ಕಾ. ಕಾ.. ಕಾಗೆ. . . ನೀ ಏಕೆ ಹೀಗೆ?: ಅಖಿಲೇಶ್ ಚಿಪ್ಪಳಿ
ನೆನಪಿದೆಯೇ? ಸಾವಿರಾರು ವರ್ಷಗಳ ಹಿಂದೆ ಬರೆಯಲಾದ ಈಸೋಫನ ಕಾಗೆ ನೀರು ಕುಡಿದ ಕತೆ. ಹೂಜಿಯ ತಳಭಾಗದಲ್ಲಿದ್ದ ನೀರು ಕಾಗೆಗೆ ಎಟಕುತ್ತಿರಲಿಲ್ಲ. ಬುದ್ಧಿವಂತ ಕಾಗೆ ಅಕ್ಕ-ಪಕ್ಕದಲ್ಲಿರುವ ಕಲ್ಲುಗಳನ್ನು ಹೂಜಿಗೆ ಹಾಕಿ ನೀರು ಮೇಲೆ ಬಂದ ಮೇಲೆ ನೀರನ್ನು ಕುಡಿದು ಬಾಯಾರಿಸಿಕೊಂಡಿತು. ಕಾಗೆಯ ಬುದ್ಧಿಮತ್ತೆಯನ್ನು ಹೊಗಳಲು ಈ ಕತೆಯನ್ನು ಸೃಷ್ಟಿ ಮಾಡಿರಬೇಕು ಎಂದು ಕೊಂಡರೆ ತಪ್ಪು, ನಾವು ಅರ್ಥಮಾಡಿಕೊಂಡಿದ್ದಕ್ಕಿಂತ ಹೆಚ್ಚು ಬುದ್ಧಿವಂತಿಕೆ ಕಾಗೆಗಳಿಗೆ ಇದೆ. ವಿಜ್ಞಾನಿಗಳು ಯಾವುದೆಲ್ಲಾ ವಿಷಯಗಳನ್ನಿಟ್ಟುಕೊಂಡು ಸಂಶೋಧನೆ ಮಾಡುತ್ತಾರೆ. ಭೂಮಿಯ ಮೇಲೆ ಇರುವ ಚರಾಚರಗಳನ್ನೆಲ್ಲಾ, ಹುಡುಕಿ, ಹೆರಕಿ, … Read more