ಪುನರ್ ಮಿಲನ: ಸುಮನ್ ದೇಸಾಯಿ ಅಂಕಣ
ಮದವಿಮನಿ ಅಂದ್ರ ಅದರ ಕಳೆನ ಬ್ಯಾರೆ ಇರತದ. ಹೆಣ್ಣು ಮಕ್ಕಳ ಹರಟಿ, ಸಣ್ಣ ಮಕ್ಕಳ ನಗುವಿನ ಕಲರವ. ಹಸಿರು ತೋರಣ, ಮಂಗಳಕರ ಚಪ್ಪರ. ನಗು, ಹಾಸ್ಯ, ಗಡಿಬಿಡಿಯಿಂದ ತುಂಬಿರತದ. ಅದರೊಳಗಂತು ಹಳ್ಳಿಯೊಳಗಿನ ಮದುವಿ ಸಂಭ್ರಮ ಅಂತು ಒಂಥರಾ ಬ್ಯಾರೆನ ಇರತದ.ಅದೊಂದ ಹಳೆಕಾಲದ್ದ ದೊಡ್ಡಂಕಣದ್ದ ಮನಿ. ಯಾವ ಆಡಂಬರ ಇಲ್ಲದ ಬಿಳಿಸುಣ್ಣದಿಂದ ಸಾರಿಸಿ ಅಲ್ಲಲ್ಲೆ ಇಳಿಬಿಟ್ಟ ಕೆಂಪು ಕ್ಯಾಂವಿ ಮಣ್ಣಿನ ಜೋರು. ಬಾಗಲಿಗೆ ಕಟ್ಟಿದ ಮಾವಿನ ತೊಳಲಿನ ತೊರಣ, ಮನಿಮುಂದ ಓಣಿಯ ತುಂಬ ಹಾಕಿದ ಹಂದರ ಹಂದರದೊಳಗ ಬಳೆಗಾರರು … Read more