ಯುನೈಟೆಡ್ ಬ್ರೇಕ್ಸ್ ಗಿಟಾರ್: ಅಮರ್ ದೀಪ್ ಪಿ.ಎಸ್.

ನಾವು ಪ್ರತಿ ದಿನ ಬೆಳಿಗ್ಗೆ ಎದ್ದು ಹಲ್ಲುಜ್ಜುವುದರ ಟೂತ್ ಪೇಸ್ಟ್ ನಿಂದ ಹಿಡಿದು  ರಾತ್ರಿ ಸೊಳ್ಳೆ ಬತ್ತೀನೋ ಲಿಕ್ವಿಡ್ದೋ  ಹಚ್ಚಿ  ಮಲಗುವವರೆಗೆ ಎಷ್ಟು ಕಂಪನಿಗಳ ಎಷ್ಟು ಸರಕುಗಳನ್ನು ಬಳಸಿರು ತ್ತೇವೆ, ಎಷ್ಟು ಸೇವೆಯನ್ನು ಪಡೆದಿರುತ್ತೇವೆ.  ಯಾವ ಸರಕು/ವಸ್ತು ನಮ್ಮ ಅವಶ್ಯಕತೆಯನ್ನು ಎಷ್ಟರಮಟ್ಟಿಗೆ ಪೂರೈಸಿದೆ? ಯಾವ ಸರಕಿನ ಸರಬರಾಜುದಾರರು ನಮಗೆ ಉತ್ತಮ ಸೇವೆಯನ್ನು ನೀಡಿದ್ದಾರೆ? ಲೆಕ್ಕ ಇಟ್ಟಿರುತ್ತೆವೆಯೇ? ಕೆಲವರು ಇಟ್ಟಿದ್ದರೆ ಇಟ್ಟಿರಬಹುದು, ಅದೂ ಬಹಳ ಕಡಿಮೆ. ಒಂದು ವೇಳೆ ನಾವು ಕೊಂಡ ಸರಕು/ಸೇವೆ ಸರಿಯಾಗಿದ್ದರೆ ಯಾವುದೇ ಸಮಸ್ಯೆ ಇಲ್ಲ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೊಡಗಿನಲ್ಲಿ ಪ್ರವಾಸೋಧ್ಯಮ ಮತ್ತು ಮಹಿಳೆ: ಸವಿತಾ ಮಡಿಕೇರಿ

ಪುರಾಣ ಕಾಲದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನಮಾನವಿತ್ತು. ಒಳ್ಳೆಯ ಗೌರವ ಹಾಗೂ ಬೆಲೆ ಇತ್ತು. ಕ್ರಮೇಣ ಕಾಲ ಬದಲಾದಂತೆ ಮಹಿಳೆಯನ್ನು ಅಡಿಗೆ ಮನೆಗೆ ಸೀಮಿತವಾಗಿಡಲಾಯಿತು. ಮಹಿಳೆ ಎಷ್ಟೇ ಬುದ್ಧಿವಂತಳಾದರೂ ಬೇರೆ ವ್ಯವಹಾರಗಳಲ್ಲಿ ಅವಳಿಗೆ ಪ್ರವೇಶವಿರಲಿಲ್ಲ. ಅವಳಿಗೆ ಹೆಚ್ಚಿನ ವಿದ್ಯಾಭ್ಯಾಸ ದೊರೆಯುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಮಹಿಳೆಯರು ಅಡಿಗೆ ಮನೆಗೆ ಸೀಮಿತರಾಗಿಲ್ಲ. ಮಹಿಳೆ  ಹೊರಜಗತ್ತಿನಲ್ಲಿ ಪುರುಷರಿಗೆ ಸರಿಸಮನಾಗಿ ದುಡಿಯುತ್ತಿದ್ದಾಳೆ. ಜೊತೆಗೆ ಮನೆ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾಳೆ. ಪುರುಷರಿಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದಾಳೆ ಎನ್ನಬಹುದು.ಪ್ರತಿವರ್ಷ ಪರೀಕ್ಷೆಯ ಫಲಿತಾಂಶ ಬಂದಾಗ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಯೋಗ ಸಂಜೀವಿನಿ: ಪೂರ್ಣಿಮಾ ಗಿರೀಶ್

ಯೋಗ ಅನ್ನುವುದು ಎಲ್ಲರಿಗೂ ಎಟುಕುವ ವಿದ್ಯೆ. ನಿರಂತರ ಅಭ್ಯಾಸದಿಂದ ಯೋಗವನ್ನು ಕರಗತ ಮಾಡಿಕೊಳ್ಳಲು ಸಾಧ್ಯ. ದಿನದ ೨೪ ಘಂಟೆಗಳಲ್ಲಿ ನಮ್ಮ ದೇಹ ಮತ್ತು ಮನಸ್ಸು ವಿವಿಧ ಕೆಲಸಗಳಲ್ಲಿ, ಯೋಚನೆಗಳಲ್ಲಿ ಲೀನವಾಗಿರುತ್ತದೆ. ಅಗತ್ಯವಾಗಿರುವ ವಿಶ್ರಾಂತಿ ದೊರೆಯದಿದ್ದಾಗ ನಾವು ಮಾಡುವ ಕೆಲಸಗಳು ಪರಿಪೂರ್ಣವಾಗಿರುವುದಿಲ್ಲ ಮತ್ತು ದೇಹ ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳು ಬಹಳ. ಯೋಗಭ್ಯಾಸದಲ್ಲಿ ದೀರ್ಘ ಉಸಿರಾಟಕ್ಕೆ ಬಹಳ ಪ್ರಮುಖವಾದ ಸ್ಥಾನವಿದೆ. ದೀರ್ಘ ಉಸಿರಾಟದೊಡನೆ ಮಾಡುವ ಆಸನಗಳಿಂದ ಚಿತ್ತಕ್ಕೆ ಶಾಂತಿ ಮತ್ತು ಸಂಯಮ ದೊರಕಿ ನಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಉತ್ಸಾಹದಿಂದ ಮಾಡಬಹುದಾಗಿದೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದು ಸ್ನೇಹದ ಸುತ್ತ: ಪ್ರಶಸ್ತಿ ಅಂಕಣ

ತೊಳೆಯಬೇಕೆಂದು ನೆನೆಸಿದರೂ ತೊಳೆಯಲಾಗದ ಸೋಮಾರಿತನಕ್ಕೆ ಬಕೆಟ್ಟಲ್ಲೇ ಕೊಳೆಯುತ್ತಿರುವ ಬಟ್ಟೆ, ಉತ್ತರ ದಕ್ಷಿಣಕ್ಕೆ ಮುಖಮಾಡಿರೋ ತನ್ನ ಮೂಲ ಬಣ್ಣ ಬಿಳಿಯೋ, ಹಳದಿಯೋ,  ಸಿಮೆಂಟೋ ಎಂದು ತನಗೇ ಮರೆತು ಹೋದಂತಾಗಿರೋ ಬೂದು ಶೂಗಳಿಂದ ಹೊರಬಿದ್ದು ತನ್ನ ಅಸ್ತಿತ್ವ ಸಾರುತ್ತಿರೋ ಸಾಕ್ಸುಗಳು, ನಾಯಿ ನಾಲಗೆಯಾದಂತಾಗಿ ಕೆಲವೆಡೆ ತಳ ಕಂಡರೂ ಇನ್ನೂ ಮುಕ್ತಿ ಕಾಣದ ಚಪ್ಪಲಿ, ಹೊರಗೆ ಒಣಗಿಸಿ ವಾರವಾದರೂ ತೆಗೆಯದಿದ್ದ ನನ್ನ ಬಟ್ಟೆಗಳಿಂದ ತನ್ನ ಬಟ್ಟೆಗೆ ಜಾಗವಿಲ್ಲವೆಂದು ಸಿಟ್ಟಿಗೆದ್ದ ಗೆಳೆಯ ತಂದು ಒಗೆದಿರೋ ಗುಪ್ಪೆ ಗುಪ್ಪೆ ಬಟ್ಟೆಗಳು, ತರಿಸಿದರೂ ಓದುವುದಿರಲಿ ಮಡಚಿಡಲೂ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದ್ವಿಮುಖ ಪರಿಚಯ: ಅನಿತಾ ನರೇಶ್ ಮಂಚಿ

ಇಡ್ಲಿ ಬೇಯಲಿಟ್ಟು ಚಟ್ನಿಗಾಗಿ ಕಾಯಿ ತುರಿಯುತ್ತಲಿದ್ದೆ. ಪಕ್ಕದ ಮನೆಯ ಪಂಕಜಾಕ್ಷಿ ಅಕ್ಕಾ ಅಂತ ಕರೆದಳು. ಅದರ ಮೊದಲೇ ಅವಳ ಕುಮಾರ ಕಂಠೀರವ ಅಡುಗೆ ಮನೆಗೆ ನುಗ್ಗಿ ಎರಡು ಜ್ಯೂಸಿನ ಲೋಟ ನೆಲಕ್ಕೆಸೆದಾಗಿತ್ತು. ಪುಣ್ಯಕ್ಕೆ ಅದು ಅನ್ ಬ್ರೇಕೇಬಲ್ ಗಳಾದ್ದರಿಂದ ಬಿದ್ದ ಲೋಟ ಎತ್ತಿಟ್ಟು ಅವನ ಕೆಲಸಕ್ಕೆ ಬ್ರೇಕ್ ಹಾಕಿದೆ. ಅಕ್ಕಾ ಸ್ವಲ್ಪ ಹೊತ್ತು ಅವನನ್ನಿಲ್ಲಿ ಬಿಟ್ಟು ಹೋಗ್ತೀನಿ.. ಅಂದಳು ಅವಳು.. ನಾನು ಹೂಂ ಅನ್ನುವ ಮೊದಲೇ ಅವಳ ಕುಮಾರ ಕಂಠೀರವ ನನ್ನ ಮುಖ ನೋಡಿ ಕಿಟಾರನೆ ಕಿರುಚಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕರ್ನಾಟಕ ರಾಜ್ಯ ಲಾಟರಿ “ಅಂದು ಡ್ರಾ ” ಇಂದಿಗೆ ಬಹು “ಮಾನ “: ಅಮರ್ ದೀಪ್ ಪಿ.ಎಸ್.

ಇಪ್ಪತ್ತೊಂದರ ವಯಸ್ಸಿನ ಹುಡುಗ, ಅವನ ತಮ್ಮ ಮತ್ತವರ ತಾಯಿ  ಆಗತಾನೇ ಆ ಹುಡುಗನ ತಂದೆಯ ಶವ ಸಂಸ್ಕಾರ, ಕ್ರಿಯಾ ಕರ್ಮಗಳನ್ನೆಲ್ಲಾ ಮುಗಿಸಿ ಮನೆಗೆ ಬಂದು ಕುಳಿತಿದ್ದರು. ಎದು ರಿಗಿದ್ದವರಿಗೆ ಆಡಲು ಮಾತುಗಳು ಖಾಲಿ ಖಾಲಿ.  ತಾಯಿ ಮಕ್ಕಳ ಮುಖಗಳನ್ನು ನೋಡುತ್ತಲೇ ಹಂಗೆ ಅವರ ನೆನಪು ವರ್ಷದಿಂದ ವರ್ಷ ಹಿಂದಕ್ಕೆ, ಮೂವತ್ತು ವರ್ಷಗಳ ಹಿಂದಕ್ಕೆ ಜಾರಿದವು…..  ಅದೊಂದು ಪುಟ್ಟ ಗ್ರಾಮ. ಬಿಸಿಲಿಗೂ ಬರಕ್ಕೂ ಮತ್ತೊಂದು ಹೆಸರಾಗಿದ್ದ ಊರದು. ಆ ಊರಿಗೆ ಒಂದೇ ಮುಖ್ಯ ರಸ್ತೆ ಮೂರು ಬಸ್ ನಿಲ್ದಾಣ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸರ್…. ಡ್ರಾಪ್ ಪ್ಲೀಸ್!!: ಸಂತೋಷ್ ಕುಮಾರ್ ಎಲ್. ಎಮ್.

ಒಂದು  ಸುಮಾರು 15 ವರ್ಷಗಳ ಹಿಂದೆ ಮೈಸೂರಿನಲ್ಲಿ PUC ಓದುತ್ತಿದ್ದ ಸಂದರ್ಭ. ಅಪ್ಪ ನನಗೆ ಕೊಡಿಸಿದ ಸೆಕೆಂಡ್ ಹ್ಯಾಂಡ್ ಬೈಸಿಕಲ್ಲು ಮುರಿದು ಮೂಲೆ ಸೇರಿತ್ತು. ಅದರ ರಿಪೇರಿಗೂ ನೂರು ರೂಪಾಯಿ ಇಲ್ಲದ ಪರಿಸ್ಥಿತಿ. ಕಾಲೇಜು ಶುರುವಾಗುತ್ತಿದ್ದುದೇ ಒಂಭತ್ತು ಗಂಟೆಗೆ. ಮೊದಲ ಪಿರಿಯಡ್ ಮುಂಗೋಪಿ ಮತ್ತು ಮಹಾಸಿಡುಕ ಪ್ರೊಫೆಸರ್ ಸಾಂಬಶಿವಯ್ಯನವರದ್ದು. ಆದ್ದರಿಂದ ಅವರು ಕ್ಲಾಸಿಗೆ ಪ್ರವೇಶವಾಗುವ ಮೊದಲೇ ಎಲ್ಲರೂ ಒಳಗಿರಬೇಕಿತ್ತು. ಲೇಟಾಗಿ ಬಂದವರಿಗೆ ಮರದ ಸ್ಕೇಲಿನ ಬಿಸಿಯೇಟು. ಬರದೆ ಹೋದವರ ಮನೆಗೆ absence report. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 17): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತದ ಸಂವಿಧಾನದ ಇತಿಹಾಸದಲ್ಲಿ ಎರಡು ಬಾರಿ ಹಂಗಾಮಿಯಾಗಿ ಪ್ರಧಾನಿ ಹುದ್ದೆ ಸ್ವೀಕರಿಸಿದವರು ಯಾರು? ೨.    ನಾವಿಕರ ದಿಕ್ಸೂಚಿಯನ್ನು ಕಂಡುಹಿಡಿದವರು ಯಾರು? ೩.    ಭಾರತದಲ್ಲಿ ಪ್ರಮುಖವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಾವುವು? ೪.    ದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು? ೫.    ಹಿಂದೂ ಸ್ತ್ರೀಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲಿದೆ ಎಂಬುದನ್ನು ಯಾವ ಕಾಯ್ದೆ ಉಲ್ಲೇಖಿಸುತ್ತದೆ? ೬.    ಮೊದಲ ಪ್ರನಾಳ ಶಿಶುವಿನ ಹೆಸರೇನು? ೭.    ಯಾವ ಗ್ರಹ ಭೂಮಿಯ ಗಾತ್ರ ಮತ್ತು ದ್ರವ್ಯರಾಶಿಗೆ ಬಹುತೇಕ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ವಿಜ್ಞಾನ ದಿನ: ಅಖಿಲೇಶ್ ಚಿಪ್ಪಳಿ

ಪ್ರತಿವರ್ಷ ಫೆಬ್ರವರಿ ೧೪ರಂದು ಪ್ರೇಮಿಗಳ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಪ್ರೇಮಿಗಳ ದಿನಾಚರಣೆಯನ್ನು ನಿಷೇಧಿಸಬೇಕೆಂಬ ಕೂಗು ಇದೆ. ಪ್ರೇಮಿಗಳ ದಿನಾಚರಣೆಯಿಂದ ಸರಿಯಾಗಿ ೧೪ ದಿನಗಳ ನಂತರ ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುತ್ತಾರೆ. ದಿ.ಚಂದ್ರಶೇಖರ ವೆಂಕಟ ರಾಮನ್ ಎಂಬ ಭಾರತದ ವಿಜ್ಞಾನಿ ೧೯೨೮ರಲ್ಲಿ ಸಂಶೋಧಿಸಿದ ಬೆಳಕಿನ ?? ಕ್ಕೆ ೧೯೩೦ರಲ್ಲಿ ನೋಬೆಲ್ ಪ್ರಶಸ್ತಿ ಸಿಕ್ಕಿತು. ಭೌತಶಾಸ್ತ್ರದ ಈ ಅಮೋಘ ಸಾಧನೆ ಇವತ್ತಿಗೂ ವಿಜ್ಞಾನ ಕ್ಷೇತ್ರದಲ್ಲೊಂದು ಮೈಲಿಗಲ್ಲು ಎಂದು ದಾಖಲಾಗಿದೆ. ಈ ಮಹಾನ್ ವಿಜ್ಞಾನಿಯ ನೆನಪಿಗಾಗಿ ಭಾರತ ಸರ್ಕಾರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂವರ ಕವಿತೆಗಳು: ರಾಘವೇಂದ್ರ ಹೆಗಡೆಕರ್, ಸಂಗೀತ ರವಿರಾಜ್, ಷಡಕ್ಷರಿ ತರಬೇನಹಳ್ಳಿ

— ಗೋಡೆ — ನನಗಾಗಿ   ಅಗೆದ ಯಾರದೋ ಭೂಮಿಯಲ್ಲಿ ಇನ್ನಾರೋ ಮಲಗಿದ್ದರಂತೆ ಪಾಪ.  ನೆಲದ ಮೇಲೆ ಎಲ್ಲ ಹಂಚಿಕೊಂಡವರು ನಾವು-  ಮಾಡಿ ಭಾಗ . ಗೊತ್ತೇ  ಇರಲಿಲ್ಲ ಇದ್ದರೂ ಇರಬಹುದು  ಇಂಥದೊಂದು ಜಾಗ. ಸಮಾಧಿ ಸ್ತಿತಿಯಲ್ಲಿ  ಅವಿತು ಕುಳಿತವನ  ಗಾಢ ಮೌನದ  ಸದ್ದುಗಳು . ಅರೆ  ಪಕ್ಕದಲ್ಲೇ  ಚಿರ ನಿದ್ರೆಯಲ್ಲಿದ್ದಾಳೆ ಚಿನ್ನದಂತ ಹುಡುಗಿ ಇವಳೇ ಬೆಳಿಗ್ಗೆ ಬೆರಳ ತೋರಿದವಳು  ಸ್ನೇಹದ ಹಸ್ತ ಚಾಚಿ . ಇಲ್ಲಿ ಮಣ್ಣಿನ ಒಳಗೆ ಗೋಡೆಗಳೇ ಇಲ್ಲ . -ರಾಘವೇಂದ್ರ  ಹೆಗಡೆಕರ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಒಂದು ಹಳೆಯ ಪತ್ರ: ವೀರ್ ಸಂತೋಷ್

ದಿನಾಂಕ ೧೪ ಫೆಬ್ರವರಿ ೨೦೧೩ ಪ್ರೀತಿಯ  ಹೆಸರು  ಹೇಳಲಾಗದವಳೇ/ಪಲ್ಲವಿ, ಧನ್ಯವಾದಗಳು. ಖಾಲಿ ಹಾಳೆಯಂತಿದ್ದ ನನ್ನನ್ನು ಎಲ್ಲರೂ ಓದುವಂತಹ ಕೃತಿಯನ್ನಾಗಿ ಮಾಡಿದ ನಿನಗೆ ಪ್ರೀತಿಪೂರ್ವಕ ಧನ್ಯವಾದಗಳು. ಇದು ನಾನು ನಿನಗಾಗಿ ಬರೆಯುತ್ತಿರುವ ೩೬೫ನೇ ಪತ್ರ. ನಿನ್ನೆ ಬರೆಯುವಾಗಿದ್ದ ಪ್ರೇಮ, ಅದೇ ಉತ್ಕಟತೆಯೊಂದಿಗೆ ಇದನ್ನೂ ನಿನಗೆ ಅರ್ಪಿಸುತ್ತಿದ್ದೇನೆ. ನಿನ್ನ ಭಕ್ತನ ಈ ಕಿರು ಕಾಣಿಕೆಯನ್ನು ಸ್ವೀಕರಿಸುತ್ತೀಯಲ್ಲವೇ? ಆಯ್ತು ಕೋಪ ಮಾಡ್ಕೋಬೇಡ. ಹೀಗೆಲ್ಲಾ ಹುಚ್ಚು ಪ್ರೇಮಿಯಂತೆ ಮಾತಾಡೋದು ನಿನಗೆ ಇಷ್ಟವಿಲ್ಲ ಅನ್ನೋದು ನೆನಪಿದೆ. ಅದೆಲ್ಲಾ ಒತ್ತಟಿಗಿರಲಿ. ಇವತ್ತು ಫೆಬ್ರವರಿ ೧೪. ವ್ಯಾಲೆಂಟೈನ್ಸ್ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಿಕ್ಕಮಗಳೂರ ಟ್ರಿಪ್ಪು: ಪ್ರಶಸ್ತಿ ಪಿ.

ಮುಳ್ಳಯ್ಯನ ಗಿರಿಗೆ ಹೋಗ್ಬೇಕನ್ನೋದು ಬಹುದಿನದ ಕನಸು. ಆದ್ರೆ ಬೆಂಗ್ಳೂರಿಂದ ೨೫೦ ಚಿಲ್ರೆ ಕಿಲೋಮೀಟ್ರು ಅನ್ನೋ ಕಾರಣಕ್ಕೆ ಮತ್ತೆ ಒಂದಿನ ಅದೊಂದಕ್ಕೇ ಹೋಗ್ಬರೋಕಾಗಲ್ಲ. ಎರಡು ದಿನಕ್ಕೆ ಬೆಂಗ್ಳೂರಿಂದ ಗಾಡಿ ಮಾಡಿಸ್ಕೊಂಡೋದ್ರೆ ಬರೀ ಹೋಗ್ಬರೋ ಚಾರ್ಜೇ ಜಾಸ್ತಿ ಆಗತ್ತೆ, ಎರಡು ದಿನಕ್ಕೆ ಯಾರು ಬರ್ತಾರೋ, ಯಾರು ಬರೋಲ್ವೋ ಅನ್ನೋ ಹಲವು ಸಂದೇಹಗಳಲ್ಲೇ ಕನಸು ಮುರಿದುಬೀಳ್ತಿತ್ತು. ಕೊನೆಗೂ ಹರಿ ಹರಿ ಅಂತ ಸಡನ್ನಾಗಿ ಶುಕ್ರವಾರ ಸಂಜೆ ಪ್ಲಾನು ಪಕ್ಕಾ ಆಗಿ ಶುಕ್ರವಾರ ರಾತ್ರೆ ಒಂದೂಮುಕ್ಕಾಲಿಗೆ ಮುಳ್ಳಯ್ಯನಗಿರಿಗೆ ಹೊರಟೇಬಿಟ್ವಿ. ಚಿಕ್ಕಮಗಳೂರು ಅಂದ್ರೆ ಸೀತಾಳಯ್ಯನಗಿರಿ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಾಗತಿಕರಣದಲ್ಲಿ ಮಹಿಳೆಯ ಸ್ಥಿತಿ-ಗತಿ: ಸುಮನ್ ದೇಸಾಯಿ

             ಜಾಗತಿಕರಣ ಪ್ರವೇಶಿಸಿದ ಈ ಹೊತ್ತನೊಳಗ ಭಾರತದ ಮಹಿಳೆಯರ ಸ್ಥಿತಿಗತಿಯೊಳಗ  ಇತ್ಯಾತ್ಮಕ ಬದಲಾವಣೆಗಳಾಗ್ಯಾವೆನು ಅನ್ನೊ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗೊದೆಯಿಲ್ಲಾ. ಯಾಕಂದ್ರ ಜಾಗತಿಕರಣ ಯಜಮಾನ ಸಂಸ್ಕೃತಿಯನ್ನ ಪೋಷಿಸಲಿಕತ್ತದ. ಗಂಡಸಿಗೆ ಮುಕ್ತವಾದ ವಾತಾವರಣ ಕಲ್ಪಿಸಿಕೊಟ್ಟು, ಹೆಣ್ಣನ್ನ ಮತ್ತದೆ ಹಳೆಯ ಚೌಕಟ್ಟಿನೊಳಗ ಕೂಡಿಸೊ ಪ್ರಯತ್ನ ನಡದದ.  ನಮ್ಮ ದೇಶದ ಬಹಳಷ್ಟು ಕಾನೂನು ಮತ್ತ ಕಾಯಿದೆಗಳು ಶೋಷಿತರ, ಮಹಿಳೆಯರ ಪರವಾಗಿ ಅವ ಆದ್ರ ಅವೆಲ್ಲಾ ಕಾಗದದ ಮ್ಯಾಲಿನ ಹುಲಿಗಳಾಗಿನ ಉಳಕೊಂಡಾವ. ಸಂವಿಧಾನ ಬಂದು ಇಷ್ಟು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಹಿತಶತ್ರುಗಳು: ಶುಭಾ ಆರ್.

ಶತ್ರು  ಎಂದರೆ ಒಬ್ಬ ವ್ಯಕ್ತಿ   ನಮ್ಮ ಯಶಸ್ಸನ್ನು ನೋಡಿ ಸಹಿಸದೆ ಇರುವವನು. ಸದಾ ನಮ್ಮ ಮೇಲೆ ದ್ವೇಷ ಕಾರುವವನು. ಆತ  ಎಚ್ಚರಿಕೆ ಕರೆಗಂಟೆಯಂತಿದ್ದು  ನಾವೂ  ಸದಾ ಜಾಗೃತ ರಾಗಿರುವಂತೆ ಮಾಡುವವನು. ಸಾಮಾನ್ಯವಾಗಿ  ಒಬ್ಬ ವ್ಯಕ್ತಿಯ ಗುಣಮಟ್ಟ ಅವನ ಶತ್ರುವಿನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. ಹಿತೈಷಿ ಎಂದರೆ  ಸದಾ ಇನ್ನೊಬ್ಬರ ಒಳಿತನ್ನು, ಯಶಸ್ಸನ್ನು ಬಯಸುವವನು. "ಹಿತ ಶತ್ರು" ಎಂದರೆ  ನಮ್ಮೊಳಗಿದ್ದು ನಮ್ಮವನಲ್ಲದವರು. ಜೊತೆಯಲ್ಲಿಯೇ ಇದ್ದು  ಮುಂದೆ ಬೆಣ್ಣೆಯಂತಹ  ಮಾತುಗಳನ್ನಾಡಿ ಹಿಂದೆ ಬೆನ್ನಿಗೆ ಚೂರಿ ಹಾಕುವವರು. ನಮಗೆ ಗೊತ್ತಿಲ್ಲದೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಮಾನ್ಯ ಜ್ಞಾನ (ವಾರ 16): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    π(ಪೈ) ಇದರ ಬೆಲೆಯನ್ನು ತೋರಿಸಿಕೊಟ್ಟ ಭಾರತೀಯ ಗಣಿತಜ್ಞ ಯಾರು? ೨.    ಇಂದಿನ ಸಸ್ಯಶಾಸ್ತ್ರ (Botany) ಹಿಂದೆ ಯಾವ ಹೆಸರಿನಿಂದ ಪ್ರಸಿದ್ಧವಾಗಿತ್ತು? ೩.    ಅಂಧರಿಗಾಗಿ ಲಿಪಿ ಕಂಡು ಹಿಡಿದವರು ಯಾರು? ೪.     ಭಾರತ ದೇಶದವರು ತಯಾರಿಸಿದ ಪ್ರಥಮ ಕಂಪ್ಯೂಟರಿನ ಹೆಸರೇನು? ೫.    ಭಾರತದ ಮಾನವ ಮಸ್ತಿಷ್ಕ ಯಂತ್ರ (Man Computer) ಎಂದು ಪ್ರಸಿದ್ಧಳಾದ ಮಹಿಳೆ ಯಾರು? ೬.    ಭಾರತದ ರಾಷ್ಟ್ರಗೀತೆ ’ಜನಗಣಮನ’ ವನ್ನು ಪ್ರಥಮ ಬಾರಿಗೆ ರಾಷ್ಟ್ರಗೀತೆಯಾಗಿ ಹಾಡಿದ ವರ್ಷ ಮತ್ತು ಸ್ಥಳ ಯಾವುದು? … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕಾಣುವ ಅನಾಚಾರಕ್ಕೆ, ಕಾಣದ ಅಸಮಂಜಸ ಉಪಮೆಗಳೇಕೆ?: ಸುಮನ್ ದೇಸಾಯಿ

   ಈಗೀಗ ದೇಶದೊಳಗ ಅತ್ಯಾಚಾರದ ಪ್ರಕರಣಗೊಳು ಅತೀ ಸರ್ವೆ ಸಾಮಾನ್ಯ ಅನ್ನೊ ಹಂಗ ನಡಿಲಿಕತ್ತಾವ. ಮನುಷ್ಯನ ಮನಸ್ಥಿತಿ ಎಷ್ಟು ವಿಕೃತಿಗಳ ಕಡೆಗೆ ವಾಲೆದಂದ್ರ ಇವತ್ತ ಸಂಬಂಧಗಳ ಪವಿತ್ರತೆಯನ್ನು ಸುದ್ಧಾ ಮರೆತು ಮನುಷ್ಯ ಮೃಗಗಳಂಗ ವರ್ತಿಸ್ಲಿಕತ್ತಾನ. ಇಂಥಾ ವಿಕೃತ ಮನಸಿಗೆ, ಸಣ್ಣ ಮಕ್ಕಳು, ಅಕ್ಕ ತಂಗಿ, ಕಡಿಕ ತಾ ಹಡದ ಮಗಳು ಅನ್ನೊದನ್ನು ಮರೆತು ಕಾಮಾಂಧ ಆಗ್ಯಾನ. ಗಾಂಧೀ ಅಜ್ಜನ ರಾಮ ರಾಜ್ಯದ ಕನಸು ನೆನಸಾಗೊ ಯಾವ ಲಕ್ಷಣಗಳು ಈ ಯುಗಾಂತ್ಯದ ತನಕಾ ಇಲ್ಲಾ ಅನಿಸ್ತದ.  ರಾಮ ರಾಜ್ಯ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಾಗರದ ಮಾರಿಕಾಂಬ ಜಾತ್ರೆ: ಪ್ರಶಸ್ತಿ ಪಿ.

ಸಾಗರದ ಹಬ್ಬಗಳು ಅಂದ್ರೆ ಮೊದಲು ನೆನಪಾಗೋದು ಮೂರು ವರ್ಷಕ್ಕೊಮ್ಮೆ ಬರೋ ಮಾರಿ ಜಾತ್ರೆ. ಸಾಗರದ ಮಧ್ಯಭಾಗದಲ್ಲಿರುವ ಶ್ರೀ ಮಾರಿಕಾಂಬೆ ದೇವಿಯ ಒಂಭತ್ತು ದಿನಗಳ ಜಾತ್ರೆಯೆಂದರೆ ಸಾಗರಿಗರ ಪಾಲಿಗೆ ಅಂದೊಂದು ದೊಡ್ಡ ಹಬ್ಬವೇ. ಮೊದಲನೇ ದಿನ ಅದೇ ಬೀದಿಯಲ್ಲಿರುವ ತನ್ನ ತವರು ಮನೆಯಲ್ಲಿರುತ್ತಾಳಂತೆ ತಾಯಿ. ಅವತ್ತು ಮಾಂಸ ಮಧ್ಯಗಳಿಲ್ಲದ ಸಸ್ಯಾಹಾರಿ ಪೂಜೆ. ಆಮೇಲಿನ ದಿನಗಳಲ್ಲಿ ಕುರಿ, ಕೋಳಿಗಳ ಕಡಿತವೆಂದು ಮಾಂಸಾಹಾರಿಗಳ ಹಬ್ಬ. ಆ ಬೀದಿಯ ಮಾಂಸದಂಗಡಿಯಲ್ಲಿ ಮೊದಲ ದಿನವೇ ಮೂವತ್ತೊಂದು ಕುರಿ ಕಡಿದರಂತೆ  ಆ ಮನೆಯಲ್ಲಿ ಬಂದ ನೆಂಟರ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭೀಷ್ಮ ಪ್ರತಿಜ್ಞೆ: ಡಾ . ಸಿ.ಎಂ.ಗೋವಿಂದರೆಡ್ಡಿ

ಶ್ರೀ ವ್ಯಾಸಮಹರ್ಷಿಗಳು ತಮ್ಮ ಶಿಷ್ಯರಿಗೆ ಹೇಳಿದ ಮಹಾಭಾರತ ಕಥೆಯನ್ನು, ಅರ್ಜುನತನಯನಾದ ಅಭಿಮನ್ಯುವಿನ ಪುತ್ರ ಪರೀಕ್ಷಿತನ ಮಗನಾದ ಜನಮೇಜಯನು ಸರ್ಪಯಾಗ ಮಾಡುವ ಕಾಲದಲ್ಲಿ ವೈಶಂಪಾಯನನಿಂದ ಕೇಳಿ ತಿಳಿದನು : ಮಹರ್ಷಿ ವಿಶ್ವಾಮಿತ್ರ ಮೇನಕೆಯರ ಮಗಳೂ ಕಣ್ವಮಹರ್ಷಿಗಳ ಸಾಕುಮಗಳೂ ಆದ ಶಕುಂತಲೆಯನ್ನು ವರಿಸಿದವನು ಚಂದ್ರವಂಶದ ರಾಜನಾದ ದುಷ್ಯಂತ. ಈ ದುಷ್ಯಂತ ಶಕುಂತಲೆಯರ ಮಗನೇ ಭರತ. ಭರತನಿಂದಲೇ ಭಾರತವಂಶವಾಯಿತು. ಭರತನ ಮಗ ಸುಹೋತ್ರ ; ಸುಹೋತ್ರನ ಮಗ ಹಸ್ತಿ. ಇವನಿಂದಲೇ ರಾಜಧಾನಿಗೆ ಹಸ್ತಿನಾಪುರವೆಂಬ ಹೆಸರು ಬಂದದ್ದು. ಹಸ್ತಿಯ ಮಗ ಸಂವರಣ ; … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಚಿಕ್ಕಪುಟ್ಟ ಕಾಳಜಿಯಲ್ಲಿ: ಪದ್ಮಾ ಭಟ್

                ಎಷ್ಟೋ ಬಾರಿ ಚಿಕ್ಕಪುಟ್ಟ ವಿಷಯಗಳು ಅರ್ಥವಾಗುವುದೇ ಇಲ್ಲ. ಎಲ್ಲದರ ನಡುವೆ ಇದ್ದುಕೊಂಡೇ ಏನೂ ಗೊತ್ತಿಲ್ಲದ, ಅಭಿವ್ಯಕ್ತಿ ಪಡಿಸಲಾಗದ ರೀತಿಯಾಗಿಬಿಡುತ್ತದೆ.. ನಮ್ಮನ್ನು ಅವರು ಅರ್ಥ ಮಾಡ್ಕೋಬೇಕು, ಇವರು ಅರ್ಥಮಾಡಿಕೋಬೇಕು ಎಂದು ಹಂಬಲಿಸುವ ನಾವೇ ಯಾಕೆ ಬೇರೆಯವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಮೂಕರಾಗುತ್ತೇವೆಯೋ ಪ್ರಶ್ನಿಸಿಕೊಳ್ಳಬೇಕಿದೆ. ಪ್ರೀತಿಯ ನಡುವೆ, ಪ್ರೀತಿಸುವ ಜನರ ನಡುವೆ ನಾವೂ ಪ್ರೀತಿಯ ಜೀವಿಯಾಗಿದ್ದರೇ ಚಂದ. ಎಲ್ಲವನ್ನೂ ಹಗುರವಾಗಿ, ಸಡಿಲವಾಗಿ ತೆಗೆದುಕೊಳ್ಳುವಾಗ ಒಂದೆರಡು ನಿಮಿಷವಾದರೂ ಆ ವ್ಯಕ್ತಿಯ ಬಗ್ಗೆಯೋ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮನೆಗೆ ಬಂದ ಮೋಹಿನಿ: ಪಾರ್ಥಸಾರಥಿ. ಎನ್.

ಅದೇನೊ ಈ ಟೀವಿಗಳ ಹಾವಳಿ ಜಾಸ್ತಿಯಾದನಂತರ ಎಲ್ಲರ ಮನೆಗಳಲ್ಲಿ ರಾತ್ರಿ ಮಲಗುವ ಸಮಯವೆ ಹೆಚ್ಚು ಕಡಿಮೆ ಆಗಿಹೋಗಿದೆ. ಮೊದಲೆಲ್ಲ ರಾತ್ರಿ ಹತ್ತು ದಾಟಿತು ಅಂದರೆ ಸಾಕು ಎಲ್ಲರ ಮನೆಯ ದೀಪಗಳು ಆರುತ್ತಿದ್ದವು. ಈಗಲಾದರೆ ಅರ್ಧರಾತ್ರಿ ದಾಟಿದರು ಯಾವುದೊ ಚಾನಲ್ ನೋಡುತ್ತ ತೂಕಡಿಸುತ್ತ ಕುಳಿತಿರುವವರೆ ಜಾಸ್ತಿ.  ಕಳೆದ ವಾರ ಹೀಗೆ ಆಯಿತು. ಮನೆಯಲ್ಲಿ ಹೆಂಡತಿ ಹಾಗು ಮಗಳು ರಾತ್ರಿ ಹತ್ತೂವರೆ ಆಯಿತೆಂದು ಹೋಗಿ ಮಲಗಿಬಿಟ್ಟರು, ನಾನು ವಿದೇಶಿ ಚಾನಲ್ ನ ಹಾರರ್ ಸಿನಿಮಾ ನೋಡುತ್ತ ಕುಳಿತಿದ್ದವನು, ಟೀವಿ ಆರಿಸಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಎರಡು ಕವಿತೆಗಳು: ಮಹಿ, ಅಕುವ

          ಭ್ರೂಣ ಆಗಷ್ಟೇ ಕಿತ್ತು ಬಿದ್ದ ಗಾಳಿಪಟ, ಹೊಟ್ಟೆಯೊಳಗೆ ನುಲಿವ ಸಂಕಟ  ಜೀವ ಪ್ರಕ್ರಿಯೆಗೆ ಅನುಗೊಳ್ಳುವ ದೇಹ  ರಕ್ತಮಯ  ತೊಡೆಗಳ ನಡುವೆ ಚಿಗುರುವ ಚಿಟ್ಟೆ ಮೊಟ್ಟೆ  ದಿನಕಳೆದಂತೆಲ್ಲಾ ಬಟ್ಟೆಯಂತೆ ದೇಹ  ಒಗೆದು ಹರಡುವ ಬಯಕೆ  ದಾರಿತಪ್ಪದೇ ಅಮ್ಮನ ಎದೆಗವಿತು ಆಶ್ರಯ  ಪ್ರತಿ ಹುಡುಗನಲ್ಲು ಕಾಡುವ ರೋಮಿಯೋ  ಥೇಟ್ ಕ್ಲಿಯೊಪಾತ್ರಳದ್ದೆ ನೃತ್ಯ ನಡಿಗೆಗೆ  ಜಂಬದ ಕೊಂಬು ಹಾರು ಕೂದಲ ಮೇಲೆ  ಮಿಗ್ ವಿಮಾನದ್ದೆ ವೇಗ  ಸ್ಕೊಟಿಗೆ  ಹಾದಿಗಳ ಹಾದು, ಹಳ್ಳ ಕೊಳ್ಳಗಳ  ದಾಟಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಓಯಸಿಸ್: ನಿನಾದ (ಭಾಗ 2)

ಇಲ್ಲಿಯವರೆಗೆ… ಅದೊಂದು ದಿನ ನಿಶಾಂತ್ ಫೋನ್ ಗೆ ಕರೆ  ಮಾಡಿ ಮಾಡಿ ಸೋತು ಹೋಗಿ ನಿನಾದ ಫೋನ್ ಗೆ ಕರೆ ಮಾಡಿದ. ನಂಗೆ ತುರ್ತಾಗಿ ಕೆಲವು ವಿಷಯ ಕೇಳಬೇಕಿತ್ತು. ನಿಶಾಂತ್ ಎಲ್ಲಿ ?? ನಿನಾದ ಶಾಂತವಾಗಿ,  ಬಹುಶಃ  ನಿಶಾಂತ್ ಬ್ಯುಸಿ ಏನು ಕೇಳಬೇಕಿತ್ತು ? ಮನೆಗೆ ಬಂದ ಮೇಲೆ ವಾಪಾಸು ಕರೆ ಮಾಡಲು ಹೇಳುವೆ ಅಂದು ಉತ್ತರಿಸಿದಳು. ಏನೋ ಸುಮಾರು ಹೊತ್ತು ನಿಶಾಂತ್ & ಜೈನ್ ಮಾತನಾಡಿಕೊಂಡಿದ್ದರು. ದಿನಗಳು ಸಾಗಿ ಹೋಗುತ್ತಿದ್ದವು.. ಆಗೊಮ್ಮೆ ಈಗೊಮ್ಮೆ ನಿನಾದ ಕರೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ನಲವತ್ತರ ಆಸು ಪಾಸಿನ ಪ್ರೀತಿ ಫಜೀತಿ: ಅಮರ್ ದೀಪ್ ಪಿ.ಎಸ್.

ಈ ಸೀರೆಯಲ್ಲಿ  ಈ  ಮೇಕಪ್ ನಲ್ಲಿ   ಹೇಗೆ ಕಾಣಿಸ್ತೇನೆ ? ಕೇಳಿದಳು .    ಅಂದು ಆಕೆ ಬಲಗಡೆ ಸೆರಗು ಹೊದ್ದು ಅವಳ ತೂಕಕ್ಕೆ  ಭಾರವೆನಿಸುವ ಸೀರೆಯನ್ನು ತುಂಬಾ ಇಷ್ಟಪಟ್ಟು ಒಂದೂವರೆ ತಾಸಿಗಿಂತ ಹೆಚ್ಚು ಸಮಯ ತೆಗೆದುಕೊಂಡು ರೆಡಿಯಾಗಿ ಬಂದಿದ್ದಳು. ಎಂದಿಗಿಂತ ತುಸು ಹೆಚ್ಚೇ ಎನ್ನುವಷ್ಟು ಮೇಕಪ್ ಮಾಡಿಕೊಂಡಿದ್ದಳು. ತುಟಿಗಳು ರಂಗಾಗಿದ್ದವು. ಅಂದು ಸಂಜೆ ಕಾಕ್ ಟೈಲ್  ಪಾರ್ಟಿ ಗೆ ಆಹ್ವಾನಿಸಿದ ಮೇರೆಗೆ ಬಹಳ ಉಲ್ಲಸಿತಳಾಗಿ ತನ್ನ ಎಲ್ಲ ನಾಲ್ಕು ದಿನದಿಂದೀಚೆಗೆ ಆದ ಗೆಳತಿಯರೊಂದಿಗೆ ಬಂದಿಳಿದಿದ್ದಳು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬಂಗಾರಮ್ ಎಂಬ ಹುಲಿಯೂ-ಸಾಗರದ ಮಾರಿಜಾತ್ರೆಯೂ: ಅಖಿಲೇಶ್ ಚಿಪ್ಪಳಿ

ಪಶ್ಚಿಮ ಬಂಗಾಳದ ದಾಬಾ ಅರಣ್ಯ ಪ್ರದೇಶದಲ್ಲಿ ೨೦೦೯ರಲ್ಲಿ ಹುಲಿಮರಿಯೊಂದು ಅನಾಥವಾಗಿ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿತ್ತು. ಮುದ್ದಾದ ಪುಟ್ಟ ಹುಲಿ ಮರಿ ತಾಯಿಯಿಂದ ಬೇರ್ಪಟ್ಟು ಅಸಹಾಯಕವಾಗಿ ಅನಾಥವಾಗಿತ್ತು. ಅರಣ್ಯಾಧಿಕಾರಿಗಳು ತಾಯಿ ಬರುವುದೆಂದು ಕಾದು ನೋಡಿದರು. ತಾಯಿ ಬರಲಿಲ್ಲ. ಮರಿಯನ್ನು ತಂದು ಬೋರ್ ವನ್ಯಜೀವಿ ಉದ್ಯಾನವನಕ್ಕೆ ತಂದು ಬೆಳೆಸಿದರು. ಹುಲಿ ಮರಿ ಬೆಳದ ಮೇಲೆ ಮತ್ತೆ ಅರಣ್ಯಕ್ಕೆ ಬಿಡುವ ಯೋಜನೆ ಅರಣ್ಯ ಇಲಾಖೆಯದಾಗಿತ್ತು. ಎಲ್ಲಾ ಮೃಗಾಲಯ ಮತ್ತು ಸಂರಕ್ಷಿತ ಉದ್ಯಾನವನಗಳಲ್ಲಿ ಹಿಂಸ್ರ ಪ್ರಾಣಿಗಳಿಗೆ ಆಹಾರವಾಗಿ ಸಾಮಾನ್ಯವಾಗಿ ದನದ ಮಾಂಸವನ್ನು ನೀಡುತ್ತಾರೆ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ