ಪಂಚಮಹಾಸಾಗರದ ಐದು ಕೊಳೆಗುಂಡಿಗಳು: ಅಖಿಲೇಶ್ ಚಿಪ್ಪಳಿ ಅಂಕಣ
(ಭೂಮಂಡಲದ ಶೇ ೭೦ ಭಾಗ ನೀರಿನಿಂದ ಸುತ್ತುವರೆದಿದೆಯಾದ್ದರಿಂದ ಅಷ್ಟೂ ನೀರನ್ನೂ ಸೇರಿಸಿ ಒಂದೇ ಮಹಾಸಾಗರ ಎನ್ನಬಹುದು. ಆದರೂ ದೇಶಗಳು ತಮ್ಮ ಗಡಿಗಳಿಗೆ ಅನುಸಾರವಾಗಿ ೫ ಮಹಾಸಾಗರಗಳನ್ನು ಗುರುತಿಸಿಕೊಂಡಿದ್ದಾರೆ. ೧. ಪೆಸಿಫಿಕ್ ಮಹಾಸಾಗರ ೨. ಅಟ್ಲಾಂಟಿಕ್ ಮಹಾಸಾಗರ ೩. ಹಿಂದೂ ಮಹಾಸಾಗರ ೪. ಅಂಟಾರ್ಟಿಕ್ ಮಹಾಸಾಗರ ಮತ್ತು ಆರ್ಕ್‌ಟಿಕ್ ಮಹಾಸಾಗರ) ಮೊನ್ನೆ ಸೋಮವಾರ ಅಂದರೆ ದಿನಾಂಕ:೨೧/೦೭/೨೦೧೪ರ ಬೆಳಗ್ಗೆ ತೋಟದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡುವಾಗ ಅಪ್ಪಟ ಭೂಮಿಪುತ್ರನ ಜಂಗಮವಾಣಿಯಿಂದ ಕರೆ ಬಂತು ಎಂದು ಮನೆಯಿಂದ ಕೂಗಿದರು. ಈ ಭೂಮಿಪುತ್ರನ ದೂರವಾಣಿ … Read more