ಕೆಂಗುಲಾಬಿ (ಭಾಗ 6): ಹನುಮಂತ ಹಾಲಿಗೇರಿ
[ಇಲ್ಲಿಯವರೆಗೆ…] ಈ ಎಲ್ಲ ವಿವರಗಳನ್ನು ಸವಿವರವಾಗಿ ಬರೆದುಕೊಂಡು ನಾನು ರಾಜನ್ ಸರ್ ಚೇಂಬರಿಗೆ ಹೋದೆ. ನನ್ನ ವರದಿ ಮೇಲೆ ಸುಮ್ಮನೆ ಒಮ್ಮೆ ಕಣ್ಣಾಡಿಸಿದ ಅವರು ನನ್ನ ಕಡೆ ಒಂದು ಮೆಚ್ಚುಗೆಯ ನೋಟ ಬೀರಿ, ’ವೆರಿ ಗುಡ್ ಮಲ್ಲೇಶಿ. ಆದ್ರೆ, ನೀನು ಈ ದಂದೆಯ ಬಗ್ಗೆ ಇನ್ನಷ್ಟು ತಿಳಕೊಬೇಕಾದರೆ ಒಂದಿಷ್ಟು ದಂದೆಯಲ್ಲಿದ್ದ ಮಹಿಳೆಯರನ್ನು ಮಾತಾಡಿಸಬೇಕಿತ್ತು’ ಎಂದು ನನ್ನ ಕಣ್ಣುಗಳನ್ನು ಕೆಣಕಿದರು. ’ನಾನು ಮಾತಾಡಿಸಬೇಕೆಂದೇ ಆ ನಡು ವಯಸ್ಸಿನವಳ ಹಿಂದ್ಹಿಂದೆ ಹೋಗಿ ಆಟೊ ಹತ್ತಿದ್ದು ಸರ್. ಆದ್ರೆ, ನ್ನನ್ನು ಅವರು … Read more