ಪಂಜು ಕಾವ್ಯಧಾರೆ
ಬೆಳಗಲಿ ದೀಪ *** ಹೊತ್ತಲಿ ದೀಪ ಹೊತ್ತಿ ಉರಿಯುತ್ತಿರುವ ಭ್ರಷ್ಟರ ನಡುವೆ ಹೊತ್ತೇರುವದರಲ್ಲಿ ಹೊಸತನವ ಹೊಮ್ಮಿಸಲಿ ಬೆಳಗಲಿ ದೀಪ ಬಡವರ ಬಾಗಿಲಲಿ ಗುಡಿಸಲುಗಳಲಿ ಬೆಳಕಾಗುವದರೊಳಗೆ ಬದುಕು ಕತ್ತಲಿಂದ ದೂರವಾಗಲಿ ವಿಜೃಂಭಿಸಲಿ ದೀಪ ಸೋಲನ್ನುಂಡು ಹತಾಸೆಗೊಳಗಾದ ಮನಸುಗಳಲಿ ಗೆದ್ದು ಬೀಗುವವರ ಸೊಕ್ಕುಮುರಿದು ಬಿದ್ದಲ್ಲೇ ಬಿದ್ದಿರುವ ವೃದ್ಧರ ಬಾಳಲಿ ಝೇಂಕರಿಸಲಿ ದೀಪ ಹಣದ ಆಸೆಗೆ ಹೆಣವ ಕೆಡವಿದವರ ಚಿತೆಯೆದುರು ಹೆಣ್ಣಿನ ದೇಹಕೆ ಕಣ್ಣ ಹಾಕುವ ಕಾಮುಕರ ಶವದೆದುರು ಸುಡುಗಾಡಲಿ ಶೃಂಗಾರಗೊಳ್ಳಲಿ ದೀಪ ಸಿಂಧೂರವಿಲ್ಲದ ಹಣೆಗಳಮೇಲೆ ಕಣ್ಣುಗಳಿಲ್ಲದ ಕುರುಡರೆದೆಯಲಿ ಬಣ್ಣವಿರದ ಬದುಕಿನ … Read more
ರಾಜ್ಯೋತ್ಸವ: ಪಾರ್ಥಸಾರಥಿ ಎನ್
ನಾಯಕ ನಟ ರೂಪೇಶನ ಮಾತು ಮುಂದುವರೆದಿತ್ತು, " ಕನ್ನಡ ನಾಡು ನುಡಿ ಜಲ ಭೂಮಿಗಾಗಿ, ನನ್ನ ಈ ಜನ್ಮವನ್ನು ಮೀಸಲಾಗಿಡುವೆ. ನನ್ನ ಪ್ರೀತಿಯ ಅಣ್ಣ ತಮ್ಮಂದಿರೆ, ಇಂದು ನಾನು ಈ ನಾಡಿನಲ್ಲಿ ಅನ್ನ ತಿನ್ನುತ್ತಿರುವೆ, ನಿಮ್ಮ ನಡುವೆ ಒಬ್ಬ ನೆಚ್ಚಿನ ನಟನಾಗಿ ನಿಂತಿರುವೆ ಎನ್ನುವದಾದರೆ ಅದಕ್ಕೆ ಈ ನಾಡಿನ ಸಮಸ್ತ ತಾಯಿಯರ ಪ್ರೀತಿ, ಅಕ್ಕ ತಂಗಿಯರ ವಾತ್ಸಲ್ಯ ಕಾರಣ. ಸ್ವಂತ ಅಣ್ಣ ತಮ್ಮಂದಿರು ನನ್ನ ಜೊತೆ ಇರಲಿಲ್ಲ, ಆದರೆ ನೀವು ನನ್ನ ಕೈ ಬಿಡಲಿಲ್ಲ, ನನಗೆ ಅಣ್ಣನಂತೆ … Read more
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 9): ಪ್ರಸಾದ್ ಕೆ.
ಇಲ್ಲಿಯವರೆಗೆ ಈ ಕುಖ್ಯಾತ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನ್ಯಾಯಮೂರ್ತಿ ಆರ್ಚಿ ಕ್ಯಾಂಪ್ಬೆಲ್ ರ 1996 ರ ವಿಸ್ತøತ ವರದಿಯನ್ನು ಅವಲೋಕಿಸಿದರೆ ಈ ಪ್ರಕರಣಗಳ ಹಲವು ಭಯಾನಕ ರಹಸ್ಯಗಳು ಒಂದೊಂದಾಗಿ ತೆರೆದುಕೊಳ್ಳುವುದು ಸತ್ಯ. ಸ್ಕಾರ್-ಬೋರೋದ ಸರಣಿ ಅತ್ಯಾಚಾರಗಳ ಪ್ರಕರಣಗಳ ಮೇಲೆ ಮೊದಲು ಸಂಕ್ಷಿಪ್ತವಾಗಿ ಕಣ್ಣಾಡಿಸೋಣ. ಸ್ಥಳೀಯ ಮೆಟ್ರೋ ಟೊರಾಂಟೋ ಪೋಲೀಸ್ ಇಲಾಖೆಯು ಶಂಕಿತ ಆರೋಪಿಯ ರೇಖಾಚಿತ್ರಗಳನ್ನು ಬಿಡುಗಡೆಗೊಳಿಸಿದ ನಂತರ ಮಾಹಿತಿಗಳ ಮಹಾಪ್ರವಾಹವೇ ಹಲವು ಮೂಲಗಳಿಂದ ಹರಿದುಬಂದಿತ್ತು. ಮೊದಲೇ ಹೇಳಿದಂತೆ 1990 ರ ಅಕ್ಟೋಬರ್ ಅಂತ್ಯದ ಅವಧಿಯಲ್ಲಿ ಬರೋಬ್ಬರಿ ಒಂಭೈನೂರು ಹೆಸರುಗಳು … Read more
ಚಿಕ್ಕ ಬಿಲಗುಂಜಿಯ ಕಮಲೇಶ್ವರ ದೇವಸ್ಥಾನ: ಪ್ರಶಸ್ತಿ
ಹೋಗೋದು ಹೇಗೆ ? ಸಾಗರ ತಾಲ್ಲೂಕಿನ ಸುತ್ತಮುತ್ತಲಿರೋ ಕೆಳದಿ,ಇಕ್ಕೇರಿ,ಕಲಸೆ, ಹೊಸಗುಂದ ಮುಂತಾದ ಇತಿಹಾಸ ಪ್ರಸಿದ್ಧ ತಾಣಗಳ ಬಗ್ಗೆ ಕೇಳಿರುತ್ತೀರಿ. ಆದರೆ ಸಾಗರಕ್ಕೆ ಹತ್ತಿರದಲ್ಲೇ ಹನ್ನೊಂದನೇ ಶತಮಾನದ ದೇವಸ್ಥಾನವೊಂದಿದೆ ಅನ್ನೋದು ಹೆಚ್ಚಿನವರಿಗೆ ತಿಳಿದಿರಲಾರದು. ಅದೇ ಸಾಗರದಿಂದ ಸುಮಾರು ೨೦ ಕಿ.ಮೀ ದೂರದಲ್ಲಿರುವ ಚಿಕ್ಕ ಬಿಲಗುಂಜಿಯ ಕಮಲೇಶ್ವರ ದೇವಸ್ಥಾನ. ಸಾಗರದಿಂದ ಚಿಕ್ಕಬಿಲಗುಂಜಿಗೆ ಹೋಗೋಕೆ ಎರಡು ಮಾರ್ಗಗಳಿವೆ. ಸಾಗರದಿಂದ ಶಿವಮೊಗ್ಗಕ್ಕೆ ಹೋಗೋ ಮಾರ್ಗದಲ್ಲಿ ಸಿಗೋ ತ್ಯಾಗರ್ತಿ ಕ್ರಾಸಿನಲ್ಲಿ ಹೋಗೋದು ಮೊದಲನೇ ಮಾರ್ಗವಾದರೆ ನಂತರ ಸಿಗೋ ಕಾಸ್ಪಾಡಿ ಎಂಬ ಊರಿನ ಬಳಿ ಎಡಕ್ಕೆ … Read more
ಆರೋಗ್ಯದ ಮೇಲೆ ಸಕಾರಾತ್ಮಕ ಮನೋಭಾವದ ಪರಿಣಾಮ: ವೈ. ಬಿ. ಕಡಕೋಳ
ಮನುಷ್ಯನ ನಡೆ-ನುಡಿ ಆತನ ಮನೋಭಾವ, ಕ್ರಿಯೆ, ಪ್ರತಿಕ್ರಿಯೆಗಳು ಒಂದೇ ರೀತಿ ಇರುವುದಿಲ್ಲ. ಒಂದು ಸಾಮಾನ್ಯ ಪ್ರಚೋದನೆಗೆ ಹತ್ತಾರು ಜನ ಹತ್ತಾರು ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಬಹುದು. ಉದಾಹರಣೆಗೆ ಒಂದು ಮಗು ಅಳುತ್ತಿದ್ದರೆ ಕೆಲವರು "ಅಯ್ಯೋ ಪಾಪ ಎನ್ನಬಹದು. ಇನ್ನು ಕೆಲವರು “ಛಿ ಏನು ಅನಿಷ್ಟ ಎಷ್ಟು ಅಳುತ್ತೆ” ಎನ್ನಬಹುದು. ಇನ್ನು ಕೆಲವರು “ಪಾಪ ಆ ಮಗುವನ್ನು ರಮಿಸಬೇಕು” ಎನ್ನಬಹುದು. ಒಬ್ಬರು ಮಗುವಿನ ಪಕ್ಕದಲ್ಲಿ ಕುಳಿತು ರಮಿಸಲು ಯತ್ನಿಸಬಹುದು. ಹೀಗೆ ಕೇವಲ ಒಂದು ಘಟನೆ ಹತ್ತಾರು ಜನರಲ್ಲಿ ಹತ್ತಾರು ಯೋಚನೆಗಳನ್ನು … Read more
ಆಧುನಿಕ ಬೆಳವಣಿಗೆಯಿಂದ ಮಾನವೀಯ ಮೌಲ್ಯಗಳ ಅವನತಿ: ಶಿವಣ್ಣ ಎಸ್.ಕೆ.
ಇಂದು ಆಧುನಿಕತೆಯು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಆದರೆ ಈ ತೀವ್ರಗತಿಯ ಆಧುನಿಕತೆಯ ಬೆಳವಣಿಗೆಯಿಂದಾಗಿ ಭಾರತದಲ್ಲಿ ಆಧುನಿಕತೆಯ ಬಿಸಿ (ಶಾಖ) ಹೆಚ್ಚು ತಟ್ಟಿರುವುದು ನಗರ/ಪಟ್ಟಣಗಳಲ್ಲಿ ಎಂದು ಹೇಳಬಹುದು. ಇಂದು ಸಾಮಾಜಿಕ ಸಂಬಂಧಗಳು ಗುರು-ಹಿರಿಯರು, ತಂದೆ-ತಾಯಂದಿರು, ಸ್ತ್ರೀಯರು ತಮ್ಮ ಸ್ಥಾನಮಾನಗಳನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ. ಸ್ವದೇಶಿ ಮತ್ತು ವಿದೇಶಿ ಚಾನೆಲ್‍ಗಳು ಮನೋರಂಜನೆಯ ಹೆಸರಿನಲ್ಲಿ ಬಿತ್ತರಿಸುತ್ತಿರುವ ಅಶ್ಲೀಲ ಚಿತ್ರಗಳಿಂದಾಗಿ ಭಾರತೀಯ ಸಂಸ್ಕøತಿಯ ಸಂಕೇತಗಳಾದ ಸೀರೆ, ಕುಂಕುಮ, ಹಸಿರು ಬಳೆಗಳು ಇಂದು ಕಾಣಸಿಗುವುದು ಅಪರೂಪವಾಗಿದೆ. ಹೀಗೆಯೇ ಮುಂದುವರೆದರೆ … Read more
ಭರತ ಮಾತೆಯ ಪುಣ್ಯ ಭೂಮಿಯನ್ನು ರಕ್ತದಿಂದ ತೋಯಿಸದಿರಿ ಸಹೋದರರೆ: ಸಿದ್ದುಯಾದವ್ ಚಿರಿಬಿ…
ನಿನ್ನೆ ಒಂದು ಕೆಲಸದ ವಿಷಯವಾಗಿ ಕೂಡ್ಲಿಗಿಯ ಸಾರ್ವಜನಿಕ ಅಸ್ಪತ್ರೆಗೆ ಹೋಗಿದ್ದೆ. ನಾನು ಹೋದಾಗ ಡಾಕ್ಟರ್ ಬಂದಿರಲಿಲ್ಲ. ಅದಕ್ಕಾಗಿ ಅಸ್ಪತ್ರೆಯ ಹೊರಗಡೆ ಕುಳಿಯು ಕಾಯ್ತಿದ್ದೆ. ಒಬ್ಬ ವ್ಯೆಕ್ತಿ ಬಂದು "ನೀವು ಸಿದ್ದುಯಾದವ್ ಅಲ್ವಾ?" ಅಂದ. 'ಹೌದು' ಎಂದೆ. ಅವ್ನು ಮರುಮಾತನಾಡದೆ ಯಾರ್ಗೊ ಪೋನ್ ಮಾಡ್ತ ಹೊರಟರಹೋದ. ಸ್ವಲ್ಪ ಸಮಯದ ನಂತರ ಇಬ್ಬರು ಬೈಕ್ ಮೆಲೆ ಬಂದು " ಸಿದ್ದುಯಾದವ್ " ಅಂದ್ರು ಹೌದು ಎಂದೆ. 'ನಿಮ್ಮ ಹತ್ತಿರ ಸ್ವಲ್ಪ ಮಾತಾಡ್ಬೆಕು ಬರ್ತಿರಾ!' ಅಂದ್ರು. ಯಾಕೆ ಎಂದೆ. ಪ್ಲೀಜ್ ಬನ್ನಿ … Read more
ಆ ಒಂದು ಪ್ರಶ್ನೆ: ಕೆ ಟಿ ಸೋಮಶೇಖರ ಹೊಳಲ್ಕೆರೆ
ಎಲ್ಲಾ ಸಮಾಜಗಳಿಗೂ ಆದರ್ಶ ಪುರಷನಾದ, ಪುರಷೋತ್ತಮನಾದ ರಾಮನ ಆದರ್ಶದ ಕಥೆ ಅನನ್ಯ. ಆ ಕಥೆ ಸೊಗಸಾಗಿ ರಚಿಸಿದ ವಾಲ್ಮೀಕಿ ಧನ್ಯ. ಅನುಸರಿಸಿ ಆದರ್ಶವಾದ ಭಾರತೀಯ ಸಮಾಜ ಪರಮಧನ್ಯ. ರಾಮಾಮಾಯಣ ವಿಶ್ವದ ಮಹಾಕಾವ್ಯಗಳಲ್ಲಿ ಒಂದು. ರಾಮಾಯಣ ಎಂದರೆ ' ರಾಮನ ಚರಿತೆ ' ಎಂದು ಅರ್ಥ. ' ರಾಮ ' ಎಂದರೆ ಮನೋಹರ, ಸುಂದರ, ರಂಜಿಸು ಎಂಬ ಅರ್ಥಗಳಿವೆ. ' ಆಯನ ' ಎಂದರೆ ಚರಿತೆ, ಗತಿ, ಸ್ಥಾನ ಎಂಬ ಅರ್ಥಗಳಿವೆ. ಅವೆರಡು ಪದಗಳು ಸಮಾಸವಾಗಿ ರಾಮಾಯಣ ಪದವಾಗಿದೆ. … Read more
ದೋಸ್ತಿ ಖಾತೆಯವರಿಂದ ಕತೆ ಮಾತು ಆಹ್ವಾನ
ಬೆಳಗಾವಿಯಲ್ಲಿ ಒಂದಷ್ಟು ಕತೆಗಾರರು ಸೇರಿ ಒಬ್ಬರ ಕತೆಗಳ ಬಗ್ಗೆ ಇನ್ನೊಬ್ಬರು ಮಾತನಾಡುವ ವಿಶಿಷ್ಟ "ಕತೆ ಮಾತು" ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಜೊತೆಗೆ ಲಗತ್ತಿಸಲಾಗಿದೆ. ಕಾರಣ, ಸಹೃದಯರಾದ ತಾವು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ವಿನಂತಿ. ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ. 13ನೇ ನವೆಂಬರ್ 2016, ಕೇಂದ್ರ ಗ್ರಂಥಾಲಯ, ಡಿ.ಸಿ. ಕಂಪೌಂಡ್, ಬೆಳಗಾವಿ ಕಾರ್ಯಕ್ರಮದ ಆಶಯ: ಸಮಕಾಲೀನ ಕತೆಗಾರ ಗೆಳೆಯರು ಕೂತು ಪರಸ್ಪರರ ಕೃತಿಗಳ ಬಗ್ಗೆ ಅನಿಸಿಕೆ ಹಂಚಿಕೊಳ್ಳುವ ತನ್ಮೂಲಕ ಹೊಸ ಹೊಳಹುಗಳನ್ನು ಅರಿಯುವ ಚಿಕ್ಕ ಪ್ರಯತ್ನ. ಒಬ್ಬರು … Read more
ಪಂಜು ಕಾವ್ಯಧಾರೆ
ಸಂಕೋಲೆಯೊಳಗಿನ ನೀನು! ನೀನು ಬಂದಾಗ ನಿಜವಾಗಿ ಬೆಳದಿಂಗಳು ಹಾಲಿನಂತೆ ಸುರಿದಿತ್ತು ನೋಡಿದ್ದಷ್ಟೇ ಭಾಗ್ಯ! ಅದನ್ನು ತುಂಬಿಡಲು ಯಾವ ಬಟ್ಟಲಿಗೂ ಸಾದ್ಯವಾಗಿರಲಿಲ್ಲ ನಿನ್ನ ಕಣ್ಣುಗಳೊಳಗೆ ಅಂತಹುದೇ ಬೆಳಕಿರಬಹುದೆಂದು ಕಾದಿದ್ದೇ ಬಂತು: ಒಂದು ತಣ್ಣನೆಯ ಸಂಜೆ ನಿನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ ಬೆವೆತು ಹೋದೆ ನಿನ್ನ ಕಣ್ಣುಗಳ ತುಂಬ ಬೆಂಕಿ ಕೆನ್ನಾಲಿಗೆಗಳು ನಿನ್ನ ತುಟಿಗಳಿಗೆ ಬಂದೆ ಹೊರಬಂದದ್ದೆಲ್ಲ ನಿಗಿನಿಗಿ ಕೆಂಡದಂತ ಶಬ್ದಗಳು ನಿನ್ನ ಎದೆಗೆ ಬಂದೆ ಕೊತಕೊತ ಕುದಿಯುವ ಲಾವಾರಸದ ಕಡಲು ನಿನ್ನ ಸೊಂಟಕ್ಕೆ ಬಂದೆ ಮಿರಮಿರ ಮಿಂಚುವ ಬಿಳಿ … Read more
ಕನ್ನಡ ಭಾಷೆ ಮತ್ತು ಸಂಸ್ಕೃತಿ -ಮುಂದಿನ ದಿನಗಳಲ್ಲಿ!: ಎಸ್.ಜಿ.ಶಿವಶಂಕರ್
ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದ್ದಲ್ಲೇ ಉಜ್ವಲವಾದ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ. ಈ ನಾಡು ಕಾವೇರಿಯಿಂದ ಗೋದಾವರಿಯವರೆಗೂ ವ್ಯಾಪಿಸಿತ್ತು ಎಂದು ಇತಿಹಾಸ ಹೇಳುತ್ತದೆ. ಈ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿರುವ ಬಗೆಗೆ ವಿದ್ವಾಂಸರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವನ್ನು ಮೊದಲಿಗೆ 'ಕರಿಯ ಮಣ್ಣಿನ ನಾಡು' ಎಂದೂ, 'ಕರುನಾಡು' ಎಂದರೆ ಎತ್ತರದ ಪ್ರದೇಶದಲ್ಲಿರುವ ನಾಡು ಎಂದೂ, 'ಕಮ್ಮಿತ್ತು ನಾಡು' ಎಂದರೆ … Read more
ಅಂಧಕಾರ ಅಳಿಸುವ ಬೆಳಕಿನ ಅರಿವು ದೀಪಾವಳಿ: ವೈ.ಬಿ.ಕಡಕೋಳ
ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು ಇರುಳು ಕತ್ತಲೆಯ ಗವಿ:ಮನೆ ದೂರ; ಕನಿಕರಿಸಿ ಕೈಹಿಡಿದು ನಡೆಸೆನ್ನನು ಹೇಳಿ ನನ್ನಡಿಯಿಡಿಸು;ಬಲುದೂರ ನೋಟವನು ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ ಅಜ್ಞಾನದ ಕತ್ತಲೆಯನ್ನು ಕಳೆಯಲು ಜ್ಞಾನದ ದೀಪ ಅಗತ್ಯ. ದೀಪಾವಳಿ ದೀಪಗಳ ಬೆಳಕಿನ ಹಬ್ಬ. ನರಕಚತುರ್ದಶಿಯಿಂದ ಆರಂಭಿಸಿ ಮೂರು ದಿನಗಳವರೆಗೆ ಆಚರಿಸುವುದುಂಟು. ಭಾರತದ ಎಲ್ಲೆಡೆಯಲ್ಲಿಯೂ ದೀಪಾವಳಿಯನ್ನು ಆಚರಿಸುತ್ತಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಸ್ತಾಪಗೊಳ್ಳುವ ಎರಡು ಮುಖ್ಯ ಹೆಸರುಗಳು. ನರಕ ಹಾಗೂ ಬಲಿ. ನರಕನು ಭೂದೇವಿಯ … Read more
ಅವ್ವ: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.
“ಅವ್ವ ಇದ್ದರೇ ಸಾಕು ಅವಳಿರದ ಸಿರಿವಂತಿಕೆ ಯಾರಿಗೆ ಬೇಕು ಅವಳಿರದ ಏಕಾಂತ ಯಾರಿಗೆ ಬೇಕು ಅವಳಿರದ ಅರಮನೆಯದಾರಿಗೆ ಬೇಕು ಅವಳಿರದ ಸಂತಸ, ಹಬ್ಬ, ಹರಿದಿನಗಳದಾರಿಗೆ ಬೇಕು ಅವ್ವ ಇದ್ದರದೇ ಕ್ರಿಸ್‍ಮಸ್, ಅದೇ ಯುಗಾದಿ ಅದೇ ರಮ್ಜಾನ್ ಅವ್ವ ಇರಬೇಕು ಅವಳ ಜೊತೆ ನಾನೂ ಇರಬೇಕು” ಅವ್ವನನ್ನು ಮಮ್ಮಿಯೆಂದು ಕರೆಯಲು ನನಗೆ ತುಂಬಾ ಮುಜುಗುರ ಯಾಕೆಂದರೆ ಮಮ್ಮಿ ಎಂದರೆ ಕೇವಲ ಶಬ್ದವಾದೀತು. ಅವ್ವ ಎಂದರೆ ಆಹಾ ಅದೇನೋ ಸೊಗಸು. … Read more
ಬಿಸಿಲ ನಾಡಿನಲ್ಲಿ ಸೋಂಪಾಗಿ ಬೆಳೆಯುತ್ತಿರುವ ಶಿಲ್ಪ ಅಂತರಗಂಗೆ: ವೀರೇಶ ಗೋನವಾರ
ಹೈದರಬಾದ್ ಕರ್ನಾಟಕ ಎಂದಾಕ್ಷಣವೇ ಮೂಗು ಮುರಿಯುವ ಇಂದಿನ ಜಾಯಮಾನದಲ್ಲಿಯೇ ರಾಯಚೂರು ಜಿಲ್ಲೆಯ ಭತ್ತದ ಕಣಜ ಎಂದೇ ಖ್ಯಾತಿಯನ್ನು ಪಡೆದಿರುವ ಸಿಂಧನೂರು ತನ್ನ ಒಡಲಲ್ಲಿ ಭತ್ತದ ಜೊತೆ-ಜೊತೆಗೆ ಅನೇಕ ಪ್ರತಿಭೆಗಳನ್ನು ಅಡಗಿಸಿಟ್ಟುಕೊಂಡಿದೆ. ಅಂತಹ ಪ್ರತಿಭೆಗಳ ಸಾಲಿಗೆ ನನ್ನೂರಿನ ಹೆಮ್ಮೆಯ ಯುವತಿ ಶಿಲ್ಪ ಅಂತರಗಂಗೆ ನಮ್ಮ ಇಂದಿನ ಯುವ ಸಮುದಾಯಕ್ಕೆ ಹೊಸ ಭರವಸೆಯ ಪ್ರತಿಭೆಯಾಗಿ ನಿಲ್ಲುತ್ತಾರೆ. ಇಂತಹ ಭರವಸೆಯ ಕಣ್ಮಣಿಗೆ ಪ್ರಸ್ತುತ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡಲಾಗುವ 2014-15ನೇ ಸಾಲಿನ ರಾಜ್ಯ ಮಟ್ಟದ ‘ಸ್ವಾಮಿ … Read more
ಸರಸವಾಡದಿರಿ ಪುಟಾಣಿಗಳೇ ಪಟಾಕಿಗಳ ಜೊತೆ!: ಹೊರಾ.ಪರಮೇಶ್ ಹೊಡೇನೂರು
ಮತ್ತೊಮ್ಮೆ ದೀಪಾವಳಿ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಹಬ್ಬದ ಸಡಗರವನ್ನು ಹೆಚ್ಚಿಸುವುದು ವೈವಿಧ್ಯಮಯವಾದ ಪಟಾಕಿಗಳು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಮನೆಯಲ್ಲಿ ದೊಡ್ಡವರು ಪೂಜಾದಿ ಕಾರ್ಯಗಳು, ತಳಿರು ತೋರಣ, ಹೊಸ ಬಟ್ಟೆಗಳು, ದೇಗುಲ ದರ್ಶನ, ಮುಂತಾದ ವುಗಳ ಕಡೆ ಗಮನ ನೀಡಿದರೆ, ಪುಟಾಣಿ ಮಕ್ಕಳಿಗೆ ಪಟಾಕಿಗಳನ್ನು ಸುಟ್ಟು, ಸುರ್ ಸುರ್ ಬತ್ತಿ ಉರಿಸಿ, ಕೃಷ್ಣ ಚಕ್ರ ತಿರುಗಿಸಿ, ಹೂ ಕುಂಡ ಚಿಮ್ಮಿಸಿ, ಆಟಂಬಾಂಬ್ ಸಿಡಿಸಿ ಖುಷಿಪಡುತ್ತಾರೆ. ಮುಗ್ಧ ಮಕ್ಕಳು ಹಬ್ಬದ … Read more
ಮಣ್ಣಿಗೆ ಬಿದ್ದ ಹೂಗಳು ಕವನ ಸಂಕಲನ ವಿಮರ್ಶೆ: ನೂರುಲ್ಲಾ ತ್ಯಾಮಗೊಂಡ್ಲು
ನವ್ಯೋತ್ತರ ಕಾವ್ಯಮಾರ್ಗದಲ್ಲಿ, ಮತ್ತೆ ದಲಿತೀಯ ನೆಲೆಯಲ್ಲಿ ಅಂಥದೇ ಸಿಟ್ಟು, ಹತಾಶೆ,ರೋಷ, ಸಮಾಜಿಕ ಶೋಷಣೆಯ ಹಾಗೂ ತಾಯಿ ಮಮತೆ, ಗೆಳತಿಯ ಒಲವು, ಚೆಲುವು, ಮಗುವಿನ ಅಕ್ಕರೆ, ರಾಜಕೀಯ ವಿಡಂಬನೆಗಳನ್ನು ಶಿಲ್ಪವಾಗಿಸಿಕೊಂಡು ಮೈತಳೆದ ಕೃತಿ” ಮಣ್ಣಿಗೆ ಬಿದ್ದಹೂಗಳು” ಬಿದಲೋಟಿ ರಂಗನಾಥ್‍ರ ಇದು ಪ್ರಥಮ ಕವನ ಸಂಕಲನ. ಈ ಸಂಕಲದಲ್ಲಿ ಒಟ್ಟು 51 ಕವನಗಳಿಗೆ ಇವುಗಳಲ್ಲಿ ಬಹುಮುಖ್ಯವಾಗಿ ದಲಿತೀಯಾ ನಿಲುವನ್ನೇ ತಾತ್ವಿಕವಾಗಿರಿಸಿಕೊಂಡು ರಚನೆ ಮಾಡಿದಂತಹ ಕವನಗಳು. ಇಲ್ಲಿ ಮುಖ್ಯವಾಗುತ್ತವೆ. ಸಂಕಲನದ ಶೀರ್ಷಿಕೆಯ ಕವನವೇ ‘ಮಣ್ಣಿಗೆ ಬಿದ್ದ ಹೂಗಳು-ಇಲ್ಲಿ ಕವಿ, ದಲಿತನಾಗಿ ತನಗಾದ … Read more
ಆಗಂತುಕ: ಪಾರ್ಥಸಾರಥಿ ಎನ್
ಬಾಗಿಲಲ್ಲಿ ನಿಂತ ಕುಮುದಳಿಗೆ ಮನೆಯ ಎದುರಿಗೆ , ಶಂಕರ ಯಾರ ಜೊತೆಗೋ ಮಾತನಾಡುತ್ತಿರುವುದು ಗಮನ ಸೆಳೆಯಿತು. ದಿಟ್ಟಿಸಿ ನೋಡಿದಳು, ಯಾರೋ ಬಿಕ್ಷುಕನಿರಬೇಕು ಅಂದುಕೊಂಡಳು. ಅವನ ಮಾಸಿದ ಕಾವಿಯ ನಿಲುವಂಗಿ, ಬಲಹೆಗಲಿಗೆ ಜೋತುಬಿದ್ದ ಬಟ್ಟೆಯ ಜೋಳಿಗೆ. ಹಾಗೆ ಕೈಯಲ್ಲಿ ಆಸರೆಗೆ ಹಿಡಿದು ನಡೆಯುವಂತ ಉದ್ದನೆಯ ನಯಮಾಡಿದ ಕೋಲು. ಸಾಕಷ್ಟು ಉದ್ದ ಎನ್ನಬಹುದಾದ ಬಿಳಿ ಕರಿ ಬಣ್ಣ ಮಿಶ್ರಿತ ಗಡ್ಡ ಅವಳ ಗಮನ ಸೆಳೆಯಿತು. ಶಂಕರ ಆಗುವದಿಲ್ಲ ಅನ್ನುವಂತೆ ತಲೆ ಅಡ್ಡಡ್ಡ ಆಡಿಸುತ್ತಿದ್ದ. ಕುಮುದ ಹೊರಗೆ ಬಂದು ನಿಂತಿದ್ದು … Read more
ಅಕ್ಷರ, ಅನ್ನ, ಕುಬೇರ: ಸೋಮಶೇಖರ ಬಿದರೆ
ಬೆಳಗಿನ ಸೂರ್ಯ ಆಗಲೇ ತೇಲಿ ಬಂದು ೩ನೇಅಂತಸ್ತಿನಲ್ಲಿರೊ ಅವನ ಮನೆಯ ಕಿಟಕಿಯಲ್ಲಿ ಇಣುಕುತ್ತಿದ್ದ, ಹೆಂಡತಿ ಮಗ ಇನ್ನೂ ಸುಖ ನಿದ್ರೆಯಲ್ಲಿದ್ರು. ಬ್ರಾಹ್ಮೀ ಮಹೂರ್ತದಲ್ಲಿ ಏಳಬೇಕಂದು ಎಷ್ಟೋ ಸಲ ಅನ್ನಿಸಿದರೂ ಸಾಧ್ಯವಾಗಿಲ್ಲ. ತಿಂಗಳದ ಮೊದಲ ವಾರವಾದ್ದರಿಂದ ಖುಷಿಯಾಗಿದ್ದ. ರೂಡಿಯಂತೆ ತನ್ನ ಮೊಬೈಲಿನ ಸ್ಕ್ರೀನ್ ಆನ್ ಮಾಡಿದ ಸಾಲು ಸಾಲಾಗಿ ಸಂದೇಶಗಳು ಬಂದಿದ್ವು … Read more