ಗುರು ಪರಂಪರೆಯ ಸಂಗೀತ ಕಲೆ ಮತ್ತು ಶಿಷ್ಯ ವೃಂದ: ಅಮರ್ ದೀಪ್ ಪಿ. ಎಸ್.

"ಸ ರಿ ಗ ಮ ಪ ದ ನಿ  ಸಾವಿರದ ಶರಣು …… "ಎಂದು ಅಣ್ಣಾವ್ರು ಹಾಡುತ್ತಿದ್ದರೆ ನಾನು ಆ ಹಾಡನ್ನು ಬಹಳ ಇಷ್ಟಪಟ್ಟು ಕೇಳುತ್ತಿದ್ದೆ.  ಬರೀ  ಹಾಡಲ್ಲ, ಆ ಚಿತ್ರವನ್ನೂ ಅಷ್ಟೇ ಇಷ್ಟಪಟ್ಟು ನೋಡಿದ್ದೆ. ಅದು  ಅದ್ಭುತ ಸಂಗೀತ ಶಕ್ತಿ ಗಾಯಯೋಗಿ ಪಂಡಿತ್  ಶ್ರೀ ಪಂಚಾಕ್ಷರಿ ಗವಾಯಿಗಳ ಕುರಿತು ತಯಾರಿಸಿದ ಚಿತ್ರ. ಅವರ ಜೀವನಗಾಥೆಯ  ಒಂದು ಪವಾಡ ಸೃಷ್ಟಿ ಕಣ್ಣ ತುಂಬಿಕೊಳ್ಳುತ್ತದೆ. ಅದು ಚಲನಚಿತ್ರದ ಮಾತಾಯಿತು. ವಾಸ್ತವವಾಗಿ  ಈ ಮಾತು ಗದುಗಿನ ಶ್ರೀ ವೀರೇಶ್ವರ ಆಶ್ರಮದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇಲ್ಲಿ ಮೈಲಿಗೆಯಾದ ಮಂತ್ರಿ ಅಲ್ಲಿ ಕಾರ್ಪೊರೇಟ್‌ಗಳ ಕಣ್ಮಣಿ: ಅಖಿಲೇಶ್ ಚಿಪ್ಪಳಿ ಅಂಕಣ

ಲೋಕಸಭೆ ಚುನಾವಣೆ ಹತ್ತಿರ ಬಂದೇ ಬಿಟ್ಟಿದೆ. ಕಾರ್ಪೋರೇಟ್ ಲಾಬಿಗೆ ಮಣಿಯುವ ಸರ್ಕಾರಗಳು ಲಾಬಿಗೆ ಅನುಕೂಲ ಮಾಡಿಕೊಡುವಲ್ಲಿ ತಮ್ಮ ಅತಿಸಹಕಾರವನ್ನು ನೀಡುತ್ತವೆ. ಪರಿಸರದ ಬಗ್ಗೆ ವೈಯಕ್ತಿಕವಾಗಿ ಸ್ವಲ್ಪ ಬದ್ಧತೆ ತೋರಿದ್ದ ಜೈರಾಂ ರಮೇಶ್‌ರನ್ನು ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಕಿತ್ತು ಹಾಕಿ ಜಯಂತಿ ನಟರಾಜ್‌ರನ್ನು ತಂದು ಕೂರಿಸಿದರು. ಪಕ್ಷ ಸಂಘಟಿಸುವ ನೆವದಲ್ಲಿ ಜಯಂತಿ ನಟರಾಜ್‌ರಿಂದ ರಾಜಿನಾಮೆ ಕೊಡಿಸಿ ಇಂಧನ ಮಂತ್ರಿಯಾದ ವೀರಪ್ಪ ಮೊಯ್ಲಿಗೆ ಹೆಚ್ಚುವರಿ ಖಾತೆಯಾಗಿ ಅರಣ್ಯ ಮತ್ತು ಪರಿಸರ ಇಲಾಖೆಯ ಜವಾಬ್ದಾರಿಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಾದಾಮಿಯ ಬನಶಂಕರಿ ಜಾತ್ರಿ ಸಂಭ್ರಮ: ಸುಮನ್ ದೇಸಾಯಿ

      'ಬನದಹುಣ್ಣಿಮಿ’ ಮುಂದ ಬನಶಂಕರಿ ಜಾತ್ರಿ ಭಾಳ ದೊಡ್ಡ ಪ್ರಮಾಣದಾಗ ಆಗತದ, 1 ತಿಂಗಳ ತನಕಾ ಇರ್ತದ,ಎಲ್ಲೆಲ್ಲಿಂದೊ ಜನಾ ಬರ್ತದ,ನೋಡಬೇಕ ಆ ಛಂದಾನ, ಸುತ್ತಮುತ್ತಲ ಹಳ್ಳ್ಯಾಗಿನ ಮಂದಿ ಬಂಡಿ ಕಟಗೊಂಡ ಜಾತ್ರಿ ಮಾಡಲಿಕ್ಕೆ ಬರತಾರ. ಬಂಡಿಯೊಳಗ ವ್ಯವಸ್ಥಾ ಹೆಂಗಿರತದ ಗೊತ್ತೇನ ಈಗಿನ ನಿಮ್ಮ ವಿಮಾನದಾಗ ಹೊದ್ರು ಅದರಷ್ಟ ಆರಾಮ ಅನಸಂಗಿಲ್ಲ, ಬಂಡ್ಯಾಗ ಮೆತ್ತಗ ಹುಲ್ಲ ಹಾಸಿ ಮ್ಯಾಲೆ ಜಮಖಾನಿ ಹಾಸಿ ಕುಡಲಿಕ್ಕೆ ಎಷ್ಟ ಮಸ್ತ ಮೆತ್ತಗ ಹಾಸಿಗಿ ಮಾಡಕೊಂಡಿರತಾರ ಮತ್ತ ಅಡಗಿ ಮಾಡಲಿಕ್ಕೆ ಎನೇನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ವೆಂಕಟೇಶ್ ನಾಯಕ್, ಜಯಾ ನಾಣಯ್ಯ, ದೇಶಾಂಶ ಹುಡಗಿ

ಭಿತ್ತಿ ಚಿ(ಪ)ತ್ರ ಹಚ್ಚುವವರು ರಾತ್ರಿಯಿಡಿ ಕೈಯಲ್ಲಿ ಮೈದಾ ಅಂಟು ಎಳೆದೆಳೆದು ಕಿತ್ತೆಸೆವ ಭಿತ್ತಿಯ ನಂಟು ಗಂಟು ಕಟ್ಟುವ ಸಾಮ್ರಾಜ್ಯ ದೊಳಗೆ ತೇಪೆ ಹಚ್ಚಿ ಹಳತಿನ ಎದುರಲಿ ಹೊಸ ತೇಪೆಯ ತೆರೆಯೊಳಗೆ ದ್ವಿಚಕ್ರ ಕಾಲ ಋತುಮಾನ ಕಾಲಿನಲಿ ತುಳಿದು ತರುವ ಹೊಸತನ ಭಿತ್ತಿ ಚಿ(ಪ)ತ್ರ ಹಚ್ಚುವವರು ಮಾಸಿದ ಭಿತ್ತಿಗೆ ಬಣ್ಣದ ಕಾಗದ ಹಚ್ಚುವವರು ಕಿತ್ತೆಸೆಯಲಾಗದು ಕೆಲವರಂಟಿಸಿದ ಕಾಗದ ಕಣ್ಣೀರಿನಲಿ ಅದ್ದರೂ ಬಿಡದ ಅಂಟು ಈ ವರೆಗೆ ತಿಳಿದಿಲ್ಲ ದೂರವಾದರೂ ಉಳಿದಿದೆ ಸ್ಮೃತಿ ಪಟಲದಲಿ ನೆಂಪು ಹಲವಾರು ಕಾಗದಗಳಂಟಿದೆ ಮನದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೂರ್ಯಾಸ್ತವನರಸುತ್ತಾ (ಭಾಗ 2): ಪ್ರಶಸ್ತಿ ಪಿ.

ಬಿಡಲೇ ಆಗದಂತೆ ಉರಿಯುತ್ತಿದ್ದ ಕಣ್ಣುಗಳು, ಕೈ ಕಾಲುಗಳೆಲ್ಲಾ ಹಗ್ಗದಿಂದ ಜಗ್ಗಿದಂತೆ. ಎದ್ದೇನೆಂದರೂ ಏಳಲಾಗದಂತೆ ಧಿಮ್ಮೆನ್ನುತ್ತಿರುವ ತಲೆ.. ಎಲ್ಲಿದ್ದೇನೆಂದು ಅರಿವಿಗೆ ಬರಲು ಸ್ವಲ್ಪ ಹೊತ್ತೇ ಬೇಕಾಯಿತು. ಕಣಿವೆಯೊಂದರ ಸೂರ್ಯಾಸ್ತ ನೋಡಬೇಕೆಂದು ಹೊರಟ ಗೆಳೆಯರ ಗುಂಪಿನ ಉದ್ದೇಶ ಸೂರ್ಯಾಸ್ತಕ್ಕಷ್ಟೇ ಸೀಮಿತವಾಗದೇ ಮುಳುಗುರವಿಯ ದೃಶ್ಯಕಾವ್ಯಕ್ಕೆ ಇನ್ನೊಂದಿಷ್ಟು ರಂಗು ಹಚ್ಚುವಂತೆ ಪಾನ ಗೋಷ್ಟಿಯಲ್ಲಿ ತೊಡಗಿತ್ತು. ಈ ಪಾನವೆಂಬುದು ಪೌರುಷದ, ಸ್ಟೇಟಸ್ಸಿನ ಸಂಕೇತವೆಂಬ ಭಾವ ಗುಂಪಿನ ಗೆಳೆಯರದ್ದು ! ಕುಡಿಯದವರನ್ನು ಹೀಯಾಳಿಸುತ್ತಾ ಎಷ್ಟು ಬಾಟಲ್ ಏರಿಸುತ್ತೇವೆ ಅನ್ನುವುದರ ಮೇಲೆ ತಮ್ಮ "ಕೆಪ್ಯಾಸಿಟಿ"ಯ ಗುಣಗಾನ ಮಾಡುವುದರಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 13): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಬ್ರಹ್ಮ ದೇವಾಲಯವಿರುವ ಭಾರತದ ಏಕೈಕ ರಾಜ್ಯ ಯಾವುದು? ೨.    ವಿಶ್ವ ಪರಂಪಯ ಪಟ್ಟಿಗೆ ಸೇರಿದ ಕರ್ನಾಟಕ ಸ್ಥಳಗಳು ಯಾವುವು? ೩.    ಹಸಿರು ಕ್ರಾಂತಿ ಪ್ರಾರಂಭಿಸಿದ ಪ್ರಥಮ ರಾಜ್ಯ ಯಾವುದು? ೪.    ಭಾರತದಿಂದ ಹೊಗೆಸೊಪ್ಪು ಆಮದು ಮಾಡಿಕೊಳ್ಳುವ ದೇಶಗಳು ಯಾವುವು? ೫.    ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ರಾಜ್ಯ ಯಾವುದು? ೬.    ಏ ಗ್ರಾಮರ್ ಆಫ್ ದಿ ಕರ್ನಾಟಕ ಲಾಂಗ್ವೇಜ್ ಕೃತಿಯ ಕರ್ತೃ ಯಾರು? ೭.    ಏಕಲವ್ಯನ ವ್ಯಾಖ್ಯಾನವನ್ನು ಆಧರಿಸಿ ರಚಿಸಿದ ಪೈಯವರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗೊಂಜಾಳ ಮಾರೊ ಹುಡುಗ: ಸುಮನ್ ದೇಸಾಯಿ ಅಂಕಣ

ಎಷ್ಟೊ ವರ್ಷಗಳ ಮ್ಯಾಲೆ ಅಜ್ಜಿ ಊರಿಗೆ ಬಂದಿದ್ದೆ. ಖುಷಿ ಆಗಿತ್ತ ಆಕಿಗೆ ನನ್ನಕಿಂತಾ, ಮರಿಮೊಮ್ಮಕ್ಕಳನ್ನ ನೋಡಿ. ನನ್ನ ಮದವಿ ಆದಮ್ಯಾಲೆ ಬಂದಿದ್ದೇನ ಇಲ್ಲಾ ನಾನು. ಆಡಿಬೆಳೆದ ಊರಿನ ಮಣ್ಣಿನ ವಾಸನಿಗೆ ಮನಸು ಅರಳಿತ್ತು. ನನಗ ಅಜ್ಜಿ ಊರಾಗ ಭಾಳ ಮಂದಿ ಗೇಳತ್ಯಾರ ಇದ್ರು. ಎಷ್ಟು ನಕ್ಕು ನಲಿತಿದ್ವಿ ದಿನಾಪೂರ್ತಿ. ವಾಪಸ್ ಊರಿಗೆ ಹೋಗಬೇಕಾದ್ರ ಮುಂದಿನ ಸರತೆ ಬರೊತನಕಾ ಆಗೊವಷ್ಟು ಖುಷಿಯ ಕ್ಷಣಗಳ ನೆನಪಿನ ದೊಡ್ಡ ಗಂಟನ್ನ ಮನಸಿನ್ಯಾಗ ಹೊತಗೊಂಡ ಹೋಗ್ತಿದ್ದೆ. ಅದನ್ನೆಲ್ಲಾ ಈಗ ನೆನಪ ಮಾಡಕೊಂಡ್ರ ಎಷ್ಟ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೇಸರಗಳೇಕೆ ಹೀಗೆ ?: ಪದ್ಮಾ ಭಟ್

                       ಬೆಳಗಾಗಿ ಏಳುವುದರೊಳಗೆ, ಹೆಸರೇ ಇಲ್ಲದ ಬೇಸರಗಳು..ಇಷ್ಟದ ಗೆಳತಿಯೇ ಫೋನ್ ಮಾಡಲಿ, ಹತ್ತಿರದವರೇ ವಿಶ್ ಮಾಡಲಿ ಪ್ರತಿಕ್ರಿಯೆ ಸರಿಯಾಗಿ ಕೊಡಲು ಮನಸ್ಸಿಲ್ಲದ ಮನಸು.. ದಿನವೇ ಬೇಸರವಾ? ಅಥವಾ ನಾನೇ ನನಗೆ ಬೇಸರವಾಗಿಬಿಟ್ಟಿದ್ದೇನಾ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಎಲ್ಲಿ ಎಂದು ಯೋಚಿಸಬೇಕಷ್ಟೆ..ಯಾವುದೋ ಖುಷಿಯ ವಿಷಯಕ್ಕೂ ಮನಸ್ಸು ಹಗುರವಾಗದ ಸ್ಥಿತಿಯೋ, ಇಷ್ಟದ ಹಾಡಿಗೆ ಮನಸೋಲದೇ ಇರುವ ಬೇಸರವೋ ಅರಿಯದ ಸ್ಥಿತಿಗೆ ಒಂದಷ್ಟು ಬೇಡದೇ ಇರುವ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೆಳಗಿನ ಜಾವದ ಪ್ರಾಶಸ್ತ್ಯ ಓದು, ಸಕ್ಕರೆ ನಿದ್ದೆಯ ಸೋಗಲಾಡಿತನ: ಅಮರ್ ದೀಪ್ ಪಿ. ಎಸ್.

"ಬೇಗ ಮಲಗು ಬೇಗ ಏಳು"… ನಾಳೆ ಮಾಡುವುದನ್ನು ಇಂದೇ ಮಾಡು ಇಂದು ಮಾಡುವುದನ್ನು ಈಗಲೇ ಮಾಡು" ವಿದ್ಯೆಗೆ ವಿನಯವೇ ಭೂಷಣ" "ಕೈ ಮುಗಿದು ಒಳಗೆ ಬಾ" ಈ ಎಲ್ಲಾ ಮಾತು ಗಳನ್ನು ನಮ್ಮ ಶಾಲಾ ದಿನಗಳಲ್ಲಿ ದಿನಂಪ್ರತಿ ನಾವು ಬರೆಯುತ್ತಿದ್ದ ಕಾಪಿ ರೈಟಿಂಗ್ ಗಳು, ಮತ್ತು ಎಲ್ಲ ವನ್ನೂ ಹೇಳಿದಂತೆ ಬರೆಯಲು, ಬರೆದಂತೆ ರೂಢಿಸಿಕೊಳ್ಳಲು,  ಜೀವನದಲ್ಲಿ ಅಳವಡಿಸಿಕೊಳ್ಳಲು ಮಾಸ್ತರರು ಬೋಧಿಸುತ್ತಿದ್ದ ಬಗೆ.  ಚಿಕ್ಕಂದಿನಿಂದಲೇ ಕೆಲ ತಂದೆತಾಯಿ ಶಿಸ್ತು ಬದ್ಧವಾಗಿ ಬೆಳೆಸಿ ಮಕ್ಕಳನ್ನು ಅಣಿಗೊಳಿಸಿರುತ್ತಾರೆ. ಅದೇ ರೂಢಿ ಅವರನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸವಾಲುಗಳಿವೆ – ಪರಿಹಾರವೂ ಇದೆ: ಅಖಿಲೇಶ್ ಚಿಪ್ಪಳಿ ಅಂಕಣ

ಬೇಸಿಗೆ ಶುರುವಾಗುತ್ತಿದೆ. ಸೆಕೆ, ಬಾಯಾರಿಕೆ ಹೆಚ್ಚಾಗುತ್ತದೆ. ಸೆಕೆ ತಡೆಯಲು ಫ್ಯಾನ್ ಮತ್ತು ಏರ್‌ಕಂಡೀಷನ್‌ಗಳು ಬೇಕು. ಬಾಯಾರಿಕೆ ತಣಿಸಲು ತಂಪು ಪಾನೀಯಗಳ ಹಿಂಡು-ಹಿಂಡು ಅಂತಾರಾಷ್ಟ್ರೀಯ ಕಂಪನಿಗಳು ನಿಂತಿವೆ. ಟಿ.ವಿ.ಗಳಲ್ಲಿ ತುಂಡುಡುಗೆಯ ತರುಣಿಯರು ಮಾದಕವಾಗಿ ಓಲಾಡುತ್ತಾ ನೀವು ನಮ್ಮ ಕಂಪನಿಯ ಪಾನೀಯವನ್ನೇ ಸೇವಿಸಿ ಎಂದು ಜಬರ್‌ದಸ್ತು ಮಾಡುತ್ತಾರೆ. ಮನುಷ್ಯನ ಶಕ್ತಿಯ ಹಸಿವಿಗೆ ಇಡೀ ಭೂಮಂಡಲ ತಲ್ಲಣಿಸುತ್ತಿದೆ. ಪ್ರತ್ಯಕ್ಷವಾಗಿ-ಪರೋಕ್ಷವಾಗಿ ನೂರಾರು ಪ್ರಬೇಧಗಳು ಅಳಿವಿನಂಚಿಗೆ ಬಂದು ನಿಂತಿವೆ. ಅಮೇರಿಕಾದಲ್ಲಿ ಚಳಿಯಿಂದ ಜನ ಅತೀವ ತೊಂದರೆಗೊಳಗಾದರೆ, ಪ್ರಾಣಿ-ಪಕ್ಷಿಗಳು ಪುತು-ಪುತುನೆ ಉದುರಿ ಸಾಯುತ್ತಿವೆ. ಹವಾಮಾನ ವೈಪರೀತ್ಯವೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಣತಂತ್ರ ದಿನ: ಪ್ರಶಸ್ತಿ ಪಿ.ಸಾಗರ

ಗಣತಂತ್ರ ದಿನದ ಶುಭಾಶಯಗಳು !.  ಓ. ಧನ್ಯವಾದಗಳು. ಅಂದಂಗೆ ನಂಗೆ ಗಿಫ್ಟೆಲ್ಲಿ ?  ಗಿಫ್ಟಾ? ನಿಂಗಾ? ಯಾಕೆ ? !!! ಇದೊಳ್ಳೆ ಕತೆ ಆಯ್ತು. ಹುಟ್ಟಿದಬ್ಬಕ್ಕೆ, ಮದುವೆ ವಾರ್ಷಿಕೋತ್ಸವಕ್ಕೆ, ಸ್ನೇಹಿತರ ದಿನಕ್ಕೆ, ಅಪ್ಪಂದಿರ ದಿನಕ್ಕೆ, ಮಕ್ಕಳ ದಿನಕ್ಕೆ, ಪ್ರೇಮಿಗಳ ದಿನಕ್ಕೆ ಅಂತ ವರ್ಷವೆಲ್ಲಾ ಗಿಫ್ಟ್ ಗಿಫ್ಟಂರ್ತೀಯ. ನನ್ನ ದಿನಕ್ಕೊಂದು ಗಿಫ್ಟ್ ಕೊಡಕ್ಕಾಗಲ್ವಾ ?  ಓ,ಹೌದಲ್ವಾ ? ಇಷ್ಟು ವರ್ಷ ಈ ತರ ಯೋಚ್ನೇನೆ ಮಾಡಿರ್ಲಿಲ್ಲ. ಏನು ಬೇಕು ಗಿಫ್ಟು ನಿಂಗೆ ?  ಯಾವತ್ತೂ ಅದು ಸಿಕ್ಕಿಲ್ಲ, ಇದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೋರಿ ತಂದ ಕಥೆ: ಅಶೋಕ್ ಕುಮಾರ್ ವಳದೂರ್ (ಅಕುವ)

  "ಸುಧೀರಣ್ಣ ತೀರಿ ಕೊಂಡ" ಅಮ್ಮನ ಫೋನ್ ಬಂದಾಗ ತುಂಬಾ ಸಂಕಟ ಪಟ್ಟಿದ್ದೆ. ಬೇಸಾಯವನ್ನು ಪ್ರೀತಿಸಿದ ವ್ಯಕ್ತಿತ್ವ ಅದು.ಬಿಸಿಲು ಮಳೆಗಳು ಎಂದೂ ಆತನನ್ನು ಮುಟ್ಟಿದ್ದಿಲ್ಲ. ಚಳಿ ತಟ್ಟಿದ್ದಿಲ್ಲ. ಅದು ಮನೆಯ ಬೇಸಾಯದ ಕೋಣಗಳೇ ಆಗಲೀ ಕಂಬಳದ ಕೋಣಗಳೇ ಆಗಲಿ ಈತನಿಗೆ ಬಗ್ಗದೆ ಇರಲಿಲ್ಲ. ಕಂಬಳದ ಕೋಣನ ಕೊಂಬು ತಲೆಯ ನೆತ್ತಿಗೆ ಇರಿದಾಗ ರಕ್ತ ಹೋದದ್ದು ತಿಳಿಯಲಿಲ್ಲ. ಲೇಪದಲ್ಲೇ ಗುಣವಾದ ಗಾಯ ಮತ್ತೆ ಒಳಗೊಳಗೆ ಇಳಿದದ್ದು ಗೊತ್ತಾಗಲಿಲ್ಲ. ಮೊದ ಮೊದಲು ತಲೆನೋವಿದ್ದ ಅವರು ಮಣಿಪಾಲ ಆಸ್ಪತ್ರೆ ಸೇರಿದಾಗ ಪರಿಸ್ಥಿತಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ಪ್ರಶಾಂತ್ ಭಟ್, ಶ್ರೀಧರ ನಾಯಕ, ಅನಂತ್ ಕಳಸಾಪುರ

          ಫ಼ೇಸ್ಬುಕ್ ಕತೆಗಳಾಗಬಹುದಾದ ಸಾಲುಗಳೂ ಚುಟುಕಗಳಾಗಿ, ಎರಡು ಕಮೆಂಟು ಮೂರು ಲೈಕಿಗೆ ಕಾತರಿಸಿ, ಒಳಗೊಳಗೇ ಒರತೆ ಚಿಮ್ಮುವ ಮೊದಲೇ, ಕಾರುವ ಆತುರ; ಅಗೋ ಬಂತಲ್ಲ ನಮ್ಮನ್ನೂ ಯಾರೋ ನೋಡುವವರಿದ್ದಾರೆ, ನಮ್ಮ ಕನ್ನಡಿಯಲ್ಲಿ ಯಾರನ್ನೂ ಕಾಣದು; ವಿವಿಧ ವೇಷಗಳು, ಅವತಾರಗಳು, ಪರದೂಷಣೆಗಳು, ಬರಿದೇ ಒತ್ತುವ ಕುಟ್ಟುವ ನಕಲಿ ಕಾಳಜಿಗಳು; ಕೊನೆಗೆ ಉಳಿಯುವ ಖಾಲಿತನಕ್ಕೂ ಪೊಳ್ಳು ಸಮಾಧಾನಗಳು; ಆವಿಯಾಗಿ ಮೋಡವಾಗಿ ಘನೀರ್ಭವಿಸಿ, ಮಳೆಯಾಗಿ ಹೊಯ್ದರೇ ಓಮ್ ಶಾಂತಿಃ ಶಾಂತಿಃ ಶಾಂತಿಃ ಯಾಕೆ ಸುಮ್ಮನೇ ಸ್ಖಲನದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಗಂಡಾ ..ಅಲ್ಲಲ್ಲಾ…ಗುಂಡ-ಗುಂಡಿ: ಡಾ. ಆಜಾದ್ ಐ.ಎಸ್.

  ಗುಂಡ ಗರಂ….. “ಯಾಕೋ?!!”  ಅಂತ ಕೇಳಿದ್ದಕ್ಕೆ ಏನ್ ಹೇಳ್ದ ಗೊತ್ತಾ..?? “ಅಲ್ಲಾ ಸಾ… ಯಾವೋನು ಕಳ್ ನನ್ ಮಗ – ಎಂಡ, ಸಾರಾಯಿ ಬ್ರಾಂದಿ, ಬೀರು, ರಮ್ಮು, ಜಿನ್ನು, ಫೆನ್ನಿ, ಓಡ್ಕಾ ಎಲ್ಲಾದ್ಕೂ ಒಂದೇ ಕಲೆಕ್ಟಿವ್ ನೌನ್ “ಗುಂಡು” ಅಂತ ನಾಮಕರಣ ಮಾಡಿದ್ದು…??” ಅಬ್ಬಬಬಾ… ವ್ಯಾಕರಣದಲ್ಲಿ ತನಗೆ ಗೊತ್ತಿರೋ ಒಂದೇ ಒಂದು ಪಾರ್ಟ್ಸ್ ಅಫ್ ಸ್ಪೀಚ್ ನ ಎಷ್ಟು ಚನ್ನಾಗಿ ಉಪಯೋಗಿಸ್ದ..ಗುಂಡ…ವಾ.. ಎಂದುಕೊಂಡು… “ಅದ್ಸರಿ ..ಅದಕ್ಕೂ ನೀನು ಗರಂ ಆಗೋಕೂ ಏನಪ್ಪಾ ಸಂಬಂಧ?” ಅಂದೆ “ನಾಳೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ರೈಲಲ್ಲಿ ಕಂಡ ದೃಶ್ಯಗಳು: ಶರತ್ ಹೆಚ್.ಕೆ.

೧ ಅದು ಜನರಲ್ ಬೋಗಿ. ಭರ್ತಿಯಾಗಿದೆ. ಕುಂತವರು ಕುಂತೇ ಇದ್ದಾರೆ. ನಿಂತವರು ನಿಲ್ಲಲಾಗದೇ ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತಿದ್ದಾರೆ. ಕೆಲ ಸೀಟುಗಳು ಖಾಲಿ ಇವೆ. ಆದರೆ ಯಾರೋ ಬರುವರೆಂಬ ನೆಪ ನಿಂತವರ ಸಹನೆಯ ಮಿತಿ ಪರೀಕ್ಷಿಸುತ್ತಿದೆ. ೨ ಬೋಗಿಯೊಳಗೆ ಹೈಟೆಕ್ ಯುವಕನ ಆಗಮನವಾಗಿದೆ. ರೈಲಿನೊಳಗೂ ಕೂಲಿಂಗ್ ಗ್ಲಾಸು ಹಾಕಿಕೊಂಡು ಹವಾ ಸೃಷ್ಟಿಸುವ ಮಟ್ಟಿಗೆ ಅವನು ಆಧುನಿಕ ತಿರುಕ. ಅವನ ಕೈಯಲ್ಲಿ ತಳ್ಳಿಕೊಂಡು ಹೋಗಬಹುದಾದ ಹೆಣ ಭಾರದ ಲಗೇಜ್ ಬ್ಯಾಗು. ಅಲ್ಲೊಂದು ಸೀಟು ಖಾಲಿ ಇರುವುದು ಅವನ ಕಣ್ಣಿಗೆ ಬಿದ್ದಿದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 12): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ರಾಷ್ಟ್ರೀಯ ಸ್ವಯಂಸೇವಕದಳವನ್ನು ಸ್ಥಾಪಿಸಿದವರು ಯಾರು? ೨.    ಸುಭಾಶ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು? ೩.    ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು? ೪.    ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ? ೫.    ಕರ್ನಾಟಕದಲ್ಲಿ ಬೆಳೆಯುವ ರಾಗಿಯನ್ನು ಬೆಳೆಯುವ ಇನ್ನೊಂದು ಪ್ರಮುಖ ದೇಶ ಯಾವುದು? ೬.    ಗಡಿಯಾರದಲ್ಲಿ ಗಂಟೆ ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು? ೭.    ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ? ೮.    ಭಾರತದಲ್ಲಿ ಇಂಗ್ಲೀಷ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೊಸವರ್ಷದ ಮಾರನೇ ದಿನ!: ಫ್ಲಾಪೀಬಾಯ್

ನೆನ್ನೆ ಸಾಯಂಕಾಲ ಫ್ರೆಂಡ್ ಕ್ರಾಕ್ ಬಾಯ್ ಫೋನ್ ಮಾಡಿದ್ದ.  ಫ್ಲಾಪೀ ಇವತ್ತು ಹೇಗಿದ್ರೂ ವರ್ಷದ ಕೊನೆ ದಿನ. ರಾತ್ರಿ ಹನ್ನೊಂದು ಇಪ್ಪತ್ತಕ್ಕೆಲ್ಲಾ ನಮ್ಮ ಅಡ್ಡದ ಹತ್ರ ಬಂದು ಬಿಡು. ಎಲ್ಲಾ ಹುಡ್ರೂ ಬರ್‍ತಾ ಇದಾರೆ. ಫುಲ್ಲು ಕುಡಿದು, ಕುಣಿದು ಕ್ರಾಂತಿ ಮಾಡೋಣ. ಹೊಸ ವರ್ಷದಲ್ಲಿ ಭಾರೀ ಬದಲಾವಣೆ ತರೋಣ. ೨೦೧೪ರ ನ್ಯೂ ಇಯರ್ ಸೆಲಬ್ರೇಷನ್ ಗ್ರಾಂಡ್ ಆಗಿ ಮಾಡೋಣ. ಖರ್ಚು ಎಷ್ಟಾದ್ರೂ ಪರವಾಗಿಲ್ಲ. ಪಾರ್ಟಿ ಎಲ್ಲಾ ನಂದೆ, ಲೇಟ್ ಮಾಡದೇ ಬೇಗ ಬಾ ಅಂತ ಹೇಳೀ ನನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ