ಸಂಪಾದಕೀಯ

ವಾರ ಮೂರು….. :)))

  ಕಳೆದ ವಾರ ಫೇಸ್ ಬುಕ್ ನಲ್ಲಿ ಚಿಕ್ಕಲ್ಲೂರು ಅನ್ನೋ ಹೆಸರು ನೋಡಿ ಆಶ್ಚರ್ಯವಾಗಿತ್ತು.  ಹಿರಿಯ ಪತ್ರಕರ್ತರಾದ ಕುಮಾರ ರೈತ ಅವರು ಚಿಕ್ಕಲ್ಲೂರು ಜಾತ್ರೆಯ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವುದರ ಜೊತೆಗೆ "ಜನಪದ ನಾಯಕ ಸಿದ್ದಪ್ಪಾಜಿ ಸ್ಮರಣೆಗೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಜಾತ್ರೆ ನಡೆಯುತ್ತದೆ. ಜ. 27ರಂದು ನಾನು ಹೋಗಿದ್ದೆ. ಅಲ್ಲಿನ ಚಂದ್ರಮಂಡಲದ ಬೆಂಕಿ ಎತ್ತ ಹೆಚ್ಚು ಉರಿಯುವುದೋ ಅತ್ತ ಮುಂದಿನ ಹಂಗಾಮಿನಲ್ಲಿ ಸಮೃದ್ಧತೆ ಇರುತ್ತದೆ ಎಂಬುದು ನಂಬಿಕೆ" ಎಂಬ ಸಾಲನ್ನು  ಫೋಟೋಗಳ […]

ಮೊದಲು ಓದುಗನಾಗು

ಕಾರ್ನಾಡರ “ಹಯವದನ”

ಮನುಷ್ಯನ ಅಪೂರ್ಣತೆಯ ಬಗೆಗೆ ಆಲೋಚಿಸಲು, ಕಾರ್ನಾಡರ “ಹಯವದನ” ಓದಬೇಕು. ನಾಟಕ ಆರಂಭ ಆಗುವುದು ಗಣೇಶನ ಅಪೂರ್ಣತೆಯ ಉಲ್ಲೇಖನದಿಂದ. ಇಲ್ಲಿ ಕಂಡುಬರುವುದು ಬರೇ ಮೂರು ಮುಖ್ಯ ಪಾತ್ರಗಳು – ಪದ್ಮಿನಿ, ದೇವದತ್ತ ಹಾಗೂ ಕಪಿಲ. ಇಲ್ಲಿ ಅಪೂರ್ಣತೆಯ ಪ್ರತೀಕ ಅನ್ನುವಂತೆ ಹಯವದನನಿದ್ದಾನೆ.  ಇಲ್ಲಿನ ಕಥೆ ಸಾಮಾನ್ಯವಾಗಿ ಗೊತ್ತಿರುವಂತಹದೆ. ಯಾವುದೇ ಕಾರಣಕ್ಕೆ ಇಬ್ಬರು ಮನುಷ್ಯರ ತಲೆ ಅದಲು ಬದಲಾದರೆ, ತಲೆ ಇರುವವನನ್ನು ಅವನ ಹೆಸರಿನಿಂದ ಗುರುತಿಸುತ್ತೇವೆ, ಯಾಕೆಂದರೆ ತಲೆ ಮುಖ್ಯ. ಈ ಸಣ್ಣ ತುಣುಕನ್ನು ಹಿಡಿದುಕೊಂಡು ಕಾರ್ನಾಡರು ತುಂಬಾ ವಿಚಾರ […]

ಪಂಜು-ವಿಶೇಷ

ಓ ನಾಗರಾಜ ಅಪ್ಪಣೆಯೇ…

  ನಮ್ಮ ಆಫೀಸಿನ ಎದುರು ಬೈಕುಗಳು ಸಾಲಾಗಿ ನಿಲ್ಲುವ ಜಾಗದಲ್ಲಿ ಮೊನ್ನೆ ನಾಗರಹಾವೊಂದು ಬಂದು ಮಲಗಿತ್ತು. ಅದೇನು ಬೈಕಿನಂತೆ ಸರದಿ ಸಾಲಿನಲ್ಲಿ ಇರಲಿಲ್ಲ. ಯಾರದೋ ಬೈಕಿನ ಟ್ಯಾಂಕ್ ಕವರ್‌ನಲ್ಲಿ ಬೆಚ್ಚಗೆ ಪವಡಿಸಿತ್ತು. ಸದ್ಯ ಬೈಕಿನ ಸವಾರನಿಗೆ ಅದೇನು ಮಾಡಲಿಲ್ಲ. ಗಾಬರಿಯಿಂದ ಇಳಿದು ಯಾವುದೋ ಚರಂಡಿ ಹುಡುಕಿಕೊಂಡು ಹೋಯಿತು. ಆವತ್ತೆಲ್ಲ ಆ ಹಾವಿನ ಬಗ್ಗೆ ಗುಲ್ಲೋ ಗುಲ್ಲು. ಅಲ್ಲಿದ್ದವರೆಲ್ಲ ಹಾವು ಅಲ್ಲಿಗೆ ಏಕೆ ಬಂತು ಎಂಬುದರ ಬಗ್ಗೆ ಒಂದು ವಿಚಾರಸಂಕಿರಣಕ್ಕೆ ಆಗುವಷ್ಟು ಮಾತಾಡಿದರು ಎನ್ನಿ. ಹಾವುಗಳು ಯಾರಿಗೆ ತಾನೆ […]

ಕಥಾಲೋಕ

ಅಂತರಂಗದ ಗಂಗೆ

ಆಫೀಸ್‍ಗೆ ಮುಂಚೆ ಬರುವ ಅಭ್ಯಾಸವಿದ್ದರೆ ಇದೊಂದು ಮುಜುಗರ. ಒಳಗೆಲ್ಲ ಕಸ ಗುಡಿಸುತ್ತಿದ್ದರು. ಹಾಗಾಗಿ ಸೆಕ್ಷನ್ನಿನ ಹೊರಗೆ ನಿಂತಿದ್ದೆ. ನಾನು  ನಿಂತಿರುವುದನ್ನು  ಗಮನಿಸಿದ ಆಕೆ ಬೇಗ-ಬೇಗ ಎಂಬಂತೆ ಗುಡಿಸಿ, ಹಾಗೆ ಒಳಗಿದ್ದ ಡಸ್ಟ್ ಬಿನ್ ಗಳ ಎಲ್ಲ ಕಾಗದಗಳನ್ನು ಒಂದೆ ಬ್ಯಾಸ್ಕೆಟ್ ಗೆ ಹಾಕಿಹೊರಬಂದಳು. ಒಳಗೆ ಗುಡಿಸಿದಾಗ ಎದ್ದ  ಧೂಳು ಸ್ವಲ್ಪ  ಸರಿಯಾಗಲಿ ಎಂದು ಒಂದೆರಡು ನಿಮಿಷ ನಿಂತಿದ್ದೆ. ಆಕೆ ಒಳಗಿನಿಂದ ತಂದ ಕಸವನ್ನೆಲ್ಲಹೊರಗಿನ ದೊಡ್ಡ ಕಸದಡಬ್ಬಿಗೆ ಹಾಕುವ ಮುನ್ನ ಅದೇನೋ  ಗಮನಿಸಿದಳು.  ಈ ಅಕ್ಷರಜ್ಞಾನವಿಲ್ಲದಿರುವ ಕೆಲಸದವರಲ್ಲಿ ಒಂದು […]

ಕಾವ್ಯಧಾರೆ

ಮೂರು ಕಾವ್ಯಗಳು

ಮನಸ್ಸೆಂಬ ಚಿಟ್ಟೆ ************* ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ  ನೋಡಲು ಕಣ್ಣುಗಳು ಸಾಲದು ಮೈಯ ಮೇಲೆಲ್ಲಾ ಕಪ್ಪು ಕಂಗಳು ನೋಡುಗರ ಕಣ್ಮನ ಸೆಳೆಯುವುದು    ಅಲ್ಲಿಂದಿಲ್ಲಿಗೆ ಹಾರುವೆ  ಹಿಡಿಯಲು ಹೋದರೆ ಓಡುವೆ  ಜಗದ ಸೃಷ್ಟಿಯ ಮೆಚ್ಚಲೇ ಬೇಕು  ನಿನಗೆ ನೀನೆ ಸಾಟಿಯಿರಬೇಕು    ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ  ಹಾರುವ ನಿನ್ನನು ನೋಡಿದರೆ  ಮನಸು ಕೂಡ ನಿನ್ನೊಡನೆಯೇ  ಕುಣಿಯುತ ಹೊರಡುವುದು ಬೇರೆಡೆಗೆ !! -ಅರ್ಪಿತಾ ರಾವ್  ನವಮಾಸ  ********* ನವಮಾಸ ಬಂದಿದೆ ಆಹ್ಲಾದವ ತಂದಿದೆ ಎನ್ನ ಬಾಳಿನಲ್ಲಿ […]

ವಾಸುಕಿ ಕಾಲಂ

ಕಾಂಟೆಕ್ಸ್ಟ್

ಮನುಷ್ಯನ ಭಾವನೆಗಳು ಸಾರ್ವತ್ರಿಕ. ಆದರೆ ಅವುಗಳ ಅಭಿವ್ಯಕ್ತಿ ಬದಲಾಗುತ್ತದೆ – ಬೇರೆ ಬೇರೆ ದೇಶಗಳಲ್ಲಿ, ಭಾಷೆಗಳಲ್ಲಿ, ಕಾಲಘಟ್ಟಗಳಲ್ಲಿ ಕಾಣಬರುವ ರೀತಿಯಲ್ಲಿ ಭಿನ್ನತೆಯಿರುತ್ತದೆ. ಇದನ್ನು ‘ಕಾಂಟೆಕ್ಸ್ಟ್’ ಅಂತೀನಿ ನಾನು. ಈ ಕಾಂಟೆಕ್ಸ್ಟ್ ಗೊತ್ತಿದ್ದಾಗ ಮಾತ್ರ ಕೆಲವು ಪಾತ್ರಗಳು, ಸನ್ನಿವೇಶಗಳು, ಚಿತ್ರಗಳನ್ನು ಅಪ್ಪ್ರಿಶಿಯೇಟ್ ಮಾಡಲಿಕ್ಕೆ ಸಾಧ್ಯ! ಇದಕ್ಕೆ ಉದಾಹರಣೆಯಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಎರಡು  ಮಹಾನ್ ಚಿತ್ರಗಳ ಬಗ್ಗೆ ಹೇಳಲು ಇಷ್ಟಪಡುತ್ತೇನೆ – “೧೨ ಆಂಗ್ರಿ ಮೆನ್” ಹಾಗು “ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ”. ಪ್ರತಿಯೊಬ್ಬ […]

ಪಂಜು-ವಿಶೇಷ

ಮಾತೃ ಭಾಷೆಗೆ ಸಿಕ್ಕ ಮನ್ನಣೆ

  ಹಚ್ಚೇವು ಕನ್ನಡದ ದೀಪ  ಕರು ನಾಡ  ದೀಪ  ಸಿರಿನುಡಿಯ ದೀಪ ಒಲವೆತ್ತಿ ತೋರುವಾ ದೀಪ l            ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಭಾರತದ ನನ್ನ ಹಳ್ಳಿ ಬಿಟ್ಟು ಈ ಮರುಭೂಮಿಗೆ ಬಂದು ಇಳಿದಾಗ ಅಸಾಧ್ಯ ಭಯ ಇತ್ತು. ದೇವರೇ! ಹೇಗೆ ನಾನು ಬದುಕಿ ಉಳಿದೇನಾ ಅಂತ. ಆದರೆ ನಾನು ಇದ್ದ ಜಾಗ ತುಂಬಾ ಸುರಕ್ಷಿತವಾಗಿತ್ತು. ನನ್ನ ಬಹು ಮಹಡಿ ಕಟ್ಟಡದಲ್ಲಿ ಹಾಗೂ ಸುತ್ತಲೂ ಎಲ್ಲವೂ ಇತ್ತು. ಕ್ಲಿನಿಕ್, […]

ಚಿನ್ಮಯ್ ಮಠಪತಿ ಅಂಕಣ

ನನ್ನೊಳಗಿನ ಗುಜರಾತ…! ಭಾಗ 3

ಯಾರಿಗುಂಟು ಯಾರಿಗಿಲ್ಲ…!! ಇದನ್ನು ಅದೃಷ್ಟ ಅನ್ನುತ್ತಿರೊ ಅಥವಾ ದುರಾದೃಷ್ಟ ಅನ್ನುತ್ತಿರೊ ನಾನರಿಯೆ. ಆದರೆ, ನಾನು ಮಾತ್ರ ಬಾಲ್ಯದಲ್ಲಿಯೇ ಈ ಬದುಕಿನ ಆದಿ ಅಂತ್ಯಗಳೆಂಬ ಜನನ ಮರಣಗಳನ್ನು ಬಲು ಸನಿಹದಿಂದ ಕಣ್ಣು ತುಂಬ ಕಂಡವನು. ಅವುಗಳ ಅರ್ಥವನ್ನು ತಿಳಿಯುವ ಮೊದಲೇ ಬೆಳ್ಳಿ ಪರದೆಯ ಮೇಲೆ ಮೂಡಿ ಬರುವ ಅದ್ದೂರಿ ವೈಭವಿಕ ಚಲನಚಿತ್ರದ ದೃಶ್ಯದಂತೆ ಎರಡರ ಜೀವಂತ ದೃಶ್ಯವಿದ್ಯಮಾನಗಳನ್ನು ಕಂಡು, ಬುದ್ಧಿ ಬೆಳೆಯುತ್ತಿದ್ದಂತಯೇ ಅವುಗಳ ಆಳ ಮತ್ತು ವಿಸ್ತಾರಗಳನ್ನು ತಿಳಿಯುವ ಪ್ರಯತ್ನಕ್ಕೆ ಇಳಿದವನು. ಪುಟ್ಟು ಊರಲ್ಲಿ ಹುಟ್ಟಿ, ಗ್ರಾಮೀಣ ಬದುಕನ್ನು […]

ಪ್ರವಾಸ-ಕಥನ

ಬೆಟ್ಟದ ಅ೦ಗಳದಲ್ಲೊ೦ದು ದಿನ

ಈ ಬಾರಿಯ ರಜಾ ಮಜಾವನ್ನು ಅನುಭವಿಸಲು ಮಿತ್ರರೆಲ್ಲ ಸೇರಿ ಭೂ ಲೋಕದ ‘ಸ್ವರ್ಗ’ ಕೊಡಗಿಗೆ ಹೋಗುವುದೆ೦ದು ತೀರ್ಮಾನಿಸಿದೆವು. ನಮ್ಮ ಪ್ರವಾಸದ ಮುಖ್ಯ ವೀಕ್ಷಣಾ ತಾಣವಾಗಿ ಆರಿಸಿಕೊ೦ಡದ್ದು ಮುಗಿಲುಪೇಟೆಯೆ೦ದೇ ಖ್ಯಾತಿ ಗಳಿಸಿರುವ ಮಾ೦ದಲಪಟ್ಟಿ ಪರ್ವತ ಸಾಲುಗಳನ್ನು. ಅ೦ತೆಯೇ ನಿಗದಿತ ದಿನಾ೦ಕದ೦ದು ಮು೦ಜಾನೆ ಉಡುಪಿಯಿ೦ದ ಮ೦ಗಳೂರಿಗಾಗಿ ಕೊಡಗಿಗೆ ಹೊರಟೆವು,ಹೊರಟಾಗ ಮು೦ಜಾನೆ ೫ಃ೩೦. ಮು೦ಜಾನೆಯ ಚುಮು ಚುಮು ಚಳಿಯಲ್ಲಿ ಗಾಡಿ ಓಡಿಸುವುದು ತು೦ಬಾ ಮಜವಾಗಿತ್ತು. ನಾನು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಸೂರ್ಯೋದಯ ನೊಡಿದ್ದೇ ಅ೦ದು ! ಹಾಗೂ ಸೂರ್ಯ ನನ್ನ […]

ಚುಟುಕ

ಇಬ್ಬರ ಚುಟುಕಗಳು

  ನಿಸ್ವಾರ್ಥ.. ಒಕ್ಕಲಿಗ ನೆಟ್ಟ ಗಿಡ ಇಂದು ದೊಡ್ಡ ಮರವಾಗಿ ನೆರಳಾಗಿ ನಿಂತಿದೆ ದಣಿದ ದೇಹಕೆ ಯಾವ ಭೇದವನ್ನು ತೋರದೆ ಫಲ! ಭೂ ತಾಯಿ ಕೊಟ್ಟ ನೀರಿಂದ ರೈತ ಸುರಿಸಿದ ಬೆವರಿಂದ ಫಲಸಿಕ್ಕಿತು! ಹೊಟ್ಟೆಗೆ ಅನ್ನ ಜೊತೆಗೆ ಮುಚ್ಚಿಕೊಳ್ಳಲು ಮಾನ!! -ಮಂಜು ವರಗಾ   ಕಣ್ಣೀರು ಅತ್ತುಬಿಡು ಎಂದಾಗ,  ಬರದ ಹನಿ, ಅಳಬೇಡ ತಡೆಯೆಂದಾಗ, ಉಕ್ಕಿ ಹರಿವ ಧಾರೆ!! ಹೃದಯ ಇದ್ದಾಗ,  ಕೊಂಚವೂ ಗೋಚರಿಸದ , ತನ್ನನ್ನೇ ಕೊಟ್ಟು ಬರಿದಾದ ಮೇಲೆ,  ಭಾರ ತೋರುವ,  ಏಕೈಕ  ವೈಚಿತ್ರ್ಯ!! […]

ಛಾಯಾ-ಚಿತ್ರ

ಹೂವು, ಮರ, ಬಾನು

               ಮುರಳಿ ಮೋಹನ್ ಕಾಟಿ                                    ಪ್ರಸಾದ್ ಶೆಟ್ಟಿ ವಿ.ಸೂ.: ಹೂವಿನ ಚಿತ್ರಗಳನ್ನು ಪ್ರಸಾದ್ ಶೆಟ್ಟಿಯವರು ಲಾಲ್ ಬಾಗ್ ನ ಪುಷ್ಪಮೇಳದಲ್ಲಿ ತೆಗೆದಿದ್ದಾರೆ.             ಕೊನೆಯ ಮೂರು ಚಿತ್ರಗಳನ್ನು ಮುರಳಿ ಮೋಹನ್ ರವರು ತೆಗೆದಿದ್ದಾರೆ.

ಲೇಖನ

ನಮ್ಮ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ…..

1. ಮೊದಲು ಓದುಗನಾಗು:       ಕಾರ್ನಾಡರ “ಹಯವದನ”- ರಾಜೇಂದ್ರ ಬಿ. ಶೆಟ್ಟಿ 2. ಪಂಜು ವಿಶೇಷ:       ಓ ನಾಗರಾಜ ಅಪ್ಪಣೆಯೇ…-ಹರಿ ಪ್ರಸಾದ್ 3. ಕಥಾಲೋಕ:      ಅಂತರಂಗದ ಗಂಗೆ – ಪಾರ್ಥಸಾರಥಿ ನರಸಿಂಗರಾವ್ 4. ಕಾವ್ಯಧಾರೆ:      ಮೂರು ಕಾವ್ಯಗಳು -ಅರ್ಪಿತಾ ರಾವ್, ಕಾಂತರಾಜು ಕೆ ಮತ್ತು ರಾಜಹಂಸ 5. ಸಿನಿ-ಲೋಕ:       ಕಾಂಟೆಕ್ಸ್ಟ್- ವಾಸುಕಿ ರಾಘವನ್ 6. ಪಂಜು-ವಿಶೇಷ:     ಮಾತೃ ಭಾಷೆಗೆ ಸಿಕ್ಕ ಮನ್ನಣೆ […]

ಪಂಜು-ವಿಶೇಷ

ಇದೇ ಮೇಲಲ್ಲವೇ?

  "ದೇವರಮನೆ ಬಾಗಿಲು ಮುಚ್ಚಿಬಿಡೇ" ಅಪರೂಪಕ್ಕೆ ಬಂದ ಗೆಳತಿ ಅಸ್ಪೃಶ್ಯಳಂತೆ ಬಾಗಿಲಲ್ಲೇ ನಿಂತು ಹೇಳುತ್ತಿದ್ದಳು. ಯಾಕೆಂದು ಕೇಳುವ ಅಗತ್ಯವಿರಲಿಲ್ಲ. ನಾನು ಹೋಗಿ ಮುಚ್ಚಿದೆ. "ಅಯ್ಯೋ ಬಿಡೇ ನೀನೊಬ್ಬಳು ಅಡಗೂಲಜ್ಜಿ ತರಹ ಆಡ್ತೀಯಮ್ಮಾ"-ಜೊತೆಯಲ್ಲಿದ್ದ ಇನ್ನೊಬ್ಬ ಗೆಳತಿಯ ಪ್ರತಿಕ್ರಿಯೆ. ಅವಳಲ್ಲಿ ಉತ್ತರವಿರಲಿಲ್ಲ, ಮುಖ ಪೆಚ್ಚಾಯಿತು. ಅದೊಂದು ನಂಬಿಕೆಯಷ್ಟೆ. ನಂಬಿಕೆಯೊಳಗೆ ಪ್ರಶ್ನೆಗಳೂ ಹುಟ್ಟುವುದಿಲ್ಲ, ಹಾಗೂ ಉತ್ತರಗಳೂ ಇರುವುದಿಲ್ಲ. ಪ್ರಶ್ನೆ ಇದ್ದರದು ನಂಬಿಕೆಯಾಗಿರುವುದಿಲ್ಲ, ಒಂದು ಸಂಶಯವಾಗಿರುತ್ತದೆ. ಸಂಪ್ರದಾಯಸ್ಥ ಮನೆಗಳಿಂದ ಬಂದ ಇಂದಿನ ಹೆಣ್ಣುಮಕ್ಕಳೆಲ್ಲರೂ ಇದೊಂದು ಅರ್ಥವಿಲ್ಲದ ಆಚರಣೆ ಎಂದು ತಿಳಿದಿದ್ದರೂ, ಅದನ್ನೊಂದು ಸಹಜಪ್ರಕ್ರಿಯೆ […]

ಪಂಜು ಸಂದರ್ಶನ

ಮತ್ತೆ ಮತ್ತೆ ತೇಜಸ್ವಿ

ಗೆಳೆಯ ಪರಮೇಶ್ವರ್ ಮತ್ತು ನನಗೂ ತುಂಬಾ ದಿನಗಳ ನಂಟು. ಈ ನಂಟನ್ನು ನನಗೆ ಕರುಣಿಸಿದ್ದು ಫೇಸ್ ಬುಕ್. ಫೇಸ್ ಬುಕ್ ನಲ್ಲಿ ಪರಿಚಯವಾದ ಈ ಗೆಳೆಯ ತನ್ನ ಕನಸುಗಳನ್ನು ಫೋನಿನಲ್ಲಿ ಎಷ್ಟೋ ಬಾರಿ ಹಂಚಿಕೊಂಡಿದ್ದಾರೆ. ಇವತ್ತು ಅವರ ಬಹುದಿನದ ಕನಸು ಎನ್ನಬಹುದಾದ ತೇಜಸ್ವಿಯವರ ಕುರಿತ ಸಾಕ್ಷ್ಯಚಿತ್ರವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಿ ನಮ್ಮೆದುರು ಅದರ ತುಣುಕುಗಳನ್ನು ಯೂ ಟೂಬ್ ನಲ್ಲಿ ಹಾಕುವುದರ ಮೂಲಕ ಹಂಚಿಕೊಂಡಿದ್ದಾರೆ. 'ಮತ್ತೆ ಮತ್ತೆ ತೇಜಸ್ವಿ' ಎಂಬ ಶೀರ್ಷಿಕೆ ಹೊತ್ತ ಸಾಕ್ಷ್ಯಚಿತ್ರದ ಐದು ನಿಮಿಷದ ಪ್ರೊಮೋ ನೋಡಿದ […]

ಕಾವ್ಯಧಾರೆ

ಚಂಚಲ

ನಾ ಬರೆವ ಮುನ್ನ ಎದೆಯಲಿ ಕವಿತೆಯಾಗಿ ಹೊಮ್ಮಿದೆ ನೀನು, ಅದನು ಹಾಳೆಗಿಳಿಸುವ ಮುನ್ನ ನನಗೇ ಅರಿವಿರಲಿಲ್ಲ, ನನ್ನೊಳಗಿನ ನೀನು..!          ನನ್ನ-ನಿನ್ನ ಆಂತರಿಕ ಸಂಘರ್ಷದ        ಚಂಚಲತೆಯ ಭಯದಲಿ ಕರಗುತಿರುವೆ ನಾನು,        ಕಾಣದೇ ಅಂತರ್ಮುಖಿಯಾಗಿ ಕಾಡುವ        ನಿನಗೆ ನಾ ತಿಳಿಸಲಿ ಏನನು..?   ಬರೆಯುವುದೇನನು? ಪದಗಳೇ ಇರದ ಭಾವನೆಗಳ, ಕಾಗದದಿ ಬಣ್ಣದ ಶಾಹಿಯಲಿ.. ಬರಿಯ ವರ್ಣ ಮಿಶ್ರಿತ ಅಸ್ಪಷ್ಟ ಮನದ ಪುಟದಲಿ […]

ಕಥಾಲೋಕ

ಊರು-ಕೇರಿ ನಡುವ ನಾಗರಾವು ಮಿಸುಕಾಡಿ…

ಶ್ರಾವಣ ತಿಂಗಳ ಕೊನಿ ಸೋಮವಾರ. ಊರ ಬಸನದೇವ್ರ ಗುಡಿಯೊಳಗ ತಿಂಗಳಾನುಗಟ್ಲೆ ನಡೆದ ಬಸವ ಪುರಾಣಕ್ಕೆ ಅಂದು ಮಂಗಳ ಹೇಳೋ ದಿವ್ಸ. ಹೇಳಿಕೇಳಿ ಅದು ಲಿಂಗಾಯತರು ಬಾಳ ಮಂದಿ ಇರೋ ಬಸವನೂರು. ಲಿಂಗಾಯತರಿಗೆ ಬಸವಪುರಾಣದ ಮಂಗಲೋತ್ಸವೆಂದರೆ ಕೇಳಬೇಕೆ. ಪ್ರತಿಯೊಂದು ಮನೆಗೆ ಸಾವಿರಾರು ರೂ.ಪಟ್ಟಿ ವಸೂಲು ಮಾಡಿದ್ರು. ಊರು ಜನರು ಬುಟ್ಟಿಗಟ್ಟಲೆ ರೊಟ್ಟಿ, ಚೀಲಗಟ್ಟಲೆ ಜ್ವಾಳ-ಗೋದಿ ಕೊಟ್ಟು ‘ಬಸಣ್ಣ ನಿನ್ನ ಜಾತ್ರಿ ಚಂದಂಗ ನಡಿಯುವಂಗ ನೋಡಕೋಳ್ಳಪೋ. ಎಲ್ಲಾ ನಿನ್ನ ಕೂಡೇತಿ’ ಎಂದು ಬೇಡಿಕೊಂಡಿದ್ದರು. ಬಸಣ್ಣದೇವ್ರ ಗುಡಿಮುಂದಿನ ದೊಡ್ಡ ಪೆಂಡಾಲದೊಳಗ ಊರ […]

ಚಿನ್ಮಯ್ ಮಠಪತಿ ಅಂಕಣ

ನನ್ನೊಳಗಿನ ಗುಜರಾತ..!!! ಭಾಗ-2

  ಆಗಷ್ಟ ತಿಂಗಳಲ್ಲಿ ನಮ್ಮ ಕರ್ಣಾಟಕದೆಲ್ಲೆಡೆ ಮುಂಗಾರು ಮಳೆಗಾಲ, ನಾವುಗಳು ಇಲ್ಲಿದ್ದುಕೊಂಡು ಸೂಯ್ಯೆಂದು ಸುರಿವ ಮಳೆಯ ಜೊತೆಗೆ ಚೆಂದದ ತಂಪನೆಯ ಹವಾಮಾನವನ್ನು ಸವಿಯುತ್ತಿರುತ್ತೇವೆ. ಆದರೆ, ಭೌಗೋಳಿಕವಾಗಿ ಇಲ್ಲಿಗೂ ಮತ್ತು ಗುಜರಾತಿನ ಹವಾಮಾನಕ್ಕೂ ತುಂಬಾ ವ್ಯತ್ಯಾಸವಿದೆ. ಆ ಆಗಷ್ಟ ಮಾಸದಲ್ಲಿ ಅಲ್ಲಿದ್ದಂತಹ ತಾಪಮಾನ ಸರಿ ಸುಮಾರು 42’ ಡಿಗ್ರಿ ಸೆಲ್ಸಿಯಸ್. ಉರಿಯುವ ಕೆಂಡದಂತಹ ತಾಪಮಾನಕ್ಕೆ ಬಳಲಿ ಬೆಂಡಾಗಿ ಅವರ ಮನೆ ತಲುಪಿದೆ. ಆ ಮೊದಲೇ ರಂಜನ ಪಟೇಲ್ ರವರನ್ನು ನಾನು ಒಂದೆರಡು ಬಾರಿ ನಮ್ಮ ಕರ್ಣಾಟಕಕ್ಕೆ ಬಂದಾಗ ಭೇಟಿಮಾಡಿದ್ದೆ. […]

ವಾಸುಕಿ ಕಾಲಂ

ವುಡೀ ಆಲೆನ್ ಮತ್ತು ವಾಸುಕಿ ರಾಘವನ್

  ಕೆಲವು ಚಿತ್ರಗಳೇ ಹಾಗೆ. ಮೊದಲ ಬಾರಿ ನೋಡಿದಾಗ ಅಷ್ಟೊಂದು ಅದ್ಭುತ ಅಂತ ಅನ್ನಿಸಿರೋಲ್ಲ. ಅದಕ್ಕೆ ನಾವು ನೋಡಿದಾಗಿನ ಮನಸ್ಥಿತಿ ಕಾರಣ ಇರಬಹುದು, ಅಥವಾ ಅಷ್ಟೊಂದು ವೈವಿಧ್ಯಮಯ ಚಿತ್ರಪ್ರಕಾರಗಳ ಪರಿಚಯ ಇಲ್ಲದಿರುವುದು ಕೂಡ. ನಂತರದ ಮರುವೀಕ್ಷಣೆಗಳಲ್ಲಿ ಆ ಚಿತ್ರಗಳು ಹೊಸ ಹೊಸ ಡೈಮೆನ್ಶನ್ ಗಳನ್ನು ತೋರುತ್ತವೆ. “ಅಯ್ಯೋ, ಇದನ್ನ ನಾನು ಗಮನಿಸಿಯೇ ಇರಲಿಲ್ಲ ಅಲ್ವಾ” ಅಂತ ನಮ್ಮನ್ನು ಚಕಿತಗೊಳಿಸುತ್ತವೆ. ಅಂತಹ ಒಂದು ಅದ್ಭುತ ಚಲನಚಿತ್ರ "ಆನೀ ಹಾಲ್". ಇದು ನನಗೆ ವೈಯಕ್ತಿಕವಾಗಿ ತುಂಬಾ ಪ್ರಿಯವಾದ ಚಿತ್ರವೂ ಹೌದು! […]