ಪ್ಲಾಸ್ಟಿಕ್‌ನ ಛಾಯೆ: ಪರಿಸರ ಮತ್ತು ಆರೋಗ್ಯದ ಮೇಲಿನ ದುಷ್ಪರಿಣಾಮಗಳು: ಅಶ್ವಜೀತ ದಂಡಿನ

ಈ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗಳಿಗೆ ಪ್ರಕೃತಿಯು ನೈಸರ್ಗಿಕವಾಗಿ ಬೇಕು ಬೇಡಗಳನ್ನೆಲ್ಲಾ ಪೂರೈಸುತ್ತಾ ಬಂದಿದೆ. ಆದಿ ಕಾಲದಿಂದಲೂ ಮಾನವ ಪ್ರಕೃತಿಯಲ್ಲಿ ದೊರೆಯುವ ನೈಸರ್ಗಿಕ ವಸ್ತುಗಳನ್ನೇ ಬಳಸಿಕೊಳ್ಳುತ್ತಾ ತನ್ನ ಬೇಕು ಬೇಡಗಳನ್ನು ಪೂರೈಸಿಕೊಂಡು ಆರೋಗ್ಯದಿಂದ ಸುಖವಾಗಿ ಜೀವನ ಸಾಗಿಸುತ್ತ ಬಂದಿದ. ಮನುಷ್ಯನಿಗೆ ಬುದ್ಧಿಶಕ್ತಿ ಬೆಳೆದಂತೆಲ್ಲ ನೈಸರ್ಗಿಕ ವಸ್ತುಗಳೊಂದಿಗೆ ಕೃತಕ ವಸ್ತುಗಳನ್ನು ತಯಾರಿಸಿ ಬಳಸಲು ಪ್ರಾರಂಭಿಸಿದನು. ಅವುಗಳಲ್ಲಿ ಪ್ಲಾಸ್ಟಿಕ್ ಸಹ ಒಂದು. ಕ್ರಿ.ಶ ೧೮೬೨ ರಲ್ಲಿ ಅಲೆಕ್ಸಾಂಡರ್ ಪಾರ್ಕೆಸ್ ಎಂಬ ವಿಜ್ಞಾನಿಯು ಪಾರ್ಕೆಸಿನ್ (ಮೊದಲ ಅರೆ-ಕೃತಕ ಪ್ಲಾಸ್ಟಿಕ್) ಅನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಿಗೂಢ ರಾತ್ರಿ: ಜಾನ್ ಸುಂಟಿಕೊಪ್ಪ

ಬಾಲ್ತು ಬೆಳಗ್ಗೆ ಎದ್ದವನೇ ತೀರಾ ಕಂಗಾಲಾಗಿ ಬಿಟ್ಟಿದ್ದ. ಮಾತೇ ಮರೆತು ಹೋದವನಂತಾಗಿ ಆಕಾಶವೇ ಕಳಚಿ ತಲೆ ಮೇಲೆ ಬಿದ್ದವನಂತೆ ಪಿಳಿ ಪಿಳಿ ನೋಡುತ್ತಾ ಕುಳಿತುಬಿಟ್ಟಿದ್ದ. ಅಷ್ಟು ಮಾತ್ರ ಆಗಿದ್ದರೆ ಪರವಾಗಿಲ್ಲ ಅವನ ಅಮ್ಮ ಬಾಯಮ್ಮ, ಹೆಂಡತಿ ಪೊಮ್ಮಿ ಮತ್ತು ಇಬ್ಬರು ಮಕ್ಕಳು ತೀರಾ ತಲೆಕೆಡಿಸಿಕೊಳ್ಳಲು ಭಯಾನಕ ಕಾರಣವೊಂದಿತ್ತು. ಬಾಲ್ತು ಘಳಿಗೆಗೊಮ್ಮೆ ಅಲ್ತಾರಿನ ಬಳಿ ಬಂದು ಆ ಶಿಲುಬೆಯನ್ನೂ, ಆ ಬಾಲಯೇಸುವಿನ ಫೋಟೋವನ್ನೂ ಸಿಕ್ಕಾಪಟ್ಟೆ ಭಕ್ತಿಯಿಂದ ಮುಟ್ಟಿ ಮುಟ್ಟಿ ಚುಂಬಿಸುತ್ತಿದ್ದ. ಸಂಜೆಯ ಪ್ರಾರ್ಥನೆ ಸಮಯ ಹೊರತುಪಡಿಸಿ ನಿಗೂಢವಾಗಿ ಕಾಣೆಯಾಗುತ್ತಿದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೆಲವು ಜಾನಪದ ಒಗಟುಗಳು ಮತ್ತು ಅವುಗಳ ವಿವರಣೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಒಗಟುಗಳ ಅರ್ಥ ವಿವರಣೆಯ ಅವಶ್ಯಕತೆ : ಉತ್ತರ : ತಂದೆ ಶೆಟ್ಟಿ ‘ ಹಂಡೆ ‘ಮಗ ಸಂಸಾರಿ ‘ ಕೊಡ ‘ಮೊಮ್ಮಗ ಪೋಲಿ ‘ ಚಂಬು ‘ ಒಗಟು ೨ ” ಅಗಟಕ ಬುಗಟಕ ನಿನ್ನ ನೋಡಿ ನನ್ನ ಜೀವ ಟಕಟಕ “ ಇದು ಒಗಟಾ ? ಇದು ಕನ್ನಡ ಭಾಷೆಯ ಒಗಟಾ ? ಇದು ಕೇವಲ ಸಜಾತಿ ಅಕ್ಷರಗಳ ಕುಣಿತವಾ ? ಬರಿ ಒಂದೇ ರೀತಿಯ ಶಬ್ದಗಳ ರಿಂಗಣವಾ? ಎಂದು ತಲೆ ಕೆರೆದುಕೊಳ್ಳುವಂತೆ ಈ ಒಗಟನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಂಬಾಸಿಡರ್ ಕಾರು: ದಿಲೀಪ್ ಎನ್ಕೆ

ಹೌದು, ನಾನು ಹೀಗೇನೆ. ತಿಳಿದೋ ತಿಳಿಯದೆಯೋ ನನ್ನಿಂದಾದ ಸಣ್ಣ ಪುಟ್ಟ ತಪ್ಪನ್ನೂ ಬೆಟ್ಟದಷ್ಟೆಂದು ಭಾವಿಸಿ ಭಯಭೀತನಾಗುತ್ತೇನೆ. ಅದೆಷ್ಟೋ ಕಾಲ ಒಳಗೊಳಗೇ ನರಳುತ್ತೇನೆ, ನಲುಗುತ್ತೇನೆ. ಇನ್ನೇನಿಲ್ಲ, ತಲೆಯೇ ಹೋಗುತ್ತದೇನೋ ಎನ್ನುವಷ್ಟರ ಮಟ್ಟಿಗೆ ಅದನ್ನೇ ಆಡಿ ಆಡಿ ಎಳೆದಾಡಿ ಹೈರಾಣಾಗುತ್ತೇನೆ. ಆ ಕ್ಷಣಕ್ಕೆ ನನಗೆ ಸರಿತೋರುವ ಅವರಿವರಿಗೆ ಶೃಂಗರಿಸಿ ಶೃಂಗರಿಸಿ ಎಳೆಎಳೆಯಾಗಿ ಈಜಿ ಈಜಿ ಹಂಚಿಕೊಳ್ಳುತ್ತೇನೆ. ಹಂಚಿಕೊಂಡು ಅಲ್ಪ ಸ್ವಲ್ಪ ಉಸಿರೂಯ್ದು ಕೊಳ್ಳುತ್ತೇನೆ. ಮತ್ತೆ ಮತ್ತದೇ ಬೆಂಕಿಯಲ್ಲಿ ಬಿದ್ದು ಒದ್ದಾಡುತ್ತೇನೆ. ಇದು ನನ್ನ ಬಲಹೀನತೆಯೇ ? ಈ ಕಾರಣಕ್ಕೆ ಆಗಾಗ್ಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನಸು ಸರೋವರ: ವೀಣಾ ರಮೇಶ್, ಮರವಂತೆ

ಅದ್ಯಾಕೋ. ಪ್ರಿಯಾ ಈ ನಡುವೆ ತುಂಬಾ ಮೌನವಾಗಿರುತ್ತಿದ್ದಳು. ಹತ್ತು ಸಲ ಕರೆದರೆ ಒಮ್ಮೆ ಮಾತ್ರ ಮಾತಾಡುವಳು. ಕಾರಣ ಏನಿರಬಹುದು, ? ಸದಾ ಮಂಕಾಗಿರುತ್ತಾಳೆ, ಏನಾದರೂ ಕೇಳಲು ಹೋದರೆ ಅಳುತ್ತಾ ಕುಳಿತಿರುತ್ತಾಳೆ. ಇದನ್ನು ಹಲವು ದಿನಗಳಿಂದ ಗಮನಿಸುತ್ತಿದ್ದ ಮೃದುಲಾಗೆ ಯಾಕೋ ಪ್ರಿಯಾಳ ಈ ವರ್ತನೆ ಚಿಂತೆ ಗಿಟ್ಟುಕೊಂಡಿತ್ತು. ಸದಾ ಲವಲವಿಕೆಯಿಂದ ಇರುತ್ತಿದ್ದ ಪ್ರಿಯಾ. ಈ ನಡುವೆ ಮೂಕಿಯಾಗಿರುತ್ತಿದ್ದಳು. ಫೋನ್ ಮಾಡಿದರೂ ಉತ್ತರ ನೀಡದ ಪ್ರಿಯಾ ಸದಾ ಮೌನವಾಗಿರುತ್ತಿದ್ದಳು. ಪ್ರಿಯಾ ಇಲ್ಲದ ಕಾಲೇಜಿನ ದಿನಗಳು ತುಂಬಾ ಬೋರು ಹೊಡೆಸುತಿತ್ತು ಮೃದುಲಾಗೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಟಿಕೆಟ್ಟಾಯಣ. . . : ಶಂಕರಾನಂದ ಹೆಬ್ಬಾಳ

ಏನಿದು ಟಿಕೆಟ್ ಎಂದು ಕೇಳಬೇಡಿ. ? ಎಲ್ಲರಿಗೂ ಗೊತ್ತಿರುವ ವಿಚಾರವಿದು, ಟಿಕೆಟ್ ಎಂದರೆ ಬೇರೇನೂ ಅಲ್ಲ ಕನ್ನಡದಲ್ಲಿ ಇದರರ್ಥ ಅನುಮತಿ ಚೀಟಿ, ಪರವಾನಿಗೆ ಚೀಟಿ ಎಂದರ್ಥವಾಗುತ್ತದೆ. ಕೆಲವೊಂದು ಜಾಗದಲ್ಲಿ ಇದಿಲ್ಲದೆ ಪ್ರವೇಶವೆ ಸಿಗುವುದಿಲ್ಲ ಅದಕ್ಕಾಗಿ ಪರದಾಡಬೇಕಾಗುತ್ತದೆ.ಟಿಕೆಟ್ ಇಲ್ಲದೆ ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿ ತಿರುಗಾಡಲು ಸಾಧ್ಯವೆ ಇಲ್ಲ, ಎನ್ನುವಷ್ಟರ ಮಟ್ಟಿಗೆ ಟಿಕೆಟ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ರಾಜವೈಭವದಲ್ಲಿ‌ ಮೆರೆಯುತ್ತಿದೆ. ಯಾವುದೆ ಸಿನಿಮಾ ಥಿಯೇಟರನಲ್ಲಿ‌ ಸಿನಿಮಾ ವಿಕ್ಷಿಸಲು ಈ ಟಿಕೇಟ್ ಅತಿ ಅವಶ್ಯಕ ಹೇಗೆ ಎಕ್ಸಾಂ ಹಾಲ್ ನಲ್ಲಿ ಹಾಲಟಿಕೆಟ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾತೃಸ್ವಾಮ್ಯ ವ್ಯವಸ್ಥೆ: ಚಂದಕಚರ್ಲ ರಮೇಶಬಾಬು

“ರೀ ಇವತ್ತು ರಾತ್ರಿ ನಿಮಗೆ ಚಪಾತಿ ಮಾಡ್ಲಾ?” ಎನ್ನುವ ಪಶ್ನೆ ಮಡದಿಯಿಂದ ಬಂದಾಗ ಗಂಡನಿಗಾಗುವ ಫಜೀತಿ ಹೇಳಲಾಗದು. ಒಳಗೇನೋ ತನ್ನ ಸಕ್ಕರೆ ಕಾಯಿಲೆಯ ಸಲುವಾಗಿ ಮಾಡಿದರೆ ಒಳಿತು ಎಂದಿದ್ದರೂ “ಮಾಡು” ಎಂದು ಹೇಳಲಾರದ ಸ್ಥಿತಿ. ಯಾಕೆ ಅಂದರೆ ಆ ಪ್ರಶ್ನೆಯ ಒಳದನಿ “ನಾನು ಮಾಡುವುದಿಲ್ಲ ನೀವು ಊ ಅನ್ನಿ” ಅಂತಲೇ ಇರುತ್ತದೆ. ಗಂಡಸು ಹೊರಗೆ ದುಡಿದು ಮನೆಗೆ ಬೇಕಾದ ಸಾಮಾನೆಲ್ಲವನ್ನೂ ತಂದರೂ ತನಗೆ ಇಂಥದೇ ತಿಂಡಿ ಅಥವಾ ಅಡುಗೆ ಬೇಕು ಎನ್ನುವಷ್ಟು ಸ್ವಾತಂತ್ರ್ಯವಿರುವುದಿಲ್ಲ. ಯಾಕೆ ಅಂದರೆ ಅಡುಗೆಮನೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೊಟ್ಟೆ ನಿನ್ನಿಂದ ನಾ ಕೆಟ್ಟೆ: ಪ್ರೇಮಾ ಆರ್ ಶೆಟ್ಟಿ

ಹೌದು ಮಾರ್ರೆ, ಎಂತಂತ ಹೇಳ್ಲಿ ಈ ಹೊಟ್ಟೆಯ ಬಗ್ಗೆ? ಒಂದೆರಡು ಹೊತ್ತು ಊಟ ಇಲ್ಲದೆ ಇರಬಹುದು ಆದರೆ ಗಾಳಿ ಇಲ್ಲದೆ ಬದುಕೋಕೆ ಸಾಧ್ಯಾನಾ? ನಮ್ ಬದುಕಿನಲ್ಲಿ ಮೂಗು, ಗಾಳಿ, ಶ್ವಾಸಕೋಶಗಳೇ ಮುಖ್ಯ ಅಂತ ನೀವು ಹೇಳೋದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಅಲ್ವೇ? ಇತ್ತೀಚೆಗಂತೂ ಜನ ಕಂಡ ಕಂಡಲ್ಲಿ ಹೃದಯ ಒಡೆದು, ರಕ್ತನಾಳ ಒಡೆದು, ಹಾರ್ಟ್ಗೆ ಅಟ್ಯಾಕ್ ಆಗಿ ಸಾಯಲು ಕಾರಣ ಹೊಟ್ಟೆ ತಾನೇ? ಇದನ್ನು ನೀವು ನಂಬಲೇ ಬೇಕು. ಕಾರಣ? ಹೊಟ್ಟೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪುಟ್ಟಿಯ ಪಟ್ಟ: ಡಾ. ನೀತಾ ಕಲಗೊಂಡ

ತಲೆ ಭಾರ , ಸುಡುವ ಮೈ ಎದ್ದುಕೂರಲೂ ಆಗದಷ್ಟು ಸುಸ್ತು ಪುಟ್ಟಿಯ ದಿನ ಶುರುವಾಗಿದ್ದೆ ಬೇರೆ ರೀತಿ ಇಂದು. ಕಷ್ಟಪಟ್ಟು ಕಣ್ಣು ತೆರೆದು ನೋಡಿದಾಗ ಹೊರಗೆ ಬಿಸಿಲು ಮೈ ಚಾಚಿತ್ತು. ಮನೆಯಲ್ಲಿ ಎಂದೂ ಇರದ ನಿಶಬ್ದ ಕಸಿವಿಸಿ ತಂದಿತು ಪುಟ್ಟಿಯ ಮನಸ್ಸಿಗೆ. ಹತ್ತು ಜನರು ಸದಾ ಸುತ್ತಾಡೋ ಮನೆಯಲ್ಲಿ ಈ ತರದ ಸ್ತಬ್ಧತೆ, ಶಾಂತಿ ಅರ್ಥವೇ ಆಗಲಿಲ್ಲ ಅವಳಿಗೆ. ಇವತ್ತೇನಾದರೂ ರವಿವಾರವೇ? ಅಮ್ಮ ಕಿವಿ ತೂತಾಗುವಷ್ಟು ಕಿರಿಚಿ ಬೆನ್ನಿಗೆ ಎರಡು ಕೊಟ್ಟು ಎಬ್ಬಿಸಿರಲಿಲ್ಲ ಅಂದ್ರೆ ಇದು ಖಂಡಿತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶ್ರೇಷ್ಠ ನಡೆ: ಬಿ.ಟಿ.ನಾಯಕ್

ಅದೊಂದು ಶಾಲೆಯ ತರಗತಿಯಲ್ಲಿ ಮೇಷ್ಟ್ರು ಹಾಜರಾತಿ ತೆಗೆದುಕೊಳ್ಳುವಾಗ ‘ಅಕ್ಕ ನಾಗಮ್ಮ’ ನ ಹೆಸರು ಕೂಗಿದರು. ಆದರೆ, ಅದಕ್ಕೆ ಯಾವುದೇ ಪ್ರತಿಕ್ರೀಯೆ ಬರಲಿಲ್ಲ. ಆನಂತರ ಮೇಷ್ಟ್ರು ತಲೆ ಎತ್ತಿ ಆಕೆ ಕುಳಿದುಕೊಳ್ಳುವ ಬೆಂಚಿನ ಕಡೆಗೆ ನೋಡಿದರು. ಆಕೆ ನಿಜವಾಗಿಯೂ ಅಲ್ಲಿ ಕಾಣಲಿಲ್ಲ!.ತಕ್ಷಣಕ್ಕೆ ಶಿವ ಬಸಮ್ಮ ಮತ್ತು ನಾಗವೇಣಿ, ಅವರ ಕಡೆಗೆ ಮೇಷ್ಟ್ರ ಲಕ್ಷ್ಯ ಹೋಗಿ, ಅವರಿಬ್ಬರಿಗೆ ಆಕೆಯ ಬಗ್ಗೆ ಕೇಳಿದರು. ;‘ಏನದು ಅಕ್ಕ ನಾಗಮ್ಮ ಏಕೆ ಬಂದಿಲ್ಲ ?’‘ಅವಳ ಅಮ್ಮಗೆ ಹುಷ್ಯಾರು ಇಲ್ಲವಂತೆ ಮೇಷ್ಟ್ರೇ ‘ ಎಂದಳು ನಾಗವೇಣಿ.‘ಹೌದಾ.. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾನೂ ನಾಟಕ ಮಾಡಿದ್ದೆ…!!: ಜಗದೀಶ ಬ ಹಾದಿಮನಿ

ನಾಟಕ ಅನ್ನೋದ ಒಂದು ದೃಶ್ಯಕಾವ್ಯ. ಗ್ರೀಕ್ ದೇಶದ ಪ್ರಾಚೀನ ನಾಟಕ್ಕಾರಾದ ಯುರಿಪಿಡ್ಸ್, ಅರಿಸ್ಟೋಫೇನ್ಸ್, ಈಸ್ಕಿಲಸರಿಗಿಂತ ಮುಂಚೆನ ಆರಂಭಾದ ಈ ಪರಂಪರೆ, ಹೆಮ್ಮರಾಗಿ ನೂರುಸಾವ್ರ ರೆಂಬೆಕೊಂಬೆಗಳನ್ನ ಚಾಚಿ, ಲಕ್ಷಕೋಟಿ ಬಿಳಿಲುಗಳನ್ನ ಮೈದುಂಬ್ಕೊಂಡು ಸಮೃದ್ಧಾಗಿ ಬೆಳುದು, ಕಡಲಿಗುನೂ ಹಿರಿದಾಗಿ, ಆಗಸಕನೂ ಮಿಗಿಲಾಗಿ ಬಿತ್ತರಿಸ್ಕೊಂಡು ನಿಂತೈತಿ. ಮುಂದ, ಅದು ರೋಮಿನ ಗಡಿ ದಾಟಿ ಇಡೀ ಯುರೋಪ್‌ನ ಬಾಚಿಕೊಂಡ್ತು. ಇಲ್ಲಿ ಷೇಕ್ಸಪೀಯರ್ ಹೆಸರಿಸ್ಬೋದಾದ ಮತ್ತೊಂದು ಹೆಸರು. ನಾರದ, ಕೃಷ್ಣ, ಶಕುನಿ, ರಾವಣ, ಮಂಥರೆ, ಕೈಕೆಯರಂಥ ಮಾನ್ಮಾನ್ ನಾಟಕ್ಕಾರರ ಇರೋ ನಮ್‌ತಾಯ್ನೆಲಕ್ಕ ಬಂದ್ರ ವೇದ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೌನದ ಮಿತಿ: ಸುಷ್ಮಾ ಹೆಳವಗೋಳ

ದೊಡ್ಡದೊಂದು ಭೂಪ್ರದೇಶದಲ್ಲಿ ಪೌರಾಣಿಕೆ ಎಂಬ ನದಿ ಹರಿಯುತ್ತಿತ್ತು. ಇದು ಅತ್ಯಂತ ಆಳವಾದ ಮತ್ತು ಉದ್ದವಾದ ನದಿಯಾಗಿತ್ತು. ಒಂದು ಕಾಲದಲ್ಲಿ ಈ ನದಿಯನ್ನು ಜಲದೇವಿ ಎಂದು ಕುಗ್ಗೇರಿ ಎಂಬ ಗ್ರಾಮದಲ್ಲಿ ತುಂಬಾ ಭಯ ಭಕ್ತಿಯಿಂದ ಪೂಜಿಸುತ್ತಿದ್ದರು. ನೀರು ಕುಡಿಯಲು ಬಳಸುತ್ತಿದ್ದರು. ಈ ನದಿಗೆ ಪೃಥ್ವಿ,ಪವನ ಮತ್ತು ಕಾಂತಾರ ಎಂಬ ಸ್ನೇಹಿತರಿದ್ದರು ಇವರೆಲ್ಲರೂ ಯಾವಾಗಲೋ ಒಂದು ದಿನ ಒಟ್ಟಾರೆ ಸೇರಿ ತುಂಬಾ ಖುಷಿಯಿಂದ ತಮ್ಮ ಜೀವನವನ್ನು ನಡೆಸುತ್ತಿದ್ದರು. ಹೀಗೆ ಇರುವಾಗ ಒಂದು ದಿನ ಹರಿಯುತ್ತಾ ಕಾಂತಾರದ ನೆನಪಾಗಿ ಕಾಂತಾರದ ಬಳಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಕ್ಕುಗಳು (ಭಾಗ 12): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಕೆಲವು ನಿಮಿಷ ನಿದ್ರಿಸುತ್ತ, ಒಮ್ಮೊಮ್ಮೆ ಬೆಚ್ಚಿ ಬೀಳುತ್ತಾ ಬಡಬಡಿಸಿ, “ಲೇಯ್ ನಿಂಗೆಷ್ಟೇ ಕಾಯ್ಬೇಕೂ…” ಅಂತ ಏನೇನೋ ಕನವರಿಸುತ್ತಾ ಅಜಿಯ ನಿದ್ರೆಯನ್ನೂ ಕೊಂದು ಹಾಕಿದ್ದಳು ಜ್ಯೋತಿ. ಹೊರಗೆ ಹಕ್ಕಿಗಳ ಚಿಲಿಪಿಲಿ ಇನಿಧ್ವನಿ, ಗಾಡಿ ಮೋಟಾರುಗಳ ಸದ್ದು ಜ್ಯೋತಿಗೆ ಸಂಪೂರ್ಣ ಎಚ್ಚರವಾಗುವಂತೆ ಮಾಡಿದ್ದವು. ಎಚ್ಚರವಾದರೂ ರಾತ್ರಿಯೆಲ್ಲಾ ಅರೆಬರೆ ನಿದ್ರಿಸಿದ್ದರಿಂದ ಮೈ ಜಡವಾಗಿತ್ತು. ಮನಸು ಭಾರವಾಗಿತ್ತು. ಊರಿಗೆ ಹೋಗಿರುವ ಶಂಕರನಿಂದ ಇನ್ನೂ ಯಾವುದೇ ವಿಷಯ ತಿಳಿದಿಲ್ಲ. ತಲೆ ಚಿಟಿ ಚಿಟಿ ಅನ್ನುತ್ತಿದೆ. ಎದ್ದು ಸೀದಾ ಬಚ್ಚಲು ಮನೆಗೆ ಸಾಗಿದಳು. ಹಂಡೆಯ ನೀರನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಶರಣಾಗತಿ: ರವೀಂದ್ರ ಬಾಕಳೆ, ಕುಷ್ಟಗಿ

ಇಬ್ಬರೂ ಪರಸ್ಪರ ಪ್ರೀಸುತ್ತಿದ್ದರು. ಸುಮಾರು, ಮೂರು ವರ್ಷಗಳಿಂದಾ ಅವರಿಬ್ಬರ ಪ್ರೀತಿ, ಪ್ರೇಮ, ಪ್ರಣಯ ಸಾಗಿತ್ತು! ಮುಖೇಶ ನೋಡಲು ಸುಂದರವಾಗಿದ್ದ. ಅವನ ಪ್ರೀತಿಯ ಬಲೆಗೆ ಬಿದ್ದಿದ್ದ, ಸವಿತಾ ಕೂಡಾ ನೋಡಲು ಸುಂದರಿಯಾಗಿದ್ದಳು.ಬಿಕಾಂ ಓದುತ್ತಿದ್ದ ಈ ಜೋಡಿಗಳು ಒಬ್ಬರನೊಬ್ಬರು ಪರಿಚಿತರಾಗಲು ಆರು ತಿಂಗಳು ಬೇಕಾಯಿತು. ಅದೇ ತಾನೇ ಪಿಯುಸಿ ಪೂರ್ಣ ಮಾಡಿ ಪದವಿ ಕಾಲೇಜಿಗೋಸ್ಕರ ಆ ಊರನ್ನು ಬಿಟ್ಟು ಸಾತನೂರಿಗೆ ಹೋಗುವ ಅನಿವಾರ್ಯತೆ ಇತ್ತು! ಹೆಣ್ಣು ಮಗಳನ್ನು ಹೆಚ್ಚಿನ ವಿದ್ಯಾಬ್ಯಾಸ ಮಾಡಿಸಲು ಒಪ್ಪದ ಸವಿತಾಳ ಅಮ್ಮ ರಾಜೇಶ್ವರಿ ಮಗಳನ್ನು ಮನೆಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಕ್ಕಳ ಕಾವ್ಯ: ವಿನಯ್ ಕುಮಾರ್

ಸುಂದರ ಮುಸ್ಸಂಜೆ ಪಶ್ಚಿಮದಲಿ ಮುಳುಗುವ ಆ ನೇಸರಆ ದೇವರೇ ಸೃಷ್ಟಿಸಿದ ಹಾಗಿದೆ ಸುಂದರನಿಶ್ಯಬ್ಧತೆ ತುಂಬಿದ ಈ ಸಮಯಮಾಡುತಿದೆ ನನ್ನ ದುಃಖಗಳ ಮಾಯ ನದಿಯೆಂಬ ಕನ್ನಡಿಯಲಿಮೂಡಿದೆ ಮುಸ್ಸಂಜೆಯ ಪ್ರತಿಬಿಂಬಸೌಂದರ್ಯವು ಬೀರುತಲಿತುಂಬಿ ಹೋಗಿದೆ ನನ್ನ ಕಣ್ಣತುಂಬಾ ಪ್ರಕೃತಿ ಎಂಬ ಕಲೆಗಾರ್ತಿಯ ಹತ್ರಬಿಡಿಸಿದ ಸುಂದರ ಮುಸ್ಸಂಜೆಯ ಚಿತ್ರಹಳದಿ ಮಿಶ್ರಿತ ಕೆಂಪು ಬಣ್ಣತುಂಬಿ ಸುಂದರಗೊಳಿಸಿದೆಯಣ್ಣಾ ಮುಸ್ಸಂಜೆಯಲಿ ಹಾರುವ ಹಕ್ಕಿಗಳ ಸಾಲುನೋಡುತ್ತಿದ್ದರೆ ಮನಸಲಿ ನೆಮ್ಮದಿಗರಿ ಬಿಚ್ಚಿ ನಾಟ್ಯಮಯಿಯಾಗಿ ಕೂಗುವ ನವಿಲುಕೇಳಲು ಸುಂದರ ಗೋಧೂಳಿ ಅವಧಿ ಮುಸ್ಸಂಜೆಯ ಕೋಗಿಲೆ ದ್ವನಿ ಇಂಪುಕೇಳಲು ಮನಸಿಗೆ ಬಲು ತಂಪುತಂಗಾಳಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜುವಿನ ವಿಶೇಷಾಂಕಕ್ಕೆ ಬರಹಗಳ ಆಹ್ವಾನ

ಸಹೃದಯಿಗಳೇ, ಇದೇ ಜನವರಿ ೨೧ನೇ ತಾರೀಖಿಗೆ ಪಂಜುವಿಗೆ ಹದಿಮೂರು ವರ್ಷ ತುಂಬುತ್ತಿದೆ. ಪಂಜುವಿನ ಹುಟ್ಟು ಹಬ್ಬದ ಆಚರಣೆಗಾಗಿ ವಿಶೇಷ ಸಂಚಿಕೆಯೊಂದನು ತರಲು ಬಯಸುತ್ತಿದ್ದೇವೆ. ಈ ವಿಶೇಷ ಸಂಚಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ನಮ್ಮ ಇ ಮೇಲ್ ವಿಳಾಸ editor.panju@gmail.comsmnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ವಿಶೇಷ ಸಂಚಿಕೆಗಾಗಿ” ಎಂದು ತಿಳಿಸಲು ಮರೆಯದಿರಿ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಾವ್ಯಧಾರೆ

ಬಯಲ ದೃಷ್ಟಾಂತ ! ಪಾತರಗಿತ್ತಿಯ ಹಾಗೆಒಂದೆಡೆ ನಿಲಲೊಲ್ಲದೆಸುಂಟರ ಗಾಳಿಯಂತೆ ಗಿರಗಿರನೇ ತಿರುಗುತ್ತದಿನ ನೂಕುತ್ತಿರೆಒಡಲಲ್ಲಿ ಕಸ ಕಡ್ಡಿಗಳೇ ತುಂಬಿಕೊಂಡುಎದೆಯಗೂಡು ಹರಿದುಹೃದಯ ಪಾಳುಬಿದ್ದಮನೆಯಂತಾಗುತ್ತದೆ !ಅದೆಲ್ಲೋ ದೂರದ ಗಗನಚುಕ್ಕೆ ಪ್ರಕಾಶಿಸುವುದ ಕಂಡುಅದರಂತಾಗಬೇಕೆಂದು ಕಣ್ಮುಚ್ಚಿ ಕುಳಿತಡೆಕಣ್ಮುಂದೆ ಅದರ ಚಿತ್ತಾರವೇ ಬಂದುಗಹಗಹಿಸಿ ನಗುತ ಕೇಳುತ್ತಿದೆನೀನು ಗಗನದ ಚುಕ್ಕೆ ಆಗಬಲ್ಲೆಯಾ?!ಸುತ್ತಲ ಪ್ರಪಂಚದಿಂದದೂರಾಗಬೇಕೆಂದುಕಣ್ಣು, ಕಿವಿ, ಬಾಯ್ಮುಚ್ಚಿಕೊಂಡುನಿರ್ಲಿಪ್ತವಾಗಬೇಕೆಂದು ತಟಸ್ಥವಾದರೆಸುತ್ತಲ ಸಮಾಜದ ಕಣ್ಣು, ಕಿವಿ, ಬಾಯ್ಗಳುನನ್ನತ್ತ ತೆರೆದುಕೊಂಡುಕುಹಕವಾಡುತ್ತ ಹುಸಿನಗು ಬೀರುತಿವೆ !ಇದಾವುದರ ಗೊಡವೆಯೇ ಬೇಡವೆಂದುಆತ್ಮಾರ್ಪಣಕ್ಕಿಳಿದರೆಲೋ ಹುಚ್ಚ! ನೋಡಿಲ್ಲಿ ಎನುತಮಧುರಗಾನಗೈಯುತ್ತಹಕ್ಕಿಯೊಂದು ದೂರದಿ ತಂದಅನ್ನದಗಳನುಗೂಡಿನೊಳಗಿರುವ ಮರಿಹಕ್ಕಿಯಬಾಯೊಳಗೆ ಇಡುತ್ತಿತ್ತು!ಆ ಮರದ ಗೂಡಿನ ಮೇಲೊಂದುಕರಿನಾಗ ಹೆಡೆಯೆತ್ತಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಗ್ನಿಪರೀಕ್ಷೆ: ಕೆ ಎನ್‌ ಮಹಾಬಲ

ಅದು ಬೆಳಿಗ್ಗೆ ಹತ್ತೂಕಾಲು ಗಂಟೆಯ ಸಮಯ. ಬ್ಯಾಂಕ್ ಶಾಖೆಯೊಳಕ್ಕೆ ಸಿಬ್ಬಂದಿ ಒಬ್ಬೊಬ್ಬರಾಗಿ ಬಂದು ತಂತಮ್ಮ ಸೀಟಿನತ್ತ ನಡೆದು, ಅಲ್ಲಿನ ಕಂಪ್ಯೂಟರ್, ಕುರ್ಚಿ, ಮುಂಗಟ್ಟೆಯ ಭಾಗ ಮುಂತಾದವನ್ನು ಒರೆಸಿಕೊಂಡು ಕೆಲಸ ಆರಂಭಿಸಲು ಅಣಿಯಾಗುತ್ತಿದ್ದರು. ಇನ್ನೂ ಹತ್ತೂವರೆ ಆಗದೆ ಇದ್ದುದರಿಂದ ಗ್ರಾಹಕರಿಗೆ ಪ್ರವೇಶವಿರಲಿಲ್ಲ. ಹಾಗೆ ಒಳಕ್ಕೆ ನುಗ್ಗಲು ಯತ್ನಿಸುತ್ತಿದ್ದವರಿಗೆ ಬಾಗಿಲಲ್ಲಿ ನಿಂತಿದ್ದ ಭದ್ರತಾ ಸಿಬ್ಬಂದಿ ತಡೆಯುತ್ತಿದ್ದ. ಅದೇ ಸಮಯದಲ್ಲಿ ನಗರ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ದಯಾನಂದ‌ ಅವರು ತಮ್ಮ ಒಬ್ಬ ಸಿಬ್ಬಂದಿಯೊಡನೆ ಆಗಮಿಸಿ ಒಳಕ್ಕೆ ಬಿಡಲು ಭದ್ರತಾ ಸಿಬ್ಬಂದಿಗೆ ಆಗ್ರಹಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸ್ಟಿಂಗ್‌ಲೆಸ್ ಜೇನುಕೃಷಿ ಸಂಪ್ರದಾಯದಿಂದ ವೈಜ್ಞಾನಿಕದೆಡೆಗೆ: ಚರಣಕುಮಾರ್

ಜೇನನ್ನು ಉತ್ಪಾದಿಸುವ ಜೇನು ನೊಣಗಳಲ್ಲಿ ಹಲವಾರು ವಿಧಗಳಿದ್ದು ಮುಖ್ಯವಾಗಿ ಭಾರತದಲ್ಲಿ ಹೆಜ್ಜೇನು, ತುಡುವೆ ಜೇನು, ಯೂರೋಪಿಯನ್ ಜೇನು, ಕಡ್ಡಿ ಜೇನು (ಕೋಲು ಜೇನು), ಮತ್ತು ಮುಳ್ಳುರಹಿತ ಜೇನು, ಕಂಡುಬರುತ್ತವೆ. ಕರ್ನಾಟಕದ ಮಲೆನಾಡು ಅರಣ್ಯಗಳ ಸುತ್ತ-ಮುತ್ತಲಿನ ಸ್ಥಳೀಯ ಅರಣ್ಯವಾಸಿಗಳಾದ ಕುಣಬಿಗಳು, ಹಾಲಕ್ಕಿ ಜನಾಂಗದವರು, ಮಲೆಕುಡಿಯರು, ಸೋಲಿಗರು, ಬೆಟ್ಟಕುರುಬರು, ಜೇನುಕುರುಬರು, ಕೊಡವರು, ಗೌಳಿಗಳು, ಕಾಡುಗೊಲ್ಲರು, ಕಾಡುಕುರುಬರು ಕೊರಗರು ಇನ್ನಿತರ ಅರಣ್ಯಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿರುವ ಜನರು ಸ್ಟಿಂಗ್‌ಲೆಸ್ ಜೇನು ಪ್ರಭೇದವನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಟಿಂಗ್‌ಲೆಸ್ ಜೇನು ಅವೈಜ್ಞಾನಿಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಉದಾತ್ತನೊಳ್ ಪುಟ್ಟದಲ್ತೆ ನೀಲೀರಾಗಂ: ಡಾ.ವೃಂದಾ ಸಂಗಮ್

ನಾಗಚಂದ್ರ ಕವಿಯ ಸಾಲು ಇದು. ನನಗೆ ಒಂದು ಪ್ರಶ್ನೆ ಉದಾತ್ತನಾದ ರಾವಣನಲ್ಲಿ ನೀಲೀ ರಾಗವೇ ಏಕೆ ಪುಟ್ಟುವುದು. ಕೆಂಪೋ, ಹಸಿರೋ ಅದರಲ್ಲೂ ಕಪ್ಪು ಅಜ್ಞಾನದ ಸಂಕೇತವಲ್ಲವೇ, ಅಂಧಃ ತಮಸ್ಸು ಅದರಿಂದ ಹೊರ ಬಂದ ಬೆಳಕಿನ ಕಿರಣದ ಬಿಳಿಯಾದರೂ ಮೂಡಬಹುದಾಗಿತ್ತಲ್ಲವೇ. ಅದೆಲ್ಲಾ ಬಿಟ್ಟು ಈ ನೀಲೀ ರಾಗವೇ ಯಾಕೆ ಪುಟ್ಟಿದೆ ಎನ್ನುವುದು. ನೀಲಿ ವರ್ಣವೆಂದರೆ ಆಕಾಶ. ಆಕಾಶವೆಂದರೆ ಅವಕಾಶ. ಆಕಾಶಕ್ಕೇ ಏಣಿ ಇಡುವಷ್ಟು ಅವಕಾಶ ತೆರೆವುದು ಇದು ನೀಲಿ ವರ್ಣ. ಅಗಾಧ ಸಾಗರದ ವರ್ಣವೂ ನೀಲಿಯೇ ಅಲ್ಲವೇ. ಅದಕ್ಕೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅರಿತಾಗ…: ಬಿ.ಟಿ.ನಾಯಕ್

ಅದೊಂದು ದಿನ ಒಬ್ಬ ಯುವಕ ಬೈಕ್ ಸವಾರಿ ಮಾಡುತ್ತಾ ಹೋಗುತ್ತಿರುವಾಗ, ದಾರಿಯಲ್ಲಿ ಒಂದಿಬ್ಬರು ಯುವಕರು ಯುವತಿಯನ್ನು ಚುಡಾಯಿಸುತ್ತಿದ್ದಿದು ಆತನ ದೃಷ್ಟಿಗೆ ಬಿತ್ತು! ಆದರೆ, ಅದು ನಿಜವೋ, ಅಲ್ಲವೋ ಎಂಬುದನ್ನು ತಿಳಿದು ಕೊಳ್ಳಲು, ತನ್ನ ಬೈಕ್ ದೂರದಲ್ಲೇ ನಿಲ್ಲಿಸಿ, ಅವರ ಕೀಟಲೆಯ ಮಾತುಗಳನ್ನು ಕೇಳಲು ಮುಂದಾದನು. ಬಹುಶಃ, ಅವರವರು ಪರಿಚಯದವರೋ ಏನೋ ಎಂಬ ಅನುಮಾನ ಆತನಿಗೆ ಉಂಟಾಯಿತು. ಆದರೂ, ಆತ ಸ್ಪಷ್ಟತೆ ಕಂಡುಕೊಳ್ಳುವದರ ಸಲುವಾಗಿ, ಸ್ವಲ್ಪ ಅವರ ಹತ್ತಿರಕ್ಕೆ ಹೋದ. ಅಲ್ಲಿ ಸ್ಪಷ್ಟವಾಗಿ ಮಾತುಗಳು ಕೇಳಿಸ ತೊಡಗಿದವು ಮತ್ತು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಟೀಕೆ – ಟಿಪ್ಪಣಿಗಳಾಚೆಗೆ “ಬೈಸನ್” ಮತ್ತು “ಮಾರಿಸೆಲ್ವರಾಜ್” ಕುರಿತ ಒಂದು ಸಣ್ಣ ಅವಲೋಕನ..!: ಪ್ರಶಾಂತ ಬೆಳತೂರು

ಬೈಸನ್ ಎಂಬ ಮಾರಿಸೆಲ್ವರಾಜ್ ಅವರ ಸಿನಿಮಾ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಬಿಡುಗಡೆಗೊಂಡಾಗ ತಮಿಳು ಸಿನಿ ವಲಯ ಒಳಗೊಂಡಂತೆ ಮೇನ್ ಸ್ಟ್ರೀಮ್ ಮಾಧ್ಯಮಗಳಲ್ಲಿ ಅದರ ಪರವಾಗಿ ಹೆಚ್ಚಿನ ಒಲವು ಕಂಡು ಬರಲಿಲ್ಲ, ಬಹುತೇಕ ವಿರೋಧದ ಚರ್ಚೆಗಳು ಎಗ್ಗಿಲ್ಲದೆ ಶುರುವಾದವು. ಹಾಗೆ ನೋಡಿದರೆ ತಾನು ನಿರ್ದೇಶಿಸಿದ ಸಿನಿಮಾವೊಂದಕ್ಕೆ ನಿರ್ದೇಶಕನೊಬ್ಬ ತಾನೇ ಮೀಡಿಯಾದೆದುರು ಕೂತು ತನ್ನ ಸಿನಿಮಾದ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಮಟ್ಟಿಗೆ ಒತ್ತಡಕ್ಕೆ ದೂಡಿತು. ಅದಕ್ಕೆ ಕಾರಣಗಳು ಹಲವಿರಬಹುದು. ಆದರೆ ಒಂದೊಳ್ಳೆಯ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜೀವನಪಾಠ: ಕೋಡೀಹಳ್ಳಿ ಮುರಳೀಮೋಹನ್

ತೆಲುಗು ಮೂಲ : ಅಪ್ಪರಾಜು ನಾಗಜ್ಯೋತಿಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್ನನಗೂ ರೈಲ್ವೇ ಸ್ಟೇಷನಿಗೂ ಒಂದು ಬಗೆಯ ಅವಿನಾಭಾವ ಸಂಬಂಧವಿದೆ. ಪ್ರತಿ ಪ್ರಯಾಣವೂ ನನಗೆ ಹೊಸ ವಿಷಯವನ್ನು ಕಲಿಸುತ್ತದೆ. ಈ ಬಾರಿ ಏನನ್ನು ಕಲಿಯಬೇಕಿದೆಯೋ ಅಂತ ಯೋಚಿಸುತ್ತಾ ನಿಧಾನವಾಗಿ ಪ್ಲಾಟ್ಫಾರ್ಮ್ ಸುತ್ತಲೂ ನೋಡಿದೆ. ನನ್ನ ಬಲಕ್ಕೆ ಇದ್ದ ಬೆಂಚಿನ ಮೇಲೆ ಸುಮಾರು ಮೂವತ್ತು ವರ್ಷದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕುಳಿತಿದ್ದಳು. ಮಗಳಿಗೆ ಸುಮಾರು ಏಳು ವರ್ಷವಿರಬಹುದು, ಗೊಂಬೆಯಂತೆ ಮುದ್ದಾಗಿದ್ದಳು, ಚುರುಕಾಗಿ ಪ್ಲಾಟ್ಫಾರ್ಮ್ನಲ್ಲೆಲ್ಲಾ ಓಡಾಡುತ್ತಿದ್ದಳು. ಇನ್ನೊಂದು ಮಗುವಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದಲಾದ ಯುವ ಮನಸ್ಸು-ಹೊಸ ದಿಕ್ಕಿನ ಹುಡುಕಾಟ: ಪರಮೇಶ ಕೆ.ಉತ್ತನಹಳ್ಳಿ

ಉಸಿರುಗಟ್ಟಿದ‌ ವಾತಾವರಣ, ವಿಷಕಾರಿಯಾದ ಬೆಳವಣಿಗೆ, ಒತ್ತಡದ ಒಡಲಲ್ಲಿ ಜೀಕುತ್ತಿವೆ ಮನಸ್ಸುಗಳು ನೂರು ಕಾಲ ಬದುಕಬೇಕಾದ ಹಸುಕಂದ ಅರಳು ಮುನ್ನವೇ ಬಾಡುವ ಚಿಂತಾಜನಕ ಸ್ಥಿತಿ ಎದುರಾಗಿದೆ. ಭರವಸೆಯಿಲ್ಲದ ಭವನಗಳು ಶೃಂಗಾರಗೊಳ್ಳುತ್ತಿವೆ, ವಿಷಮಶೀತ ವಿಷವರ್ತುಲ ವಿಷಯಗಳು ಮುಕ್ಕುತ್ತಿವೆ ಬೆಳಕಿನ ಬಳ್ಳಿಗಳ, ಕರುಳ ಬಳ್ಳಿಗಳೇ ಕರುಣೆಯನ್ನು ಬಸಿಯದೆ ಕಂಗಾಲಾಗುತ್ತಿದ್ದಾರೆ, ಜೀವ ಕರುಣಿಸಿದ ಜೀವಧಾತ ದೇವಧೂತರಾಗುವ ಬದಲು ಅನಾಥರಾಗುತ್ತಿದ್ದಾರೆ ಕಾಲಚಕ್ರ ನಿರಂತರವಾಗಿ ಸಾಗುತ್ತಿರುವಂತೆ ಸಮಾಜದ ರೂಪವೂ, ಮೌಲ್ಯಗಳ ಸ್ವರೂಪವೂ ಬದಲಾಗುತ್ತಿವೆ. ಆ ಬದಲಾವಣೆಯ ಕೇಂದ್ರಬಿಂದುವಾಗಿರುವುದು ಇಂದಿನ ಯುವ ಮನಸ್ಸು. ವಿಜ್ಞಾನ, ತಂತ್ರಜ್ಞಾನ, ಜಾಗತೀಕರಣ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯಕ್ಷ ಪಲಕುಗಳು: ದಿನೇಶ್ ಕೆ. ನಾಯ್ಕ್

ಯಕ್ಷಗಾನವು ದೈವಾರಾಧನೆಯ ಮೂಲದಿಂದ ಉಗಮಿಸಿತು ಎಂಬುದು ವಿದ್ವಾಂಸರ ಅಂಬೋಣ. ಕಾಲ ಕ್ರಮದಲ್ಲಿ ನಾಟ್ಯ, ವೇಷಭೂಷಣ, ವಾಚನ, ಹಿಮ್ಮೇಳ, ರಂಗಸ್ಥಳ ಮೈಗೂಡಿಸಿಕೊಂಡು ಸರ್ವಾಂಗ ಸುಂದರ ಕಲಾ ಪ್ರಕಾರವಾಗಿ ಹೊರ ಹೊಮ್ಮಿತು. ಯಕ್ಷಗಾನಕ್ಕೆ ಭಾಗವತರ ಆಟ, ಬೆಳಕಿನ ಸೇವೆ ಎಂಬ ಹೆಸರು ಕೂಡ ಇದೆ. ಭಗವಂತನನ್ನು ಸ್ತುತಿಸುವವ ಭಾಗವತ. ಯಕ್ಷಗಾನ ದೇವರ ಆರಾಧನೆಯ ಜೊತೆ ಜೊತೆಗೆ ಮನೋರಂಜನೆ, ಕಲೆ, ಸಾಹಿತ್ಯಗಳ ಬೆಳವಣಿಗೆಗೆ ಪೂರಕವಾಗಿದೆ. ಯಕ್ಷಗಾನದಿಂದ ಜ್ಞಾನವರ್ಧನೆ, ನೀತಿ ಬೋಧನೆ ಪ್ರಾಪ್ತವಾಗುತ್ತದೆ. ಪ್ರಬುದ್ಧ ಕಲಾವಿದರ ಯಕ್ಷ ಸಂಭಾಷಣೆ ತರ್ಕ ಶಕ್ತಿ & … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದೂಕಾಲು ಸಾವಿರ ದಾಟಿದ ಪಂಜು ಬರಹಗಾರರು

ಪಂಜು ಬರಹಗಾರರು (ಒಟ್ಟು=1254) 1 ಅಂಜಲಿ ರಾಮಣ್ಣ2 ಅಂಬಿಕ ರಾವ್3 ಅಂಬಿಕಾ ಪ್ರಸಾದ್4 ಅಕ್ಕಿಮಂಗಲ ಮಂಜುನಾಥ5 ಅಕ್ಬರ್ ಅಲಿ6 ಅಕ್ಷತಾ ಕೃಷ್ಣಮೂರ್ತಿ7 ಅಕ್ಷಯ ಕಾಂತಬೈಲು8 ಅಕ್ಷಯಕುಮಾರ ಜೋಶಿ9 ಅಖಿಲೇಶ್ ಚಿಪ್ಪಳಿ10 ಅಜ್ಜಿಮನೆ ಗಣೇಶ್11 ಅಜಯ್12 ಅಜಯ್ ಅಂಗಡಿ13 ಅಜಯ್ ಕುಮಾರ್ ಎಂ ಗುಂಬಳ್ಳಿ14 ಅಜಿತ್ ಕೌಂಡಿನ್ಯ15 ಅಜಿತ್ ಭಟ್16 ಅಣ್ಣಪ್ಪ ಆಚಾರ್ಯ17 ಅಣ್ಣಯ್ಯ ಸ್ವಾಮಿ18 ಅದಿತಿ ಎಂ. ಎನ್.19 ಅನಂತ ಕುಣಿಗಲ್20 ಅನಂತ ರಮೇಶ್21 ಅನಂತ್ ಕಳಸಾಪುರ22 ಅನ್ನಪೂರ್ಣಾ ಬೆಜಪ್ಪೆ23 ಅನಿತ.ಎನ್24 ಅನಿತಾ25 ಅನಿತಾ ಕೆ. ಗೌಡ26 … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಣ್ಣು ಗಂಡೆಂಬ ಅಸಮಾನತೆಯ ಹಳತಾದ ಚರ್ಚೆಗೆ ಇನ್ನೊಂದು ಆಯಾಮ: ವಾಣಿ ಚೈತನ್ಯ

ಪ್ರಜ್ಞಾವಂತ ನಗರೀಕೃತ ಭಾರತದಲ್ಲಿ, ಮಗಳಿಗೆ ಓದಿಸಬೇಕು ಎನ್ನುವ ಹಂಬಲ ಹೆಚ್ಚಾಗಿ, ಕಾಲೇಜು ಮೆಟ್ಟಿಲೇರಿರುವ ಹೊಸ gen G ಪೀಳಿಗೆಯಲ್ಲಿ, ಲಿಂಗ ಅಸಮಾನತೆ ಎನ್ನುವ ಚರ್ಚೆಯು ಔಟ್ ಡೇಟೆಡ್ ಚರ್ಚೆ ಎನ್ನಿಸುತ್ತಿದೆ.ನಾನು 15 ವರ್ಷದ ಹಿಂದೆ ಬಿಜಾಪುರದಲ್ಲಿ ಕೌಟುಂಬಿಕ ದೌರ್ಜನ್ಯದ ವಿಷಯವಾಗಿ ಕೆಲಸಮಾಡುವಾಗ, ದೇವದಾಸಿ ಮಹಿಳೆಯರ ಇರುವಿಕೆ, ಕಷ್ಟ ಸುಖ ತಿಳಿದು, ಒಂದು ಪತ್ರಿಕೆಗೆ ಕಥೆಯ ರೂಪದಲ್ಲಿ ಲೇಖನ ಬರೆದಿದ್ದೆ. ಅದನ್ನು ಬೆಂಗಳೂರಲ್ಲಿ ಕುಳಿತ ಸಂಪಾದಕರು, ಔಟ್ ಡೇಟೆಡ್ ಎಂದು ಆಗಿನ ಕಾಲಕ್ಕೆ ಸೂಕ್ತವಲ್ಲ ಎಂದು ತಿರಸ್ಕರಿಸಲಾಗಿತ್ತು. ನಾನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನುಷ್ಯನ ಭಾವಂತಃಕರಣದ ಸಹಜ ತೊಳಲಾಟಗಳ ಒಂದು ಸದಭಿರುಚಿಯ ಚಿತ್ರ – ಡಿ. ಎನ್. ಎ: ಪ್ರಶಾಂತ ಬೆಳತೂರು

ಇತ್ತೀಚಿನ ಮುಕ್ಕಾಲು ಪಾಲು ತಳಬುಡವಿಲ್ಲದ ಕನ್ನಡ ಸಿನಿಮಾಗಳನ್ನು ಕಂಡು ಬೇಸತ್ತು ತಮಿಳು ಮತ್ತು ಮಲಯಾಳಂ ಚಿತ್ರಗಳನ್ನು ಆಗಾಗ್ಗೆ ಬಿಡುವಿನ ವೇಳೆಯಲ್ಲಿ ನೋಡುತ್ತಿದ್ದ ನಾನು ಆರಂಭದಲ್ಲಿ ಈ ಡಿ. ಎನ್. ಎ. ಚಿತ್ರಗಳ ಪೋಸ್ಟರ್ ಅನ್ನು ಹಾಗೂ ಇದರ ಯುಟ್ಯೂಬ್ ವಿಡಿಯೋ ಲಿಂಕ್ ಅನ್ನು ನೋಡಿಯು ನೋಡದಂತೆ ನಿರ್ಲಕ್ಷ್ಯ ವಹಿಸಿದ್ದೆ. ತೀರಾ ಇತ್ತೀಚೆಗೆ ತಮಿಳಿನಲ್ಲೂ ಹಾಗೂ ಮಲಯಾಳಂನಲ್ಲೂ ಇದೇ ಡಿಎನ್ಎ ಹೆಸರಿನ ಚಿತ್ರಗಳು ಬಂದಿದ್ದರಿಂದ ಪ್ರಾಯಶಃ ಇದರ ಕಥಾಹಂದರವೂ ಇದೇ ಇರಬೇಕೆಂಬ ನನ್ನ ಪೂರ್ವಾಗ್ರಹ ಪೀಡಿತ ತಿಳವಳಿಕೆಯಿಂದಾಗಿ ಈ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದಲಾಗುತ್ತಿರುವ ಕುಟುಂಬ ವ್ಯವಸ್ಥೆ: ಕಲ್ಪನಾ ಪ್ರಭಾಕರ ಹೆಗಡೆ

ಮಾನವರಲ್ಲಿ ಕುಟುಂಬ ಎಂದರೆ ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹಬಾಳ್ವೆಯಿಂದ ಒಟ್ಟಾಗಿರುವ ಒಂದು ಗುಂಪು. ಇದು ಸಮಾಜದ ಬಹುಮುಖ್ಯ ಅಂಗ. ನಾವು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆ. ಭಾಷೆ ಸಂಸ್ಕೃತಿ ಸಂಪ್ರದಾಯ ಶಾಸ್ತ್ರಗಳು ಪಾರಂಪರಿಕವಾಗಿ ಬೆಳೆದು ಬರುವುದಕ್ಕೂ ಈ ಕುಟುಂಬವೇ ಕಾರಣ. ಹುಟ್ಟಿದಾಗಿನಿಂದ ಕುಟುಂಬದೊಳಗೆ ಬೆಳೆದು ಪ್ರೀತಿ, ಕಾಳಜಿ ,ದಯೆ ಇತ್ಯಾದಿ ಜೀವನ ಮೌಲ್ಯಗಳನ್ನು ಕಲಿಯುವುದು ಇಲ್ಲಿಯೇ. ಇದು ನಮ್ಮ ಮೊದಲ ಪಾಠ ಶಾಲೆ ಎನ್ನಬಹುದು. ಹಿಂದೆಲ್ಲ ಹೆಚ್ಚಾಗಿ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಅಂದರೆ ಒಂದೇ ಕಡೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎಕ್ಸ್ಪ್ರೆಸ್ ಟ್ರೈನ್: ಮೋಹನ ಬಣಕಾರ

“ಮೈಸೂರು ಎಕ್ಸ್ಪ್ರೆಸ್”, ಇದು ಬೆಳಗಾವಿಯಿಂದ ಬೆಳಗ್ಗೆ ಸುಮಾರು 6:15 ಕ್ಕೆ ಹೊರಟರೆ, ಮೈಸೂರನ್ನು ತಲುಪೋದು ತಡಸಂಜೆ 8:00 ಗಂಟೆಗೆ. ಸುಮಾರು 615 ಕಿಲೋ ಮೀಟರ್ ರೈಲು ಮಾರ್ಗವನ್ನು ಕ್ರಮಿಸಲು 14 ಗಂಟೆಗಳ ಸುದೀರ್ಘ ಪ್ರಯಾಣ. ಅಂದರೆ ಪ್ರಯಾಣದ ಗತಿ, ಗಂಟೆಗೆ 43 ರಿಂದ 44 ಕಿಲೋಮೀಟರ್ಗಳು. ಇದು ನಮ್ಮ ಎಕ್ಸ್ಪ್ರೆಸ್ ಟ್ರೈನ್ ಗಳ ಹಣೆಬರಹ. ಇದೆಲ್ಲಾ ರೈಲು ನಿಗದಿತ ವೇಳಾಪಟ್ಟಿಯಂತೆ ಚಲಿಸಿದರೆ ಮಾತ್ರ ಅನ್ವಯ. ವಾಸ್ತವದಲ್ಲಿ, ಬಹುತೇಕ ರೈಲು ಪ್ರಯಾಣದ ಸ್ಥಿತಿ ಹೇಗೆಂದರೆ, ರೈಲು ಬಂದಾಗ (ಬಂದಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ