ಕೆಂಗುಲಾಬಿ (ಭಾಗ 6): ಹನುಮಂತ ಹಾಲಿಗೇರಿ

[ಇಲ್ಲಿಯವರೆಗೆ…] ಈ ಎಲ್ಲ ವಿವರಗಳನ್ನು ಸವಿವರವಾಗಿ ಬರೆದುಕೊಂಡು ನಾನು ರಾಜನ್ ಸರ್ ಚೇಂಬರಿಗೆ ಹೋದೆ. ನನ್ನ ವರದಿ ಮೇಲೆ ಸುಮ್ಮನೆ ಒಮ್ಮೆ ಕಣ್ಣಾಡಿಸಿದ ಅವರು ನನ್ನ ಕಡೆ ಒಂದು ಮೆಚ್ಚುಗೆಯ ನೋಟ ಬೀರಿ, ’ವೆರಿ ಗುಡ್ ಮಲ್ಲೇಶಿ. ಆದ್ರೆ, ನೀನು ಈ ದಂದೆಯ ಬಗ್ಗೆ ಇನ್ನಷ್ಟು ತಿಳಕೊಬೇಕಾದರೆ ಒಂದಿಷ್ಟು ದಂದೆಯಲ್ಲಿದ್ದ ಮಹಿಳೆಯರನ್ನು ಮಾತಾಡಿಸಬೇಕಿತ್ತು’ ಎಂದು ನನ್ನ ಕಣ್ಣುಗಳನ್ನು ಕೆಣಕಿದರು. ’ನಾನು ಮಾತಾಡಿಸಬೇಕೆಂದೇ ಆ ನಡು ವಯಸ್ಸಿನವಳ ಹಿಂದ್ಹಿಂದೆ ಹೋಗಿ ಆಟೊ ಹತ್ತಿದ್ದು ಸರ್. ಆದ್ರೆ, ನ್ನನ್ನು ಅವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಉಯ್ಯಾಲೆ:ವಾಸುಕಿ ರಾಘವನ್ ಅಂಕಣ

ತುಂಬಾ ದಿನಗಳಿಂದ ಈ ಚಿತ್ರ ನೋಡಬೇಕು ಅನ್ಕೊಂಡಿದ್ದೆ. ಆದರೆ ಅದಕ್ಕೆ ಸಮಯ ಸಿಕ್ಕಿದ್ದು ಹೋದ ವಾರ. ಸಿನಿಮಾದ ಹೆಸರು “ಉಯ್ಯಾಲೆ”. 1964ರಲ್ಲಿ ಬಿಡುಗಡೆಯಾದ ರಾಜಕುಮಾರ್, ಕಲ್ಪನಾ, ಅಶ್ವಥ್ ಅಭಿನಯದ ಈ ಚಿತ್ರದ ನಿರ್ದೇಶಕರು ಎನ್.ಲಕ್ಷ್ಮೀನಾರಾಯಣ. ಆಗಿನ ಕಾಲಕ್ಕಂತೂ ಬಹಳ ವಿಭಿನ್ನವಾದ, ಬೋಲ್ಡ್ ಆದ ಕಥೆಯನ್ನು ಹೊಂದಿದ್ದರಿಂದ ಇದು ಕುತೂಹಲ ಹೆಚ್ಚಿಸಿತ್ತು.   ಅಶ್ವಥ್, ಕಲ್ಪನಾ ತಮ್ಮ ಮುದ್ದು ಮಗಳಿನೊಂದಿಗೆ ವಾಸಿಸುತ್ತಿರುವ ದಂಪತಿಗಳು. ಅಶ್ವಥ್ ಕಾಲೇಜ್ ಪ್ರೊಫೆಸರ್, ಸದಾ ಓದುವುದರಲ್ಲೇ ಮುಳುಗಿಹೋಗಿರುವ ಪುಸ್ತಕದ ಹುಳು. ಅವನಿಗೆ ಬೇರೆ ಇನ್ಯಾವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಳ್ಳಿಮೋಡದಲ್ಲಿ ಬೇಂದ್ರೆ ಭಾವಗೀತ: ಹೃದಯಶಿವ ಅಂಕಣ

  'ಬೆಂದ್ರೆ  ಬೇಂದ್ರೆ !'   ಅಂಬಿಕಾತನಯದತ್ತ  ಎನ್ನುವ  ಕಾವ್ಯನಾಮದಿಂದ  ಕನ್ನಡಮಣ್ಣಿನಲ್ಲಿ  ಹೆಮ್ಮರವಾಗಿ  ಬೆಳೆದು ನಿಂತಿರುವ  ದತ್ತಾತ್ರೇಯ  ರಾಮಚಂದ್ರ  ಬೇಂದ್ರೆಯವರು  ೧೮೮೯ರಲ್ಲಿ  ಧಾರವಾಡದಲ್ಲಿ  ಜನಿಸಿ ೧೯೮೧ ರಲ್ಲಿ  ನಿಧನರಾದ  ಕವಿಸಾಮ್ರಾಟ. ಉತ್ತರ  ಕರ್ನಾಟಕದ  ಜನಪದ,  ಗ್ರಾಮೀಣಭಾಷೆಯನ್ನು ತಮ್ಮ  ಕಾವ್ಯದಲ್ಲಿ  ತಂದು  ಕನ್ನಡಸಾಹಿತ್ಯವನ್ನು  ಶ್ರೀಮಂತಗೊಳಿಸಿದ  ವರಕವಿ  ಇವರು. ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದುಕೊಂಡು  ಸಾಹಿತ್ಯಕೃಷಿ  ಮಾಡಿದ  ಇವರು  ಕನ್ನಡದಷ್ಟೇ  ಮರಾಠಿ ಭಾಷೆಯಲ್ಲಿಯೂ  ಅಪಾರವಾದ ಪಾಂಡಿತ್ಯ  ಹೊಂದಿದ್ದರು.  ಮಹಾರಾಷ್ಟ್ರ  ಹಾಗೂ  ಉತ್ತರ ಕರ್ನಾಟಕದ  ಜನಜೀವನ  ಸಾಂಸ್ಕೃತಿಕ  ನೆಲೆಗಟ್ಟನ್ನು  ತೀರಾ  ಹತ್ತಿರದಿಂದ  ಬಲ್ಲವರಾಗಿದ್ದರು.   … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಣ್ಣು ನಡೆದುಬಂದ ಹಾದಿ: ಗಾಯತ್ರಿ ಸಚಿನ್ ಹೆಗಡೆ

‘ಸ್ತ್ರೀ’ ಎಂದರೆ ಅಷ್ಟೇ ಸಾಕೆ?  ಎಂಬ ಕವಿವಾಕ್ಯವನ್ನು ಓದುವಾಗ ಈ ಪದ ಎಲ್ಲಿಂದ ಶುರುವಾಗಿರಬಹುದು ಎಂಬ ಯೋಚನೆ ಬಂತು. ಬಹುಶಃ ಭೂಮಿಯ ಜನನದಿಂದಲೇ ಪ್ರಾರಂಭವಾಯ್ತೇನೋ!! ಅದಕ್ಕೇ ಭೂಮಿಯನ್ನು ತಾಯಿ ಅಂತ ಕರೆದದ್ದಿರಬಹುದು. ಭೂಮಿಯನ್ನು ಸ್ತ್ರೀಯಾಗಿಸಿದ್ದು ಅಥವಾ ಸ್ತ್ರೀಯನ್ನು ಭೂಮಿಗೆ ಹೋಲಿಸಿದ್ದು ಅವರ ಕ್ಷಮಾಗುಣ ಮತ್ತು ಸಹನೆಯ ಕಾರಣದಿಂದಲೇ.. ಎಲ್ಲವನ್ನೂ ಸಹಿಸುವ ಮತ್ತು ಕ್ಷಮಿಸುವ ಗುಣ ಹೆಣ್ಣಿಂದಲ್ಲದೇ ಬೇರೆಯವರಿಂದ ಸಾಧ್ಯವೇ!? ಸಹನೆಯನ್ನು ದೌರ್ಬಲ್ಯವೆಂದು  ತುಳಿದು ಮಿತಿ ಮೀರಿದರೆ ಒಂದು ಕಂಪನ ಸಾಕು ಅವಳ ಶಕ್ತಿ ಅರಿವಾಗಲು ಇಂಥ ‘ಹೆಣ್ಣು’ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೀಗೊಂದು ರಾತ್ರಿ:ಪ್ರಶಸ್ತಿ ಅಂಕಣದಲ್ಲಿ ಸಣ್ಣಕಥೆ

ಹೀಗೇ ಒಂದು ರಾತ್ರಿ. ಬೆಂಕಿಪಟ್ಟಣದಂತಹ ಬಾಡಿಗೆ ರೂಮಿನಲ್ಲೂ ಸುಖನಿದ್ರೆಯಲ್ಲಿದ್ದ ಬ್ಯಾಚುಲರ್ ಗುಂಡನಿಗೆ ಯಾರೋ ಬಾಗಿಲು ಕೆರೆದಂತಾಗಿ ದಡಕ್ಕನೆ ಎಚ್ಚರವಾಯಿತು. ಪಕ್ಕನೆ ಪಕ್ಕಕ್ಕಿದ್ದ ಲೈಟು ಹಾಕಿದರೂ ಅದು ಹತ್ತಲಿಲ್ಲ.  ಎಷ್ಟೆಷ್ಟೊತ್ತಿಗೋ ಕರೆಂಟು ತೆಗಿಯೋ ಕೆಯಿಬಿಯವರಿಗೆ ಬಯ್ಯುತ್ತಾ ಯಾರು ಅಂದ. ಶಬ್ದವಿಲ್ಲ. ಯಾರಿರಬಹುದು ಈ ನಡು ರಾತ್ರಿಯಲ್ಲಿ ಅಂದುಕೊಂಡ. ನಡುರಾತ್ರಿಯೇ ? ಗೊತ್ತಿಲ್ಲ. ಕಾಲೇಜಿಂದ ಸಂಜೆ ಸುಸ್ತಾಗಿ ಬಂದವನಿಗೆ ಹಾಗೇ ಜೊಂಪು ಹತ್ತಿತ್ತು. ಮೈಮರೆತು ಹಾಗೆಯೇ ಎಷ್ಟೊತ್ತು ಮಲಗಿದ್ದನೋ ಗೊತ್ತಿಲ್ಲ. ಈ ಬಾಗಿಲು ಕೆರೆಯೋ ಶಬ್ದದಿಂದಲೇ ದಡಕ್ಕನೆ ಎಚ್ಚರವಾಗಿ ಒಮ್ಮೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೀವವಿರೋಧಿ ಕೀಟನಾಶಕಗಳು:ಅಖಿಲೇಶ್ ಚಿಪ್ಪಳಿ ಅಂಕಣ

ಭದ್ರಾವತಿ ಹುಡುಗಿ ಸಾಗರದ ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಳು. ಪರೀಕ್ಷೆ ಬರೆದು ಫಲಿತಾಂಶ ಬಂದಾಗ ಫೇಲ್ ಆಗಿದ್ದಳು. ಸೀದಾ ಕೀಟನಾಶಕಗಳನ್ನು ಮಾರುವ ಅಂಗಡಿಗೆ ಹೋಗಿ ಫಾಲಿಡಾಲ್ ಬಾಟಲಿ ಕೊಡಿ ಎಂದಳು. ಅಂಗಡಿಯವ ಏನು ಎತ್ತ ವಿಚಾರಿಸದೆ ದುಡ್ಡು ಇಸಿದುಕೊಂಡು ಫಾಲಿಡಾಲ್ ಬಾಟಲಿಯನ್ನು ಕೊಟ್ಟ. ನೆಹರು ಮೈದಾನಕ್ಕೆ ಬಂದವಳು ಯಾರಿಗೂ ಕಾಣಬಾರದೆಂದು ಕೊಡೆ ಬಿಡಿಸಿಕೊಂಡು, ಬಾಟಲಿಯ ಮುಚ್ಚಳವನ್ನು ತೆಗೆದು ಗಟ-ಗಟ ಕುಡಿದೇ ಬಿಟ್ಟಳು. ೫ ನಿಮಿಷದಲ್ಲಿ ಮೈದಾನದಲ್ಲಿ ಬಿದ್ದು ಹೊರಳಾಡುತ್ತಿದ್ದಳು. ಆಟೋದವನು ನೋಡಿದವನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಉಪನ್ಯಾಸಕರ ಅಮೂಲ್ಯ ಸಸ್ಯ ಸಂಪತ್ತ ವನ: ಹನಿಯೂರು ಚಂದ್ರೇಗೌಡ

ನಮ್ಮ ನಡುವೆ ಎರಡು ಮಾದರಿಯ ಜನರಿರುತ್ತಾರೆ; ಒಂದು ಮಾದರಿ, ಕೆಲಸ ಮಾಡುವುದರ ಬದಲು ಕೇವಲ ಉಪದೇಶಿಸುವವರು;  ಮತ್ತಿನ್ನೊಂದು ಮಾದರಿ, ಉಪದೇಶಿಸುವುದಷ್ಟೇ ಅಲ್ಲ ಆ ಕೆಲಸವನ್ನು ಸ್ವತಃ ಮಾಡಿ ತೋರಿಸುವವರು. ಮೊದಲನೆ ಸಾಲಿನಲ್ಲಿ ನಿಲ್ಲಬಲ್ಲವರು ಅನೇಕರು ಅನಾಯಾಸವಾಗಿ ನಮಗೆ ದೊರಕುತ್ತಾರೆ. ಆದರೆ, ಎರಡನೆಯ ಮಾದರಿಯ ಜನರು ಸಿಗುವುದು ಬಹಳ ವಿರಳವೇ.  ಅಂಥ ವಿರಳಾತಿ ವಿರಳ ವ್ಯಕ್ತಿಗಳಲ್ಲಿ ರಾಮನಗರ ಜಿಲ್ಲೆ, ಗೊಂಬೆನಗರ ಚನ್ನಪಟ್ಟಣ ತಾಲೂಕಿನ ಎಲೆಭೂಹಳ್ಳಿಯ, ವೃತ್ತಿಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಭೂಹಳ್ಳಿ ಪುಟ್ಟಸ್ವಾಮಿ ಒಬ್ಬರು.  ಇವರು ಪ್ರವೃತ್ತಿಯಲ್ಲಿ ಕವಿ, ಸಾಹಿತಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾಟಕಕಾರರಾಗಿ ಕುವೆಂಪು (ಭಾಗ-15) : ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯ ರಂಗಾಸಕ್ತ ಓದುಗಪ್ರಭುಗಳೇ, ನಾವೀಗ ಮಹಾಕವಿ ಷೇಕ್ಸ್ ಪಿಯರ್‍ನ ‘ಹ್ಯಾಮ್ಲೆಟ್’ ನಾಟಕಕೃತಿಯನ್ನು ಯುಗದಕವಿ ಕುವೆಂಪುರವರು ಕನ್ನಡದಲ್ಲಿ ರೂಪಾಂತರವಾಗಿಸುವುದರೊಂದಿಗೆ ಸುದೀರ್ಘವಾಗಿರುವ ರುದ್ರರಸ ಪ್ರಧಾನ ‘ರಕ್ತಾಕ್ಷಿ’ ರಂಗಕೃತಿಯ ಕುರಿತು ಹಿಂದಿನ ಸಂಚಿಕೆಯಿಂದ ನೋಡುತ್ತಿದ್ದೇವೆ. ಅದರ ಮುಂದುವರಿದ ಕಥಾನಕ ನಿಮಗಾಗಿ…   ಸೆರೆಮನೆಯಲ್ಲಿದ್ದ ಬಸವಯ್ಯ ಮತ್ತು ಲಿಂಗಣ್ಣನವರನ್ನು ಬಿಡುಗಡೆ ಮಾಡಲು ಸನ್ಯಾಸಿಯ ಮಾರ್ಗದರ್ಶನದಲ್ಲಿ ಶಿವಯ್ಯ ಮತ್ತು ಹೊನ್ನಯ್ಯ ಯಶಸ್ವಿಯಾಗುತ್ತಾರೆ. ನಂತರ ಅವರನ್ನು ಕಂಸಿ ಮಾರ್ಗವಾಗಿ ಶಿವಮೊಗ್ಗೆಯ ಹತ್ತಿರ ತುಂಗಾತೀರದಲ್ಲಿರುವ ಹೈದರಾಲಿಯ ಬಿಡಾರಕ್ಕೆ ಕಳುಹಿಸುವುದರೊಂದಿಗೆ ತೀಕ್ಷ್ಣಮತಿಯೂ, ಕುಶಲಮತಿಯೂ ಆದ ಸನ್ಯಾಸಿಯೂ ಬಿಡುಗಡೆಯ ವಿಷಯದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಂಪಕಮಾಲಾ…!: ಸುಮನ್ ದೇಸಾಯಿ ಬರೆವ ನಗೆ ಅಂಕಣ

ಆವತ್ತ ಆಫೀಸಿಗೆ ಸೂಟಿ ಇತ್ತು. ಎಲ್ಲಾ ಕೆಲಸಾ ಮುಗಿಸಿ ಆರಾಮಾಗಿ ಟಿವ್ಹಿಯೊಳಗ ‘ಅಡಿಗೆ ಅರಮನಿ’ ನೊಡ್ಕೋತ ಕೂತಿದ್ದೆ. ಗಂಗಾವತಿ ಪ್ರಾಣೇಶ ಅವರು ತಮ್ಮ ಹಾಸ್ಯ ಪ್ರಹಸನದೊಳಗ ಹೇಳೋಹಂಗ ಇವರು ಮಾಡಿ ತೋರೆಸೋ ಅಡಗಿಗಿಂತಾ ಅವರ ರೇಷ್ಮಿ ಸೀರಿ, ಹಾಕ್ಕೊಂಡಿದ ದಾಗಿನಾ, ಮಾಡ್ಕೊಂಡ ಮೇಕಪ್, ಹೇರ್ ಸ್ಟೈಲ್ ನ ಮಸಾಲಿಕಿಂತಾ ಖಡಕ ಇದ್ವು. ಯಾವದೋ ಒಂದು ಸೊಪ್ಪಿನ ಸೂಪ್ ಮಾಡೋದ ಹೆಂಗಂತ ಹೇಳಿಕೊಡ್ಲಿಕತ್ತಿದ್ಲು. ಆಕಿ ಖುಲ್ಲಾ ಬಿಟಗೊಂಡ ಕೂದಲಾ ಎಲ್ಲೆ ಆಕಿ ಮಾಡೊ ಸೂಪಿನ ರುಚಿ ನೋಡತಾವೊ ಅನಿಸ್ತಿತ್ತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಾಪ (ಭಾಗ-2):ಪಾರ್ಥಸಾರಥಿ ಎನ್.

[ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ] ಲಕ್ಷ್ಮೀಶನ ಮುಖ ಸ್ವಲ್ಪ ಗಂಭೀರವಾಯಿತು. ಅವನು ಏನು ಉತ್ತರ ಕೊಡುತ್ತಿದ್ದನೋ, ಅಷ್ಟರಲ್ಲಿ ಅವನ ತಂದೆ ಶ್ರೀನಿವಾಸ  ಬಂದನು.   ಒಳಗೆ ಬರುವಾಗಲೇ, "ದಯಮಾಡಿ ಕ್ಷಮಿಸಿ, ಬೇಗಬರುವೆ ಅಂತ ಹೋಗಿ ನಿಮ್ಮನ್ನು ಕಾಯಿಸಿದೆ, ನಿಮಗೆ ತೊಂದರೆಯಾಯಿತು ಅನ್ನಿಸುತ್ತೆ" ಅಂದವನು ಅಲ್ಲೆ ಕುಳಿತಿದ್ದ ಅವನ ಮಗನತ್ತ, ಅವನ ಅಮ್ಮನತ್ತ, ನನ್ನತ್ತ ನೋಡಿ, "ಇವನ ಹತ್ತಿರ ಮಾತನಾಡುತ್ತಿದ್ದಿರಾ, ನಿಮಗೆ ಏನು ಬೇಸರವಾಗಲಿಲ್ಲ ತಾನೆ?" ಅಂದನು ಆತಂಕದಿಂದ. ನಾನು ನಕ್ಕುಬಿಟ್ಟೆ. "ಬನ್ನಿ ಕುಳಿತುಕೊಳ್ಳಿ, ಯಾವ ಆತಂಕವು ಬೇಡ, ನನಗೆ ಯಾವ ಬೇಸರವು ಇಲ್ಲ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜ್ಞಾನದ ಹರಿವಿನ ಸ್ಥಿತಿಗತಿ. ಏನು? ಎತ್ತ?: ರಕ್ಷಿತ್ ಶೆಟ್ಟಿ

ಒಂದು ಕಾಲವಿತ್ತು. ಬರಹಗಾರರು ಹಗಲಿರುಳೆನ್ನದೇ ಬರೆದು ತಮ್ಮ ಕೃತಿಗಳನ್ನು ಮುದ್ರಿಸಿ ಉರಿ ಮಳೆ ಚಳಿಯಲ್ಲಿಯೂ ಅಲೆದು ಪ್ರತಿಯನ್ನು ಮಾರುತ್ತಿದ್ದರು. ನಾಡು ನುಡಿಗಾಗಿ ಭಾಷೆಯ ಹಲವು ಮಗ್ಗುಲಲ್ಲಿ ಸಾಹಿತ್ಯ ಕೃಷಿ ಮಾಡಿ ಓದುಗರೊಡನೆ ಭಾವನೆಗಳನ್ನು ಬೆಸೆದುಕೊಳ್ಳುತ್ತಿದ್ದ ಸಮಯವದು. ಇಂಗ್ಲೀಷಿನ ಬರಹಗಾರರಿಗೆ ವಿಶೇಷ ಸ್ಕೋಪ್ ಸಿಗುತ್ತಿದ್ದರೂ ಸ್ವಭಾಷೆಯನ್ನು ಕೃತಿಗಳಲ್ಲಿ ಮೈತಾಳಿಸಿಕೊಂಡು ಭಾಷಾ ಸೇವೆ ಮಾಡಿರವುದು ಕೇವಲ ಕನ್ನಡಕ್ಕಷ್ಟೇ ಸೀಮಿತವಲ್ಲದ್ದು. ಅಂದಿನ ಓದು :- ಕೃತಿಯೊಂದನ್ನು ಮನೆಯವರೆಲ್ಲರೂ ಕಿತ್ತಾಡಿಕೊಂಡು ಆದಷ್ಟು ಬೇಗ ಓದುತ್ತಿದ್ದ ಕಾಲವಿತ್ತು. ಕಾಲ ಸಂದರ್ಭವೂ ಪೂರಕವಾಗಿದ್ದುದು ಬೇರೆ ಮಾತು. ವರ್ಷದಲ್ಲಿ ದುಡಿಯೋದನ್ನ ತಿಂಗಳಲ್ಲಿ ದುಡಿಯೋ ಧಾವಂತ ಆಗಿರಲಿಲ್ಲ. ಅನಕ್ಷರತೆಯಿಂದ ಅಕ್ಷರಸ್ಥತೆಯೆಡೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಿಶು ಗೀತೆ ಮತ್ತು ಚಿತ್ರ

  ನಿಖಿಲ್ ೩ ನೇ ತರಗತಿ ಜಿ ಪಿ ಎಚ್ ಎಸ್ ನಂಜೈಗರಹಳ್ಳಿ     ಕಿಟ್ಟು ಪುಟ್ಟು   ಕಿಟ್ಟು ಪುಟ್ಟು ಇಬ್ಬರು ತುಂಬಾ ಒಳ್ಳೆ ಗೆಳೆಯರು ಅಕ್ಕ-ಪಕ್ಕದ ಮನೆಯ ಹುಡುಗರು   ಒಂದೇ ಊರು ಒಂದೇ ಶಾಲೆ ಅಣ್ಣ-ತಮ್ಮನಂತೆ ಇವರು ತುಂಬಾ ಒಳ್ಳೇ ಹುಡುಗರು   ಕಿಟ್ಟು ಅಮ್ಮ ತಿಂಡಿ ಕೊಡಲು ಪುಟ್ಟು ಜೊತೆಗೆ ಹಂಚಿ ತಿನುವ ಪುಟ್ಟು ಕೂಡ ಅಪ್ಪ ತರುವ ಪೇಟೆ ತಿಂಡಿ ಹಂಚಿ ತಿನುವ ಕಿಟ್ಟು ಜೊತೆಯಲೇ..   ಜೊತೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ನೇಹ ಎಂಬ ನಂದಾದೀಪ: ಮಂಜು ಎಂ. ದೊಡ್ಡಮನಿ

  ಅಲ್ಲಿ ಎಲ್ಲಿಯೂ ಎಳ್ಳಷ್ಟು ನಿಮ್ಮ ತಪ್ಪು ಇರುವುದಿಲ್ಲ, ಇದ್ದರೂ ನೀವು ಬೇಕೆಂದು ತಪ್ಪು ಮಾಡಿರುವುದಿಲ್ಲ ನಿಮ್ಮ ಗಮನಕ್ಕೆ ಬಾರದೆ ಆದ ಸಣ್ಣದೊಂದು ತಪ್ಪನ್ನು ಅವರು ದೊಡ್ಡದಾಗಿಸಿ ನಿಮ್ಮದೇ ತಪ್ಪು ಎನ್ನುವಂತೆ ತಮ್ಮನ್ನು ತಾವು  ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ನಿಮ್ಮೆದುರು ನಿಂತು ಪ್ರತಿಪಾದಿತ್ತಾರೆ, ಇಲ್ಲ ಸಲ್ಲದ ಆರೋಪಗಳನ್ನು ನಿಮ್ಮ ಮೇಲೆ ಹೊರಿಸುತ್ತಾರೆ, ಕಿಂಚಿಂತು ಬೆಲೆ ಕೊಡದೆ ಫುಲ್ ಸ್ಟಾಪ್ ಇಲ್ಲದೆ ಬಡ ಬಡ ಮಾತಾಡಿ, ಬಾಯಿಗೆ ಬಂದಂತೆ ಉವಾಚಿಸುತ್ತಾರೆ, ನೀವು ಎಷ್ಟೇ ಕಾರಣಕೊಟ್ಟರು ಏನೇ ಹೇಳಿದರು ಕೊನೆಗೆ ಸ್ವಾಭಿಮಾನ ಮರೆತು ಮಾಡದ ತಪ್ಪಿಗೆ ಕ್ಷಮೆ ಕೇಳಿದರೂ  ಅವರು ನಿಮ್ಮ  ಯಾವುದೇ justification ಅಥವಾ reason … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರೌಡಿ ದನ: ಅಖಿಲೇಶ್ ಚಿಪ್ಪಳಿ ಅಂಕಣ

ಸಾಗರದ ವಿನೋಬ ನಗರದ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬದ ಯಜಮಾನನ ಹೆಸರು ಸೂರಪ್ಪ. ಮನೆ, ಮನೆ ಮುಂದೆ ೧೦ ಅಡಿ ಅಗಲ ೧೦ ಉದ್ದದ ಚಿಕ್ಕದಾದ ಒಂದು ದಿನಸಿ ಅಂಗಡಿ. ಜೀವನೋಪಾಯಕ್ಕೆ. ಹಳೆಯದಾದ ಮನೆಯಾದರೂ ಹಿಂಭಾಗದಲ್ಲಿ ಸಾಕಷ್ಟು ಜಾಗವಿತ್ತು. ಅಪ್ಪನ ಕಾಲದಲ್ಲಿ ಕಟ್ಟಿದ ಮನೆಯಾದ್ದರಿಂದ, ಮುಚ್ಚಿಗೆ, ತೊಲೆ, ದೊಡ್ಡ-ದೊಡ್ಡ ಚಿತ್ತಾರದ ಕಂಬಗಳು, ನಾಗಂದಿಗೆ, ಕಪಾಟು ಎಲ್ಲವಕ್ಕೂ ಮರಗಳ ಬಳಕೆಯಾಗಿದೆ. ಹೀಗೆ ಸಾಗಿ ಹಿಂದುಗಡೆ ಹತ್ತು ಕಾಲ್ನಡೆಗಳನ್ನು ಕಟ್ಟಿಕೊಳ್ಳಲು ಕೊಟ್ಟಿಗೆಯು ಇದೆ. ಸೂರಪ್ಪನವರ ತಂದೆಯ ಕಾಲದಲ್ಲಿ ಕೊಟ್ಟಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಗುಲಾಬಿ (ಭಾಗ 5): ಹನುಮಂತ ಹಾಲಿಗೇರಿ

ಹುಬ್ಬಳ್ಳಿಯೊಳಗ ಮಂಡೇ ಬಜಾರಕ ದೊಡ್ಡ ಹೆಸರು. ಅವತ್ತು ಸೋಮವಾರವಾದ್ದರಿಂದ ಮಂಡೇ ಬಜಾರ್‌ನತ್ತ ಹೆಜ್ಜೆ ಬೆಳೆಸಿದೆ. ಇಲ್ಲಿ ೧೦ ರೂ.ಗಳಿಗೆ ಏನಿಲ್ಲ, ಏನುಂಟು. ಒಂದೊಳ್ಳೆಯ ಅಂಗಿ, ಹವಾಯಿ ಚಪ್ಪಲಿ, ಲುಂಗಿ, ಟವೆಲ್ಲು, ಒಳ ಉಡುಪು, ಬಾಂಡೆ ಸಾಮಾನುಗಳು ಏನೆಲ್ಲವನ್ನು ಖರೀದಿಸಬಹುದು. ಆದರೆ ಇವೆಲ್ಲ ಸೆಕೆಂಡ್ ಹ್ಯಾಂಡ್‌ಗಳು, ನಿಜವಾಗಿ ಹೇಳಬೇಕೆಂದರೆ ಜಾತ್ಯತೀತತೆ ಆಚರಣೆಗೆ ಮಂಡೆ ಬಜಾರ್ ಒಂದು ಸಂಕೇತವಿದ್ದಂತೆ. ಇಲ್ಲಿನ ಒಳ ಉಡುಪುಗಳನ್ನು ಮೊದಲ್ಯಾರೋ ಧರಿಸಿರತಾರೆ. ಈಗ ಅದು ಮತ್ಯಾರ ಮೈಗೋ ಅದು ಅಂಟಿಕೊಂಡು ಅವರ ಬೆವರು ವಾಸನೆಗೆ ಹೊಂದಿಕೊಳ್ಳುತ್ತದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶಾಪ (ಭಾಗ-೧):ಪಾರ್ಥಸಾರಥಿ ಎನ್

ನನಗೆ ಆ ಮನೆಗೆ ಬರುವ ಅಗತ್ಯವೇನಿರಲಿಲ್ಲ. ಊರಹೊರಗಿನ ದುರ್ಗಾ ದೇವಾಲಯದಲ್ಲಿ ಕುಳಿತಿದ್ದ ನನ್ನನ್ನು ಅವನಾಗಿಯೇ ಮಾತನಾಡಿಸಿದ. ಅವನ ಹೆಸರು ಶ್ರೀನಿವಾಸ. "ಎಲ್ಲಿಂದ ಬರುತ್ತಿದ್ದೀರಿ?" ಅವನು ನನ್ನನ್ನು ಕುತೂಹಲದಿಂದ ಪ್ರಶ್ನಿಸಿದ. ಪ್ರಶ್ನೆ ಸರಿಯಾಗಿಯೆ ಇತ್ತು, ಹಾಗಾಗಿ ಉತ್ತರಿಸಿದೆ "ಉತ್ತರದ ಹರಿದ್ವಾರದಿಂದ ಹೊರಟವನು ಹಾಗೆಯೆ ಸುತ್ತುತ್ತ ಬಂದೆ, ಈಗ ನಿಮ್ಮ ಊರಿಗೆ ಬಂದಿರುವೆ". ಮತ್ತೆ ಕುತೂಹಲದಿಂದ ಪ್ರಶ್ನಿಸಿದ, "ರಾತ್ರಿ ಉಳಿಯುವ ಏರ್ಪಾಡು ಹೇಗೆ, ಎಲ್ಲಿ ಇಳಿದುಕೊಳ್ಳುವಿರಿ?" ನನಗೆ ಆ ರೀತಿಯ ಪ್ರಶ್ನೆಗಳು ಕಾಡುತ್ತಲೆ ಇರಲಿಲ್ಲ. ಇರುವೆನು ಎನ್ನುವಾಗ ರಾತ್ರಿಯೇನು, ಹಗಲೇನು, ಮುಂದಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾನ್-ವೆಜ್ ಬರ್ಥಡೇ ಪಾರ್ಟಿ:ಸುಮನ್ ದೇಸಾಯಿ ಅಂಕಣ

ನನ್ನ ನಾದಿನಿ ರುಕ್ಕುನ ಮಗನ್ನ ಹುಟ್ಟಿದ ಹಬ್ಬದ ಪಾರ್ಟಿಗೆ ಹೋಗಿದ್ದೆ. ಮನಿ ಟೆರೇಸ್ ಮ್ಯಾಲೆನ ಎಲ್ಲಾ ಅರೇಂಜ್ಮೆಂಟ್ ಮಾಡಿದ್ಲು. ಎಲ್ಲಾ ಕಡೆ ಲೈಟಿನ ಸರಾ ಹಾಕಿದ್ರು. ಅದ್ರ ಟೆರೇಸ್ ತುಂಬ ಅಲ್ಲಲ್ಲೇ ಅಲಂಕಾರಕ್ಕಂತ ಪ್ರಾಣಿಗೋಳ ಗೊಂಬಿ ನಿಲ್ಲಿಸಿದ್ರು. ನೋಡಿದ್ರ ಯಾವದೋ ಝೂ ಒಳಗ ಬಂಧಂಗ ಅನಿಸ್ತಿತ್ತು. ಯಾಕೊ ವಿಚಿತ್ರ ಅನಿಸಿದ್ರು, ಸಣ್ಣ ಹುಡುಗರಿಗೆ ಪ್ರಾಣಿ ಅಂದ್ರ ಭಾಳ ಸೇರತಾವ ಅದಕ್ಕ ಇರಬಹುದು ಅಂತ ಅನ್ಕೊಂಡೆ. ಯಾಕಂದ್ರ ನನ್ನ ಮಗಾನೂ ಪ್ರಾಣಿ ಪ್ರಿಯನ ಇದ್ದಾನ. ಸಣ್ಣಾಂವ ಇದ್ದಾಗ ನಮ್ಮತ್ತಿಯವರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಂಚಣ್ಣನ ತಿಥಿಯೂ… ವಿ.ಸಿ.ಪಿ. ಕಥೆಯೂ…! :ಹೃದಯಶಿವ ಅಂಕಣ

"ಬತ್ತು… ಬತ್ತು… ಬತ್ತು… ಇನ್ನೇನ್ ಬಂದೇ ಬುಡ್ತು… ಅಗೋ ಬತ್ತಾದೆ… ಸದ್ದು ಕೇಳ್ತಾದೆ… ಅಲ್ನೋಡು ಧೂಳು ಏಳ್ತಾದೆ… ಬತ್ತು… ಬತ್ತು.. ಬಂದೇsss ಬುಡ್ತು !  ಆಕು  ಪಾಕು  ವೆತ್ತೆಲೆ  ಪಾಕು  ಅಮಾ  ಡುಮಾಡೇ….  ಅಸ್ಕಿಣಕಣ  ಪಿಸ್ಕಿಣಕಣ ಅಮಾ  ಡುಮಾಡೇ!!"  ಎಂದು  ಎರಡೋ, ಮೂರೋ  ಓದುವ  ವಯಸ್ಸಿನಲ್ಲಿದ್ದ  ನಾವೆಲ್ಲ  ಖುಷಿಯಿಂದ ಸಂಭ್ರಮಿಸುತ್ತಿದ್ದಂತೆಯೇ  ಅತೀ  ಕೆಟ್ಟ  ಮಣ್ಣರೋಡಿನಲ್ಲಿ  ತುಂಬಿದ ಬಿಮ್ಮನ್ಷೆಯಂತೆ  ಏದುಸಿರು  ಬಿಡುತ್ತಾ  ನಮ್ಮೂರಿಗಿದ್ದ  'ಮೂರು  ಗಂಟೆ  ಬಸ್ಸು'  ಮೂರೂವರೆಗೋ, ಮೂರೂ ಮುಕ್ಕಾಲಿಗೋ  ನೇರವಾಗಿ ನಾವಿದ್ದಲ್ಲಿಗೇ  ಬಂದು ನಿಂತು ದೂರದಿಂದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ