ಕೊರೋನ ಕವಿತೆಗಳು

ಮನೆಯಲ್ಲೇ ಇರಿ ಬಂಧಿಯಾಗಿಬಿಡಿ.. ಚಂದದಿ, ಇಪ್ಪತ್ತೊಂದು ದಿನ ವ್ರತದಂದದಿ.. ಮನೆಯೊಳಗೆ ಮನಸೊಳಗೆ…. ನಿಮಗಾಗಿ, ನಮಗಾಗಿ, ಭಾರತಕ್ಕಾಗಿ ಮನೆಯಲ್ಲೇ ಇರಿ, ಮುದದಿ… ಇದ್ದು ಮಹಾನ್ ಆಗಿರಿ.. ಭಾರತೀಯರೇ ಅಂದು ಗಾಂಧಿ ಕರೆಗೆ ಬ್ರಿಟಿಷರ ಅಟ್ಟಲು ಮನೆ ಬಿಟ್ಟಿರಿ… ಇಂದು ಮಾರಿ ಕರೊನಾ ಅಟ್ಟಲು ದಯಮಾಡಿ ಮನೆಯಲ್ಲೇ ಇರಿ… ಇದ್ದು ಬಿಡಿ ಮನೆಯಲ್ಲೇ ವಿನಂತಿಸುವೆ… ವಿಷಕ್ರಿಮಿಯ ಮೆಟ್ಟಲು. ತುಸುದಿನ ನಿಮ್ಮ ಮನೆಗಳಲ್ಲಿ ನೀವೇ ರಾಜರಾಗಿರಿ, ಆಳಿರಿ, ಆಡಿರಿ, ಓದಿರಿ‌.. ತೊಳೆಯಿರಿ, ತೆರೆಯಿರಿ ಮನವ ಹೊಸ ಆಲೋಚನೆಗೆ…. ಆವಿಷ್ಕಾರಕೆ, ಸಾತ್ವಿಕ ಸಂಯಮಕೆ… … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಂಗಳ: ಗಿರಿಜಾ ಜ್ಞಾನಸುಂದರ್

ಮಧ್ಯರಾತ್ರಿಯ ಹೊತ್ತು, ಹೊರಗೆ ನಾಯಿಗಳ ಕೆಟ್ಟ ಕೂಗು. ಕೇಳಲು ಹಿಂಸೆ ಅನಿಸುತ್ತಿದೆ. ನರಳುತ್ತಿರುವ ಗಂಡ. ದಿನವೂ ಕುಡಿದು ಬಂದು ಹಿಂಸೆ ಮಾಡುತ್ತಿದ್ದ ಮನುಷ್ಯ. ಅವನನ್ನು ಉಳಿಸಿಕೊಳ್ಳುವುದು ಅಸಾಧ್ಯ ಅನ್ನಿಸುತ್ತಿದೆ. ಅವನು ಕುಡಿದುಬಂದಿರುವುದರಲ್ಲಿ ಏನಾದರು ಬೆರೆತಿತ್ತೋ ಏನೋ ತಿಳಿದಿಲ್ಲ. ಅಥವಾ ಡಾಕ್ಟರ್ ಹೇಳಿದಂತೆ ಅವನು ಕುಡಿತ ನಿಲ್ಲಿಸದ ಕಾರಣದಿಂದ ಅವನ ಅಂಗಾಂಗಗಳು ತೊಂದರೆ ಆಗಿವೆಯೇನೋ. ಏನು ಮಾಡಲೂ ತೋಚುತ್ತಿಲ್ಲ ಅವಳಿಗೆ. ಹೆಸರಲ್ಲಷ್ಟೇ ಮಂಗಳ ಎಂದು ಉಳಿದಿತ್ತು. ಬೇರೆಲ್ಲವೂ ಅವಳಿಗೆ ಜೀವನದಲ್ಲಿ ಅಮಂಗಳವೇ. ಅವಳ ಜೀವನ ಹೀಗೆಯೇ 22 ವರ್ಷದಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಡಲ ಕಿಚ್ಚಿನ ಹಿಲಾಲು ಹಿಡಿದ ಕವಿತೆಗಳು: ಅಶ್ಫಾಕ್ ಪೀರಜಾದೆ

ನಾಗೇಶ ಜೆ ನಾಯಕ ಒಬ್ಬ ಹೆಸರಾಂತ, ಕ್ರೀಯಾಶೀಲ, ಸೂಕ್ಷ್ಮಗ್ರಾಹಿ ಸಾಹಿತಿಯಾಗಿ ಕನ್ನಡ ಸಾರಸ್ವತ ಲೋಕವನ್ನು ತಮ್ಮ ಅನನ್ಯ ಅನುಭವಗಳನ್ನು ಅಕ್ಷರಗಳಲ್ಲಿ ಕಟ್ಟಿಕೊಡುವ ಮೂಲಕ ಶ್ರೀಮಂತಗೊಳಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವಂಥವರು. ಆಡು ಮುಟ್ಟದ ಗಿಡವಿಲ್ಲ ಎಂಬ ಮಾತಿನಂತೆ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಿ ಸೈ ಎನಿಸಿಕೊಂಡವರು. ಅವರು ಬರೆದ ಅಂಕಣ ಬರಹ, ವ್ಯಕ್ತಿ ಚಿತ್ರಣ, ಲೇಖನ, ಕತೆ, ಕವಿತೆ, ವಿಮರ್ಶೆಗಳು ನಾಡಿನ ಪ್ರಕಟಗೊಂಡಿದಷ್ಟೆಯಲ್ಲದೆ ಅವರು ರಚಿಸಿ ಪ್ರಕಟಿಸಿರುವ ಗ್ರಂಥಗಳು ಪ್ರಸಿದ್ದಿ ಪ್ರಶಸ್ತಿಗಳನ್ನು ತಂದು ಕೊಟ್ಟಿವೆ. ಹೀಗಾಗಿ ಅವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಯೆ ದೇವರು: ನಂದಾದೀಪ

ಗೆಳೆಯಾ.. ಭೂಮಿಯಲ್ಲಿ ದೇವರು ಎಲ್ಲಾ ಕಡೆ ಇರೋಕಾಗಲ್ಲಾ ಅಂತ ಪ್ರೀತಿನ ಸೃಷ್ಠಿ ಮಾಡಿದನಂತೆ.. ಯಾಕೆಂದರೆ ನಿಜವಾದ ದೇವರು ನಮ್ಮ ಮುಂದೆ ಪ್ಯತ್ಯಕ್ಷ ಆದ್ರೆ ಅದನ್ನ ತಡೆದುಕೊಳ್ಳೋ ಶಕ್ತಿ ನಮಗಿರೋದಿಲ್ಲ ಅಂತ.. ಈ ಪ್ರೀತಿನ ದೇವರಿಗೆ ಯಾಕೆ ಹೋಲಿಸ್ತಾ ಇದೀನಿ ಅಂದ್ರೆ ನಿಜವಾದ ಪ್ರೀತಿನ ಪಡೆದುಕೊಳ್ಳೋಕು, ಅದರ ತೀವ್ರತೆಯನ್ನು ತಡೆದುಕೊಳ್ಳೋಕು, ಅದನ್ನ ಮತ್ತೆ ಮರಳಿ ನಿಡೋದಕ್ಕೂಅಂತಹದ್ದೊಂದು ಗಟ್ಠಿಯಾದ ಮನಸು ಇರಬೇಕಂತೆ..! ಇಲ್ಲವಾದಲ್ಲಿ ಆ ಪ್ರೀತಿಯೆಂಬ ದೇವರನ್ನ ಉಳಿಸಿಕೊಳ್ಳೋಕ್ಕೆ ಆಗೋದಿಲ್ಲ ನೋಡು..! ಅಂಹದೊಂದು ಮನ ನಿನ್ನಲ್ಲಿ ನಾ ಕಾಣಲೂ ಇಲ್ಲ..! … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶೇಕ್ಸಪಿಯರ್‍ನ ಮ್ಯಾಕ್ ಬೆತ್ -ಮಹತ್ವಾಕಾಂಕ್ಷೆಯ ದುರಂತ: ನಾಗರೇಖ ಗಾಂವಕರ

ಸ್ಕಾಟ್‍ಲ್ಯಾಂಡಿನ ರಾಜ ಡಂಕನ್. ಆತನಿಗೆ ಇಬ್ಬರು ಪುತ್ರರು. (Malcolm and Donalbain)ಮಾಲ್‍ಕಮ್ ಮತ್ತು ಡೊನಾಲಬೇನ್. ವಯಸ್ಸಾದ ಡಂಕನ್ ರಾಜ್ಯಭಾರವನ್ನು ನಿಭಾಯಿಸಲಾಗದ ಸ್ಥಿತಿಯಲ್ಲಿ, ತನ್ನ ಉತ್ತರಾಧಿಕಾರಿಗಳನ್ನು ಪಟ್ಟಕ್ಕೆ ತರುವ ಸಮಯದಲ್ಲೇ ಆತನ ಥೇನ್ಸ್ ಆಫ್ ಕೌಡರ್ ಎಂಬ ಪ್ರಾಂತಾಧಿಕಾರಿ ನಾರ್ವೆಯ ರಾಜನ ಜೊತೆಗೂಡಿ ಸ್ಕಾಟ್‍ಲ್ಯಾಂಡಿನ ಮೇಲೆ ಆಕ್ರಮಣ ಮಾಡುತ್ತಾನೆ. [ಥೇನ್ಸ್ ಎಂದರೆ ಗವರ್ನರ ಎಂದರ್ಥ] ಆ ಸಮಯದಲ್ಲಿ ಡಂಕನ್ ತನ್ನ ಸಹೋದರ ಸಂಬಂಧಿಗಳಾದ ಮ್ಯಾಕಬೆತ್ ಮತ್ತು (Banquo) ಬ್ಯಾಂಕೊ ಸಹಾಯದಿಂದ ಆ ಸೈನ್ಯವನ್ನು ಸದೆಬಡಿದು ಕೌಡರನ್ನು ವಶಪಡಿಸಿಕೊಳ್ಳುತ್ತಾರೆ. ವಿಜಯಿಶಾಲಿಗಳಾದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಡುಗೆ ಮನೆ ಅವಾಂತರಗಳು: ಶ್ರೇಯ ಕೆ. ಎಂ.

ಅಡುಗೆ ಮನೆ ಎಂದರೆ ಹೆಣ್ಣುಮಕ್ಕಳ ಆವಾಸ ಸ್ಥಾನ ಅಂತಾನೆ ಹಿಂದಿನಿಂದಲೂ ಬಂದಂತಹ ನುಡಿ, ಎಷ್ಟೇ ಉದ್ಯೋಗಸ್ಥ ಮಹಿಳೆಯಾದರೂ ಅಡುಗೆ ಮನೆ ಅನ್ನುವುದು ಅವಳ ಇನ್ನೊಬ್ಬ ಸ್ನೇಹಿತೆ. ಮಹಿಳೆ ಎಷ್ಟೇ ಉನ್ನತ ಹಂತದಲ್ಲಿ ಇದ್ದರೂ ಆಕಾಶದೆತ್ತರಕ್ಕೆ ಹಾರಾಡುತ್ತಿದ್ದರೂ ಅಡುಗೆ ಮನೆ ಎಂಬ ಮಾಯೆಗೆ ಅವಳು ಬರಲೇ ಬೇಕು, ಇಂತಹ ಅಡುಗೆ ಮನೆಯಲ್ಲಿ ನಡೆಯುವ ಅವಾಂತರಗಳ ಬಗ್ಗೆ ನೋಡೋಣ ಬನ್ನಿ. ನಾನು ಈ ಹೆಸರಿನ ಬದಲಾಗಿ ಅಡುಗೆ ಮನೆಯ ಕಲರವ ಅಂತ ಹೇಳುತ್ತೇನೆ … ಯಾಕೆಂದರೆ ನಮ್ಮ ಅಡುಗೆ ಮನೆಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಥಮ್‌ ಬುಕ್ಸ್‌ ನ ಸ್ಟೋರಿವೀವರ್‌ ಸ್ಪರ್ಧೆ

ಪ್ರಥಮ್‌ ಬುಕ್ಸ್‌ ನ ಸ್ಟೋರಿವೀವರ್‌ ಈ ಸಲದ Retell, Remix, Rejoice ನಲ್ಲಿ ಆಸಕ್ತ ಮಕ್ಕಳ ಅನುವಾದಕರಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಸ್ಪರ್ಧೆಗೆ ನೋಂದಾಯಿಸಲು ಇಲ್ಲಿ ಕ್ಲಿಕ್ಕಿಸಿ. ವಿಜೇತರ ಅನುವಾದವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ನೀಡಲಾಗುವುದು. ಅಲ್ಲದೇ, ಸ್ಟೋರಿವೀವರ್‌ ಡಿಜಿಟಲ್‌ ತಾಣದಲ್ಲಿ ನಿಮ್ಮ ಕತೆ ಪ್ರಕಟಗೊಂಡು, ನೂರಾರು ಮಕ್ಕಳ ಮುಕ್ತ ಓದಿಗೆ ಸಿಗಲಿದೆ. ಹಾಗಾದರೆ, ಪಾಲ್ಗೊಳ್ಳಲು ಏನು ಮಾಡಬೇಕು? ನಿಯಮಗಳೇನು ಎಂದು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ  ಕನ್ನಡದ ಬರಹಗಳನ್ನು ಹಂಚಿ ಹರಡಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಯಲ್ಲಿ ನಾ ಎಡವಿದೆ ಆದರೇ….. ನೀ…!: ಪಿ ಎಸ್ ಜೀವನ್ ಕುಮಾರ್ ಕಲ್ಲೇಗ

ಪ್ರೀತಿ ಎಂಬುವುದು ಯಾರ ಅನುಮತಿ ಕೇಳಿ ಹುಟ್ಟುವುದಿಲ್ಲ. ಪ್ರೇಮದ ಬಲೆಯಲ್ಲಿ ಸಿಲುಕಿ ಅದರಿಂದ ಹೊರಬರುವ ತಾಳ್ಮೆ ಒಂದಿದ್ದರೆ ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾದರೆ ಅದು ಕಷ್ಟ ಎಂದು ಅನಿಸುವುದಿಲ್ಲ. ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವಳು ನನ್ನ ಹತ್ತಿರ ಬಂದು ಬ್ರೇಕ್ ಅಪ್ ಎಂದು ಹೇಳಿದಾಗ ಏನೂ ಅರ್ಥವಾಗುವುದಿಲ್ಲ. ಬದಲಿಗೆ ವಿಪರೀತವಾದ ಕೋಪ, ತಡೆಯಲಾರದಷ್ಟು ದುಃಖ, ಸಹಿಸಲಾರದಷ್ಟು ನೋವು ಶುರುವಾಗುತ್ತದೆ. ಆ ಕ್ಷಣ ಎಲ್ಲಿಗೆ ಹೋಗಬೇಕು, ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ. ಆ ಕ್ಷಣ ಪ್ರಪಂಚದಲ್ಲಿ ಎಷ್ಟೋಜನ ಇದ್ದರೂ ಯಾರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನೆನಪಿನ ಗೂಡಿನಿಂದ: ದೀಪು

ಅವತ್ತು ಸ್ಕೂಲ್ ನಿಂದ ಬರತಿದ್ದಹಾಗೆ ಬ್ಯಾಗ್, ಶೂ, ಎಲ್ಲ ಎಸೆದು ಇನ್ನೇನು ಆಟ ಆಡೋಕೆ ಹೋಗ್ಬೇಕು, ಅಷ್ಟರೊಳಗೆ ಒಣ ಹುಲ್ಲು-ಕಡ್ಡಿ ಮನೆ ಮುಂದಿನ ಅಂಗಳದ ಹತ್ತಿರ ಬಿದ್ದಿದ್ದು ಗಮನಿಸಿದೆ… ಅಮ್ಮನ ಸಾಯಂಕಾಲದ ಕಸ ಗುಡಿಸಿ ನೀರು ಹಾಕಿ, ದೇವರ ಮುಂದೆ ದೀಪ ಹಚ್ಚುವ ಕಾರ್ಯಕ್ರಮ ಶುರುವಾಗಿತ್ತು ಹಾಗೆ ಆ ಹುಲ್ಲು-ಕಡ್ಡಿ ಕೂಡ ಕಸ ಸೇರಿತ್ತು. ನಾನು ಆಟ ಮುಗಿಸಿ ಮನೆಗೆ ಬಂದಾಗ ಮತ್ತಷ್ಟು ಹುಲ್ಲು-ಕಡ್ಡಿ ಜೊತೆಗೆ ಪಕ್ಷಿಯ ಒಂದೆರಡು ಪುಕ್ಕಗಳು ಕೂಡ! ನಾಜೂಕಾದ ಪುಕ್ಕಗಳನ್ನ ಹಾಗೆ ಎತ್ತಿಕೊಂಡು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 11 & 12): ಎಂ. ಜವರಾಜ್

೧೧- ಅಲಲಲಲೇ ಇದೇನ ಇದು ಗರಿಗರಿ ಪಿಲ್ಲ ಪಂಚ ಜಾರ್ತ ನನ್ನ ಮೈನ ಸೋಕ್ತ ಮಣಮಣನೆ ಮಾತಾಡ್ತ ಬೀದಿ ಧೂಳ ತಾರುಸ್ತ ಏಳುಸ್ತಲ್ಲೊ.. ‘ನೀ ಯಾವೂರ್ ಸೀಮೆನಪ್ಪ ನೀ ಯಾಕ ಈ ಅಯ್ನೋರ್ ಕಾಲ್ಗಾದೆ ನಾ ಈ ಅಯ್ನೋರ ಸೊಂಟ ಸೇರಿ ನೋಡಬಾರದ ನೋಡ್ದಿ ಕೇಳಬಾರದ ಕೇಳ್ದಿ ಶಿವಶಿವ ಆ ನೀಲವ್ವೋರ ನೋಡ್ದೆಯಲ್ಲೊ ನಾ ನೋಡ್ದೆ ಇರ ಜಿನ್ವೆ ಇಲ್ಲ ನಾ ಕೇಳ್ದೆ ಇರ ಜಿನ್ವೆ ಇಲ್ಲ’ ಅಂತಂತ ಮಾತಾಡ್ತಲ್ಲೊ… ನಾ ಕೇಳ್ತ ನೀಲವ್ವೋರು ಕಣ್ಮುಂದ ಬರ್ತಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಿಂಚುತಾರೆಗಳ ಬೆಳದಿಂಗಳು: ಹೆಚ್. ಷೌಕತ್ ಆಲಿ

ಯುವ ಕವಿ ಗುರು ಹಿರೇಮಠರ ಬೆಳಂದಿಗಳು ಚುಟುಕು ಕವಿತೆಗಳ ಸುಂದರ ವಿಚಾರ ಲಹರಿ. ಕವಿಯ ಅಂತರಂಗದಲ್ಲಿ ಹೊಕ್ಕಿನೋಡಿದಾಗ ಒಬ್ಬ ಸತ್ಯ ಅನ್ವೇಷಕ, ಮಮತೆ ವಾತ್ಸಲ್ಯಮಯಿಯಾಗಿ, ಪ್ರೀತಿಯ ಚಿಲುಮೆಯ ನಲ್ಮೆಯ ಪ್ರೇಮಿಯಾಗಿ, ಪ್ರಕೃತಿಪುರುಷನಾಗಿ ಸಂತನಾಗಿ ಕಾವ್ಯಕುಸುರಿಯಲ್ಲಿ ಸಂಶೋಧನೆ ನಡೆಸಿದಂತೆ ನನಗೆ ಅರಿವಿಲ್ಲದೇ ನನಗೆ ಇಷ್ಟವಾದರು ಗುರು. ತನ್ನಷ್ಟಕ್ಕೆ ತೆರೆದುಕೊಳ್ಳುವ ಈ ಕೃತಿಯ ಒಂದೊಂದು ಕವಿತೆಯು ಹೊನ್ನಹೂವುಗಳಾಗಿ ಓದುಗರು ಯಾರೆ ಆಗಿರಲಿ ಮನಸ್ಸಿಗೆ ಮುದ ನೀಡುತ್ತ ಕಾವ್ಯದ ಪಾವಿತ್ರ್ಯತೆಯನ್ನು ಪರಿಚಯಿಸುವ ಪ್ರಯತ್ನ ಫಲಕಾರಿ ಎಂದೆನಿಸಿತು. ಈ ಕೃತಿಯ ಬಗ್ಗೆ ನಾಲ್ಕು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಏಪ್ರಿಲ್ ಫೂಲ್ ಅಲ್ಲ ಏಪ್ರಿಲ್ ಕೂಲ್: ಎಂ.ಎಚ್.ಮೊಕಾಶಿ

ಏಪ್ರಿಲ್ ಒಂದು ಮೂರ್ಖರ ದಿನ ಈ ಮೂರ್ಖತನದ ಲೆಕ್ಕ ಒಂದು ದಿನಕ್ಕೆ ಮುಗಿದು ಹೋಗುವ ಹಾಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತು. ಆದರೆ ಹಾಗಿಲ್ಲ ಅದು ನಿತ್ಯೋತ್ಸವ. ಅದನ್ನು ನಿದರ್ಶಿಸಲು ಮತ್ತು ನಮ್ಮನ್ನು ಆತ್ಮವಿಮರ್ಶೆಗೆ ಒಡ್ಡಿಕೊಳ್ಳಲು ಮೂರ್ಖರ ದಿನದಂದು ಆರಂಭವಾಗುವ ಈ ತಿಂಗಳು ಸಕಾಲ ಎನ್ನಬಹುದು. ಇಡೀ ತಿಂಗಳು ನಾವು ಮೂರ್ಖರಾಗುವ ನಾನಾ ರೀತಿಗಳ ಬಗ್ಗೆ ಅರ್ಥಮಾಡಿಕೊಳ್ಳುವ ಸಮಯ. ಏಪ್ರಿಲ್ ಒಂದರಂದು ಕೆಲವರ ಕಾಲೆಳೆದು ಮೂರ್ಖರನ್ನಾಗಿ ಮಾಡಲು, ಕಾಲೆಳೆಸಿಕೊಂಡು ಮೂರ್ಖರಾದ ದಿನ. ನೀವೂ ಕೂಡ ಎಷ್ಟೋ ದಿನದಿಂದ ಯಾರನ್ನೋ ಬಕ್ರಾ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗುಲ್ಬರ್ಗ ವೈಷ್ಣೋದೇವಿ ಮಂದಿರ: ವೈ. ಬಿ. ಕಡಕೋಳ

ಗುಲ್ಬರ್ಗ ಕರ್ನಾಟಕದ ಹೈದ್ರಾಬಾದ್ ಕರ್ನಾಟಕ ಎಂದು ಕರೆಸಿಕೊಂಡ ಜಿಲ್ಲೆಗಳನ್ನೊಳಗೊಂಡ ಜಿಲ್ಲಾ ಪ್ರದೇಶ. ಇದು ಬೆಂಗಳೂರಿನಿಂದ 613 ಕಿ. ಮೀ ಅಂತರದಲ್ಲಿದ್ದು ಶರಣಬಸವೇಶ್ವರ ಅಪ್ಪ ಅವರಿಂದ ಪ್ರಸಿದ್ದಿ ಪಡೆದದ್ದು. ಬೀದರ ಶ್ರೀರಂಗಪಟ್ಟಣ ಹೆದ್ದಾರಿಯ ಫಲವಾಗಿ ಸಾಕಷ್ಟು ವಾಹನ ಸೌಕರ್ಯದ ಜೊತೆಗೆ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸಾಗುವ ರೈಲುಗಳು ಗುಲ್ಬರ್ಗ ಮೂಲಕ ಹಾಯ್ದು ಹೋಗುವ ಮೂಲಕ ಇದು ಸಾರಿಗೆ ಸೌಕರ್ಯಕ್ಕೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಇಸ್ಲಾಮಿಕ್ ಶೈಲಿಯ ಗುಂಬಜ್ಗಳು. ಬುದ್ದ ವಿಹಾರ ಮಂದಿರ. ಶರಣ ಬಸವೇಶ್ವರ ಅಪ್ಪ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರಜೆಗಳ ಕೈಯಲ್ಲಿ ಕೊರೋನ ನಿಯಂತ್ರಣ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

ಈ ಮೇಲಿನ ಬಸವಣ್ಣನವರ ಮಾತ ನೆನಪಿಸುವಂತೆ ಮಾಡಿದೆ ಇಟಲಿಯ ಇಂದಿನ ಪರಿಸ್ಥಿತಿ. ಕರೋನ ರೋಗಕ್ಕೆ ಚಿಕಿತ್ಸೆ ಕೊಡಲು ಆಗದಂತೆ ಇಟಲಿಯಲ್ಲಿ ರೋಗ ಹರಡಿದೆ. ದಿನ ದಿನಕ್ಕೂ ಹೆಚ್ಚು ಹರಡುತ್ತಾ ಹೆಚ್ಚು ಬಲಿಗಳ ಪಡೆಯುತ್ತಿದೆ. ಚಿಕಿತ್ಸೆ ದೊರೆಯದೆ ರೋಗಿಗಳು ಬೀದಿ ಬೀದಿಗಳಲ್ಲಿ ಓಡುವುದು ಬೀಳವುದು ಒಬ್ಬ ರೋಗಿಗಳ ಮೇಲೆ ಮತ್ತೊಬ್ಬರೋಗಿ ಬಿದ್ದು ಒದ್ದಾಡುವ ಕೆಲವರು ಬಿದ್ದು ಎದ್ದು ಓಡುವ, ಇನ್ನು ಕೆಲವರು ಮಿಸುಕಾಡದೆ ಮಲಗಿರುವ, ಚಿಕಿತ್ಸೆಗಾಗಿ ಅಂಗಲಾಚುವ, ಆರೋಗ್ಯವಂತರು ಇವರ ಕಂಡು ಓಡುವ ದೃಶ್ಯಗಳ ಕಂಡು ತನ್ನ ಪ್ರಜೆಗಳಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

“ಬುನಾದಿ ಇಲ್ಲದ ಬದುಕು “ ಕೂಡಿಟ್ಟ ಕನಸುಗಳ ಜೊತೆ ಪಾದಯಾತ್ರೆ ಮಾಡುತ್ತಿರುವೆ. ಅರಮನೆಗಲ್ಲ, ಹೊತ್ತಿನ ಅಂಬಲಿಗಾಗಿ! ಕಟ್ಟಿಕೊಂಡ ಆಸೆಗಳನ್ನ ಒಟ್ಟುಗೂಡಿಸಿ ಸಮಾಧಿ ಮಾಡಿರುವೆ. ಚಂದದ ಬಟ್ಟೆಗಲ್ಲ, ಹಸಿದ ಹೊಟ್ಟೆಗಾಗಿ! ನನ್ನೊಳಗಿನ ಖುಷಿಯನ್ನ ಮಾಯಾ ಬಜಾರಿನಲ್ಲಿ ಮಾರಿಕೊಂಡಿರುವೆ. ದುಡ್ಡಿಗಲ್ಲ, ಮನದ ದುಃಖಕ್ಕಾಗಿ! ಬುನಾದಿಯೇ ಇಲ್ಲದ ಬದುಕನ್ನ ನಡು ಬೀದಿಯಲ್ಲೆ ಕಳೆದುಕೊಂಡಿರುವೆ. ನನ್ನ ಸೋಲಿಗಲ್ಲ, ಗೆದ್ದ ಬಡತನಕ್ಕಾಗಿ! –ಹರೀಶ್ ಹಾದಿಮನಿ (ಹಾಹರೀ) ಸದಾ ಕಾಡುವೆ ಏಕೆ? ನೀ ಅಗಲಿದ ಕ್ಷಣವ ಮರೆಯಲಾಗದು ಎಂದಿಗೂ, ನಿನ್ನ ನೆನಪಿನ ಬುತ್ತಿ ಹೊತ್ತು ಸಾಗುತ್ತಿರುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅವ್ವಣ್ಣಿ: ಗಿರಿಜಾ ಜ್ಞಾನಸುಂದರ್

“ಮಗಾ ಸ್ಕೋರ್ ಎಷ್ಟು?” ಗೇಟ್ ಇಂದ ಹುಡುಗರ ಜೋರಾದ ದನಿ.. “ಯಾರು? ಸ್ಲಿಪ್ಪರ್ ಆ? ನಮ್ ಹುಡ್ಗ ಇಲ್ಲ ಕಣಪ್ಪ” ಅಜ್ಜಿಯ ದನಿ. “ಅಜ್ಜಿ, ಸ್ಕೋರ್ ಎಷ್ಟಾಗಿದೆ?” ” ಚೆನ್ನಾಗಾಡ್ತಿದಾರೆ ನಮ್ಮವರು, ೨೩೮ ಆಗಿದೆ ಬರಿ ೩ ಜನ ಔಟ್… ತಂಡೂಲ್ಕರ್ ಇನ್ನು ಆಡ್ತಿದಾನೆ, ತುಂಬ ಚೆನ್ನಾಗಿದೆ ಆಟ.. ಬಾ ನೀನು ನೋಡಿವಂತೆ” “ಇಲ್ಲ ಅಜ್ಜಿ.. ಟ್ಯೂಷನ್ ಗೆ ಹೋಗ್ಬೇಕು. ಅಮ್ಮ ಬೈತಾರೆ, ಇಂಡಿಯಾ ವಿನ್ ಆಗುತ್ತೆ ಬಿಡಿ… ಖುಷಿ ಆಯಿತು” ಅಂತ ಹೇಳಿ ಸ್ಟೀಫೆನ್ ಹೊರಟ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಲದ ಚಿತ್ರ: ಎಂ. ಜವರಾಜ್

ರಾತ್ರಿ ಹತ್ತಾಯ್ತು. ಕರೆಂಟ್ ಇಲ್ಲದೆ ಊರು ಗಕುಂ ಎನುವ ಹೊತ್ತಲ್ಲಿ ಬೀದಿಯಲ್ಲಿ ನಿಂತ ಅಕ್ಕಪಕ್ಕದ ಮನೆಯವರು ಗುಸುಗುಸು ಮಾತಾಡುತ್ತ ಇದ್ದರು. ಕರೆಂಟ್ ಇಲ್ಲದ್ದರಿಂದ ಟಿವಿ ನ್ಯೂಸ್ ನೋಡಲು ಆಗದೆ ದಿಂಬಿಗೆ ತಲೆ ಕೊಟ್ಟೆ. ಕರೋನಾ ಭೀತಿಯಿಂದ ದೇಶ ಪ್ರಕ್ಷುಬ್ಧವಾಗಿ ನಾಳಿನ ಜನತಾ ಕರ್ಫ್ಯೂಗೆ ಸನ್ನದ್ಧವಾಗಿತ್ತು. ಆಗಲೇ ಹೆಂಡತಿ ನಿದ್ರೆಗೆ ಜಾರಿದ್ದಳು. ನನ್ನ ಮಗಳು ಸೆಕೆಗೊ ಸೊಳ್ಳೆ ಹೊಡೆತಕೊ ಹೊರಳಾಡುತ್ತ ಕೈ ಕಾಲು ಆಡಿಸುತ್ತಿದ್ದಳು.ಹಬ್ಬದ ಹೊತ್ತಲ್ಲಿ ಇದೆಂಥ ಕೆಲ್ಸ ಆಯ್ತು.. ಛೇ! ಈ ಸಾರಿ ಯುಗಾದಿಗೆ ಏನೇನು ಮಾಡಬೇಕು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

“ಯುಗಾದಿ: ನಿನ್ನೆ-ನಾಳೆಗಳೆಂಬ ಬೇವು-ಬೆಲ್ಲಗಳು”: ಪೂಜಾ ಗುಜರನ್, ಮಂಗಳೂರು

ಮನುಷ್ಯ ಪ್ರತಿದಿನ ಹುಟ್ಟಿ ಪ್ರತಿದಿನ ಸಾಯುತ್ತಾನೆ. ಅವನಿಗೆ ಪ್ರತಿದಿನವೂ ಹೊಸ ಹುಟ್ಟು. ಹಾಗೇ ಈ ಪ್ರಕೃತಿ ಕೂಡ ಪ್ರತಿವರ್ಷವೂ ಹೊಸತನದ ಹೊಸ್ತಿಲಲ್ಲಿ ಸಂಭ್ರಮಿಸುವ ಹೊಸ ಯುಗದ ಆರಂಭವನ್ನು ಯುಗಾದಿಯಾಗಿ ಸಂಭ್ರಮಿಸಿ ಸಿಹಿ ಕಹಿಯನ್ನು ಸಮವಾಗಿ ಸವಿಯಲು ಕಲಿಸುತ್ತದೆ. ಬದುಕೆಂದರೆ ಹಾಗೇ ತಾನೆ ಒಮ್ಮೆ ಸುಖ ಒಮ್ಮೆ ದುಃಖ, ಸುಂದರ ಸ್ನೇಹ ಅಸಹ್ಯ ದ್ವೇಷ, ಮುಗಿಯದ ಆಸೆ. ಕಾಡಿಸುವ ಹತಾಶೆ, ನಿರಂತರ ಭಕ್ತಿ. ಕಾಣದ ಭಯ. ಹುಟ್ಟು ಸಾವಿನ ನಡುವೆ ಹಾದು ಹೋಗುವ ಸಣ್ಣ ಗೆರೆಯಂತೆ ಈ ಬದುಕು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅನಾದಿ ಮೊರೆಯ ಕೇಳಿ..: ತಿರುಪತಿ ಭಂಗಿ

“ಭಾಳಂದ್ರ ಇನ್ನ ಒಂದೆರ್ಡ ದಿನ ಉಳಿಬಹುದ… ನಮ್ಮ ಕೈಯಿಂದ ಮಾಡು ಪ್ರಯತ್ನಾ ನಾಂವ ಮಾಡೀವಿ, ಇನ್ನ ಮಿಕ್ಕಿದ್ದ ಆ ದೇವ್ರರ್ಗೆ ಬಿಟ್ಟದ್ದ.” ಡಾಕ್ಟರ್ ಕಡ್ಡಿ ಮುರದ್ಹಂಗ ಮಾತಾಡಿದ್ದ ಕೇಳಿದ ಶಿವಕ್ಕನ ಎದಿ ಒಮ್ಮಿಗಿಲೆ ‘ದಸಕ್’ ಅಂದ ಕೈಕಾಲಾಗಿನ ನರಗೋಳಾಗಿದ್ದ ಸಕ್ತಿ ಪಟಕ್ನ ಹಿಂಡಿ ಹಿಪ್ಪಿ ಆದಾಂಗ ಆಗಿತ್ತು. ಎಷ್ಟೊತ್ತನಕಾ ದಂಗ್ ಬಡ್ದಾಂಗಾಗಿ ಪಿಕಿ ಪಿಕಿ ಕಣ್ಣ ಬಿಟಗೋತ, ಡಾಕ್ಟರಪ್ಪನ ನೋಡಕೋತ ನಿಂತ ಕೊಂಡ್ಳು. ಅದೆಲ್ಲಿತ್ತೋ ಎಲ್ಲಿಲ್ಲೋ ಅಕಿ ಎದಿಯಾಗಿನ ದುಕ್ಕದ ಶಳುವು ಒಮ್ಮಿಗಿಲೆ ಉಕ್ಕಿ ಬಂದದ್ದ ತಡಾ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮತ್ತದೇ ಬೇಸರ: ಎನ್.ಎಚ್.ಕುಸುಗಲ್ಲ

ದೀರ್ಘಕಾಲದ ಎದೆನೋವು ತಾಳಲಾರದೆ ತತ್ತರಿಸಿ ಹೋಗಿದ್ದ ನೀಲಜ್ಜನಿಗೆ ಕಳೆಯುವ ಒಂದೊಂದು ನಿಮಿಷವೂ ಒಂದೊಂದು ಘಳಿಗೆಯಾಗುತ್ತಿದೆ. ಆಸರೆಯಾಗಬೇಕಾದ ಮಕ್ಕಳು ಹೊಟ್ಟೆಪಾಡಿನ ಕೆಲಸ ಅರಸಿ ಪಟ್ಟಣ ಸೇರಿದ್ದರು. ಊರುಗೋಲಾಗಬೇಕಾಗಿದ್ದ ಪತ್ನಿಯೂ ತೀರಿಹೋಗಿದ್ದಳು. ತಲತಲಾಂತರದಿಂದ ಬಂದಿದ್ದ ಕಂಬಳಿ ನೇಯುವ ಕಾಯಕವನ್ನು ಮಕ್ಕಳು ನೆಚ್ಚಿರಲಿಲ್ಲ. ಈ ಕೊರಗೂ ನೀಲಜ್ಜನಿಗಿತ್ತು. ಗಂಡು ಮಕ್ಕಳು ಪಟ್ಟಣ ಸೇರಿದರೇನಂತೆ ಮಗಳು ರುಕ್ಮಿಣಿ ಪಾದರಸದಂತೆ ಮನೆಯಲ್ಲಿ ಓಡಾಡಿಕೊಂಡು ಅಪ್ಪನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಳು. ರುಕ್ಮಿಣಿ ಅಪ್ಪನ ಜೊತೆ ಇರುವುದರಿಂದ ಗಂಡು ಮಕ್ಕಳು ಅಪ್ಪನ ಬಗ್ಗೆ ಚಿಂತೆ ಮಾಡುತ್ತಿರಲಿಲ್ಲ. ಆದರೆ ಆರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ