ಕಲಿಕೆ ಮತ್ತು ಶಿಕ್ಷಣ: ನಾರಾಯಣ ಎಂ.ಎಸ್.
ಬೆಳಗಿನ ಕಾಫಿಯೊಂದಿಗೆ ಭಾನುವಾರದ ವೃತ್ತ ಪತ್ರಿಕೆ ಓದುವ ಮಜವೇ ಬೇರೆ ಎಂದುಕೊಳ್ಳುತ್ತಾ ಪೇಪರ್ ಕೈಗೆತ್ತಿಕೊಂಡೆ. “ಖಾಸಗೀ ಕಾಲೇಜುಗಳಲ್ಲಿನ್ನು ಸರ್ಕಾರೀ ಸೀಟುಗಳಿಲ್ಲ, ವೃತ್ತಿ ಶಿಕ್ಷಣ ವಿದ್ಯಾರ್ಥಿಗಳಿಗೆ ಬರೆ” ಎಂಬ ತಲೆಬರಹ ನೋಡಿ ಗಾಬರಿಯಾಯಿತು. ವಿದ್ಯಾರ್ಥಿಗಳಿಗೆ ಎಲ್ಲಿಯ ಬರೆ, ಬರೆಯೇನಿದ್ದರೂ ವಿದ್ಯಾರ್ಥಿಗಳ ಪೋಷಕರಿಗೆ ತಾನೆ, ಎಂದು ಕೊಳ್ಳುತ್ತಾ ಲೇಖನದ ವಿವರಗಳತ್ತ ಕಣ್ಣಾಡಿಸಿದೆ. ನಿಯಮಗಳಲ್ಲಿ ಈಗ ಮಾಡಲಾಗುತ್ತಿರುವ ಬದಲಾವಣೆಯಿಂದ ಪ್ರಸಕ್ತ ನಲವತ್ತೈದು ಸಾವಿರವಿರುವ ವಾರ್ಷಿಕ ಶುಲ್ಕ ಮುಂದಿನ ವರುಷದಿಂದ ಕನಿಷ್ಟ ಮೂರು ಪಟ್ಟು ಹೆಚ್ಚುವುದಾಗಿ ಬರೆದಿದ್ದರು. ಹಾಗಾಗಿ … Read more