ಪಂಜು ಕಾವ್ಯಧಾರೆ
ತುಂಡು ಬಟ್ಟೆಯ ಮಾನ….. ನಡೆದು ಹೋಗಲು ಅವಳು ಹಾದಿಯಲಿ ಹಸಿದ ಮೊಸಳೆಗಳಂತೆ ನಿಂತು ಕಾಯುವರು ಚುಡಾಯಿಸಲು …… ಸೂಜಿಯ ಕಣ್ಣೋಟಗಳಿಂದ ಕೊಲ್ಲುವರು ಅವಳ ಉಡುಗೆಯ ಅಂಚು ಪಾಪ!! ಗಾಳಿಗೆ ಹಾರಲು…. ಸಣ್ಣ ಬಟ್ಟೆ ತೊಡಲೇ ಬೇಕಿಲ್ಲವಳು ಕ್ಷಣ ಕ್ಷಣ ಒಳಒಳಗೆ ಸಾಯಲು , ಕಾಲು ಭೂಮಿಗೆ ಸೋಕಿದರೆ ಸಾಕು, ಸಿದ್ಧವಾಗಿವೆ ಸಮಾಜ, ಕಟ್ಟುನಿಟ್ಟು, ಲಿಂಗ ತಾರತಮ್ಯ ಗಳು ಅವಳ ಇರಿಯಲು…. ತುಂಡು ಬಟ್ಟೆ ತೊಟ್ಟ ಮಾತ್ರಕ್ಕೆ ಹೆಣ್ಣು ಪರವಾನಗಿ ನೀಡಿದಂತೆಯೇ ಮುಟ್ಟಲು?????? ಹೌದೆನ್ನುವವರೇ ಹೇಳಿ ಹಾಯುವಿರಾ ನೀವು … Read more
‘ಬಿ, ಎಡ್ನಲ್ಲಿ ಒಂದು ದಿನ’: ಯಲ್ಲಪ್ಪ ಹಂದ್ರಾಳ
ನಾಳೆ "ಕುಮಾರಗಂಧರ್ವ ಹಾಲ್ ನಲ್ಲಿ (ಬೆಳಗಾವಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶಕ್ತರು ಭಾಗವಹಿಸಬೇಕು ಮತ್ತು ಆಸಕ್ತರು ಕಾರ್ಯಕ್ರಮವನ್ನು ವೀಕ್ಷಿಸಬೇಕು. ಒಟ್ಟಿನಲ್ಲಿ ಎಲ್ಲರೂ ಅಲ್ಲಿರಬೇಕು'' ಎಂದು ಪ್ರಿನ್ಸಿಪಾಲರಾದ ಶ್ರೀ ಬಿ. ಮಲ್ಲಿಕಾರ್ಜುನ ಸರ್ ಅವರು ಗಂಭೀರವಾಗಿ ಹೇಳಿದಾಗ ರೋಮಾಂಚನವಾಯಿತು. ಏಕೆಂದರೆ ಬಿ. ಎಡ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಂದ್ರೆ ಮರುಭೂಮಿಯಲ್ಲಿ ಸಿಗುವ ಓಯಾಸಿಸ್ ಇದ್ದಹಾಗೆ. ಅದೂ ಕೆ. ಡಿ ದೇಶಪಾಂಡೆ ಮತ್ತು ಆನಂದ ಅಪ್ಪುಗೋಳ್(ಧರ್ಮದೇವತೆ, ನಂತರ ಸಂಗೊಳ್ಳಿರಾಯಣ್ಣ ಸಿನೆಮಾ ಖ್ಯಾತಿಯ)ಅವರುಗಳು ನಡೆಸುವ ಕಾರ್ಯಕ್ರಮ. ಸರಿ, … Read more
ಹುರಿಗೆಜ್ಜಿಯ ಸದ್ದು ಮನಸಿನ ಕಿವಿತಾಕಿದಾಗ…: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ
ಕೃತಿ: ಹುರಿಗೆಜ್ಜಿ ಲೇಖಕರು: ರಾಜಕುಮಾರ್ ಮಡಿವಾಳರ ಅವಲೋಕನ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ ಹುರಿಗೆಜ್ಜಿಯ ಸದ್ದು ಮನಸಿನ ಕಿವಿತಾಕಿದಾಗ… *** ರಾಜಕುಮಾರ್ ಮಡಿವಾಳರ ಅವರನ್ನು ಬೇಟಿಯಾಗಿ ಸರಿಯಾಗಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಮೊನ್ನೆ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನ ಧಾರವಾಡದಲ್ಲಿ ಎದುರುಗೊಂಡೆನು. ಈ ಕವಿ ಜೊತೆಗೆ ಬರೆತಾಗ ಕವಿ ಬೆರೆಯುವದಕ್ಕು ಬರೆಯುವದಕ್ಕೂ ವ್ಯತ್ಯಾಸವಿಲ್ಲ ಅನಿಸಿತು. ಪ್ರೀತಿಯಿಂದ ಹುರಿಗೆಜ್ಜಿ ಕೇಳಿದಾಗ ರಾಜಮರ್ಯಾದೆಯೊಂದಿಗೆ… ಎಂದು ಬರೆದು ನನ್ನ ಕೈಗಿಟ್ಟ ಈವತ್ತು ಅವನ ಹುರಿಗೆಜ್ಜಿಯ ಸದ್ದನ್ನು ಮನಸಿನ ಕಿವಿ ನಿಮರಿಸಿಕೊಂಡು ಕೇಳುವ … Read more
ವಿವೇಕವಾಣಿ !: ಕೆ ಟಿ ಸೋಮಶೇಖರ ಹೊಳಲ್ಕೆರೆ.
ತನಗೆ ನಲವತ್ತು ವರುಷ ತುಂಬುವ ಮುನ್ನ ಭಾರತವ ವಿಶ್ವಮಾನ್ಯವಾಗಿಸಿ, ಭಾರತದ ಧರ್ಮ, ಸಂಸ್ಕೃತಿಯ ಜಗಕೆ ಸಾರಿ, ಹಿಂದೂ ಧರ್ಮದ ಉದಾತ್ತತೆಯನ್ನು ಅರ್ಥೈಸಿ, ಭಾರತದ ಬಗೆಗೆ ಮಹಾನ್, ಉದಾತ್ತ ಭಾವನೆ, ಬರುವಂತೆ ಮಾಡಿ, ಅದ್ಬುತವ ಸಾಧಿಸಿ, ವಿಶ್ವಮಾನ್ಯನಾದ. ಆ ವೀರ ಸನ್ಯಾಸಿ ತನ್ನ ಆಕರ್ಷಕ ನಿಲುವಿನಿಂದ, ಉದಾತ್ತ ಮಾತಿನಿಂದ, ಸಿರಿ ಕಂಠದಿಂದ ಜನರ ಮಂತ್ರಮುಗ್ದಗೊಳಿಸಿ ಜಗವ ಗೆದ್ದ ! ಭಾರತ ರೂಪುಗೊಳ್ಳದ ಮುನ್ನ ಭಾರತೀಯತೆಯ ಪರಿಚಯ ವಿಶ್ವಕ್ಕೆ ಅಷ್ಟಾಗಿ ಆಗಿರಲಿಲ್ಲ. ಆಗಲು ಸಾಧ್ಯವಿರಲಿಲ್ಲ. ಏಕೆಂದರೆ ೧೯೪೭ ಕ್ಕಿಂತ ಹಿಂದೆ … Read more
ಕೃಷ್ಣ ಚೆಲುವೆಯ ಚಿತ್ರ: ಅನಂತ ರಮೇಶ್
೧ ಆ ಮುಗ್ಧಮುಖದ ಕಪ್ಪು ಚೆಲುವೆಯ ಚಿತ್ರವಿರುವ ಫೋಟೊವನ್ನು ಸುದೀಪ ರಾಜುವಿನ ಕೈಗೆ ಕೊಡುತ್ತಾ ಹೇಳಿದ, 'ರಾಜು, ಬೇಜಾರು ಮಾಡಬೇಡ. ನಿನ್ನ ಹೆಂಡತಿಯ ಈ ಫೋಟೋ ಕೊಡಲು ಸ್ವಲ್ಪ ತಡವಾಯಿತು'. ಸುದೀಪ ಕೊಟ್ಟ ಆ ಫ಼ೋಟೊ ನೋಡುತ್ತ ರಾಜು ಕಣ್ಣುಗಳಲ್ಲಿ ನೀರು ತುಂಬಿಕೊಂಡ. 'ನಿಮ್ಮಿಂದ ತುಂಬಾ ಉಪಕಾರವಾಯಿತು. ನನ್ನ ಹೆಂಡತಿಯ ನೆನಪಿಗೆ ಇದಕ್ಕಿಂತ ಒಳ್ಳೇದು ನಾನಿನ್ನೇನೂ ನಿರೀಕ್ಷೆ ಮಾಡ್ಲಿಲ್ಲ. ನಿಮ್ಮ ಕ್ಯಾಮರಾದಲ್ಲಿ ಆದಿನ ಫ಼ೋಟೊ ತೆಗೆಯದೆ ಹೋಗಿದ್ದರೆ ಅವಳ ನೆನಪಿಗೆ ಅಂತ ನನ್ನ ಹತ್ರ ಇನ್ನೇನೂ ಇರ್ಲಿಲ್ಲ' … Read more
ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಕೊನೆಯ ಭಾಗ): ಪ್ರಸಾದ್ ಕೆ.
ಇಲ್ಲಿಯವರೆಗೆ ಕಾರ್ಲಾ ಹೊಮೋಲ್ಕಾ ಮಹಿಳೆಯರ ಕಿಂಗ್-ಸ್ಟನ್ ಜೈಲಿನಲ್ಲಿ ಬಂಧಿಯಾಗಿರುತ್ತಾಳೆ. ಮುಂದೆ 1997 ರಲ್ಲಿ ಆಕೆಯನ್ನು ಕ್ಯೂಬೆಕ್ ನಗರದ ಜೋಲಿಯೆಟ್ ಇನ್ಸ್ಟಿಟ್ಯೂಷನ್ ಗೆ ವರ್ಗಾಯಿಸಲಾಗುತ್ತದೆ. ಹಲವು ಮನಃಶಾಸ್ತ್ರಜ್ಞರು, ನ್ಯಾಯಾಲಯದ ಅಧಿಕಾರಿಗಳು, ಅಪರಾಧ ವಿಭಾಗದ ತಜ್ಞರ ತಂಡಗಳು ಸತತವಾಗಿ ಕಾರ್ಲಾಳನ್ನು ನಿಯಮಿತವಾಗಿ ಭೇಟಿ ಮಾಡುತ್ತಾ, ಅಗತ್ಯ ಚಿಕಿತ್ಸೆಯನ್ನು ನೀಡುತ್ತಿರುತ್ತವೆ. ಕಾರ್ಲಾ ಹೊಮೋಲ್ಕಾ ತೀವ್ರವಾದ ಗೃಹದೌರ್ಜನ್ಯಕ್ಕೆ ಬಲಿಯಾದ ಹೆಣ್ಣೆಂಬುದು ಸತ್ಯವಾದರೂ, ತನ್ನ ಪತಿಯ ಹಿಂಸಾಮನೋಭಾವಗಳೆಡೆಗೆ ವಿಪರೀತ ಎನ್ನುವಷ್ಟು ವ್ಯಾಮೋಹವಿದ್ದುದು ಅಧ್ಯಯನಗಳಿಂದಲೂ ತಿಳಿದುಬಂದವು. ಇಂಪಲ್ಸಿವ್ ಮತ್ತು ಸ್ಯಾಡಿಸ್ಟ್ ಗುಣಗಳನ್ನು ತನ್ನ ವ್ಯಕ್ತಿತ್ವದಲ್ಲಿ ಹೊಂದಿದ್ದ … Read more
ಬೆವರಿಳಿಸಿದ ಸುಂಗ!!!: ಅಖಿಲೇಶ್ ಚಿಪ್ಪಳಿ
ಅಪ್ಪ ದೇಹದಾನ ಮಾಡಿದ ಬಗ್ಗೆ ಒಂದಿಷ್ಟು ಜನ ಅಸಮಧಾನ ವ್ಯಕ್ತಪಡಿಸಿದರು. ಇರಲಿ ಅವರವರ ಭಾವಕ್ಕೆ ತಕ್ಕಂತೆ ಎಂದು ಸುಮ್ಮನಾದೆ. ಧಾರ್ಮಿಕ ವಿಧಿ-ವಿಧಾನಗಳನ್ನು ಮಾಡಬೇಕಲ್ಲ. ಕಾಶಿಗಿಂತ ಪವಿತ್ರವಾದ ಸ್ಥಳ ಗೋಕರ್ಣ ಎಂದು ಬಲ್ಲವರು ಹೇಳಿದರು. ಸರಿ ಎಂದು ಸಕುಟುಂಬ ಸಮೇತನಾಗಿ ಗೋಕರ್ಣಕ್ಕೆ ಹೊರಟಾಯಿತು. ಹೋದ ಕೂಡಲೇ ಮೊಟ್ಟ ಮೊದಲ ಕೆಲಸವೆಂದರೆ, ತಲೆ ಬೋಳಿಸಿಕೊಂಡಿದ್ದು. ಕನ್ನಡಿಯಲ್ಲಿ ಒಂದು ಕ್ಷಣ ಗುರುತೇ ಸಿಗದಂತೆ ಆಗಿತ್ತು. ಸ್ನಾನ ಮಾಡಿಬಂದವನು ಮೊದಲು ಹುಡುಕಿದ್ದು ಬಾಚಣಿಕೆಯನ್ನು. ಅಭ್ಯಾಸ ಬಲದಂತೆ ತಲೆ ಬಾಚಲು ಹೋದರೆ ಅಲ್ಲಿ ಕೂದಲೇ … Read more
ಎರಡು ಮನಸ್ಸುಗಳ ಮಧ್ಯೆ (ಸಣ್ಣ ಕಥೆ): ಹೆಚ್ ಯಸ್ ಅರುಣ್ ಕುಮಾರ್
ವಾಸಂತಿ ಮಗಳು ಮೃದುಲಾ ಗೆ ಫೋನ್ ಮಾಡಿದಳು. "ನಿನ್ನ ಅಣ್ಣ ನ ಲಗ್ನ ನಿಶ್ವಯವಾಗಿದೆ " ಒಂದು ವಾರದ ಮುಂಚೆಯೇ ಬರುವಂತೆ ಆಗ್ರಹ ಮಾಡಿದಳು. ಮೃದುಲಾ ಬಂದರೆ ಅಮ್ಮ ಅಮ್ಮ ಅಂತ ಹಿಂದೆ ಮುಂದೆ ಸುತ್ತುತ್ತ ಕೆಲಸಕ್ಕೆ ಸಹಾಯ ಮಾಡುತ್ತಾಳೆ ಎನ್ನಿಸಿತ್ತು. ಅವಳು ಮದುವೆಯಾಗಿ ಹೊರಟುಹೋದ ಮೇಲೆ ಒಂಟಿತನ ಕಾಡುತಿತ್ತು. ಅವಳ ಮದುವೆಯಾಗಿ ಎರಡು ವರ್ಷವಾಗಿದ್ದರೂ ಕೇವಲ ಒಂದುಸಾರಿ ಮನೆಗೆ ಬಂದಿದ್ದಳು. ದೂರದ ಹಳ್ಳಿ. ಬೇಸಾಯದ ಕುಟುಂಬ. ಬಿತ್ತನೆ ಕಾಲ,ಕೊಯ್ಲಿನ ಕಾಲ ಹೀಗೆ ಬಿಡುವಿಲ್ಲದ ಜೀವನ ಅವಳದು … Read more
unsung hero: ವಿಶ್ವಾಸ್ ವಾಜಪೇಯಿ
ಅಪ್ಪ, ತಂದೆ, ಬಾಬಾ.. ಈ ಎರಡಕ್ಷರದ ಮಹತ್ವ. ಈ ಸಂಬಂಧದ ಅರ್ಥ ತಿಳಿದುಕೊಳ್ಳೋದು ಎಷ್ಟೋ ಜನರಿಂದ ಬಹುಷಃ ಆಗಂಗೇ ಇಲ್ಲಾ.. ಅಂಥವರಾಗ ನಾನೂ ಒಬ್ಬ ಎಷ್ಟಾದ್ರೂ ಹಿರಿ ಮಗ ನೋಡ್ರಿ, ಅವ್ವನ ಮ್ಯಾಲೇ ಪ್ರೀತಿ ಜಾಸ್ತಿ ಎಲ್ಲಾರೂ ಅಂತಾರ ತಾಯಿಯಾದಮೇಲೆ ಹೆಣ್ಣೆಗೆ ಎರಡನೇ ಜೀವ ಸಿಗ್ತದ ಅಂತ, ಮತ್ತ ಅಪ್ಪಗ? ಅವನ ಬಗ್ಗೆ ಯಾರೂ ಜಾಸ್ತೀ ಮಾತಾಡಲೇ ಇಲ್ಲ ಯಾಕಂದ್ರ ಅವರ ಜೀವನದಾಗ ಅಪ್ಪನ ‘ರೋಲ್’ ಯಾವತ್ತೂ, ಯಾರಿಗೂ ಕ್ಲಿಯರ್ ಆಗ್ಲೇ ಇಲ್ಲ ಎಲ್ಲರ ಜೀವನದ ಕಥಿಯೊಳಗೂ … Read more
ಮುಕ್ತನಾದವ: ಶ್ರೀಪತಿ ಮಂಜನಬೈಲು
“ಪ್ರತಿ ಸುಖದ ಹಿಂದೆ ಅನಿವಾರ್ಯವಾಗಿ ದುಃಖ ಬೆಂಬತ್ತುವುದೇ ಆದಲ್ಲಿ, ಆಗ ದುಃಖದಿಂದಲ್ಲ – ಸುಖದಿಂದಲೇ ಮುಕ್ತನಾಗುವ ಸ್ಪಷ್ಟತೆ ನಿನ್ನ ಜೀವನದಲ್ಲಿ ಫಲಿತವಾಗಬೇಕು.” (ಓಶೋ) — ನಾನಾಗ ಬೆಳಗಾವಿಯವನಾಗಿದ್ದೆ. ನಾನು ನನ್ನ ಸಂಸಾರದೊಂದಿಗೆ ವಾಸಿಸುತ್ತಿದ್ದ ಬಾಡಿಗೆ ಮನೆ ಬೆಳಗಾವಿ ದಂಡು ಪ್ರದೇಶದಲ್ಲಿತ್ತು. 1999 ರ ಡಿಸೆಂಬರ ತಿಂಗಳ ಮೊದಲ ರವಿವಾರದ ದಿನ ಮುಂಜಾನೆಯ ಸಮಯ. ಮನೆಯ ಬಾಗಿಲ ಚಿಲಕ ಕಟಕಟ ಬಡಿದ ಶಬ್ಧ. ಬಾಗಿಲು ತೆಗೆದೆ, ಅವನು ನಿಂತಿದ್ದ. ಬಾರೋ ಒಳಗೆ ಅಂದೆ. ಬಂದ, ಕೈಲಿದ್ದ ಆವತ್ತಿನ … Read more
ಭಾಷಾ ಮೋಡಿಗಾರ: ಜಯಲಕ್ಷ್ಮೀ ಪಾಟೀಲ್
ಗೋಪಾಲ್ ವಾಜಪೇಯಿ ಅನ್ನುವ ಹೆಸರು ಕೇಳಿದ ತಕ್ಷಣ ಸಿನಿಮಾದ ಹಾಡುಗಳ ಬಗ್ಗೆ ಗೊತ್ತಿರುವವರಿಗೆ ‘ಈ ಹಸಿರು ಸಿರಿಯಲಿ, ಮನಸು ನಲಿಯಲಿ ನವಿಲೇ’ ಮತ್ತು ‘ಕಂಬದಾ ಮ್ಯಾಲಿನ ಗೊಂಬೆಯೆ, ನಂಬಲೇನ ನಿನ್ನ ನಗೆಯನ್ನ’ ಹಾಡುಗಳಾದರೆ, ರಂಗಭೂಮಿಯ ಜನರಿಗೆ ‘ಅದ ಗ್ವಾಡಿ, ಅದ ಸೂರು ದಿನವೆಲ್ಲ ಬೇಜಾರು/ ತಿದಿಯೊತ್ತಿ ನಿಟ್ಟುಸಿರು ಎದಿಯಾಗ ಚುರುಚುರು..’, ‘ಯಾವ ದೇಸದ ರಮಣ ಬಂದು, ಏನ ಮೋಸವ ಮಾಡಿದಾ…’ ಇತ್ಯಾದಿ ಹಾಡುಗಳು ನೆನಪಿಗೆ ಬರುತ್ತವೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಶಿವರಾಜಕುಮಾರ್ ನಟಿಸಿದ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾ … Read more
ಇಷ್ಟು ಗಡಿಬಿಡಿ ಮಾಡ್ಕೊಂಡ್ ಯಾಕ ಹೋದ್ರಿ?: ಗುರುಪ್ರಸಾದ ಕುರ್ತಕೋಟಿ
ಅವತ್ತು ಎಪ್ರಿಲ್ ೨೧ ನೆ ತಾರೀಖು, ಮದ್ಯಾಹ್ನದ ಹೊತ್ತು. ಫೇಸ್ ಬುಕ್ ಮೆಸ್ಸೆಂಜರ್ ನಲ್ಲಿ ಬಂದ “ಎಂತದ್ರೋ” ಅನ್ನೋ ಮೆಸ್ಸಜು ನನ್ನ ಕಣ್ಣು ಹಿಗ್ಗಿಸಿತ್ತು. ಯಾವ ಹಿರಿಯರು ಆನ್ಲೈನ್ ಇದ್ದಾರೆ ಅಂತ ಗೊತ್ತಿದ್ರೂ, ಅವರು ನನಗೆ ಎಷ್ಟು ಚೆನ್ನಾಗಿ ಪರಿಚಯ ಇದ್ರೂ, ಅವರನ್ನ ಮಾತಾಡಿಸಬೇಕು ಅಂತ ಆಸೆ ಆದರೂ ಪಿಂಗ್ ಮಾಡೋಕೆ ಹೆದರತಿದ್ನೋ, ಅವರೇ ನನಗೆ “ಎಂತದ್ರೋ” ಅನ್ನೋ ಮೆಸ್ಸೇಜ್ ಕಳಸಿದ್ರೆ ನನಗೆ ಎಷ್ಟು ಖುಷಿ ಆಗಬೇಡಾ? ಅವತ್ತಿನ ದಿನ ನಾನು ಅಮೇರಿಕದಲ್ಲಿ ಇದ್ದೆ, ಅವ್ರು ಬೆಂಗಳೂರಿನಲ್ಲಿ. … Read more
ಗುರುವೆಂದರೆ..ಇವರೇ..!!: ಉಮೇಶ ದೇಸಾಯಿ
ಇತ್ತೀಚೆಗೆ ಸಂಧ್ಯಾರಾಣಿ ತಾವು ಗೋಪಾಲ ವಾಜಪೇಯಿಯವರನ್ನು ಮೊದಲಬಾರಿ ಭೇಟಿಯಾದಾಗಿನ ಸನ್ನಿವೇಶ ಹೇಳುತ್ತಿದ್ದರು. ಅವರು ಮುಂದುವರೆಸುತ್ತ ಹೇಗೆ ಒಬ್ಬ ಕವಿ ತಾನೇ ಗೀತೆಗಳ ರಚಿಸಿದರೂ ಅದರ ಹಕ್ಕನ್ನು ಅನುಭವಿಸಲಾಗದ ಸಂಕಟವನ್ನು ಹೇಗೆ ಅನುಭವಿಸಿರಬಹುದು ಎಂದು ಹೇಳುತ್ತಿದ್ದರು. ಅದ್ಭುತ ಅನ್ನುವ ಸಾಹಿತ್ಯ ಹಾಡುಗಳ ಬರೆದರೂ ಇದು ನನ್ನದು ಅಂತ ಹೇಳಿಕೊಳ್ಳಲಾಗದ ವಿಚಿತ್ರ ಪರಿಸ್ಥಿತಿ ಗುರುಗಳಾದ ಗೋಪಾಲ ವಾಜಪೇಯಿ ಅನುಭವಿಸಿದರು. ಅದು ಆಗಿದ್ದು ನಾಗಮಂಡಲ ನಾಟಕ/ಸಿನೇಮಾಗೆ ಸಂಬಂಧಿತವಾಗಿ. ಶಾಮರಾಯರ ಕಣ್ಣು/ಕಿವಿ ತಪ್ಪಿಸಿ ಬರೆಯುವ ಪರಿಸ್ಥಿತಿ..ಇಂದಿಗೂ ನಾಗಮಂಡಲದ ಹಾಧು ಬರೆದವರು "ಗೋಪಾಲ … Read more
ನನ್ನ ಶಿಷ್ಯ ಗೋಪಾಲ!: ಶಶಿಕಾಂತ ಕುರ್ತಕೋಟಿ
ನನ್ನ ಮಗ ಗುರುಪ್ರಸಾದ ಅದೊಂದು ದಿನ ಬೆಳಿಗ್ಗೆ “ಅಪ್ಪ, ಗೋಪಾಲ ವಾಜಪೇಯಿಯವರ ಪುಸ್ತಕ ಬಿಡುಗಡೆ ಸಮಾರಂಭವಿದೆ ಬರುತ್ತೀಯಾ? ಅವರು ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ.” ಅಂತ ಕೇಳಿದ. ನಾನು ಕೂಡಲೇ ಹೂಂ ಅಂತ ಒಪ್ಪಿಕೊಂಡೆ. ಆ ಹೆಸರು ನನಗೆ ೪೩ ವರ್ಷ ಹಿಂದೆ ಕರೆದೊಯ್ದಿತು. ನಮ್ಮಿಬ್ಬರದು ಗುರು-ಶಿಷ್ಯ ಸಂಬಂಧ. ಆ ಸಮಾರಂಭಕ್ಕೆ ಜಾತಕ ಪಕ್ಷಿಯಂತೆ ಕಾಯತೊಡಗಿದೆ. ಅಷ್ಟು ವರ್ಷಗಳ ನಂತರ ನನ್ನ ಆತ್ಮೀಯ ಗೋಪಾಲನನ್ನು ನೋಡುವ ಅವಕಾಶ ಅದಾಗಿತ್ತು. ನನ್ನ ಮಗನಿಗೆ ಚಿಕ್ಕಂದಿನಿಂದಲೂ ಸಾಹಿತ್ಯ, ನಾಟಕ ರಂಗದ … Read more
ಪಂಜು ಕಾವ್ಯಧಾರೆ
ನಿನ್ನ ಮಾತುಗಳು ಬೇಡುತ್ತಿರುವಾಗ ಬಲಿ ನನ್ನೆದೆಯ ನೋವನ್ನು ಯಾರಲ್ಲಿ ಹೇಳಿಕೊಳ್ಳಲಿ? ಮಾತಿಗೂ ಮೊದಲು ಕೋಪವೇ ಹೆಡೆ ಬಿಚ್ಚಿ ನಿಲ್ಲುತ್ತಿರುವಾಗ ಪಾತಾಳ ಗರುಡದ ಮಂತ್ರ ಕೋಲನ್ನು ಹುಡುಕುತ್ತ ಎಲ್ಲಿ ಹೋಗಲಿ? ಪ್ರೀತಿಯ ಹೂದೋಟದಲ್ಲಿ ಝಳಪಿಸುವ ಕತ್ತಿ ನರ್ತಿಸುವಾಗ ಸಾಣೆ ಹಿಡಿಯುವವರನ್ನು ಎಷ್ಟೆಂದು ಹುಡುಕಿ ಗಡಿಪಾರು ಮಾಡಲಿ? ಮನದ ಗರ್ಭಗುಡಿಯಲ್ಲಿ ನಂದಾದೀಪವೇ ಹೊತ್ತಿ ಪ್ರಜ್ವಲಿಸುವಾಗ ತಣ್ಣಿರು ಸುರಿದು ಬೆಂಕಿ ನಂದಿಸುವವರನ್ನು ಹುಡುಕುತ್ತ ಎಲ್ಲಿ ಹೋಗಲಿ? ಹೃದಯದಲ್ಲಿ ಪ್ರತಿಷ್ಟಾಪಿಸಿ ಮೂರ್ತಿ ತನ್ನನ್ನೇ ಭಗ್ನಗೊಳಿಸಿಕೊಳ್ಳುವಾಗ ಮುಕ್ಕಾಗದಂತೆ ಗರ್ಭಗುಡಿಯನ್ನು ಕಾವಲು ಕಾಯುವ ಕೆಲಸವನ್ನು ಯಾರಿಗೆ … Read more
ಅಪ್ಪ ಸತ್ತಾಗ: ಅಖಿಲೇಶ್ ಚಿಪ್ಪಳಿ
80 ವರ್ಷಗಳ ಹಿಂದೆ ಅಳುತ್ತಲೇ ಭೂಮಿಗೆ ಬಂದ ಮಗುವಿಗೆ ತಿಳುವಳಿಕೆ ಬರುವ ಮೊದಲೇ ತನ್ನ ತಂದೆಯನ್ನು ಕಳೆದುಕೊಂಡಿತ್ತು. ತಂದೆಯನ್ನು ನೋಡಿದ ನೆನಪು ಅದಕ್ಕಿರಲಿಲ್ಲ. ಕಡುಬಡತನದ ಆ ಮನೆಯಲ್ಲಿ ಮನೆ ತುಂಬಾ ಮಕ್ಕಳು ಎಲ್ಲರೂ ಸೇರಿದರೆ ಬರೋಬ್ಬರಿ 8 ಮಕ್ಕಳು ಹಾಗೂ ಎರಡು ವಿಧವೆಯರು! ಊರಲ್ಲಿ ಶಾಲೆಯಿದೆ, ಓದಲಿಕ್ಕೆ ಕಷ್ಟವಿದೆ. ಅಂತೂ-ಇಂತೂ ಕಷ್ಟಪಟ್ಟು ಆ ಮಗು 7ನೇ ತರಗತಿಯವರೆಗೆ ಕಲಿಯಿತು. ಹೆಚ್ಚು ಕನ್ನಡ ಹಾಗೂ ಸ್ವಲ್ಪ ಇಂಗ್ಲೀಷು. ಮತ್ತೆ ಬೇಸಾಯಕ್ಕಿಳಿದ ಆ ಯುವಕ ನಿರಂತರವಾಗಿ ದುಡಿಯುತ್ತಲೇ ಇದ್ದ. ಮಧ್ಯದಲ್ಲಿ … Read more
ಎಲೆಕ್ಷನ್ನು: ಸಿದ್ದರಾಮ ತಳವಾರ, ದಾಸ್ತಿಕೊಪ್ಪ
ಕೇರಿಯ ಜನ ಕಂಗಾಲಾಗಿದ್ದರು. ಗೋಡೆಯಲ್ಲಿದ್ದ ಗೂಟ ಸುಮ್ಮನೆ ತೆಗೆದು ಅದೆಲ್ಗೋ ಬಡ್ಕೊಂಡ್ರು ಅನ್ನೋ ಹಾಗೆ ಇದೆಲ್ಲಾ ನಮ್ಗೆ ಬೇಕಿತ್ತಾ ಅಂತ ಕೇರಿಯ ಹೆಣ್ಣು ಮಕ್ಕಳೆಲ್ಲಾ ಗುಸು ಗುಸು ಪಿಸು ಪಿಸು ಮಾತಾಡಲು ಶುರು ಮಾಡಿದ್ದರು. ಇರೋದಕ್ಕೆ ಸರಿಯಾದ ಸೂರಿಲ್ಲಾ ಕುಡಿಯೋದಕ್ಕೆ ನೀರಿದ್ರೂ ಕೇರಿಯಾಚೆ ಹೋಗಿ ಹಿಡ್ಕೊಂಡ ಬರೋ ಧೈರ್ಯ ಇಲ್ಲಾ. ಮನೇಲಿರೋ ಮುಟಗಿ ಹಿಟ್ಟು ಖಾಲಿ ಆಗಿರೋದ್ರಿಂದ ಮೂರು ದಿನದ ತಂಗಳ ರೊಟ್ಟಿಯನ್ನೇ ನೆನೆಸಿಕೊಂಡು ತಿನ್ನೋ ಟೈಮ್ ಬಂದೈತಿ. ಕೂಸುಗಳಿಗೆ ಹಾಲು ಕುಡಿದೇವಂದ್ರೂ ನಮ್ಮ ಹೊಟ್ಟೆಗ್ ಹಿಟ್ಟಿದ್ರೇ ತಾನೇ … Read more