ಬದುಕಿಗೆ ಗುರಿ – ಗುರುವಿನ ಸಾಂಗತ್ಯವಿರಲಿ: ಮಧು ಕಾರಗಿ, ಕೆರವಡಿ
ತಮ್ಮ ಮಕ್ಕಳು ವಿದ್ಯಾವಂತರಾಗಲಿ ಎನ್ನುವುದು ಪ್ರತಿ ತಂದೆತಾಯಿಯ ಮನದಾಳದ ಮಾತು ಹಾಗೆಯೇ ಅವರು ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ .ತಮಗೆ ಬಡತನವಿದ್ದರೂ ಕೂಲಿ ಮಾಡಿ ದುಡಿದು ಮಕ್ಕಳನ್ನು ಓದಿಸುವ ಎಷ್ಟೋ ತಂದೆ ತಾಯಂದಿರಿದ್ದಾರೆ . ಇಂದಿನ ತಂತ್ರಜ್ಞಾನದ ದಿನಮಾನದಲ್ಲಿ ಅಶಿಕ್ಷಿತನೊಬ್ಬ ಬದುಕು ನಡೆಸುವುದು ಕಷ್ಟಸಾಧ್ಯ ಆದ್ದರಿಂದಲೇ ಶಿಕ್ಷಣ ಬದುಕಿನ ಅವಿಭಾಜ್ಯ ಅಂಗವಾಗಿದೆ” ಜೀವನವೇ ಶಿಕ್ಷಣ ; ಶಿಕ್ಷಣವೇ ಜೀವನ ” ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದಾರೆ . ಬಾಲ್ಯದಲ್ಲಿ ದೊಡ್ಡವರು ಯಾರಾದರೂ ನೀನು ದೊಡ್ಡವನಾ/ಳಾದರೆ ಮುಂದೆ ಏನಾಗಬಯಸುತ್ತಿ ಎಂದು … Read more