ನಾಟಿಯ ಪದಗಳು: ಹನಿಯೂರು ಚಂದ್ರೇಗೌಡ
ಜನಪದರ ಕಾಯಕಶಕ್ತಿಯೇ ಜಾನಪದ ಸಾಹಿತ್ಯಸೃಷ್ಟಿಗೆ ಮೂಲಕಾರಣವಾದುದು. ಕಾಯಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಕಾರಣದಿಂದಲೇ ಜಾನಪದ ಸಾಹಿತ್ಯ ಹೆಚ್ಚೆಚ್ಚು ಬೆಳೆಯುತ್ತಾ ಬಂದು, ಅದೀಗ ಸಂಪೂರ್ಣವಾಗಿ ಏಕಕಾಲದಲ್ಲಿ ಯಾರೊಬ್ಬನು ಮುಟ್ಟಲಾಗದ ಬೃಹದ್ ರಾಶಿಯಾಗಿದೆ. ಇಂತಹ ಜಾನಪದ ರಾಶಿಯಲ್ಲಿ ಕೃಷಿಹಾಡು, ಹಸೆಹಾಡು, ಸೋಬಾನೆಹಾಡು, ದೇವರಮೇಲಿನಹಾಡು, ಮಳೆಹಾಡು, ಕಳೆಕೀಳುವಾಗಿನಹಾಡು, ಮಗುಹುಟ್ಟಿದಹಾಡು, ಯಾರೋ ಸತ್ತರೆಹಾಡು, ಹಬ್ಬಕ್ಕೊಂದುಹಾಡು, ಹರುಷಕ್ಕೊಂದುಹಾಡು, ದುಃಖಕ್ಕೊಂದುಹಾಡು, ಸರಸಕ್ಕೊಂದುಹಾಡು, ವಿರಸಕ್ಕೊಂದುಹಾಡು, ಕೀಟಲೆಗೊಂದುಹಾಡು, ಕಿಚಾಯಿಸಲೊಂದುಹಾಡು, ಚುಡಾಯಿಸಲೊಂದುಹಾಡು, ರೇಗಿಸಲೊಂದುಹಾಡು, ಪ್ರಸ್ತಕ್ಕೊಂದುಹಾಡು, ಹೆಣ್ಣು,ಗಂಡನ ಮನೆಗೆ ಹೋಗುವಾಗೊಂದುಹಾಡು, ತವರುಮನೆಗೆ ಬರುವಾಗೊಂದುಹಾಡು, ಮಡಿಲುತುಂಬುವಾಗೊಂದುಹಾಡು, ಬಾಣಂತಿಗೊಂದುಹಾಡು, ಗರ್ಭಿಣಿಗೊಂದುಹಾಡು, ಮದುವಣಗಿತ್ತಿಯನ್ನು ಕರೆದೊಯ್ಯುವಾಗೊಂದುಹಾಡು, ಮನೆತುಂಬಿಸಿಕೊಳ್ಳವಾಗೊಂದುಹಾಡು, … Read more