ವಿಶ್ವದೆಲ್ಲೆಡೆ ಹರಡುತ್ತಿರುವ ಅಮೇರಿಕಾ ಬೇಹುಗಾರಿಕೆಯ ಜಾಲಬಂಧ: ಜೈಕುಮಾರ್

ಅಮೇರಿಕಾದ ಕ್ರಮ ಪ್ರಜಾಪ್ರಭುತ್ವಕ್ಕೆ ಅಪಾಯ : ಎಡ್ವರ್ಡ್ ಸ್ನೋಡೆನ್, ಮಾಜಿ ಸಿಐಎ ಉದ್ಯೋಗಿ “ನಾನು ಮತ್ತೆ ಮನೆಗೆ ತೆರಳುತ್ತೇನೆಂಬ ಭರವಸೆಯಿಲ್ಲ. ತಮ್ಮ ಹೆಸರಿನಲ್ಲಿ ಸರ್ಕಾರಗಳು ನಡೆಸುತ್ತಿರುವ ಕೃತ್ಯಗಳನ್ನು ಜನತೆಗೆ ತಿಳಿಸುವುದಷ್ಟೇ ನÀನ್ನ ಉದ್ದೇಶ. ನನಗೆ ರೂ. 1 ಕೋಟಿ ಸಂಬಳ, ಒಳ್ಳೆಯ ಗೆಳತಿ, ಹವಾಯಿ ದ್ವೀಪದಲ್ಲೊಂದು ಐಷಾರಾಮಿ ಮನೆ ಮತ್ತು ಆತ್ಮೀಯ ಬಂಧುವರ್ಗದವರೆಲ್ಲರೂ ಇದ್ದು ಆರಾಮ ಜೀವನ ನಡೆಸಬಹುದು. ಆದರೆ, ಇವೆಲ್ಲವನ್ನೂ ನಾನು ತ್ಯಾಗ ಮಾಡಲು ಸಿದ್ದನಿದ್ದೇನೆ. ಏಕೆಂದರೆ, ಅಮೇರಿಕಾ ವಿಶ್ವದಾದ್ಯಂತ ರಹಸ್ಯವಾಗಿ ನಿರ್ಮಿಸುತ್ತಿರುವ ಬೇಹುಗಾರಿಕಾ ವ್ಯವಸ್ಥೆಯು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಚುಟುಕ ಸ್ಪರ್ಧೆ: ಸ್ಫೂರ್ತಿ ಗೌಡ ಅವರ ಚುಟುಕಗಳು

1.ನಿರ್ಲಿಪ್ತತೆ ನಿನ್ನ ನೆನಪಿಲ್ಲ ಗಾಳಿ ಗಂಧವಿಲ್ಲ ನಿದ್ದೆಯಲಿ ಕರಗಿಸುವ ಮೋಹವಿಲ್ಲ ನಿರ್ಲಿಪ್ತತೆ!! ಯಾರೋ ಕೂಗಿದರು ಕಲ್ಲು ಹೃದಯ =========================== 2. ವ್ರತ ಗೆದ್ದ ಸ್ವಯಂವರದಲ್ಲಿ ಹಂಚಿದ ಅಣ್ಣತಮ್ಮಂಗೆ ಸಮಕಾಣವ್ವ ಐದು ಬೆರಳು ನಿನ್ನವೇ ಕುಂತಿಯ ಉಸಿರು ಇದೇ ಗರತಿಯ ವ್ರತವೇ? =========================== 3. ಉಪವಾಸ ಏಕಾದಶಿ ಉಪವಾಸ ದ್ವಾದಶಿ ಉಪವಾಸ ಸಿಕ್ಕಿತೋ ಪುಣ್ಯಫಲ? ಹರಕು ಬಟ್ಟೆ ಮುರುಕು ತಟ್ಟೆ ಪ್ರತ್ಯಹಂ ಉಪವಾಸ ಯಾರಾದರು ಇವನಿಗೆ ಕೊಡಿಸಿ ಆ ನಿಮ್ಮ ಪುಣ್ಯ ಫಲ! =========================== 4. ಉಳುಮೆಯಿಲ್ಲ ಒಲವಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾನು ಕುರಿಮರಿ: ಅಖಿಲೇಶ್ ಚಿಪ್ಪಳಿ

ಫೋಟೊದಲ್ಲಿರುವ ಊರ್ಧ್ವಮುಖಿ ಯಾರೆಂದು ನಿಮಗೆ ಸುಲಭವಾಗಿ ಅರ್ಥವಾಗಿರಬಹುದು. ಅದೇ ಲೇಖನ ಬರೆಯುವ ಮನುಷ್ಯ – ಅಖಿಲೇಶ್ ಚಿಪ್ಪಳಿ. ಆದರೆ, ಎತ್ತಿಕೊಂಡಿರುವ ಆ ಚಿಕ್ಕ, ಸುಂದರ ಪ್ರಾಣಿ ಯಾವುದೆಂದು ಗೊತ್ತಾ? ಇದರ ಹಿಂದಿನ ಕತೆಯೇ ಈ ವಾರದ ಸರಕು. ವನ್ಯಜೀವಿ ಹತ್ಯೆ ಅಂದರೆ ಪ್ರತಿಷ್ಟಿತ ಬೇಟೆ ಎಂಬ ಅಮಾನವೀಯ ಕಾರ್ಯ ಜನಪ್ರಿಯವಾದ ಕಾಲವೊಂದಿತ್ತು. ರಾಜ-ಮಹಾರಾಜರು ತಮ್ಮ ತಿಕ್ಕಲು ತೆವಲಿಗೋಸ್ಕರ ಕಾಡಿನ ಪ್ರಾಣಿಗಳನ್ನು ಹತ್ಯೆ ಮಾಡುತ್ತಿದ್ದರು. ರಾಮಾಯಣದಂತಹ ಪುರಾಣ ಗ್ರಂಥಗಳಲ್ಲೂ ಬೇಟೆಯ ಬಗ್ಗೆ ಉಲ್ಲೇಖಗಳಿವೆ. ಸೀತೆ ಬಂಗಾರದ ಜಿಂಕೆ ಬೇಕು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚುಕ್ಕಿ-ಚಂದ್ರಮ: ನವೀನ್ ಮಧುಗಿರಿ

ಕನಸಿನಲ್ಲಿ ನಾನು ತುಂಬಾ  ಉದ್ದ ಬೆಳೆದೆನು! ಚುಕ್ಕಿ ಚಂದ್ರರೆಲ್ಲ ನನ್ನ  ಕೈಯ್ಯ ಹತ್ತಿರ!   ಚಂದಮಾಮ ಕೆನ್ನೆ ಸವರಿ  ಮುತ್ತು ಕೊಟ್ಟನು  ಚುಕ್ಕಿ ತಾರೆ ನನ್ನ ಜೊತೆ  ಒಳ್ಳೆ ಗೆಳೆಯರಾದರು    ಅರ್ಧ ಚಂದ್ರನ ಮೇಲೆ ನಾನು  ಜಾರುಬಂಡಿ ಆಡಿದೆ  ಚುಕ್ಕಿ ತಾರೆಗಳ ಜೊತೆ  ತುಂಬಾ ಮಾತನಾಡಿದೆ    ಅಲ್ಲೂ ಒಂದು ಊರು ಇತ್ತು  ಅಲ್ಲಿ ಜಾತ್ರೆ ನಡೀತಿತ್ತು  ಚಂದಮಾಮ ಕೈಯ್ಯ ಹಿಡಿದ  ನಾನು ಊರು ಸುತ್ತಿದೆ    ಕಡಲೆ ಮಿಟಾಯಿ ಕೊಬ್ಬರಿ ಮಿಟಾಯಿ  ಬೆಂಡು ಬತ್ತಾಸು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಣ್ಣಾವ್ರ ಜೊತೆ ಒಂದು ಬೆಳಗ್ಗೆ: ಹೃದಯಶಿವ

ಗುರುಕಿರಣ್ ರನ್ನು ನಾವೆಲ್ಲಾ ಸಾಮಾನ್ಯವಾಗಿ ಗುರೂಜಿ ಅಂತೀವಿ. ಇಂಥ ಗುರೂಜಿ ಒಂದು ಬೆಳಗ್ಗೆ ತಮ್ಮ ಜೊತೆ ನನ್ನನ್ನೂ ಆಕಾಶ್ ಆಡಿಯೋಗೆ ಕರೆದುಕೊಂಡು ಹೋಗಿದ್ದರು. ಆಗಿನ್ನೂ ಒಂದೇ ಒಂದು ಹಾಡು ಸೈತ ಸಿನಿಮಾಗೆ ಬರೆದಿರಲಿಲ್ಲ ನಾನು. ಚಿತ್ರಗೀತೆ ಬರೆಯುವುದರ ಕುರಿತು ಆಗಷ್ಟೇ ಕಲಿಕೆಯ ಹಂತದಲ್ಲಿದ್ದ ನನಗೆ ರೆಕಾರ್ಡಿಂಗ್ ಸಂದರ್ಭದಲ್ಲಿ ಸ್ಟುಡಿಯೋ ಒಳಗೆ ಜರುಗುವ ವಿದ್ಯಮಾನಗಳ ಬಗ್ಗೆ ತೀರಾ ಕುತೂಹಲವಿತ್ತು. ಗಾಯಕ/ಗಾಯಕಿ ಬಂದು ಸಾಹಿತಿಯ ಮುಖೇನ ಸಾಹಿತ್ಯವನ್ನು ತಮ್ಮ ಡೈರಿಯಂಥ ಪುಸ್ತಕದಲ್ಲಿ ಬರೆದುಕೊಳ್ಳುವುದು, ನಂತರ ಟ್ರ್ಯಾಕ್ ಕೇಳುವುದು, ಟ್ಯೂನಿಗನುಗುಣವಾಗಿ ತಾವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಳೆ-ಮಳೆ: ಅಖಿಲೇಶ್ ಚಿಪ್ಪಳಿ

ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಭಾರಿ ಮಳೆಯನ್ನು ನೋಡದಿರುವ ಈಗಿನ ಯುವಕರು ಇದೇನು ಮಳೆ ಎಂದು ಒಂಥರಾ ತಾತ್ಸಾರ ಮಾಡುತ್ತಾರೆ. ಕಳೆದ ಬಿರುಬೇಸಿಗೆಯಲ್ಲಿ ನೀರಿಗಾಗಿ ಅನುಭವಿಸಿದ ಎಲ್ಲಾ ಕಷ್ಟಗಳನ್ನು ಆರಿದ್ರಾ ಮತ್ತು ಪುನರ್ವಸು ಮಳೆಗಳು ಮರೆಸಿವೆ. ಹೂಳು ತುಂಬಿದ ಡ್ಯಾಂಗಳು ತುಂಬಿದರೆ ನಮಗೆ ಬೊನಸ್ಸು ಸಿಗುತ್ತದೆ ಎಂದು ಕೆ.ಪಿ.ಸಿಯವರು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದಾರೆ. ಹೈಸ್ಕೂಲು ಓದಲು 80ರ ದಶಕದಲ್ಲಿ ನಮ್ಮ ಊರಿನಿಂದ ಸಾಗರಕ್ಕೆ ಬರಬೇಕಾಗಿತ್ತು. ಗ್ರಾಮಾಂತರ ಬಸ್ಸುಗಳು ಇರದಿದ್ದ ಆ ಕಾಲದಲ್ಲಿ, ಸೈಕಲ್ಲಿನ ಭಾಗ್ಯವಿಲ್ಲದ ನಾವು ನಡದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಗುಲಾಬಿ (ಭಾಗ 3): ಹನುಮಂತ ಹಾಲಿಗೇರಿ

(ಹಿಂದಿನ ಭಾಗ ಇಲ್ಲಿದೆ) ಶಾಲೆಯಲ್ಲಿ ಇರುವಷ್ಟು ಹೊತ್ತು ಅಕ್ಕನ ಧ್ಯಾನದಲ್ಲಿರುತಿದ್ದ ನಾನು ಶಾಲೆ ಬಿಟ್ಟೊಡನೆ ಅಕ್ಕನೊಂದಿಗೆ ಆಟದಲ್ಲಿ ಸೇರಿಕೊಂಡು ಬಿಡುತಿದ್ದೆ. ಆಗ ಅದೆಷ್ಟೊಂದು ಬಗೆಯ ಆಟಗಳು ಆಡುತ್ತಿದ್ದೆವು. ನಮ್ಮ ಕೇರಿಯಲ್ಲಿ ನನ್ನ ವಾರಿಗೆಯ ಹುಡುಗರಿಗೆಲ್ಲ ನನ್ನಕ್ಕಳೆ ಲೀಡರು. ಅಂಡ್ಯಾಳು, ಮಣಿಪತ್ತು, ಚಕ್ಕಾದೋನಿ, ಹುಲಿಮನಿಯಾಟ, ಲಗೋರಿ, ಕುಂಟಲಿಪ್ಪಿ ಹಿಂಗ ರಗಡ ಆಡ್ತಿದ್ದಿವಿ. ಒಮ್ಮೊಮ್ಮೆ ಗಂಡ ಹೆಂಡತಿ ಆಟದೊಳಗ ಅಕ್ಕ ನಾನು ಗಂಡ ಹೆಂಡತಿಯಾಗಿದ್ದು ನೆನಸ್ಕೊಂಡ್ರ ಈಗಲೂ ನಗು ಬರತೈತಿ. ಹಿಂಗ ಒಂದು ದಿನ ಅಕ್ಕನ ಕೂಡ ಆಟ ಆಡಬೇಕೂಂತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪರಕಾಯ ಪ್ರವೇಶದ ಒಂದು ಪ್ರಸಂಗ: ಶೈಲಜಾ

ಮನ ಕಲಕ್ಕಿತ್ತು. ನಿತ್ಯವೂ ದಿನಪತ್ರಿಕೆಯಲ್ಲಿ ಹೆಣ್ಣುಮಕ್ಕಳ ಮಾನಪಹರಣವಾಗುವ ಸುದ್ದಿಯನ್ನು ಓದುತ್ತ ಇದಕ್ಕೆಲ್ಲ ಪರಿಹಾರವೇ ಇಲ್ಲವೆ ಎಂದು ನನ್ನೊಳಗೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಲೇ ಇದ್ದವು. ಮನಸ್ಸಮಾಧಾನ ಕದಡಿ ಹೋಗಿತ್ತು. ಕೊಂಚ ಉಪಶಮನವಾಗಲೆಂದು ಅಮ್ಮನ ಬಳಿಯಲ್ಲಿದ್ದ “ಪಾಂಡವ ಪ್ರತಾಪ” ತಂದು ಓದತೊಡಗಿದೆ. ಹಾಗಂತ ಇಡೀ ದಿನ ಓದಲು ಕುಳಿತರಾಗುತ್ತದೆಯೆ! ಕರ್ತವ್ಯ ಕೈಬೀಸಿ ಕರೆಯಿತು! ಪುಸ್ತಕ ಬದಿಗಿಟ್ಟು ಕೆಲಸವನ್ನೆಲ್ಲಾ ಮುಗಿಸುವ ಹೊತ್ತಿಗೆ ರಾತ್ರಿ ಗಂಟೆ  ಹತ್ತು!  ಸರಿ, ಇನ್ನು ಮಲಗಿದಿದ್ದರೆ ನಾಳೆ ಏಳಲು ಕಷ್ಟವಾಗುವುದು,  ಬೆಳಿಗ್ಗೆ ಬೇಗ ಎದ್ದು ಬೇಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚೆಲುವೆಯ ನೋಟ ಚೆನ್ನಾ, ಒಲವಿನ ಮಾತು ಚೆನ್ನಾ..: ಸುಮನ್ ದೇಸಾಯಿ ಅಂಕಣ

ಮೊನ್ನೆ ರವಿವಾರ ಮುಂಝಾನೆ ನಮ್ಮ ತಮ್ಮ  ಹಾಡ ಹಾಡಕೊತ ಗಿಡಕ್ಕ ನೀರ ಹಾಕಲಿಕತ್ತಿದ್ದಾ. ಆ ಹಾಡು ಏನಂದ್ರ " ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋತಿಯ ಕಾಟಾ, ಹೆಂಡತಿಯೊಬ್ಬಳು ಜೊತೆಯಲಿ ಇದ್ದರೆ ಹಳಸಿದ ಅನ್ನದ ಊಟಾ…" ಅಂತ ಹಾಡಕೊತ ತನ್ನಷ್ಟಕ್ಕ ತಾನ ನಗಲಿಕತ್ತಾಗ ಹಿಂದ ಯಾರೊ ನಿಂಥಂಗ ಅನಿಸಿ ಹೊಳ್ಳಿ ನೋಡಿದ್ರ ಟೊಂಕದ ಮ್ಯಾಲೆ ಕೈ ಇಟಗೊಂಡ ಉರಿ ಉರಿ ಮಾರಿಮಾಡಕೊಂಡ ತನ್ನ ನೋಡಲಿಕತ್ತ ಹೆಂಡತಿನ್ನ ನೋಡಿ ಒಂದ ಘಳಿಗಿ ಎದಿ ಝಲ್ಲಂದು ಹಂಗ ಸುಮ್ನ ನಿಂತಾ. ಆಕಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕು: ಪ್ರಶಸ್ತಿ ಅಂಕಣ

ಮಳೆಯೆಂದ್ರೆ ಘೋರ ಮಳೆ. ಮಾರಿಕೊಪ್ಪೆಗೆ ತನ್ನ ಮೋರೆ ತೋರಿಸಲೂ ಬೇಸರಿಸಿದ ರವಿ ಮನೆಯೊಳಗೆ ಬೆಚ್ಚಗೆ ಮಲಗಿದ್ದಾನಾ ಎಂಬ ಭ್ರಮೆ ಮೂಡಿಸುವಂತಹ ವಾತಾವರಣ. ಊರ ಮುಂದೊಂದು ಮಾರಿಗುಡಿಯಿಂದ ಹಳ್ಳಿಗೆ ಮಾರಿಕೊಪ್ಪ ಎಂಬ ಹೆಸರು ಬಂತೇ ಅಥವಾ ಮುಳುಗಡೆಯ ವೇಳೆ ಆ ಊರ ಜನರೆಲ್ಲಾ ತಮ್ಮ ಪಿರ್ತಾರ್ಜಿತ ಜಮೀನನ್ನು ಮಾರಿ ಇಲ್ಲಿಗೆ ಗುಳೆ ಬಂದಿದ್ದರಿಂದ ಇಂತಾ ಹೆಸರೇ ಎಂದು ಅಲ್ಲಿನ ಈಗಿನ ತಲೆಮಾರಿನವರಿಗೆ ತಿಳಿದಿಲ್ಲ. ಅದೇ ಮಾರಿಗುಡಿಯ ಮುಂದೆ ಒಂದೈದು ಅಡಿ ದೂರದಲ್ಲೊಬ್ಬ ಬೋರಲು ಬಿದ್ದಿದ್ದಾನೆ. ಮಾರಿಗುಡಿಯ ಎದುರಿಗೆ ಹುಗಿದಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೌರಿ ಗಣೇಶ:ವಾಸುಕಿ ರಾಘವನ್

ನಿಜಕ್ಕೂ ಒಳ್ಳೆಯ ಸಿನಿಮಾ ಅಂದರೆ ಯಾವುದು? ಅದನ್ನು ಅಳೆಯಲು ಬೇಕಿರುವ ಮಾನದಂಡಗಳು ಯಾವುವು? ಈ ಪ್ರಶ್ನೆಗೆ ನಿಖರವಾದ ಉತ್ತರ ನನ್ನಲ್ಲಿಲ್ಲ.  ಆದರೆ ಒಂದು ಮಾತ್ರ ಹೇಳಬಲ್ಲೆ. ನೀವು ನೋಡಿದ ಒಂದು ಚಿತ್ರ ಎಷ್ಟೋ ವರ್ಷಗಳಾದ ಮೇಲೂ ನಿಮ್ಮ ನೆನಪಿನಲ್ಲಿ ಉಳಿದಿದದ್ದರೆ, ಅದು ಒಳ್ಳೆಯ ಚಿತ್ರ! ನಾನು ಗೆಳೆಯ ಬೆಳ್ಳೂರ್ ಮನೆಗೆ ಮೊದಲ ಸಲ ಹೋಗ್ತಿದ್ದೆ. ಮನೆಯ ವಿಳಾಸ, ಡೈರೆಕ್ಷನ್ ಎಲ್ಲಾ ಕೇಳಿಕೊಂಡು ಸರಿಯಾಗಿ ಬಂದು ತಲುಪಿದೆ. ಅಪಾರ್ಟ್ ಮೆಂಟ್ ನಂಬರ್ ಏನು ಅಂತ ಕೇಳಿದಾಗ “ನೂರಾ ಎರಡು” … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಬಲೆ ಮಂಜುಳಾ: ರುಕ್ಮಿಣಿ ಎನ್.

ಸಂಜೆ ಆರೂ ಮುಕ್ಕಲಾಗಿತ್ತು. ಮಂಜುಳಾಳ ಅತ್ತೆ ಟಿ.ವಿಯಲ್ಲಿ ಚರಣದಾಸಿ ಸಿರಿಯಲ್ ನೋಡುತ್ತಿದ್ದಳು. ಮಂಜುಳಾ, ಸಂಜೆಯಾಯ್ತು. ಕಸ ಗುಡಿಸಿ, ಅಂಗಳಕೆ ನೀರು ಹಾಕಿ ದೀಪ ಹಚ್ಚು ಎಂದು ಕೂಗುತ್ತಿದ್ದರು. ಆ ದೊಡ್ಡದಾದ ಧ್ವನಿ ಕೇಳಿ ಕಪ್ಪು ಮೋಡದಂತೆ ಹೆಪ್ಪುಗಟ್ಟಿದ್ದ ಮಂಜುಳಾಳ ದುಃಖದ ಕಟ್ಟೆಯೊಡೆದು ಬಿಟ್ಟಿತ್ತು.  ಕಿಟಕಿಯ ಪಕ್ಕ ಕೂತು ಆ ಕಪ್ಪು ಮೋಡವನ್ನೇ ದಿಟ್ಟಿಸುತಿದ್ದ ಅವಳ ಕಣ್ಣುಗಳಿಂದ ಗಂಗೆ ಹರಿಯುತ್ತಲೇ ಇದ್ದಳು.  ಗಂಟಲೆಲ್ಲ ಕಟ್ಟಿ ಹೋಗಿತ್ತು. ಕೂಗಿದರೂ ಓಗೊಡದಿರುವಷ್ಟು ಆಕೆ ಕುಗ್ಗಿ ಹೋಗಿದ್ದಳು. ಅಂತಾಹದೇನಾಗಿತ್ತು ಅವಳಿಗೆ ಅಂತೀರಾ? ಬನ್ನಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಟಕಕಾರರಾಗಿ ಕುವೆಂಪು (ಭಾಗ-12) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ರಂಗಾಸಕ್ತ ಓದುಗಪ್ರಭುಗಳೇ, ಸಿದ್ಧಾರ್ಥ ಬುದ್ಧನಾಗುವ ಮಹತ್ವದ ಮತ್ತು ಇಂದಿಗೂ ಆಕರ ಕೃತಿಯಾಗಿ ಶೋಭಾಯಮಾನವಾಗಿರುವ ‘ಮಹಾರಾತ್ರಿ’ ರಂಗಕೃತಿಯಲ್ಲಿ ವ್ಯಕ್ತಿತ್ವವೊಂದು ರೂಪಾಂತರವಾಗುವ ಮಹತ್ವದ ಕಥಾನಕದ ಹಿನ್ನಲೆಯಲ್ಲಿ ಮಹಾಕವಿಗಳು ತಮ್ಮ ಪ್ರಧಾನ ತಾತ್ವಿಕ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ರಾಜಕುಮಾರ ಸಿದ್ಧಾರ್ಥನ ಪಾತ್ರದ ಮೂಲಕ ‘ಜಗಕಾಗಿ ಕಣ್ಣೀರ ಸುರಿಸುವೆನು, ಅದಕಾಗಿ ಸತಿಗಾಗಿ ಕಂಬನಿಯ ಕರೆಯೆ, ಮುಂದೆದೆಯ ಬೆಣ್ಣೆಯನು ಮಾಡಿ, ಇಂದದನು ಕಲ್ಲಾಗಿ ಮಾಡಿ’ ಎಂದು ಹೇಳಿಸುತ್ತಾರೆ. ಇಲ್ಲಿ ಸಿದ್ಧಾರ್ಥನು ವೈಯಕ್ತಿಕ ಭೋಗಕ್ಕಿಂತ ಸಾಮಾಜಿಕ ಸಾಮೂಹಿಕ ಹಿತ ಮುಖ್ಯ ಎಂಬುದು ಬುದ್ಧದೇವನ ಮೂಲಮಂತ್ರವಾಗಿರುವಿಕೆಯನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಲಗೂನ ಕಲ್ಲ್ ತುಗೋಳ್ರೀ: ಗುಂಡೇನಟ್ಟಿ ಮಧುಕರ

ನಾನೀಗ ಭಾಷಣ ಮಾಡಲು ನಿಮ್ಮ ಮುಂದೆ ನಿಂತಿದ್ದೇನೆ. ಸಂಘಟಕರು ಕೇವಲ ಐದೇ ನಿಮಿಷದಲ್ಲಿ ಮಾತುಗಳನ್ನು ಮುಗಿಸಬೇಕೆಂಬ ಅತ್ಯಂತ ಕಠಿಣ ನಿಬಂಧನೆಯೊಂದನ್ನು ನನ್ನ ಮುಂದೆ ಇಟ್ಟಿದ್ದಾರೆ. ಆದರೂ ನಾನು ಒಪ್ಪಿಕೊಂಡು ವೇದಿಕೆ ಮೇಲೆ, ಮೈಕ್ ಮುಂದೆ ನಿಂತು ಮಾತನಾಡುವ  ಧೈರ್ಯ ಮಾಡುತ್ತಿರುವೆ. ಈಗ ನಾನು ನನ್ನ ಮನದಲ್ಲಿ ನನ್ನ ಮಡದಿಯನ್ನು ನೆನೆದು ಧೈರ್ಯ ತಂದುಕೊಳ್ಳುತ್ತೇನೆ. ಏಕೆಂದರೆ ನಾನು ಐದೇ ನಿಮಿಷದಲ್ಲಿ ತಯಾರಾಗಬೇಕೆಂದು  ಮಡದಿಗೆ ಹೇಳಿದಾಗ, ಯಾವದೇ ಉದ್ವೇಗಕ್ಕೊಳಗಾಗದೆ, ಮುಖದ ಮೇಲೆ ಯಾವುದೇ ಭಾವ ತೋರಿಸದೆ, ಸಹಜವಾಗಿಯೇ ಒಪ್ಪಿಕೊಂಡು ಒಳಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಗಾರಾಧನೆ-ತುಳುನಾಡ ವೈಶಿಷ್ಟ್ಯ: ಕಮಲಾ ಬೆಲಗೂರ್

ನಾಗಾರಾಧನೆ  ಒಂದು ವಿಶಿಷ್ಟ ಆಚರಣೆ. ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಋಗ್ವೇದದಲ್ಲಿಯೂ ಈ ಬಗ್ಗೆ ಪ್ರಸ್ತಾಪವುಂಟು. ಭಾರತದೆಲ್ಲೆಡೆ ನಾಗಪೂಜೆಗೆ ಮಹತ್ವ ಇರುವುದಾದರೂ ತುಳುನಾಡ ಸೀಮೆಯಲ್ಲಿ ನಾಗಮಂಡಲ ಪೂಜೆಗೆ ವಿಶೇಷ ಮಹತ್ವ. ಪುರಾಣದಲ್ಲಿ ಒಂದು ಕತೆಯಿದೆ. ಗರುಡನಿಗೂ ವಾಸುಕಿಗೂ ಬದ್ದ ಧ್ವೇಷ. ಗರುಡನಿಗೆ ಹೆದರಿ ವಾಸುಕಿ ಗುಹೆಯಲ್ಲಿ ಅಡಗಿ ಕುಳಿತು ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಆಗ ಶಿವನು ವಾಸುಕಿಗೆ ಅಭಯ ಹಸ್ತವನ್ನಿತ್ತು ತನ್ನ ಮಗನಾದ ಸುಬ್ರಮಣ್ಯನು ದುಷ್ಟ ನಿಗ್ರಹಕ್ಕಾಗಿ ಹುಟ್ಟಿ ಬರುವನೆಂದು, ಅವನ ಒಂದಂಶ ವಾಸುಕಿಯೊಂದಿಗೆ ಸೇರಿದಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ಬಸವರಾಜ ಹೂಗಾರ್, ರಾಘವ್ ಲಾಲಗುಳಿ, ಉಷಾಲತಾ

ಜೋಗಿ ಜಂಗಮನ ಹಾದಿ  ಅಲ್ಲಿ ಕಂಡಾರೆಂದು ಇಲ್ಲಿ ಕಂಡಾರೆಂದು  ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಸುತ್ತೇ ಸುತ್ತತಾನ ಮನುಷ್ಯರ ಹುಡುಕುವ ಮನುಷ್ಯ ಸುಡು ಬಿಸಿಲು ಉರಿಪಾದ ಕವ್ ನೆರಳು ಕರೆಬಳಗ ಕರುಳ ಬಳ್ಳಿಯ ಕಥೆಗೆ  ನೂರು ನಂಟು ಹೊಂಟನವ ಕಂಬಳಿಯ ಕೊಡವಿ ಹುಚ್ಚು ಹುಚ್ಚಿನ ಹಾಂಗ ಗಿಡ ತೊಗಟಿ ಬಳ್ಳಿ ಕಟ್ಟ್ಟಿ ಮನಸ ಮುಂದಿನೂರಿನ ಹಾದಿ  ಊರು ಮುಟ್ಟುವ ದಾರಿ. ಬಗಲ ಜೋಳಿಗೆ ಬಡಗಿ ಅಂದದ್ದು ಎಲ್ಲ ಖರೆ, ಕಟ್ಟಿ ಕೆಡಹುವ ಮನೆ ಮನಸು ಕಟ್ಟಿರೊ ಮೊದಲು ಮನಸು ಕಟ್ಟಿರೊ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೈಸೂರು ಹುಸೇನಿಯವರ ಪೇಪರ್ ಕಲಾಕೃತಿಗಳು

ಕಲಾವಿದ ಎಸ್.ಎಫ್. ಹುಸೇನಿ ಅವರು ಕಲಾವಲಯದಲ್ಲಿ ಮೈಸೂರು ಹುಸೇನಿ ಎಂದೇ ಚಿರಪರಿಚಿತರು. ತಂದೆ ಸಯ್ಯದ್ ಫೀರ್, ತಾಯಿ ಜೀನಾತ್‌ವುನ್ನಿಸಾ ಬೀ ರವರ ಮಗನಾಗಿ ಮಂಡ್ಯಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರಂನಲ್ಲಿ ಜನಿಸಿದ ಇವರು ಬಾಲ್ಯದ ದಿನಗಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತರಾಗಿ ಕಲೆಯಲ್ಲಿಯೇ ಜೀವನ ರೂಪಿಸುವಂತಾಯಿತು. ಇವರು ಮೈಸೂರಿನ ವೈಜಯಂತಿ ಚಿತ್ರಕಲಾ ಶಾಲೆಯಲ್ಲಿ ಪೈನ್ ಆರ್ಟ್ ಡಿಪ್ಲೊಮ ಮತ್ತು ಆರ್ಟ್‌ಮಾಸ್ಟರ್ ಶಿಕ್ಷಣ ಪಡೆದು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಚಿತ್ರಕಲೆಯಲ್ಲಿ ಬಿ.ಎಫ್.ಎ. ಪದವಿಯನ್ನು ಪಡೆದಿದ್ದಾರೆ.  ಅವರ ವಿಶಿಷ್ಟ ಬಗೆಯ ಕಾಗದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ