editor
ಐಪಿಎಲ್‌ನ ಕೊಬ್ಬಿದ ಕಾಡುದನಗಳು ಮತ್ತು ಹೆನ್ರಿ ಒಲಾಂಗೋ:ವಿ.ಆರ್.ಕಾರ್ಪೆಂಟರ್
ಸುಮಾರು ಹತ್ತು ವರ್ಷಗಳ ಮಾತು. ಶಾರ್ಜಾದಲ್ಲಿ ನಡೆದ ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಭಾರತದ ದೇವಮಾನವ ಬ್ಯಾಟ್ಸ್‌ಮನ್ ಸಚಿನ್‌ನ ಯಾವ ತಂತ್ರಕ್ಕೂ ದಾರಿ ಮಾಡಿಕೊಡದೆ ಬೇಲ್ಸ್ ಎಗರಿಸಿದ, ದ್ರಾವಿಡ್‌ನ ಗೋಡೆಗೆ ತೂತು ಹೊಡೆದ, ಬಾಲಂಗೋಚಿಗಳ ತಲೆ ಸವರಿಹಾಕಿದ ಒಲಾಂಗೋನನ್ನು ಹುಡುಕಲು ಅಲ್ಲಿನ ಸರ್ವಾಧಿಕಾರಿ ಸರ್ಕಾರ ಏಳುವರ್ಷಗಳ ಹಿಂದೆಯೇ ಗುಪ್ತಚರ ಸಂಸ್ಥೆಯೊಂದಕ್ಕೆ ಸುಪಾರಿ ನೀಡಿತ್ತು! ಈ ಒಲಾಂಗೋ ಕಗ್ಗತ್ತಲ ಖಂಡ ಆಫ್ರಿಕಾದ ಕಾಡಿನ ಜಿಂಬಾಬ್ವೆಯ ಕುಗ್ರಾಮದವನು. ಬಡತನದ ದಿನಗಳಲ್ಲೇ ಹಾಡುಗಾರನಾಗಿ ರೂಪುಗೊಂಡು ರೋಡ್‌ಶೋಗಳನ್ನು ಕೊಡುತ್ತಲೇ, ನೀಗ್ರೋ ಜಾನಪದೀಯ … Read more
ಪಂಜು ಚುಟುಕ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕೃಷ್ಣಮೂರ್ತಿ ಎನ್. ಅವರ ಚುಟುಕಗಳು
ಮುಂಜಾವದ ರವಿಯೆನ್ನ ರೆಪ್ಪೆಕದವ ತೆರೆಸಿದ ನಿನ್ನ ಎದುರು ನಿಲಿಸಿ ಪ್ರೀತಿಗೆ ಹೊಸಭಾಷ್ಯವ ಬರೆಸಿದ ರೆಂಬೆ ಮೇಲೆ ಚೆಂದ ಹಕ್ಕಿ ಮಾಡಿತೆಂಥ ಮೋಡಿ ನಿನ್ನ ನೆನಪ ತರಿಸಿತೆನಗೆ ನಿನ್ನಂತೆಯೇ ಹಾಡಿ ಹರಿವನದಿಯ ಪುಟ್ಟಮೀನು ಬೀಸಿ ರೆಕ್ಕೆ ಸದ್ದು ನೀನು ಮುಗುಳ್ನಕ್ಕ ಕ್ಷಣದಿ ಗುಳಿಗೆನ್ನೆ ತುಂಬ ಮುದ್ದು ನಿನ್ನ ಚೆಲ್ವಿಗೆ ಸಾಟಿಯೆಲ್ಲಿ ಕೊಂಚ ಕಮ್ಮಿಯೇ ತಾವು ಎನುತ ನಾಚಿವೆ ಹಸಿರಿನೆದೆಯೊಳು ಅರಳಿ ಮೊಗ್ಗು ಹೂವು ಬಯಕೆ ಬಿಸಿಗೆ ಕೆಂಪೇರಿದಧರ ಸಂಜೆ ರವಿಯ ತಂಪ್ಸುಡು … Read more
ಹೀಗೊಂದು ಕನಸು: ಶ್ರೀಧರ
ಅಂದೊಂದು ಸುಡುಬಿಸಿಲಿನ ಮಧ್ಯಾಹ್ನ, ಭಾರವಾದ ಹೆಜ್ಜೆ ಹಾಕುತ್ತಾ, ಹೆಗಲಲ್ಲೊಂದು ಬ್ಯಾಗು, ಮೈತುಂಬಾ ಬೆವರು, ಸುಸ್ತೊ ಸುಸ್ತು. ಸಾಕು ಸಾಕಾಗಿ ಹೋಗಿತ್ತು. ಫುಟ್ ಪಾತ್ ಮೇಲೂ ಮೈಮೆಲೇ ಬೀಳುವ ದ್ವಿಚಕ್ರ ವಾಹನಗಳಿಂದ ಹೇಗೊ ತಪ್ಪಿಸಿಕೊಂಡು, ಅವರಿಗೊಂದಿಷ್ಟು ಹಿಡಿ ಶಾಪ ಹಾಕಿ ಅಂತು ಬಂದು ಸೇರಿದೆ ಬಿಎಂಟಿಸಿ ಬಸ್ ಸ್ಟಾಪು. ಆಗೊಮ್ಮೆ ಈಗೊಮ್ಮೆ ಬರುವ ಬಸ್, ಬಂದರೂ ಜನ್ನರನ್ನು ಹೊತ್ತಿ ತುಂಬಿ ತುಳುಕುತ್ತಿತ್ತು. ಕಾದು ಕಾದು ಕೈಗೆತ್ತಿಕೊಂಡೆ ಒಂದು ಸಿಗರೇಟು. ನೆತ್ತಿಯ ಮೇಲಿಂದ ಜಾರಿ ಮೈಯಲ್ಲೆಲ್ಲಾ ಕಚಗುಳಿ ಇಡುತ್ತಾ … Read more
ಒಂದ್ ರೂಪಾಯ್ ಕೊಡವ್ವ ಸೇಂದಿ ಕುಡಿಯಾಕೆ: ಡಾ. ಗವಿ ಸ್ವಾಮಿ
ನಾನು ಕಂಡ ಕೆಲವು ವ್ಯಕ್ತಿಗಳ ಬಗ್ಗೆ ಬರೆಯಬೇಕೆನಿಸುತ್ತಿದೆ. ನನಗೆ ಇಂಥವರೇ ನೆನಪಿನಲ್ಲುಳಿಯುತ್ತಾರೆ. ಇವರನ್ನು ನೆನೆವಾಗ ನನ್ನ ನೆಚ್ಚಿನ ಲೇಖಕ ಆಂಟನ್ ಚೆಕೊವ್ ನೆನಪಾಗುತ್ತಾನೆ. ಆತ ಮಾತೃ ಹೃದಯದ ಬರಹಗಾರ.ತನ್ನ ಪಾತ್ರಗಳನ್ನು ತಾಯಿಯಂತೆ ಮುದ್ದು ಮಾಡುತ್ತಾನೆ. ಚೆಕೊವ್ ಬಳ್ಳಿಯಲ್ಲಿ ನಳನಳಿಸುತ್ತಿರುವ ಕುಸುಮಗಳನ್ನು ಮುಟ್ಟುವುದಿಲ್ಲ. ನೆಲದ ಮೇಲೆ ಬಿದ್ದಿರುವ, ದಾರಿಹೋಕರ ಪಾದಗಳಿಗೆ ಸಿಲುಕಿ ನಲುಗುತ್ತಿರುವ ಹೂಗಳನ್ನು ಆಯ್ದು ಅಪ್ಪಿಕೊಳ್ಳುತ್ತಾನೆ . ಕ್ಷಮಿಸಿ, ಚೆಕೊವ್ ನ ನೆನಪಾದಗಲೆಲ್ಲಾ I tend to get carried away. ನಾನು ಬರೆಯಬೇಕೆಂದಿರುವವರ … Read more
ಮೆರವಣಿಗೆ: ವೀರೇಂದ್ರ ರಾವಿಹಾಳ್
ಹಿರಿಗೌಡರ ಮಗನ ಮದುವೆಯ ಮೆರವಣಿಗೆಯು ಅತಿ ವೈಭವದಿಂದ ಸಾಗಿ ಹೊರಟಿತ್ತು. ಹೂವಿನಿಂದ ಅಲಂಕೃತವಾದ ರಥದಲ್ಲಿ ನವದಂಪತಿಗಳು ಯುವರಾಜ-ಯುವರಾಣಿಯರಂತೆ ಕಂಗೊಳಿಸುತ್ತಿದ್ದರು. ರಥದ ಮುಂದೆ ಕಿಕ್ಕಿರಿದ ಭಾರಿ ಜನಸಮೂಹ… ಹಿರಿಗೌಡರ ಸಂಬಂಧಿಗಳು, ಗೆಳೆಯರು, ಪುರಜನರು… ಹೀಗೆ ನಭದಲ್ಲಿ ತಾರೆಗಳ ದಿಬ್ಬಣವೇ ಹೊರಟಂತ್ತಿತ್ತು. ಎಡ-ಬಲದ ಉದ್ದಕ್ಕೂ ದೀಪಾಲಂಕೃತ ಸಾಲುಗಳು ಹಿರಿಗೌಡರ ಮಗನ ಮದುವೆಯ ವೈಭವವನ್ನು ಸಾರಿ ಹೇಳುತ್ತಿದ್ದವು. ಮೆರವಣಿಗೆಯ ಮುಂಚೂಣಿಯಲ್ಲಿ ಬೆಂಗಳೂರು ಬ್ಯಾಂಡ್‌ನ ಸಿನಿಮಾ ಹಾಡು ಭರ್ಜರಿಯಾಗಿ ಸಾಗಿತ್ತು. ಇಡೀ ಊರಿಗೆ ಇದೊಂದು ಉತ್ಸವವೆನಿಸಿತ್ತು. ಕೆಲವು ಜನ ಇದನ್ನೆಲ್ಲಾ ನೋಡಿದ್ರೆ … Read more
ನಂ ಸಾಗರ ಜಾತ್ರೆ:ಪ್ರಶಸ್ತಿ ಬರೆವ ಅಂಕಣ
ನಮ್ಮುರು ಸಾಗರ. ಇಲ್ಲಿ ಪ್ರತೀ ವರ್ಷ ನಡೆಯೋ ಗಣಪತಿ ಜಾತ್ರೆ ಇಲ್ಲಿನ ವಿಶೇಷ. "ಶ್ರೀ ಮಹಾಗಣಪತಿ ಮಹಾಸ್ಯಂದನ ರಥೋತ್ಸವ" ಅಂತ ಅದರ ಪೂರ್ಣ ಹೆಸರು. ಹೆಸರಲ್ಲಿ ಮಾತ್ರ "ಮಹಾ" ಇದೆ, ಇದೇನ್ ಮಹಾ ಅಂತಂದ್ಕೊಳ್ಬೇಡಿ. ಒಂದು ವಾರಕ್ಕಿಂತಲೂ ಹೆಚ್ಚು ನಡೆಯುವ ಈ ಜಾತ್ರೆ ಸಾಗರಿಗರ ಪಾಲಿಗೆ ಒಂದು ದೊಡ್ಡ ಹಬ್ಬದಂತೆಯೇ . ಯುಗಾದಿಯಾಗಿ ನಾಲ್ಕು ದಿನಕ್ಕೆ ಶುರುವಾಗೋ ಈ ಜಾತ್ರೆಗೆ ಯುಗಾದಿಗೆ ಮನೆಗೆ ಬಂದ ಮಕ್ಕಳು, ಅದಾದ ನಂತರ ಬರೋ ಶನಿವಾರವೋ, ಭಾನುವಾರವೋ ಸೇರೋ ದೂರದೂರಿನ … Read more
ಮೂವರ ಕವಿತೆಗಳು:ಸಚಿನ್ ನಾಯ್ಕ್, ಮಮತಾ ಕೀಲಾರ್, ಸಂದೀಪ್ ಫಡ್ಕೆ
ಮುಸ್ಸಂಜೆಯ ಮರುಕ ಉಸಿರಲ್ಲಿನ ಹಸಿವು ನೀಗಿಸಲಾಗದು ಜೀವ ಜೈತ್ರ ಯಾತ್ರೆ ಮುಗಿಯುವ ತನಕ. ಆದರೆ, ಇಂದು-ನಿನ್ನೆಗಳು ತೋರಿದ ಅಸಹನೆಗೆ ಅಂಜಿ, ನಾಳೆಯೆನ್ನುವ ಕನಸು ಮುರಿದು ಬಿದ್ದಿದೆ. ಇಟ್ಟ ದಿಟ್ಟ ಹೆಜ್ಜೆಗಳೇ ಸಮೀಕರಿಸುತ್ತಿವೆ ರತ್ನಗಂಬಳಿಯ ರಹದಾರಿ, ನಾ ಬಲ್ಲದ ನಾಡಿಗೆ ! ಸೋತು ಸುಣ್ಣವಾದ ತನು-ಮನಗಳ ವಿನಂತಿಗೆ ನೆರವಾಗುವವರು ಕಾಣುತ್ತಿಲ್ಲ. ಇಳಿ ಹೊತ್ತು,ಇಳಿ ವಯಸ್ಸಿಗೆ ಲೇವಡಿ ಮಾಡುತ್ತಿದೆ, ಅಟ್ಟಹಾಸದ ನಗು ಬೀರುತ್ತಿದೆ, ನಾನಿಲ್ಲದ ತೇದಿಗೆ ಕಾತರಿಸುತ್ತಿರುವಂತಿದೆ. ಸೂರ್ಯ ರಶ್ಮಿಗೆ ಮೈಯೊಡ್ಡುವ ನವಜಾತ ಶಿಶುಗಳ ಕಂಡಾಗ ಒಂದೇ … Read more
ನವೀನ ಕಹಾನಿ: ನವೀನ್ ಮಧುಗಿರಿ
ಜವಾಬ್ದಾರಿ ಅವನಿಗಿದ್ದದ್ದು ಅವಳೊಬ್ಬಳೇ ಅಕ್ಕ. ತಂದೆ-ತಾಯಿ ಇಲ್ಲದವನನ್ನು, ಅಕ್ಕನೇ ತಂದೆ ತಾಯಿಯಂತೆ ಸಾಕಿ ಸಲಹಿದಳು. ಜೊತೆಗೆ ಓದಿಸಿದಳು. ಅವನಿಗಿದ್ದ ಆಸೆಯೆಂದರೆ- 'ಅಕ್ಕ ನನಗಾಗಿ ಎಷ್ಟೋಂದು ಕಷ್ಟಪಟ್ಟಿದ್ದಾಳೆ? ಕಷ್ಟದ ನೆರಳೂ ಕೂಡ ನನ್ನನ್ನು ಹಿಂಬಾಲಿಸದಷ್ಟು ಸುಖವಾಗಿ ಬೆಳೆಸಿದ್ದಾಳೆ. ನಾನೂ ಕೂಡ ಕೆಲಸಕ್ಕೆ ಹೋಗುತ್ತಿದ್ದಂತೆಯೇ, ಅಕ್ಕನನ್ನು ಸುಖವಾಗಿ ನೋಡಿಕೊಳ್ಳಬೇಕು. ಒಳ್ಳೆಯ ಅನುಕೂಲಸ್ಥರ ಮನೆಗೇ ಅಕ್ಕನನ್ನು ಸೊಸೆಯಾಗಿ ಕಳಿ ಸಬೇಕು.' ಅವನಂದುಕೊಂಡಂತೆಯೇ ಒಳ್ಳೆಯ ಕೆಲಸವೂ ಸಿಕ್ಕಿತು. ಉತ್ತಮ ಮನೆತನದ ಸಭ್ಯಸ್ಥ ಹುಡುಗನೊಂದಿಗೇ ಅಕ್ಕನ ಮದುವೆಯನ್ನೂ ಮಾಡಿ ಮುಗಿಸಿದ. ಆಗವನ ಗೆಳೆಯ ಹೇಳಿದ- 'ಅಂತೂ ನೀನಂದುಕೊಂಡಂತೆ … Read more
ಮರಣ ಬಾವಿಯೊಳಗೆ ಬದುಕು ಕಟ್ಟಿಕೊಂಡವನ ಕಥೆ: ಶರತ್ ಹೆಚ್. ಕೆ.
ಬಾವಿ ಆಕಾರದ ಮೃತ್ಯುಕೂಪ. ಅದರೊಳಗೆ ಶರವೇಗದಲ್ಲಿ ಚಲಿಸುವ ಬೈಕು-ಕಾರುಗಳು. ಜೀವ ಪಣಕ್ಕಿಟ್ಟು ಬೈಕು-ಕಾರಿನ ಮೇಲೆ ಕಸರತ್ತು ಮಾಡುತ್ತ ನೋಡುವ ಕಣ್ಣುಗಳಿಗೆ ಬೆರಗಿನ ಗುಳಿಗೆ ಉಣಿಸುವ ಹುಡುಗರು. ಮೃತ್ಯುಕೂಪದ ಮೇಲ್ತುದಿಯಲ್ಲಿ ನಿಂತು ನೋಡುತ್ತಿರುವ ಯಾವನೋ ಕೈಯಲ್ಲಿ ನೋಟು ಹಿಡಿದರೆ, ಕಸರತ್ತು ಮಾಡುತ್ತಲೇ ನೋಟು ಕಸಿದು ಬಾಯಿಗಿಟ್ಟುಕೊಳ್ಳುವ ಆ ಪರಿ… ಅರೆ ಕ್ಷಣ ಎಚ್ಚರ ತಪ್ಪಿದರೂ ಬದುಕಿಗೆ ಪೂರ್ಣವಿರಾಮ ಇಟ್ಟುಕೊಂಡಂತೆ. ಮರಣ ಬಾವಿಯೊಳಗೆ ಬೈಕು ಚಲಾಯಿಸುವ ಹುಡುಗನೊಂದಿಗೆ ಆ ದಿನ ಮಧ್ಯಾಹ್ನವಷ್ಟೇ ಮಾತುಕತೆ ನಡೆಸಿದ್ದೆವು. ಅವನ ಹೆಸರು ಮಹಮ್ಮದ್ … Read more
ಅಳಿಯವಾಂತರಗಳು: ಜಯಪ್ರಕಾಶ ಅಬ್ಬಿಗೇರಿ
‘ಅಳಿಯ’ಎಂದೊಡನೆ ಅವನ ಬಗೆಗೆ ಕುತೂಹಲವಾಗುವುದುಂಟು. ಅಳಿಯ, ಅಳಿಯತನ, ಇವು ಸಂಸಾರಕ್ಕೆ ಸಂಬಂಧಿಸಿದ ಹೊಸ ಪದಗಳಲ್ಲದಿದ್ದರೂ ಕೂಡ ಈ “ಅಳಿಯ” ಎಂಬ ಪದದಲ್ಲಿ ಹೊಸ ಚೇತನ, ಹೊಸ ಕ್ರಿಯೆ, ಅಡಗಿದೆ ಎಂದೆನಿಸುತ್ತದೆ. ಈ ಅಳಿಯಂದಿರಲ್ಲಿ ಅನೇಕ ಪ್ರಕಾರಗಳುಂಟು. ಅಕ್ಕನ ಮಗ, ಹೆಂಡತಿಯ ತಮ್ಮ, ಮಗಳ ಗಂಡ, ಹೀಗೆ ಅನೇಕ ಅಳಿಯಂದಿರು ನಮಗೆ ಕಾಣಸಿಗುತ್ತಾರೆ. ಇನ್ನು ಕೆಲವರು ಮೊದಲು ಭಾವಿ ಅಳಿಯಂದಿರಾಗಿ ನಂತರ ಸ್ವಂತ ಅಳಿಯಂದಿರಾಗುವುದು ಸಾಮಾನ್ಯವಾಗಿದೆ. ಕೆಲವು ಭಾವಿ ಅಳಿಯಂದಿರು ಮದುವೆಗಿಂತ ಮೊದಲೇ ಬೋರಿಂಗ್ ಅಳಿಯರಾಗಿ ನಂತರ ಸ್ವಂತ … Read more
ಆಸ್ಥಾ: ನನ್ನ ಮೆಚ್ಚಿನ ರೇಖಾಳ ‘ಗೃಹಿಣಿ’ ಪಾತ್ರ:ವಾಸುಕಿ ರಾಘವನ್
ನಿಮ್ಮ ಡ್ರೀಮ್ ಪಾತ್ರ ಯಾವುದು ಅಂತ ನಟಿಯರನ್ನ ಕೇಳಿ ನೋಡಿ. ಶರಪಂಜರದಲ್ಲಿ ಕಲ್ಪನಾ ಮಾಡಿದ ಪಾತ್ರ ಅಂತಾರೆ. ಇಲ್ಲ ಅಂದ್ರೆ ಜೀವನದಲ್ಲಿ ತುಂಬಾ ಕಷ್ಟ, ನೋವುಗಳನ್ನು ಅನುಭವಿಸೋ ದುರಂತ ಪಾತ್ರ ಅಥವಾ ಯಾವುದಾದರೂ ಪೌರಾಣಿಕ, ಐತಿಹಾಸಿಕ ಪಾತ್ರ ಅಂತಾರೆ. “ಥಿಯೇಟ್ರಿಕ್ಯಾಲಿಟಿ” ಗೆ ತುಂಬಾ ಅವಕಾಶ ಇರೋ ಪಾತ್ರಗಳೇ ಉತ್ತಮ ಪಾತ್ರಗಳು ಮತ್ತು ಆ ಪಾತ್ರಗಳಲ್ಲಿ ಅಭಿನಯಿಸಿದರೆ ಅದು ಆಟೋಮ್ಯಾಟಿಕ್ ಆಗಿ ಒಳ್ಳೆಯ ನಟನೆ ಅನ್ನೋ ತಪ್ಪು ಅಭಿಪ್ರಾಯ ಇದೆ. ನಿಜವಾಗಿ ತುಂಬಾ ಸವಾಲೊಡ್ಡುವ ಪಾತ್ರ ಅಂದರೆ … Read more
ಆಕಾಲಿಕ ಮರಣನ್ನಪ್ಪಿದ ಸಾಹಿತಿ ಶ್ರೀಯುತ ರವಿಮುರ್ನಾಡುರವರ ಕುಟುಂಬಕ್ಕೆ ಅರ್ಥಿಕ ಸಹಾಯದ ಕೋರಿಕೆ
ಆತ್ಮೀಯರೇ , ಕಳೆದ 27 ಮಾರ್ಚ್ 2013 ರಂದು ಹಠಾತ್ ನಿಧನರಾದ ಕವಿ, ಲೇಖಕ ರವಿ ಮೂರ್ನಾಡ್ ಅವರು ಭಾರತಕ್ಕೆ ಬಂದು ನೆಲೆಸುವ ಕನಸು ಕೊನೆಗೂ ನನಸಾಗಲೇ ಇಲ್ಲ. ಇದೇ ಜೂನ್ ನಂತರ ಭಾರತಕ್ಕೆ ಬಂದು ನೆಲೆಸುವ ಇರಾದೆಯನ್ನು ತನ್ನ ಹಲವು ಆತ್ಮೀಯರೊಂದಿಗೆ ಹಂಚಿಕೊಂಡಿದ್ದ ರವಿ ತಾಯ್ನಾಡ ನೆಲವ ಮತ್ತೆ ತಲುಪುವ ಋಣವನ್ನು ಕಾಣದೇ ದೂರದ ಕ್ಯಾಮರೂನಿನಲ್ಲಿ ಅಸ್ತಂಗತರಾಗಿದ್ದು ವಿಪರ್ಯಾಸ, ವಿಧಿಯಾಟ. ತೀವ್ರ ಬಡತನದಲ್ಲಿದ್ದ ಕುಟುಂಬಕ್ಕೆ ಅವರೊಬ್ಬರೇ ಅಧಾರಸ್ತಂಭವಾಗಿದ್ದರು . ಪುಟ್ಟ ಕುಟುಂಬವೊಂದನ್ನು ಸಾಕಿ ಸಲಹುತ್ತಿದ್ದ … Read more
ಕವಲುದಾರಿ: ಹರ್ಷ ಮೂರ್ತಿ
ಸಂಜೆಯ ಜಿಟಿಪಿಟಿ ಮಳೆ ಹನಿಯುತ್ತಿತ್ತು. ರಸ್ತೆಯ ಗುಂಡಿಗಳೆಲ್ಲ ನೀರು ತುಂಬಿ ಸಮೃದ್ಧವಾಗಿದ್ದವು, ಅವು ಮೋಟಾರು ವಾಹನಗಳ ಬರುವಿಕೆಗೆ ಕಾಯುತ್ತ ಕೆಸರೆರೆಚಾಟಕ್ಕೆ ಸನ್ನದ್ಧವಾಗಿದ್ದವು. ಗಿಡಮರಗಳೆಲ್ಲವೂ ಮಳೆಯಲ್ಲಿ ತೊಯ್ದು ಹಸುರಿನಿಂದ ಕಂಗೊಳಿಸುತ್ತಿದ್ದವು. ರಸ್ತೆಯಲ್ಲಿ ಜನಸಂಚಾರ ಬಹಳ ವಿರಳವಾಗಿತ್ತು. ಅಲ್ಲೊಂದು ಓಬಿರಾಯನ ಕಾಲದ ಮುರುಕಲು ಬಸ್ ಸ್ಟಾಪ್. ಊರಿಗೆ ಹೊಸ ರಸ್ತೆ ಬಂದ ಮೇಲೆ ಈ ರಸ್ತೆಯಲ್ಲಿ ಊರಿನವರ ಕೆಲ ವಾಹನಗಳ ಬಿಟ್ಟರೆ ಬಸ್ಸುಗಳಾವುವೂ ಓಡುತ್ತಿರಲಿಲ್ಲ. ಹೀಗಾಗಿ ಆ ಬಸ್ ಸ್ಟಾಪನ್ನು ಕೇಳುವರಾರೂ ಇಲ್ಲದೆ ಅವಸಾನದತ್ತ ಸಾಗಿತ್ತು. ಅದೇ ಬಸ್ … Read more
ಪಂಜು ಚುಟುಕ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಮಂಜುನಾಥ್ ಪಿ. ಅವರ ಹನಿಗವಿತೆಗಳು
ಖುಷಿ ಸಂಜೆ ಸೂರ್ಯನ ಹೆಣದ ಮೆರವಣಿಗೆ ಸಾಗುವಾಗ ಬಾನ ಬೀದಿಯೊಳಗೆ ದುಡಿವ ಜನರ ಗೂಡುಗಳ ದೀಪಗಳಿಗೆ ಉಸಿರು ದಕ್ಕಿ ಪಿಸುಗುಟ್ಟಿ ನಸುನಗುತಾವೆ ಒಳಗೊಳಗೆ. ಬದುಕು ದುಡಿಯುವ ಜನರ ಸುಖವು ಕನಸಿನ ತರಹದ್ದು; ಸಂಕಟಗಳ ನತದೃಷ್ಟ ಬದುಕುಗಳಿಗೋ ಹಸಿವಿನ ಸರಹದ್ದು. ಸಹನೆ ದುಡಿವ ಜನರನ್ನು ನೀವು ಬಿರುಬಿಸಿಲ ಬೆಂಕಿಯಲ್ಲಿ ದಹಿಸಿದರೂ ಸಹಿಸುತ್ತಾರೆ; ಮುಂದೊಮ್ಮೆ ನೀವೇ ಸುರಿಸುವ ಪ್ರೀತಿ ಮಳೆಗೆ ತೆರೆದುಕೊಳ್ಳುವ ನೆಲವೇ ಆಗುತ್ತಾರೆ! ಸ್ಪಷ್ಟ ಓ ಸೂರ್ಯ, ದುಡಿವ ಜನರ ನೆತ್ತಿಯ ಸುಡುವುದೆಂದರೆ ಯಾಕೆ ನಿನಗೆ ಇಷ್ಟ? ನೀನು … Read more
ಬೆಂಕಿಗೆ ಕೈ ಹಾಕಬಾರದು ಸುಡುತ್ತದೆ ಅಂತ ನಾವಂದರೆ…: ಡಾ. ಗವಿ ಸ್ವಾಮಿ
ಹಿರಿಯ ಮಿತ್ರರಾದ ಡಾಕ್ಟರ್ .ನಟರಾಜು SM ರವರ ಪುಸ್ತಕ ‘ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ ಮತ್ತು ಖುಷಿ ನಗರಿಯ ಅವನ ನಲ್ಮೆಯ ಗೆಳತಿಯೂ ‘ ವನ್ನು ಓದಿ ಮುಗಿಸಿದೆ. ಆಶ್ಚರ್ಯವಾಯಿತು ಎಂದರೆ ಸುಳ್ಳಾಗುತ್ತದೆ. ಏಕೆಂದರೆ ಅವರ ಪ್ರತಿಭೆಯ ಝಲಕನ್ನು ಕಾಲೇಜಿನಲ್ಲೇ ನೋಡಿದ್ದೆ. ಕಥೆ, ಕಾದಂಬರಿ, ಆತ್ಮಕಥೆ, ಕವಿತೆ ಇವ್ಯಾವುದರಚೌಕಟ್ಟಿಗೂ ನಿಲುಕದ ಒಂದು ಹೊಸ ಪ್ರಯೋಗ. ಗೆಳೆಯ -ಗೆಳತಿಯ ಪಾತ್ರಗಳು ಕಾಡುತ್ತವೆ. ಮಾದರಿ ಸ್ನೇಹವೆಂದರೆ ಇದೇ ಇರಬಹುದಾ ಅನಿಸುತ್ತದೆ. ಗೆಳತಿ ವಯಸ್ಸಿಗೂ ಮೀರಿದ ಜೀವನಾನುಭವನ್ನುಳ್ಳವಳು. ಗಟ್ಟಿಗಿತ್ತಿ. ಆಕೆಯ … Read more
ಸಂಬಂಧ ಸಂದೇಶಗಳ ಸಂಬಂಧ: ಪ್ರಶಸ್ತಿ ಪಿ.
ಕಾಳಿದಾಸನ ಮೇಘಸಂದೇಶದಿಂದ ಹಿಡಿದು ಮಾಡರ್ನ್ ಚಾಟಿಂಗಿನಿಂದ ಶುರುವಾದ ಸ್ನೇಹ,ಪ್ರೇಮಗಳವರೆಗೆ ಬಂಧಗಳ ಬೆಸುಗೆಯಲ್ಲಿ ಸಂದೇಶಗಳದ್ದೊಂದು ಪಾತ್ರ ಇದ್ದೇ ಇದೆ. ಎದುರಿಗೆಷ್ಟೇ ಕಿತ್ತಾಡಿದರೂ, ಹೇಳಲಾಗದಿದ್ದರೂ , ಮಾತೇ ಬಿಟ್ಟಿದ್ದರೂ ಯಾವಾಗಲೋ ಕಳಿಸಿದ ಫಾರ್ವರ್ಡ್ ಮೆಸೇಜು ಮತ್ತೆ ಮುರಿದ ಸಂಬಂಧಗಳ ಬೆಸೆದಿದ್ದಿದೆ. ವರ್ಷಗಳವರೆಗೂ ಕಾಡದಿದ್ದವರು ಟ್ರಂಕು ಖಾಲಿ ಮಾಡುವಾಗ ಸಿಕ್ಕ ಮಾಸಿದ ಪತ್ರದಿಂದ ನೆನಪಾಗಿದ್ದಿದೆ. ವರ್ಷಗಳ ಸಾಥಿ ಬೇರ್ಪಡುವಾಗ ಕಳುಹಿಸಿದ "ಮಿಸ್ ಯೂ" ಎಂಬ ಎರಡೇ ಪದದ ಸಂದೇಶ ಎಷ್ಟೋ ಸಮಯ ಕಾಡಿ , ಅಳಿಸಿದ್ದಿದೆ. ಹಲಕಾರಣಗಳಿಂದ ಹಳಸುತ್ತಿರುವ … Read more
ಪ್ರೇಮ ಪತ್ರ: ಗಣೇಶ್ ಖರೆ
ನವೀನ ಮೇಘನಳ ಪರಿಚಯ ಸುಮಾರು ಆರೇಳು ವರ್ಷಗಳಷ್ಟು ಹಳೆಯದು. ಕಾಲೇಜಿನಿಂದ ಹಿಡಿದು ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿದ್ದವು ಇಬ್ಬರು ಜೊತೆಗಿದ್ದು. ನಿಷ್ಕಲ್ಮಶ ಸ್ನೇಹ ಇಬ್ಬರದು. ಇವರಿಬ್ಬರ ಸ್ನೇಹ ನೋಡಿ ಅಸೂಯೆಪಡದವರಿಲ್ಲ. ನಸುಗೆಂಪು ಬಣ್ಣದ ಉತ್ತಮ ಮೈಕಟ್ಟಿನ ಮಧ್ಯಮ ವರ್ಗದ ಸೀದಾ ಸಾದಾ ಹುಡುಗ ನವೀನ, ಹಾಲ್ಗೆನ್ನೆಯ ಎಲ್ಲರ ನೋಟವನ್ನ ಒಮ್ಮೆಲೇ ತನ್ನೆಡೆಗೆ ಸೆಳೆಯುವ ಶ್ರೀಮಂತರ ಮನೆಯ ಹುಡುಗಿ ಮೇಘನ, ಆದರೂ ಮನೆಯ ಶ್ರೀಮಂತಿಕೆ ಅವಳ ಸ್ವಭಾವದಲ್ಲಿರಲಿಲ್ಲ, ಬಹುಷಃ ಇದೆ ಕಾರಣವಿರಬೇಕು ಇವರಿಬ್ಬರ ಸ್ನೇಹ ಇಷ್ಟು ಗಟ್ಟಿಯಾಗಿರಲು. … Read more