ಬಸ್ ಸ್ಟ್ಯಾಂಡ್ ಬದುಕು:ಗವಿಸ್ವಾಮಿ
ಸಂಜೆ ಏಳಾಗಿತ್ತು. ಮಳೆ ಬೀಳುವ ಎಲ್ಲಾ ಮುನ್ಸೂಚನೆಗಳೂ ಕಾಣುತ್ತಿದ್ದವು. ಆದರೂ, ಒಂದು chance ತೆಗೆದುಕೊಂಡು ಊರಿನತ್ತ ಬೈಕ್ ಸ್ಟಾರ್ಟ್ ಮಾಡಿದೆ. ಎರಡು ಮೂರು ಕಿಮೀ ಮುಂದೆ ಹೋಗುವಷ್ಟರಲ್ಲಿ ಟಪ್ ಟಪ್ ಟಪ್ ಟಪ್ ಅಂತ ಚುಚ್ಚತೊಡಗಿದವು ದಪ್ಪ ದಪ್ಪ ಹನಿಗಳು. ಮುಂದೆ ಹೋದಂತೆ ಮಳೆಯ ರಭಸ ಇನ್ನೂ ಹೆಚ್ಚಾಯಿತು. ಹೇಗೋ ಸಹಿಸಿಕೊಂಡು ಒಂದು ಮೈಲಿಯಷ್ಟು ಮುಂದೆ ಹೋಗಿ ಹಳ್ಳಿಯೊಂದರ ಬಸ್ ಸ್ಟ್ಯಾಂಡ್ ತಲುಪಿಕೊಂಡೆ. ಅಲ್ಲಾಗಲೇ ಐದಾರು ಬೈಕುಗಳು ನೆನೆಯುತ್ತ ನಿಂತಿದ್ದವು. ಬಸ್ ಸ್ಟ್ಯಾಂಡ್ ಅಕ್ಷರಷಃ ಹೌಸ್ಫುಲ್ಲಾಗಿತ್ತು. ಆಗ ತಾನೆ … Read more