ಅಬಲೆ ಮಂಜುಳಾ: ರುಕ್ಮಿಣಿ ಎನ್.

ಸಂಜೆ ಆರೂ ಮುಕ್ಕಲಾಗಿತ್ತು. ಮಂಜುಳಾಳ ಅತ್ತೆ ಟಿ.ವಿಯಲ್ಲಿ ಚರಣದಾಸಿ ಸಿರಿಯಲ್ ನೋಡುತ್ತಿದ್ದಳು. ಮಂಜುಳಾ, ಸಂಜೆಯಾಯ್ತು. ಕಸ ಗುಡಿಸಿ, ಅಂಗಳಕೆ ನೀರು ಹಾಕಿ ದೀಪ ಹಚ್ಚು ಎಂದು ಕೂಗುತ್ತಿದ್ದರು. ಆ ದೊಡ್ಡದಾದ ಧ್ವನಿ ಕೇಳಿ ಕಪ್ಪು ಮೋಡದಂತೆ ಹೆಪ್ಪುಗಟ್ಟಿದ್ದ ಮಂಜುಳಾಳ ದುಃಖದ ಕಟ್ಟೆಯೊಡೆದು ಬಿಟ್ಟಿತ್ತು.  ಕಿಟಕಿಯ ಪಕ್ಕ ಕೂತು ಆ ಕಪ್ಪು ಮೋಡವನ್ನೇ ದಿಟ್ಟಿಸುತಿದ್ದ ಅವಳ ಕಣ್ಣುಗಳಿಂದ ಗಂಗೆ ಹರಿಯುತ್ತಲೇ ಇದ್ದಳು.  ಗಂಟಲೆಲ್ಲ ಕಟ್ಟಿ ಹೋಗಿತ್ತು. ಕೂಗಿದರೂ ಓಗೊಡದಿರುವಷ್ಟು ಆಕೆ ಕುಗ್ಗಿ ಹೋಗಿದ್ದಳು. ಅಂತಾಹದೇನಾಗಿತ್ತು ಅವಳಿಗೆ ಅಂತೀರಾ? ಬನ್ನಿ, … Read more

ನಾಟಕಕಾರರಾಗಿ ಕುವೆಂಪು (ಭಾಗ-12) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ರಂಗಾಸಕ್ತ ಓದುಗಪ್ರಭುಗಳೇ, ಸಿದ್ಧಾರ್ಥ ಬುದ್ಧನಾಗುವ ಮಹತ್ವದ ಮತ್ತು ಇಂದಿಗೂ ಆಕರ ಕೃತಿಯಾಗಿ ಶೋಭಾಯಮಾನವಾಗಿರುವ ‘ಮಹಾರಾತ್ರಿ’ ರಂಗಕೃತಿಯಲ್ಲಿ ವ್ಯಕ್ತಿತ್ವವೊಂದು ರೂಪಾಂತರವಾಗುವ ಮಹತ್ವದ ಕಥಾನಕದ ಹಿನ್ನಲೆಯಲ್ಲಿ ಮಹಾಕವಿಗಳು ತಮ್ಮ ಪ್ರಧಾನ ತಾತ್ವಿಕ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ರಾಜಕುಮಾರ ಸಿದ್ಧಾರ್ಥನ ಪಾತ್ರದ ಮೂಲಕ ‘ಜಗಕಾಗಿ ಕಣ್ಣೀರ ಸುರಿಸುವೆನು, ಅದಕಾಗಿ ಸತಿಗಾಗಿ ಕಂಬನಿಯ ಕರೆಯೆ, ಮುಂದೆದೆಯ ಬೆಣ್ಣೆಯನು ಮಾಡಿ, ಇಂದದನು ಕಲ್ಲಾಗಿ ಮಾಡಿ’ ಎಂದು ಹೇಳಿಸುತ್ತಾರೆ. ಇಲ್ಲಿ ಸಿದ್ಧಾರ್ಥನು ವೈಯಕ್ತಿಕ ಭೋಗಕ್ಕಿಂತ ಸಾಮಾಜಿಕ ಸಾಮೂಹಿಕ ಹಿತ ಮುಖ್ಯ ಎಂಬುದು ಬುದ್ಧದೇವನ ಮೂಲಮಂತ್ರವಾಗಿರುವಿಕೆಯನ್ನು … Read more

ಲಗೂನ ಕಲ್ಲ್ ತುಗೋಳ್ರೀ: ಗುಂಡೇನಟ್ಟಿ ಮಧುಕರ

ನಾನೀಗ ಭಾಷಣ ಮಾಡಲು ನಿಮ್ಮ ಮುಂದೆ ನಿಂತಿದ್ದೇನೆ. ಸಂಘಟಕರು ಕೇವಲ ಐದೇ ನಿಮಿಷದಲ್ಲಿ ಮಾತುಗಳನ್ನು ಮುಗಿಸಬೇಕೆಂಬ ಅತ್ಯಂತ ಕಠಿಣ ನಿಬಂಧನೆಯೊಂದನ್ನು ನನ್ನ ಮುಂದೆ ಇಟ್ಟಿದ್ದಾರೆ. ಆದರೂ ನಾನು ಒಪ್ಪಿಕೊಂಡು ವೇದಿಕೆ ಮೇಲೆ, ಮೈಕ್ ಮುಂದೆ ನಿಂತು ಮಾತನಾಡುವ  ಧೈರ್ಯ ಮಾಡುತ್ತಿರುವೆ. ಈಗ ನಾನು ನನ್ನ ಮನದಲ್ಲಿ ನನ್ನ ಮಡದಿಯನ್ನು ನೆನೆದು ಧೈರ್ಯ ತಂದುಕೊಳ್ಳುತ್ತೇನೆ. ಏಕೆಂದರೆ ನಾನು ಐದೇ ನಿಮಿಷದಲ್ಲಿ ತಯಾರಾಗಬೇಕೆಂದು  ಮಡದಿಗೆ ಹೇಳಿದಾಗ, ಯಾವದೇ ಉದ್ವೇಗಕ್ಕೊಳಗಾಗದೆ, ಮುಖದ ಮೇಲೆ ಯಾವುದೇ ಭಾವ ತೋರಿಸದೆ, ಸಹಜವಾಗಿಯೇ ಒಪ್ಪಿಕೊಂಡು ಒಳಗೆ … Read more

ನಾಗಾರಾಧನೆ-ತುಳುನಾಡ ವೈಶಿಷ್ಟ್ಯ: ಕಮಲಾ ಬೆಲಗೂರ್

ನಾಗಾರಾಧನೆ  ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ತುಳುನಾಡ ಸೀಮೆಯಲ್ಲಿ ನಾಗಮಂಡಲ ಪೂಜೆಗೆ ವಿಶೇಷ ಮಹತ್ವ. ಪುರಾಣದಲ್ಲಿ ಒಂದು ಕತೆಯಿದೆ. ಗರುಡನಿಗೂ ವಾಸುಕಿಗೂ ಬದ್ದ ಧ್ವೇಷ. ಗರುಡನಿಗೆ ಹೆದರಿ ವಾಸುಕಿ ಗುಹೆಯಲ್ಲಿ ಅಡಗಿ ಕುಳಿತು ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಆಗ ಶಿವನು ವಾಸುಕಿಗೆ ಅಭಯ ಹಸ್ತವನ್ನಿತ್ತು ತನ್ನ ಮಗನಾದ ಸುಬ್ರಮಣ್ಯನು ದುಷ್ಟ ನಿಗ್ರಹಕ್ಕಾಗಿ ಹುಟ್ಟಿ ಬರುವನೆಂದು, ಅವನ ಒಂದಂಶ ವಾಸುಕಿಯೊಂದಿಗೆ ಸೇರಿದಾಗ … Read more

ಮೂವರ ಕವಿತೆಗಳು: ಬಸವರಾಜ ಹೂಗಾರ್, ರಾಘವ್ ಲಾಲಗುಳಿ, ಉಷಾಲತಾ

ಜೋಗಿ ಜಂಗಮನ ಹಾದಿ  ಅಲ್ಲಿ ಕಂಡಾರೆಂದು ಇಲ್ಲಿ ಕಂಡಾರೆಂದು  ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸುತ್ತೇ ಸುತ್ತತಾನ ಮನುಷ್ಯರ ಹುಡುಕುವ ಮನುಷ್ಯ ಸುಡು ಬಿಸಿಲು ಉರಿಪಾದ ಕವ್ ನೆರಳು ಕರೆಬಳಗ ಕರುಳ ಬಳ್ಳಿಯ ಕಥೆಗೆ  ನೂರು ನಂಟು ಹೊಂಟನವ ಕಂಬಳಿಯ ಕೊಡವಿ ಹುಚ್ಚು ಹುಚ್ಚಿನ ಹಾಂಗ ಗಿಡ ತೊಗಟಿ ಬಳ್ಳಿ ಕಟ್ಟ್ಟಿ ಮನಸ ಮುಂದಿನೂರಿನ ಹಾದಿ  ಊರು ಮುಟ್ಟುವ ದಾರಿ. ಬಗಲ ಜೋಳಿಗೆ ಬಡಗಿ ಅಂದದ್ದು ಎಲ್ಲ ಖರೆ, ಕಟ್ಟಿ ಕೆಡಹುವ ಮನೆ ಮನಸು ಕಟ್ಟಿರೊ ಮೊದಲು ಮನಸು ಕಟ್ಟಿರೊ. … Read more

ಮೈಸೂರು ಹುಸೇನಿಯವರ ಪೇಪರ್ ಕಲಾಕೃತಿಗಳು

ಕಲಾವಿದ ಎಸ್.ಎಫ್. ಹುಸೇನಿ ಅವರು ಕಲಾವಲಯದಲ್ಲಿ ಮೈಸೂರು ಹುಸೇನಿ ಎಂದೇ ಚಿರಪರಿಚಿತರು. ತಂದೆ ಸಯ್ಯದ್ ಫೀರ್, ತಾಯಿ ಜೀನಾತ್‌ವುನ್ನಿಸಾ ಬೀ ರವರ ಮಗನಾಗಿ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂನಲ್ಲಿ ಜನಿಸಿದ ಇವರು ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸುವಂತಾಯಿತು. ಇವರು ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಪೈನ್ ಆರ್ಟ್ ಡಿಪ್ಲೊಮ ಮತ್ತು ಆರ್ಟ್‌ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ಪಡೆದಿದ್ದಾರೆ.  ಅವರ ವಿಶಿಷ್ಟ ಬಗೆಯ ಕಾಗದ … Read more

ಕನಸುಗಾರನ ಒಂದು ಸುಂದರ ಕನಸು: ನಟರಾಜು ಎಸ್. ಎಂ.

ಜನವರಿ ತಿಂಗಳ ಒಂದು ದಿನ ನಾಟಕವೊಂದನ್ನು ನೋಡಲು ಬರುವಂತೆ ಹುಡುಗನೊಬ್ಬ ಆಮಂತ್ರಣ ನೀಡಿದ್ದ. ಆ ದಿನ ಸಂಜೆ ಆರು ಗಂಟೆಗೆ ಜಲ್ಪಾಯ್ಗುರಿಯ ಆರ್ಟ್ ಗ್ಯಾಲರಿ ತಲುಪಿದಾಗ ಆ ಕಲಾಮಂದಿರವನ್ನು ನೋಡಿ ನಾನು ಅವಕ್ಕಾಗಿದ್ದೆ. ಆ ಪುಟ್ಟ ಊರಿನಲ್ಲಿ ಅಷ್ಟೊಂದು ದೊಡ್ಡ ಸುಸಜ್ಜಿತ ಕಲಾಮಂದಿರವಿರುವುದ ಕಂಡು ಖುಷಿ ಸಹ ಆಗಿತ್ತು. ಸುಮಾರು ಎಂಟುನೂರು ಜನ ಕೂರುವಷ್ಟು ಜಾಗವಿರುವ ಇಡೀ ಕಲಾಮಂದಿರ ಜನರಿಂದ ಕಿಕ್ಕಿರಿದು ತುಂಬಿತ್ತು. ಎಷ್ಟೋ ವರ್ಷಗಳ ನಂತರ ನಾಟಕವೊಂದನ್ನು ನೋಡಲು ಹೋಗಿದ್ದೆ. ನಾಟಕ ನೋಡುತ್ತಿದ್ದೇನೆ ಎಂಬ ಖುಷಿಯ … Read more

ಕೆಂಗುಲಾಬಿ (ಭಾಗ 2): ಹನುಮಂತ ಹಾಲಿಗೇರಿ

ನನ್ನ ಈ ನೌಕರೀ ಬಗ್ಗೆ ಹೇಳೋ ಮುನ್ನ ನನ್ನನ್ನು ಬಾಳಷ್ಟು ಕಾಡಿಸಿ ಪೀಡಿಸಿ ಬದಲಾವಣೆಗೆ ಕಾರಣಾದ ನನ್ನ ಕುಟುಂಬದ ಹಿನ್ನೆಲೆಯ ಬಗ್ಗೆ ಸ್ವಲ್ಪ ಮೊದಲಾ ಹೇಳಿದರೆ ಒಳ್ಳೇದು. ಬಾಗಲಕೋಟಿಯ ಭೀಮನಕೊಪ್ಪ ಅನ್ನೋ ಕುಗ್ರಾಮದ ಮ್ಯಾಲ ಯಾರಾದರೂ ವಿಮಾನದಾಗ ಬಂದ್ರ, ಆ ಊರಿನ ಅಂಚಿನಲ್ಲಿ ನನ್ನ ದಲಿತ ಕೇರಿಯ ಗುಡಿಸಲಗೊಳು ಒತ್ತೊತ್ತಾಗಿ ಚಲ್ಲಿಕೊಂಡಿರುವುದು ಕಾಣಿಸತೈತಿ. ಆ ಗುಡಿಸಲುಗಳ ನಡುವು ಒಂದು ಮಂಗಳೂರು ಹೆಂಚಿನ ಅರಮನೆಯಂಥ ಮನಿ ಎದ್ದು ಕಾಣುತೈತಿ. ಅದು ನನ್ನವ್ವ ತಾರವ್ವ ಜೋಗತಿಯ ಮನಿ. ಅಂದ್ರ ಅದು … Read more

ಮೂಕ ಕರು: ಸಂತು

  "ಲೋ ಮಗಾ, ಬಿಸಿಲು ನೆತ್ತಿಗೇರ್ತಾ ಅದೆ, ಕರಾನ ಜಮೀನ್ ತಾವ ಹೊಡ್ಕಂಡ್ ಹೋಗಿ ಮರಕ್ ಕಟ್ಟಾಕಿ ಮೇಯಕ್ ಬುಡು. ಹಾಂ… ಹೋಗಕ್ ಉಂಚೆ ಮನೆತಾವ್ ಒಸಿ ನೀರು ಕುಡುಸ್ಬುಡು. ಬರದ್ ಹೊತ್ತಾಗ್ಬೋದು. ಇಸ್ಕೂಲಿಂದ ಬಂದ್ ಮ್ಯಾಕೆ ಮತ್ತೆ ಹೊಡ್ಕಂಡ್ ಬಂದ್ ಕೊಟ್ಟಿಗೇಲಿ ಕಟ್ಟಾಕ್ ಬುಡು. ಮರಿಬ್ಯಾಡ" ಪೇಟೆಗೆ ಹೊರಟಿದ್ದ ನಮ್ಮಪ್ಪ ಕೂಗಿ ಹೇಳಿದರು. ಒಲ್ಲದ ಮನಸ್ಸಿಂದ ನಾ "ಹೂಂ…..ಸರಿ" ಅಂದಿದ್ದು ಅಪ್ಪಂಗೆ ಕೇಳಿಸಲೇ ಇಲ್ಲ.  ನಮ್ಮದೊಂದು ಚಿಕ್ಕ ಹಳ್ಳಿ. ನಮ್ಮ ಜಮೀನಿದ್ದದ್ದು ಹಳ್ಳಿಯಿಂದ ಹೊರಗೆ. ಮೂರು … Read more

ಮೂವರ ಕವಿತೆಗಳು: ರಾಶೇಕ್ರ, ಮಂಜುಳಾ ಬಬಲಾದಿ, ಲತೀಶ್.

            ಬರೆಯಲೇ ಬೇಕೆಂದು ಕುಳಿತೆ 'ನಾ'? ಬರೆಯಲೇ ಬೇಕೆಂದು ಕುಳಿತೆ 'ನಾ' ಇರಲಾಗಲಿಲ್ಲ ನನ್ನಿಂದ ಬರೆಯದೆ ಇನ್ನೆಷ್ಟು ಕಾಲ, ಕಾಲ ಕೆಳಗೆ ಹೊಸಕಿಸಿಕೊಳ್ಳುವುದು, ಇಲ್ಲವೇ ಇದಕೆ ಇನ್ನೊಂದು ಪರ್ಯಾಯ ಪದ ಹುಡುಕಿ ಬರೆಯುವುದು,  ತುಳಿತಕ್ಕೊಳಗಾದೆ, ತುಳಿದವರ ಮೀಸೆಗೆ ಅಂಟದಾದೆ, ಹಿಡಿದು ಜಗ್ಗಾಡಿ ಆರೋಹಣಕಪವಾದವಾದೆ, ತುಳಿಸಿಕೊಂಡ ಮೇಲೂ ಎದ್ದು ನಿಲ್ಲದಾದೆ, ಹಿಂದೆ ಬಿದ್ದ ಇನ್ನೊಂದು ಕೆರ ಹುಡುಕಿ ನಿಮ್ಮೆದುರು ಗೌಣವಾದೆ, ಹೀಗೇ ಹಿಂದೆ ಬಿದ್ದೆ ಎದ್ದು ಎಡವಿ ಬಿದ್ದೆ, ಹೆಣ್ಮನದ ಪ್ರೀತಿ … Read more

ಪಿನ್ನಿ-ಪಲ್ಲು ಪ್ರಳಯ ಪ್ರಸಂಗ: ಸುಮನ್ ದೇಸಾಯಿ

      ತಿಂಗಳದ ಎರಡನೆ ಶನಿವಾರ್ ಆಫೀಸಿಗೆ ಸೂಟಿ ಇರತದ. ದಿನಾ ಒಂದಕ್ಕು ಗಂಡಾ ಮಕ್ಕಳಿಗೆ ಮಾಡಿ ಹಾಕಿ,ಆಫೀಸು ಮನಿ ಅಂತ ಬ್ಯಾಸತ್ತ ಶುಕ್ರವಾರ ದಿನಾ ಮುಂಝಾನೆ " ನಾಳೆ, ನಾಡದ ಸೂಟಿ ಅದ, ನಾ ಇವತ್ತ ನಮ್ಮ ಅಮ್ಮನ ಮನಿಗೆ ಹೋಗಿಬರತೇನಿ. ಒಮ್ಮೆಲೆ ಸೋಮವಾರ ಸಂಜೀಕೆ ಆಫೀಸ್ ಮುಗಿಸಿಕೊಂಡ ಬರತೇನಿ" ಅಂತ ಒದರಿದೆ. ಅದಕ್ಕ ಗಂಡಾ ಮಕ್ಕಳು ಕೂಡೆ ಒಂದ ಧ್ವನಿಲೆ "ನಾವು ಬರತೇವಿ  ಅಂತ ಅಂದ್ರು. ಅದಕ್ಕ ನಾ ಒಂದ ನಮ್ಮಮ್ಮನ ಮನಿಗೆ ಕಾಲರ ಇಡ್ರಿ … Read more

ವಾಸ್ಯ ತಾತ ಈಗ: ಡಾ. ಗವಿ ಸ್ವಾಮಿ

ನೆಂಟರೊಬ್ಬರನ್ನು  ನೋಡಲು ಮೊನ್ನೆ ಆಸ್ಪತ್ರೆಗೆ ಹೋಗಿದ್ದೆ . ಆಸ್ಪತ್ರೆಯ ಗೇಟಿನ ಬಳಿ ಬೈಕು ನಿಲ್ಲಿಸುತ್ತಿದ್ದಾಗ ಇಬ್ಬರು ಹೊರಬರುತ್ತಿದ್ದರು. ಒಬ್ಬ ಹೆಂಗಸು ಮಗುವನ್ನು ಕಂಕುಳಿಗೆ ಹಾಕಿಕೊಂಡಿದ್ದಳು. ಪಕ್ಕದಲ್ಲಿ ಬರುತ್ತಿದ್ದಾತ ಮಗುವಿನ ಕೆನ್ನೆ ಚಿವುಟುತ್ತಾ ಅಂದ, '' ಈ ಗಣಾಂದಾರನ್ಗ ಮುನ್ನೂರ್ರುಪಾಯ್ ಆಯ್ತು ಇವತ್ತು '' ಆ ಹೆಂಗಸು ಹುಸಿಮುನಿಸಿನಿಂದ   ''ಚುರ್ಕ್ ಅಂದ್ಬುಡ್ತನ ನಿನ್ಗ ..  ನೋಡುಕಂದ ತಾತ ವೊಟ್ಟುರ್ಕತನ'' ಎಂದು ಕಂಕುಳಲ್ಲಿದ್ದ ಮಗುವನ್ನು ನೋಡಿ ಹೇಳಿದಳು. ಮಗು ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ಅವ್ವನನ್ನು ನೋಡಿತು. ''ಸುಮ್ನಂದಿಕವ್ವೈ ತಮಾಸ್ಗ .. … Read more

ಪಯಣ : ಪ್ರಶಸ್ತಿ ಅಂಕಣ

ರೈಲು ಸುರಂಗದಲ್ಲಿ ಸಾಗ್ತಾ ಇತ್ತು. ಕತ್ತಲೆಯ ತೀರ್ವತೆ ತಿಳಿಯಲೆಂದೇ ಎಲ್ಲಾ ಲೈಟುಗಳನ್ನೂ ಆಫ್ ಮಾಡಿದ್ದರು. ರೈಲು ಸುರಂಗದಲ್ಲಿ ಸಾಗ್ತಿರೋ ಸದ್ದು ಬಿಟ್ಟರೆ ಬೇರೇನೂ ಇಲ್ಲ. ಎಷ್ಟುದ್ದದ ಸುರಂಗವೋ ತಿಳಿಯದು. ಜೀವನವೇ ಮರಳದ ಕತ್ತಲೆಯ ಕೂಪಕ್ಕೆ ಧುಮುಕಿದಂತೆ ಎಲ್ಲೆಡೆ ಗಾಢಾಂಧಕಾರ. ಕಣ್ಣು ತೆರೆದರೂ , ಮುಚ್ಚಿದರೂ ಒಂದೇ ಎನಿಸುವಂತಹ ಕತ್ತಲು. ಕೆಲ ಕ್ಷಣಗಳ ಮೌನದ ನಂತರ ಎಲ್ಲಾ ಕಿರಿಚತೊಡಗಿದರು. ಕತ್ತಲೆಯನ್ನು ಎಂದೂ ಕಾಣದಂತೆ ಕಂಡ ಖುಷಿಗೋ ಅಥವಾ ಪಕ್ಕದವರು ಕಿರಿಚುತ್ತಿದ್ದಾರೆಂದೋ ತಿಳಿಯದು. ಎಲ್ಲೆಡೆ ಹೋ  ಎಂಬ ಕೂಗು. ಈ … Read more

ನಾಟಕಕಾರರಾಗಿ ಕುವೆಂಪು (ಭಾಗ-11): ಹಿಪ್ಪರಗಿ ಸಿದ್ದರಾಮ್

ಮಹಾಕವಿಗಳ ‘ಬಿರುಗಾಳಿ’ ರಂಗಕೃತಿಯು ಷೇಕ್ಸ್‍ಪಿಯರ್‍ನ ‘ಟೆಂಪೆಸ್ಟ್’ ನಾಟಕದ ಅನುವಾದವಾದರೂ ಇಂಗ್ಲಿಷ ಬಾರದ ಜನರಿಗೆ ಸ್ವತಂತ್ರ ಕೃತಿಯಂತೆ ಕಾಣುತ್ತದೆ. ಮಾನವನ ಮನೋರಂಗದಲ್ಲಿ ಯಾವಾಗಲೂ ದುಷ್ಟ ಶಕ್ತಿ ಮತ್ತು ಶಿಷ್ಟಶಕ್ತಿಗಳ ಹೋರಾಟ ನಿರಂತರ ನಡೆಯುತ್ತಲೇ ಇರುತ್ತದೆ. ಒಂದು ಕಡೆ ಲೋಭ, ಮೋಹ, ಛಲ, ವಂಚನೆ, ಅಹಂಕಾರ ಮೊದಲಾದ ಪಾಶವೀ ಶಕ್ತಿಗಳು, ಮತ್ತೊಂದು ಕಡೆ ತ್ಯಾಗ, ಪ್ರೇಮ, ಕ್ಷಮೆ, ಸತ್ಯ ಶಾಂತಿ ಮೊದಲಾದ ದೈವೀಶಕ್ತಿಗಳು. ಇವುಗಳ ಹೋರಾಟವೇ ಬಾಹ್ಯಪ್ರಪಂಚದಲ್ಲಿ ಯುದ್ಧ, ಕೊಲೆ, ರಕ್ತಪಾತ ಮೊದಲಾದ ಅನಾಹುತಗಳ ರೂಪದಲ್ಲಿ ಪ್ರಕಟಗೊಳ್ಳುತ್ತವೆ. ಈ ಹೋರಾಟದಲ್ಲಿ … Read more

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ: ಉಪೇಂದ್ರ ಪ್ರಭು

’ಹೆಂಡ ಹೆಂಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ" ಅನ್ನೋ ರಾಜರತ್ನಂ ಅವರ ಸಾಲು ಭಾಗಶಃ ನನಗೂ ಅನ್ವಯಿಸುತ್ತದೆ. ಯಾಕೆ ಭಾಗಶಃ ಅಂತೀರಾ? ಆ ಸಾಲಿನ ’ಹೆಂಡ್ತಿ’ ಅನ್ನೋ ಪದ ರತ್ನಂ ಅವರಿಗೆ ಪ್ರಾಣ ಆಗಿರಬಹುದು ಆದ್ರೆ ನನಗಲ್ಲ. ಇರಲಿ ಬಿಡಿ. ಅವಕಾಶ ಸಿಕ್ಕಾಗೆಲ್ಲ (ಹೆಂಡತಿಯ ಗೈರು ಹಾಜರಿಯಲ್ಲಿ) ವಿದೇಶಿ ಹೆಂಡದ ಜತೆ ಕನ್ನಡ ಪದಗಳು ನನ್ನ ಸಂಗಾತಿಗಳಾಗುತ್ತವೆ. ಇಂದೂ ಆಗಿದ್ದು ಅದೇ. ಹೆಂಡತಿ ಮುಖ ಉಬ್ಬಿಸಿಕೊಂಡು ತವರುಮನೆ ಸೇರಿದ್ದ ಕಾರಣ ವ್ಹಿಸ್ಕಿ ಜತೆ ಮೈಸೂರು ಅನಂತಸ್ವಾಮಿಯವರ … Read more

ಪಂಜು ಚುಟುಕ ಸ್ಪರ್ಧೆ: ರಘು ನಿಡುವಳ್ಳಿ ಅವರ ಚುಟುಕಗಳು

1 ಸಮಾನತೆ ಭೋರ್ಗರೆವ ಶರಧಿ ಅದರ ಸೆರಗಲ್ಲೆ  ಮಹಾಮೌನಿ 'ಹಿನ್ನೀರು' ದಿಗ್ಗನೆ ಬೆಳಗುವ ದೀಪ  ಅದರ ಬದಿಯಲ್ಲೆ ದಿವ್ಯಧ್ಯಾನಿ 'ಕತ್ತಲು ಸೃಷ್ಟಿಗಿಲ್ಲ  ಅದರ ದೃಷ್ಟಿಗಿಲ್ಲ  ಭೇಧ ಬಿನ್ನ ಪಕ್ಷಪಾತ ಹುಟ್ಟು ಸಾವು ನೋವು ನಲಿವು ಎಲ್ಲ ನಮ್ಮ ನಿಮ್ಮ ವರಾತ!   2  ಚೋದ್ಯ ಕತ್ತಲೆಗೆ ಗೊತ್ತಿರುವ.. ಗುಟ್ಟು.. ಬೆಳಕಿನ ಪಾಲಿಗೆ ಅಪರಿಚಿತ  ಹಣತೆ ಕಂಡಿರೋ ಸತ್ಯ.. ಕತ್ತಲಪಾಲಿಗೆ ಅದೃಶ್ಯ .. ಇದು ಸೃಷ್ಟಿಯ..ಚೋದ್ಯ   3 ಅಪೂರ್ಣ ಒರಟು ವಜ್ರಕ್ಕೆ..ಹೊಳಪು ಕೊಟ್ಟ.. ಸುವಾಸನೆ ಕೊಡಲಿಲ್ಲ.. ಮೃದುಲ..ಮಲ್ಲಿಗೆಯಲಿ.. … Read more

ಒಂದಾನೊಂದು ಕಾಲದಲ್ಲಿ ಹೊಳಲ್ಕೆರೆ ಎಂಬ ಚಿಕ್ಕ ಹಳ್ಳಿ ಇತ್ತು : ಹೊಳಲ್ಕೆರೆ ವೆಂಕಟೇಶ್

ನಮ್ಮ ಹೊಳಲ್ಕೆರೆ ಮನೆ. ನಾವು ಚಿಕ್ಕವರಾಗಿದ್ದಾಗ, ಅಮ್ಮ, ಮತ್ತು ನಮ್ಮಣ್ಣ ತಲೆಯ ಬಳಿ  ಕುಳಿತು ತಲೆಗೂದಲನ್ನು  ನೇವರಿಸುತ್ತಾ ಪ್ರೀತಿಯಿಂದ ನಮಗೆ ನಿದ್ದೆ ಬರುವವರೆಗೂ ಕಥೆಗಳನ್ನು ಹೇಳುತ್ತಿದ್ದರು. ಅಮ್ಮನ ಕಥೆಗಳು ಹೆಚ್ಚಾಗಿ ರಾಜಕುಮಾರ,  ರಾಜಕುಮಾರಿ ಕುದುರೆ ಸವಾರಿ, ಅರಮನೆ, ಮದುವೆ ಮೊದಲಾದವುಗಳನ್ನು ಒಳಗೊಂಡಿರುತ್ತಿತ್ತು. ನಮ್ಮಣ್ಣ ಹೇಳುತ್ತಿದ್ದ ಕಥೆಗಳು   ಕಾಡು, ಹುಲಿ ಬೇಟೆ, ರಾಜ, ನದಿ ಇತ್ಯಾದಿಗಳನ್ನು ತಿಳಿಸುವ ಪ್ರಯತ್ನದ್ದಾಗಿತ್ತು.  ನಾನು ಬೊಂಬಾಯಿಗೆ ಬಂದಮೇಲೆ ಮದುವೆಯಾಗಿ ಮಕ್ಕಳಾದಾಗ ನನ್ನ ಮಕ್ಕಳಿಗೆಕಥೆ ಹೇಳುವ ಪ್ರಮೇಯ ಬಂತು. ಆದರೆ ನನ್ನ ತಲೆ ಖಾಲಿ. … Read more

1 35+5 36 40: ಬಸವರಾಜು ಕ್ಯಾಶವಾರ

ನನ್ನ ನೆನಪ ರಾಡಿಯಲ್ಲಿ ಅವಳೊಂದು ನೈದಿಲೆ ಅತ್ತರೆ ಕಣ್ಣೀರಾಗಿ ಸ್ರವಿಸುವಳು ನೊಂದರೆ ನೋವಾಗಿ ಖಾಲಿಯಾಗುವಳು ನಗುತ್ತಲೆ ಇದ್ದರೆ ಸುಮ್ಮನೆ ತೊನೆಯುವಳು, ಕೆನೆಯುವಳು ಮತ್ತೆ ಮತ್ತೆ ಹುಟ್ಟುವಳು ನನ್ನ ನೆನಪ ರಾಡಿಯಲ್ಲಿ ಮುದ್ದು ನೈದಿಲೆ. ಇದು 1998ರಲ್ಲಿ ನೀನು ಬರೆದ ಕವನ. ಹಚ್ಚ ಹಸಿರು ಹೊಲದಲ್ಲಿ ಪುಟಾಣಿ ಹುಡುಗಿಯೊಬ್ಬಳು ಕುರಿ ಮರಿಯನ್ನು ಎತ್ತಿ ಮುದ್ದಾಡುತ್ತಿರುವ ನೀನೇ ಬರೆದ ಚಿತ್ರದ ಗ್ರೀಟಿಂಗ್ ಕಾಡರ್್ನ್ನ ಹೊಸ ವರ್ಷದ ಶುಭಾಷಯವಾಗಿ ಕೊಟ್ಟಿದ್ದೆ. ಮೇಲೆ ನೋಡಿದ್ರೆ ಹೊಸ ವರ್ಷದ ಹಾಧರ್ಿಕ ಶುಭಾಷಯಗಳನ್ನು ಅಂತಿತ್ತು. ಆದ್ರೆ … Read more

ಮೋಟಾರ್ ಸೈಕಲ್ ಡೈರೀಸ್: ವಾಸುಕಿ ರಾಘವನ್

ಚೆ ಗೆವಾರ ನಿಮಗೆಲ್ಲರಿಗೂ ಗೊತ್ತಿರಬಹುದು. ಚರಿತ್ರೆಯನ್ನು ಅಷ್ಟಾಗಿ ಓದಿಲ್ಲದವರಿಗೂ ಟಿ-ಶರ್ಟ್ ಮೇಲಿನ “ಆ ಮುಖ” ಅಂತಾದ್ರೂ  ಪರಿಚಯ ಇದ್ದೇ ಇರುತ್ತೆ. ನನಗೆ ಅವನ ಸಿದ್ಧಾಂತಗಳು, ನಿಲುವುಗಳು, ಆದರ್ಶಗಳ ಬಗ್ಗೆ ಆಳವಾದ ಅರಿವು ಇಲ್ಲ, ಆದರೂ ಅವನ ಜೀವನವನ್ನು ಬದಲಿಸಿದ ಕಥೆ ಇರುವ ಈ ಚಿತ್ರ ಬಹಳ ಇಷ್ಟವಾಯಿತು. ಆ ಚಿತ್ರವೇ 2004ರಲ್ಲಿ ಬಂದ ಅದೇ ಹೆಸರಿನ ಆತ್ಮಕಥನದ ಪುಸ್ತಕವನ್ನು ಆಧರಿಸಿದ “ಮೋಟಾರ್ ಸೈಕಲ್ ಡೈರೀಸ್”.   ಎರ್ನೆಸ್ಟೋ ‘ಚೆ’ ಗೆವಾರ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನಮ್ಮಂಥ ಒಬ್ಬ … Read more