೨೦೧೫ ಡಿಸೆಂಬರ್ ಪ್ಯಾರೀಸ್ ಶೃಂಗಸಭೆಯ ಮುನ್ನ ಒಂದಿಷ್ಟು!!: ಅಖಿಲೇಶ್ ಚಿಪ್ಪಳಿ
ಈ ಬಾರಿ ಶಿವರಾತ್ರಿ ಕಳೆದ ಮೇಲೂ ಚಳಿ ಮುಂದುವರೆದಿತ್ತು. ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಅಕಾಲಿಕ ಮಳೆ ಅಡಚಣೆಯಾಗಿ ಕಾಡಿತು. ಬಿಲ್ಲನ್ನು ಎಳೆದು ಬಿಟ್ಟಾಗ ಬಾಣ ನುಗ್ಗುವ ರೀತಿಯಲ್ಲಿ ಬೇಸಿಗೆ ದಾಪುಗಾಲಿಕ್ಕಿ ಬರುತ್ತಿದೆ. ಉಳ್ಳವರು ಸೆಖೆಯಿಂದ ಬಚಾವಾಗಲು ಹವಾನಿಯಂತ್ರಕದ ಮೊರೆ ಹೋಗುತ್ತಾರೆ. ಎಂದಿನಂತೆ ತಂಪುಪಾನೀಯಗಳ ಜಾಹಿರಾತು ಟಿ.ವಿಯಲ್ಲಿ ಧಾಂಗುಡಿಯಿಡುತ್ತಿವೆ. ಅಂಟಾರ್ಟಿಕಾವನ್ನು ನಾಚಿಸುವಂತೆ ತಣ್ಣಗೆ ಮಾಡುವ ರೆಪ್ರಿಜಿರೇಟರ್ ಭರಾಟೆಯೂ ವ್ಯೋಮಕ್ಕೆ ಜಿಗಿದಿದೆ. ಅತ್ತ ಪ್ಯಾರೀಸ್ ನಗರ ಡಿಸೆಂಬರ್ ತಿಂಗಳಿಗಾಗಿ ಕಾಯುತ್ತಿದೆ. ಡಿಸೆಂಬರ್ ತಿಂಗಳಲ್ಲಿ ೧೯೬ ದೇಶಗಳ ಸಾವಿರಾರು ಧುರೀಣರು, ವಿಜ್ಞಾನಿಗಳು, ಭಾಗಿದಾರರು, … Read more