹೊತ್ಗಂಡು ನಡ್ದಂಗಾಯ್ತು ಈ ಅಯ್ನೋರುಆ ಮುಳುಗ ಸೂರ್ಯನ್ ಕಡಕಣ್ಣಾಡುಸ್ತಆ ಆಳ್ಗ ಸನ್ನ ಮಾಡುದ್ರು ಆ ಆಳುಆ ಸನ್ನುಕ್ಕಒಂದೇ ದಾಪ್ಗ ಓಡ್ದ* ಆ ಮಾರ ನನ್ನ ಹದ ಮಾಡಿಈ ಅಯ್ನೋರ್ ಪಾದ್ಗ ಮೆಟ್ಸಿ‘ಹೆಂಗಿದ್ದು ಅಳಿ ಜೋಕಗಿದ್ದವ’ ಅಂತಂದುಒಂದೇಡ್ ತಿಂಗ್ಳೇ ಆಗಿಅವತ್ತಿಂದ ಇವತ್ಗೂಅವುನ್ ಸುಳುವೆ ಕಾಣಿ* ಸೂರ್ಯ ಮುಳುಗಿಕತ್ಲು ಕವಿಕಂಡುಆ ಹೊತ್ಲಿಅದ್ಯಾರ ಹತ್ತಾರ್ ಜನ ಮಾತಾಡ್ತಬೇಲಿ ನೆಕ್ಕಂಡು ಬಂದಂಗಾಯ್ತು ಈ ಅಯ್ನೋರು ನಗ್ತ … Read more

ಪಂಜು ಕಾವ್ಯಧಾರೆ

ನಿನ್ನ ಅಮೃತಬಳ್ಳಿ ಪ್ರೀತಿ ತಟ್ಟಿ ಮಾತಾಡಿಸುವ ಮಾತುಗಳುನನ್ನೊಳಗನ್ನುಮೌನವಾಗಿಸಿಬಿಟ್ವಿವೆತಟ್ಟಿದ್ದು ಎಬ್ಬಿಸಕ್ಕೋ, ಬಗ್ಗಿಸಕ್ಕೋಅದು ನನಗೆ ತಿಳಿಯಬಾರದೂ ಕೂಡನಾನಂತೂ ಮೌನಿಯಾಗಿಯೇ ಇರುವೆ. ಬದುಕಿನ ಬರಗಾಲಕ್ಕೆಒಣಗಿದ ಮನದಲ್ಲಿಮೊಣದೊಲೆಯಷ್ಟು ಬೆಂಕಿಯತ್ತಿದ್ದು ನಿಜ;ಎದುರಿದ್ದಿದ್ದು ಮಂಜುಗಡ್ಡೆಯಾದ ನೀನು ಮಾತ್ರವೇ.ಆ ಅಗ್ನಿಜ್ವಾಲೆಯಲ್ಲಿ ಅನ್ನವನ್ನುಬೇಯಿಸಿಕೊಂಡವರೆಷ್ಟೋ ಕಾಣೆ,ತಣಿಸಿದ್ದು ವರುಣದೇವನತೀರ್ಥವಾದ ನಿನ್ನಕಣ್ಣೀರು. ಮತ್ತೆ ಈ ಮನದನೆಲದೊಳಗೆಪ್ರೀತಿಯ ಬೀಜಗಳನ್ನು ಉತ್ತಿದ್ದೇನೆಅವುಗಳ ಫಸಲಿಗಾಗಿನಿನ್ನ ಪ್ರೇಮದ ಮೀಮಾಂಸೆಯವ್ಯವಸಾಯವನ್ನು ಭರಿಸಿಕೊಳ್ಳಲುಈ ಮನದಮಣ್ಣು ಹಾತೊರೆಯುತ್ತಿದೆ,ಭಾರೀ ಭಾರಿ ಫಸಲಂತೂನನಗೇ ಬೇಡವೆ ಬೇಡಅತೀಯಾಗಿದ್ದು ಮತ್ತೆಅದೇ ದಿಕ್ಕುತಪ್ಪಿದ ಲೋಕದಸಿಂಹಾಸನಕ್ಕೆ ನನ್ನಅಧಿಪತಿಯಾಗಿಸಬಹುದು. -ಸತೀಶ ಜೆ ಜಾಜೂರು(ಸಜಲ) ನನ್ನವನು.. ಇದ್ದರೂ ಇರಬಹುದೇನೋ ಅವಳಂತೆ ಇವನುಪ್ರೀತಿ ,ಪ್ರೇಮಕೆ ಒಂಚೂರು … Read more

ಗಜಲ್

ಗಜಲ್ ಪ್ರೇಮ ಮದಿರೆಯ ನಶೆಗೆ ಸಿಹಿಮುತ್ತುಗಳೇ ಸಾಕ್ಷಿ ಸಾಕಿಮುತ್ತಿನ ಮತ್ತಿಗೆ ಜೋಲಾಡುತ್ತಿರುವ ಅಕ್ಷಿಗಳೇ ಸಾಕ್ಷಿ ಸಾಕಿ ಪ್ರೀತಿ ಪ್ರೇಮಕೂ ಕಾಮದ ರೂಪ ಉಂಟೂ ಲೋಕದಲಿನಮ್ಮಿಬ್ಬರ ಪರಿಶುದ್ಧ ಪ್ರೇಮಕೆ ಈ ರಾತ್ರಿಗಳೇ ಸಾಕ್ಷಿ ಸಾಕಿ ಸೌಂದರ್ಯವ ಆಸ್ವಾದಿಸದೇ ಅನುಭೋಗಿಸುವುದು ಸಲ್ಲದುಹೃದಯಾಂತರಾಳದಲಿ ಮಿಳಿತಗೊಂಡ ಆತ್ಮಗಳೇ ಸಾಕ್ಷಿ ಸಾಕಿ ನಿನ್ನೊಲವ ಸವಿರುಚಿಯ ಉಣಬಡಿಸು ನನ್ನೆದೆಗೆನೀನಿರದ ಅನುಕ್ಷಣಗಳಿಗೆ ವಿರಹಗಳೇ ಸಾಕ್ಷಿ ಸಾಕಿ ಪ್ರೀತಿ ಎಂದರೆ ಬರೀ ದೇಹಾಕರ್ಷಣೆ ಅಲ್ಲ ‘ ಬಾಬಾ ‘ಮನಸ್ಸು ಮನಸ್ಸುಗಳ ಸಮ್ಮೀಲನಗಳೇ ಸಾಕ್ಷಿ ಸಾಕಿ -ಶಿವರಾಜ್.ಡಿ (ಚಳ್ಳಕೆರೆ) ರಾಮನ … Read more

ಶಿಶುಗೀತೆ

ಉಪ್ಪಿಟ್ಟು ಅಮ್ಮನು ಮಾಡಿದ ಉಪ್ಪಿಟ್ಟುಸವಿಯಲು ನಾಲಿಗೆ ಕಾದಿತ್ತುತಟ್ಟೆಯು ಮುಂದಕೆ ಬಂದಿತ್ತುಜೊತೆಯಲಿ ತುಪ್ಪವು ಬೆರೆತಿತ್ತು ಅಮ್ಮನು ನೀಡಿದ ಕೈತುತ್ತುದೇಹಕೆ ಬಂದಿತು ತಾಕತ್ತುನಾಲಿಗೆ ರುಚಿಯನು ನೋಡಿತ್ತುಚಪ್ಪರಿಸುತಲಿ ನಲಿದಿತ್ತು ಗಂಟಲು ಸಂತಸ ತೋರಿತ್ತುಹೊಟ್ಟೆಯು ಆಗ ತುಂಬಿತ್ತುಮನಸಿಗು ಮೆಚ್ಚುಗೆ ಆಗಿತ್ತುಅಮ್ಮನ ರುಚಿಯನು ಹೊಗಳಿತ್ತು ದೇಸು ಆಲೂರು ಇರುವೆ…ಇರುವೆ ಇರುವೆ.. ಇರುವೆಇರುವೆ ನೀ ಎಲ್ಲೆಲ್ಲೂಇರುವೆ ! ಸಕ್ಕರೆ ಡಬ್ಬಿಲೂನೀ ಇರುವೆಬೆಲ್ಲದ ಅಚ್ಚಲೂನೀ ಮೆಲ್ಲಗೆಮೆಲ್ಲುತ ಇರುವೆ ! ದಾರೀಲಿ ಸಾಗುತಲಿರೆಸಾಲು ಸಾಲಾಗಿ ನೀಶಿಸ್ತು ತೋರುತಗಂಭೀರ ನಡೆಯಲಿ ನೀಸಾಗುತ ಇರುವೆ! ಗಾತ್ರದಲಿ ನೀಚಿಕ್ಕವನಾದರೂಕಚ್ಚಿದರೆ ಚುರು – ಚುರುಇರುವೆ … Read more

ಪಂಜು ಕಾವ್ಯಧಾರೆ

ವಜನು ಗೊತ್ತಿಲ್ಲದೇ ಅಡಗಿದೆಎಲ್ಲರ ಚಿತ್ತದಲೂತರತಮದ ತಕ್ಕಡಿಯೊಂದು ಬೇಕೋ ಬೇಡವೋಅಳೆಯುತ್ತದೆ ಸುತ್ತಲಿನ ಎಲ್ಲವ(ರ)ನ್ನು ಒಬ್ಬೊಬ್ಬರ ತಕ್ಕಡಿಯದೂಅಳತೆಗಲ್ಲು ಬೇರೆಇಂದಿನ ಲಕ್ಷುರಿ ನಾಳಿನಅವಶ್ಯಕತೆಯಾಗುವುದು ಖರೇ ಇವನ ನೂರರ ಕಲ್ಲುಆಗಬಹುದವನ ಸಾವಿರದ ಕಲ್ಲುಇವಳ ಸುಖದ ವ್ಯಾಖ್ಯಾನಸರಿಯೆನಿಸದಿರಬಹುದು ಅವಳಿಗೆ ಮಗುವಿಗೆ ಯಾವ ಸ್ಕೂಲಲ್ಲಿ ಸೀಟುಯಾವ ಲೇ ಔಟ್‌‌ನಲ್ಲಿ ಸೈಟುಹೊಸ ಮನೆ, ಕಾರಿನ ರೇಟು-ಗಳ ಮೇಲೆ ನಿರ್ಧಾರವಾಗುವುದು ವೇಯ್ಟು ಅವರಿವರ ತಕ್ಕಡಿಯಲಿಮೇಲಾಗಿ ತೂಗಲು ಜನರ ಪೈಪೋಟಿಜಾಗ್ರತೆ! ತಪ್ಪದಿರಲಿ ಹತೋಟಿ ತಕ್ಕಡಿಯಲಿ-ಇಂದೊಬ್ಬ ಮೇಲಾಗಿನಾಳೆ ಮತ್ತೊಬ್ಬ ಹೆಚ್ಚು ತೂಗಿ,ಒಮ್ಮೆ ಮೇಲಾದವನುಇನ್ನೊಮ್ಮೆ ಕೆಳಗೆ ಬಾಗಿತನ್ನ ತಾನೇ ತೂಗಿಕೊಳ್ಳಲು ಹೋಗಿಕೊನೆಗೆ ತೂಗಿ … Read more

ಒಂದು ಕಡು ಬೇಸಿಗೆಯ ರಾತ್ರಿಯಂದು…: ಜೆ.ವಿ.ಕಾರ್ಲೊ

ಮೂಲ: ಆಂಬ್ರೋಸ್ ಬಿಯೆರ್ಸ್ಅನುವಾದ: ಜೆ.ವಿ.ಕಾರ್ಲೊ, ಹಾಸನ. -೧- ಹೆನ್ರಿ ಆರ್ಮ್ಸ್ಟ್ರಾಂಗ್ ನನ್ನು ನಂಬಿಸಿ ಒಪ್ಪಿಸುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. ಅವನನ್ನು ಭೂಮಿಯೊಳಗೆ ಹೂತಿದ್ದಂತೂ ನಿಜ. ಹೂತಿದ್ದ ಮಾತ್ರಕ್ಕೆ ತಾನು ಸತ್ತೆನೆಂದು ಒಪ್ಪಿಕೊಳ್ಳಲು ಅವನ ಯಾವತ್ತೂ ಬಂಡಾಯಕೋರ ಮನಸ್ಸು ಸಿದ್ಧವಿರಲಿಲ್ಲ. ಅಂತಿಮ ಸಂಸ್ಕಾರದ ಎಲ್ಲಾ ವಿಧಿವಿಧಾನಗಳೊಂದಿಗೆ ಅವನದೇ ಎದೆಯ ಮೇಲೆ ಅವನದೇ ಕೈಗಳನ್ನು ಜೋಡಿಸಿ ಅಂಗಾತನಾಗಿ ಪೆಟ್ಟಿಗೆಯೊಳಗೆ ಮಲಗಿಸಿದ್ದರು. ಹೆನ್ರಿ, ಅವನ ಕೈಗಳನ್ನು ಜೋಡಿಸಿದ್ದ ಬಂಧನದಿಂದ ಬಿಡಿಸಿಕೊಳ್ಳುವುದೇನೂ ದೊಡ್ಡ ವಿಷಯವಾಗಿರಲಿಲ್ಲ. ಆದರೂ, ಅದರಿಂದ ಹೆಚ್ಚೇನೂ ಉಪಯೋಗವಾಗುತ್ತಿರಲಿಲ್ಲ. ಅವನನ್ನು ಸುತ್ತುವರೆದಿದ್ದ … Read more

ಸೂಗೂರೇಶ ಹಿರೇಮಠ ಅವರ “ಮುರಿದ ಟೊಂಗೆಯ ಚಿಗುರು” ಕವನ ಸಂಕಲನ: ಸುರೇಶ್ ಮಲ್ಲಿಗೆ ಮನೆ….

ತನ್ನ ಮೊದಲ ಕವನ ಸಂಕಲನದಲ್ಲಿ ದಾರಿಗುಂಟ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು ಓದುವಿಕೆ ಮನುಷ್ಯನ ಪೂರ್ಣತೆಗೆ ಕೊಂಡೊಯ್ಯುತ್ತದೆ, ಸಂವಾದ ಸಿದ್ಧಗೊಳಿಸುತ್ತದೆ, ಬರವಣಿಗೆಯಿಂದ ಆತನ ಪರಿಪೂರ್ಣ ಮನುಷ್ಯನನ್ನಾಗಿಸುತ್ತದೆ ಎಂಬ ಇಂಗ್ಲಿಷ್ನ ಖ್ಯಾತ ಬರಹಗಾರ Francis Bacon ಅವರ ಮಾತುಗಳನ್ನು ನೆನೆಸಿಕೊಳ್ಳುತ್ತ, ಪ್ರಕಾಶ ಕಡಮೆ(ನಾಗಸುಧೆ) ಅವರಿಂದ ಚಂದದ ಮುನ್ನುಡಿ ಬರೆಸಿ , ಲಲಿತ ಸಾಹಿತ್ಯದಲ್ಲಿ ತನ್ನದೇ ಛಾಪು ಮೂಡಿಸಿದ, ನಮ್ಮೆಲ್ಲರ ಬೆನ್ನೆಲುಬಾದ ಪ್ರೀತಿಯ ಗುಂಡುರಾವ್ ದೇಸಾಯಿ ಸರ್ ಅವರಿಂದ ಬೆನ್ನುಡಿ ಬರೆಸಿ,ಯಾವ ಆಡಂಬರವಿಲ್ಲದೆಕರಿಮಣಿಯಲ್ಲೆ ಬದುಕಿದಬಂಗಾರಅವರ ಅಮ್ಮನಿಗೆ ತನ್ನ ಕೃತಿಯನ್ನು ಅರ್ಪಿಸುವ … Read more