ಪ್ರೀತೀಶನ ಚುಟುಕಗಳು
೧. ಸಾಧ್ಯ ಮರಳುಗಾಡಿನಲೂ ಹೂದೋಟ ಬೆಳೆಯಬಲ್ಲೆ ನಾನು, ಭಾವಗಳು ಹುಟ್ಟಬೇಕಷ್ಟೇ. ೨. ಪರಿಹಾರ ಹೃದಯಕೊಂದು ಒಡೆದ ಗಾಜು ನೆಟ್ಟಿದೆ, ಕಿತ್ತೊಗೆಯಲೊಂದು ಹೂವು ಬೇಕಿದೆ. ೩. ಅರಿವು ಕೊಳಕು ಮೆತ್ತಿದ್ದು ಬಟ್ಟೆಗೆ ತಿಳಿಯಬೇಕಿಲ್ಲ ಕೊಳೆಗೆ ಗೊತ್ತಾಗಬೇಕು ಇಲ್ಲ ಸಾಬೂನು ಅರಿಯಬೇಕು. ೪. ತಪ್ಪು ಮಡದಿ ಸಿಟ್ಟಾದರೆ ತಪ್ಪು ಯಾರದ್ದೇ ಆಗಿರಬಹುದು ಮಗ ಕೋಪಿಸಿಕೊಂಡರೆ ಮಾತ್ರ ತಪ್ಪು ನನ್ನದೇ. ೫. ಗುರಿ ನದಿ ಹುಟ್ಟಿದಾರಭ್ಯ ಸಮುದ್ರ ಹುಡುಕಿ ಹೊರಡುವುದಿಲ್ಲ; ಹರಿಯುತ್ತ ಹೋಗುವುದು ಅನಿವಾರ್ಯ ಕರ್ಮವದಕೆ. … Read more