ಮೂವರ ಕವಿತೆಗಳು: ಗಿರಿ, ರಘುನಂದನ ಹೆಗಡೆ, ಪಾ.ಮು.ಸುಬ್ರಮಣ್ಯ ಬ.ಹಳ್ಳಿ.
ಕಾಡುವ ನೆನಪಿನ ಹಿಂದೆ ನೂರೊಂದು ಚಡಪಡಿಕೆ ಒಂದೊಂದು ತಿರುವಲು ನಿನ್ನ ನಗುವಿನ ಪಳೆಯುಳಿಕೆ ಕಂಡೂ ಕಾಣದೆ ಕತ್ತಲಿನ ಮೂಲೆಯಲಿ ಕಂಪಸೂಸಿದ ನಿನ್ನ ಬೆಳದಿಂಗಳಂತ ನಸುನಗೆ ಸುಮ್ಮನೆ ಪ್ರೇಮಿಸುತಿದ್ದ ನನ್ನ ಕವಿಯನಾಗಿ ಮಾಡಿದ್ದು ನೀನಾ? ನಿನ್ನ ನೆನಪಾ? ಹೇಳು, ದಯವಿಟ್ಟು ಹೇಳು ಕನಸಲಿ ಬಂದು ಕನವರಿಸುವಂತೆ ಮಾಡಿದ್ದು ನೀನಾ? ನಿನ್ನ ಮುಂಗುರಳಾ? – ಗಿರಿ ಮೂಲ ಮರೆತವನ ಹುಡುಕಾಟ ಅಂಗಳದಿಂದ ಹತ್ತು ಹೆಜ್ಜೆ ಎತ್ತಿಟ್ಟರೆ ನೆರಳು ಬಿಸಿಲು ಆಟವಾಡುವ ಮನೆ ಉಸ್ಸೆಂದು ಹಗುರಾಗಿ … Read more