ಕಾವ್ಯ ಧಾರೆ: ಪ್ರವೀಣಕುಮಾರ್. ಗೋಣಿ, ಸಿಪಿಲೆನಂದಿನಿ, ಕ.ಲ.ರಘು.
-: ಅಂತರ್ಯದಾ ಯಾತ್ರೆ :- ಆಳದಿ ಸ್ತಬ್ದತೆಯದು ಮನೆ ಮಾಡಿ ಕುಳಿತಿರಲು ಮನವಿದು ಅದ ಮರೆಯುತ್ತ ಹೊರಟಿಹುದು ಹೊರಗಿನಾ ಜಾತ್ರೆಗೆ. ತನ್ನ ತಾ ಮರೆತು ಅಲೆಯುತಿಹುದು ಏನೆನ್ನೋ ಅರಸುತ್ತ ಭಿನ್ನವಾಗಿರದ ಸಾಕ್ಷಾತ್ಕಾರದ ಬೆಳಕ ಬದಿ ಸರಿಸುತ ಸೋತು ಹೋಗುತಿದೆ ಮನ ಸತತ. ಏಳುವ ಸಾವಿರ ತಲ್ಲಣಗಳ ಅಲೆಗಳ ಬೆನ್ನತ್ತುತ ಆಳದಿ ಅಡಗಿಹ ಅರಿವೆನುವ ಮುತ್ತು ರತ್ನಗಳ ತೊರೆದು ಸರಿಯುತಿದೆ ಮನ ವಿಷನ್ನಗೊಳ್ಳುತ್ತ. -ಪ್ರವೀಣಕುಮಾರ್. ಗೋಣಿ ಮಹಾ ವಿಸ್ಮಯದ ಕತ್ತಲೆಯೇ ಓ ಕತ್ತಲೆಯೇ … Read more