ಗೆಜ್ಜೆಪೂಜೆ: ವಾಸುಕಿ ರಾಘವನ್ ಅಂಕಣ
ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿರುವ ಬಸುರಿ ಪಿಟೀಲಿನಲ್ಲಿ ವಿಷಾದಗೀತೆ ನುಡಿಸುತ್ತಿರುತ್ತಾಳೆ. ಕೆಳಮಹಡಿಯಲ್ಲಿ ಅವಳ ಅಮ್ಮ ತಲೆಯ ಮೇಲೆ ಕೈ ಹೊತ್ತುಕೊಂಡು “ಅಯ್ಯೋ ಗಂಡು ಮಗು ಹುಟ್ಟಿಬಿಟ್ಟರೆ ಹೆಂಗಪ್ಪಾ?” ಅಂತ ಚಿಂತಾಕ್ರಾಂತಳಾಗಿ ಕುಳಿತಿರುತ್ತಾಳೆ. ಆಗಿನ ಕಾಲದ ಚಿತ್ರಗಳಲ್ಲಿ ಹೆಣ್ಣುಮಗು ಹುಟ್ಟಿದಾಕ್ಷಣ ಕುಟುಂಬದ ಕೆಲವರಾದರೂ ನಿರಾಶರಾಗುವ, ತಾಯಿ ಸಂತಸಗೊಂಡಿದ್ದರೂ ಸಂಭ್ರಮ ಪಡಲಾಗದೆ ಒದ್ದಾಡುವ ಸನ್ನಿವೇಶಗಳು ಅಪರೂಪವೇನಲ್ಲ. ಆದರೆ ಆಶ್ಚರ್ಯ ಅನ್ನುವಂತೆ ಇಲ್ಲಿನ ಸನ್ನಿವೇಶ ಅದಕ್ಕೆ ತದ್ವಿರುದ್ಧ. ನಂತರ ಹೆಣ್ಣುಮಗು ಚಂದ್ರಾ ಹುಟ್ಟಿದಾಗ ಅದರ ಅಜ್ಜಿ ಸಂಭ್ರಮಿಸುತ್ತಾಳೆ, ತಾಯಿ ಬೇಸರದ … Read more