ಪಂಜು ಕಾವ್ಯಧಾರೆ

ಕನಸ್ಫುರಣೆ:   ಹಾಡು ಹರಿಯದೆಯೇ ರಾಗ ಸೃಜಿಸಿದೆ  ಮಧುರ ಗಾನಕೆ ಸೆರೆಯಾಗಿ  ಭಾವ ತೊರೆಯದೆಯೇ ಮೌನ ಮಿಡಿದಿದೆ  ಕನಸ ಸಾಲಿಗೆ ಕರೆಯಾಗಿ  ಮಾತು ಹಾಡಾದಾಗ, ಮೌನಭಾವವರಿತಾಗ  ಕಾವ್ಯ ಹೊಮ್ಮಿದ ಪರಿಯಂತೆ  ಕೌತುಕ ಕಾಡಿದ ಹಾಡು ನನ್ನ ಪಾಡು..!   ತುಟಿ ವೊಡೆಯದಲೇ ನಗು ಸುರಿದದಂಗೆ  ಪುಳಕನಿನ್ನಾಟ ನೆನೆದು ಬೆರಗಾಗಿ  ಕಣ್ಣು ಮಿಟುಕದೆಯೇ ನೀರು ಹರಿದಂಗೆ  ವಿರಹ ತಾಳದೆಯೆ ನೋವಾಗಿ ನಗುವತಿಯಾಗಿ ಹನಿಯುರುಳಿದಾಗ  ಸಂವೇದನೆ ಚಿಮ್ಮಿದ ಝರಿಯಂತೆ   ವೇದನೆಯ ಹಾಡು ನನ್ನ ಜಾಡು..!   ಕಾವ್ಯ ಸಾಲಿನ … Read more

ಸವಿ ನೆನಪುಗಳ ಪ್ರಥಮ ಮಿಲನಗಳ ಮೀರುವುದ್ಹೇಗೆ: ಷಡಕ್ಷರಿ ತರಬೇನಹಳ್ಳಿ

ಶಾಲೆಯ ಮೆಟ್ಟಿಲು ತುಳಿದ ಮೊದಲ ದಿನ ಇನ್ನೂ ನೆನಪಿದೆ. ನನ್ನನ್ನು ತನ್ನ ಬುಜದ ಮೇಲೊತ್ತು ಜೇಬು ತುಂಬಾ ಚಾಕಲೇಟು ತುಂಬಿಕೊಂಡು ಶಾಲೆಗೆ ಬಿಡುವ ಮುನ್ನ ನನ್ನ ಸೋದರ ಮಾವ ಹೇಳಿದ ಮಾತು ಮರೆಯದಂತೆ ನೆನಪಿದೆ. “ಸಾರ್ ನಮ್ಮುಡುಗನಿಗೆ ಯಾವ ಕಾರಣಕ್ಕೂ ಹೊಡೆಯಬೇಡಿ. ಅವನು ಮನೆಗೆ ಹೋಗಲು ಹಠ ಹಿಡಿದರೆ ತಗೊಳ್ಳೀ ಈ ಚಾಕಲೇಟ್ ಅವನಿಗೆ ಕೊಡಿ. ಆಯ್ತೇನೋ ಬಾಬು, ನೀನು ಹೇಳಿದಂತೆಯೇ ಇವರಿಗೆ ಹೇಳಿದ್ದೀನಿ. ಸರೀನಾ ಇವತ್ತಿನಿಂದ ನೀನು ಬೆಳಗೆಲ್ಲಾ ಇಲ್ಲೇ ಇರಬೇಕು ಗೊತ್ತಾಯ್ತಾ? ಆಗಲಿ ಎಂದು … Read more

ಟೇಮು ಅಂದ್ರೆ ಟೇಮು: ಅನಿತಾ ನರೇಶ್ ಮಂಚಿ

ಒಂದು ಕೈಯಲ್ಲಿ ಕೋಕೋಕೋಲಾ ಮತ್ತು ರಿಮೋಟ್ ಕಂಟ್ರೋಲರನ್ನು ಬ್ಯಾಲೆನ್ಸ್ ಮಾಡುತ್ತಾ  ಇನ್ನೊಂದು ಕೈಯಲ್ಲಿ ಅಂಗೈ ತುಂಬುವಷ್ಟು ಚಿಪ್ಸನ್ನು ಹಿಡಿದುಕೊಂಡು ನೆಟ್ಟ ಕಣ್ಣಿನಲ್ಲಿ ಟಿ ವಿ ಯಲ್ಲಿ ತೋರಿಸುತ್ತಿದ್ದ ಫಿಟ್ ನೆಸ್ ಕಾರ್ಯಕ್ರಮವನ್ನು ಸೋಫಾದ ಮೇಲೆ ಮಲಗು ಭಂಗಿಯಲ್ಲಿ ಕುಳಿತು ವೀಕ್ಷಿಸುತ್ತಿರುವ ಸಮಯದಲ್ಲಿ  ’ಅವ್ವಾ ಲಂಗರು ಕೊಡಿ’ ಅಂದಳು ನಮ್ಮ ಮನೆಯ ಹೊಸ  ಸಹಾಯಕಿ. ಇದ್ದಕ್ಕಿದ್ದ ಹಾಗೆ ಕೇಳಿದ  ಅವಳ ಮಾತು ಕಿವಿಯೊಳಗೆ ಹೊಕ್ಕರೂ ಅರ್ಥವಾಗದೇ ಕಣ್ಣುಗಳನ್ನು ಟಿ ವಿ ಯ ಕಡೆಯಿಂದ ಬಲವಂತವಾಗಿ ತಿರುಗಿಸಿ ಅತ್ತ ಕಡೆ … Read more

ಜರ್ನಿ, ದಾರಿಯೊಂದೇ ಮೂರು ಸಂಗತಿಗಳು: ಅಮರ್ ದೀಪ್ ಪಿ.ಎಸ್.

ಸಂಜೆ ನಾಲ್ಕು ಇಪ್ಪತ್ತಕ್ಕೆ ಹುಬ್ಬಳ್ಳಿಯಿಂದ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಲ್ಲಿ ದೆಹಲಿಗೆ  ನಮ್ಮ ಪ್ರಯಾಣವಿತ್ತು. ಒಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಟಿಕೆಟ್ ಕನ್ಫರ್ಮ್ ಆಗಿತ್ತು.  ಇನ್ನೊಂದು ಇಲ್ಲ.  ಆಗಿಲ್ಲದ್ದೇ ನಂದು.   ನಮ್ಮ ಸ್ನೇಹಿತರೊಬ್ಬರ ಜೊತೆ ಹೋಗಿದ್ದೆ. ಆ ದಿನ ಬೆಳಗಾಂ ದಾಟಿದ ನಂತರ ಟಿ. ಸಿ. ಟಿಕೆಟ್ ಕನ್ಫರ್ಮ್ ಮಾಡಿ ಪಕ್ಕದ ಬೋಗಿಯಲ್ಲಿ ಸೀಟು ಕೊಟ್ಟಿದ್ದ.  ರಾತ್ರಿ ಎಂಟಾಗುತ್ತಿದ್ದಂತೆ ಆ ವರ್ಷದಲ್ಲೇ ಜ್ವರ ಕಾಣಿಸಿಕೊಳ್ಳದ ನನಗೆ ಜ್ವರ ಏರಿ ಓಡುವ ರೈಲಲ್ಲಿ ಪೇಚಿಗೆ ಹತ್ತಿತ್ತು.  ನನ್ನಲ್ಲಿದ್ದ … Read more

ಇರುವೆ ಮತ್ತು ಮಿಡತೆ: ಜೆ.ವಿ.ಕಾರ್ಲೊ

ಮೂಲ ಕತೆ: ‘The Ant and the Grasshopper’  ಲೇಖಕರು: ಡಬ್ಲ್ಯು.ಸಾಮರ್‌ಸೆಟ್ ಮ್ಹಾಮ್ ಕನ್ನಡಕ್ಕೆ: ಜೆ.ವಿ.ಕಾರ್ಲೊ ನಾನು ಸಣ್ಣವನಿದ್ದಾಗ ಫ್ರೆಂಚ್ ಲೇಖಕ ಫೊಂಟೇಯ್ನಾನ ಕೆಲವು ನೀತಿ ಕತೆಗಳನ್ನು ಉರು ಹಚ್ಚಿಕೊಳ್ಳುವುದು ಕಡ್ಡಾಯವೆಂಬಂತ್ತಿತ್ತು. ಈ ಕತೆಗಳಲ್ಲಿ ಅಡಗಿರುವ ನೀತಿಯನ್ನು ನಮ್ಮ ಮನದಟ್ಟಾಗುವಂತೆ ನಮ್ಮ ಹಿರಿಯರೂ ವಿವರಿಸುತ್ತಿದ್ದರು. ಈ ಕತೆಗಳಲ್ಲಿ ನನಗೆ ಬಹಳ ಇಷ್ಟವಾದ ಕತೆ ’ಇರುವೆ ಮತ್ತು ಮಿಡತೆ’ಯದು. ಈ ಅಸಮಾನತೆಯ ಜಗತ್ತಿನಲ್ಲಿ ಕ್ರಿಯಾಶಾಲಿಗಳಿಗೆ ಜಯ, ಸೋಮಾರಿಗಳಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ತುಂಬಾ ಸೊಗಸಾಗಿ ಈ ಕತೆಯಲ್ಲಿ ಚಿತ್ರಿಸಲಾಗಿದೆ. ವಸಂತ … Read more

ಓತಿ ಮೊಟ್ಟೆಯಿಟ್ಟ ಕತೆ: ಅಖಿಲೇಶ್ ಚಿಪ್ಪಳಿ

ಹೊಸ ಮನೆ ಕಟ್ಟಿಕೊಂಡು ವಾಸವಾಗಿ ಸುಮಾರು ೨ ತಿಂಗಳು ಕಳೆದವು. ಕೃಷಿಯಿಂದ ವಿಮುಖವಾಗುತ್ತಿರುವ ಹೊತ್ತಿನಲ್ಲಿ ಮರಳಿ ಮಣ್ಣಿಗೆ ಹೋಗಿದ್ದು ಹೊಸ-ಹೊಸ ಅನುಭವಗಳನ್ನು ನೀಡುತ್ತಿದೆ. ಈಗ ಕಟ್ಟಿಕೊಂಡಿರುವ ಹೊಸ ಮನೆಯ ಹಿಂಭಾಗದಲ್ಲಿ ಸುಮಾರು ೨೦ ಗುಂಟೆಯಷ್ಟು ಜಾಗದಲ್ಲಿ ದಟ್ಟವಾದ ಅರಣ್ಯ ರೂಪುಗೊಂಡಿದೆ. ಅಗಣಿತ ಸಂಖ್ಯೆಯಲ್ಲಿ ಸಸ್ಯಗಳ ಸಂಖ್ಯೆ ವೃಧ್ದಿಸಿದೆ. ನೂರಾರು ಕಾಡಿನ ಮೇಲ್ಮನೆ ಸದಸ್ಯರು ದಿನಾ ಬೆಳಗ್ಗೆ ಸಂಗೀತ ನೀಡುತ್ತವೆ. ಹನುಂತರಾಯರ ಸಂತತಿಯೂ ಬಂದು ತಮ್ಮ ಹಕ್ಕನ್ನು ಚಲಾಯಿಸಲು ಬಯಸುತ್ತಿವೆ. ಅಳಿದು ಹೋದವೆಂದುಕೊಂಡ ಕ್ಯಾಸಣಿಲು ತನ್ನ ಉದ್ದವಾದ ಸುಂದರ … Read more

ಆಯ ತಪ್ಪಿದ್ರೆ ಅಪಾಯ: ಎಂ.ಎಸ್.ನಾರಾಯಣ.

                                      ಮೊನ್ನೆ  ವಾರಾಂತ್ಯಕ್ಕೆ ಗೆಳಯರೆಲ್ಲರೂ ಮೈಸೂರಿನ ನಮ್ಮ ಹಳೆಯ ಅಡ್ಡಾ, ವಿಶ್ವನ ಕ್ಯಾಂಟೀನಿನಲ್ಲಿ ಸೇರಿದ್ದೆವು. ಆಗಷ್ಟೇ ನಮ್ಮನ್ನು ಸೇರಿಕೊಂಡ ಹರೀಶ, “ಇವತ್ತಿನ್ ಬಿಲ್ ನಂದ್ಕಣ್ರಪ್ಪಾ, ಕೊನೇಗೂ ಶ್ರೀರಾಂಪುರ್ದಲ್ಲಿ ಒಂದ್ ಥರ್ಟೀಫ಼ಾಟೀ ತೊಗೊಂಡೇಬಿಟ್ಟೇ ಕಣ್ರೋ, ಬ್ಯಾಂಕ್ಲೋನ್ಗೋಡಾಡ್ತಿದೀನಿ, ಒಂದೊಳ್ಳೆ ಮುಹೂರ್ತ ನೋಡಿ ಗುದ್ಲೀ ಪೂಜೆ ಮಾಡ್ಸೋದೊಂದೇ ಬಾಕಿ ನೋಡಿ” ಅಂತ ಗುಡ್ನ್ಯೂಸ್ ಕೊಟ್ಟೇಬಿಟ್ಟ. ಎಲ್ರೂ … Read more

ದಾಂಡೇಲಿ ದೋಣಿಯಾನ: ಪ್ರಶಸ್ತಿ ಪಿ.

ಗೆಳೆಯನ ಮದುವೆಗೆ ಬೆಳಗಾವಿಯ ಚಿಕ್ಕೋಡಿಗೆ ಹೋಗಬೇಕೆಂದಾಗ ಪ್ರವಾಸ ಪ್ರಿಯನಾದ ನಾನು ಸಹಜವಾಗೇ ಜೈಯೆಂದಿದ್ದೆ.  ಮದುವೆಯ ಮುಂಚಿನ ದಿನ ದಾಂಡೇಲಿಗೆ ಹೋಗಿ ಅಲ್ಲಿನ ಕಾಳೀ ನದಿಯಲ್ಲಿ ರಿವರ್ ರಾಫ್ಟಿಂಗ್ ಮಾಡೋಣ ಅಂದಾಗೆಂತೂ ತಗೋ, ಸ್ವರ್ಗಕ್ಕೆ ಮೂರೇ ಗೇಣು. ಗೆಳೆಯರ ಬಾಯಲ್ಲಿ ಈ ರಿವರ್ ರಾಫ್ಟಿಂಗ್ ಬಗ್ಗೆ ಹಲವು ಸಲ ಕೇಳಿದ್ದವನಿಗೆ ಅದನ್ನೊಮ್ಮೆ ನೋಡಬೇಕೆಂಬ ಬಯಕೆ ಮುಂಚಿಂದಲೂ ಇತ್ತೆಂದು ಬೇರೆ ಹೇಳಬೇಕಿಲ್ಲವೆಂದುಕೊಂಡು ಮುಂದುವರೆಯುತ್ತೇನೆ. .ಶುಕ್ರವಾರ ಸಂಜೆ ಐದುಮುಕ್ಕಾಲಕ್ಕೆ ಮೆಜೆಸ್ಟಿಕ್ಕಿಂದ ಹುಬ್ಬಳ್ಳಿಯ ಟ್ರೈನು. ಆಫೀಸಿಂದ ನಾಲ್ಕಕ್ಕೇ ಹೊರಟರೂ ಬೆಂದಕಾಳೂರಿನ ಟ್ರಾಫಿಕ್ಕಿಗೆ ಸಿಲುಕಿ … Read more

ಡುಮ್ಮಾ-ಡುಮ್ಮಿ (ಆಡಿಯೋ ಕತೆ): ಸುಮನ್ ದೇಸಾಯಿ

ಈ ಪುಟ್ಟ ಕತೆಯನ್ನು ಸುಮನ್ ದೇಸಾಯಿಯವರು ಮಕ್ಕಳಿಗಾಗಿ ಬರೆದು ಮತ್ತು ಆ ಕತೆಯನ್ನು ರೆಕಾರ್ಡ್ ಮಾಡಿ ಕಳಿಸಿದ್ದಾರೆ.  ಈ ಕತೆಯನ್ನು ಅವರ ಧ್ವನಿಯಲ್ಲಿ ಕೇಳಲು ಈ ಕೆಳಗಿನ ಕೊಂಡಿ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… Suman Desai- Dumma Dummi ಹಿಂಗೊಂದ ಊರಾಗ ಡುಮ್ಮಾ-ಡುಮ್ಮಿ ಇದ್ರಂತ. ಡುಮ್ಮಗ ಒಂದಿನಾ ದ್ವಾಸಿ ತಿನಬೆಕನಿಸ್ತಂತ. ಆವಾಗ ಆಂವಾ … Read more

ಪ್ರಕಟಣೆಗಳು

ಉಚಿತ ಚಲನಚಿತ್ರ ಅಭಿನಯ ಮತ್ತು ನಿರ್ದೇಶನ ಕಾರ್ಯಾಗಾರ “ಸೃಷ್ಟಿ ದೃಶ್ಯ ಕಲಾಮಾಧ್ಯಮ ಅಕಾಡೆಮಿ’ಯು ಕಳೆದ 14 ವರ್ಷಗಳಿಂದ ದೃಶ್ಯಮಾಧ್ಯಮ ಕುರಿತು ತಾಂತ್ರಿಕ ತರಬೇತಿ ಶಿಬಿರಗಳನ್ನು ಆಸಕ್ತ ಯುವಜನರಿಗಾಗಿ ಆಯೋಜಿಸುತ್ತಿದೆ. ಪ್ರತಿ ವರ್ಷದಂತೆ ಈ ಸಲವೂ ಚಲನಚಿತ್ರ ಮತ್ತು ದೂರದರ್ಶನಕ್ಕೆ ಸಂಬಂಧಿಸಿದಂತೆ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ (ಎಡಿಟಿಂಗ್), ಕಿರುಚಿತ್ರ ನಿರ್ಮಾಣ, ನಿರ್ದೇಶನ ಮತ್ತು ಅಭಿನಯ ಕುರಿತು 5 ತಿಂಗಳ ಕಾರ್ಯಾಗಾರವನ್ನು ದಿನಾಂಕ 08-04-2014  ರಿಂದ ಪ್ರತಿ ಭಾನುವಾರಗಳಂದು ಹಮ್ಮಿಕೊಳ್ಳಲಾಗಿದೆ.   ಪ್ರತಿ ಭಾನುವಾರ “ಭಾರತ್ ಸ್ಕೌಟ್ಸ … Read more

ಸಾಮಾನ್ಯ ಜ್ಞಾನ (ವಾರ 31): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚೆಗೆ ನಿಧನರಾದ ಗೋಪಿನಾಥ ಮುಂಡೆ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿತ್ತು? ೨.    ಆಹಾರ ಸಂಸ್ಕರಣೆ ಕೇಂದ್ರ ಸಚಿವೆಯಾದ ಹರ್‌ಸಿಮ್ರತ್ ಕೌರ್ ಯಾವ ಕ್ಷೇತ್ರದಿಂದ ಸ್ಪರ್ಧಿಸಿದ್ದರು? ೩.    ಮೊದಲ ಬಾರಿಗೆ ತಯಾರಾದ ರೋಗ ನಿರೋಧಕ ಔಷಧಿ ಯಾವುದು? ೪.    ಭಾರತೀಯ ಶಿಕ್ಷಣದಲ್ಲಿ ’ಮಹಾಸನ್ನದು’ ಎಂದು ಯಾವ ವರದಿಯನ್ನು ಕರೆಯುತ್ತಾರೆ? ೫.    ಯಾವ ಖಂಡವನ್ನು ದ್ವೀಪ ಖಂಡವೆಂದು ಕರೆಯುತ್ತಾರೆ? ೬.    ವಂಗಭಂಗ ಕಾಯ್ದೆಯನ್ನು ಜಾರಿಗೊಳಿಸಿದ ವರ್ಷ ಯಾವುದು? ೭.    ಮಧುರೈ ಯಾವ ನದಿಯ ದಂಡೆಯ … Read more

ನಾನು ನೋಡಿದ ಚಿತ್ರ, ಚೌಕಟ್ಟು ಮೀರಿದ ಶ್ರಮ: ಅಮರ್ ದೀಪ್ ಪಿ.ಎಸ್.

ಕೆಲ ವರ್ಷಗಳ ಹಿಂದೆ ರಜನಿಕಾಂತ್ ಅವರ ಶಿವಾಜಿ ಸಿನಿಮಾ ಬಂದಿತ್ತು.  ಅದರಲ್ಲಿ ರಜನಿಕಾಂತ್ ಎಲ್ಲಾ ಆಸ್ತಿ ಕಳಕೊಂಡ ನಂತರ ವಿಲನ್ ಸುಮನ್ ರಜನಿಕಾಂತ್ ಅವರಿಗೆ ಒಂದು ರುಪಾಯಿ ಕಾಯಿನ್ ಎಸೆಯುತ್ತಾನೆ. ಆ ಒಂದು ರುಪಾಯಿ ಕಾಯಿನ್ ಸಿನೆಮಾ ಅಂತ್ಯವಾಗುವವರೆಗೂ ಪದೇ ಪದೇ ಪರದೆ ಮೇಲೆ ಕಾಣಿಸಿ ಕೊಳ್ಳುತ್ತಲೇ ಇರುತ್ತದೆ.  ಅದೂ ರಜನಿ ಸ್ಟೈಲಿಶ್ ನಟನೆಯೊಂದಿಗೆ.   ನನಗೆ ಪದೇ ಪದೇ ಆ ಒಂದು ರೂಪಾಯಿಯೇ  ನೆನಪಾಗುತ್ತದೆ.   ಬಿಡಿ, ಸಿನೆಮಾ ಬೇರೆ.  ಜೀವನ ಬೇರೆ. ಒಮ್ಮೊಮ್ಮೆ  ಒಬ್ಬನ … Read more

ಹೀಗೊಂದು ಗೆಳೆಯರ ಬಳಗ! (ಅಳಿದುಳಿದ ಭಾಗ?!): ಗುರುಪ್ರಸಾದ ಕುರ್ತಕೋಟಿ

(ನಮ್ಮ ಗೆಳೆಯರ ಬಳಗ ಹಾಗೂ ಅಗಿನ ನನ್ನ ಅನುಭವಗಳ ಬಗ್ಗೆ  ಹಿಂದೊಮ್ಮೆ ಬರೆದಿದ್ದೆ. ಅದಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪುಳಕಿತನಾದೆ. ಅದನ್ನು ಓದಿದ ಕೆಲವು ಗೆಳೆಯರ ಆಗ್ರಹದ ಮೇರೆಗೆ, ಆ ಸಮಯದಲ್ಲಿ ನಮ್ಮ ಜೊತೆಗಿದ್ದ ಇನ್ನೂ ಕೆಲವು ವ್ಯಕ್ತಿಗಳು ಹಾಗೂ ಕೆಲವು ಮೋಜಿನ ಸಂಗತಿಗಳ ಬಗ್ಗೆ ಈಗ ಬರೆದಿದ್ದೇನೆ. ಹಿಂದಿನ ಲೇಖನ ಓದಿಯೇ ಇದನ್ನು ಓದಬೇಕೆಂದೇನು ಇಲ್ಲ. ಆದರೂ ಓದಿದರೆ ನಾನು ಬೇಡ ಅನ್ನುವುದಿಲ್ಲ! 🙂 ಇಲ್ಲಿದೆ ಅದರ ಲಿಂಕ್  ***** ನಮ್ಮ ಬಳಗದ ಇನ್ನೊಂದು ಅವಿಭಾಜ್ಯ … Read more

ಲಿಂಗೇರಿ ವಿಜಿಯ ಗುಟ್ಟು: ವಾಸುಕಿ ರಾಘವನ್

ತನ್ನ ಅಜ್ಜನ ಭಾವಚಿತ್ರದ ಮುಂದೆ ನಿಂತಿದ್ದ ವಿಜಿಯ ಮುಖದಲ್ಲಿ ತೃಪ್ತಿಯ ಮಂದಹಾಸವಿತ್ತು. "ಅಜ್ಜ, ನಿನ್ನ ಮಾತು ನಿಜ ಆಯ್ತು  ನೋಡು. ನೀನು ಹೇಳ್ತಿದ್ದ ಆ ದಿನ ಇವತ್ತು ಬಂತು" ಅಂದವನ ಕಣ್ಣಂಚು ಸ್ವಲ್ಪ ತೇವಗೊಂಡಿತ್ತು. ಅಜ್ಜ ಪಟ್ಟ ಕಷ್ಟಕ್ಕೆ, ಅನುಭವಿಸಿದ ನಿರಾಶೆ, ಅವಮಾನ, ಮೂದಲಿಕೆ ಇವೆಲ್ಲದಕ್ಕೂ ಒಂದು ಚಿಕ್ಕ ಸಮಾಧಾನ ಅನ್ನುವಂತೆ ಇತ್ತು ಆ ದಿನ. ವಿಜಿಯ ದೆಸೆಯಿಂದ ಲಿಂಗೇರಿ ಅನ್ನುವ ಆ ಪುಟ್ಟ ಹಳ್ಳಿಯ ಹೆಸರು ಜಗತ್ತಿನಾದ್ಯಂತ ಹರಡಿತ್ತು. ಯಾವುದೋ ಟಿವಿ ಚಾನಲ್ಲಿನವರು "ವಸ್ತ್ರ ಜಾದೂಗಾರ … Read more

ಆನೆ ಜೀವನ: ಅಖಿಲೇಶ್ ಚಿಪ್ಪಳಿ

ಮೆಕ್ಸಿಕೊ ದೇಶದ ಪ್ರಜೆಯೊಬ್ಬ ದೊಡ್ಡ ಸೂಟ್‌ಕೇಸಿನಲ್ಲಿ ೫೫ ಆಮೆಗಳನ್ನು ಮತ್ತು ೩೦ ಬಣ್ಣದ ಓತಿಗಳನ್ನು ಸಾಗಿಸುವಾಗ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಾನೆ. ಮೆಕ್ಸಿಕೊ ಸಿಟಿಯಿಂದ ಫ್ರಾಂಕ್‌ಫರ್ಟ್ ಮಾರ್ಗವಾಗಿ ಬಾರ್ಸಿಲೋನಕ್ಕೆ ಈ ಅಪರೂಪದ ಪ್ರಾಣಿಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಎಂದು ಅಲ್ಲಿಯ ಪತ್ರಿಕೆಗಳಲ್ಲಿ ವರದಿಯಾಗಿದೆ. ೫೦ ರಿಂದ ೬೦ ಸಾವಿರ ಪೌಂಡ್ ಬೆಳೆಬಾಳುವ ಈ ಪ್ರಾಣಿಗಳಲ್ಲಿ ಮೂರು ಆಮೆಗಳು ಸತ್ತು ಹೋಗಿದ್ದವು. ಮತ್ತೊಂದು ಹಾರುವ ಓತಿ ಗರ್ಭ ಧರಿಸಿತ್ತು ಎಂಬುದನ್ನು ಅಲ್ಲಿನ ವನ್ಯಜೀವಿ ತಜ್ಞರು ಹೇಳಿದ್ದಾರೆ. … Read more

ನಮ್ಮ ದೇವರು: ಜೈಕುಮಾರ್.ಹೆಚ್.ಎಸ್

ದೇಶದ ಪ್ರತಿಷ್ಟಿತ ವಿಜ್ಞಾನ ಸಂಶೋಧನಾ ಸಂಸ್ಥೆಯ ಆವರಣವದು. ದಟ್ಟ ಅರಣ್ಯವನ್ನು ನೆನಪಿಸುವ ದೇಶೀಯ ಮರಗಿಡಗಳಷ್ಟೇ ಅಲ್ಲದೆ ವಿವಿಧ ದೇಶಗಳ ಸಸ್ಯಸಂಪತ್ತನ್ನು ಹೊಂದಿದ್ದು, ಎಂಥಹ ಕಡುಬೇಸಿಗೆಯಲ್ಲೂ ತಂಪಾದ ಗಾಳಿ ಬೀಸುತ್ತಾ ನಳನಳಿಸುವ ಆವರಣವದು. ನೂರಾರು ಎಕರೆಯಷ್ಟು ಹರಡಿರುವ ಆವರಣದಲ್ಲಿ ವಿಜ್ಞಾನ ಪ್ರಯೋಗಾಲಯಗಳು, ಕ್ಲಾಸ್ ರೂಮುಗಳು, ವಿದ್ಯಾರ್ಥಿ ನಿಲಯಗಳು, ಕ್ಯಾಂಟೀನ್‌ಗಳು, ವಿಜ್ಞಾನಿಗಳ ವಸತಿ ನಿಲಯಗಳು ಯೋಜಿತ ರೀತಿಯಲ್ಲಿ ವಿಶ್ವದರ್ಜೆಗೆ ಸರಿಸiನಾಗಿ ಅರಣ್ಯದಂಥಹ ಆವರಣದಲ್ಲಿ ಅಡಗಿ ಕುಳಿತಂತಿವೆ.  ಅದೊಂದು ದಿನ ಮಧ್ಯಾಹ್ನದ ಹೊತ್ತು ರಸ್ತೆಯಲ್ಲಿ ಜನ ತಮ್ಮ ಪಾಡಿಗೆ ತಾವು ಸಾಗುತ್ತಿದ್ದಾರೆ. … Read more

ಬ್ಲಾಗುಗಳ ಲೋಕದಲ್ಲಿ: ಪ್ರಶಸ್ತಿ ಪಿ.

ಮುಂಚೆಯೆಲ್ಲಾ ಸಾಹಿತಿಯೆಂದ್ರೆ ಅವ ಕವಿಗೋಷ್ಠಿಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ತನ್ನ ಕವಿತೆಯನ್ನೋ, ಸಾಹಿತ್ಯಪ್ರಕಾರವನ್ನೂ ಪ್ರಸ್ತುತಪಡಿಸುವವನು, ಒಂದು ಖಾದಿ ಜುಬ್ಬ, ಜೋಳಿಗೆಯೊಂದಿಗೆ ತಿರುಗಾಡುವವನು ಎಂಬೆಲ್ಲಾ ಕಲ್ಪನೆಗಳಿರುತ್ತಿದ್ದವು.ಆದರೆ ಬದಲಾಗುತ್ತಿರುವ ಕಾಲದೊಂದಿಗೆ ಈ ಪರಿಕಲ್ಪನೆಯೂ ಬದಲಾಗುತ್ತಿರುವಂತೆ ಕಾಣುತ್ತಿದೆ. ಪುಸ್ತಕಗಳ ಮೂಲಕವೇ ಜನರ ಮನಗೆಲ್ಲುತ್ತಿರುವ ಹಿಂದಿನ ಜಮಾನಾದ ಸಾಹಿತಿಗಳೊಂದಿಗೆ, ಒಂದೇ ಒಂದು ಪುಸ್ತಕವನ್ನು ಬರೆಯದಿದ್ದರೂ ತಮ್ಮ ಜಮಾನಾದ ಗೆಳೆಯರ ಬಳಗದಲ್ಲಿ ಗುರುತಿಸಿಕೊಳ್ಳುತ್ತಿರುವ ಹೊಸ ಪೀಳಿಗೆಯ ಸಾಹಿತಿಗಳ ಉಗಮವಾಗುತ್ತಿರುವಂತೆ ಕಾಣುತ್ತಿದೆ. ಕವಿ, ಸಾಹಿತ್ಯ ಸಮ್ಮೇಳನಕ್ಕಾಗಿ ತಮ್ಮ ಸಮಯ ಮೀಸಲಿಡುವಷ್ಟು ಪುರುಸೊತ್ತಿನವರಲ್ಲ ಈ ಎರಡನೇ ಪೀಳಿಗೆಯವರು. ನವ್ಯ, … Read more

ಸಮೃದ್ಧ ಬದುಕಿಗೆ ಸೂತ್ರಗಳು !: ಎಸ್.ಜಿ.ಶಿವಶ೦ಕರ್

ಬೆ೦ಗಳೂರಿನಲ್ಲಿ ಪಾದಚಾರಿಗಳ ನಡೆಯುವ ಜಾಗವನ್ನೆಲ್ಲಾ ರಸ್ತೆಗಳು ನು೦ಗಿರುವುದು ಕ೦ಡು ಅಚ್ಚರಿಗೊ೦ಡೆ! ಮತ್ತೆ ಪಾದಚಾರಿಗಳ ಗತಿ ಏನು? ಅವರೆಲ್ಲಿ ನಡೆಯುತ್ತಾರೆ ಎ೦ಬ ಯೋಚನೆ ಬ೦ತು. ಅದಕ್ಕೆ ಉತ್ತರವೂ ಎದುರಿಗೇ ಗೋಚರಿಸಿತು!  ವಾಹನ ಸಮುದ್ರದ ನಡುವೆ ಒ೦ದು ಕ್ಷುದ್ರ ವಾಹನದ೦ತೆ ಜೀವ ಕೈಯಲ್ಲಿ ಹಿಡಿದು ಕಕ್ಕಾಬಿಕ್ಕಿಯಾಗಿ ನಡೆಯುತ್ತಿರುವ ಪಾದಚಾರಿಗಳು ಕ೦ಡರು! ಅವರನ್ನೇ ಅನುಕರಿಸುತ್ತಾ ನಾನೂ ರಸ್ತೆಗಿಳಿದೆ. ಯಾವ ಕ್ಷಣದಲ್ಲಿ ಯಾವ ವಾಹನ ಮೇಲೇರುವುದೋ ಎ೦ಬ ಆತ೦ಕ ಎದೆಯಲ್ಲಿ ಅವಲಕ್ಕಿ ಭತ್ತ ಕುಟ್ಟುತ್ತಿತ್ತು. ನೇರವಾಗಿ ನನ್ನ ಹಿ೦ದಿನಿ೦ದ ಜೋರಾಗಿ ಹಾರನ್ ಕೇಳಿತು. … Read more

ಆಲಿಸ್ ವಾಕರ್ ಳ ಮೂರು ಕವಿತೆಗಳು: ರಮೇಶ್ ಮೇಗರವಳ್ಳಿ

 *ಆಲಿಸ್ ವಾಕರ್* ಅಮೇರಿಕಾದ ಜಾರ್ಜಿಯಾದ ಈಟಾನ್ಟನ್ ನಲ್ಲಿ ೯ – ೨ – ೧೯೪೪ ರ೦ದು ಜನಿಸಿದ ಆಲಿಸ್ ವಾಕರ್ ಅಮೇರಿಕಾದ ಸುಪ್ರಸಿದ್ಧ ಕಾದ೦ಬರಿಗಾರ್ತಿ, ಕಥೆಗಾರ್ತಿ, ಕವಯತ್ರಿ, ಪ್ರಬ೦ಧಗಾರ್ತಿ ಮತ್ತು ಹೋರಾಟಗಾರ್ತಿ.  ಅವಗಢವೊ೦ದರಲ್ಲಿ ಒ೦ದು ಕಣ್ಣನ್ನು ಕಲೆದುಕೊ೦ಡ ಆಲಿಸ್ ವಾಕರ್ ಳಿಗೆ ಆಗಾಧವಾದ ಓದಿನ ಹಸಿವು. ಸಾರಾ ಲಾರೆನ್ಸ್ ಕಾಲೇಜ್ ಮತ್ತು ಸ್ಪೆಲ್ಮನ್ ಕಾಲೇಜ್ ಗಳಲ್ಲ್ಲಿ ಶಿಕ್ಷಣ ಪಡೆದ ಆಲಿಸ್ ವಾಕರ್ ಳ ಸುಪ್ರಸಿಧ್ಧ ಕಾದ೦ಬರಿ "The color purple" ಗೆ ಪ್ರತಿಷ್ಠಿತ  ಪುಲಿಟ್ಸರ್ ಬಹುಮಾನ ಮತ್ತು … Read more

ನಮ್ಮ ಬಳಿ ಇಲ್ಲದಿರುವುದಕ್ಕೆ: ಪದ್ಮಾ ಭಟ್

ಹೈಸ್ಕೂಲು ದಿನಗಳಲ್ಲಿ ಆ ಪದ್ಯ ಓದಿದ ನೆನಪು.. ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು. ಬಂತಲ್ಲ ಬೇಸಿಗೆ ಕೆಟ್ಟ ಬಿಸಿಲೆಂದರು ಎಂಬ ಪದ್ಯದ ಹೆಸರು ಇಕ್ಕಳ ಎಂದು.. ಹೌದಲ್ವಾ.. ನಮಗೆ ಕಳೆದುಹೋಗಿದ್ದೇ ಚನ್ನಾಗಿರುತ್ತದೆ..ಚಿಕ್ಕವರಿರುವಾಗ ದೊಡ್ಡವರಾಗುವ ಕನಸುಗಳು. ದೊಡ್ಡವರಾದ ಮೇಲೆ ಬಾಲ್ಯವೇ ಚನ್ನಾಗಿತ್ತೆಂಬ ಮನಸು.. ಪ್ರತೀದಿನವೂ ಪ್ರತೀಕ್ಷಣವೂ ಸಿಗದೇ ಇರುವುದೇ ಒಳ್ಳೆಯದೆಂಬ ಮರೀಚಿಕೆ ನಮಗೆ.. ಸಿಗದಿರುವ ದ್ರಾಕ್ಷಿ ಹುಳಿಯೇ ಎಂದು ನರಿಯಂತೆ ನಾವಂದುಕೊಳ್ಳುವುದಿಲ್ಲ. . ಸಿಗದೇ ಇರುವುದೇ ಚನ್ನಾಗಿರುತ್ತದೆ ಎಂದು ಅಂದುಕೊಳ್ಳುತ್ತೇವೆ ಅಲ್ವಾ..? ಬೇರೆಯವರು ಹಾಕಿಕೊಂಡ ಬಟ್ಟೆಯೇ ಚನ್ನಾಗಿರುತ್ತದೆ.. … Read more

ಮರೆಯುವುದನ್ನು ಮರೆಯುವ ಬಗೆ ಹೇಗೆ?: ಹೊರಾ.ಪರಮೇಶ್

"ಮರೆವು" ಎಂಬುದು ಜ್ಞಾನಾಸಕ್ತರಿಗೆ ಅದರಲ್ಲೂ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಶತ್ರುವಂತೆ ಕಾಡುತ್ತದೆ.ಪ್ರತಿಯೊಬ್ಬರಿಗೂ ಜೀವನದ ಒಂದಲ್ಲ ಒಂದು ಸಂದರ್ಭದಲ್ಲಿ ಈ "ಮರೆವು" ಉಂಟಾಗಿ ಕೆಲವೊಮ್ಮೆ ಅವಮಾನ, ಮತ್ತೆ ಕೆಲವೂಮ್ಮೆ ಅಪಘಾತ ಇನ್ನೂ ಕೆಲವು ಸಾರಿ ಆನಂದವನ್ನೇ ಉಂಟು ಮಾಡುತ್ತದೆ.ಅದಕ್ಕೆ ಮನೋವಿಜ್ಞಾನಿಗಳು "ಮರೆವು ಮನುಷ್ಯನಿಗೆ ವರವೂ ಹೌದು ಶಾಪವೂ ಹೌದು" ಎಂದಿದ್ದಾರೆ.             ನಿಜ ನಮ್ಮ ಮೆದುಳಿನಲ್ಲಿ ನಮ್ಮ ಪಂಚೇ೦ದ್ರಿಯಗಳಿಂದ ಪಡೆದ ಅನುಭವಗಳೆಲ್ಲವನ್ನು ದಾಖಲಿಸುವ ಸಾಮರ್ಥ್ಯ ಇರುತ್ತದೆ.ಆದರೆ ಆ ಧಾರಣ ಸಾಮರ್ಥ್ಯವು … Read more

ನನ್ನೊಳಗಿನ ಗೆಳತಿ: ಸುಮನ್ ದೇಸಾಯಿ

    ಅದೊಂದು ಸುಂದರ ಸಂಜೆ. ಪಾರ್ಕಿನೊಳಗ ಅವರಿಗಾಗಿ ಕಾಯಿಕೊಂಡು ಕೂತಿದ್ದೆ. ಇಗೀಗಷ್ಟೆ ಅವರ ಪರಿಚಯ ಆಗಿತ್ತು. ದಿನಾಲು ವಾಕಿಂಗ್ ಬರ್ತಿದ್ರು. ಸುಮಾರು ೫೩ ರ ಅಂಚಿನ ಅವರು, ಅದ್ರ ಹಂಗ ಅನಿಸ್ತಿದ್ದಿಲ್ಲ. ನಲವತ್ತೈದರ ಆಸು ಪಾಸು ಅನಿಸ್ತಿತ್ತು. ತಿಳಿಯಾದ ಬಣ್ಣ, ಸ್ವಲ್ಪ ಕೋಲೆನ್ನಬಹುದಾದ ಮುಖ, ಕಂಡು ಕಾಣದಂತೆ ನಗುವ ಕಣ್ಣುಗಳು, ಧೀಮಂತ ಮುಖಕ್ಕೆ ಒಪ್ಪುವ ಕನ್ನಡಕ. ಸ್ನೆಹಮಯವಾದ ಸಂಯಮದಿಂದ ಕೂಡಿದ ಮಾತುಗಳು. ಇತ್ತೀಚಿಗ್ಯಾಕೊ ಮನಸ್ಸಿಗೆ ಹತ್ತರ ಆಗ್ಲಿಕತ್ತಿದ್ರು. ಆವತ್ತ ಅವರನ್ನ ನೋಡಿದ ಮೊದಲ ದಿನ, ನನ್ನ … Read more

ಸಾಮಾನ್ಯ ಜ್ಞಾನ (ವಾರ 30): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧)    ಮೇ – ೨೬ – ೨೦೧೪ ರಂದು ನರೇಂದ್ರ ಮೋದಿಯವರು ಭಾರತದ ಎಷ್ಟನೆಯ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ? ೨)    ಇತ್ತಿಚೆಗೆ ನಡೆದ ೨೦೧೪ ರ ಲೋಕಸಭಾ ಚುನಾವಣೆಯಲ್ಲಿ ಉಮಾಭಾರತಿಯವರು ಯಾವ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ ? ೩)    ಪೋಲಿಯೋ ನಿರ್ಮೂಲನೆಯ ಹರಿಕಾರ ಎಂಬ ಖ್ಯಾತಿ ಪಡೆದ ಡಾ||ಹರ್ಷವರ್ಧನ ಅವರಿಗೆ ಮೋದಿ ಸಂಪುಟದಲ್ಲಿ ಯಾವ ಖಾತೆ ನೀಡಲಾಗಿದೆ ? ೪)    ಇತ್ತೀಚೆಗೆ ದೂರ ಸಂಪರ್ಕ ಮತ್ತು ಕಾನೂನು ನ್ಯಾಯಾಂಗ ಸಚಿವರಾದ ರವಿಶಂಕರ್ ಪ್ರಸಾದ್ … Read more

ಅಪರಿಚಿತರು ಪರಿಚಿತರಾದಾಗ: ನಟರಾಜು ಎಸ್.ಎಂ.

ಜಲ್ಪಾಯ್ಗುರಿಯಲ್ಲಿ ರಾಜ್ ಗಂಜ್ ಎಂಬ ಬ್ಲಾಕ್ ಇದೆ. ಬ್ಲಾಕ್ ಎಂದರೆ ನಮ್ಮ ಕಡೆಯ ತಾಲ್ಲೂಕು. ಆ ಬ್ಲಾಕು ಒಂದು ಕಡೆ ಬಾಂಗ್ಲಾ ದೇಶಕ್ಕೆ ಅಂಟಿಕೊಂಡಿದೆ. ಅಂದರೆ ಬಾಂಗ್ಲಾ ದೇಶದ ಬಾರ್ಡರ್ ಈ ಬ್ಲಾಕ್ ನಲ್ಲಿದೆ. ಆ ಬ್ಲಾಕಿನ ಬಾರ್ಡರ್ ನಲ್ಲಿರುವ ಒಂದು ಊರಿನಲ್ಲಿ ಒಮ್ಮೆ ಜಾಂಡೀಸ್ ಕೇಸ್ ಗಳು ಪತ್ತೆಯಾಗಿದ್ದವು. ಅದರ ಇನ್ ವೆಸ್ಟಿಗೇಷನ್ ಗೆ ಅಂತ ಹೋಗಿದ್ದೆ. ನನ್ನ ಜೊತೆ ನಮ್ಮ ಸರ್, ಒಂದಿಬ್ಬರು ಆಫೀಸ್ ಸ್ಟಾಫ್, ವಾಟರ್ ಟೆಸ್ಟಿಂಗ್ ಲ್ಯಾಬೋರೇಟರಿಯಿಂದ ಬಂದಿದ್ದ ಟೆಕ್ನಿಷಿಯನ್ ಮತ್ತು … Read more

“ಚೇತನ” ಎಂದಾದರೂ “ವಿಕಲ”ವಾಗಲು ಸಾಧ್ಯವೇ?: ಅಮರ್ ದೀಪ್ ಪಿ.ಎಸ್.

ದೇಹದಲ್ಲಿ ಮನುಷ್ಯನಿಗೆ ಯಾವುದಾದ್ರೂ  ಅಂಗ ಊನತೆ ಇದ್ರೆ ಅದಕ್ಕೆ ಅಂಗವೈಕಲ್ಯ ಅಂತ ಲೋಕ ರೂಢಿಯಾಗಿ ಕರೆದು ಬಿಟ್ಟರು.  ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಬರಹಗಾರರು ಅಂಗವೈಕಲ್ಯ ಪದವನ್ನು ಬದಲಾಯಿಸಿ "ವಿಕಲಚೇತನ"ಎಂದು ಕರೆದರು.  ಆಂಗ್ಲದಲ್ಲಿ "physically handicapped" ಅನ್ನುವ ಪದವನ್ನು ಯಥಾವತ್ತಾಗಿ  ಕನ್ನಡೀಕರಿಸಿರಬಹುದು.  ಅದನ್ನೇ ಅಂಥಹವರನ್ನು ನಿಂದಿಸದ ರೀತಿ ಯಲ್ಲಾಗಲಿ ಪ್ರೋತ್ಸಾಹಿಸುವ ರೀತಿಯಲ್ಲಾಗಲಿ  "physically challenged" ಅಂತ ಕರೀಬೇಕು ಅಂತೇನೋ ಆಯಿತು. ಇರಲಿ  ನನ್ನ ಪ್ರಶ್ನೆ ಇರುವುದು  ಈಗ ಈ ಅಂಗ ಊನತೆ ಇರುವ ಜನರನ್ನು … Read more

ಹ್ಹೋ.. ಏನು ..?: ಅನಿತಾ ನರೇಶ್ ಮಂಚಿ

ನಾಯಿ ಬೊಗಳುವ ಸದ್ದಿಗೆ ಒಬ್ಬೊಬ್ಬರಾಗಿ ಹೊರ ನಡೆದ ನಮ್ಮ ಮನೆಯ ಸದಸ್ಯರು ಯಾರೊಂದಿಗೋ ಏನು ? ಏನು? ಎಂದು ವಿಚಾರಿಸುತ್ತಿರುವುದು ಕೇಳಿಸಿತು. ಮಧ್ಯಾಹ್ನದ ಊಟದ ಸಿದ್ದತೆಯಲ್ಲಿದ್ದ ನಾನು ಯಾರಿರಬಹುದು ಎಂಬ ಕುತೂಹಲದಲ್ಲಿ ಹೊರಗೆ ದೃಷ್ಟಿ ಹಾಯಿಸಿದೆ. ಅರ್ರೇ .. ನಮ್ಮ ಪ್ರೀತಿಯ ಗೌರತ್ತೆ.. ಅದೂ ಕೊಡಗಿನ  ಕಾವೇರಿಯ ಉಗಮಸ್ಥಾನದಿಂದ  ಮೊದಲ ಬಾರಿಗೆ ನಮ್ಮನೆಗೆ ಬರುತ್ತಾ ಇರುವುದು. ನಾವೆಲ್ಲಾ ಅವರ ಮನೆಗೆ ಹೋಗಿ ದಿನಗಟ್ಟಲೆ ಟೆಂಟ್ ಊರುತ್ತಿದ್ದೆವು. ಸ್ವಲ್ಪವೂ ಬೇಸರಿಸಿಕೊಳ್ಳದೇ ಉಪಚಾರ ಮಾಡಿ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.  ಅಲ್ಲಿಂದ ಮರಳುವಾಗ … Read more