ಅಭಿವೃದ್ದಿ ಯಾರಿಗೆ?: ಕಿರಣ ಆರ್.

ಆದಿವಾಸಿ ಎಂದರೆ ನಮ್ಮಲ್ಲಿ ಅದೆಂತಹದ್ದೋ ಪ್ರೀತಿ ಮತ್ತು ಖುಷಿ. ನಾವು ಸಹ ಆ ಹಂತವನ್ನು ದಾಟಿ ಬಂದಿದ್ದೇವೆ ಎಂದರೆ ನಂಬಲಾಗದ ಸತ್ಯ. ಅವರ ಜೀವನ ಶೈಲಿಯನ್ನು ತಿಳಿಯಲು  ಕಾತರತೆಯಿಂದ ಕಾಯುತ್ತೇವೆ. ಅದೆಷ್ಟೋ ಅಂತಹ ಸಿನಿಮಾಗಳನ್ನು ನೋಡಿ ಆಶ್ಚರ್ಯಪಡುವುದುಂಟು. ಗಿಣಿಯ, ಮಾರ, ಸಿಕ್ಕ, ಕಾಸ್ಯಾಲ, ಸೋಲಿಗ, ಜೇನುಕುರುಬ ಎಂಬ ಸಮುದಾಯದ ಮುದ್ದಾದ ಹೆಸರುಗಳು, ಕಾಡಿನೊಂದಿಗಿನ ಅವರ  ನಂಟು, ಆಧುನಿಕತೆಯ ಬೂತದೊಂದಿಗೆ ಅವರು ತಮ್ಮನ್ನೊಳಗೊಳ್ಳದೇ, ತಮ್ಮದೇ ಒಂದು ಜೀವನ ಶೈಲಿಯನ್ನು ಗತಕಾಲದಿಂದಲೂ ಸಹ ಪಾಲಿಸಿಕೊಂಡು ಬಂದಿರುವುದು ಅದೆಷ್ಟೋ ಭಾರಿ ನನ್ನನ್ನು … Read more

ತಾಯಿ ಭಾಗ್ಯ: ಸಾವಿತ್ರಿ ವಿ. ಹಟ್ಟಿ

-ಒಂದು- ಅಂವ ರಾತ್ರಿ ಆದ್ರ ಸಾಕು ಹೆದರಿದ ಮೊಲ ಆಕ್ಕಿದ್ದ. ಆಕಿ ಏನು ಕೇಳೂದ ಬ್ಯಾಡ ಹಸಿದ ಹೆಣ್ಣು ಹುಲಿ ಆಕ್ಕಿದ್ಲು. ಆಕೀ ಮೂಲಭೂತ ಬೇಡಿಕೆ ಅಂವಂಗ ಅತಿ ದುಬಾರಿದಾಗಿ ಕಾಣ್ತಿತ್ತು. ರಾತ್ರಿಯಾದ್ರ ಸಾಕು; ಬಡವರು ಸಂತೀಗಿ ಹೋಗುವಾಗ ಪುಡಿಗಾಸ್ನ ಎಣಿಸಿ ಎಣಿಸಿ ನೋಡಿಕೊಂಡು ಹೋಗುವಂಗ ಅಂವ ಇದ್ದಷ್ಟು ತನ್ನ ಗಂಡಸ್ತನನೆಲ್ಲಾ ಒಟ್ಟುಗೂಡಿಸಿಕೊಂಡು ಇವತ್ತರ ಆಕೀನ್ನ ತೃಪ್ತಿಪಡಿಸಲೇಬೇಕು ಅಂತ ಹೋದ್ರೂ ಆಕೀ ಬೇಡಿಕೆಯ ಕಾಲು ಭಾಗನಾದ್ರೂ ಪೂರೈಸದಾ ಹೈರಾಣಾಕ್ಕಿದ್ದ. ‘ನಿನ್ನ ಹಾಡು ಇಷ್ಟಾ ಹೋಗಾ ಮೂಳ’ ಅಂತ … Read more

ಮೂವರ ಕವನಗಳು: ಬಿದಲೋಟಿ ರಂಗನಾಥ್, ನಂದಾ ದೀಪ, ರೇಣುಕಾ ಹೆಳವರ್

ಜೋಲಿ ಕಟ್ಟಿ ತೂಗುವ ನೆಲದವ್ವ ನೆಲದ ಕರುಣೆಯ ತೊರೆಯಲು ಮನಸ್ಸಿಗೆ ಮಾರುದ್ದ ದುಃಖ ಕನಸಿನ ಗುಹೆಗೆ ಭಯದ ಭೈರಿಗೆ ನೆಲದ ಕರುಳ ಮಾತೃಕೆಗೆ ಸೋತು ಭಾವ ಉಕ್ಕಿದ ಮನಸ್ಸೆಂಬ ಸಮುದ್ರ ಮಂಥನಕೆ ಸಾಕ್ಷಿಯೇ ಇಲ್ಲದ ದಾವೆ ಸಿಟ್ಟೆಂಬ ಬೀಜ ಸಿಡಿದರು ಮೊಳಕೆಯಾಗದ ಅನುಬಂಧ ಆದರೂ ನನ್ನವ್ವ ಭೂತಾಯಿಗೆ ನಾನು ಸದಾ ಆಳುಮಗನೆ. ಗುಡಿಸಿದರೂ ಸವೆಯದೆ ಅಗೆದು ಬಗೆದರೂ ಹರಿಯದ ನನ್ನವ್ವಳ ಜೀವದ ಗಟ್ಟಿತನಕ್ಕೆ ಸರ್ವರು ಸವಕಲೇ. ಆದಿಯನ್ನು ಗುಡಿಸದೆ ಇತಿಹಾಸ ನಿರ್ಮಾತೃ ಹೃದಯಕೆ ಜೋಲಿಕಟ್ಟಿ ತೂಗುವ ನೆಲದವ್ವಳ … Read more

ಸಾಬ್ಯ: ಶ್ರೀಮಂತ ರಾಜೇಶ್ವರಿ ಯನಗುಂಟಿ

                          ಅವನ ಹೆಸರು ಸಾಹೇಬಗೌಡ ಅಂತ. ಅವನನ್ನು ಪ್ರೀತಿಸುವವರು ಪ್ರೀತಿಯಿಂದ ಸಾಬು ಅಂತ ಕರೀತಾರೆ. ಮೊನ್ನೆ ಸಿಕ್ಕಿದ್ದ. ನಮ್ಮ ಪರಿಚಯದವರೊಬ್ಬರ ಮದುವೆಯಲ್ಲಿ. ಅವನೂ ಸಹ ನಮ್ಮ ಊರಿನವನೇ ಆದ್ದರಿಂದ ಊರಿನವರೆಗೂ ಹೋಗಿ ಎಲ್ಲರಿಗೂ ಆಮಂತ್ರಣವನ್ನು ಕೊಟ್ಟು ಅವನೊಬ್ಬನಿಗೆ ಕೊಡದಿರುವುದು ಸರಿಯೆನಿಸುವುದಿಲ್ಲವೆಂಬ ದೃಷ್ಟಿಯಿಂದ ಅವನಿಗೂ ಮದುವೆಗೆ ಆಹ್ವಾನಿಸಿ ಬರಲಾಗಿತ್ತು. ನಮ್ಮ ಪಾಡಿಗೆ ನಾವೂ ಆ ಕೆಲಸ ಈ ಕೆಲಸ ಅಂತ ಓಡಾಡಿಕೊಂಡಿದ್ವಿ. … Read more

ಎಳಸು ಮನಸು ಕಂಡ ಮೊದಲ ನೈಟ್ ಷೋ: ಎಚ್.ಕೆ.ಶರತ್

ಆ ದಿನವೇ ರಿಲೀಸ್ ಆದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಮಾರ್ನಿಂಗ್ ಷೋಗೆ ಹೋಗೋಣವೆಂದರೆ ಕೆಲಸದ ಬಾಧೆ. ಎಲ್ಲ ಹಲ್ಲಂಡೆಗಳನ್ನು ಮುಗಿಸಿಕೊಂಡು ಹೊರಟಾಗ ಗಂಟೆ ಏಳಾಗಿತ್ತು. ನಗರ ತುಂಬಾ ಆಕ್ಟೀವ್ ಆಗಿತ್ತು. ಬಿಂಕದ ಮೊರೆ ಹೋದ ಯುವಕ-ಯುವತಿಯರು, ಹಗಲೆಲ್ಲ ಬೆವರು ಸುರಿಸಿ ಬೆಂದಿದ್ದ ಕೂಲಿ ಕಾರ್ಮಿಕರು, ನಾಲಿಗೆಯ ಚಪಲಕ್ಕೆ ಶರಣಾಗಿ ಗೋಬಿ, ಪಾನಿಪೂರಿ, ಕಬಾಬ್ ಗಾಡಿಗಳ ಮುಂದೆ ಕ್ಯೂ ನಿಂತ ನನ್ನಂಥ ತಿಂಡಿ ಪೋತರು… ಒಟ್ಟಾರೆ ನಗರದ ಮುಖ್ಯರಸ್ತೆ ರಂಗು ಬಳಿದುಕೊಂಡಿತ್ತು. ಥಿಯೇಟರ್‍ನ ಕಾಂಪೌಂಡ್ ಒಳಗೆ ಕಾಲಿಡೋಣವೆಂದರೆ … Read more

ಯುವ ಮನಸ್ಸಿಗೊಂದು ಕಿವಿಮಾತು: ವಸಂತ ಬಿ. ಈಶ್ವರಗೆರೆ.

ಯೌವನಾವಸ್ಥೆ ಪ್ರಾರಂಭದ ಪೂರ್ವದಲ್ಲೇ ವಿವಿಧ ಭಾವನೆಗಳು ಯುವ ಪೀಳಿಗೆಯ ಮನಸ್ಸಿನಲ್ಲಿ ಉದಯಿಸಿರುತ್ತವೆ, ಆದರೆ ಅವು ರೂಪ ಪಡೆದು ನಿಜವಾದ ಆಕಾರವನ್ನು ಪಡೆಯುವುದು ಬಣ್ಣದ ಬದುಕಿನ ಕಾಲೇಜು ಜೀವನಕ್ಕೆ ಕಾಲಿಟ್ಟ  ಆನಂತರ. ಒಂದೊಂದು ರೀತಿಯಲ್ಲಿ ಅವರ ಚಿಂತನೆಯ ಆವಿಷ್ಕಾರದ ರೂಪ ಕೆಲವು ಅವಘಡಗಳು ಸಂಭವಿಸಿ  ಉತ್ತಮ ರೀತಿಯ ಚಿಂತನೆಯನ್ನು ಮನಸ್ಸಿನಲ್ಲಿ ಮೂಡಿಸಬಹುದು. ಇಲ್ಲವೇ ಅವು ನಕಾರಾತ್ಮಕ ಚಿಂತನೆಯನ್ನು ಪಡೆದು ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗಲೂ ಪ್ರೇರೇಪಿಸ ಬಹುದು. ಯುವ ಮನಸ್ಸಿನ ಚಿಂತನೆಗಳು ಸಕಾರಾತ್ಮಕವಾಗಿದ್ದಾಗ ಅಂತಹ ವ್ಯಕ್ತಿಗಳಿಂದ ಸಮಾಜಕ್ಕೆ ಉತ್ತಮ ಮಹತ್ವ … Read more

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

  ೧. ಕಿಕ್ಕಿರಿದ ಮನೆ ಮುಲ್ಲಾ ನಜರುದ್ದೀನ್ ನೆರೆಮನೆಯವನೊಂದಿಗೆ ಒಂದು ದಿನ ಮಾತನಾಡುತ್ತಿರುವಾಗ ಆತ ಬಲು ಸಂಕಟ ಪಡುತ್ತಿರುವವನಂತೆ ಕಾಣುತ್ತಿದ್ದ. ಅವನಿಗೇನು ತೊಂದರೆ ಇದೆ ಎಂಬುದನ್ನು ಮುಲ್ಲಾ ವಿಚಾರಿಸಿದ. ತನ್ನ ಮನೆಯಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಆತ ವಿವರಿಸುತ್ತಾ ಹೇಳಿದ, “ನನ್ನದು ಬಲು ಚಿಕ್ಕ ಮನೆ, ಮುಲ್ಲಾ. ನಾನು, ನನ್ನ ಹೆಂಡತಿ, ನನ್ನ ಮೂರು ಮಕ್ಕಳು, ನನ್ನ ಅತ್ತೆ ಎಲ್ಲರೂ ಇಷ್ಟು ಚಿಕ್ಕ ಮನೆಯಲ್ಲಿ ಒಟ್ಟಿಗೇ ವಾಸ ಮಾಡಬೇಕಾಗಿದೆ. ಸ್ಥಳ ಕಮ್ಮಿ ಇರುವುದರಿಂದ ಓಡಾಡಲು ಸ್ಥಳವೇ ಇಲ್ಲ.” … Read more

ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ) ರವರಿಂದ “ಹೊಂಗೆ ಮರದಡಿ” ಕಥಾಸಂಕಲನ ಲೋಕಾರ್ಪಣೆ

ಚಿತ್ರದಲ್ಲಿ : ಹೊಂಗೆ ಮರದ ಕೃತಿ ಲೋಕಾರ್ಪಣೆ ಮಾಡಿದ, ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ) ಯವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಂಜುನಾಥ ಕೊಳ್ಳೇಗಾಲರವರು, 3K ಬಳಗದ ಅಧ್ಯಕ್ಷೆ ಶ್ರೀಮತಿ ರೂಪ ಸತೀಶ್ ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು.  ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಸಕ್ರಿಯವಾಗಿರುವ ಹಾಗು ಅಪಾರ ಕನ್ನಡ ಭಾಷಾಭಿಮಾನದ ಸಮಾನ ಮನಸ್ಕರಿಂದ ಕೂಡಿರುವ 3K – ಕನ್ನಡ ಕವಿತೆ ಕಥನ ಬಳಗದ ಮೂರನೇ ಪ್ರಸ್ತುತಿ "ಹೊಂಗೆ ಮರದಡಿ – ನಮ್ಮ ನಿಮ್ಮ ಕತೆಗಳು" ಎಂಬ 26 … Read more

ಸಾಮಾನ್ಯ ಜ್ಞಾನ (ವಾರ 82): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:- 1.    ವಿಶ್ವಸಂಸ್ಥೆಯು ಯಾವ ವರ್ಷವನ್ನು ಅಂತರಾಷ್ಟ್ರೀಯ ಭತ್ತದ ವರ್ಷವೆಂದು ಘೋಷಿಸಿತು? 2.    ಐಎಮ್‍ಸಿ (IMC) ಯ ವಿಸ್ತೃತ ರೂಪವೇನು? 3.    ಸೌರಾಷ್ಟ್ರ ಸೋಮೇಶ್ವರ ಇದು ಯಾರ ಅಂಕಿತನಾಮವಾಗಿದೆ? 4.    ಗುಲ್ಮಾರ್ಗ ಗಿರಿಧಾಮ ಯಾವ ರಾಜ್ಯದಲ್ಲಿದೆ? 5.    ಕರ್ನಾಟಕದ ಶಿವಕಾಶಿ ಎಂದೇ ಪ್ರಸಿದ್ಧ ಪಡೆದ ಊರು ಯಾವುದು? 6.    ದಕ್ಷಿಣ ಪಿನಾಕಿನಿ ನದಿಯ ಉಗಮ ಸ್ಥಳ ಯಾವುದು? 7.    ನೇಪಾಳದ ಪ್ರಪ್ರಥಮ ಅಧ್ಯಕ್ಷರು ಯಾರಾಗಿದ್ದರು? 8.    ಬುದ್ಧಿ ಲಬ್ಧವನ್ನು ಕಂಡುಹಿಡಿಯುವ ಸೂತ್ರದ ಬಗ್ಗೆ ತಿಳಿಸಿದ ಪ್ರೆಂಚ್ ಮನೋವಿಜಾÐನಿ … Read more

ಹಿರೋಶಿಮಾ ನಾಗಸಾಕಿಯ ದುರಂತ ಭಾರತದಲ್ಲಿ ಮರುಕಳಿಸದಿರಲಿ: ಮಂಜುಳ ಎಸ್.

ಬಂಡಾವಾಳವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅರ್ಥವ್ಯವಸ್ಥೆಯನ್ನು, ನಿಯಂತ್ರಣದಲ್ಲಿಟ್ಟುಕೊಳ್ಳಲು ಆರಂಭಿಸಿದಾಗಿನಿಂದ ಪರಿಸರ ಮತ್ತು ಪರಿಸರಕ್ಕೆ ಸೇರಿದ ಕೆಲವು ಜನಸಮುದಾಯಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿವೆ. ಪರಿಸರಕ್ಕೆ ನಾವು ಸೇರಿದವರಲ್ಲ, ಪರಿಸರ ನಮಗೆ ಸೇರಿದ್ದು ಎಂದು ಅಲ್ಪಸಂಖ್ಯಾತರಾದ ಬಂಡವಾಳಶಾಹಿಗಳು ಪರಿಸರವನ್ನು ಮತ್ತು ಪರಿಸಕ್ಕೆ ಸೇರಿದ ಕೆಲವು ಜನ ಸಮುದಾಯಗಳನ್ನು ವಿಕೃತವಾಗಿ ಮನಬಂದಂತೆ ದುಡಿಸಿಕೊಳ್ಳುತ್ತಲೇ ಬಂದಿದ್ದಾರೆ. ಈ ದುಡಿಸಿಕೊಳ್ಳುವ ಪ್ರಕ್ರಿಯೆಯ ಪರಿಣಾಮವನ್ನು ಯಾಕೆ ಪರಿಸರವನ್ನೇ ನಂಬಿ, ಪರಿಸರದ ಜೊತೆಯಲ್ಲಿಯೇ ಬದುಕುತ್ತಿರುವವರು ಮತ್ತು ಬಹು ಸಂಖ್ಯಾತರಾದ ಜನ ಸಾಮಾನ್ಯರೇ ಅನುಭವಿಸುತ್ತಿರುವುದು…? ಇದು … Read more

ಮುಂದುವರೆದ ರೈತರ ಆತ್ಮಹತ್ಯೆಗಳು ಸಾವಿನ ಮನೆಯ ತಲ್ಲಣಗಳು: ಎನ್. ಕವಿತಾ

(ಇಡೀ ರಾಜ್ಯದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆ ಮಂಡ್ಯ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಭೇಟಿ ಕೊಟ್ಟು, ಅನ್ನದಾತನ ಸಾವಿಗೆ ಕಾರಣಗಳೇನು? ಸಾವಿನ ನಂತರ ರೈತನ ಕುಟುಂಬ ಸದಸ್ಯರು ಬದುಕಲು ಯಾವ ರೀತಿ ಪಾಡು ಪಡುತ್ತಿದ್ದಾರೆ? ಆ ಕುಟುಂಬಗಳಿಗೆ ಸರ್ಕಾರಗಳು ಮತ್ತು ಸಮಾಜ ಯಾವ ರೀತಿ ಸ್ಪಂದಿಸಿವೆ? ಮಾಧ್ಯಮಗಳ ಸ್ಪಂದನೆ ಯಾವ ರೀತಿಯಿದೆ? ಇತ್ಯಾದಿ ಕುರಿತಂತೆ ಉತ್ತರ ಕಂಡುಕೊಳ್ಳಲು ಯತ್ನಿಸಲಾಗಿದೆ).  ಒಕ್ಕಲಾ ಕೇರ್ಯಾಗ ಮಳೀರಾಯ ಮಕ್ಕಳ ಮಾರ್ಯಾರ ಮಳೀರಾಯ! ಒಕ್ಕಲಾ ಕೇರ್ಯಾಗ ಮಕ್ಕಳ ಮಾರಿ  … Read more

ಜಾಗತಿಕ ಹವಾಗುಣ ಜಾಥಾ: ಅಖಿಲೇಶ್ ಚಿಪ್ಪಳಿ

ನವಂಬರ್ 30 2015ರಿಂದ ಡಿಸೆಂಬರ್ 11 2015ರ ವರೆಗಿನ ಜಾಗತಿಕ ಹವಾಗುಣ ಶೃಂಗಸಭೆ ಪ್ಯಾರಿಸ್‍ನಲ್ಲಿ ನಡೆಯಲಿದೆ. 190 ವಿಶ್ವನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ, ಜೊತೆಗೆ ವಿಜ್ಞಾನಿಗಳು, ಹೂಡಿಕೆದಾರರು, ವಿವಿಧ ಕ್ಷೇತ್ರಗಳ ತಜ್ಞರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಭೂಮಿಯ ಮೇಲಿನ ಚರಾಚರಗಳ ಭವಿಷ್ಯದ ದೃಷ್ಟಿಯಿಂದ ಈ ಸಭೆ ಅತ್ಯಂತ ಮಹತ್ವ್ತದ ಸಭೆಯಾಗಲಿದೆ ಎಂದು ತರ್ಕಿಸಲಾಗಿದೆ. ಈ ಸಭೆಯಲ್ಲಿ ಕೈಗೊಳ್ಳುವ ಜಾಗತಿಕ ನಿರ್ಣಯಗಳು ಭೂಮಿಯ ಆರೋಗ್ಯದ ಸೂಚ್ಯಂಕವನ್ನು ಬದಲಿಸಲಿವೆ ಎಂದು ಭಾವಿಸಲಾಗಿದೆ. ಈ ಹಿಂದೆ ಇದೇ ತರಹದ 20 ಶೃಂಗಸಭೆಗಳು … Read more

ಕಡ್ಲೆಕಾಳು ಗಣೇಶನಿಗೆ ಜೈ ಎನ್ನುತ್ತಾ: ಪ್ರಶಸ್ತಿ

ಏಕಶಿಲಾ ನಂದಿಯ ಬಳಿಯಿದ್ದ ಸೈಕಲ್ ಪಡೆದ ನಾವು ಹಂಪಿಬಜಾರಿನ ಮೂಲಕ ಹಂಪಿ ಬಸ್ಟಾಂಡವರೆಗೆ ಬಂದೆವು. ಇಲ್ಲೇ ಹತ್ತಿರದಲ್ಲಿರೋದ್ರಿಂದ ಕಡ್ಲೆಕಾಳು ಗಣೇಶ ಮತ್ತು ಹೇಮಕೂಟದಲ್ಲಿರೋ ದೇಗುಲಗಳನ್ನು ನೋಡೋಣ ಅಂತ ಸೈಕಲ್ ಅತ್ತ ತಿರುಗಿಸಿದೆವು. ಘಂಟೆ ನಾಲ್ಕಾಗುತ್ತಾ ಬಂದಿದ್ದರೂ ಮಧ್ಯಾಹ್ನದ ಊಟ ಮಾಡಿಲ್ಲವೆಂಬ ಚಿಂತೆ ಕಾಡುತ್ತಿರಲಿಲ್ಲ. ಬಾಡಿಗೆ ಸೈಕಲ್ ತಗೊಂಡಿದ್ರೂ ನಡೆದಾಟದಲ್ಲೇ ಅರ್ಧದಿನ ಕಳೆದಾಗಿದೆ. ಮುಂದಿನ ಸ್ಥಳಗಳನ್ನಾದರೂ ಸೈಕಲ್ಲಲ್ಲಿ ನೋಡಬೇಕೆಂಬ ಬಯಕೆ ಆಲೋಚನೆ ಮೂಡುತ್ತಿತ್ತು. ಆ ಆಲೋಚನೆಯಲ್ಲೇ ಕಡ್ಲೆಕಾಳು ಗಣೇಶ ದೇವಸ್ಥಾನಕ್ಕೆ ಸಾರೋ ಏರುಹಾದಿಯಲ್ಲಿ ಸೈಕಲ್ ಓಡಿಸಿದೆವು. ಸೈಕಲ್ಲಿನ ಬಂಪರ್ … Read more

ಹೊಂಗೆ ಮರದ ನೆರಳಿನಲ್ಲಿ: ಅನಿತಾ ನರೇಶ್ ಮಂಚಿ

ಸಾಮಾಜಿಕ ಜಾಲ ತಾಣದಲ್ಲಿ ಒಂದೇ ಬಗೆಯ ವಿಷಯಗಳ ಒಲುಮೆಯ ಆಧಾರದಲ್ಲಿ ಹಲವಾರು ಗುಂಪುಗಳು ನಿತ್ಯವೂ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಕೆಲವೊಂದು ಅಲ್ಪಾಯುಷ್ಯದಲ್ಲೇ ಕಾಲನರಮನೆಯನ್ನು ಸೇರಿದರೆ ಇನ್ನು ಕೆಲವು ನಮ್ಮ ಸಮ್ಮಿಶ್ರ ಸರಕಾರಗಳನ್ನು ನೆನಪಿಸುತ್ತವೆ. ತಾವೂ ಏನೂ ಧನಾತ್ಮಕ ವಿಷಯಗಳನ್ನು ನೀಡದೇ, ನೀಡುವವರ ಬಗ್ಗೆಯೂ ಮೆಚ್ಚುಗೆಯ ಮಾತನ್ನಾಡದೇ ಕೇವಲ ಕಾಲೆಳೆಯುವುದನ್ನೇ ಉದ್ಯೋಗವಾಗಿಸಿಕೊಂಡಂತವು.  ಮತ್ತೆ ಹಲವು  ಹೊಸಾ ಅಗಸ ಬಟ್ಟೆ ಒಗೆದಂತೆ ಮೊದ ಮೊದಲು ಶುಭ್ರವಾಗಿಯೂ, ಸ್ವಚ್ಚವಾಗಿಯೂ ಕಾಣುತ್ತಿರುತ್ತವೆ. ದಿನ ಕಳೆದಂತೆ ಕೊಳಕುಗಳೇ ಉಳಿದು, ಅಲ್ಲಿಂದ ಹೊರ ಬೀಳುವ ದಾರಿಗಾಗಿ ಚಡಪಡಿಸುವಂತಾಗುತ್ತದೆ. … Read more

ಹೇ ನನ್ನ ಕನಸಿನ ಕೂಸೆ…: ಮಂಜುನಾಥ ಗುಡ್ಡದವರ

ಹೇ ಕನಸಿನ ಕೂಸೆ…     ಕುಶಲವೇ..? ಕ್ಷೇಮವೇ..? ಸೌಖ್ಯವೇ..? ಎಲ್ಲಿರುವೇ..? ಹೇಗಿರುವೇ..? ಇನ್ನೂ ಏನೇನೊ ಸಾವಿರ ಮಾಮೂಲಿ ಪ್ರಶ್ನೆಗಳು. ಆದರೆ ನಿನ್ನ ಕುಶಲೋಪರಿಯ ವರದಿ ತಿಳಿಯಲು ನಿನ್ನಿಂದ ಒಂದು ಪತ್ರವು ಇಲ್ಲ, ನಾ ಮೌನಿಯಾದಾಗ ರಚ್ಚೆ ಹಿಡಿದು ಕೆನ್ನೆ ಹಿಂಡಿ, ಕಣ್ಣ ಮಿಟುಕಿಸಿ ಯಾಕೋ ಕೂಸೆ.. ಏನಾಯ್ತು..? ಎನ್ನುವ ಆ ನಿನ್ನ ಸಿಹಿ ಸಾಂತ್ವಾನವು ಇಲ್ಲ. ಯಾಕಾಯ್ತು ಕೂಸೆ ಹೀಗೆ..? ಎಲ್ಲದಕ್ಕೂ ದೇವರಿದ್ದಾನೆ, ಆಗುವುದೆಲ್ಲಾ ಒಳ್ಳೆಯದಕ್ಕೆ ಕಣೋ ಅಂತ ನನ್ನ ಅನುಮಾನಗಳಿಗೆ ನಂಬಿಕೆಯ ನೀರೆರೆದು, ನೀನೇಕೆ ಬತ್ತಿ … Read more

ಮೂವರ ಕವನಗಳು: ನಂದನ್ ಜಿ, ರನ್ನ ಕಂದ, ಸಿಪಿಲೆನಂದಿನಿ

ತಾರೆ ಬದುಕು  ನೆನಪಿನಾ ಜೋಳಿಗೆಯ ಸರಕು ಆ ನೆನಪಿಗೂ ಬೇಕಿದೆ ಆಸರೆ  ಮಿನುಗುವುದೇ  ಮಿಂಚಿ ಮರೆಯಾದ ಆ ತಾರೆ..  ಹೊಳೆಯುವುದೇ  ಮಿಂಚಿ ಮರೆಯಾದ ಆ ತಾರೆ.. ನೆನಪಿನಾ ಬಾಣಲೆಗೆ ಹಾಕಿದಳು ಒಲವೆಂಬ ಒಗ್ಗರಣೆ  ಹಾಳಾಗಿದೆ ಹೃದಯ..  ಸರಿಪಡಿಸಲಾರದು  ಯಾವುದೇ ಗುಜರಿ ಸಲಕರಣೆ ಅಂದು ಮನತಣಿಸಿದ್ದ  ಹಾವ-ಭಾವ ಮಾತುಗಳ ಸಮ್ಮಿಲನ  ಇಂದೇಕೊ ಕಾಡುತಿದೆ  ಖಾಲಿ ನೀರವತೆಯ ಮೌನ ಶುರುವಾಗಿದೆ ಅವಳೊಂದಿಗಿನ  ಆ ನೆನಪುಗಳ ಪ್ರಹಾರ..  ಮನದ ಪಡಸಾಲೆಯಲ್ಲೆಲ್ಲೋ  ನಿರಂತರ ಮರುಪ್ರಸಾರ. ಕತ್ತಲಲ್ಲಿ ಮುದುಡಿದ್ದ ಮನಸಿಗೆ  ನಗುವೆಂಬ ಲಾಟೀನು ಹಿಡಿದು … Read more

ಚಿಂತೆ ಬಿಡಿ..ರಿಲ್ಯಾಕ್ಸ್ ಪ್ಲೀಸ್..: ಬಿ.ರಾಮಪ್ರಸಾದ್ ಭಟ್

ನೀವು ಸದಾ ಲವಲವಿಕೆಯಿಂದ, ಅತ್ಯುತ್ಸಾಹದಿಂದ ಇರಲು ಬಯಸುವುದು ನಿಜವೇ ಆದರೆ ವೃಥಾ ಚಿಂತಿಸುವುದನ್ನು ಕೈ ಬಿಡಬೇಕು. ಒಂದು ವೇಳೆ ಯಾವುದೇ ರೋಗಕ್ಕೆ ತುತ್ತಾದಾಗಲೂ ಸಹ ಕಳವಳಗೊಳ್ಳದೆ 'ಅಯ್ಯೋ ಈ ರೋಗ ಬಂದಿದೆಯಲ್ಲಪ್ಪಾ,ಏನು ಮಾಡುವುದು? ಹೇಗೆ? ವಾಸಿಯಾಗುವುದೋ ಇಲ್ಲವೋ?' ಎಂದು  ಪೇಲವ ಮುಖ ಮಾಡಿಕೊಂಡು ಚಿಂತೆಗೀಡಾಗದೆ ನೆಮ್ಮದಿಯಾಗಿ ಸಾವಧಾನ ಚಿತ್ತದಿಂದ ಇದ್ದರೆ ಆ ನೆಮ್ಮದಿಯ ಭಾವನೆಯೇ ನಮ್ಮ ದೇಹದ ಜೀವಕೋಶಗಳ ಮೇಲೆ ಪ್ರಭಾವ ಬೀರಿ ನಮ್ಮ ರೋಗಗಳನ್ನು ಕಡಿಮೆಗೊಳಿಸುವುದು. ಅಲ್ಲದೆ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಪ್ರತಿಯೊಬ್ಬ ಮನುಷ್ಯನ … Read more

ನಿರಂತರ ಪ್ರಕಾಶನದ ಹೊಸ ಪುಸ್ತಕ ಹಾಗೂ ಸೀಡಿ ‘ಹಾರೋಣ ಬಾ’ ಕುರಿತು

ನಿರಂತರ ಪ್ರಕಾಶನ  ಮೈಸೂರಿನ ನಿರಂತರ ಪ್ರಕಾಶನ ಕಳೆದ 20 ವರ್ಷಗಳಿಂದ ರಂಗಭೂಮಿ,ಸಾಹಿತ್ಯ, ಜಾನಪದ ಕ್ಷೇತ್ರಗಳಲ್ಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಎಚ್ಚರದ, ಕನಸಿನ ಸಮಯಗಳಲ್ಲಿ ಚಳುವಳಿಗಳಷ್ಟೇ ಪ್ರಮುಖವಾಗಿ ಪುಸ್ತಕಗಳೂ ಆವರಿಸಿವೆ. ಕಲಿಸಿವೆ ಓದುಗನೊಬ್ಬ ಸಮಾಜದ ಜತೆಗೆ  ನೇರವಾಗಿ ಮುಖಾಮುಖಿಯಾಗುವ ಇಂಥ ಸನ್ನಿವೇಶ ಸೃಷ್ಟಿಸುವÀÀ ಹೊಣೆ  ನಮ್ಮೆಲ್ಲರದ್ದು. ಪುಸ್ತಕ ಪ್ರಕಟಣೆ ಎನ್ನುವುದು ನಮ್ಮ ಇಂಥಹ ಚಟುವಟಿಕೆಗಳ ವಿಸ್ತರಣೆ ಎಂಬುದು ನಮ್ಮ ನಂಬಿಕೆ. ಜನ ಸಾಂಸ್ಕøತಿಕ ಪರಂಪರೆಯ ಕುರಿತ ಉತ್ತಮ, ಚಿಂತನಶೀಲ ಪುಸ್ತಕಗಳ ಪ್ರಕಟಣೆ ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಕೆಲಸ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

ವಿದ್ವಾಂಸನೂ ಸೂಫಿಯೂ ಒಬ್ಬ ವಿದ್ವಾಂಸ ಸೂಫಿಯೊಬ್ಬನಿಗೆ ಹೇಳಿದ, “ನಮ್ಮ ತಾರ್ಕಿಕ ಪ್ರಶ್ನೆಗಳು ನಿಮಗೆ ಅರ್ಥವೇ ಆಗುವುದಿಲ್ಲವೆಂಬುದಾಗಿ ನೀವು ಸೂಫಿಗಳು ಹೇಳುತ್ತೀರಿ. ಅಂಥ ಒಂದು ಪ್ರಶ್ನೆಯನ್ನು ನೀವು ಉದಾಹರಿಸಬಲ್ಲಿರಾ?” ಸೂಫಿ ಹೇಳಿದ, “ಖಂಡಿತ. ಅದಕ್ಕೊಂದು ಉದಾಹರಣೆ ನನ್ನ ಹತ್ತಿರ ಇದೆ. ನಾನೊಮ್ಮೆ ರೈಲಿನಲ್ಲಿ ಪಯಣಿಸುತ್ತಿದ್ದೆ. ಆ ರೈಲು ಏಳು ಸುರಂಗಗಳ ಮೂಲಕ ಹಾದುಹೋಯಿತು. ಆ ವರೆಗೆ ರೈಲಿನಲ್ಲಿ ಪಯಣಿಸದೇ ಇದ್ದ ಹಳ್ಳಿಗಾಡಿನವನೊಬ್ಬ ನನ್ನ ಎದುರು ಕುಳಿತಿದ್ದ. ರೈಲು ಏಳು ಸುರಂಗಗಳನ್ನು ದಾಟಿದ ನಂತರ ಅವನು ನನ್ನ ಭುಜ ತಟ್ಟಿ … Read more