ಮಾತಿಗೊಂದು ಎಲ್ಲೆ ಎಲ್ಲಿದೆ. .: ಸ್ಮಿತಾ ಅಮೃತರಾಜ್. ಸಂಪಾಜೆ.

ಮಾನವ ಜನ್ಮ ದೊಡ್ಡದು ಅಂತ ದಾಸರು ಇದಕ್ಕೇ ಹೇಳಿರಬೇಕು. ಯಾಕೆಂದರೆ ನಾವು ಪ್ರಾಣಿ ಪಕ್ಷಿಗಳಿಂದ, ಕ್ರಿಮಿಕೀಟಾದಿಗಳಿಂದ, ಹೆಚ್ಚೇಕೆ ಸಕಲ ಜೀವ ಸಂಕುಲಗಳಿಗಿಂತ ಅದೆಷ್ಟೋ ಭಿನ್ನವಾದರೂ, ಅವರಿಗಿಂತ ರೂಪು ಲಾವಣ್ಯದಲ್ಲಿ ಮಿಗಿಲಾದರೂ, ಅದೆಲ್ಲಕ್ಕಿಂತ ಹೆಚ್ಚಾಗಿ ನಮಗೆ ಆಲೋಚಿಸುವ, ಯೋಚಿಸಿದ್ದನ್ನು ಹಿಂದು ಮುಂದು ನೋಡದೆ ಒದರುವ , ಅಂದರೆ ಮಾತನಾಡುವ ವಿಶೇಷ ಶಕ್ತಿ ಇರುವುದರಿಂದಲೋ ಏನೋ ನಾವುಗಳು ಎಲ್ಲರ ದೃಷ್ಟಿಯಲ್ಲಿ ಕೃತಾರ್ಥರಾಗಿರುವುದು. ಇನ್ನು ಮನುಷ್ಯನಿಗೆ ಬಾಯಿ ತಿನ್ನಲು ಮಾತ್ರ ಅಲ್ಲ, ಅದು ಮಾತನಾಡುವ ಕೆಲಸ ಕೂಡ ಮಾಡುತ್ತದೆ ಅಂದರೆ ಇದಕ್ಕಿಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ದ ಹಿಡನ್ ಸೀಕ್ರೇಟ್ಸ್ ಆಫ್ ಟ್ರೀಸ್”: ಅಖಿಲೇಶ್ ಚಿಪ್ಪಳಿ

ಪೀಟರ್ ಹೋಲ್‍ಮನ್ ರೋಲ್ಡ್ ದಾಲ್ ಬರೆದ “ದ ಸೌಂಡ್ ಮಶಿನ್” ಎಂಬ ಸಣ್ಣ ಕತೆಯಲ್ಲಿ ಒಬ್ಬ ಮನುಷ್ಯ ಒಂದು ಯಂತ್ರವನ್ನು ಕಂಡು ಹಿಡಿಯುತ್ತಾನೆ. ಕಿವಿಗೆ ಹಾಕಿಕೊಳ್ಳುವ ಈ ಯಂತ್ರದ ವಿಶೇಷವೆಂದರೆ ಸಾಮಾನ್ಯವಾಗಿ ಮನುಷ್ಯನಿಗೆ ಸ್ವಾಭಾವಿಕವಾಗಿ ಕೇಳಲಾರದ ಶಬ್ಧಗಳು ಕೇಳಿ ಬರುತ್ತವೆ. ಆ ಯಂತ್ರವನ್ನು ಕಿವಿಗೆ ಹಾಕಿಕೊಂಡು ಲಾನ್‍ನಲ್ಲಿ ಅಡ್ಡಾಡುತ್ತಾನೆ. ಅಲ್ಲಿ ಬೆಳೆದ ಸೇವಂತಿಗೆ ಹೂವನ್ನು ಕೀಳುತ್ತಾನೆ. ಆಶ್ಚರ್ಯವೆಂಬಂತೆ ಗಿಡದಿಂದ ವಿಚಿತ್ರವಾದ ಸದ್ದು ಬರುತ್ತದೆ. ಅದೇನು ಅಳುವೇ, ನೋವಿನ ಆಕ್ರಂದನವೇ? ಅಥವಾ ಪ್ರತಿಭಟಿಸುವ ಚರ್ಯೆಯೇ ಅವನಿಗದು ಅರ್ಥವಾಗುವುದಿಲ್ಲ. ಸಸ್ಯಗಳಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಒಲವಿಗೊಂದು ನೆನಪಿನೋಲೆ”: ಶಿವಾನಂದ ಆರ್ ಉಕುಮನಾಳ

ಒಂದು ಸುಂದರ ಮುಂಜಾವು ಮೈಸೂರಿನ ಮೈ ಕೊರೆವ ಚಳಿಯಲ್ಲಿ ಮಾನಸ ಗಂಗೋತ್ರಿಗೆ ಹೊರಟಿದ್ದೆ ಅದು ಬಿ.ಕಾಂ. ಅಂತಿಮ ವರ್ಷದ ಮೊದಲ ದಿನ. ಎಲ್ಲಿಂದಲೋ ಹಾರಿಬಂದ ಪಾರಿವಾಳವೊಂದು ಭುಜದ ಮೇಲೆ ಕುಳಿತಿತು ಅದು ಯಾರದೆಂದು ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ. ಅದನ್ನೆತ್ತಿ ಮಣಿಕಟ್ಟಿನ ಮೇಲೆ ಕುಳ್ಳಿರಿಸಿ ನೋಡಲು ಅದರ ಎದೆಯ ಮೇಲೆ ನಯನಾ ಎಂಬ ಹೆಸರು ಮತ್ತೆ ಅತ್ತಿತ್ತ ನೋಡಲಾಗಿ ದೂರದಲ್ಲಿ ಕಂಡವಳೇ ನೀನು (ನಯನಾ). ಹತ್ತಿರಕ್ಕೆ ಬಂದು ಅದೇನನ್ನೋ ಹೇಳಿ ಆ ಪಾರಿವಾಳವನ್ನೆತ್ತಿಕೊಂಡು ಹೊರಟೇ ಹೋದೆ ಆದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 6): ಪ್ರಸಾದ್ ಕೆ.

ಇಲ್ಲಿಯವರೆಗೆ ಪೌಲ್ ಬರ್ನಾರ್ಡೊ ನ ಬಂಧನದ ಬೆನ್ನಿಗೇ ಮಾಧ್ಯಮಗಳು “ದ ಸ್ಕಾರ್-ಬೋರೋ ರೇಪಿಸ್ಟ್'' ನ ಬಂಧನವಾಯಿತು ಎಂದು ಒಂದರ ಹಿಂದೊಂದರಂತೆ ಮುಖಪುಟಗಳಲ್ಲಿ ಪ್ರಕಟಿಸುತ್ತವೆ. ಮೊದಲೇ ಸೆನ್ಸೇಶನಲ್ ನ್ಯೂಸ್ ಆಗಿದ್ದ ಈ ಪ್ರಕರಣವು ಈಗಂತೂ ದಂಪತಿಗಳ ಬಂಧನದ ಬಳಿಕ ನಿತ್ಯವೂ ಒಂದಲ್ಲಾ ಒಂದು ಸುದ್ದಿಯನ್ನು ಬಿತ್ತರಿಸಿ ಪ್ರಕರಣದ ಬಿಸಿಯನ್ನು ಕಾಯ್ದುಕೊಂಡಿರುವಂತೆ ಮಾಡುತ್ತವೆ. ಈ ಸಂಬಂಧ ಒಂದು ಅಪೀಲನ್ನು ಸಲ್ಲಿಸುವ ದ ಕ್ರೌನ್ (ಪ್ರಾಸಿಕ್ಯೂಷನ್), `ಈ ಪ್ರಕರಣದ ಮಿತಿಮೀರಿದ ಕುಖ್ಯಾತಿಯ ಪರಿಣಾಮವಾಗಿ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಜ್ಯೂರಿ ಸಮೂಹವು ಗಾಳಿಮಾತು ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಚಿನ್ ಅಂಕೋಲಾ ಅವರ ಪ್ರಗತಿಪರ ಕ್ರಾಂತಿಕಾರೀ ಕವನಗಳು: ಹುಳಗೋಳ ನಾಗಪತಿ ಹೆಗಡೆ

ಇತ್ತೀಚೆಗೆ ಅಂಕೋಲೆಯ ಪಿ.ಎಮ್. ಜ್ಯೂನಿಯರ್ ಕಾಲೇಜಿನಲ್ಲಿ ಸಚಿನ್ ಅಂಕೋಲಾ ಅವರ, ‘ನಾನೂ ಹೆಣ್ಣಾಗಬೇಕಿತ್ತು..’ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಈ ಮೊದಲೇ ತಮ್ಮ ಹಲವು ಗಟ್ಟಿ ಕವನಗಳ ಮೂಲಕ ಅನೇಕ ಹಿರಿಯರ ಗಮನ ಸೆಳೆದವರು ಸಚಿನ್. ಬಹಳಷ್ಟು ಕವಿಗೋಷ್ಠಿಗಳಲ್ಲಿ ಸಾಕಷ್ಟು ಸಶಕ್ತವಾದ ಕವನಗಳನ್ನೇ ವಾಚಿಸಿ, ಕಾವ್ಯಪ್ರಿಯರ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದಾರೆ. ಇದೀಗ ಲೋಕಾರ್ಪಣೆಗೊಂಡಿರುವ ತಮ್ಮ ಕವನ ಸಂಕಲನದಲ್ಲಿ ಹಿರಿಯರು ಇಟ್ಟ ನಂಬಿಕೆಯನ್ನು ಹುಸಿಗೊಳಿಸದೆ ಇನ್ನಷ್ಟು ಭರವಸೆಯನ್ನು ಮೂಡಿಸಿ ಕನ್ನಡ ಕಾವ್ಯಲೋಕಕ್ಕೆ ಇನ್ನೊಬ್ಬ ಗಟ್ಟಿ ಕವಿ ಬರುತ್ತಿರುವ ಎಲ್ಲ ಬಗೆಯ ವಿಶ್ವಾಸವನ್ನೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯಾರಿಂದ, ಯಾರಿಗೆ, ಯಾತಕ್ಕಾಗಿ ಈ ವಶೀಕರಣ?: ಕೃಷ್ಣವೇಣಿ ಕಿದೂರ್, ಇಚ್ಲಂಪಾಡಿ

ಸ್ತ್ರೀ, ಪುರುಷ ವಶೀಕರಣ ಮಾಡಿಕೊಡುವವರು ಮಾಧ್ಯಮಗಳಲ್ಲಿ ಜಾಹೀರಾತುಗಳ ಮೂಲಕ ಹೆಚ್ಚಾಗಿ ಯುವಜನರನ್ನು ಸೆಳೆದುಕೊಳ್ಳುವುದನ್ನು ಗಮನಿಸಿದರೆ ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಅನ್ನುವ ಮಾತು ಅಪ್ಪಟ ಸತ್ಯ. ವಾರ್ತಾಮಾಧ್ಯಮಗಳಲ್ಲಿ ನಿತ್ಯವೂ ನಾನಾ ತರಹದ ಆಮಿಷವೊಡ್ಡಿ ಗಾಳಕ್ಕೆ ಸಿಲುಕಿಸುತ್ತಾರೆ. ಮೀನು ಹಿಡಿಯಬೇಕಾದರೆ ಗಾಳಕ್ಕೆ ಎರೆಹುಳ ಸಿಕ್ಕಿಸದೆ ಹೋದರೆ ಅದು ಬಾರದು. ಯುವಜನರನ್ನು ಮಾತ್ರವಲ್ಲ; ಈ ವಶೀಕರಣದ ಮೂಲಕ ಬಯಸಿದವರನ್ನು, ಸುಲಭವಾಗಿ ವಶ ಮಾಡಿಕೊಳ್ಳಬಹುದು ಎನ್ನುವ ಆಸೆ ಅನೇಕ ಜನರನ್ನು ಪತಂಗದಂತೆ ಮುಕುರಿ ಬೀಳಿಸುತ್ತದೆ. ಇದಕ್ಕೆ ವಯಸ್ಸಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಿಕ್ಷಣ: ಭಾರ್ಗವ ಎಚ್.ಕೆ.

1 ಶಿಕ್ಷಣದ ಉದ್ದೇಶವಾದರು ಏನು ? ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣವಂತರು ಸಮಾಜದ ಉದ್ಧಾರಕ್ಕೆ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಇನ್ನು ಕೆಲವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸಕ್ಕೂ ಕೈಹಾಕಿದ್ದಾರೆ.  ಉದಾಹರಣೆಗೆ, ಗೂಗಲ್‍ನಲ್ಲಿ ಬಾಂಬ್ ತಯಾರಿಸುವ ಬಗೆಯನ್ನು ಸಾವಿರಾರು ಯುಆರ್‍ಎಲ್‍ಗಳು ಮಾಹಿತಿಗಳನ್ನು ನೀಡುತ್ತಿವೆ. ಅದೇ ರೀತಿಯಾಗಿ ಗೂಗಲ್ ಸರ್ಚ್ ಇಂಜಿನ್ ಒಳ್ಳೆಯದಕ್ಕೂ ಬಳಕೆಯಾಗುತ್ತಿದೆ. ವಿಪರ್ಯಾಸವೆಂದರೆ, ಈ ಜಾಲತಾಣಗಳನ್ನೆಲ್ಲ ಜಾಲಾಡುವ ವರ್ಗ ಮಾತ್ರ ಶಿಕ್ಷಣವಂತರು. ಶಿಕ್ಷಣದ ಮೂಲ ಉದ್ದೇಶವು ಕೆಲವು ಸಮಾಜಘಾತುಕರ ತಲೆಗೆ ಹೊಕ್ಕಿಲ್ಲ. ಪರಿಜ್ಞಾನದ ಪಾರವೇ ಇಲ್ಲದಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಾತುರ್ಮಾಸ: ಉಮೇಶ ಕ. ಪಾಟೀಲ

ಆಷಾಢಮಾಸದಿಂದ ನಾಲ್ಕು ತಿಂಗಳುಗಳ ಕಾಲ ನಡೆಯುವ ಒಂದು ವ್ರತ ಆಚರಣೆಯಾಗಿದೆ. ಆಷಾಢ ಶುಕ್ಲ ಪೂರ್ಣಿಮೆಯಿಂದ ಕಾರ್ತಿಕ ಶುಕ್ಲ ಪೂರ್ಣಿಮೆಯ ವರೆಗೆ ನಾಲ್ಕು ತಿಂಗಳ ಸಮಯವನ್ನು ‘ಚಾತುರ್ಮಾಸ’ ಎಂದು ಪರಿಗಣಿಸಲ್ಪಟಿದೆ. ಚಾತುರ್ಮಾಸ ಸಮೀಪಿಸದೊಡನೆ ಪೂಜ್ಯ ಮುನಿಗಳು, ಆರ್ಯಿಕೆಯರು, ತ್ಯಾಗಿಗಳು, ಬ್ರಹ್ಮಚಾರಿಗಳು ಮೊದಲಾದ ತಾವು ಚಾತುರ್ಮಾಸಕ್ಕಾಗಿ ನಿಶ್ಚಿಯಿಸಿದ ಗ್ರಾಮ, ನಗರಗಳನ್ನು ಆಶ್ರಯಿಸುತ್ತಾರೆ. ಈ ವ್ರತವನ್ನು ಆಷಾಢ ಶುಕ್ಲ ಏಕಾದಶಿ, ದ್ವಾದಸೀ, ಹುಣ್ಣಿಮೆ, ಕರ್ಕಾಟಕ ಸಂಕ್ರಮಣ, ಇವುಗಳಲ್ಲೊಂದು ದಿವಸ ಈ ವ್ರತವನ್ನು ಪ್ರಾರಂಭಿಸುತ್ತಾರೆ. ಈ ವ್ರತ ಆಚರಣೆಯನ್ನು ಪ್ರಾರಂಭ ಕಾಲ ಭಿನ್ನವಾಗಿದ್ದರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭಾರತದಲ್ಲಿ ಏಕರೂಪ ಶಿಕ್ಷಣದ ಒಂದು ಚರ್ಚೆ: ಸಿದ್ದುಯಾದವ್ ಚಿರಿಬಿ

ಶಿಕ್ಷಣ ಎಂಬ ಪದಕ್ಕೆ ವ್ಯಾಪಕವಾದ ಅರ್ಥವಿದೆ. ಆ ಅರ್ಥವನ್ನು ಹಿಡಿದಿಡುವ ಒಂದು ಸಮರ್ಥ ವ್ಯಾಖ್ಯೆಯನ್ನು ಅಥವಾ ನಿರ್ದಿಷ್ಟ್ಟವಾಗಿ ಇದೇ ಶಿಕ್ಷಣ ಎಂಬ ವ್ಯಾಖ್ಯೆಯನ್ನು ಕೊಡುವುದು ಕಷ್ಟ್ಟ .ತತ್ವಜ್ಞಾನಿಗಳು ಶಿಕ್ಷಣತಜ್ಞರು ,ರಾಜಕಾರಣಿಗಳು ಮತ್ತು ಸಾಧುಸಂತರು ಇನ್ನು ಮುಂತಾದವರೆಲ್ಲರೂ ತಮ್ಮ ತಮ್ಮ ದೃಷ್ಟಿ ಕೋನಗಳಿಗನುಗುಣವಾಗಿ ಶಿಕ್ಷಣವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಯೊಂದು ಸಂಪೂರ್ಣವಲ್ಲದಿದ್ದರು ಶಿಕ್ಷಣದ ಬಗ್ಗೆ ಪರಿಗಣಿಸಬೇಕಾದ ಒಂದಲ್ಲ ಒಂದಂಶವನ್ನು ಎತ್ತಿ ಹಿಡಿಯುವದರಿಂದ ಶಿಕ್ಷಣದ ಯಾವುದೇ ವ್ಯಾಖ್ಯೆಯನ್ನು ತಳ್ಳಿಹಾಕುವಂತಿಲ್ಲ. ಇದರಿಂದ ಶಿಕ್ಷಣದ ಪರಿಕಲ್ಪನೆಯು ಸಂಕೀರ್ಣವಾದುದು ಹಾಗೂ ಸಕ್ರಿಯವಾದುದು ಎಂದು ಹೇಳಬಹುದಾಗಿದೆ. ನಿರಂತರವಾಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

 ಅರಳುಗುಪ್ಪೆ : ಕಲ್ಲರಳಿ ಕಲೆಯಾಗಿ…: ದಂಡಿನಶಿವರ ಮಂಜುನಾಥ್

ಬೇಲೂರು-ಹಳೇಬೀಡಿನ ದೇವಾಲಯಗಳು ವಿಶ್ವದಲ್ಲಿಯೇ ಶಿಲ್ಪಕಲೆಗೆ ಹೆಸರುವಾಸಿಯಾಗಿವೆ. ಹಾಗೆಯೇ ಅದೆಷ್ಟೋ ದೇವಾಲಯಗಳು ಶಿಲ್ಪಕಲಾ ಸೌಂದರ್ಯದಿಂದ ತುಳುಕುತ್ತಿದ್ದರೂ ಸಹ ಇನ್ನೂ ಅಪರಿಚಿತವಾಗಿಯೇ ಉಳಿದಿದೆ. ಅಂತಹ ಅಪರಿಚಿತ ದೇವಾಲಯಗಳಲ್ಲಿ ಅರಳುಗುಪ್ಪೆಯ ದೇವಾಲಯಗಳೂ ಸೇರ್ಪಡೆಗೊಂಡಿವೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ಅರಳುಗುಪ್ಪೆ ಎಂಬ ಕುಗ್ರಾಮ ಕಿಬ್ಬನಹಳ್ಳಿ ಹೋಬಳಿಗೆ ಸೇರಿದೆ. ಇಲ್ಲಿರುವ ಹೊಯ್ಸಳರ ಕಾಲದ ಶ್ರೀ ಚನ್ನಕೇಶವ ದೇವಾಲಯ ಮತ್ತು ದ್ರಾವಿಡ ಶೈಲಿಯ ಶ್ರೀ ಕಲ್ಲೇಶ್ವರ ದೇವಾಲಯಗಳು ಶಿಲ್ಪಕಲಾ ಸೌಂದರ್ಯದಿಂದ ಕಂಗೊಳಿಸುತ್ತಿವೆ. ಚನ್ನಕೇಶವ ದೇಗುಲ : ಚನ್ನಕೇಶವ ದೇವಾಲಯವನ್ನು ನೋಡಿದ ತಕ್ಷಣ ನಮಗೆ ನೆನಪಾಗುವುದು ಬೇಲೂರು ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಸತ್ತ ನೆನ್ನೆಯ ನೆನಪುಗಳು ಎದೆಯಾಳದಲ್ಲೆಲ್ಲೋ ಗಿರಿಕಿ ಹೊಡೆದಂತಿದೆ ವರ್ಷಗಳು ನಿಮಿಷಗಳುರುಳಿದಂತೆ ಉರುಳುತಿವೆ ಅದೆಂತಹದೋ ಅವ್ಯಕ್ತ ನೋವು ಆವರಿಸಿ ಮರೆಯಾಗುತಿವೆ ನಿರ್ಜೀವ ಶವವಾಗಿ ಹೋಗಿರುವ ಮನದ ಮೂಲೆಯಲೆಲ್ಲೋ  ಸುಟ್ಟು-ಕರಕಲಾದ ಬರೀ ಬೇಡದ ಮಾತುಗಳು ಗೋಚರಿಸಿ ಅತಿರಿಕ್ತ ಭಾವ ನನ್ನೊಳಗೆ ಆವರಸಿ ಬೆಂಬಿಡದೆ ಕೊಲ್ಲುತಿದೆ ನೆನಪುಗಳಿಗೆ ಎಳ್ಳು-ನೀರು ಬಿಟ್ಟು ನಂಬಿಕೆಗೆ ತಿಲಾಂಜಲಿಯಿಟ್ಟು ಸಂಬಂಧಗಳ ಸಮಾಧಿ ಮೇಲೆ  ಹುಸಿ ನಗೆಯ ದಿರಿಸಿನೊಟ್ಟಿಗೆ ಮಾತುಗಳ ಕಳಚಿಟ್ಟು ಮೌನ ಧಾರಿಯಾಗಿ ನಡೆಯುತ್ತಿರುವೆ ಗತಿಸಿದ-ಮನ ಗುಂಡಾಂತರಗೊಳಿಸಿದ ಹಸಿ ಘಟನೆಗಳಿನ್ನು ಸ್ಮೃತಿ ಪಟದಲ್ಲಿ ಬಿಸಿಯಾಗಿ ಕುಂತಿವೆ ಗಿರಗಿಟ್ಲೆಯಂತೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೋಟಿಗೊಬ್ಬ!!: ಎಸ್.ಜಿ.ಶಿವಶಂಕರ್

ಪ್ರೇಕ್ಷಕರು ಉಸಿರು ಬಿಗಿಹಿಡಿದು ಕೂತಿದ್ದರು!! ಟಿವಿ ಸ್ಟುಡಿಯೋದಿಂದ 'ಕೋಟಿ ಲೂಟಿ' ಕಾರ್ಯಕ್ರಮ ನೇರ ಪ್ರಸಾರವಾಗುತ್ತಿತ್ತು. ಸ್ಟುಡಿಯೋದ ಪ್ರೇಕ್ಷಕರ ಜೊತೆಗೆ ಮನೆಗಳಲ್ಲಿ ಟಿವಿ ನೋಡುತ್ತಿದ್ದವರೂ ಸಹ ಉಸಿರು ಬಿಗಿಹಿಡಿದು ಕೂತಿದ್ದರು!! ಆತ ಅದ್ವಿತೀಯನೆನಿಸಿದ್ದ! ಒಂದಿಷ್ಟೂ ತಿಣುಕದೆ ಸರಾಗವಾಗಿ, ಒಂದು ಕ್ಷಣವೂ ಯೋಚಿಸದೆ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತಿದ್ದ! ಇದುವರೆಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾರಿಗೂ ಆ ರೀತಿಯಲ್ಲಿ ಉತ್ತರಿಸಲು ಸಾಧ್ಯವಾಗಿರಲಿಲ್ಲ!  ಕಾರ್ಯಕ್ರಮವನ್ನು ಪ್ರಾರಂಭದಿಂದಲೂ ವೀಕ್ಷಿಸುತ್ತಿದ್ದವರಿಗೆ ಆಶ್ಚರ್ಯ! ಯಾರೀತ? ಇಲ್ಲಿಯವರೆಗೂ ಯಾರ ಗಮನಕ್ಕೂ ಬಾರದೆ ಎಲ್ಲಿ ಅಡಗಿದ್ದ? ಜ್ಞಾನಭಂಡಾರದ ಬಾಗಿಲನ್ನೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರಾಜಕಾರಣಿಗಳು ಪಾರಿಸಾರಿಕ ದಿವಾಳಿತನವೂ!!!: ಅಖಿಲೇಶ್ ಚಿಪ್ಪಳಿ

70ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ದೇಶ ಮುಳುಗಿದ್ದ ಹೊತ್ತಿನಲ್ಲೆ ಅತ್ತ ಕೆಂಪುಕೋಟೆಯಿಂದ ಪ್ರಧಾನಿಯವರು ಭಾಷಣ ಮಾಡುತ್ತಿದ್ದರು. ದೇಶಕ್ಕೆ ಅನ್ನ ಕೊಡುವ ರೈತರನ್ನು ಇನ್ನಿಲ್ಲದಂತೆ ಹೊಗಳುತ್ತಿದ್ದರು. ಅತ್ತ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಟುವಾಗಿ ಟೀಕಿಸುತ್ತಾ, ದೇಶದ ತಲಾವಾರು ಆರ್ಥಿಕ ಸೂಚ್ಯಂಕವನ್ನು ಹೆಚ್ಚು ಮಾಡುವ ಉತ್ತರದಾಯಿತ್ವದ ಮಾತುಗಳು ಬರುತ್ತಿದ್ದವು. ಇದೇ ಹೊತ್ತಿನಲ್ಲಿ ಅನ್ನಭಾಗ್ಯದ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸುವುದಾಗಿ ನಮ್ಮ ಮುಖ್ಯಮಂತ್ರಿಗಳ ಭರವಸೆಯ ಭಾಷಣವನ್ನೂ ಟಿ.ವಿ.ಚಾನಲ್‍ಗಳು ಬಿತ್ತರಿಸುತ್ತಿದ್ದವು. ಇನ್ನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಕಾಗೋಡು ತಿಮ್ಮಪ್ಪನವರು ಅತೀವ ಬಳಲಿಕೆಯಿಂದ ಓದಬೇಕಾದ ಭಾಷಣವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಉತ್ತರಕರ್ನಾಟಕ ಉದಯೋನ್ಮುಖ ಪ್ರತಿಭೆ ಪೂರ್ಣಿಮಾ ದೇಶಪಾಂಡೆ: ಗುಂಡೇನಟ್ಟಿ ಮಧುಕರ

      ಬೆಳಗಾವಿ ಭಾಗ್ಯನಗರದಲ್ಲಿ ವಾಸಿಸುತ್ತಿರುವ  ಪೂರ್ಣಿಮಾ ದೇಶಪಾಂಡೆ ಇವಳಿಗೆ ಮೊದಲಿನಿಂದಲೂ ಒಂದೇ ಆಸೆ. ತಾನು ಚಲನಚಿತ್ರ ನಿರ್ದೇಶಕಿಯಾಗಬೇಕೆಂಬುದು. ಇದು ಹೇಗೆ ಅವಳ ಮನಸ್ಸಿನಲ್ಲಿ ಮೊಳಕೆಯೊಡೆಯಿತೋ ಗೊತ್ತಿಲ್ಲ. ಆದರೂ ಅವಳದು ಒಂದೇ ಆಸೆ ನಿರ್ದೇಶಕಿಯಾಗಬೇಕೆಂದು. ಅದರಂತೆ ಅವರ ತಂದೆ ತಾಯಿ ಇಬ್ಬರೂ ಸಹಕರಿಸಿದರು. ಮಗಳ ಮನಸ್ಸಿನ ವಿರುದ್ಧ ಹೋಗಬಾರದೆಂದು ಅವಳಲ್ಲಿರುವ  ಪ್ರತಿಭೆಗೆ ನೀರೆರೆಯಲು ಮುಂದಾದರು. ಎಲ್ಲ ಪಾಲಕರೂ ತಮ್ಮ ಮಕ್ಕಳು ಇಂಜನಿಯರರು ಇಲ್ಲವೇ ಡಾಕ್ಟರರಾಗಬೇಕು. ಇವೆರಡನ್ನು ಬಿಟ್ಟು ಬೇರೆ ಜಗತ್ತೇ ಇಲ್ಲವೆಂದು ವರ್ತಿಸುತ್ತಿರುವ ಇಂದಿನ ಜಗತ್ತಿನಲ್ಲಿ. ಪೂರ್ಣಿಮಾಳ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅರೆಘಳಿಗೆಯ ಕತ್ತಲು: ಫಕೀರ

ಕಪ್ಪು ಬೆಳಕಿನ ಆ ಕಂದಕದ ಬೆಳಕಿನಲ್ಲಿ ಸಾಗಿದ್ದ ನಮ್ಮ ಮಾತುಕತೆ ಏಲ್ಲೋ ಒಂದು ಕಡೆ ತನ್ನ ಹಾದಿಯನ್ನು ತಪ್ಪಿತ್ತು. ಅವಳನ್ನು ನಾನು ಭೇಟಿಯಾದೆ ಅನ್ನುವ ವಿಚಾರ ನನಗೆ ಆಗಲೇ ಮರೆತುಹೋಗಿತ್ತು. ಸುಂದರ ಮೊಗದ, ಆಕರ್ಷಕ ನಗುವಿನ ಆ ಹುಡುಗಿಯ ಮಾತುಗಳನ್ನು ಕೇಳುತ್ತಾ ಅವಳ ಜೊತೆ ನಾನು ಅನುಸರಿಸಿ ಒಡನಾಡುತ್ತಾ ಅವಳ ಮನಸ್ಸಿಗೆ ಹತ್ತಿರವಾಗಿದ್ದು ಮಾತ್ರ ತುಂಬಾ ಅನಿರೀಕ್ಷಿತ. ಇಷ್ಟು ವರ್ಷದವರೆಗೆ ಹುಡುಗಿಯರ ಅಂತರಂಗವನ್ನು ಹೆಚ್ಚು ಕೆದಕದ ನನಗೆ ಅದೊಂದು ಹೊಸ ಅನುಭವವಾಗಿತ್ತು. ಹೆಣ್ಣಿನ ಸುಂದರ ಮನೆಯೊಳಗೊಮ್ಮೆ ಹೋಗಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 5): ಪ್ರಸಾದ್ ಕೆ.

ಇಲ್ಲಿಯವರೆಗೆ ಇತ್ತ ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ದಂಪತಿಗಳ ವಿವಾಹಬಂಧನವೆಂಬ ಕನಸಿನ ಸೌಧ ದಿನೇದಿನೇ ಕುಸಿಯತೊಡಗುತ್ತದೆ. ತನ್ನ ವಿಲಕ್ಷಣ ದುರಭ್ಯಾಸಗಳ ಹೊರತಾಗಿ, ಪೌಲ್ ತನ್ನ ಪತ್ನಿಯ ಮೇಲೆಸಗುವ ದೈಹಿಕ ಹಿಂಸೆ ದಿನಕಳೆದಂತೆ ಭೀಕರವಾಗುತ್ತಾ ಹೋಗುತ್ತದೆ. ಪ್ರತೀಬಾರಿಯೂ ಅನಾರೋಗ್ಯವೆಂದು ದಿನಗಟ್ಟಲೆ ರಜೆ ಹಾಕಿ, ಮರಳಿ ಬಂದಾಗ ಕಾರ್ಲಾಳ ಮುಖದ ಮತ್ತು ದೇಹದ ಮೇಲೆ ಅಚ್ಚೊತ್ತಿದ್ದ ಕಲೆಗಳು ಕಾರ್ಲಾಳ ಸಹೋದ್ಯೋಗಿಗಳಿಗೆ ಬೇರೆಯದೇ ಕಥೆಯನ್ನು ಹೇಳುತ್ತವೆ. 1992 ರ ಡಿಸೆಂಬರ್ 27 ರಲ್ಲಂತೂ ಪೌಲ್ ತನ್ನ ಫ್ಲ್ಯಾಷ್ ಲೈಟ್ ಬಳಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅರಸು ಯುಗ: ಕರ್ನಾಟಕ ರಾಜಕೀಯ ಕನಸುಗಾರನ ಏಳುಬೀಳಿನ ಕಥನ: ಪ್ರದೀಪ್ ಮಾಲ್ಗುಡಿ

ಕರ್ನಾಟಕ ರಾಜಕಾರಣದಲ್ಲಿ ದೇವರಾಜ ಅರಸು ಅವರ ಹೆಸರು ಅನೇಕ ಕಾರಣಗಳಿಗೆ ಮಹತ್ವಪಡೆದುಕೊಂಡಿದೆ. ಅಂತೆಯೇ ವಿವಾದಕ್ಕೂ ಉಲ್ಲೇಖಿತವಾಗುತ್ತದೆ. ಆದರೆ, ಇತ್ತೀಚಿನವರೆಗೆ ಅವರ ಮಿತಿಗಳನ್ನು ಕುರಿತು ನಡೆದಷ್ಟು ಮಾತುಕತೆಗಳು ಅವರ ಸಾಧನೆ ಕುರಿತು ನಡೆದಿರಲಿಲ್ಲ. ಅರಸು ಅವರ ಜನ್ಮಶತಮಾನೋತ್ಸವದ ನೆಪದಲ್ಲಿ ಇತ್ತೀಚೆಗೆ ಹಿಂದುಳಿದ ವರ್ಗಗಳ ಆಯೋಗ, ಕೆಲ ಅರಸು ಪರ ಸಂಘಟನೆಗಳು ಮತ್ತು ಅಭಿಮಾನಿಗಳು ಮತ್ತು ಕರ್ನಾಟಕ ಸರ್ಕಾರ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ವಸ್ತುನಿಷ್ಟ ಸಂಗತಿಗಳು ಚರ್ಚೆಗೆ ಬಂದಿವೆ.  ಪ್ರಬಲ ಜಾತಿಗಳ ಬೆಂಬಲವಿಲ್ಲದೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಹುದ್ದೆ ಪಡೆಯುವುದು, ಸುಧಾರಣೆಗಳನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕವಿ ನಾರಾಯಣಪ್ಪ ಅವರ ‘ಎದೆಯೊಳಗಿನ ಇಬ್ಬನಿ’: ಸುರೇಶ ಎಲ್. ರಾಜಮಾನೆ, ರನ್ನಬೆಳಗಲಿ

ಕೃತಿ ; ಎದೆಯೊಳಗಿನ ಇಬ್ಬನಿ ಗಜಲ್ & ಮುಕ್ತಕಗಳ ಸಂಕಲನ ಲೇಖಕರು;-ದೊಡ್ಡಕಲ್ಲಹಳ್ಳಿ ನಾರಾಯಣಪ್ಪ. ದೊಡ್ಡಕಲ್ಲಹಳ್ಳಿ ನಾರಾಯಣಪ್ಪಾ ಅವರು ಮೊನ್ನೆ ಅರಸೀಕೆರೆಯ ಕಮ್ಮಟದಲ್ಲಿ ಬೇಟಿಯಾದ ನೆನಪಿಗಾಗಿ ತಮ್ಮ ಕಾವ್ಯಖಜಾನೆಯ ಒಂದು ವಿಸ್ಮಯಕಾರಿ ಹೊತ್ತಿಗೆಯನ್ನು ನೀಡಿದ್ದರು. ಅದನ್ನು ಸವಿಯಲು ಸಮಯ ಸಿಕ್ಕಿರಲಿಲ್ಲ… ಆದರೆ.. ಕವಿ ನಾರಾಯಣಪ್ಪ ಅವರ 'ಎದೆಯೊಳಗಿನ ಇಬ್ಬನಿ' ಇಂದು ಮುಂಜಾನೆಯ ಮಂಜು ಕರಗುವಷ್ಟರಲ್ಲಿ ಓದಿ ಮುಗಿಸಿದೆ. ನನ್ನೆದೆಗೆ ಮಂಜು ಕವಿಯಿತು. ಗಜಲ್ ಮತ್ತು ಮುಕ್ತಕಗಳನ್ನೊಳಗೊಂಡ ಈ ಹೊತ್ತಿಗೆ ಸಮಯವನ್ನೇನು ಹೆಚ್ಚು ತೆಗೆದುಕೊಳ್ಳಲಿಲ್ಲ ಆದರೆ, ಓದಿ ಅರ್ಥೈಸಿಕೊಳ್ಳಲು ಸ್ವಲ್ಪ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಗತ್ಪ್ರಸಿದ್ಧ ಪುರಿ ಜಗನ್ನಾಥ ಮಂದಿರ: ಕೃಷ್ಣವೇಣಿ ಕಿದೂರ್.

ಶಂಕರಾಚಾರ್ಯರು   ಸ್ಥಾಪಿಸಿದ   ಚಾರ್ ಧಾಮ್ ಗಳಲ್ಲಿ ಬದರಿನಾಥ  ದ್ವಾರಕಾ,  ಪುರಿ  ಮತ್ತು  ರಾಮೇಶ್ವರಂ  ಪವಿತ್ರ   ಪುಣ್ಯಕ್ಷೇತ್ರಗಳು.  ಒರಿಸ್ಸಾದ  ನೆಲದಲ್ಲಿ  ಈ ಚಾರ ಧಾಮ್ ಗಳಲ್ಲಿ  ಒಂದಾದ ಪುರಿ ಜಗನ್ನಾಥ  ದೇವಸ್ಥಾನ    ಸ್ಥಾಪಿಸಲಾಗಿದೆ.  ಅಲ್ಲದೆ   ಇಲ್ಲಿನ  ಕೊನಾರ್ಕ್  ಸೂರ್ಯ  ದೇಗುಲ   ಜಗತ್ ಪ್ರಸಿದ್ಧ.ದೇಶ ವಿದೇಶಗಳ  ಸಹಸ್ರಾರು ಭಕ್ತರು  ನಿತ್ಯ ನಿತ್ಯ  ಇಲ್ಲಿಗೆ  ತಲಪುತ್ತಾರೆ.                      ಬೆಳಗಿನ  ಹತ್ತುಘಂಟೆಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಹಿಂದೆಂದಿಗಿಂತಲೂ ಇಂದು ನಿನ್ನ ಅವಶ್ಯಕತೆ ಹೆಚ್ಚಿದೆ ಇಂದೇ ಹೊರಟು ಬಿಡುವ ಹಠ ಇನ್ನೂ ನಿನ್ನಲ್ಲೇಕಿದೆ? ಅಂದಿನ ಈ ನೋವು ಇಂದು ಶಮನಕ್ಕೆ ಕಾದಿದೆ ಬಿಟ್ಟುಹೋಗುವ ಮಾತು ಮರೆತು ಒಮ್ಮೆ ಸಂತೈಸಿ ಬಿಡು ಮುದುಡಿದ ಮೃದು ಮನಸಿಗೆ ಮುಲಾಮು ಲೇಪಿಸ ಬೇಕಿದೆ ಉರಿ ಹೆಚ್ಚಿಸುವ ಅಗಲುವಿಕೆಯ ಮಾತನ್ನು ತೊರೆದು ಬಿಡು ಕಳೆದುಕೊಳ್ಳುವ ಭೀತಿಗೆ ಮನಸು ದೃವಿಸಿ ಹೋಗಿದೆ ಎಂದೂ ಅಗಲದೆ ಉಳಿವ ನಿನ್ನ ಆಣೆಗೆ ಬದ್ಧನಾಗಿ ಬಿಡು ನನ್ನ ಬದುಕಿನ ಪುಸ್ತಕದಲ್ಲಿ ನಿನ್ನದೇ ‘ಸಿರಿ’ನಾಮವಿದೆ ಎದೆಯೊಳಗಿನ ಅಕ್ಷರವ ಅಳಿಸುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ವಾತಂತ್ರ್ಯೋತ್ಸವದ ಪಾವನ ದಿನ: ಹೊಳಲ್ಕೆರೆ ಲಕ್ಷ್ಮಿವೆಂಕಟೇಶ್

ನಮ್ಮ ದೇಶದ  ಸ್ವಾತಂತ್ರ್ಯೋತ್ಸವದ ಪಾವನ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ ! ಈ  ಹಬ್ಬದ ಆಚರಣೆ ಕೇವಲ ಸಿಹಿ-ತಿಂಡಿ ತಿನ್ನಲು, ಇಲ್ಲವೇ ಮಜಾಮಾಡುತ್ತಾ ಕಾಲಹರಣ ಮಾಡುವುದಕ್ಕಲ್ಲ ಎನ್ನುವುದನ್ನು ನಾವು ಮೊದಲು ತಿಳಿಯಬೇಕು, ಮತ್ತು ಇತರರಿಗೆ ತಿಳಿಸಬೇಕು ಸಹಿತ ! ಬಾಲಗಂಗಾಧರ ತಿಳಕ್, ಗಾಂಧಿ, ನೆಹರು, ಪಟೇಲ್, ಬೋಸ್, ಮತ್ತು ಸಾವಿರಾರು ಜನ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತಮ್ಮ ತನುಮನ ಧನಗಳನ್ನು ಒತ್ತೆಯಿಟ್ಟು  ನಮ್ಮ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಿದ್ದಾರೆ. ಆ ಎಲ್ಲಾ ಮಹನೀಯರು ಮಹಿಳೆಯರಿಗೆ ನಾವು ಶಿರಬಾಗಿ ನಮನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಸುರು ಪಾಚಿ ಮತ್ತು ಕೊಳಕು ನೀರು: ಅಖಿಲೇಶ್ ಚಿಪ್ಪಳಿ

ಸಮುದ್ರದ ನೀರು ಆವಿಯಾಗಿ ಮೋಡಗಟ್ಟಿ, ಗಾಳಿಯ ಸಹಾಯದಿಂದ ಭೂಪ್ರದೇಶದ ಮೇಲೆ ಹಾರುತ್ತಾ, ಕಾಲ-ಕಾಲಕ್ಕೆ ಮಳೆ ಸುರಿಸುತ್ತಾ, ಜೀವಜಲವಾಗಿ ಸಕಲವನ್ನು ಪೊರೆಯುತ್ತಾ ಸಾಗುತ್ತದೆ. ಮತ್ತದೇ ನೀರು ಹಳ್ಳ-ಕೊಳ್ಳಗಳ, ನದಿ-ತೊರೆಗಳ ಮೂಲಕ ಹರಿಯುತ್ತಾ ತನ್ನೊಂದಿಗೆ ನೆಲದ ಸಾವಯವ ತ್ಯಾಜ್ಯಗಳನ್ನು ಸೇರಿಸಿಕೊಂಡು ಸಮುದ್ರದ ಜೀವಿಗಳಿಗೆ ಆಹಾರವನ್ನು ಒಯ್ಯುತ್ತದೆ. ಉಪ್ಪುನೀರಿನ ಜೀವಿಗಳಿಗೂ ನೆಲದ ಸಾವಯವ ಸುರಿಗಳೇ ಆಹಾರವಾಗುತ್ತವೆ. ಈ ಜಲಚಕ್ರ ಏರುಪೇರಾದರೆ, ಎಲ್ಲೋ ಯಾವುದೋ ಜೀವಿ ಸಂಕಷ್ಟಕ್ಕೆ ಸಿಲುಕುತ್ತದೆ. ನಮ್ಮಲ್ಲಂತೂ ಮೋಡಗಳನ್ನು ಸೆಳೆಯುವ ಕಾಡುಗಳೇ ಮಾಯವಾಗುತ್ತಿವೆ. ದಕ್ಷಿಣದ ಚಿರಾಪುಂಜಿಯೆಂಬ ಖ್ಯಾತಿ ಹೊಂದಿದ ಆಗುಂಬೆಯಲ್ಲೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೋಡೆಗಳ ದಾಟುತ್ತ…: ಉಮೇಶ್ ದೇಸಾಯಿ

               ಅಂದು ಬೆಳಿಗ್ಗೆಯೇ ದತ್ತಣ್ಣಿ ತನ್ನ ಗೆಳೆಯ ದಸ್ತಗೀರನಿಗೆ ಫೋನು ಮಾಡಲು ಎರಡು ಕಾರಣಗಳಿದ್ದವು. ಅಂದು ದಸ್ತಗೀರನ ಹುಟ್ಟಿದಹಬ್ಬ ಅಂತೆಯೇ ನಿನ್ನೆ ಎಲ್ಲ ಟಿವಿ ಚಾನಲಗಳಲ್ಲಿ ಬಂದ ದಸ್ತಗೀರನ ಸಂದರ್ಶನ. ಗೆಳೆಯನ ಉತ್ತರಕ್ಕೂ ಕಾಯದೇ ಭೆಟ್ಟಿಯಾಗಲು ಬರುವುದಾಗಿ ಹೇಳಿ ಫೋನು ಇಟ್ಟ. ಕೇವಲ ಅಸೀೀಪನ ತಂದೆ ಆಗಿದ್ದಕ್ಕಾಗಿ ಅವ ಕೇಳಬಾರದ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿತ್ತು,ಮಾತ್ರವಲ್ಲ ಮಗ ಹೀಗೆ ಮಾಡಿದ ಅದಕ್ಕೆ ನನಗೇಕೆ ಈ ಶಿಕ್ಷೆ ಎಂಬ ಅವನ ಅಳಲು ಮೂಕರೋದನವಾಗಿತ್ತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 4): ಪ್ರಸಾದ್ ಕೆ.

ಇಲ್ಲಿಯವರೆಗೆ 1991 ರ ಜೂನ್ 29 ರಂದು ಅತ್ತ ಲೇಕ್ ಗಿಬ್ಸನ್ ಕೊಳದಲ್ಲಿ ಭಾರವಾದ ಕಾಂಕ್ರೀಟಿನ ಡಬ್ಬಗಳನ್ನು ಹೊರತಂದು ಸುಳಿವಿಗಾಗಿ ತಡಕಾಡುತ್ತಿದ್ದರೆ, ಇತ್ತ ನಯಾಗರಾದ ಆಸುಪಾಸಿನ ಪ್ರಖ್ಯಾತ ಚರ್ಚ್ ಒಂದರಲ್ಲಿ ಅದ್ದೂರಿ ವಿವಾಹದ ಸಮಾರಂಭವೊಂದು ನಡೆಯುತ್ತಿರುತ್ತದೆ. ಕಾರ್ಲಾ ಹೊಮೋಲ್ಕಾ ಮತ್ತು ಪೌಲ್ ಬರ್ನಾರ್ಡೊ ಕೊನೆಗೂ ತಮ್ಮ ಸ್ನೇಹಿತರು, ಹೆತ್ತವರು ಮತ್ತು ಬಂಧುಬಳಗದ ಉಪಸ್ಥಿತಿಯಲ್ಲಿ ಆ ದಿನ ಅದ್ದೂರಿಯಾಗಿ ಆಯೋಜಿಸಲ್ಪಟ್ಟ ಸಮಾರಂಭದಲ್ಲಿ ದಂಪತಿಗಳಾಗುತ್ತಾರೆ. ಬರೋಬ್ಬರಿ ಎರಡು ಸಾವಿರ ಡಾಲರುಗಳನ್ನು ತೆತ್ತು ಖರೀದಿಸಿದ ಮದುವಣಗಿತ್ತಿಯ ದಿರಿಸು, ಬಿಳಿಕುದುರೆಗಳನ್ನೊಳಗೊಂಡ ಸಾರೋಟು, ಮಿತಿಯಿಲ್ಲದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಕೃತಿ ಧರ್ಮ: ವೈ.ಬಿ.ಕಡಕೋಳ

  ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ ಸುಳಿದು ಬೀಸುವ ಗಾಳಿ ನಿಮ್ಮಯ ದಾನ ನಿಮ್ಮ ದಾನವನುಂಡು ಅನ್ಯರ ಪೊಗಳುವ ಕುಣ್ಣಿಗಳನೆನೆಂಬೆ ರಾಮನಾಥ ಐದು ನೂರು ಕೋಟಿ ವರ್ಷಗಳ ಹಿಂದೆ ಭೂಮಿಯ ಉದಯವಾಯಿತು ಎಂದು ವಿಜ್ಞಾನಿಗಳು ಹೇಳುತ್ತಾರೆ.30 ಲಕ್ಷ ವರ್ಷದ ಹಿಂದೆ ಮಾನವ ವಿಕಾಸ ಈ ಭೂಮಿಯ ಮೇಲಾಯಿತು ಎನ್ನುವರು. 300 ವರ್ಷಗಳಿಂದೀಚೆಗೆ ಅಭಿವೃದ್ದಿಯ ಹೆಸರಿನಲ್ಲಿ ಪರಿಸರ ನಾಶ ನಮ್ಮ ಸುತ್ತ ಮುತ್ತ ನಡೆಯುತ್ತಿದೆ. ಜೂನ್ 5 ವಿಶ್ವ ಪರಿಸರ ದಿನ.ನಮ್ಮ ಸುತ್ತ ಮುತ್ತಲಿನ ಪರಿಸರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೀವನದ ಸಂತೆಯಲಿ ಮಂದವಾಗಿದೆ ಬೀದಿದೀಪ: ಸಿಂಧು ಭಾರ್ಗವ್.

ಪ್ರತಿ ಸಂಜೆಯಾಯಿತೆಂದರೆ ಹಬ್ಬದ ವಾತಾವರಣವಿರುವ ಮಲ್ಲೇಶ್ವರಂ ಎಂಟನೇ ತಿರುವಿನಲ್ಲಿ ಸುತ್ತಾಡುವುದೇ ಕಣ್ಣಿಗೆ ಹಬ್ಬ… ಹದಿನೈದನೇ ತಿರುವಿನವರೆಗೂ ಸಣ್ಣಸಣ್ಣ  ವ್ಯಾಪಾರದಂಗಡಿಗಳು ರಸ್ತೆ ಬದಿಯಲ್ಲಿ ತುಂಬಾ ಕಾಣಸಿಗುತ್ತವೆ. ಹೂವಿನ ರಾಶಿ, ಹಣ್ಣು-ಹಂಪಲು, ಆಟಿಕೆಗಳು, ಬಟ್ಟೆ ವ್ಯಾಪಾರಿಗಳು, ಚಪ್ಪಲ್ ಅಂಗಡಿ, ಬ್ಯಾಂಗಲ್ಸ್ ,ಬ್ಯಾಗ್ ಗಳು, ತಿನ್ನಲು ಸ್ವೀಟ್ ಕಾರ್ನ್,ಕತ್ತರಿಸಿ ಅಲಂಕರಿಸಿಟ್ಟ ಮಾವು , ಚರುಮುರಿ, ಸಮೋಸ, ಕಚೋರಿ, ಕುಡಿಯಲು ಕಾಫಿ, ಟೀ, ಜ್ಯೂಸ್ ಏನಿದೆ ?ಏನಿಲ್ಲ ? ಕೇಳುವುದೇ ಬೇಡ. ಅಪರೂಪಕ್ಕಾದರೂ ಬೇಟಿ ನೀಡುವುದೆಂದರೆ ನಮಗೂ ಖುಷಿ. ತುಂಬಿದ ಜೇಬಿನೊಂದಿಗೆ ಹೋದರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಲೇಜ್ ಎಂಬ ಬಣ್ಣಬಣ್ಣದ ದೃಶ್ಯಕಾವ್ಯ: ಗಾಯತ್ರಿ ಬಡಿಗೇರ

ಮುಂಗಾರು ಮಳೆ ಶುರುವಾಗುವ ಅಮೃತ ಕ್ಷಣ. ಎಂತವರನ್ನೂ ಕನಸಿನ ಲೋಕಕ್ಕೆ ಕೊಂಡ್ಯೊಯುವ ಒಂದು ಅದ್ಭುತ ಘಳಿಗೆ. ಪರಸ್ಪರ ಅಪ್ಪಿಕೊಳ್ಳುವ ತಂಗಾಳಿಯ ತಂಪಿನೊಂದಿಗೆ, ಚಿಗುರುವ  ಕನಸಿನೊಂದಿಗೆ ವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಇತರರು ಸುಮಾರು ವೇಷ-ಭೂಷಣದೊಂದಿಗೆ ಅಂಗಳವನ್ನು ಅಲಂಕರಿಸುವರು. ಮೊದ-ಮೊದಲು ಮೌನದಲ್ಲಿ, ಕಣ್ಣಿನ ಸಲಿಗೆಯಲ್ಲಿ ಪರಿಚಯವಾಗವ ಅನಾಮಿಕರು.  ರಿಪ್ರಸೇಂಟ್ ಮಾಡಲು ಹೊರಟ ಮಾಕ್ರ್ಸಕಾರ್ಡ್ ಹೊತ್ತ ಪ್ಲ್ಯಾಸ್ಟಿಕ ಕವರ್‍ಗಳ ಕಾರಬಾರು, ಮಾರುಕಟ್ಟೆಯಲ್ಲಿ ಸೇಲ್ ಆಗದೆ ಉಳಿದ ಮಾರ್ಡನ್ ಟಾಪ್‍ಗಳು, ರಂಬೆ, ಊರ್ವಶಿ,  ಮೇನಕೆಯರ ನಾಟ್ಯದ ಜಲಕನ್ನು ಉಂಟು ಮಾಡುವ ವರ್ತನೆಗಳು, ದೇಹದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದತ್ತಿನಿಧಿ ಸದ್ಭಳಕೆಯಾಗಲಿ ಲೂಸಿ ಸಾಲ್ಡಾನ: ಲಕ್ಕಮ್ಮನವರ್

ಧಾರವಾಡ ಅಗಸ್ಟ:19: ಧಾರವಾಡದ ನಿವೃತ್ತ ಶಿಕ್ಷಕಿ ಲೂಸಿ.ಸಾಲ್ಡಾನ ಅವರು ತಮ್ಮ 55ನೇ ದತ್ತಿನಿಧಿಯನ್ನು ಜೀರಿಗವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದರು. ದತ್ತಿ ನಿಧಿಯನ್ನು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯವರು ಮತ್ತು ಶಾಲಾ ಮುಖ್ಯ ಶಿಕ್ಷಕರುಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದ ನಾನು ಅನಿರಿಕ್ಷಿತವಾಗಿ ತಂದೆ ತಾಯಿಯನ್ನು ಕಳೆದುಕೊಂಡು ಬಡತನವನ್ನು ಕಣ್ಣಾರೆ ಕಂಡು, ಎಲ್ಲೋ ಎದ್ದು ಬಿದ್ದು ಅಕ್ಷರ ಕಲಿತು ಶಿಕ್ಷಕಿಯಾಗಿ ಇಂದ ನಾನು ನಿವೃತ್ತನಾಗಿದ್ದೇನೆ. ಹಳ್ಳಿಗಾಡಿನಲ್ಲಿ ಮಕ್ಕಳನ್ನು ಪಾಲಕರು ಬಡತನದ ಕಾರಣಕ್ಕಾಗಿ ಶಾಲೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ