ಮೂರು ಕವಿತೆಗಳು: ಅನಿಲ ತಾಳಿಕೋಟಿ, ಸ್ವರೂಪ್ ಕೆ., ಎಂ.ಎನ್. ನವೀನ್ ಕುಮಾರ್.

ಸಮಾನತೆಗಾಗಿ ರಾಮಕೃಷ್ಣ ಗರ್ಭದ ಕಲ್ಲಾದ ಬುದ್ದ ಬಸವಳಿದು ಬಿದ್ದ ಅಲ್ಲಮ ಮೆಲ್ಲನೆದ್ದು ಹೋದ ಮೋಹನದಾಸನಾಶಿಸುತ್ತ ಅಸುನೀಗಿದ ವಿವೇಕ ಬಾಬಾ ನಿಟ್ಟುಸಿರಿಟ್ಟು ನಡೆದ ಮಳೆ ಸುರಿಯಿತು ಮರುಭೂಮಿಯ ಮೇಲೆ  ಕೊಳೆ ಬೆಳೆಯಿತು ಮನುಜರರಿವಿನೊಳಗೆ ಬರಬೇಕಾದವರೆಲ್ಲಾ ಬಂದು ಹೋದರು ಕೊಡಬೇಕಾದದ್ದೆಲ್ಲಾ ಕೊಟ್ಟು ಕಂಗೆಟ್ಟರು ಎಲ್ಲರನ್ನಟ್ಟಿ ಇನ್ನೂ ನಿಂತಿಹರು ದಾರಿಗೆಟ್ಟವರು. ನ ಹನ್ಯತೆ ಅಸಮಾನತೆ  ಕೊಲ್ಲಬಂದವರೆಲ್ಲಾ ಕಾಲವಾದರೂ ಕಾಲೂರಿಕೊಂಡ ಕೊಳೆತದ ನಾತ ನೈನಂ ಛಿಂದಂತಿ ಶಸ್ತ್ರಾಣಿ ಈ ಜಾತಿಯತೆ ಬದಲಾಗಬೇಕಾದದ್ದು ಬೆಂಕಿ ಗಾಳಿ ಮಳೆಯಲ್ಲ ಮನೆ ಮನೆಗಳಲ್ಲಿ ಮುದುಡಿದ ಮನಗಳು ತೆರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತುಂಬಿದ ಕೊಡ… (ಒಂದು ನೈಜಕಥೆಯ ಸುತ್ತ): ಸಂದೇಶ್ ಎಲ್.ಎಮ್.

ಬೆಂಗಳೂರು ಎಂಬ ಕಾಂಕ್ರಿಟ್ ಕಾಡಿನಲ್ಲಿ ಹೆಚ್ಚಿನ ಮಂದಿ ರಜೆ ಅಥವಾ ವಾರಾಂತ್ಯದಲ್ಲಿ  ಕಾಲ ಕಳೆಯಬೇಕೆಂದು ಬಯಸುವುದು ಮನೆಯಲ್ಲಷ್ಟೇ. ದೈನಂದಿನ ಚಟುವಟಿಕೆಗಳಲ್ಲಿ ಟ್ರಾಫಿಕ್, ತಲೆ ಬಿಸಿ, ಕೆಲಸದ ಗಡಿಬಿಡಿ ಇತ್ಯಾದಿ ಜಂಜಾಟಗಳಿಂದ ಬೇಸತ್ತವರಿಗೆ ರಜೆ ಎಂದರೆ ಹಬ್ಬದಷ್ಟೇ ಸಂಭ್ರಮ.  ರಜೆ ಸಿಕ್ಕಮೇಲೆ ಕೇಳಬೇಕೆ? ಹೆಂಡತಿ, ಮಕ್ಕಳು, ಸ್ನೇಹಿತರು, ಉಳಿದ ಕೆಲಸಗಳು, ಅಬ್ಬಾ ಪ್ಲಾನ್ ಮಾಡುವುದೇ ಬೇಡ, ನೀರು ಕುಡಿದಷ್ಟೇ ಸಲೀಸಾಗಿ ಮುಗಿದು ಹೋಗುವಂತದ್ದು. ಇಂತಹ ಸಂತೋಷದ ದಿನಗಳಲ್ಲಿ ನಮ್ಮ ಕವಿ ಮಹಾಶಯರು ತಮ್ಮ ಚೊಚ್ಚಲ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬೋಳು ತಲೆಯ ಅಪ್ಪ ಮತ್ತೆರಡು ಪ್ರಸಂಗಗಳು: ಅಮರ್ ದೀಪ್ ಪಿ.ಎಸ್.

ಆ  ಅಂಗಡಿ ತುಂಬಾ ಸಿನೆಮಾ ತಾರೆಯರ ಫೋಟೋಗಳು. ಬಗೆ ಬಗೆ ಸ್ಟೈಲ್ ನಲ್ಲಿ ನಿಂತ ಕಾರು, ಬೈಕು, ಕುದುರೆ ಹೀಗೆ ಒಂದೊಂದು ಸವಾರಿಯಲ್ಲಿ ನಿಂತ, ಓಡಿಸುವ  ಹೀರೋಗಳು. ಇನ್ನು ಹಿರೋಯಿನ್ನುಗಳ ಫೋಟೋಗಳಿಗೆ ಲೆಕ್ಕ ಇಲ್ಲ. ಅಲ್ಲಲ್ಲಿ ಹರಡಿ ಚೆಲ್ಲಾಪಿಲ್ಲಿಯಾದ ದಿನಪತ್ರಿಕೆಗಳ ತುಂಬಾ ಸಹ ಬರೀ ಸಿನೆಮಾಗಳ ಪೋಸ್ಟರ್.  ಕೆಲವೇ ಕೆಲವು ಪುಟಗಳು ಮಾತ್ರ ಪ್ರಾಪಂಚಿಕ ವಿದ್ಯಮಾನವುಳ್ಳದ್ದು ಆಗಿರುತ್ತಿದ್ದವು. ಸುತ್ತಲು ಕನ್ನಡಿಗಳ ಸಾಲು.  ಒಂದು ಮೂಲೆಯಲ್ಲಿ ಮೊದಲೆಲ್ಲ ರೇಡಿಯೋ ಟೇಪ್ ರೆಕಾರ್ಡರ್ ಇರುತ್ತಿದ್ದವು, ಇತ್ತೀಚೆಗೆ ಟಿ. ವಿ. ಗಳು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೆಸರಿಡದ ಕಥೆಯೊಂದು (ಭಾಗ 1): ಪ್ರಶಸ್ತಿ ಪಿ.

ಹೇ ಹೋಳಿಗೊಂದಿನ ರಜಾ ಹಾಕಕ್ಕೆ ಹೇಳೇ ಆ ಸೋಮು ಮತ್ತವನ ಗ್ಯಾಂಗಿಗೆ. ಅವ್ರನ್ನೆಲ್ಲಾ ನೋಡಿ ಸಿಕ್ಕಾಪಟ್ಟೆ ಸಮಯ ಆಯ್ತು. ಸಿಗೋಣಂತೆ ಬಣ್ಣದ ಹಬ್ಬದಲ್ಲಿ…ತಮ್ಮೆಂದಿನ ಪಾನಿ ಪುರಿ ಅಡ್ಡಾದಲ್ಲಿ ಫುಲ್ ಜೋಷಲ್ಲಿ ಮಾತಾಡ್ತಾ ಇದ್ಲು ಶ್ವೇತ ತನ್ನ ಗೆಳತಿ ಶಾರ್ವರಿಯೊಂದಿಗೆ. ಬೇರೆಯವ್ರು ರಜಾ ಹಾಕಿದ್ರು ಹಾಕ್ಬೋದೇನೋ ಆದ್ರೆ ಆ ಶ್ಯಾಮಂದೇ ಡೌಟು ಕಣೇ ಅಂದ್ಲು ಶಾರ್ವರಿ.ಡೌಟಾ ? ಯಾಕೆ ಅಂತ ಕಣ್ಣರಳಿಸಿದ್ಲು ಶ್ವೇತ  ಹೋಳಿಗಾ ? ಒಂದಿಡೀ ದಿನಾನಾ ಅಂತಾನೆ . ಒಂದಿನ ಕೆಲಸಕ್ಕೆ ಹೋಗ್ಬೇಡ ಅಂದ್ರೆ ಲಬೊ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಾ ಕ೦ಡ ಹಾಗೆ “ವ೦ಶವೃಕ್ಷ” : ಸುಮತಿ ಮುದ್ದೇನಹಳ್ಳಿ

ಎಸ್.ಎಲ್, ಭೈರಪ್ಪನವರ ಜನಪ್ರಿಯ ಕಾದ೦ಬರಿ ಆಧಾರಿತ ಸಿನೆಮಾ, "ವ೦ಶವೃಕ್ಷ" (1971) ತನ್ನ ಕಾಲಕ್ಕೆ ಹೊಸ ಅಲೆಯ ಚಿತ್ರ. ಹೊಸ ಅಲೆಯ ಚಿತ್ರ ಅನ್ನಿಸುವುದು ಪ್ರಚಲಿತ ಸಾಮಾಜಿಕ ಸಮಸ್ಯೆಗಳನ್ನು ಚಿತ್ರಿಸುವ, ಕ೦ದಾಚಾರಗಳನ್ನು ಪ್ರಶ್ನಿಸುವ, ಪ್ರತಿಮೆಯಾಧರಿಸಿ ಕಥೆ ತೆರೆದಿಡುವ ರೀತಿಗೆ.  ಈ ಬರಹ ಪೂರ್ಣ ಪ್ರಮಾಣದ ವಿಮರ್ಶೆಯಾಗಲು ನಾನು ಭೈರಪ್ಪನವರ ಸ೦ಬ೦ಧಿತ ಕಾದ೦ಬರಿ ಓದಬೇಕಿತ್ತು ಅನ್ನುವುದನ್ನು ಮೊದಲೇ ನಿಮ್ಮಲ್ಲಿ ಒಪ್ಪಿಕೊಳ್ಳುತ್ತೇನೆ, ಕಾದ೦ಬರಿ ಇನ್ನೂ ನನ್ನ ಕೈಗೆ ಸಿಕ್ಕಿಲ್ಲ.  ದೊಡ್ಡ ಕಾದ೦ಬರಿಯೊ೦ದನ್ನು ಸಿನೆಮಾ ಮಾಡಲು ಒಳ್ಳೆಯ ಎಡಿಟರ್ ಬೇಕು: ಕಥೆಯ ಹ೦ದರವನ್ನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಓಯಸಿಸ್: ನಿನಾದ (ಭಾಗ 3)

ಇಲ್ಲಿಯವರೆಗೆ ಮಾರನೆ ದಿನ ಲ್ಯಾಂಡ್ ಲಾರ್ಡ್ಗೆ ಫೋನ್ ಮಾಡುವಾಗ ನೀವು  ಬರೋಕೆ ರೆಡಿ ಆದ್ರೆ ಹೇಳಿ. ಇನ್ನು ಒಂದು ವಾರದಲ್ಲಿ ಎಲ್ಲ ದಾಖಲೆಗಳು ಸರಿ ಆಗುತ್ತೆ ಅಂದು ಹೇಳಿದರು. ಬರುವ ವಾರ ಬರೋದು  ಕಷ್ಟ. ಬರುವ ತಿಂಗಳು ಬರುವೆವು ಅಂದು ಹೇಳಿದ ನಿಶಾಂತ್ . ಆದರೆ ಅದೇ ಸಮಯಕ್ಕೆ ನಿಶಾಂತ್ ನ ವೀಸಾ ವಿಷಯ ದುತ್ತನೆ ಎದುರು ಬಂದು ಸಧ್ಯಕ್ಕೆ ಊರು ಬಿಡುವ ಹಾಗೆ ಇರಲಿಲ್ಲ. ಹೀಗಾಗಿ ದೀಪಾವಳಿ ಕಳೆದು ಬರುವುದಾಗಿ ಹೇಳಿದರು. ಈ ನಡುವೆ ಜೈನ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 19): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:  ೧.    ೨೦೧೪ ರಲ್ಲಿ ನಡೆಯುವ ಭಾರತದ ಸಾರ್ವತ್ರಿಕ ಚುನಾವಣೆ ಎಷ್ಟನೆಯ ಸಾರ್ವತ್ರಿಕ ಚುನಾವಣೆಯಾಗಿದೆ ? ೨.    ಬಿಹಾರದ ಯಾವ ನದಿಯನ್ನು ಕಣ್ಣೀರಿನ ನದಿ ಎಂದು ಕರೆಯುತ್ತಾರೆ? ೩.    ಭಾರತೀಯ ಜೇನು ಸಂಶೋಧನಾ ಸಂಸ್ಥೆ ಎಲ್ಲಿದೆ? ೪.    ೨೦೧೪ರಲ್ಲಿ ನಡೆದ ಏಷ್ಯಾ ಕಫ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯ ವಹಿಸಿದ ದೇಶ ಯಾವುದು? ೫.    ಜನವರಿ ೩೦ ೨೦೧೩ ರಂದು ಗುಜಾರಾತ್ ಕೆನ್ಸವಿಲ್ ಜಾಲೆಂಜ್ ಗಾಲ್ಫ್ ಟೂರ್ನಿಯ ರಾಯಭಾರಿಯಾದ ಕ್ರಿಕೆಟಿಗ ಯಾರು? ೬.    ಓಡಿಸಾ ರಾಜ್ಯದ ಆಡಳಿತ ಭಾಷೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೋತಿಗಳು ಸಾರ್ ಕೋತಿಗಳು: ಎಂ. ಎಸ್. ನಾರಾಯಣ.

ಕೆಲವು ನಿಜಕ್ಕೂ ಅದ್ಭುತವಾದ ದೃಷ್ಟಾಂತಗಳಿವೆ. ಬಹುಶಃ ಇವು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಹಸ್ತಾಂತರಗೊಂಡಿರಬಹುದೆಂದು ಭಾವಿಸುತ್ತೇನೆ. ಮನುಕುಲದ ಒಟ್ಟಾರೆ ವಿವೇಕವನ್ನು ಒಳಗೊಂಡಿರುವ ಈ ದೃಷ್ಟಾಂತಗಳಿಗೆ ಜನರನ್ನು ಸ್ಫೂರ್ತಿಸಿಂಚನದಲ್ಲಿ ತೋಯಿಸಿ ಧನಾತ್ಮಕವಾಗಿ ಪ್ರಚೋದಿಸುವ ಅಗಾಧವಾದ ಶಕ್ತಿಯಿರುವುದು ಸುಳ್ಳಲ್ಲ. ಈ ಅಂಕಣದ ಮೂಲಕ ಅಂತಹ ಒಂದೆರಡು ದೃಷ್ಟಾಂತಗಳನ್ನು ಕನ್ನಡದ ಓದುಗರೊಂದಿಗೆ ಹಂಚಿಕೊಳ್ಳಲು ಸಂತಸವಾಗಿದೆ. ಇಲ್ಲಿ ಚರ್ಚಿಸಲಾಗಿರುವ ಪರಿಕಲ್ಪನೆಗಳು ವಿಶೇಷವಾಗಿ ನಮ್ಮ ಯುವ ಜನತೆಗೆ, ತಮ್ಮ ವೃತ್ತಿಜೀವನದ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲು ಮಾರ್ಗದರ್ಶನ ಮಾಡುವ ದಾರಿದೀಪವಾಗಬಹುದು. ಭಾರತದಲ್ಲಿ ಕೋತಿಗಳನ್ನು ಹಿಡಿಯುವ ಸ್ವಾರಸ್ಯಕರವಾದ ಪ್ರಾಚೀನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅತಿಥಿ ಸಂಪಾದಕೀಯ: ಅನಿತಾ ನರೇಶ್ ಮಂಚಿ

ಮನುಷ್ಯ ಸಂಘ ಜೀವಿ. ಇದರಲ್ಲಿ ಹೆಣ್ಣಾದರೂ ಸರಿ ಗಂಡಾದರೂ ಸರಿ ಬದುಕು ಸಾಗಿಸಬೇಕಾದರೆ ಜೊತೆಯನ್ನು ಬಯಸುವುದು ಸಹಜ. ಬಂಡಿಯ ಎರಡು ಗಾಲಿಗಳಲ್ಲಿ ಯಾವುದು ಮುಖ್ಯವೆಂದು ಹೇಗೆ ಹೇಳಲು ಸಾಧ್ಯವಿಲ್ಲವೋ ಹಾಗೇ ಸ್ತ್ರೀ ಪುರುಷರಿಬ್ಬರಲ್ಲೂ ಯಾರು ಮೇಲು ಯಾರು ಕೀಳು ಎಂದು ಹೇಳುವುದು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಪೂರಕವಾಗಿ ನಡೆದರೆ ಬದುಕು ಸೊಗಸು.   ಬದಲಾದ ಕಾಲ ಘಟ್ಟದಲ್ಲಿ  ಸ್ತ್ರೀ ಇನ್ನಷ್ಟು ಹೊಣೆಗಾರಿಕೆಗಳನ್ನು ಹೆಗಲ ಮೇಲೇರಿಸಿಕೊಳ್ಳುತ್ತಾ ನಡೆದಿದ್ದಾಳೆ.ಆ ಹೆಜ್ಜೆಗಳು ನಡೆದಾಡಿದ ದಾರಿ ಹೊಸ ದಿಕ್ಕಿನತ್ತ ಸಾಗಬೇಕಾದರೆ ಸಮಾಜದ ಸಹಕಾರವೂ ಮುಖ್ಯ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಹಿಳಾ ದಿನ’ ಅರ್ಥ ಕಳೆದುಕೊಳ್ಳುತ್ತಿರುವಾಗ: ವೀಣಾ ಅನಂತ್

ಮಾರ್ಚ್ ೮,  ಮತ್ತೊಮ್ಮೆ ವಿಶ್ವ ಮಹಿಳಾ ದಿನ ಬಂದಿದೆ. ಮತ್ತೊಮ್ಮೆ ಕನವರಿಕೆಗಳು, ಹೊಸ ಆಶಯಗಳು… ಭಾರತೀಯ ಮಹಿಳೆ ಇಂದು ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದಾಳೆ… ಎಲ್ಲಾ ಕಡೆ ಮಹಿಳೆಯರದೇ ಮೇಲುಗೈ…ಇವೆಲ್ಲಾ ಕೇಳಿ ಬರುವ ಮಾತುಗಳು. ಆದರೆ ನಿಜ ಪರಿಸ್ಥಿತಿ ಬೇರೆಯೇ ಇದೆ. ಹಳೆ ಕನಸುಗಳೆಲ್ಲಾ ದುಃಸ್ವಪ್ನವಾಗಿ ಕಾಡುತ್ತಿರಲು ಹೊಸ ಕನಸುಗಳನ್ನು ಹೆಣೆಯಲು ಯಾಕೋ ಮನಸ್ಸೇ ಬರುತ್ತಿಲ್ಲ. ಇತ್ತೀಚಿಗಿನ ಘಟನೆಗಳನ್ನು ಗಮನಿಸಿದಾಗ ಯಾಕೋ ’ ಮಹಿಳಾ ದಿನ’ ಅರ್ಥ ಕಳೆದುಕೊಂಡಂತೆ ಅನಿಸುತ್ತಿದೆ. ಇತ್ತೀಚೆಗೆ ಅತ್ಯಾಚಾರ, ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗಿವೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹರಳೆಣ್ಣೆ ಡಬ್ಬಿ ಮತ್ತು ಹಳೇ ಪ್ರೇಮ ಪುರಾಣ..!: ರಶ್ಮಿ ಜಿ ಆಳ್ವ

ಪ್ರೀತಿ ಅನ್ನುವ ಎರಡಕ್ಷರವನ್ನು ದ್ವೇಷಿಸುವಂತೆ ಮಾಡಿದ್ದು ನೀನು… ಪ್ರೀತಿ ಅಂದರೆ ಅರಿಯದ ದಿನಗಳವು… ರೋಮಿಯೋ-ಜ್ಯೂಲಿಯೆಟ್, ಲೈಲಾ-ಮಜ್ನು ಪ್ರೀತಿಗಾಗಿ ಸತ್ತರು ಇಷ್ಟೇ ನನಗೆ ಗೊತ್ತಿದ್ದಿದ್ದು. ಆದರೆ ಕಾಲೇಜಿನ ದಿನಗಳಲ್ಲಿ ಲೆಕ್ಚರರೊಬ್ಬರು ತುಂಬಾ ಇಷ್ಟವಾಗಿದ್ದರು. ಅವರು ಮಾಡುತ್ತಿದ್ದ ಪಾಠವೂ ಅಷ್ಟೇ ಆಕರ್ಷಕ. ನಮ್ಮ ಗರ್ಲ್ಸ್ ಕಾಲೇಜ್ ಹೀರೋ ಅವರು. ಅವರು ಮಾಡುತ್ತಿದ್ದ ‘ಡಿಮಿನಿಶಿಂಗ್ ಮಾರ್ಜಿನಲ್ ಯುಟಿಲಿಟಿ’ಯ ಪಾಠ ಇಂದಿಗೂ ಮರೆತಿಲ್ಲ. ಕಾಲೇಜಿನ ಕೊನೆಯ ದಿನಗಳಲ್ಲಿ ಅವರು ನನ್ನ ಆಟೋಗ್ರಾಫ್‌ನಲ್ಲಿ ಬರೆದಿದ್ದು, ‘ಲವ್ಲೀ ಹ್ಯೂಮನ್‌ಬಿಯಿಂಗ್ ವಿತ್ ಮೋಸ್ಟ್ ಎಕ್ಸ್‌ಪ್ರೆಸಿಂಗ್ ಐಸ್’ ಕಣ್ಣಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಇತಿ-ಮಿತಿಗಳ ನಡುವೆ ಅಂದು-ಇಂದಿನ ಮಹಿಳೆ: ತೇಜಸ್ವಿನಿ ಹೆಗ್ಡೆ

 ಪ್ರಾಚೀನ ಕಾಲದಿಂದಲೂ (ವೇದ ಕಾಲವನ್ನು ಬಿಟ್ಟು) ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಎಲ್ಲೆಡೆಯಲ್ಲೂ ಸ್ತ್ರೀಯನ್ನು ಎರಡನೆಯ ದರ್ಜೆಯ ಪ್ರಜೆಯೆಂದೇ ಪರಿಗಣಿಸಲಾಗಿದೆ. ಆಯಾ ಕಾಲದಲ್ಲಿ ರಚಿತವಾದ ಧರ್ಮಗ್ರಂಥಗಳನ್ನು ಅನುಸರಿಸಿ ಅಥವಾ ಅವುಗಳಲ್ಲಿ ಪ್ರಸ್ತಾಪಿಸಲ್ಪಟ್ಟ ನಿಯಮಾವಳಿಗಳನ್ನು ತಮಗೆ ಮನಬಂದಂತೇ ತಿರುಪಿ, ಅವುಗಳನ್ನೆಲ್ಲಾ ಹೆಣ್ಣಿನ ಮೇಲೆ ಹೇರಿ ಪಿತೃಪ್ರಧಾನ ಸಮಾಜ ಅವಳನ್ನು ಹಲವು ರೀತಿಯಲ್ಲಿ ನಿರ್ಬಂಧಿಸಿ, ದೌರ್ಜನ್ಯವೆಸಗುತ್ತಲೇ ಬಂದಿದೆ.   ಆದರೆ ಸರಿ ಸುಮಾರು ೫,೦೦೦ ವರುಷಗಳ ಹಿಂದಿನ ವೇದದ ಕಾಲದಲ್ಲಿ ಮಹಿಳೆಯರ ಸ್ಥಿತಿ ಉತ್ಕೃಷ್ಟವಾಗಿತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ವೇದಕಾಲದ ಪೂರ್ವಾರ್ಧದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕಿನ ಆಶಾಕಿರಣ: ಪದ್ಮಾ ಭಟ್

                              ”ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ” ಈ ಸಾಲನ್ನು ಪದೇ ಪದೇ ಕೇಳಬೇಕೆನಿಸಿತ್ತು.. ಮುಂದುವರೆದು ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿವುದೆ ಜೀವನ ಸಾಲೂ ಮತ್ತೊಮ್ಮೆ ಮಗದೊಮ್ಮೆ ಹಾಕಿ ಕೇಳಿಸಿದೆ. ಯಾವ ಮೋಹನ ಮುರಳಿ ಕರೆಯಿತೋ ಹೊಸದಾಗಿ ಕೇಳುವವಳೇನಲ್ಲ. ಆದರೆ ಎಂದಿಗಿಂತಲೂ ಆಪ್ತವೆನಿಸಿತ್ತು ಸಾಲುಗಳು..ಯಾಕೋ ಒಬ್ಬಂಟಿಯಾಗಿ ಕುಳಿತಿದ್ದವಳಿಗೆ ಹಾಡಿನಲ್ಲಿ ಕಳೆದು ಹೋಗುತ್ತಿದ್ದೇನೆ ಎಂಬುವುದು ಅರಿವಾಗದೇ ಇರುವಷ್ಟು ಮುಳುಗಿ ಹೋಗಿದ್ದೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಾವು-ಹಲಸಿನ ಮರ ಉಳಿಸಿದ ಕತೆ: ಅಖಿಲೇಶ್ ಚಿಪ್ಪಳಿ

ಲೋಕಸಭೆಗೆ ಚುನಾವಣೆ ಘೋಷಣೆಯಾಗುವ ಸರಿಯಾಗಿ ೧೨ ದಿನ ಮೊದಲು ಹಾಗೂ ಕೇಂದ್ರ ತೈಲ ಮತ್ತು ಪರಿಸರ ಮಂತ್ರಿ ಅಭಿವೃದ್ಧಿಯ ನೆಪದಲ್ಲಿ ಕಾರುಗಳ ಮೇಲೆ ವಿಧಿಸುವ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ ೫ ದಿನಗಳ ನಂತರ ಅಂದರೆ ದಿನಾಂಕ:೨೨-೦೩-೨೦೧೪ರಂದು ಬೆಳಗ್ಗೆ ೯.೩೦ಕ್ಕೆ ಅಪ್ಪಟ ಪೃಥ್ವಿ ಮಿತ್ರರೊಬ್ಬರು ನಿಸ್ತಂತು ದೂರವಾಣಿಗೆ ಕರೆ ಮಾಡಿ ಸಾಗರದಿಂದ ಸಿಗಂದೂರಿಗೆ ಹೋಗುವ ಮಾರ್ಗದಲ್ಲಿರುವ ೨ ಮರಗಳನ್ನು ಅರಣ್ಯ ಇಲಾಖೆಯ ಪರವಾನಿಗೆ ಪಡೆದು ಕಡಿಯುತ್ತಿದ್ದಾರೆ ಬೇಗ ಬನ್ನಿ ಎಂದು ಹೇಳಿದರು. ಬೆಳಗಿನ ಹೊತ್ತು ನಮ್ಮ ಹೊಟ್ಟೆಪಾಡಿನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಳ್ಳೆ-ಮಳ್ಳೆ ಕಪಾಟ ಮಳ್ಳೆ: ಸುಮನ್ ದೇಸಾಯಿ

ಮನ್ನೆ ರವಿವಾರ ಮಧ್ಯಾನಾ ಉರಿ ಉರಿ ಬಿಸಲ ಝಳಾ ತಡಕೊಳ್ಳಾರ್ದಕ್ಕ ಬಾಗಿಲಿಗೆ ತಲಿಕೊಟ್ಟ ಮಲಕೊಂಡ್ಡಿದ್ದೆ, ಹಿಂಗ ಜಂಪ ಹತ್ತ್ಲಿಕತ್ತಿತ್ತು ಅಷ್ಟರಾಗ ತಂಪಸೂಸ ಗಾಳಿ ಬಿಸಲಿಕತ್ತು. ಕಣ್ಣ ತಗದು ನೋಡೊದ್ರಾಗ ಮಳಿ ಬರೊಹಂಗಾಗಿ ಜೋರ ಮಾಡ ಹಾಕಿತ್ತು. ಇನ್ನೆನು ಹಿತ್ತಲಕ್ಕ ಹೋಗಿ ಒಣಗಿದ್ದ ಅರಬಿ ತಕ್ಕೊಂಡ ಬರೊದ್ರಾಗ ಹನಿ ಹನಿ ಮಳಿ ಶುರು ಆಗೆಬಿಡ್ತು. ನೋಡ್ ನೋಡೊದ್ರಾಗ ದಪ್ಪ ದಪ್ಪ ಹನಿ ಜೊಡಿ ಆಣಿಕಲ್ಲು ಬಿಳಿಕ್ಕತ್ವು.ಕಣ್ಣ ಮುಚ್ಚಿ ಕಣ್ಣ ತಗಿಯೋದ್ರಾಗ ಅಂಗಳದ ತುಂಬ ಬೆಳ್ಳಗ ಮಲ್ಲಿಗಿ ಹೂವಿನ ರಾಶಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಪ್ರಭಾಮಣಿ ನಾಗರಾಜ, ಸಹನಾ ಕಾಂತಬೈಲು, ಶ್ರೀದೇವಿ ಕೆರೆಮನೆ

ಹಬ್ಬದ ಕುರಿ ಕಟ್ಟಲಾಗಿದೆ ಕುರಿಯ ಪಡಸಾಲೆಯಲ್ಲಿ ಇದ್ದಲ್ಲೇ ದೊರೆವ ಸೊಪ್ಪುಸೆದೆ ಬಗೆಬಗೆಯ ಆಹಾರ ಏಕಿಷ್ಟು ಉಪಚಾರ? ಕ್ಷಣಗಣನೆಯಾಗುತಿದೆ ಎಂದರಿಯದ ಬಕರ   ಕಣ್ಣಲ್ಲೇ ಅಳೆವವರ ಅಭಿಮಾನದ ನೋಟ ಏನಿದು ಮನುಜರ  ವಿಕೃತ ಆಟ? ಅಪರಿಚಿತರ ಕಂಡು  ಬೆದರುತಿದೆ ಮುಗ್ದ ‘ಹಬ್ಬಕ್ಕೆ ತಂದ  ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತಾ…’ ಎಂದೂ ಆರದ ಕಿಚ್ಚಿನ  ನಮ್ಮೀ ಒಡಲೊಳಗಿನ  ಬಡಬಾಗ್ನಿಯ ತಣಿಸಲು ಇನ್ನೆಷ್ಟು ಜೀವಿಗಳ  ಬಲಿಯೋ? ಅತೃಪ್ತ-ತೃಪ್ತತೆಯ  ಅವಿರತ ಓಟದಲಿ ಜಿಹ್ವೆಯದೇ ದರ್ಬಾರು ಬಾಹ್ಯ ಪ್ರೇರಿತ ಕ್ರಿಯೆಗಳಲ್ಲಿಯೇ  ತೊಡಗಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 18): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು ೧.    ಚಂದ್ರನ ಮೇಲೆ ಪ್ರಥಮವಾಗಿ ತಲುಪಿದ ಮಾನವನಾರು? ೨.    ಭಾರತಕ್ಕೆ ಸ್ವಾತಂತ್ರ ಬಂದಾಗ ಗಾಂಧೀಜಿಯವರು ಎಲ್ಲಿದ್ದರು? ೩.    ಇಂಟರ್‌ನೆಟ್ಟನ್ನು ಮೊದಲಿಗೆ ಎಲ್ಲಿ ಬಳಸಲಾಯಿತು? ೪.    ಸ್ವತಂತ್ರ ಭಾರತದ ಮೊಟ್ಟ ಮೊದಲ ವಿವಿದ್ದೋದ್ದೇಶ ನದಿ ಕಣಿವೆ ಯೋಜನೆ ಯಾವುದು? ೫.    ಶಂಕರಾಚಾರ್ಯರು ಯಾವ ರಾಜ್ಯದಲ್ಲಿ ಜನಿಸಿದರು? ೬.    ಭಾಗ್ಯಲಕ್ಷ್ಮಿ ಯೋಜನೆ ಎಂದರೇನು? ೭.    ರಾಕ್ಷಸ ಪ್ರವೃತ್ತಿಯ ಅಂಗೂಲಿಮಾಲನ ಮನಪರಿವರ್ತನೆ ಮಾಡಿದವರು ಯಾರು? ೮.    ನಮ್ಮ ರಾಜ್ಯದಲ್ಲಿ ಕರಡಿಗಳಿಗೆ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ? ೯.    ವಾತಾವರಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಿಂತಿರುಗಿ ನೋಡಿದಾಗ: ರುಕ್ಮಿಣಿಮಾಲಾ

೧೯೭೪ನೇ ಇಸವಿಯಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತನಡ್ಕದಲ್ಲಿರುವ ಸರ್ಕಾರೀ ಪ್ರಾಥಮಿಕ ಶಾಲೆಗೆ ಒಂದನೇ ತರಗತಿಗೆ ಸೇರಿದಾಗ ನನ್ನ ವಯಸ್ಸು ಐದು. ಮನೆಯಿಂದ ಶಾಲೆಗೆ ಒಂದು ಮೈಲಿ ನಡೆದೇ ಹೋಗುತ್ತಿದ್ದುದು. ನಮಗೆ ಮಹಮ್ಮದ್ ಎಂಬ ಶಿಕ್ಷಕರು ಅ ಆ ಇ.. ..  ಕನ್ನಡ ಅಕ್ಷರ ಮಾಲೆ ಕಲಿಸಿದವರು. ಅವರ ಮೇಜಿನಮೇಲೆ ನಾಗರಬೆತ್ತ ಸದಾ ಇರುತ್ತಿತ್ತು. ಒಮ್ಮೆಯೂ ನಾನು ಅದರ ಪೆಟ್ಟಿನ ರುಚಿ ಪಡೆದವಳಲ್ಲ! ಆದರೆ ಏಕೋ ಗೊತ್ತಿಲ್ಲ ಆ ಬೆತ್ತದಮೇಲೆ ನನಗೆ ಬಲು ಕೋಪವಿತ್ತು. ನಮ್ಮ ಮೇಸ್ಟರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ