ಕರ್ನಾಟಕ ಪರಿಶೆ (ಭಾಗ-1): ಎಸ್. ಜಿ. ಸೀತಾರಾಮ್, ಮೈಸೂರು
ಭೂತಮೂಲಗನ್ನಡಿಯಿಂದ ಕನ್ನಡ ಭುವನೇಶ್ವರಿಯ ಛಾಯಾವತಾರಳಾದ “ಮಾತೃ ಭೂತೇಶ್ವರಿ” ಮೈಸೂರಿನಲ್ಲಿ ಮೊನ್ನೆ ಮಹಾಲಯ ಅಮಾವಾಸ್ಯೆಯ ಡಾಕಿಣಿ ಮುಹೂರ್ತದಲ್ಲಿ (ರಾತ್ರಿ 2ರ ಸಮಯ) ವಾಯುಸಂಚಾರದಲ್ಲಿದ್ದಾಗ, ಅಲ್ಲಿ ನೂತನವಾಗಿ ಕಟ್ಟ್ಟಲಾಗಿರುವ ‘ಮಿನಿ’ ವಿಧಾನಸೌಧದ ಮೇಲಿರುವ ಮೂರು ಘೋಷಣೆಗಳನ್ನು ಕಂಡು, ಭಯಭೀತೇಶ್ವರಿ ಆದಳೆಂದೂ, ಆಕ್ಷಣವೇ ‘ಕನ್ನಡ’, ‘ಕರ್ನಾಟಕ’, ‘ರಾಜ್ಯೋತ್ಸವ’ ಇತ್ಯಾದಿ ಘನವಿಚಾರಗಳ ಹುಚ್ಚುಚ್ಚು ಆಲೋಚನೆಗಳು ಆಕೆಯ ಮನಸ್ಸಿನಲ್ಲಿ ಉಕ್ಕುಕ್ಕಿಬಂದು, ಕಡೆಗೆ ಅವಳು ಅಲ್ಲೇ ಇವೆಲ್ಲವನ್ನೂ ‘ಠೀವಿ-007’ ಮುಂದೆ ಹೃದಯಾಘಾತಪೂರ್ವಕವಾಗಿ ಕಾರಿಕೊಂಡಳೆಂದೂ ವರದಿಯಾಗಿದೆ. ಆ ವಿಪರೀತ ಆಲೋಚನೆಗಳ ಆಯ್ದ ಭಾಗಗಳನ್ನು … Read more