ಖಾಕಿಯೊಳಗಿನ ಖಾದಿ ಕವಿತೆಗಳು: ಅಶ್ಫಾಕ್ ಪೀರಜಾದೆ

ಕೃತಿ; “ಗಾಂಧಿ ನೇಯಿದಿಟ್ಟ ಬಟ್ಟೆ”ಕವಿ; ರಾಯಸಾಬ ಎನ್. ದರ್ಗಾದವರ.ಪುಟ ಸಂಖ್ಯೆ; 80 ಬೆಲೆ; 90ಅನಾಯ ಪ್ರಕಾಶನ, ಕಟ್ನೂರ್, ಹುಬ್ಬಳ್ಳಿಸಂಪರ್ಕ ಸಂಖ್ಯೆ; 7259791419 ಕವಿತೆ ಸಶಕ್ತ ಸಕಾಲಿಕ ರೂಪಕಗಳ ಮೂಲಕವೇ ಓದುಗನ ಭಾವ ಪರಿಧಿಯಲ್ಲಿ ಬಿಚ್ಚಿಕೊಳ್ಳುತ್ತ ಹೊಸಹೊಸ ಅರ್ಥ ಆಯಾಮಗಳಲ್ಲಿ ಪಡೆದುಕೊಳ್ಳುತ್ತ ಸಾಗಿ ಹೃದಯಕ್ಕೆ ತಲುಪಬೇಕ ತಟ್ಟಬೇಕು. ಆಗಲೇ ಕವಿಗೂ ಬರೆಸಿಕೊಂಡ ಕವಿತೆಗೂ ಒಂದು ಘನತೆ. ಕವಿಯ ಮನದ ಚದುರಿದ ಭಾವಮೋಡಗಳು ಕವಿತೆಯನ್ನುವ ಒಂದು ನಿಖರವಾದ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಕಾವ್ಯಶಿಲ್ಪ ಕೆತ್ತಿದ್ದರೂ ಕೂಡ ಕಾವ್ಯಾಸಕ್ತ ಮನಮಸ್ತಿಕದಲ್ಲಿ ಭಿನ್ನವಾದ ಅರ್ಥಗಳು … Read more

ಮೇವು: ವಿಜಯಾ ಮೋಹನ್, ಮಧುಗಿರಿ

ಗೊಂತಿಗೆಯಲ್ಲಿ ಬಸ ಬಸನೆ ಉಸಿರು ಉಗುಳುತ್ತಿರುವ ಜೀವದನಗಳು. ಒಳಗೆ ಅಡುಗೆ ಮನೇಲಿ ಊದುರ (ಹೊಗೆ) ಸುತ್ತಿಕೊಂಡು, ಪಾಡು ಪಡುತ್ತ ಹೊಲೆ ಉರಿಸುತ್ತಿರುವ ಹೆಂಡತಿ ಅಮ್ಮಾಜಿ. ಅವಳ ಕಡೆಗೊಂದು ಕಣ್ಣು, ಅಲ್ಲೇ ಎದುಸಿರು ಬಿಡುತ್ತಿರುವ ಜೀವದನಗಳ ಕಡೆಗೊಂದು ಕಣ್ಣು, ಅಂಗೆ ನಡುಮನೆಯ ಗೋಡೆಗೆ ಕುಂತುಕೊಂಡು ನಿಗಾ ಮಾಡುತ್ತಿರುವ ಮಲ್ಲಣ್ಣನ ಮನಸ್ಸು ಎತ್ತಕಡೆಯಿಂದಾನೊ? ಯಾಕೊ ಯಾವುದು ಸರಿಯಾಗುತಿಲ್ಲವೆಂದು ತಿವಿಯಂಗಾಗುತಿತ್ತು. ಒಳಗೆ ಹೊತ್ತಿಗೆ ಸರಿಯಾಗಿ ಅಂಟಿಕೊಳ್ಳದ, ಬಂಗದ ಹೊಲೆಯನ್ನ ಉರುಬಿ ಉರುಬಿ, ಬಾದೆ ಬೀಳುವ ಹೆಂಡತಿ ಅಮ್ಮಾಜಮ್ಮಳನ್ನು ಸುಖವಾಗಿ ನೋಡಿಕೊಳ್ಳಲಾಗುತಿಲ್ಲ. ಇಲ್ಲಿ … Read more

ಪಂಜು ಕಾವ್ಯಧಾರೆ

ನಾ ಹೇಳಿರುವೆ ನಾ ಬೆಂಕಿಯಾದೆದೀಪವ ಬೆಳಗುವ ಹೊತ್ತಿನಲ್ಲಿನಾ ನಿನ್ನ ಸುಟ್ಟು ಹಾಕಲೆಂದಲ್ಲ ನಾ ದೀಪವಾದೆನೀ ಹೋಗುವ ದಾರಿ ಕಾಣಲೆಂದುನಿನ್ನ ದಾರಿ ಮಸುಕು ಅಗಲೆಂದಲ್ಲ ನಾ ಬುವಿಯಾದೆನೀ ಇಡುವ ಹೆಜ್ಜೆ ಸಾಗಲೆಂದುನಿನ್ನ ಹೆಜ್ಜೆಗೆ ಮುಳುವಾಗಲೆಂದಲ್ಲ ಇಂದು ನಾ ಹೇಳಿರುವೆ ನಿನ್ನ ದಾರಿಯ ಅರಿವು ನಿನಗಾಗಲೆಂದುನಿನ್ನ ಬಾಳು ಸದಾ ಬೆಳಗಲೆಂದುನಿನ್ನ ಜೀವನ ಹಾಳಾಗಲಿ ಎಂದಲ್ಲ. – ದೀಪಾ ಜಿ ಎಸ್ ಏನಿದ್ದರೂ ಶೂನ್ಯ ಏನಿದ್ದರೂ ಶೂನ್ಯಬಾಳಲ್ಲಿ ಪ್ರೀತಿ ಇರದಿದ್ದರೆಪ್ರೇಮಾಂಕುರವಾಗದಿದ್ದರೆ ಏನಿದ್ದರೂ ಶೂನ್ಯನಡತೆಯಲಿ ಸಂಸ್ಕಾರವಿಲ್ಲದಿದ್ದರೆಸಂಸಾರದಲ್ಲಿ ಸ್ವಾರಸ್ಯವಿಲ್ಲದಿದ್ದರೆ ಏನಿದ್ದರೂ ಶೂನ್ಯಹಣದೊಟ್ಟಿಗೆ ಹೃದಯವಂತಿಕೆಯಿಲ್ಲದಿದ್ದರೆಮುಖ್ಯವಾಗಿ ನೆಮ್ಮದಿಯಿಲ್ಲದಿದ್ದರೆ … Read more

ಬುದ್ಧ ಕಾಣದ ನಗೆ ಪುಸ್ತಕ ವಿಮರ್ಶೆ: ವರುಣ್ ರಾಜ್

ಪುಸ್ತಕದ ಹೆಸರು : ಬುದ್ಧ ಕಾಣದ ನಗೆಕೃತಿ ಪ್ರಕಾರ : ಕವನ ಸಂಕಲನಕವಿ : ಎಸ್. ರಾಜು ಸೂಲೇನಹಳ್ಳಿ.ಪ್ರಕಾಶಕರು : ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.ಪುಟ : 86ಬೆಲೆ : 90 ಕವಿ ಹಾಗೂ ಕಾದಂಬರಿಕಾರರೂ ಆದ ರಾಜು ಎಸ್ ಸೂಲೇನಹಳ್ಳಿ ರವರು ತಮ್ಮ ಕೃತಿಗೆ ಕೊಟ್ಟಿರುವ ‘ಬುದ್ಧ ಕಾಣದ ನಗೆ’ ಎಂಬ ಶೀರ್ಷಿಕೆಯೇ ಬಹಳ ಆಕರ್ಷಕವಾಗಿದೆ. ಪುಟ ತಿರುಗಿಸುತ್ತಾ ಹೋದರೆ ಮತ್ತಷ್ಟು ಆಕರ್ಷಣೆ ಇವರ ಕವಿತೆಗಳಲ್ಲಿ ಕಂಡುಬರುತ್ತೆ. ಕೃತಿಯ ಮೊದಲ ಕವಿತೆಯಲ್ಲಿಯೇ ಕವಿಗಳು ಬುದ್ದಿವಂತಿಕೆ ಮತ್ತು ಹೃದಯಸಂಪನ್ನತೆಯ … Read more

ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳ ಮೇಲೆ ನವೆಂಬರ್ ತಿಂಗಳು ಪೂರ್ತಿ ವಿಶೇಷ ರಿಯಾಯಿತಿ

ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಾಂತ ಇರುವ ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ನವಕರ್ನಾಟಕ ಪ್ರಕಾಶನದ ಪುಸ್ತಕಗಳು ಮಾತ್ರವಲ್ಲದೆ ನಾಡಿನ ಪ್ರಮುಖ ಪ್ರಕಾಶಕರ ಕನ್ನಡ ಪುಸ್ತಕಗಳ ಮೇಲೆ ನವೆಂಬರ್ ತಿಂಗಳು ಪೂರ್ತಿ ವಿಶೇಷ ರಿಯಾಯಿತಿ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಪುಸ್ತಕ ಪ್ರಿಯರು ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಈ ಮೂಲಕ ಕೋರಲಾಗಿದೆ. ಬೆಂಗಳೂರು ಮಳಿಗೆಗಳ ವಿಳಾಸ: ನವಕರ್ನಾಟಕ ಪುಸ್ತಕ ಮಳಿಗೆದೇವಾಂಗ ಟವರ್, 35, ಕೆಂಪೇಗೌಡ ರಸ್ತೆಬೆಂಗಳೂರು – 560 009ದೂ : 9480686862 ನವಕರ್ನಾಟಕ ಪುಸ್ತಕ ಮಳಿಗೆಎಂಬೆಸಿ ಸೆಂಟರ್, ಕ್ರೆಸೆಂಟ್ … Read more

ಸೀಗೀ ಹುಣ್ಣಿವಿ: ಡಾ. ವೃಂದಾ ಸಂಗಮ್

“ಆದಿತ್ಯವಾರ ಸಂತೀ ಮಾಡಿ, ಸೋಮವಾರ ಕಡುಬು ಕಟ್ಟಿ, ಮಂಗಳವಾರ ಹೊಲಾ ಹೋಗೋದೋ” ಅಂತ ಊರಾಗ ವಾಲೀಕಾರ ಡಂಗರಾ ಸಾರಲಿಕ್ಕೇಂತ ಬಂದರ, ನಮ್ಮಂತಹಾ ಸಣ್ಣ ಹುಡುಗರ ಗುಂಪು ಅವನ ಹಿಂದ ಗುಂಪು ಕಟ್ಟಿಕೊಂಡು ಓಡುತಿತ್ತು. ಊರೇನೂ ಅಂತಾ ಪರೀ ದೊಡ್ಡದಲ್ಲ. ಅಲ್ಲದ, ಇಂತಾ ವಿಷಯಗಳು ಎಲ್ಲಾರಿಗೂ ಗೊತ್ತಾಗೇ ಇರತಿದ್ದವು. ಆದರೂ ವಾಲೀಕಾರ ಡಂಗುರ ಸಾರತಿದ್ದಾ, ನಾವೂ ಅವನ ಹಿಂದಿಂದ ಓಡತಿದ್ದವಿ ಅಷ್ಟ. ಆಮ್ಯಾಲೆ, ಮನೀಗೆ ಬಂದು ಅವನ ಹಂಗನ ಒಂದ ಹತ್ತ ಸಲಾ ಒದರತಿದ್ದವಿ. ಈ ಡಂಗುರಾ ಸಾರೋ … Read more

ನಿಲುವಂಗಿಯ ಕನಸು (ಅಧ್ಯಾಯ ೧೮-೧೯): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೮: ಕೆಂಗಣ್ಣಪ್ಪನ ಔಷಧೋಪಚಾರ ನೀರು ಕುಡಿದು ವಿಶ್ರಮಿಸಿದ ದನಗಳನ್ನು ಬೆಟ್ಟದ ಕಡೆ ತಿರುಗಿಸಿದ ಚಿನ್ನಪ್ಪ ಬೆಟ್ಟದ ನೆತ್ತಿಯ ಹಕ್ಕೆಯ ಗೌಲು ಮರದ ನೆರಳಲ್ಲಿ ಕುಳಿತು ವಿಶ್ರಮಿಸತೊಡಗಿದ.ಸುಬ್ಬಪ್ಪ ದೊಡ್ಡ ಕೆಲಸಗಳನ್ನೆಲ್ಲಾ ಮುಗಿಸಿ ಕೊಟ್ಟು ಹಿಂದಿನ ದಿನ ಸಂಜೆಯಷ್ಟೇ ಊರಿಗೆ ಹೋಗಿದ್ದ, ಇತ್ತೀಚಿನ ಕೆಲವೇ ದಿನಗಳಲ್ಲಿ ಒದಗಿ ಬಂದ ಅನುಭವಗಳು ಹಾಗೂ ಭಾವ ಮೈದುನನೊಂದಿಗಿನ ಮಾತುಕತೆಗಳು ಗಂಡ ಹೆಂಡಿರಿಬ್ಬರಿಗೆ ಬದುಕಿನ ಕೆಲವು ಹೊಸ ಪಾಠಗಳನ್ನು ಕಲಿಸಿದ್ದವು.ಆ ಸಾರಗಳೊಳಗಿನ ಗೂಡಾರ್ಥಗಳು ತಿಳಿಯದಿದ್ದರೂ ಒಟ್ಟು ಸಾರಾಂಶ ಅವರ ಅರಿವಿಗೆ ಬಂದಿತ್ತು.ಇಂದಿನ ಸಾಮಾಜಿಕ … Read more

ಸೀಮಾತೀತ ಸಿಮೊನ್‌ ದ ಬೋವಾ: ಸಂಗನಗೌಡ ಹಿರೇಗೌಡ

ಭಾರತೀಯ ಮತ್ತು ಭಾರತೇತರ ಪ್ರಮುಖ ಸಾಂಸ್ಕೃತಿಕ ನಾಯಕರು, ಕವಿಗಳು, ಲೇಖಕರು ಅವರ ಒಟ್ಟು ಬದುಕಿನಲ್ಲಿ ಘಟಿಸಿದ ಮುಖ್ಯ ಘಟನೆಗಳನ್ನಿಟ್ಟುಕೊಂಡು ಕನ್ನಡಕ್ಕೆ ತರ್ಜುಮೆಗೊಂಡ ನಾಲ್ಕು ಕೃತಿಗಳನ್ನು ನನ್ನ ಮಿತಿಯೊಳಗೆ ಓದಿಕೊಂಡಿದ್ದೇನೆ. ನಟರಾಜ ಹುಳಿಯಾರವರು ಸಂಪಾದಿಸಿರುವ “ಲೋಹಿಯಾ ಕಂಡ ಗಾಂಧಿ” ಇದರಲ್ಲಿ ಬಿ.ಎ ಸನದಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಹಸನ್‌ ನಯೀಂ ಸುರಕೋಡ. ಸತ್ಯವ್ರತ, ರವೀಂದ್ರ ರೇಶ್ಮೆ, ಸಿ, ನಾಗಣ್ಣ, ನಟರಾಜ ಹುಳಿಯಾರ, ಈ ಏಳು ಜನ ಲೇಖಕರು ಲೋಹಿಯಾ ಅವರ ಬದುಕಿನ ಪ್ರಮುಖವಾದ ಭಾಷಣ, ಚಳುವಳಿ, ಹೋರಾಟಗಳಿನ್ನಿಟ್ಟುಕೊಂಡು, ಗಾಂಧಿಯ ಕುರಿತು … Read more

“ಕತ್ತಲ ಗೋಡೆಯ ಮೇಲೆ ತಮ್ಮದೇ ರಕ್ತದಲ್ಲಿ ಗೀಚಿ ಗೀಚಿ ಬರೆದ ದಲಿತ ತಲೆಮಾರುಗಳ ತವಕ ತಲ್ಲಣ!”: ಎಂ. ಜವರಾಜ್

“ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ” ಬಿದಲೋಟಿ ರಂಗನಾಥ್ ಅವರ ನಲವತ್ತು ಕವಿತೆಗಳನ್ನೊಳಗೊಂಡ ಒಂದು ಪರಿಪೂರ್ಣ ಸಂಕಲನ. ಇಲ್ಲಿ ‘ಪರಿಪೂರ್ಣ’ ಪದ ಬಳಕೆಯು ಕವಿತೆಗಳು ಓದುಗನಿಗೆ ಗಾಢವಾಗಿ ಆವರಿಸಿಕೊಳಬಹುದಾದ ಲಯದ ಒಂದು ದಟ್ಟ ದನಿ. ಈ ಆವರಿಕೆ, ಕವಿಯು ಕಾವ್ಯ ಕಟ್ಟುವಿಕೆಯಲ್ಲಿ ಅನುಸರಿಸಿರುವ ಒಂದು ಕುಶಲ ತಂತ್ರವೇ ಆಗಿದೆ. ಈ ಪರಿಪೂರ್ಣತೆಯನ್ನೆ ಹಿಗ್ಗಿಸಿ ಬಿದಲೋಟಿ ರಂಗನಾಥರ ಕವಿತೆಗಳ ಓದು ಮತ್ತು ಮುನ್ನೋಟವನ್ನು ಪರಿಣಾಮಕಾರಿಯಾಗಿ ಒಳಗಣ್ಣಿನಿಂದ ನೋಡುತ್ತಾ ಪರಾಮರ್ಶನೆಗೆ ಒಳಪಡಿಸುವುದಾದರೆ “ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ” ಎಂಬುದು ದಲಿತ ನೆಲೆಯ … Read more

ನಿಲುವಂಗಿಯ ಕನಸು (ಅಧ್ಯಾಯ ೧೬-೧೭): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೬: ಹೊನ್ನೇಗೌಡನ ಟೊಮೆಟೋ ತೋಟ ತೀವ್ರಗತಿಯಲ್ಲಿ ಜರುಗಿದ ಘಟನಾವಳಿಗಳ ಹೊಡೆತದಿಂದ ಚೆನ್ನಪ್ಪನ ಮನ್ನಸ್ಸು ವಿಚಲಿತವಾಗಿತ್ತು. ಮಂಕು ಬಡಿದವರಂತೆ ಕುಳಿತ ಗಂಡನನ್ನು ಕುರಿತು ‘ಅದೇನೇನು ಬರುತ್ತೋ ಬರಲಿ ಎದುರಿಸೋಕೆ ತಯಾರಾಗಿರಣ. ನೀವು ಹಿಂಗೆ ತಲೆ ಕೆಳಗೆ ಹಾಕಿ ಕೂತ್ರೆ ನಮ್ಮ ಕೈಕಾಲು ಆಡದಾದ್ರೂ ಹೆಂಗೆ? ಈಗ ಹೊರಡಿ, ದೊಡ್ಡೂರಿನಲ್ಲಿ ಏನೇನು ಕೆಲ್ಸ ಇದೆಯೋ ಮುಗಿಸಿಕಂಡು ಬನ್ನಿ. ನಾನೂ ಅಷ್ಟೊತ್ತಿಗೆ ಮನೆ ಕೆಲಸ ಎಲ್ಲಾ ಮುಗ್ಸಿ ಬುತ್ತಿ ತಗಂಡ್ ಹೋಗಿರ್ತೀನಿ’. ಸೀತೆ ಗಂಡನಿಗೆ ದೈರ್ಯ ತುಂಬುವ ಮಾತಾಡಿದಳು. ನಂತರ ಸುಬ್ಬಪ್ಪನ … Read more

ಹರಿವು: ತಿರುಪತಿ ಭಂಗಿ

“ಕೇಳ್ರಪೋ..ಕೇಳ್ರೀ.. ಇಂದ ಹೊತ್ತ ಮುನಗೂದ್ರವಳಗಾಗಿ ಊರ ಖಾಲಿ ಮಾಡ್ಬೇಕಂತ ನಮ್ಮ ಡಿ.ಸಿ ಸಾಹೇಬ್ರ ಆದೇಶ ಆಗೇತಿ, ಲಗೂನ ನಿಮ್ಮ ಸ್ವಾಮಾನಾ ಸ್ವಟ್ಟಿ ತಗೊಂದ, ನಿಮ್ಮ ದನಾ ಕರಾ ಹೊಡ್ಕೊಂಡ, ತುಳಸಿಗೇರಿ ಗುಡ್ಡಕ ಹೋಗಿ ಟಿಕಾನಿ ಹೂಡ್ರೀ ಅಂತ ಹೇಳ್ಯಾರು, ನನ್ನ ಮಾತ ಚಿತ್ತಗೊಟ್ಟ ಕೇಳ್ರಪೋ..ಕೇಳ್ರೀ.. ಹೇಳಿಲ್ಲಂದಿರೀ.. ಕೇಳಿಲ್ಲಂದಿರೀ ಡಣ್..ಡಣ್” ಅಂತ ಡಬ್ಬಿ ಯಮನಪ್ಪ ಡಂಗರಾ ಹೊಡದದ್ದ ತಡಾ. ಊರ ಮಂದಿಯಲ್ಲಾ ಡಬ್ಬಿ ಯಮನಪ್ಪನ ಮಾತ ಕೇಳಿ ಗಾಬ್ರಿ ಆದ್ರು. ಕೆಂಪರಾಡಿ ಹೊತಗೊಂದ, ಎರಡೂ ಕಡವಂಡಿ ದಾಟಿ, ದಡಬಡಿಸಿ … Read more

ಸ್ನೇಹ ಸ್ವರ್ಗ !: ಅಶ್ಫಾಕ್ ಪೀರಜಾದೆ

Marriages are made in heaven-John lyly ಬಿಎಂಡ್ಬ್ಲೂ ಕಾರೊಂದು ಮನೆ ಮುಂದೆ ನಿಂತಾಗ ಮನೆಯಿಂದ ಹೊರಗೆ ಬಂದು ಆಶ್ಚರ್ಯಚಕಿತಳಾಗಿ ಕಣ್ಣಗಲಿಸಿ ನೋಡುತ್ತಿರಬೇಕಾದರೆ ತಿಳಿಗುಲಾಬಿ ಸೀರೆ , ಕಡು ಕಪ್ಪು ಬಣ್ಣದ ರವಿಕೆ ತೊಟ್ಟು ಕಣ್ಣಿಗೆ ಕಪ್ಪು ಕೂಲಿಂಗ್ ಗ್ಲಾಸ್ ಧರಿಸಿದ್ದ ನೀಳಕಾಯದ ಸುಂದರ ಹೆಣ್ಣೊಂದು ಕಾರಿನಿಂದ ಇಳಿದು ಬರುತ್ತಿರಬೇಕಾದರೆ ಸಾಕ್ಷಾತ್ ಅಪ್ಸರೆಯೇ ತನ್ನತ್ತ ನಡೆದು ಬರುವಂತೆ ಕಲ್ಪನಾಳಿಗೆ ಭಾಸವಾಗಿತ್ತು.“ಗುರುತು ಸಿಗಲಿಲ್ಲವೇನೇ.. ಕಲ್ಪನಾ?”ಎಂದು ಆ ಗುಲಾಬಿ ಹೂವಿನಂತಹ ಹೆಣ್ಣು ತನ್ನ ಇಂಪಾದ ಕಂಠದಿಂದ ಉಲಿದಾಗಲೇ ಕಲ್ಪನಾ ವಾಸ್ತವಲೋಕಕ್ಕೆ … Read more

ಪಂಜು ಕಾವ್ಯಧಾರೆ

“ಬೇಕಿದ್ದರೊಮ್ಮೆ ಅತ್ತುಬಿಡು” ಬೇಕಿದ್ದರೊಮ್ಮೆ ಜೋರಾಗಿ ಅತ್ತುಬಿಡುಒಳಗೊಳಗೇ ಮಮ್ಮಲ ಮರುಗುವುದೇಕೆ?ಸಿಗಲಾರದಕ್ಕೆ ಕೈ ಚಾಚುವ ಹುಂಬತನವೇಕೆ?ಹಸಿದ ಭುವಿಗೆ ಕೊಳದೊಳಗೆ ಬಿದ್ದಚಂದ್ರ ಹೊಟ್ಟೆ ತುಂಬಿಸಲಾರ!ಬಿಸಿಯುಸಿರಿಗೆ ಕುದಿಯುವ ರಕ್ತ ಆರಿಮೌನದಲಿ ಹೆಪ್ಪುಗಟ್ಟುವುದು ಬೇಡ.. ಜುಳು ಜುಳು ಸದ್ದು ಮಾಡುತಹರಿಯುವ ನದಿ ಅತ್ತದು ಯಾರಾದರೂಗಮನಿಸಿಹರೇ?ಕಾಲ್ಗಳ ಇಳಿಬಿಟ್ಟು ತೋಯ್ದುಕೊಂಡರೆ ವಿನಃಆತುಕೊಂಡವರಿಲ್ಲ..ಅಳಿದ ಮೇಲೂ ಉಳಿದು ಹೋಗುವಗಾಯದ ಕಲೆಗಳಿಗೆ ನಿತ್ಯ ನರಳಾಡದೆಅತ್ತು ಮುಕ್ತಿ ಕೊಟ್ಟು ಬಿಡು.. ಇಳೆಯ ಕೊಳೆಯನ್ನು ತೊಡೆದು ಹಾಕಲುಸುರಿವ ಭಾರೀ ಮಳೆಯಂತೆ..ಕಿಟಕಿಯಾಚೆ ಕಾಣುವ ರಸ್ತೆಗೆ ನೆಟ್ಟಕಣ್ಣ ಪದರಿನಿಂದ ನೋವುಗಳೆಲ್ಲಹರಿದು ಹೋಗುವಂತೆ ಒಮ್ಮೆಜೋರಾಗಿ ಅತ್ತುಬಿಡು..ಹಠಮಾರಿ ನೆನಪುಗಳು ಎದೆಯೊಳಗೆಗೂಡು … Read more

ನಿಲುವಂಗಿಯ ಕನಸು (ಅಧ್ಯಾಯ ೧೪-೧೫): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೪: ಸಮೂಹ ಸನ್ನಿ ಚಿನ್ನಪ್ಪ ಕ್ಷಣ ತಬ್ಬಿಬ್ಬಾದ. ಸಮಸ್ಯೆಯ ಗೊಸರಿನ ಮೇಲೆ ಕಾಲಿಟ್ಟಿದ್ದೇನೆ. ಕಾಲಕ್ರಮದಲ್ಲಿ ಭಾರ ಹೆಚ್ಚಾಗಿ ಅದರಲ್ಲಿ ಹೂತು ಹೋಗಿ ಬಿಟ್ಟರೆ, ಶರೀರ ಭಯದಿಂದ ಸಣ್ಣಗೆ ಅದುರಿದಂತೆನಿಸಿತು. ಅಂಗೈಯಲ್ಲಿದ್ದ ಕರಿಮಣಿ ಸರವನ್ನೊಮ್ಮೆ ವಿಷಾದದಿಂದ ನೋಡಿ ನಂತರ ಪ್ಯಾಂಟಿನ ಜೇಬಿನಲ್ಲಿ ಇಟ್ಟಿಬಿಟ್ಟು ರಸ್ತೆಗೆ ಇಳಿದ.ಎದುರಿಗೇ ಪ್ರಭಾಕರನ ಬ್ರಾಂಡಿ ಷಾಪು ಕಾಣುತ್ತಿತ್ತು. ಈವತ್ತು ಸಂತೆಯ ದಿನವಾಗಿದ್ದರೆ ವಾಡಿಕೆಯಂತೆ ಸಂಜೆ ಅಲ್ಲಿ ಸ್ನೇಹಿತರೊಂದಿಗೆ ಕುಳಿತು ಬ್ರಾಂದಿ ಗುಟುಕರಿಸುತ್ತಾ ನನ್ನ ಸಮಸ್ಯೆಯನ್ನು ಅವರ ಮುಂದಿಟ್ಟು ಮನಸ್ಸು ಹಗುರಮಾಡಿ ಕೊಳ್ಳಬಹುದಿತ್ತಲ್ಲ!ಚಿನ್ನಪ್ಪನ ಮನಸ್ಸಿನಲ್ಲಿ … Read more

“ಹೆಣ್ಣಿನ ಒಳ ವೇದನೆಯ ಚಿತ್ರಣವನ್ನು ಓದುಗನ ಎದೆಗೆ ಎರಕ ಉಯ್ದು ಬೆಚ್ಚಿಸುವ ಕವಿತೆಗಳು”: ಎಂ. ಜವರಾಜ್

ಬದುಕಿನ ಸತ್ಯಗಳನ್ನು ಕೆಲವೇ ಪದಗಳಲ್ಲಿ ಕೆಲವೇ ಸಾಲುಗಳಲ್ಲಿ ಕೆಲವೇ ನುಡಿಗಟ್ಟುಗಳಲ್ಲಿ ಹೇಳಬಲ್ಲ ಶಕ್ತಿ ಇರುವುದು ಕಾವ್ಯಕ್ಕೆ. ಸಾಹಿತ್ಯದ ಹುಟ್ಟಿನ ಮೂಲ ಸಾಮಾನ್ಯ ಜನರ ‘ಪದ’ದಿಂದ. ಈ ಜಾನಪದಕ್ಕೆ ಶಕ್ತಿ ಹೆಚ್ಚು. ಒಂದು ಕವಿತೆ ತನ್ನ ಎದೆಯೊಳಗೆ ನೂರಾರು ಸಂಕಟಗಳನ್ನು ನೋವುಗಳನ್ನು ಅಭಿಲಾಷೆಗಳನ್ನು ಇಟ್ಟಕೊಂಡಿರುವ ದೈತ್ಯ ಕಣಜ. ಈ ಕಣಜದೊಳಗೆ ಪ್ರೀತಿ ಪ್ರೇಮ ಪ್ರಣಯ ಲೋಲುಪ ಸಾವು ಹಾಸ್ಯ ಲಾಸ್ಯ ಸರಸ ವಿರಸ ಕಾಮ ಭೋಗ ಸಂಭೋಗ ಒಳಿತು ಕೆಡುಕು ಕಸ ರಸಗಳ ವಿವರಗಳೂ ಉಂಟು. ಹೀಗಾಗಿ ನೂರು … Read more

ಪಂಜು ಕಾವ್ಯಧಾರೆ

ಅಮೃತಮತಿಪತಿಯ ಕಣ್ತಪ್ಪಿಸಿ ಅಷ್ಠಾವ೦ಕನ ಜೊತೆಗಜಶಾಲೆಯಲ್ಲಿ ದೈಹಿಕ ಸ೦ಬ೦ಧವನ್ನುಬೆಳೆಸಿದ ರಾಣಿ ಅಮೃತಮತಿಗೆತಾನೊಬ್ಬಳು ಉಜ್ಜಯನಿಯ ರಾಣಿರಾಜಾ ಯಶೋಧರನ ಮಡದಿ ಅನ್ನುವುದುಮರೆತು ಹೋಗಿತ್ತೋ ಏನೋ…… ಮನಪ್ರಿಯೆ ಮಡದಿ ಅಮೃತಮತಿಒಬ್ಬ ಸದ್ಗುಣಗಳಿರುವ ವ್ಯಕ್ತಿ ಸಾತ್ವಿಕಗುಣಗಳನ್ನು ತು೦ಬಿಕೊ೦ಡ ಪತಿಯಿಂದದೈಹಿಕ ಸುಖ ಸಿಗದಾದಾಗ ಆಕೆಮಾನಸಿಕವಾಗಿ ಬೇಸರಗೊ೦ಡಿದ್ದು,ಬೇಸರದಲ್ಲಿ ಆಕೆ ತೆಗೆದುಕೊಂಡ ನಿರ್ಧಾರಸರಿ ಅಥವಾ ತಪ್ಪಾಗಿರಬಹುದೋ ಏನೋ… ಹೀಗೆಯೇ ನಿರ೦ತರವಾಗಿ……. ಕತ್ತಲೆಯ ರಾತ್ರಿಯಲ್ಲಿ ಅದೊ೦ದು ದಿನಹಿ೦ಬಾಲಿಸಿಹೋದ ಪತಿಅಷ್ಠಾವ೦ಕನ ಬೆತ್ತಲೆಯ ದೇಹದ ಜೊತೆಬೆತ್ತಲೆಯಾಗಿ ಮಡದಿ ಅಮೃತಮತಿಕಾಮಿಸುವದನ್ನು ಗುಟ್ಟಾಗಿ ನೋಡಿಅಸ೦ಹ್ಯಪಟ್ಟು ರೊಚ್ಚಿಗೆದ್ದ ರಾಜಾಯಶೋಧರ ಮಾಡಿದ್ದಾದರೂ ಏನು…..?ಕೋಪದಿಂದ ಹೊರತೆಗೆದ ಖಡ್ಗಮರಳಿ ಹಿಂದೆ ಸರಿದು … Read more

ನಿಲುವಂಗಿಯ ಕನಸು (ಅಧ್ಯಾಯ ೧೨-೧೩): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೨: ಒಬ್ಬ ರೈತನ ಆತ್ಮಹತ್ಯೆ ಸೀಗೆಕಾಯಿ ಗೋದಾಮಿನ ಮುಂದುಗಡೆ ರಸ್ತೆಗೆ ತೆರೆದುಕೊಂಡಂತೆ ಉಳಿದ ಸೈಟ್ ಕ್ಲೀನ್ ಮಾಡಿಸಿ ಪಿಲ್ಲರ್ ಏಳಿಸಿ ಬಿಟ್ಟಿದ್ದ ಜಾಗದಲ್ಲಿ ಮೂರು ಮಳಿಗೆಗಳು ತಲೆಯೆತ್ತಿದವು. ಒಂದರಲ್ಲಿ ಶ್ರೀ ನಂದೀಶ್ವರ ಟ್ರೇಡರ್ಸ್ (ಗೊಬ್ಬರ ಮತ್ತು ಔಷಧಿ ವ್ಯಾಪಾರಿಗಳು) ಎಂಬ ಅಂಗಡಿ ಉದ್ಘಾಟನೆಯಾಯಿತು.ಕತ್ತೆರಾಮನ ಯೋಜನೆ ಅಷ್ಟಕ್ಕೆ ನಿಂತಿರಲಿಲ್ಲ. ಆ ಇಡೀ ಜಾಗವನ್ನೆಲ್ಲಾ ಬಳಸಿಕೊಂಡು ಒಂದು ಕಾಂಪ್ಲೆಕ್ಸ್ ಕಟ್ಟಲು ನೀಲನಕ್ಷೆ ತಯಾರು ಮಾಡಿ ಇಟ್ಟುಕೊಂಡಿದ್ದ.ಅದರಲ್ಲಿ ಮುಖ್ಯರಸ್ತೆಗೆ ತೆರೆದುಕೊಂಡAತೆ ಆರು ಮಳಿಗೆಗಳು, ಹಿಂದುಗಡೆ ಶೆಡ್ ಇರುವ ಕಡೆಗೆ ಒಂದು ವಾಸದ … Read more

ಊರ ತೇರ ಹಬ್ಬ: ಡಾ. ವೃಂದಾ ಸಂಗಮ್

ಭಾರತ ಹುಣ್ಣಿಮೆಯಾದ ಒಂಬತ್ತು ದಿನಕ್ಕೆ ಊರಾಗ ಲಕ್ಷ್ಮವ್ವನ ತೇರು. ಅಂದರ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಜಾತ್ರೆ. ತೇರಬ್ಬ (ತೇರು-ಹಬ್ಬ) ಅಂದ ಕೂಡಲೇ ಮಕ್ಕಳಾದ ನಮಗೆಲ್ಲಾ ಖುಷಿ ಆಗಬೇಕಾದ್ದು ಸಹಜನ. ಈಗ ಐವತ್ತು ವರ್ಷದ ಹಿಂದೆ, ನಮಗೆಲ್ಲಾ ಜಾತ್ರೆ ತೇರುಗಳೇ ಊರ ಜನರನ್ನು ಒಗ್ಗೂಡಿಸುವ ಹಬ್ಬಗಳು ವಿಶೇಷ ಮನರಂಜನೆಗಳು. ಮಕ್ಕಳಾದ ನಮಗೆ, ಹೋದ ವರ್ಷ ಜಾತ್ರೆಯಲ್ಲಿ ನಾನು ಪುಟ್ಟ ಮಣ್ಣಿನ ಕುಡಿಕೆ ಕೊಂಡಿದ್ದೆ. ಕಟ್ಟಿಗೆಯ ಆಟದ ಸಾಮಾನಿನ ಡಬ್ಬಿ ಕೊಂಡಿದ್ದೆ. ಅವತ್ತು ಕೊಂಡಿದ್ದ ಪುಗ್ಗ (ಬಲೂನು), ಗಿರಿಗಿಟ್ಲೆ ಮನೆಗೆ … Read more

‘ಐ ಡೊಂಟ್ ಕೇರ್ ಅನ್ನೋದಕ್ಕೂ ಮೊದಲು’: ಮಧುಕರ್ ಬಳ್ಕೂರ್

“ಐ ಡೊಂಟ್ ಕೇರ್, ನನ್ನ ಲೈಪು ನನ್ನ ಇಷ್ಟ, ನಾನು ಯಾರನ್ನು ಕೇರ್ ಮಾಡೋಲ್ಲ” ಹಾಗಂತ ಬೆಳಿಗ್ಗೆ ಜೋಶ್ ನಲ್ಲಿ ಎದೆ ಉಬ್ಬಿಸಿ ಹೊರಟು ಸಂಜೆ ಆಗೋ ಹೊತ್ತಿಗೆ “ನನ್ನನ್ನ ಯಾರೂ ಅರ್ಥಾನೆ ಮಾಡ್ಕೊತಾ ಇಲ್ಲವಲ್ಲ” ಅಂತಾ ಅನಿಸೋಕೆ ಶುರುವಾದ್ರೆ ಅವರದು ಮೊಸ್ಟ್ ಕನ್ಪ್ಯೂಶಿಯಸ್ ಸ್ಟೇಜ್. ಮೀಸೆ ಮೂಡುವಾಗ ದೇಶ ಕಾಣೊದಿಲ್ಲ. ಬೇಕೆಂದಾಗ ಕಡ್ಲೆಕಾಯಿ ಸಿಗೋದಿಲ್ಲ ಅನ್ನೋ ಹಾಗೆ ಮೀಸೆ ಮೂಡೊ ಪ್ರಾಯದಲ್ಲಿ ಈ ತರಹದ ತಲ್ಲಣಗಳು ಎದುರಾದರೆ ಅದು ಸಹಜವೆನ್ನಬಹುದು. ಅದರಂತೆ ರೆಕ್ಕೆ ಬಲಿತ ಹಕ್ಕಿ … Read more

ನಿಲುವಂಗಿಯ ಕನಸು (ಅಧ್ಯಾಯ ೧೦-೧೧): ಹಾಡ್ಲಹಳ್ಳಿ ನಾಗರಾಜ್

ಅಧ್ಯಾಯ ೧೦: ಕತ್ತೆಯ ಅಂಗಡಿ ಇನ್ನೇನು ನಾಳೆ ನಾಡಿದ್ದರಲ್ಲಿ ಅಪ್ಪಣಿ ಬಂದ್‍ಬಿಡ್ತಾನೆ. ಈ ಸರ್ತಿ ಒಂದ್ ನಾಲ್ಕು ದಿನ ಇಟ್ಟುಕೊಂಡು ಬೇಲಿ, ಮೆಣಸಿನ ಪಾತಿ, ನೀರಿನ ಗುಂಡಿ ಎಲ್ಲಾ ಮಾಡಿಸಿಕೊಂಡೇ ಕಳಿಸ್ಬೇಕು… ಹತಾರ ಎಲ್ಲಾ ಹೊಂದಿಸಿ ಇಟ್ಗಳಿ. ನಿಮಗೇನು, ಕೋಲ್ ತಗಂಡು ದನಿನ ಹಿಂದುಗಡೆ ಹೊರಟು ಬಿಡ್ತೀರಿ. ಗುದ್ದಲಿ ಕೆಲಸ ಎಲ್ಲಾನೂ ನಾನೇ ಮಾಡಕ್ಕಾಗುತ್ತಾ…ಸೀತೆಯ ಗೊಣಗಾಟ ನಡೆದಿತ್ತು.ರಾತ್ರಿಯ ಊಟ ಮುಗಿಸಿ ದಿಂಬಿಗೆ ತಲೆಕೊಟ್ಟ ಚಿನ್ನಪ್ಪನಿಗೆ ಮಾಮೂಲಿನಂತೆ ಕೂಡಲೇ ನಿದ್ದೆ ಹತ್ತಲಿಲ್ಲ.‘ಸೀತೆ ಹೇಳುವುದು ಸರಿ. ಎಲ್ಲಾ ಹತಾರ ಹೊಂದಿಸಿಕೊಳ್ಳಬೇಕು. … Read more