ಭೀಷ್ಮ ಪ್ರತಿಜ್ಞೆ: ಡಾ . ಸಿ.ಎಂ.ಗೋವಿಂದರೆಡ್ಡಿ
ಶ್ರೀ ವ್ಯಾಸಮಹರ್ಷಿಗಳು ತಮ್ಮ ಶಿಷ್ಯರಿಗೆ ಹೇಳಿದ ಮಹಾಭಾರತ ಕಥೆಯನ್ನು, ಅರ್ಜುನತನಯನಾದ ಅಭಿಮನ್ಯುವಿನ ಪುತ್ರ ಪರೀಕ್ಷಿತನ ಮಗನಾದ ಜನಮೇಜಯನು ಸರ್ಪಯಾಗ ಮಾಡುವ ಕಾಲದಲ್ಲಿ ವೈಶಂಪಾಯನನಿಂದ ಕೇಳಿ ತಿಳಿದನು : ಮಹರ್ಷಿ ವಿಶ್ವಾಮಿತ್ರ ಮೇನಕೆಯರ ಮಗಳೂ ಕಣ್ವಮಹರ್ಷಿಗಳ ಸಾಕುಮಗಳೂ ಆದ ಶಕುಂತಲೆಯನ್ನು ವರಿಸಿದವನು ಚಂದ್ರವಂಶದ ರಾಜನಾದ ದುಷ್ಯಂತ. ಈ ದುಷ್ಯಂತ ಶಕುಂತಲೆಯರ ಮಗನೇ ಭರತ. ಭರತನಿಂದಲೇ ಭಾರತವಂಶವಾಯಿತು. ಭರತನ ಮಗ ಸುಹೋತ್ರ ; ಸುಹೋತ್ರನ ಮಗ ಹಸ್ತಿ. ಇವನಿಂದಲೇ ರಾಜಧಾನಿಗೆ ಹಸ್ತಿನಾಪುರವೆಂಬ ಹೆಸರು ಬಂದದ್ದು. ಹಸ್ತಿಯ ಮಗ ಸಂವರಣ ; … Read more