ಅನ್ನದಾತನೊಬ್ಬನ ಜೊತೆ ಇಡೀ ದಿನ..: ನಟರಾಜು ಎಸ್. ಎಂ.

 ಚಳಿಯ ಕಾರಣಕ್ಕೆ ವಾಕಿಂಗ್ ಮತ್ತು ಜಾಗಿಂಗ್ ಅನ್ನು ಅಕ್ಷರಶಃ ನಿಲ್ಲಿಸಿಬಿಟ್ಟಿದ್ದ ನಾನು ಇತ್ತೀಚೆಗೆ ಶಿವರಾತ್ರಿಯ ತರುವಾತ ಚಳಿ ಕಡಿಮೆ ಆದ ಕಾರಣ ಬೆಳಿಗ್ಗೆ ಅಥವಾ ಸಂಜೆ ಮತ್ತೆ ವಾಕ್ ಶುರು ಮಾಡಿದ್ದೆ. ಆಫೀಸಿನ ದಿನಗಳಾದರೆ ಸಂಜೆ ಐದೂವರೆ ಆರು ಗಂಟೆ ಆಗುತ್ತಿದ್ದಂತೆ ಆಫೀಸಿನಿಂದಲೇ ಸೀದಾ ತೀಸ್ತಾ ನದಿಯ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಒಂದೂ ಒಂದೂವರೆ ಗಂಟೆ ತಪ್ಪದೆ ವಾಕ್ ಮಾಡುತ್ತೇನೆ. ಇವತ್ತು ಭಾನುವಾರ ರಜೆ ಇದ್ದುದರಿಂದ ಬೆಳಿಗ್ಗೆ ಬೇಗನೆ ಎದ್ದವನು ರೆಡಿಯಾಗಿ ಮಾರ್ನಿಂಗ್ ವಾಕ್ ಗೆಂದು ತೀಸ್ತಾ ನದಿಯ … Read more

ವಿದ್ಯುತ್ ಎಂಬ ಮಹದುಪಕಾರಿ ಯಾಮಾರಿದರೆ ಬಲು ಅಪಾಯಕಾರಿ: ರೋಹಿತ್ ವಿ. ಸಾಗರ್

ಕರೆಂಟ್ ಅಥವಾ ವಿದ್ಯುತ್ ಎಂಬ ಶಬ್ದ ಯಾರಿಗೆ ತಾನೆ ಗೊತ್ತಿಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ತರಹೇವಾರಿ ವಿಧಗಳಲ್ಲಿ ನಾವು ಅವಲಂಬಿಸಿರುವ, ಅದಿಲ್ಲದ ಜೀವನವನ್ನು ಊಹಿಸಲೂ ಹೆದರಬೇಕಾಗಿರುವಂತಹ ಅಪೂರ್ವ ಶಕ್ತಿಯ ಆಕರವೇ ಈ ’ವಿದ್ಯುತ್’ ಅಥವಾ ’ಕರೆಂಟ್’.    ಹಗಲು ರಾತ್ರಿಗಳೆನ್ನದೆ ಸೂರ್ಯ ಚಂದ್ರರನ್ನೂ ನಾಚಿಸುವ ಬೆಳಕಿನ ದೀಪಗಳು, ಬೆಳಗ್ಗೆ ಎದ್ದಕೂಡಲೇ ಸುಪ್ರಭಾತ ಹಾಡುವ ರೇಡಿಯೋ, ಎಫ್.ಎಮ್ ಗಳು, ಮುಂದೆ ಕೂತವರ ಕಾಲವನ್ನೇ ಕರಗಿಸಬಲ್ಲ ಮೂರ್ಖರ ಪೆಟ್ಟಿಗೆ ಎಂದೇ ಖ್ಯಾತಿ ಪಡೆದ ಟಿ.ವಿ.ಗಳು, ಜಾಣರ ಪೆಟ್ಟಿಗೆಯಂತಿರುವ ನಮ್ಮ … Read more

ಕರಿಯನ ಕತೆ: ಅಖಿಲೇಶ್ ಚಿಪ್ಪಳಿ

ಊರಿನಲ್ಲಿ ಹೊಸ ಮನೆ ಕಟ್ಟಿಕೊಂಡು, ಬೇಕಾದಷ್ಟು ತರಕಾರಿ ಬೆಳೆದುಕೊಂಡು, ಸೊಂಪಾಗಿ ತಿನ್ನಬಹುದು ಎಂದು ಕನಸು ಕಾಣುತ್ತಿದ್ದವನಿಗೆ, ಎರವಾಗಿದ್ದು ಮಂಗಗಳು, ಏನೇ ಬೆಳೆದರೂ ಅದ್ಯಾವುದೋ ಹೊತ್ತಿನಲ್ಲಿ ಬಂದು ತಿಂದು, ಗಿಡಗಳನ್ನು ಹಾಳು ಮಾಡಿ, ಇಡೀ ಶ್ರಮವನ್ನು ವ್ಯರ್ಥಮಾಡಿ ಹೋಗುತ್ತಿದ್ದವು, ಮಂಗಗಳ ಅಸಹಾಯಕತೆ ಗೊತ್ತಿದ್ದರೂ, ಅದೇಕೋ ಅವುಗಳ ಮೇಲೆ ಸ್ವಲ್ಪ ಕೋಪವೂ ಬರುತ್ತಿತ್ತು. ತರಕಾರಿಗಳನ್ನು ತಿನ್ನುವುದಲ್ಲದೇ, ಗಿಡಗಳನ್ನು ಹಾಳು ಮಾಡುವ ಪರಿಗೆ ಕೆಲವೊಂದು ಬಾರಿ ಖಿನ್ನತೆಯೂ ಆವರಿಸುತ್ತಿತ್ತೇನೋ ಎಂಬ ಅನುಮಾನವೂ ಕಾಡುತ್ತಿತ್ತು. ಇದಕ್ಕೊಂದು ಉಪಾಯವೆಂದರೆ, ನಾಯಿಯೊಂದನ್ನು ತಂದು ಸಾಕುವುದು, ನಾಯಿ … Read more

ಮಗುವಿನ ಆರೈಕೆ: ಮಹಿಮಾ ಸಂಜೀವ್

ನಾನು ನಾಲ್ಕು ವರ್ಷದ ಮಗುವಿನ ತಾಯಿ..ಅಂದರೆ ನನಗು ನಾಲ್ಕೇ ವರ್ಷ!! ಹೌದು ಒಂದು ಮಗುವಿನೊಂದಿಗೆ ತಾಯಿಯೂ ಹುಟ್ಟುತ್ತಾಳೆ .. ನನ್ನ ತಾಯ್ತನದ ಜನನವು ಹಾಗೆ ಆದದ್ದು .. ಮಗು ಬೆಳೆಸುವದೇನು  ಸಹಜದ ಕಲೆಯಲ್ಲ…ಆದರೆ ಅದರ ತಯಾರಿಯನ್ನ ಬಹಳ ಮುಂಚಿನಿಂದ  ಮಾಡಬೇಕಾಗುತ್ತೆ ..ಒಂದು ಮಾನಸಿಕ ತಯಾರಿಯದ್ದು ಮತ್ತೊಂದು ದೈಹಿಕ ತಯಾರಿಯದ್ದು  ಮಾನಸಿಕವಾಗಿ ಹೆಣ್ಣು ತಾಯ್ತನಕ್ಕೆ ಬಹಳ ಬೇಗ ಸಜ್ಜುಗೊಳ್ಳುತ್ತಾಳೆ  ಅನ್ನೋ ನಂಬಿಕೆ ಇದೆ..ನಾನು ಹೇಳುತ್ತೇನೆ ಅದು ಸುಳ್ಳು, ಆಕೆಗೂ ಸಮಯ ಬೇಕು..ಅಲ್ಪ ಸಲ್ಪದ ತರಬೇತಿಯು ಬೇಕು..ಮನೆಯಲ್ಲಿ ಹಿರಿಯರಿದ್ದಾರೆ ಸರಿ, … Read more

ಕನ್ನಡಿಗಳು: ಪ್ರಸಾದ್ ಕೆ.

ಕಳೆದ ಒಂದೆರಡು ತಿಂಗಳಿನಿಂದ ಇದು ತುಂಬಾ ಕಷ್ಟವಾಗಿಬಿಟ್ಟಿದ್ದರೂ ಅಭ್ಯಾಸವಾಗಿ ಹೋಗಿದೆ.  ನನ್ನ ಸಮಸ್ಯೆಯೇನೆಂದರೆ ನಾನು ನೋಡುತ್ತಿರುವ ದೃಶ್ಯಗಳೆಲ್ಲಾ ತಿರುಗುಮುರುಗಾಗಿ ಕಾಣಿಸುತ್ತಿವೆ. ಮಿರರ್ ಇಮೇಜ್ ಅಂತೀವಲ್ಲಾ, ಆ ಥರಾನೇ. ಪುಸ್ತಕದಲ್ಲಿರುವ ಅಕ್ಷರಗಳು, ಬೀದಿಯ ಸೈನ್ ಬೋರ್ಡುಗಳು, ಕಟ್ಟಡಗಳಿಗೆ ಜೋತುಬಿದ್ದಿರುವ ಫಲಕಗಳು ಹೀಗೆ ಎಲ್ಲವೂ, ಎಲ್ಲೆಲ್ಲೂ ಕನ್ನಡಿಯಿಂದ ನೋಡಿದಂತೆ ಕಾಣುತ್ತಿವೆ. ಮಗುವೊಂದು ಮೊಟ್ಟಮೊದಲ ಬಾರಿಗೆ ನಡೆದಾಡಲು ಆರಂಭಿಸಿದಾಗ ಜಗತ್ತನ್ನು ಹೇಗೆ ಅಚ್ಚರಿಯಿಂದ ಕಣ್ಣರಳಿಸಿ ನೋಡುತ್ತದೆಯೋ ಹಾಗೇ ನನಗೂ ಅನುಭವವಾಗುತ್ತಿದೆ. ಎಲ್ಲವೂ ನಿಗೂಢ, ಎಲ್ಲವೂ ವಿಚಿತ್ರ. ಮೊದಲೊಮ್ಮೆ ಭಯಭೀತನಾಗಿದ್ದರೂ ಈಗ ಸಾಮಾನ್ಯವಾಗಿ … Read more

ಪರಶುವಿನ ದೇವರು (ಕೊನೆ ಭಾಗ): ಶಾಂತಿ ಕೆ. ಅಪ್ಪಣ್ಣ

ಇಲ್ಲಿಯವರೆಗೆ… "ಅವ್ವ, ಚಡ್ಡಿ ಹಾಕ್ಕೊಡು" ಮಗು ಕೈ ಜಗ್ಗಿದಾಗ ಅದರ ಬೆನ್ನಿಗೆ ಗುದ್ದಿದಳು ಸುಜಾತ. "ಏ ಮುಂಡೇದೇ,  ಎಷ್ಟು ಸಲ ಹೇಳಿಲ್ಲ, ಮಮ್ಮಿ ಅನ್ಬೇಕು ಅಂತ, ಇನ್ನೊಂದ್ಸಲ ಅವ್ವ ಪವ್ವ ಅಂದ್ರೇ ಹೂತಾಕ್ಬುಟ್ಟೇನು" ಮಾತೇನೋ ಆಡಿ ಮುಗಿಸಿದಳು. . ಆದರೆ ಅವಳಿಗೆ ತನ್ನದೇ ವರಸೆಯ ಬಗೆ ನಾಚಿಕೆಯೆನಿಸಿತು. ಅಪರೂಪಕ್ಕೂ ಅವಳಲ್ಲಿ ಇಂಥ ಬಯ್ಗುಳಗಳು ಹೊರಬಿದ್ದದ್ದಿಲ್ಲ ಆದರೆ ಇಲ್ಲಿಗೆ ಬಂದ ಮೇಲೆ ತನಗೆ ಇವೆಲ್ಲ ಸಲೀಸಾಗಿ ಬರುತ್ತಿದೆ. ಏಟು ತಂದು ಮಗು ಅಳುವುದಕ್ಕೂ ಕೆಳಗಿನಿಂದ ಪಾಪಯ್ಯನ ಹೆಂಡತಿ ಅವಳನ್ನು … Read more

ಥ್ರೀರೋಜಸ್ ಕಥೆ (ಭಾಗ 2): ಸಾವಿತ್ರಿ ವಿ. ಹಟ್ಟಿ

  ಇಲ್ಲಿಯವರೆಗೆ… ಮೊದಲನೇ ಕಿರು ಪರೀಕ್ಷೆಗಳು ಮುಗಿದಿದ್ದವು. ಅವತ್ತು ಶನಿವಾರ. ಕೊನೆಯಲ್ಲಿ ಆಟದ ಅವಧಿ ಇತ್ತು. ಏಕೋ ಆಟದಲ್ಲಿ ತೊಡಗಿಕೊಳ್ಳಲು ಮನಸ್ಸು ಬರಲಿಲ್ಲ. ನನ್ನ ವಾಸದ ಕೋಣೆಗೆ ಹೋಗಿ ಅಕ್ಕಿ ತೊಳೆದು, ಒಲೆ ಹೊತ್ತಿಸಿಟ್ಟೆ. ಅನ್ನ ಬೇಯುವಷ್ಟರಲ್ಲಿ ರವೀಂದ್ರ ಕಲ್ಲಯ್ಯಜ್ಜನವರ ಖಾನಾವಳಿಯಿಂದ ಕೆಟ್ಟ ಖಾರದ ರುಚಿಯಾದ ಸಾರು ತಂದಿರಿಸಿದ್ದ. ಊಟದ ನಂತರ, ಸಾಕಷ್ಟು ಸಮಯವಿದ್ದುದರಿಂದ ಒಂದೆರಡು ತಾಸು ಚೆಂದಗೆ ನಿದ್ದೆ ಮಾಡಿಬಿಟ್ಟೆ. ಎಚ್ಚರವಾದಾಗ ಕೋಣೆಯಲ್ಲಿ ರವೀ ಇರಲಿಲ್ಲ. ಅವನು ಸಮಯ ಸಿಕ್ಕಾಗೆಲ್ಲ ಗೆಳೆಯರನ್ನು ಹುಡುಕಿಕೊಂಡು ಹೋಗುವವನು. ಎಲ್ಲಿದ್ದಾನೆಂದು … Read more

ಕಿರಿ ಕಿರಿ ಕೆಟ್ಟು: ಪ್ರಶಸ್ತಿ ಪಿ.

ಓದುಗ ಮಿತ್ರರಿಗೆಲ್ಲಾ ಯುಗಾದಿ ಶುಭಾಶಯಗಳು ಎನ್ನುತ್ತಾ ಮನ್ಮಥನಾಮ ಸಂವತ್ಸರದಲ್ಲಿ ಹೊಸದೇನು ಬರೆಯೋದು ಅಂತ ಯೋಚಸ್ತಿರುವಾಗ್ಲೇ ಹೋ ಅಂತ ಪಕ್ಕದ ಪೀಜಿ ಹುಡುಗ್ರೆಲ್ಲಾ ಕೂಗಿದ ಸದ್ದು. ಓ ಇನ್ನೊಂದು ವಿಕೆಟ್ ಬಿತ್ತು ಅನ್ಸತ್ತೆ ಅಂತ ಹಾಸಿಗೆಯಿಂದ ತಟ್ಟನೆದ್ದ ರೂಂಮೇಟು ಟೀವಿ ರಿಮೇಟ್ ಹುಡುಕಹತ್ತಿದ್ದ. ನಿನ್ನೆಯಷ್ಟೇ ಒರಿಜಿನಲ್ ಆಧಾರ್ ಕಾರ್ಡ್ ಹೊಂದಿರುವವರು ಮತ್ತು ಡೂಪ್ಲಿಕೇಟ್ ಆಧಾರ್ ಕಾರ್ಡ್ ಹೊಂದಿರೋರ ನಡುವಿನ ಕದನ ಅಂತಲೇ ಬಿಂಬಿತವಾಗಿದ್ದ ಚೆಂಡುದಾಂಡಿನಾಟದಲ್ಲಿ ಮುಳುಗಿದ್ದ ನನಗೆ ಇವತ್ತು ಮತ್ತೊಂದು ಪಂದ್ಯವಿದೆಯೆನ್ನೋದೇ ಮರೆತು ಹೋಗಿತ್ತು. ಟೀವಿ ಹಾಕುತ್ತಲೇ ಮತ್ತೆ … Read more

ಕೆಲಸಕೆ ಚಕ್ಕರ್… ಊಟಕೆ ಹಾಜರ್!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ… ನಿಶಾ ಳ ಸಂಗಡ ಹೋಗುತ್ತಿರುವಂತೆ, ಆಫೀಸಿನಲ್ಲಿ ಎಲ್ಲರ ಕಣ್ಣುಗಳು ಇವರನ್ನೇ ನೋಡುತ್ತಿದ್ದರೆ ಸುಜಯ್ ಗೆ ಒಳಗೊಳಗೇ  ಖುಷಿ. ಅದರೂ ಅದು ಹೇಗೋ ಅವನ ಮುಖದ ಮೇಲೆಯೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದನ್ನು ಗಮನಿಸಿದ ಅವಳ ಮುಖದಲ್ಲೊಂದು ತುಂಟ ಮುಗುಳ್ನಗು ಸುಳಿಯಿತು. ಇಬ್ಬರೂ ರಿಸೆಪ್ಶನ್ ದಾಟಿಕೊಂಡು ಹೋಗುತ್ತಿದ್ದಂತೆ, “ಸುಜಯ್… ಹೇ ಸುಜಯ್…” ಅಂತ ಕೂಗುತ್ತಿದ್ದ ಕೋಮಲ ದನಿಯೊಂದು ಇವರಿಬ್ಬರಿಗೂ ನಿಲ್ಲುವಂತೆ ಮಾಡಿತು. ಯಾರು ಅಂತ ಹಿಂತಿರುಗಿ ನೋಡಿದರೆ ಆ ಕೋಮಲ ದನಿ ಬೇರೆ ಯಾರದೂ ಅಲ್ಲ, ಪೃಥ್ವಿ ಅನ್ನುವ … Read more

ಮೂವರ ಕವನಗಳು: ನವೀನ್ ಮಧುಗಿರಿ, ಶ್ರೀಮಂತ್ ಎಮ್. ಯನಗುಂಟಿ, ಯದುನಂದನ್ ಗೌಡ ಎ.ಟಿ

ನಾವು ಪ್ರೀತಿಯೆಂದರೆ ನಂಬಿಕೆ ನೀನು ನನ್ನೆಷ್ಟು ನಂಬುವೆ? ನಿನ್ನಷ್ಟೇ ನಾನೇಕೆ ನಿನಗಿಷ್ಟವಾದೆ? ಗೊತ್ತಿಲ್ಲ. ಪ್ಲೀಸ್ ನಿಜ ಹೇಳು ಕಾರಣ ಹುಡುಕುವುದು ಕಷ್ಟ ನಾನು ನಿನ್ನೆಷ್ಟು ಪ್ರೀತಿಸಲಿ? ಅದು ನಿನ್ನಿಷ್ಟ ನಿಲ್ಲು ಏನು? ಪದೇ ಪದೇ ನೀನು ನಾನು ಅನ್ನುವುದು ನಿಲ್ಲಿಸು ಮತ್ತೇನನ್ನಲಿ? ನಾವು ಅಂತನ್ನುವುದು ಒಳ್ಳೆಯದು ಯಾಕೆ? ನೀನೆಂದರೆ ನಾನು ನಾನೆಂದರೆ ನೀನು ~•~ ಬೆವರು ನಮ್ಮಪ್ಪ ಕವಿತೆಗಳ ಬರೆಯಲಿಲ್ಲ ಭತ್ತ, ರಾಗಿ, ಜೋಳ ಬೆಳೆದ ಅಕ್ಷರಗಳ ಸ್ಖಲಿಸಿಕೊಂಡ ಕವಿಗೆ ಹಸಿವಾಯ್ತು ಅಪ್ಪನ ಬೆವರು ತಿಂದ ~•~ … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಅಂಟಿಕೊಳ್ಳದಿರುವಿಕೆ (Non-attachment) ಐಹೈ ದೇವಾಲಯದ ಅಧಿಪತಿ ಕಿಟಾನೋ ಗೆಂಪೊ ೧೯೩೩ ರಲ್ಲಿ ವಿಧಿವಶನಾದಾಗ ೯೨ ವರ್ಷ ವಯಸ್ಸು ಆಗಿತ್ತು. ಯಾವುದಕ್ಕೂ ಅಂಟಿಕೊಳ್ಳದಿರಲು ತನ್ನ ಜೀವನದುದ್ದಕ್ಕೂ ಆತ ಪ್ರಯತ್ನಿಸಿದ್ದ. ೨೦ ವರ್ಷ ವಯಸ್ಸಿನ ಅಲೆಮಾರಿ ಬೈರಾಗಿಯಾಗಿದ್ದಾಗ ತಂಬಾಕಿನ ಧೂಮಪಾನ ಮಾಡುತ್ತಿದ್ದ ಯಾತ್ರಿಕನೊಬ್ಬನನ್ನು ಸಂಧಿಸಿದ್ದ. ಒಂದು ಪರ್ವತಮಾರ್ಗದಲ್ಲಿ ಅವರೀರ್ವರೂ ಜೊತೆಯಾಗಿ ಕೆಳಕ್ಕೆ ಇಳಿಯುತ್ತಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲೋಸುಗ ಒಂದು ಮರದ ಕೆಳಗೆ ಕುಳಿತರು. ಯಾತ್ರಿಕ ಧೂಮಪಾನ ಮಢಲೋಸುಗ ತಂಬಾಕನ್ನು ಕಿಟಾನೋಗೆ ನೀಡಿದ. ಆ ಸಮಯದಲ್ಲಿ ತುಂಬಾ ಹಸಿದಿದ್ದ ಕಿಟಾನೋ ಅದನ್ನು … Read more

ಹೆಗ್ಣಾಮೆಷಿನ್!: ಎಸ್.ಜಿ.ಶಿವಶಂಕರ್

    ವಿಚಿತ್ರವೆನ್ನಿಸಬಹುದು! ವಾಷಿಂಗ್ ಮೆಷಿನ್, ಸ್ಯೂಯಿಂಗ್ ಮೆಷಿನ್, ಗ್ರೈಡಿಂಗ್ ಮೆಷಿನ್ ಎಲ್ಲಾ ಕೇಳಿರ್ತೀರಿ. ಆದರೆ ’ಹೆಗ್ಣಾಮೆಷಿನ್’ ? ಅಂದ್ರೆ…ಇದೆಂತಾ ಹೆಸರು..? ಇದೆಂತಾ ಮೆಷಿನ್ನು? ಇದು ಹೇಗೆ ಕೆಲಸ ಮಾಡುತ್ತೆ? ಏನು ಕೆಲಸ ಮಾಡುತ್ತೆ?  ಹೆಗ್ಗಣ ಹಿಡಿಯುವ  ಇಲ್ಲಾ ಹೆಗ್ಗಣ ಸಾಯಿಸುವ ಮೆಷಿನ್ ಇರಬಹುದೆ..? ಇಲ್ಲಾ…ಈ ಲೇಖಕ ಇಲಿಬೋನನ್ನೇ ಹೆಗ್ಣಾಮೆಷಿನ್ ಎಂದು ಹೇಳಿ ಲೇವಡಿ ಮಾಡುತ್ತಿರಬಹುದೆ..? ಈ ಪ್ರಶ್ನೆಗಳು ಈಗಾಗಲೇ ನಿಮ್ಮ ತಲೆಯಲ್ಲಿ ತುಂಬಿರಲು ಸಾಧ್ಯ!     ‘ದೊಡ್ಡಪ್ಪ, ನಾವು ಹೆಗ್ಣಾಮೆಷಿನ್ನಿಗೆ ಯಾವಾಗ ಹೋಗೋದು..?’     ‘ಮಿಲಿ’ ಎಂಬ … Read more

ಪರಶುವಿನ ದೇವರು: ಶಾಂತಿ ಕೆ. ಅಪ್ಪಣ್ಣ

ಪರಶುವಿಗೆ ದೇವರು ಬಂದಾಗ ಡೊಳ್ಳನ ಕೇರಿಯ ಜನ ಅದಿನ್ನೂ ತಂತಮ್ಮ ಕೆಲಸಗಳಿಂದ ಮರಳಿ ದಣಿವಾರಿಸಿಕೊಳ್ಳುತ್ತ,  ಅಲ್ಲಲ್ಲೆ ಜಗುಲಿ ಕಟ್ಟೆಯ ಮೇಲೆ ಕುಳಿತು ಗಂಡಸರು ಬೀಡಿಯ ಝುರುಕಿ ಎಳೆದು ಕೊಳ್ಳುತ್ತಿದ್ದರೆ, ಹೆಂಗಸರು ಒಂದು ಬಾಯಿ ಕಾಫಿ ಕುಡಿಯುವ ಆತುರಕ್ಕೆ ಒಳಗೆ ಒಲೆ ಹಚ್ಚುವ ಕೆಲಸದಲ್ಲಿ ತೊಡಗಿದ್ದರು. ಮೊದಲಿನಂತೆ ಚೂರುಪಾರು ಸೌದೆ ತಂದು ಪ್ರಯಾಸದಿಂದ ಒಲೆ ಹಚ್ಚುವ ಕೆಲಸವೇನೂ ಈಗಿರಲಿಲ್ಲ, ಊರು ನಾಡು ಕಾಣುತ್ತಿದ್ದ ಬದಲಾವಣೆಯ ಗಾಳಿ ಯಾವುದೇ ತಕರಾರು ಮಾಡದೆ ಕೇರಿಯೊಳಗೂ ನುಸುಳಿ ಅಲ್ಲೂ ಅಲ್ಪಸ್ವಲ್ಪ ಬದಲಿಕೆ ತರತೊಡಗಿತ್ತು. … Read more

ಟ್ಯೂನು, ಲೈನು ಮತ್ತು ನಾನು: ಹೃದಯಶಿವ

ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಪರಮೇಶ್ವರ ಹೆಗಡೆಯವರು ಸಂಗೀತ ನೀಡುತ್ತಿರುವ ಆಲ್ಬಮ್ ನಲ್ಲಿ ನಾಲ್ಕು ಹಾಡು ಬರೆಯುತ್ತಿದ್ದೇನೆ ಅಂತ ಹಿಂದೊಮ್ಮೆ ಹೇಳಿದ್ದೆ. ಪರಮೇಶ್ವರ ಹೆಗಡೆಯವರ ಮಾತಿನಂತೆ ಮೊದಲೇ ಸಾಹಿತ್ಯ ಬರೆದುಕೊಡುವಂತೆ, ಆಮೇಲೆ ಆ ಸಾಹಿತ್ಯಕ್ಕೆ ಅವರು ಟ್ಯೂನ್ಸ್ ಹಾಕುವುದಾಗಿ ಹೇಳಿದ್ದರು. ಅದರಂತೆ ನನ್ನ ಆರು ಭಾವಗೀತೆಗಳನ್ನು ಅವರಿಗೆ ಕಳುಹಿಸಿಕೊಟ್ಟೆ. ಆ ಆರರ ಪೈಕಿ ನಿಮಗೆ ಬೇಕಾದ ನಾಲ್ಕನ್ನು ಆಯ್ಕೆ ಮಾಡಿಕೊಳ್ಳಿ ಅಂತಲೂ ಹೇಳಿದೆ. ಅವರು ಆಯ್ತು ಅಂದು ಅದರಂತೆ ಆ ಆರರ ಪೈಕಿ ಒಂದಕ್ಕೆ ಟ್ಯೂನ್ ಕೂಡ … Read more

ಭಾಷಣದ ಗಮ್ಮತ್ತು: ಅನಿತಾ ನರೇಶ್ ಮಂಚಿ

 ಭಾಷಣ ಎಂಬುದೊಂದು ಕಲೆ. ಕೆಲವರಿಗೆ ಭಾಷಣ ಮಾಡುವುದು ಎಂದರೆ ನೀರು ಕುಡಿದಂತೆ. ಮೈಕ್ ಕಂಡರೆ ಅದೇನೋ ಪ್ರೀತಿ. ಬಹು ಜನ್ಮದಾ ಅನುಬಂಧವೇನೋ ಎಂಬಂತೆ ಹಿಡಿದುಕೊಂಡದ್ದನ್ನು  ಬಿಡಲೇ ಒಲ್ಲರು. ಸಾಧಾರಣವಾಗಿ ರಾಜಕಾರಿಣಿಗಳಿಗೆ ಈ ರೋಗ ಇರುವುದು. ಯಾಕೆಂದರೆ ಅವರು ತಮ್ಮ ಕಾರ್ಯಗಳಿಂದ ಹೆಚ್ಚಾಗಿ ಮಾತಿನ ಬಲದಲ್ಲೇ ಮಂತ್ರಿಗಳಾಗುವಂತಹವರು. ಯಾವುದೇ ಮಾನದಂಡದ ಮುಲಾಜಿಗೂ ಸಿಕ್ಕದೇ ಪದವಿಯನ್ನಾಗಲೀ, ಪದಕಗಳನ್ನಾಗಲೀ,ಪ್ರಶಸ್ತಿಗಳನ್ನಾಗಲೀ ಮಾತಿನ ಬಲದಲ್ಲೇ ಪಡೆಯುವಂತಹವರು. ಅಂತವರು ಮಾತು ನಿಲ್ಲಿಸುವುದಾದರೂ ಹೇಗೆ ಅಲ್ಲವೇ?   ಇವರಷ್ಟೇ ಮೈಕ್ ಪ್ರೀತಿಸುವ ಇನ್ನೊಂದು ಪಂಗಡದ ಜನ ಯಾರೆಂದರೆ  ಕಾರ್ಯಕ್ರಮವನ್ನು … Read more

ಕಾಯಕವೇ ಕೈಲಾಸ: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ..  ಅವತ್ತು ಸಂಜೆ ಬೇಗನೆ ಮನೆಗೆ ತಲುಪಿದ ವೆಂಕಣ್ಣನ ಕಿವಿಯಲ್ಲಿ ಜೇಮ್ಸ್ ನ ಮಾತುಗಳು ಗುಂಯ್ ಗುಡುತ್ತಿತ್ತು. ಹೌದೆ? ನಾವೆಲ್ಲ ಅಮೆರಿಕಾಕ್ಕೆ ಬಂದು ಇವರ ಕೆಲಸಗಳನ್ನು ಕಸಿಯುತ್ತಿದ್ದೇವೆಯೇ? ಅನ್ನುವ ಪ್ರಶ್ನೆ ಇವನ ಕಾಡತೊಡಗಿತ್ತು. ಜಾನು ಮತ್ತು ಖುಷಿ ಇನ್ನೂ ಅಮೆರಿಕಾದ ದಿನಗಳಿಗೆ ಹೊಂದಿಕೊಳ್ಳದೆ ದಿನವಿಡಿ ನಿದ್ದೆಯಲ್ಲೇ ಕಳೆದಿದ್ದರು. ಇವನಿಗೂ ನಿದ್ದೆ ಎಳೆಯುತ್ತಿದ್ದರೂ ಬಲವಂತವಾಗಿ ಅದನ್ನು ತಡೆಯುತ್ತಿದ್ದ. ಆಗ ತಾನೇ ಎದ್ದು ಕುಳಿತಿದ್ದ ಖುಷಿಗೆ ಬೇರೆ ಏನೂ ಮಾಡಲು ತೋಚದೆ ಅಲ್ಲಿನ ಟೀವಿಯಲ್ಲಿ ಬರುತ್ತಿದ್ದ ಕಾರ್ಟೂನು ನೋಡುತ್ತಿದ್ದಳು.  ಜಾನು … Read more

ಥ್ರೀರೋಜಸ್ ಕಥೆ: ಸಾವಿತ್ರಿ ವಿ. ಹಟ್ಟಿ

ನನ್ನವಳಿಗೆ ನಾನೇನೂ ಕಡಿಮೆ ಮಾಡಿಲ್ಲ. ಅವಳು ನಮ್ಮ ತುಂಬು ಮನೆತನಕ್ಕೆ ಏಕೈಕ ಸೊಸೆ. ಸದ್ಯಕ್ಕೆ ನನಗೆ ಅವಳೇ ಮಗಳೂ, ಮಗನೂ ಇದ್ದ ಹಾಗೆ ಕೂಡ. ತಂದೆ ಉಮಾಶಂಕರ ತಾಯಿ ಗೌರಮ್ಮನವರಿಗೆ ಏಕೈಕ ಸುಪುತ್ರನಾಗಿರುವ ನಾನು ಈ ಗೊಂಬೆಯನ್ನು ಕೈ ಮಾಡಿ ತೋರಿಸಿ, ನನಗೆ ಬೇಕು ಎಂದಾಗ ಅಪ್ಪ ಮೌನವಾಗಿ ನನ್ನನ್ನೇ ನೋಡಿದ್ದರು ವಿಸ್ಮಯದಿಂದ. ಅವ್ವ ಹನಿಗಣ್ಣಳಾಗಿದ್ದರೂ ನಂತರ ನನ್ನ ಆಸೆಗೆ ಬೇಡ ಎನ್ನಲಿಲ್ಲ. ನಾನು ಚಿಕ್ಕವನಿದ್ದಾಗ ಏನೆಲ್ಲ ಕೇಳಿದರೂ ಇಲ್ಲವೆನ್ನದೇ ಕೊಡಿಸುತ್ತಿದ್ದರು ತಂದೆ-ತಾಯಿ. ನನ್ನ ಜೀವನದ ಎರಡನೇ … Read more

ಮಲೆಗಳಲ್ಲಿ ಮದುಮಗಳು ಮತ್ತು ನಾವು: ಪ್ರಶಸ್ತಿ ಪಿ.

೨೦೦೬-೦೭ ನೇ ಇಸವಿ. ಸಾಗರದ ಶಿವಲಿಂಗಪ್ಪ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ (ಕಳೆದ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ ಡಿಸೋಜ)ರ ಭಾಷಣ. ಸಾಹಿತ್ಯದ ಬಗ್ಗೆ ಮಾತನಾಡುತ್ತಾ ಅವರು ಕುವೆಂಪು ಅವ್ರ ಎರಡು ಮುಖ್ಯ ಕಾದಂಬರಿಗಳು ಯಾವುದು ಗೊತ್ತಾ ಅಂತ ಸಭೆಗೆ ಕೇಳಿದ್ದರು. ತಕ್ಷಣ ಕೈಯಿತ್ತಿದ್ದ ನಾನು ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡತಿ ಅಂದಿದ್ದೆ. ಶ್ರೀ ರಾಮಾಯಣ ದರ್ಶನಂ ಕೂಡಾ ಮಹತ್ಕೃತಿಯಾಗಿದ್ದರೂ ಅದು ಕಾವ್ಯ, ಕಾದಂಬರಿಯಲ್ಲ ಎಂಬ ಸಾಮಾನ್ಯ ಜ್ನಾನ … Read more

ಎಕ್ಸಟ್ರಾರ್ಡಿ-ನರಿ: ಅಮರ್ ದೀಪ್ ಪಿ.ಎಸ್.

ಅಲ್ಲೊಂದು ಮದುವೆ ನಡೀತಿರುತ್ತೆ. ಮಗಳ ಮದುವೆ ಮಾಡುವಾತ ಕೈಗುಣ ಚೆನ್ನಾಗಿದ್ದ ಅಡುಗೆ ಮಾಡುವವನನ್ನು  ಖುದ್ದಾಗಿ ಕರೆದು ಅಡುಗೆ ಮಾಡಲು ಹೇಳಿರುತ್ತಾನೆ.   ಪಾಪ, ಕುಕ್ಕು, ತನ್ನ ಪಾಡಿಗೆ ತಾನು ಮದುವೆಯ ಹಿಂದಿನ ದಿನವೇ ಬಂದು ಯಜಮಾನನನ್ನು ಕಂಡು ಅಂಗಿ ಕಳಚಿಟ್ಟು ಕೈಚಳಕದ ರುಚಿ ಜೋಡಿಸಲು ಕೆಲಸಕ್ಕೆ ಒಗ್ಗಿರುತ್ತಾನೆ.  ಮದುವೆ ಹಿಂದಿನ ದಿನ ಮತ್ತು ಮದುವೆ ದಿನ ಬಂದ ನೆಂಟರು, ಬಂಧುಗಳು, ಆಪ್ತರು, ಗೊತ್ತಿದ್ದವರು, ಗೊತ್ತಿಲ್ಲದವರೆಲ್ಲರೂ ಬಂದು ಸವಿದ ನಂತರ “ಅಡುಗೆ ಚೆನ್ನಾಗಿದೆ” ಅನ್ನುತ್ತಾರೆ. ಮದುವೆ ಮಾಡಿದ ಯಜಮಾನನಿಗೆ … Read more