ಅಂತರಾಷ್ಟ್ರೀಯ ಸಿನಿಮೋತ್ಸವ ಹಾಗೂ ನಾ ಮೆಚ್ಚಿದ ಸಿನೆಮಾಗಳು: ಮಂಸೋರೆ
ಸಿನೆಮಾ ಜಗತ್ತೊಂದು ಅಕ್ಷಯ ಪಾತ್ರೆಯಿದ್ದಂತೆ. ಇಲ್ಲಿ ಎಷ್ಟೇ ಬಗೆದರೂ ಮತ್ತಷ್ಟು ತುಂಬಿಕೊಳ್ಳುತ್ತದೆ. ಜಗತ್ತನ್ನು ಸಿನೆಮಾ ಮಾಧ್ಯಮ ಆವರಿಸಿರುವ ಪರಿ ಹಾಗಿದೆ. ಬೇರೆಲ್ಲಾ ಅಭಿವ್ಯಕ್ತಿ ಮಾಧ್ಯಮಗಳಿಗಿಂತ ವೇಗವಾಗಿ ತನ್ನನ್ನು ತಾನು ಪುನರ್‌ವಿಮರ್ಶಿಸಿಕೊಂಡಿರುವ ಮಾಧ್ಯಮವೆಂದರೆ ಅದು ಸಿನೆಮಾ ಮಾತ್ರ. ಹಾಗಾಗಿಯೇ ಜಗತ್ತಿನ ಅಷ್ಟೂ ಇತಿಹಾಸವನ್ನು ತನ್ನೊಳಗಿನಿಂದ ಅಭಿವ್ಯಕ್ತಿಗೊಳಿಸುತ್ತಾ ಸಾಗುತ್ತಿದೆ. ಹಾಗಾಗಿ ಇದು ಜಗತ್ತಿನೊಳಗಿನ ಬಹುಮುಖಿ ಸಂಸ್ಕೃತಿಯಂತೆ ತನ್ನ ಅಭಿವ್ಯಕ್ತಿಯ ವ್ಯಾಪ್ತಿ, ಆಶಯ, ಆಸ್ಥೆಗಳಲ್ಲೂ ವಿಭಿನ್ನ ಹಾದಿಯಲ್ಲಿ ಸಾಗುತ್ತಿದೆ. ಜಗತ್ತಿನ ಕೆಲವು ಭಾಗಗಳಿಗೆ ಸಿನೆಮಾ ಒಂದು ಸಮಯ ಕಳೆಯಲು ಮನರಂಜನಾ ಮಾಧ್ಯಮವಾಗಿ … Read more