ಓಯಸಿಸ್: ನಿನಾದ

ಅಂದು ಶನಿವಾರ ನಿನಾದಳಿಗೆ ಮನೆಯಲ್ಲಿ ಒಬ್ಬಳೆ  ಕೂತು ಸಾಕಾಗಿ ಹೋಗಿತ್ತು. ಸಾಮಾನ್ಯವಾಗಿ ನಿಶಾಂತ್ ಗೆ ಶುಕ್ರವಾರ, ಶನಿವಾರ ವಾರದ ರಜೆ. ಆದರೆ ಅವನ ಟೀಂ ಲೀಡರ್ ಒಂತರಾ ವಿಚಿತ್ರ ಮನುಷ್ಯ. ರಜೆ ಅಂದ್ರು ಮನೆಯಲ್ಲಿ ಇರೋಕೆ ಬಿಡುತ್ತಿರಲಿಲ್ಲ. ಹೀಗಾಗಿ ಎಲ್ಲ ಶನಿವಾರಗಳು ಆಫೀಸ್ ಗೆ ಹೋಗೋದು ಅನಿವಾರ್ಯ ಆಗಿತ್ತು. ಇತ್ತ ನಿನಾದ ಕಿರಿ ಕಿರಿ ಮಾಡಿದ್ದಕ್ಕೆ ಸರಿ ನೀನು ಬಾ ನನ್ನ ಜೊತೆಗೆ ಅಂದು ನಿಶಾಂತ್ ಆಫೀಸ್ ಗೆ ಹೊರಟ. ಹೀಗೆ ನಿನಾದ ನಿಶಾಂತ್ ಜೊತೆ ಆಫೀಸ್ … Read more

ಹನಿಮೂನ್: ಅನಿತಾ ನರೇಶ್ ಮಂಚಿ

ಸಂಜೆಯ ಹೊತ್ತು.. ಹೂಗಿಡಗಳ ಮೇಲಿನಿಂದ ಬೀಸಿ ಬರುವ ಗಾಳಿ ಪಾರಿಜಾತದ ಕಂಪನ್ನು ಒಳ ಹೊತ್ತು ಬರುತ್ತಿತ್ತು.ಅಂಗಳದ ಮೂಲೆಯಲ್ಲಿ ಅರಳಿದ ಸಂಜೆ ಮಲ್ಲಿಗೆಯನ್ನು ನೇವರಿಸುತ್ತಾ ’ಜೀವ ತುಂಬಿ ಭಾವ ತುಂಬಿ ಮನದ ದೀಪ ಬೆಳಗಿ ಬಾ..’ ಎಂದು ಹಾಡುತ್ತಿರುವಾಗಲೇ  ದೀಪ ಹೊತ್ತಿಸುವ ಹೊತ್ತಾಯಿತೆಂದು ನೆನಪಾಗಿದ್ದು. ಒಳಗಡಿಯಿಟ್ಟೆ. ಮಬ್ಬುಗತ್ತಲಲ್ಲಿ ತಲೆ ತಗ್ಗಿಸಿ ಕೂತಿದ್ದ ಆಕಾರವೊಂದನ್ನು ಕಂಡು ಅಲ್ಲಿಯವರೆಗಿದ್ದ ರೋಮ್ಯಾಂಟಿಕ್ ಮೂಡ್   ಒಮ್ಮೆಲೇ ಮಾಯವಾಗಿ  ಹೃದಯ ಹಾರಿ ಬಾಯಿಗೆ ಬರುವಂತಾಯಿತು. ನನ್ನನ್ನು ಕಂಡು ಪಕ್ಕನೇ ಎದ್ದ ಆಕಾರ ಪರಿಚಯದ್ದು ಅನ್ನಿಸಿ … Read more

ಮೂವರ ಕವಿತೆಗಳು: ಮೇಗರವಳ್ಳಿ ರಮೇಶ್, ಮಹೇಶ್ ಕಲಾಲ್, ರಾಜ ಹಂಸ

          ತು೦ಬಿ ಹರಿದಿದ್ದಳ೦ದು ತು೦ಗೆ…..! (ಮಿ೦ಚಿ ಮಾಯವಾದವಳಿಗೊ೦ದು ನೆನಪಿನ ಒಸಗೆ)      ಅ೦ದು ಆಗಸದಲ್ಲಿ ಕರಿ ಮುಗಿಲುಗಳ ಜಾತ್ರೆ. ತಟ ಪಟನೆ ಸುರಿವ ಮಳೆಯ ಹನಿಗಳ ನಡುವೆ ತೂರಿ ಬ೦ದು ನನ್ನ ಕಣ್ಣ ಕೋರೈಸಿದ್ದು ಮುಗಿಲೊಡಲ ಮಿ೦ಚಲ್ಲ  ನಿನ್ನ ಕಣ್ಣ೦ಚು! ಮೌನ ಮೊಗ್ಗೆಯನೊಡೆದು ಅರಳದ ಮಾತು ಘಮ ಘಮಿಸಿತ್ತು ನಿನ್ನೊಳಗೆ. ಅದ ಹೊತ್ತು ತ೦ದ ಶ್ರಾವಣದ ತ೦ಗಾಳಿ ಹೊಸ ಪುಳಕಗಳನೆಬ್ಬಿಸಿತ್ತು ನನ್ನೊಳಗೆ! ಒದ್ದೆ ನೆಲವನು ಗೆಬರುತ್ತ ನಿ೦ತಿದ್ದೆ ನಿನ್ನ ಕಾಲ್ಬೆರಳ … Read more

ನಿಮ್ಮ ಹೆಸರು ನಮ್ಮ ಮನದಲ್ಲಿದೆ: ಅಮರ್ ದೀಪ್ ಪಿ.ಎಸ್.

ವರ್ಷದ ಕನಿಷ್ಠ ಆರು ತಿಂಗಳಾದರೂ ಮದುವೆ ಸೀಜನ್ನು ಮುಂದುವರೆದಿರುತ್ತದೆ. ಸೀಜನ್ನು ಬಂತೆಂದರೆ ಲಗ್ನ ಪತ್ರಿಕೆಗಳನ್ನು ಜೋಡಿಸಿಟ್ಟು ಕುಟುಂಬ ಸಮೇತವಾಗಿ ಹೋಗುವಂಥವು, ಒಬ್ಬರೇ ಹೋದರೂ ನಡೆಯುತ್ತದೆನ್ನುವಂಥವುಗಳನ್ನೂ ಲೆಕ್ಕ ಹಾಕಿ ಓಡಾಡಲಿಕ್ಕೆ ಒಂದಷ್ಟು ದುಡ್ಡು ಎತ್ತಿಟ್ಟು ಅನಣಿಯಾಗಲೇಬೇಕು. ಹೋಗದಿದ್ದರೆ ಏನಂದುಕೊಂಡಾರೋ ಎನ್ನುವ ಮುಲಾಜು ಅಥವಾ ಸಂಭಂಧ ಗಳ ನವೀಕರಣಕ್ಕೆ, ಖುಷಿಯ ಸಂಧರ್ಭದಲ್ಲಿ ಎಲ್ಲರನ್ನು ಭೇಟಿಯಾಗುವ ಅವಕಾಶಕ್ಕಾದರೂ ಹೊರಡು ತ್ತೇವೆ. ಮೊನ್ನೆ ನೆಂಟರೊಬ್ಬರು ಬಂದು ತಮ್ಮ ಮನೆಯಲ್ಲಿ ನಡೆಯಲಿರುವ ಮದುವೆ  ಸಮಾರಂಭಕ್ಕೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು.  ಹೆಸರು ಬರೆದರೂ ನಿಮ್ಮ … Read more

ಕಿರು ತೆರೆಯಲ್ಲಿ ಕನ್ನಡ: ಶಿದ್ರಾಮ ಸುರೇಶ ತಳವಾರ

ಪ್ರಸಕ್ತ ದಿನಗಳಲ್ಲಿ ಮಹಿಳೆಯರೂ ಸೇರಿದಂತೆ ಹಲವಾರು ಪುರುಷರೂ ಕೂಡಾ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ದಾಸರಾಗಿದ್ದಾರೆ. ಮುಂಚೆ ಅದೆಷ್ಟೋ  ಕೌಟುಂಬಿಕ  ಎಂಬ ಶೀರ್ಷಿಕೆಯಡಿ ಧಾರಾವಾಹಿಗಳು ಬರುತ್ತಿದ್ದವು. ಅವುಗಳನ್ನು ಚಿಕ್ಕಂದಿನಲ್ಲಿದ್ದಾಗ ನಾವೂ ನೋಡಿದ್ದೇವೆ. ಆ ನಿರ್ದೇಶಕರ ಹೆಸರುಗಳನ್ನು  ನಾವು ಸರಿಯಾಗಿ ನೆನಪಿಟ್ಟುಕೊಳ್ಳದೇ ಹೋದರೂ ಆ ಧಾರಾವಾಹಿಗಳಿಂದ ನಾವು ಸಾಕಷ್ಟು ವಿಷಯಗಳೊಂದಿಗೆ ಕನ್ನಡ, ಕನ್ನಡದ ಪದಗಳನ್ನು ತಿಳಿದುಕೊಂಡು ಕಲಿತುಕೊಂಡಿದ್ದೇವೆ. ಇದು ಸಂತಸದ ವಿಷಯವಷ್ಟೇ. ಇತ್ತೀಚಿನ ಕೆಲ ವರ್ಷಗಳಿಂದ ಕನ್ನಡದ ಸುಮಾರು ಚಾನೆಲ್‌ಗಳು ದೃಶ್ಯ ಮಾಧ್ಯಮದಲ್ಲಿವೆಯಾದರೂ ಯಾವ ಮಾಧ್ಯಮವೂ ಸ್ಪಷ್ಠ ಕನ್ನಡದ ಉಚ್ಛಾರಣೆಯನ್ನು … Read more

ಸಾಮಾನ್ಯ ಜ್ಞಾನ (ವಾರ 15): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತದಲ್ಲಿ ಇಂಗ್ಲೀಷ್ ವಿಧ್ಯಾಭ್ಯಾಸವನ್ನು ಜಾರಿಗೆ ತಂದವರು ಯಾರು? ೨.    ’ನೆಲಗಡಲೆ’ ಇದು ಮೂಲತಃ ಯಾವ ದೇಶದ ಬೆಳೆ? ೩.    ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಾರ ಸಂಖ್ಯೆಯುಳ್ಳ (Combined net sales) ದಿನ ಪತ್ರಿಕೆ ಯಾವುದು? ೪.    ಹತ್ತು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ? ೫.    ಭಾರತದ ನೈಟಿಂಗೇಲ್ ಎಂದು ಯಾರನ್ನು ಕರೆಯುತ್ತಾರೆ? ೬.    ರೋಮಿಯೋ ಜೂಲಿಯೆಟ್ ನಾಟಕದ ಕರ್ತೃ ಯಾರು? ೭.    ನೇತ್ರಾದಾನದಲ್ಲಿ ಕಣ್ಣಿನ ಯಾವ ಭಾಗವನ್ನು ಬೇರೆಯವರಿಗೆ ಅಳವಡಿಸಬಹುದು? ೮.   … Read more

ಕಲಿಕೆ ಮತ್ತು ಶಿಕ್ಷಣ (ಕೊನೆಯ ಭಾಗ): ನಾರಾಯಣ ಎಂ.ಎಸ್.

ಇಲ್ಲಿಯವರೆಗೆ ಇಷ್ಟೆಲ್ಲಾ ಹೇಳಲು ಕಾರಣಗಳಿಲ್ಲದಿಲ್ಲ. ಇತ್ತೀಚೆಗೆ ಪ್ರತಿಷ್ಠಿತವೆಂದು ಭಾರೀ ಹೆಸರು ಮಾಡಿರುವ ವ್ಯವಹಾರ ನಿರ್ವಹಣಾ ಶಾಸ್ತ್ರದ ಕಾಲೇಜೊಂದರ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ನಾನು ಕೇಳಿದ ಹೆಸರಾಂತ ಶಿಕ್ಷಣ ತಜ್ಞರೊಬ್ಬರ ಅದ್ಭುತವಾದ ಭಾಷಣವೊಂದು, ಯಾವುದೇ ಸಾಮಾಜಿಕ ಹೊಣೆಗಾರಿಕೆ ಹಾಗೂ ಬದ್ಧತೆಯಿಲ್ಲದ ಅತಿ ಬುದ್ಧಿವಂತರು ಸಮಾಜದ ಸ್ವಾಸ್ಥ್ಯಕ್ಕೆ ಹೇಗೆ ಮಾರಕವಾಗಬಲ್ಲರೆಂಬುದಕ್ಕೆ ಜ್ವಲಂತ ನಿದರ್ಶನದಂತಿತ್ತು.  ಕಾಕತಾಳೀಯವೆಂಬಂತೆ ಅವರೂ ಸಹ ಈ ಮೇಲೆ ಹೇಳಿದ ಆನೆಯ ಕಥೆಯನ್ನೇ ಬಳಸುತ್ತಿದ್ದರು. ಆದರೆ ಅದರ ಹಿಂದಿನ ಉದ್ದೇಶ ಮಾತ್ರ ಒಳ್ಳಯದಿದ್ದಂತೆ ನನಗೆ ತೋರಲಿಲ್ಲ. ಅವರ ಮಾತಿನ … Read more

ಮಸಣದಲ್ಲಿ ಮಿಲನ: ಸುಮನ್ ದೇಸಾಯಿ

ಫೆಬ್ರುವರಿ ತಿಂಗಳ ಒಂದು ಸಂಜೆ. ಇತ್ಲಾಗ ಬ್ಯಾಸಗಿನು ಅಲ್ಲ, ಅತ್ಲಾಗ ಚಳಿಗಾಲನು ಅಲ್ಲಾ ಅಂಥ ದಿನಗಳವು. ಒಂಥರಾ ನಸುಸೆಖೆ ಬರೆತ ತಂಪಿನ ವಾತಾವರಣ. ಹುಣ್ಣಿವಿ ಇತ್ತಂತ ಕಾಣಸ್ತದ ಸಂಜಿ ಸರಿಧಂಗ ಬೆಳದಿಂಗಳ ಹೂವು ಹಾಸಲಿಕತ್ತಿತ್ತು. ಊರ ಹೊರಗಿನ ಸುಡಗಾಡಿನ್ಯಾಗ ಒಂದ ನಮೂನಿ ಅತೃಪ್ತಭಾವದ ತಂಗಾಳಿಯೊಂದು ಮಂದವಾಗಿ ಬಿಸಲಿಕ್ಕೆ ಶೂರುವಾತು. ಮಸಣದೊಳಗ ಹರಡಿದ್ದ ತರಗೆಲಿಗೊಳು ಹವರಗ ಸರಿದಾಡಲಿಕತ್ವು. ಸೂಂಯ್ಯನ್ನೊ ಸುಳಿಗಾಳಿ ಮಲಗಿದ ಆತ್ಮಗಳನ್ನ ಎಬ್ಬಿಸೊ ಅಲಾರಾಂನಂಗ ಅನಿಸ್ತಿತ್ತು. ಅದಕ್ಕಾಗಿನ ಕಾಯ್ಲಿಕತ್ತಿತ್ತು ಅನ್ನೊಹಂಗ ಸುಡಗಾಡಿನ ನಡುವಿದ್ದ ಸಮಾಧಿಯಿಂದ ಒಂದು ಆಕೃತಿ … Read more

ಎರಡು ಪ್ರೇಮ ಕವನಗಳು: ಸುಮಿತ ಮೇತ್ರಿ, ನವೀನ್ ಮಧುಗಿರಿ

ರಾಧೆ… ನನ್ನ ನೆನಪಿಗಾಗಿ ನವಿಲು ಗರಿಯನೊಂದನಿಟ್ಟುಕೊ ನಿಂಗೆ ಬೇಸರವಾದಾಗ ನಿನ್ನ ಮಡಿಲಾಗಿ ಮನದ ಮಿದುವಾಗಿ ನಿನಗೆ ಚೈತನ್ಯ ತಂದೇನು ರಾಧೆ… ನನ್ನ ನೆನಪಿಗಾಗಿ ಕೊಳಲನೊಂದಿಟ್ಟುಕೊ ನಿಂಗೆ ನೋವಾದಾಗ ನಿನ್ನ ಇನಿಯನಾಗಿ ಇನಿಯನ ಒಡಲಾಗಿ ನಿನಗೆ ನಲಿವು ತಂದೇನು ರಾಧೆ… ನನ್ನ ನೆನಪಿಗಾಗಿ ಮುಡಿಗೆ ಹೂವಂದನಿಟ್ಟುಕೊ ನಿಂಗೆ ಹಿತವಲ್ಲದ ಸಮಯದಿ ನಿನ್ನ ಗೆಳಯನಾಗಿ ಹಿತೈಸಿಯಾಗಿ ನಿನಗೆ ಆತ್ಮಸಖನಾದೆನು. –ಸುಮಿತ ಮೇತ್ರಿ, ಹಲಸಂಗಿ                         ಬಿಳಿಹಾಳೆಯ … Read more

ಖಾಲಿ ಕಿಸೆಯ ರಾಜಕುಮಾರನಿಗೆ ಕಾಗದದ ಮೇಲೆ ಮನದಾಕ್ಷರ: ಹೇಮಾ ಎಸ್.

ಮುದ್ದು ರಾಜಕುಮಾರ…. ಪ್ರೀತಿಯ ಹೊರತಾಗಿ ನಿನ್ನಿಂದ ನನಗೆ ಯಾವ ನಿರೀಕ್ಷೆಗಳು ಇಲ್ಲ. ನೀನು ಸಿರಿವಂತನಲ್ಲ ಎಂಬ ಸತ್ಯವು ಗೊತ್ತಾದ ಮೇಲೆಯೇ ನಾನು ನಿನ್ನನ್ನು ಮೆಚ್ಚಿದ್ದು. ನಿನ್ನನ್ನು ಪ್ರೀತಿಸಿದ್ದು. ನಿನ್ನಲ್ಲಿ ನನಗೆ ತುಂಬಾ ಇಷ್ಟವಾದ ಗುಣವೇನು ಗೊತ್ತಾ? ನೀನು ಇರುವುದನ್ನ ಇರುವಂತೆಯೇ ಹೇಳಿಬಿಡುತ್ತೀಯ. ಯಾವ ಮಾತಿಗೂ ಕೂಡ  ಸುಳ್ಳು ಕಪಟತೆಗಳ ಬಣ್ಣ ಲೇಪಿಸುವುದಿಲ್ಲ. ಸುಳ್ಳು ಸುಳ್ಳೇ ಆಡಂಬರದ ಮಾತುಗಳನ್ನಾಡಿ ಒಂದು ಹೆಣ್ಣಿನ ಮನವೊಲಿಸಿಕೊಳ್ಳುವ ಪ್ರಯತ್ನವನ್ನು ನೀನು ಮಾಡಲಿಲ್ಲ. ಮಾಡುವುದಿಲ್ಲ. ಇರುವುದರಲ್ಲಿಯೇ ಸಂತೃಪ್ತಿಯಿಂದ ಬದುಕುವ ನಿನಗೆ ಸೋತುಬಿಟ್ಟೆ. ನಾ ನಿನ್ನ … Read more

ಪ್ರೇಮ ಪ್ರೀತಿ ಇತ್ಯಾದಿ: ಶಮ್ಮಿ ಸಂಜೀವ್

ಹೂವೊಂದು ಬಳಿಬಂದು  ತಾಕಿತು ಎನ್ನೆದೆಯಾ  ಏನೆಂದು  ಕೇಳಲು  ಹೇಳಿತು ಜೇನಂಥ ಸವಿನುಡಿಯಾ …  ಎದೆ ತುಂಬಾ ಭಾವಗಳ ಧಾರೆ ಇತ್ತು…ಮೊದಲ ಪ್ರೇಮ ಪತ್ರಕ್ಕೆ ಅದೆಷ್ಟು ನಾಚಿಕೆಯ ಘಮವಿತ್ತು …ಕಾಲ ಓಡಿತು ..ಪ್ರೀತಿ ಪ್ರೇಮಕ್ಕೆ ಬೇರೆಯದೇ ಹೆಸರಿತ್ತು!! ಆಗಷ್ಟೇ ಅರಳಿದ ಹೂವೊಂದರ ಜೇನ  ಹೀರುವ ಮುನ್ನ ಪಿಸುನುಡಿಯಿತು ದುಂಬಿ .."ನೋವು ಮಾಡೋದಿಲ್ಲ ..ನಿನ್ನ ಪರಾಗ ಜೇನು ನನಗೆ..ನಿನ್ನ ಕಾಯಾಗಿಸಿ ಹಣ್ಣಾಗಿಸುವ ಜೀವನ ಪ್ರೀತಿ ನಿನಗೆ!!" ಅಂಜಲಿಲ್ಲ ಅಳುಕಲಿಲ್ಲ ತನ್ನ ಜೇನ ಒಡಲನ್ನ ಒಮ್ಮೆಗೆ ತೆರೆದು ಅರ್ಪಿಸಿ ಕೊಂಡಿತು .. … Read more

ಎದ್ದೇಳು ಮಂಜುನಾಥ”ನೂ “ಹ್ಯಾಪಿ ಡೇಸ್” ನ ಅಮಲಿನವನೂ: ಅಮರ್ ದೀಪ್ ಪಿ. ಎಸ್.

ನನ್ನೊಬ್ಬ  ಹಳೆಯ ಗೆಳೆಯ ನೆನಪಾದ. ಇತ್ತೀಚಿಗೆ ನಾನು ಕಂಡ ಹೊಸ ಹುಡುಗನ ಅತಿಯಾದ ಆತ್ಮವಿಶ್ವಾಸವೋ ಅಹಮಿಕೆಯೋ ಒಟ್ಟಿನಲ್ಲಿ ಬೇಜಾರು ತರಿಸಿತು. ಪ್ರತಿ ದಿನ ಬಂದು ನಗು ನಗುತ್ತಾ, ಹಳೆಯ, ಕಿಶೋರನದೋ, ರಫಿ ಸಾಹೇಬರದೋ ಇಲ್ಲಾ ಮುಖೇಶನದೋ ಹಾಡನ್ನು ಗುನುಗುತ್ತಾ, ತನಗೆ ತಿಳಿದ ತಿಳಿ ಹಾಸ್ಯದ ಮಾತನ್ನೂ ಬಿಂದಾಸ್ ಆಗಿ  ಹೇಳುತ್ತಾ ನಾಲಗೆ ಮೇಲೆ ಬಹಳ ಹೊತ್ತು ರುಚಿ ಆರದಂತಿರುವ ಚಹಾ ಅಥವಾ ಕಾಫಿ ಕೊಟ್ಟು ಹೋಗುವ ವಿಷ್ಣು ಈಗತಾನೇ ಕೊಟ್ಟು ಹೋದ ಕಾಫಿ ಹೀರುತ್ತಿದ್ದೆ.  ಒಂದಕ್ಕೊಂದು ತಾಳೆಯಿಲ್ಲದ … Read more

ಕನಸಿನ ಹೊತ್ತು: ಪದ್ಮಾ ಭಟ್

                       ಒಂದೇ ಸಮನೆ ಹರಿಯುವ ನದಿಯಲ್ಲಿ ಬಿಟ್ಟ ಕಾಗದದ ದೋಣಿ.. ಎತ್ತ ಪಯಣಿಸಬೇಕೆಂಬುದೇ ಗೊತ್ತಿಲ್ಲದ ಗೊಂದಲದ ನಡುವೆ ಒಂದೇ ಸಮನೆ ನಕ್ಕು ನಗಿಸುವ ನಾನು ಮತ್ತು ನೀನು. ಬಿಚ್ಚಿಕೊಂಡ ಭರವಸೆಗಳನೆಲ್ಲ ಒಂದೆಡೆ ಒಟ್ಟುಗೂಡಿಸಿ ಕಾಪಾಡುವ ತವಕ..ನಿನ್ನ ಕಣ್ಣಿನಲಿ ಹರಿಯುವ ಸಂತಸದ ಹೊನಲಿನಲಿ ನಾನೂ ಸೇರಿಹೋಗುವ ನಲುಮೆ.. ಓಹ್ ಇದೆಲ್ಲ ಕನಸು ಎಂದು ಎದ್ದ ಕೂಡಲೇ ಗೊತ್ತಾಗಿತ್ತು..ನೀನು ಎಂಬುವವನೇ ಇಲ್ಲದವನ ಬಗೆಗೆ ಇಲ್ಲ ಸಲ್ಲದ … Read more

ಲಕ್ಷ್ಮಣ ರೇಖೆ: ಅಖಿಲೇಶ್ ಚಿಪ್ಪಳಿ

ಜಗತ್ತಿನ ಶ್ರೇಷ್ಠ ಗ್ರಂಥಗಳಲ್ಲಿ ರಾಮಾಯಣವು ಒಂದು. ರಾಮಾಯಣ-ಮಹಾಭಾರತವು ಸಮಕಾಲೀನ ರಾಜಕಾರಣಕ್ಕೆ ಹೊಂದಿಕೊಳ್ಳುವಂತೆ ರಚಿತವಾಗಿದೆ. ಆಗೆಲ್ಲಾ ಮಂತ್ರ-ತಂತ್ರಗಳಿಂದ ತಯಾರಿಸಲಾದ ಬಾಣ-ಬಿಲ್ಲುಗಳನ್ನು ಕವಿ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಹಾರಿ ಬಿಟ್ಟು ಏನೇನೋ ಅಸಾಧ್ಯವಾದುದನ್ನು ಸೃಷ್ಟಿಸಿ ರಂಜಿಸಿದ. ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಬ್ಬ ವ್ಯಕ್ತಿ ಹೇಗಿರಬಾರದು ಎಂಬ ಸಂದೇಶವನ್ನು ಬೀರುವ ಹಲವು ಘಟನೆಗಳಿವೆ. ರಾವಣನಂತಹ ಪರಮ ದೈವಭಕ್ತ ಯ:ಕಶ್ಚಿತ್ ಸೀತೆಗಾಗಿ ತನ್ನ ರಾಜ್ಯ, ಮಕ್ಕಳು, ಬಂಧುಗಳು ಕಡೆಗೆ ತನ್ನ ಪ್ರಾಣವನ್ನು ಕಳೆದುಕೊಂಡ. ರಾಮ ವಾಲಿಯನ್ನು ಕೊಂದ ಬಗೆಯನ್ನು ವಿದ್ವಾಂಸರು ಹೇಗೆ … Read more

ಚೈಲ್ಡ್ ಲೇಬರ್: ಕ್ರಾಕ್ ಬಾಯ್

        ನವೆಂಬರ್ ತಿಂಗಳ ಚುಮು ಚುಮಿ ಚಳಿಯಲ್ಲಿ ಮಲೆನಾಡಿನಿಂದ ತಂದ ಕೊಟ್ಟೆ ಕಂಬಳಿಯ ಒಳಗೆ ಬೆಚ್ಚಗೆ ಮಲಗಿ ಸುಖ ನಿದ್ರೆಯಲ್ಲಿ ತೇಲುತ್ತಿದ್ದೆ, ಮಲಗಿದ್ದವನನ್ನು ಬಡಿದೆಬ್ಬಿಸುವಂತೆ ಒಂದೇ ಸಮನೆ ನನ್ನ ಮೊಬೈಲ್ ಕೂಗಿಕೊಳ್ಳತೊಡಗಿತು, ಈ ಹಾಳ್ ಮೊಬೈಲು ನನ್ ನಿದ್ದೆ ಹಾಳ್ ಮಾಡಕ್ಕೇ ಇರದೇನೋ ಅನ್ನೋವಷ್ಟು ಸಿಟ್ಟು ಬಂದಿತ್ತು ಆ ಮೊಬೈಲ್ ಮೇಲೆ, ಕೋಪದಿಂದ ಅದರ ಕಡೆಗೆ ತೀಕ್ಷ್ಣ ದೃಷ್ಠಿಯನ್ನು ಬೀರಿ ಅದನ್ನು ಕೈಗೆತ್ತಿಕೊಂಡು, ಬಡ್ಕೋತಿದ್ದ ಅಲಾರಾಂ ಅನ್ನು ಆಫ್ ಮಾಡಿಟ್ಟೆ,  ಟೈಂ ಆಗ್ಲೇ … Read more

ಕಾಲೇಜಿನ ಆ ದಿನಗಳು: ಸುಮನ್ ದೇಸಾಯಿ

ನೆನಪುಗಳ ಹಾರದ ಗುಚ್ಛವನ್ನು ಹೇಂಗ ಬಿಡಸಬೇಕೊ ತಿಳಿಯಂಗಿಲ್ಲ,.. ಯಾವ ಎಳಿ ಹಿಡದರು ಇದ ಮೊದಲು ಇದ ಮೊದಲು ಅನಿಸ್ತದ. ಹೀಂಗ ಒಂದ ದಿನಾ ಸಂಜಿ ಮುಂದ ಮನಿ ಹತ್ರ ನ ಇದ್ದ ಪಾರ್ಕಿಗೆ ವಾಕಿಂಗ ಹೋಗಿದ್ದೆ. ನನ್ನ ಮಗ ಮತ್ತು ಮಗಳು ಆಟ ಆಡಲಿಕತ್ತಿದ್ರು, ಸ್ವಲ್ಪ ಹೊತ್ತು ಅವರ ಜೊತಿಗೆ ಆಡಿ ಬಂದು ಅಲ್ಲೇ ಇದ್ದ ಒಂದು ಬೇಂಚ್ ಮ್ಯಾಲೆ ಕುತೆ. ಎಷ್ಟು ಛಂದ ಬಾಲ್ಯ ಅಲ್ಲಾ? ಯಾವ ಕಪಟತನ ಇರಂಗಿಲ್ಲಾ.ಎಷ್ಟ ಹಿತಾ ಇರತದ ಗತಿಸಿಹೊದ ನೆನಪುಗಳನ್ನು … Read more

ಸಾಮಾನ್ಯ ಜ್ಞಾನ (ವಾರ 14): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು? ೨.    ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ? ೩.    ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು? ೪.    ಚೆಸ್ ಗ್ರ್ಯಾಂಡ್ ಮಾಸ್ಟರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು? ೫.    ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು? ೬.    ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು? ೭.    ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ … Read more

ಕಲಿಕೆ ಮತ್ತು ಶಿಕ್ಷಣ: ನಾರಾಯಣ ಎಂ.ಎಸ್.

      ಬೆಳಗಿನ ಕಾಫಿಯೊಂದಿಗೆ ಭಾನುವಾರದ ವೃತ್ತ ಪತ್ರಿಕೆ ಓದುವ ಮಜವೇ ಬೇರೆ ಎಂದುಕೊಳ್ಳುತ್ತಾ ಪೇಪರ್ ಕೈಗೆತ್ತಿಕೊಂಡೆ. “ಖಾಸಗೀ ಕಾಲೇಜುಗಳಲ್ಲಿನ್ನು ಸರ್ಕಾರೀ ಸೀಟುಗಳಿಲ್ಲ, ವೃತ್ತಿ ಶಿಕ್ಷಣ ವಿದ್ಯಾರ್ಥಿಗಳಿಗೆ ಬರೆ” ಎಂಬ ತಲೆಬರಹ ನೋಡಿ ಗಾಬರಿಯಾಯಿತು. ವಿದ್ಯಾರ್ಥಿಗಳಿಗೆ ಎಲ್ಲಿಯ ಬರೆ, ಬರೆಯೇನಿದ್ದರೂ ವಿದ್ಯಾರ್ಥಿಗಳ ಪೋಷಕರಿಗೆ ತಾನೆ, ಎಂದು ಕೊಳ್ಳುತ್ತಾ ಲೇಖನದ ವಿವರಗಳತ್ತ ಕಣ್ಣಾಡಿಸಿದೆ. ನಿಯಮಗಳಲ್ಲಿ ಈಗ ಮಾಡಲಾಗುತ್ತಿರುವ ಬದಲಾವಣೆಯಿಂದ ಪ್ರಸಕ್ತ ನಲವತ್ತೈದು ಸಾವಿರವಿರುವ ವಾರ್ಷಿಕ ಶುಲ್ಕ ಮುಂದಿನ ವರುಷದಿಂದ ಕನಿಷ್ಟ ಮೂರು ಪಟ್ಟು ಹೆಚ್ಚುವುದಾಗಿ ಬರೆದಿದ್ದರು. ಹಾಗಾಗಿ … Read more