ಕೆಂಗುಲಾಬಿ (ಭಾಗ 4): ಹನುಮಂತ ಹಾಲಿಗೇರಿ
(ಹಿಂದಿನ ಭಾಗ ಇಲ್ಲಿದೆ) ಅವತ್ತು ಉಜ್ಜಳಪ್ಪನ ಜಾತ್ರಿ ಈ ಮೊದಲಿನಂಗ ಅದ್ದೂರಿಯಾಗಿಯ ನಡೆದಿತ್ತು. ಸುತ್ತು ಊರು ಕೇರಿಯವರೆಲ್ಲ ಸೇರಿದ್ದರು. ದೇವರಿಗೆ ಬಿಡುವ ಹುಡುಗಿರನ್ನು ಉಜ್ಜಳಪ್ಪನ ಮುತ್ಯಾನ ಗುಡಿಯೊಳಗ ಇರೋ ಅಂತಪುರಕ್ಕೆ ಹೋಗಿ ಅಲ್ಲಿ ಹುಡುಗಿಯರ ಗುಪ್ತಾಂಗವನ್ನು ಗಾಯಗೊಳಿಸುವ ಪದ್ದತಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಕೆಲವು ಪ್ರತಿಭಟನಾಕಾರರ ಪ್ರಯತ್ನದಿಂದಾಗಿ ನಿಂತಿತ್ತಾದರೂ ಹುಡುಗಿಯರನ್ನು ದೇವರಿಗೆ ಬಿಡೋದು ಮತ್ತು ಪ್ರಾಣಿಗಳನ್ನು ಬಲಿ ಕೊಡೋದು ಇನ್ನು ಮುಂದುವರೆದಿತ್ತು. ಅಂದು ಉಜ್ಜಳಪ್ಪನ ಅಣ್ಣ ತಮ್ಮಂದಿರು ಸಂಬಂಧಿಕ ದೇವರುಗಳನ್ನು ಸುತ್ತಲಿನ ಹಳ್ಳಿಯ ಭಕ್ತರು ಪಲ್ಲಕ್ಕಿಗಳಲ್ಲಿ ಹೊತ್ತು ತಂದಿದ್ದರು. … Read more