ಪಿತೃ ಪೂಜೆಯ ಊಟ: ಸಾವಿತ್ರಿ ವಿ. ಹಟ್ಟಿ
ನಾನು, ಅಕ್ಕ ಮತ್ತು ಅವ್ವ ಆಬಾಲಿ ಹೂವು ಹೆಣ್ಕೊಂತ ಕುಂತಿದ್ವಿ. ಅಕ್ಕ ಮತ್ತು ಅವ್ವ ಮನೆತನಕ್ಕ ಸಂಬಂಧ್ಸೀದ ವಿಷಯ ಮಾತಾಡ್ಕೊಂತ ಇದ್ರು. ಮಧ್ಯೆ ಮಧ್ಯೆ ನಾನು ಅವರ ಮಾಲೀಗೂ ನನ್ನ ಮಾಲೀಗೂ ಹೋಲಿಸಿ ನೋಡಿ ಜಾಸ್ತಿ ನಾನೇ ಕಟ್ಟಿದ್ದು ಅಂತ ಧಿಮಾಕಿನಿಂದ ಹೂವು ಹೆಣೆಯಾಕ್ಹ್ಹತ್ತಿದ್ದೆ. ಆ ಹೊತ್ಗೆ ಹೊರಬಾಗಿಲ ಹತ್ರ ಯಾರದಾ ನೆಳ್ಳು ಬಿದ್ದಂಗಾತು. ಬಾಗಿಲ ತೋಳು ಹಿಡಿದು ಹಣಕಿ ಹಾಕಿದಂಗಾತು. ಎದ್ದು ಹೋಗಿ ನೋಡಿದೆ. ಯಾರೂ ಇರಲಿಲ್ಲ. ಯಾವಾ ಸಣ್ಣ ಹುಡುಗ್ರು ಆಟ ಆಡ್ಕೊಂತ ಬಂದು … Read more