ಒಲೆ: ಗುಂಡುರಾವ್ ದೇಸಾಯಿ
ಇತ್ತೀಚಿಗೆ ನಮ್ಮ ದೇವಸ್ಥಾನಕ್ಕೆ ದರ್ಶನಾರ್ಥವಾಗಿ ಬೆಂಗಳೂರಿನಿಂದ ಬಂದಿದ್ದ ದಂಪತಿಗಳಿಗಾಗಿ ನಮ್ಮ ಸಮಿತಿಯ ಹಿರಿಯರೊಬ್ಬರು ರಾತ್ರಿ ಅಡುಗೆ ಸಿದ್ಧ ಮಾಡುತ್ತಿದ್ದರು. ಆ ದಂಪತಿಗಳ ಪುತ್ರಿ ಅನ್ನ ಮಾಡುವುದನ್ನು ಗಾಬರಿಯಿಂದ ಬಿಟ್ಟ ಕಣ್ಣಿನಿಂದ ನೋಡುತ್ತಿದ್ದಳು. ಅದನ್ನು ಗಮನಿಸಿದ ಹಿರಿಯರು ‘ಯಾಕಮ್ಮ ಹಾಗೆ ನೋಡ್ತಾ ಇದ್ದಿಯಾ ಅಡುಗೆ ಮಾಡೋದು ನೋಡಿಲ್ವೆ? ಅಥವಾ ಹಸಿವೆಯಾಗಿದೆಯಾ?’ ಎಂದು ಕೇಳಿದರು. ‘ಅಂಕಲ್ ಅಡಿಗೆ ಈ ರೀತಿ ಮಾಡ್ತಿರಾ? ಅನ್ನ ಅದ್ಹೇಗೆ ಮಾಡ್ತೀರಿ? ವಿಜಲ್ ಕೇಳ್ತಾ ಇಲ್ಲ ಹಿಂಗೂ ಮಾಡಬಹುದಾ?’ ಎಂದು ಪ್ರಶ್ನೆ ಹಾಕಿದಳು ಹೀಗೂ ಉಂಟೆ … Read more