ಮೂವರ ಕವನಗಳು: ಅಜ್ಜೀಮನೆ ಗಣೇಶ್, ಯದುನಂದನ್ ಗೌಡ ಎ.ಟಿ., ಮಂಜುನಾಥ ಹನಮಂತಪ್ಪ ವರಗಾ

ಸಮಾದಿಯ ಹೂವು ಚಂದಿರನ ಕೀಟಲೆಗೆ ಮೈಜುಮ್ಮೆಂದು ಕತ್ತಲ ಹಟ್ಟಿಯಲ್ಲಿ ಮೈನೆರೆದಿದ್ದೆ.. ಮುಂಜಾವಿನ ರವಿ ಮೂಡಿ ಇಬ್ಬನಿಯ ನೀರೇರದು ಹಗಲ ಕಡಲಲಿ ತೇಲಿಬಿಡುವವರೆಗೂ ಮೈಮರೆತೇ ಇದ್ದೆ… ಯೌವ್ವನ ಹರಿವ ಹೊಳೆ ಎದೆಯಲಿ ಒಲವ ಮಳೆ ಕುಡಿಯರಳಿ ನಿಂತವಳಿಗೆ ದಿನದ ಬೆಳಕು ಹಿತವಾದ ಹಗೆ.. ಹಾಡ್ತೀರಿ, ಆಡ್ಕೋತೀರಿ ಸ್ವಂತಕ್ಕೆಂದು ಕಿತ್ತಿಡ್ಕೊತೀರಿ ನಾಚಿಕೆಯಿಲ್ಲ.. ಥೂ.! ನನ್ನ ಹಾದಿಗೆ ನಿಮ್ಮದೇನು ಅಣತಿ.? ಯಾಕೀ..ಮೈಮುಟ್ಟೋ ಸಲುಗೆ,.? ದುಂಬಿ, ಜೇನು, ಚಿಟ್ಟೆ ಮತ್ತು ನೀವು, ಮೈಪರಚೋ ಕಂಬಳಿ ಹುಳಗಳೆ ಎಲ್ಲಾ… ಬಲವಂತದ ಹಾದರಕೆ ನಿಸರ್ಗ ಸೃಷ್ಟಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೌರಶಕ್ತಿ v/s ಸೀಮೆಎಣ್ಣೆ: ಅಖಿಲೇಶ್ ಚಿಪ್ಪಳಿ

ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ, ಗಂಡ-ಅತ್ತೆ-ಮಾವರಿಂದ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸೊಸೆಯ ಕೊಲೆ. ಕೊಲೆಗಾರರ ಮೇಲೆ ಪೋಲೀಸರು ವರದಕ್ಷಿಣೆ ಕೇಸು ದಾಖಲಿಸಿಕೊಂಡಿದ್ದಾರೆ ಎಂಬಂತಹ ಸುದ್ಧಿಗಳು ಈಗೊಂದು ಹತ್ತು ವರ್ಷಗಳ ಹಿಂದೆ ಮಾಮೂಲಿಯಾಗಿದ್ದವು. ಸೀಮೆಎಣ್ಣೆ ಮಾಫಿಯಾಗಳು ಮಾಡಿದ ಕೊಲೆಗಳು ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಸರಕಾರ ಸೀಮೆಎಣ್ಣೆಯನ್ನು ಮುಕ್ತವಾಗಿ ಮಾರುವುದಕ್ಕೆ ನಿಷೇಧ ಹೇರಿದ್ದರಿಂದ ಅಂತೂ ಕೆಲವು ಜೀವಗಳಾದರೂ ಬದುಕಿರಬಹುದು. ಆದರೂ ಉನ್ನತ ಮಟ್ಟದಲ್ಲಿ ಸೀಮೆಎಣ್ಣೆಯ ಬಲುದೊಡ್ಡ ವ್ಯಾಪಾರವಿದೆ. ಹೊರದೇಶಗಳಿಂದ ಬರುವ ಹಡಗಿನ ಪೆಟ್ರೋಲ್ ತುಂಬಿದ ಕಂಟೈನರ್‍ಗಳಿಗೆ ಸೀಮೆಎಣ್ಣೆಯನ್ನು ಮಿಶ್ರಣ ಮಾಫಿಯಾಗಳೂ ಇವತ್ತೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಿಂದಿಗಿ ಭೂತ: ಗುಂಡುರಾವ್ ದೇಸಾಯಿ

ಪದ್ದು ನಿತ್ಯದಂತೆ ವಾಕಿಂಗ್‍ಗೆ ಊರ ಹೊವಲಯದಲ್ಲಿ ಹೋಗಿದ್ದಾಗ ಕಾಲಿಗೆ ಕಲ್ಲುತಾಗಿ ಎಡವಿ ಬಿದ್ದ, ಎಡವಿದ ಸ್ಥಳದಲ್ಲಿ ನೋಡತಾನೆ ಹೊಳೆಯುವ ವಸ್ತುವೊಂದು ಕಾಣಿಸ್ತು.  ಪುರಾತನ ವಸ್ತು ಇರಬಹುದೆಂದು ತೆಗ್ಗು ತೊಡಿ ತೆಗೆದ ಪುಟ್ಟ ಬಿಂದಿಗಿ ತರಹ ಇತ್ತು. ಒಳಗೆ ಏನು ಇರಬಹುದೆಂದು ತೆಗೆದು  ನೋಡಿದ ಬಸ್ ಎಂದು ಹೊಗೆ ಹೊರಗೆ ಬಂದು ದೈತ್ಯಾಕಾರದ ವಿಚಿತ್ರ ಆಕೃತಿ ಕೈಕಟ್ಟಿಕೊಂಡು ದೈನ್ಯತೆಯಿಂದ ‘ಸ್ವಾಮಿ ತಾವು ನನ್ನನ್ನು ಬಂಧ ಮುಕ್ತರನ್ನಾಗಿ ಮಾಡಿದಿರಿ. ನಿಮಗೆ ಏನು ಸಹಾಯ ಬೇಕು ಕೇಳಿ’ ಎಂತು. ಅಲ್ಲಾವುದ್ದೀನನ ಅಧ್ಭುತ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಚಹಾ ಕಪ್‌ಗಳು ಸುಝುಕಿ ರೋಶಿಯನ್ನು ವಿದ್ಯಾರ್ಥಿಯೊಬ್ಬ ಕೇಳಿದ, “ಜಪಾನೀಯರು ಸುಲಭವಾಗಿ ಒಡೆದು ಹೋಗುವಷ್ಟು ತೆಳುವಾಗಿಯೂ ನಾಜೂಕಾಗಿಯೂ ಇರುವಂತೆ ತಮ್ಮ ಚಹಾ ಕಪ್‌ಗಳನ್ನೇಕೆ ತಯಾರಿಸುತ್ತಾರೆ?”  ರೋಶಿ ಉತ್ತಿರಿಸಿದರು, “ಅವು ಅತೀ ನಾಜೂಕಾಗಿವೆ ಅನ್ನುವುದು ವಿಷಯವಲ್ಲ. ಅವನ್ನು ಸರಿಯಾಗಿ ಬಳಕೆ ಮಾಡುವುದು ಹೇಗೆಂಬುದು ನಿನಗೆ ತಿಳಿದಿಲ್ಲ ಅನ್ನುವುದು ವಿಷಯ. ನೀನು ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳ ಬೇಕೇ ವಿನಾ ಪರಿಸರ ನಿನ್ನೊಂದಿಗೆ ಅಲ್ಲ.” ***** ೨. ಹಂಗಾಮಿ ಅತಿಥಿ ಖ್ಯಾತ ಆಧ್ಯಾತ್ಮಿಕ ಗುರುವೊಬ್ಬ ರಾಜನ ಅರಮನೆಯ ಮುಂದಿನ ಮಹಾದ್ವಾರದ ಬಳಿಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಸರಕ್ಕೊಂದು ಬ್ಯಾಸರದ ನೆನಪು: ಮಹಾದೇವ ಹಡಪದ

ಶ್ರಾವಣದ ಜಿಟಿಜಿಟಿ ಮಳೀಗೆ ಧಾರವಾಡದ ಓಣಿಗಳೊಳಗೆ ರಾಡಿ ಹಿಡಿದಿತ್ತು. ಹಿಂಗ ನಿಂತ ಮಳಿ ಹಾಂಗ ಸುಳ್ಳಿ ಸುತಗೊಂಡು ರಪರಪ ಹೊಡಿತಿತ್ತು. ಬರೊ ತಿಂಗಳ ಒಂದನೇ ತಾರೀಖಿಗೆ ಖೋಲಿಯ ಬಾಡಿಗೆ ವಾಯಿದೆ ಮುಗಿಯೋದು ಇದ್ದುದ್ದರಿಂದ ನಾನು ಮತ್ತೊಂದು ಖೋಲಿ ತಪಾಸ ಮಾಡಲೇಬೇಕಿತ್ತು. ಅಗಸಿ ಓಣಿಯ ಕಡೀ ಮನಿ ಇದಾದುದರಿಂದ ಪ್ಯಾಟೀಗೂ ಮನೀಗೂ ಭಾಳ ದೂರ ಆಗ್ತಿತ್ತು. ಆಫಿಸಿನಿಂದ ಮಧ್ಯಾಹ್ನದ ಆಸರ-ಬ್ಯಾಸರಾ ಕಳಿಲಿಕ್ಕ ಮನಿಗೆ ಹೋಗಬೇಕಂದ್ರೂ ಅಡ್ಯಾಡೋದು ದೊಡ್ಡ ತ್ರಾಸ ಆಗತಿತ್ತು. ಹಂಗಾಗಿ ಎನ್.ಟಿ.ಟಿ,ಎಫ್, ಸಂಗಮ ಟಾಕೀಜ್ ಸುತ್ತಹರದು ಖೋಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬುಡ್ಡಿ ದೀಪ: ಪ್ರಶಸ್ತಿ ಪಿ.

ವಿಭಿನ್ನ ಧೃವಗಳಂತೆ ಭಿನ್ನವಾಗಿರುತಿತ್ತು ಆ ಕೊಳ್ಳ ಹಗಲಿರುಳುಗಳ ಹೊತ್ತಿನಲ್ಲಿ. ಬೆಳಗಿನಲ್ಲಿ ಬಿಡುವಿಲ್ಲದಷ್ಟು ಚಟುವಟಿಕೆಯ ಚಿಲಿಪಿಲಿಯಾದರೆ ಸಂಜೆಯೆಂದರದು  ಕತ್ತಲ ತವರು . ಕಪ್ಪೆಗಳ ವಟರುವಿಕೆ, ಝೀರುಂಡೆಗಳ ಝೀಂಕಾರವ ಬಿಟ್ಟರೆ ಕೊಳ್ಳದೆಲ್ಲೆಡೆ ಸ್ಮಶಾನ ಮೌನ. ಮನೆಗಳ ಮಧ್ಯದಲ್ಲಿನ ಬುಡ್ಡಿದೀಪಗಳ ಬೆಳಕು ಹಂಚ ಸಂದಿಯಿಂದ ಹೊರಬರಲೋ ಬೇಡವೋ ಎಂಬಂತೆ ಅಲ್ಲಿಲ್ಲಿ ಹಣಿಕಿದ್ದು ಬಿಟ್ಟರೆ ಬೇರೆಲ್ಲೆಡೆ ಕತ್ತಲ ಸಾಮ್ರಾಜ್ಯ. ಚಂದ್ರ ಮೋಡಗಳ ಮರೆಯಿಂದ ಹೊರಬಂದು ಕರುಣೆ ತೋರಿ ಊರಿಗೊಂದಿಷ್ಟು ಬೆಳಗ ತೋರಿದರೆ ರಾತ್ರಿಯಲ್ಲಿ ಬೆಳಕೇ ಹೊರತು ಬೇರೇನೂ ಬೆಳಕಿಲ್ಲವಲ್ಲಿ. ಮನೆಯೊಳಗೆ ಬುಡ್ಡಿದೀಪ, ಲಾಂದ್ರಗಳು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವನಗಳು: ಡಿ.ವಿ.ಪಿ., ಉರ್ಬಾನ್ ಡಿಸೋಜ, ಅನುರಾಧಾ ಪಿ. ಎಸ್.

ಹೀಗೊಂದು ಹಾದಿ.!! ಬಿಮ್ಮನೆ ಧ್ಯಾನಸ್ಥ ಭಂಗಿಯಲ್ಲಿ ಹರವಿಕೊಂಡ ಹಾದಿ., ಅದೆಷ್ಟೋ ಚೈತ್ರಗಳ  ಹೂ ಅರಳುವಿಕೆಯನ್ನು ಕಂಡಿದೆಯಂತೆ. ಮುಳ್ಳುಗಳ ಸೋಕಿ ಸುರಿದ ನೆತ್ತರ ಪಸೆಯನ್ನು ಇಂಗಿಸಿಕೊಂಡಿದೆಯಂತೆ. ಹಾದಿ ಮೀರಿ ಬಂದವರೆಷ್ಟೋ ತಾವಾಗೇ ಉಳಿಯದೇ ಮಾರ್ಪಾಡಾಗಿದ್ದಾರೆ ಎನ್ನುವ ವರ್ತಮಾನ.!! ಮೌನವನ್ನೇ ಮೈಮೇಲೇರಿಕೊಂಡಂತೆ ನಿರ್ಲಿಪ್ತವಾಗಿ ಮಲಗಿದೆ ಹಾದಿ ಬದಲಾವಣೆಗಳಿಗೆ ಸಾಕ್ಷಿಯಾಗಿ.!!  ಉಬುಕಿ ಬಂದ ಹಸಿವ ನುಂಗಿ ಬಸವಳಿದವರೆಷ್ಟೋ ಹಾದಿಯ ಕ್ರಮಿಸಿ ಬಂದು ನೋಡಿದರೆ, ಹಸಿವೇ ರಾಗವಾಗಿದೆಯಂತೆ.!! ಅಳಲುಗಳೊಳಗೆ ತಾ ಮುಳುಗಿ ನಿಶ್ಚಲ ಗೋಡೆಗೊರಗಿ ಬಿಟ್ಟ ನಿಟ್ಟುಸಿರು, ಹಾದಿಯ ಕ್ರಮಿಸಿದೊಡನೆ ಕೊಳಲಾಗಿದೆಯಂತೆ.!! ಯುದ್ಧ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಲೆಯ ಬೀದಿಯಲ್ಲೊಂದು ಹುಡುಗಾಟದ ಹುಡುಕಾಟ: ಭಾಗ್ಯಾ ಭಟ್.

  ಹಸಿರ ನಾಡಲ್ಲಿ, ಕಾಫೀ ಘಮದಲ್ಲಿ, ಸುರಿವ ತುಂತುರು ಮಳೆಯಲ್ಲಿ, ಬೀಳೋ ಮಂಜು ಹನಿಗಳ ಜೊತೆ ಆಟವಾಡೋ ತವಕದಲ್ಲಿ. ಎಲ್ಲವೂ ಇದೆ ಈ ಊರಲ್ಲಿ. ಖುಷಿಯಾದಾಗ ಕುಣಿಯೋಕೆ, ಬೇಜಾರಾದಾಗ ಸುಮ್ಮನೇ ಕೂರೋಕೆ, ಪ್ರಶಾಂತವಾಗಿ ಮನದೊಟ್ಟಿಗೆ ಮಾತಾಡೋಕೆ, ವಾರಾಂತ್ಯಕ್ಕೊಂದು ಚಂದದ ಅಪ್ಪುಗೆಯ ವಿದಾಯ ಹೇಳೋಕೆ, ಸ್ನೇಹಿತರ ಜೊತೆ ಮಸ್ತಿ ಮಾಡೋಕೆ. ..ಎಲ್ಲಾ ಭಾವಗಳಿಗೂ ಸಾಥ್ ನೀಡೋಕೆ ಬೇರೆ ಬೇರೆಯದೇ ಸ್ಥಳಗಳಿವೆ ಇಲ್ಲಿ ಎಲ್ಲಾ ಭಾವಗಳನ್ನೂ ಅದರದರದೇ ರೀತಿ ಜೋಪಾನ ಮಾಡೋಕೆ. ..ಪ್ರಕೃತಿಯ ಜೊತೆಗಿನ ಒಡನಾಡಿಗಳಿಗೆ ತೀರಾ ಖುಷಿ ಆಗೋ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಸುರು ಮುಕ್ತ ಭಾರತ!?: ಅಖಿಲೇಶ್ ಚಿಪ್ಪಳಿ

ಕುವೆಂಪುರವರ ನಾಡಗೀತೆಯಲ್ಲಿ ಕರ್ನಾಟಕದ ನಿಸರ್ಗ ಸಂಪತ್ತಿನ ಕುರಿತಾದ ಮನದಣಿಸುವ ಸಾಲುಗಳಿವೆ ಹಾಗೆಯೇ  ರಾಷ್ಟ್ರಗೀತೆಯಲ್ಲಿಯೂ ವಿಂಧ್ಯ-ಹಿಮಾಚಲ ಯಮುನಾ-ಗಂಗಾ. . . ಇಡೀ ಭಾರತದ ಎಲ್ಲೆಗಳಲ್ಲಿ ಹಬ್ಬಿರುವ ಹಸುರು ಕಾಡುಗಳ, ನದಿ, ಝರಿಗಳ ವರ್ಣನೆಯಿದೆ. ಇರಲಿ, ಈಗ ಹೇಳ ಹೊರಟಿರುವುದಕ್ಕೂ ಈ ಮೇಲೆ ಹೇಳಿದ್ದಕ್ಕೂ ಸಂಬಂಧವಿರುವುದರಿಂದ ಇಲ್ಲಿ ಉದ್ಧರಿಸಬೇಕಾಯಿತು. ಸಂಸತ್ತಿನ ಹೆಬ್ಬಾಗಿಲಿಗೆ ಹಣೆಯಿಟ್ಟು ನಮಸ್ಕರಿಸಿ ಪ್ರವೇಶ ಮಾಡಿ ವಿಶಿಷ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ದೇಶದ ಪ್ರಧಾನಿ ಮೋದಿ ಮೊದಲು ಮಾಡಿದ ಕೆಲಸವೆಂದರೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯರ ಸಂಖ್ಯೆಯನ್ನು 15 … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಆತ್ಮಸಂಯಮ (Self-control) ಇಡೀ ಝೆನ್‌ ದೇವಾಲಯ ಅಲುಗಾಡುವಷ್ಟು ತೀವ್ರತೆಯ ಭೂಕಂಪ ಒಂದು ದಿನ ಆಯಿತು. ಅದರ ಕೆಲವು ಭಾಗಗಳು ಕುಸಿದೂ ಬಿದ್ದವು. ಅನೇಕ ಸನ್ಯಾಸಿಗಳು ಭಯಗ್ರಸ್ತರಾಗಿದ್ದರು. ಭೂಕಂಪನ ನಿಂತಾಗ ಗುರುಗಳು ಹೇಳಿದರು, “ಅಪಾಯ ಕಾಲದಲ್ಲಿ ಝೆನ್ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂಬುದನ್ನು ನೋಡುವ ಅವಕಾಶ ನಿಮಗೆ ಈಗ ದೊರಕಿತು. ಆತುರದ ವ್ಯವಹಾರಕ್ಕೆ ಎಡೆ ಕೊಡುವ ತೀವ್ರ ಭಯ ನನ್ನನ್ನು ಬಾಧಿಸಲಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ದೇವಾಲಯದ ಅತ್ಯಂತ ಗಟ್ಟಿಮುಟ್ಟಾದ ಭಾಗವಾಗಿರುವ ಅಡುಗೆಮನೆಗೆ ನಿಮ್ಮೆಲ್ಲರನ್ನು ನಾನು ಕರೆದೊಯ್ದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹೀಗೊಂದು ಧರ್ಮ, ಜಾತಿ: ಪಾರ್ಥಸಾರಥಿ ಎನ್

’ನಿಮ್ಮದು ಯಾವ ಧರ್ಮ? ’  ’…. ಧರ್ಮವೆ?  ಹಿಂದೂ ಇರಬಹುದು’  ಆಕೆ ನನ್ನ ಮುಖವನ್ನು ವಿಚಿತ್ರವಾಗಿ ನೋಡಿದಳು.  ’ಇರಬಹುದು , ಅಂದರೆ ಏನು ಸಾರ್ ಸರಿಯಾಗಿ ಹೇಳಿ’  ಆಕೆಯ ಮುಖದಲ್ಲಿ ಅಸಹನೆ. ’ಸರಿ, ಹಿಂದೂ ಎಂದು ಬರೆದುಕೊಳ್ಳಿ’  ’ಮತ್ತೆ ಜಾತಿ ಯಾವುದು ಸಾರ್, ಅದರಲ್ಲಿ ಪಂಗಡ ಯಾವುದು ತಿಳಿಸಿ’  ’ಜಾತಿಯೆ ? ಯಾವುದೆಂದು ಸರಿಯಾಗಿ ತಿಳಿಯದು. ಪಂಗಡವು ಗೊತ್ತಿಲ್ಲ’  ಆಕೆಗೆ ನನ್ನ ಉತ್ತರದಿಂದ ರೇಗಿಹೋಯಿತು, ಆಕೆಯ ಸಹನೆಯೂ ಮೀರಿಹೋಗಿತ್ತು. ಬಿಸಿಲಿನಲ್ಲಿ ಅಲೆಯುತ್ತ ಮನೆಯಿಂದ ಮನೆಗೆ ಸುತ್ತುತ್ತ ಇದ್ದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚುಟುಕಗಳು: ಮಂಜುನಾಥ ಹನಮಂತಪ್ಪ ವರಗಾ

೧) ನಿನ್ನಷ್ಟು ಸ್ವಾರ್ಥಿಯಲ್ಲ ನೀ ಮುಡಿದ ಮಲ್ಲಿಗೆ! ಸುವಾಸನೆ ಚಲ್ಲುತಿದೆ ನನ್ನೆಡೆಗೆ ಮೆಲ್ಲಗೆ!! ೨) ಮೇಷ್ಟು ಮಾತು! ಮರೆತುಬಿಡು ಎಂದು ಹೇಳಿ  ಹೋದವಳಿಗೇನು ಗೊತ್ತು? ನನಗೆ ನೆನಪಿನ ಶಕ್ತಿ ಜಾಸ್ತಿ ಇದೆ ಎಂದ ನಮ್ಮ ಮೇಷ್ಟ್ರ ಮಾತು!! ೩) ಸಾಂತ್ವನ! ಜೈಲಿಂದ ಬಿಡುಗಡೆಯಾದ ಕಳ್ಳ ರಾಜಕಾರಣಿಗೆ ಊರಿನ ಜನರಿಂದ ಅದ್ಧೂರಿ ಸ್ವಾಗತ ಸನ್ಮಾನ! ದೇಶಕ್ಕಾಗಿ ದುಡಿದು ಮಡಿದ ವೀರಯೋಧನ ಮನೆಯವರಿಗೆ ಸಿಗಲಿಲ್ಲ ಅದೇ ರಾಜಕಾರಣಿಯಿಂದ ಚೂರು ಸಾಂತ್ವನ:-P ೪) ಸೈನಿಕ- ಕೋಟಿ ಜನಗಳ ರಕ್ಷಣೆಯ ದಿಟ್ಟ ನಾಯಕ:-O … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೀರ್ತಿಶೇಷರಾಗಲು ದಾರಿ: ರಾಘವೇಂದ್ರ ಈ. ಹೊರಬೈಲು

ಭಾರತವು ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳ ದೇಶ. ಇವುಗಳಿಂದಾಗಿಯೇ ಪ್ರಪಂಚದಲ್ಲಿ ಒಂದು ವಿಭಿನ್ನ, ವಿಶಿಷ್ಟ ದೇಶವಾಗಿ ಗುರುತಿಸಿಕೊಂಡಿದೆ. ಆಚರಣೆ-ಸಂಪ್ರದಾಯಗಳ ಹೆಸರಿನಲ್ಲಿ ಕೆಲವೇ ಕೆಲವು ಹೀನ ಮತ್ತು ಅಸಹ್ಯಕರವಾದ ಮೂಢನಂಬಿಕೆಗಳಿವೆ. ಉದಾಹರಣೆಗೆ ಯಾರೋ ತಿಂದು ಬಿಟ್ಟಿರುವ ಎಂಜಲು ಎಲೆಗಳ ಮೇಲೆ ಉರುಳು ಸೇವೆ ಮಾಡಿದರೆ ರೋಗ-ರುಜಿನಗಳು ಕಡಿಮೆಯಾಗುತ್ತವೆ ಎಂಬ ನಂಬಿಕೆ ಇರುವ ‘ಮಡೆ ಸ್ನಾನ’ ಮುಂತಾದವು. ಅವುಗಳನ್ನು ಹೊರತುಪಡಿಸಿ ನೋಡಿದರೆ ನಮ್ಮ ದೇಶದ್ದು ಮಹಾನ್ ಶ್ರೀಮಂತ ಸಂಸ್ಕೃತಿ. ಇಂಥ ಸಂಸ್ಕೃತಿಯ ಜೊತೆಗೆ “ಸತ್ತ ಮೇಲೆ ಅಂಗಾಂಗಗಳ ದಾನ” ಎಂಬುದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಮ್ಮಿಂಗ್ ಎಂಬ ನ್ಯಾನೋ ಹಕ್ಕಿ!!!: ಅಖಿಲೇಶ್ ಚಿಪ್ಪಳಿ

ಹೃದಯದ ಬಡಿತ ನಿಮಿಷಕ್ಕೆ ಸರಾಸರಿ 1200 ಇರುವ ಜೀವಿ ಯಾವುದು? ಸೆಕೆಂಡಿಗೆ 80 ರಿಂದ 250 ಬಾರಿ ರೆಕ್ಕೆ ಬಡಿಯುವ ಪಕ್ಷಿ ಯಾವುದು? ತನ್ನ ತೂಕಕ್ಕಿಂತ ಒಂದುವರೆ ಪಟ್ಟು ಆಹಾರ ಸೇವಿಸುವ ಜೀವಿ ಯಾವುದು? ಬರೀ 300 ಮಿಲಿಗ್ರಾಂ ತೂಕದ ಮೊಟ್ಟೆಯಿಡುವ ಹಕ್ಕಿ ಬಗ್ಗೆ ಗೊತ್ತ? ಹೀಗೆ ಮುಗಿಯದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಒಂದೇ. ಅದು ಹಮ್ಮಿಂಗ್ ಬರ್ಡ್ ಆಲಿಯಾಸ್ ಝೇಂಕಾರದ ಹಕ್ಕಿ!! ನಮಗೆ ಇದನ್ನು ನೋಡುವ ಭಾಗ್ಯ ಇಲ್ಲ. ಏಕೆಂದರೆ ಭಾರತದಲ್ಲಿ ಇವು ಇಲ್ಲ. ಸಂತೋಷದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅವ್ವನ ಸೀರೆ ಮತ್ತು ಬಾಳೀಗ೦ಟು…: ಜಯಶ್ರೀ ದೇಶಪಾಂಡೆ

     'ಎರಡು ..ಮೂರು ..ನಾಲ್ಕು , ಐದು. ಮತ್ತ ಇದು ಹತ್ತು . ಸಾಕೇನು?" " ಸಾಕು ಅ೦ದುಬಿಡ್ಲಿ ಇ೦ವಾ"  ಅ೦ತ ಇರ್ಬೇಕು ಅವ್ವನ ಮನಸಿನ್ಯಾಗ. ಯಾಕ೦ದ್ರ ಅವನ ಹಿ೦ದ ನಾನೂ          ನಿ೦ತಿದ್ದೆ.  ನನ್ನ ಕೈಗೂ ಹಿ೦ಗೇ ರೊಕ್ಕಾ  ಎಣಿಸಿ ಹಾಕಬೇಕಿತ್ತು..ಆದರ ಇ೦ವಾ ,ಅ೦ದ್ರ ನನ್ನ ತಮ್ಮ ,ಹೇಳಿ ಕೇಳಿ ಅಚ್ಚ್ಹಾದ  ಮಗಾ..  ಅ೦ವಾ ನಮ್ಮವ್ವನ 'ಶೇ೦ಡೆಫಳ' ಅರ್ಥಾತ್  (ಮುದ್ದಿನ ಮಗ !) ..ಅ೦ವಗ ಕೇಳಿದಷ್ಟು ಕೊಡೂದು ಎ೦ದಿಗಿದ್ರೂ ಇದ್ದದ್ದನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೌನಿ:ಪ್ರಶಸ್ತಿ ಪಿ.

ಬೆರೆವ ಭಾವಗಳ ಸರಳ ಸುಂದರಿಯು ಮೌನ ತಾಳಿದ್ದಾಳೆ. ಧುಮುಕಲನುವಾಗಿ ನಲ್ಲಿಯಂಚಲ್ಲಿ ನಿಂತ ಹನಿಯೊಂದು ಗುರುತ್ವವನ್ನೂ ಲೆಕ್ಕಿಸದೆ ನಲ್ಲಿಯನ್ನೇ ಅಂಟಿಕೊಂಡಂತೆ ತನ್ನ ಕಾದಿರುವವರ ನಿರೀಕ್ಷೆಗಳಿಗೆ ಸ್ಪಂದಿಸದಂತೆ ಮೌನವಾಗಿದ್ದಾಳೆ. ಉಕ್ಕಿ ಹರಿಯುತ್ತಿದ್ದ ಹುಚ್ಚುಹೊಳೆ, ಜೀವ ಸೆಲೆ, ತಾಯಿ ಮೌನಿಯಾಗಿದ್ದಾಳೆ. ಮಳೆಯೆಂದರೆ ಹುಚ್ಚೆದ್ದು ಹೊಡೆವ ದಿನಗಳವು. ಬೇಸಿಗೆಯೆಂದರೆ ಕಲ್ಲಂಗಡಿ ಹೋಳೋ,ಇಬ್ಬಟ್ಟಲ, ಮುರುಗನುಳಿ(ಕೋಕಂ) ಪಾನಕಗಳು ಮನೆಮನೆಯಲ್ಲೂ ಖಾಯಂ ಆಗಿರುತ್ತಿದ್ದ ದಿನಗಳವು. ಚಳಿಗಾಲವೆಂದ್ರೆ ಏಳರ ಮೇಲೆ ಮನೆಯಿಂದ ಹೊರಗೆ ಕಾಲಿಡಲು ಬೇಸರಿಸುತ್ತಿದ್ದ ಕಾಲವದು. ಒಂದೇ ದಿನದಲ್ಲಿ ಮೂರೂ ಋತುಗಳ ದರ್ಶನವಾಗುತ್ತಿದ್ದ ಚೌಚೌ ಬಾತ್ ದಿನಗಳಲ್ಲ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿಸುವವರು ಪುಣ್ಯವಂತರು: ಅಕ್ಷಯ ಕಾಂತಬೈಲು

         ಫಟಫಟನೆ ಚಿಟಿಕೆ ಹೊಡೆದಷ್ಟು ವೇಗದಲ್ಲಿ ನಮ್ಮ ಜೀವನದಲ್ಲೊಂದು ಒಳ್ಳೆಯ ಬದಲಾವಣೆಯು ಕಂಡುಬಿಟ್ಟರೆ, ಅದು ಅವನ ಅಥವಾ ಅವಳ ಪುಣ್ಯ ಮಾರಾಯ ಅಂತ ಹೇಳಿಸಿಕೊಳ್ಳುತ್ತೇವೆ. ಈ ಬದಲಾವಣೆಯ ಹಿಂದೆ ನಾವೆಷ್ಟು ಶ್ರಮವಹಿಸಿದ್ದೇವೆಂದು ಮತ್ತು ನಿಗಾವಹಿಸಿದ್ದೇವೆಂದು ನಮಗೆ ಮಾತ್ರವೆ ಗೊತ್ತು. ಬದಲಾವಣೆಗೊಂದು ಪ್ರೀತಿಯು ಕಾರಣವಾದರೆ ಅದರ ಸೊಗಸೇ ಬೇರೆ ಅನ್ನಿಸುವುದುಂಟು. ಗಟ್ಟಿಯಾಗಿ ನಮ್ಮ ಮನಸ್ಸು ಒಳಗೊಳಗೇ ಜಪಿಸುತ್ತಿರುತ್ತದೆ. ಅವಳಿಂದಾಗಿ ಮತ್ತೆ ನನಗೆ ಜೀವಿಸಬೇಕೆಂದೆನಿಸಿತು, ಅವನಿಂದಾಗಿ ನಾನು ಮತ್ತೆ ಉತ್ಸುಕಳಾದೆ, ಅವಳೆಂದರೆ ಪ್ರಾಣ, ಅವನೆಂದರೆ ಉಸಿರು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವನಗಳು: ಸಂತೋಷಕುಮಾರ ಸೋನಾರ, ನಗರ ಸುಧಾಕರ ಶೆಟ್ಟಿ, ಕಿರಣ್ ಕುಮಾರ್ ಕೆ. ಆರ್.

ವಾಸ್ತವ ಬುದ್ಧ ಜನಿಸಿದಾ ನಾಡಿನಲ್ಲಿ  ಬೃಂದಾವನವ ಕಟ್ಟದೆ  ಬಾಂಬನ್ನು ಸುಟ್ಟರಲ್ಲ! ಬಸವ ಜನಿಸಿದಾ ಭುವಿಯಲ್ಲಿ  ಭಕುತಿಯಿಂದ ಬಾಳದೇ   ಬರ್ಭರ ಹಿಂಸೆಯಾಗುತ್ತಿದೆಯಲ್ಲ! ಗಾಂಧಿ ಜನಿಸಿದ ದೇಶದಲ್ಲಿ  ಗಂಧದ ಪರಿಮಳವ ಸೂಸದೇ  ಗನ್ನನ್ನು ಹಿಡಿದೆವಲ್ಲ! ಬುದ್ಧ, ಬಸವ, ಗಾಂಧಿ ಈಗ ಇದ್ದಿದ್ದರೆ??? ಬುದ್ಧ ಕಲ್ಲಾಗುತ್ತಿದ್ದ! ಗಾಂಧಿ ಮೌನವಾಗುತ್ತಿದ್ದ! ಬಸವ ಮತ್ತೊಮ್ಮೆ ಐಕ್ಯವಾಗುತ್ತಿದ್ದ! **** ಈ ಜಗತ್ತಿನೊಳಗೆ  ಪ್ರತಿಯೊಬ್ಬರಿಗೂ  ಒಂದೂಂದು ದಾರ!  ನನ್ನದೊಂದು ದಾರ  ನಿನ್ನದೊಂದು ದಾರ!  ಅವರದೊಂದು ದಾರ   ಆಗಬೇಕಿದೆ ನಾವು  ಇದರಿಂದ ಉದ್ಧಾರ!  ಬೇಡವೇ ಬೇಡವಂತೆ  … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ