ಗೂಡು ಬಿಟ್ಟು ಹಕ್ಕಿ: ದೀಪಾ ಜಿ ಎಸ್( ದೊಡ್ಡಿಕೊಪ್ಪ)

ಅರೇ,
ಅದೇನೋ ಗೊತ್ತಿಲ್ಲ ಜೀವನ ಎಷ್ಟು ಬ್ಯುಸಿ ಆಗಿದೆ ಅಂದ್ರೆ ಬೆಳಗ್ಗೆ ಏಳು, ರೆಡಿ ಆಗು, ಆಫೀಸ್ಗೆ ಹೋಗು, ಸಂಜೆ ಮನೆಗೆ ಬಾ, ಅಷ್ಟೇ.. ಜೀವನ ಒಂತರ ನಾಟಕನೇ ಆಗಿ ಹೋಗಿಬಿಟ್ಟಿದೆ. ಕೆಲಸ ಮನೆ, ಕೆಲಸ ಮನೆ ಇಷ್ಟೇ ಜೀವನ ಅನ್ನೋ ತರ, ಇದೆಲ್ಲರ ಮಧ್ಯೆ ಒಂದು ಒಳ್ಳೆ ಪುಸ್ತಕ ನನ್ನ ಕೈ ಸೇರಿದ್ದು ಹೀಗೆ ಅದೊಂದಿನ ನಾನು ಆಫೀಸ್ ಅಲ್ಲಿ ಕೆಲಸಮಾಡುವಾಗ ಸೆಕ್ಯೂರಿಟಿ ಬಂದು ದೀಪಾ ಅಂದ್ರೆ ಯಾರು ಅವರಿಗೆ ಒಂದು ಕೊರಿಯರ್ ಬಂದಿದೆ ಪ್ಲೀಸ್ ಕಲೆಕ್ಟ್ ಮಾಡ್ಕೊಳ್ಳಿ , ಅಂತ ಹೇಳಿ ಹೊರಟು ಹೋದ್ರು ಆದ್ರೆ ನನ್ನ ತಲೆಯಲ್ಲಿ ನನಗೆ ಯಾರಪ್ಪ ಅದು ಕೊರಿಯರ್ ಕಳಿಸಿದ್ದು ಏನ್ ಇರ್ಬೋದು ಅನ್ನೋ ಗುಂಗಲ್ಲೇ ಎದ್ದು ಹೋದೆ. ಕೊರಿಯರ್ ಕಲೆಕ್ಟ್ ಮಾಡಿ ನನ್ನ ಜಾಗಕ್ಕೆ ಬಂದು ಕುಳಿತ ಕೂಡಲೇ ನನ್ನ ಗೆಳತಿ ಏನೇ ಅದು ಅಂತ ಕೇಳುತ್ತಾ ನನ್ನ ಕೈಯಲ್ಲಿ ಇದ್ದ ಕೊರಿಯರ್ ಕಸಿದುಕೊಂಡಳು, ನಾನು ಅವಳಿಗೆ ಏನನ್ನು ಹೇಳದೆ ಸ ನೀನೇ ಓಪನ್ ಮಾಡಿ ನೋಡು ಏನ್ ಇದೆ ಗೊತ್ತಾಗುತ್ತೆ ಅಂತ ಹೇಳಿ ನನ್ನ ಕೆಲಸದಲ್ಲಿ ನಾನು ತೊಡಗಿದೆ. ಅವಳು ಅದನ್ನ ಓಪನ್ ಮಾಡಿ ಒಂತರ ಮುಖಮಾಡಿ ಹೇಳಿದ್ಲು ತಗೋಳೆ ಮೇಡಂ, ಏನೋ ಯಾರೋ ಗೂಡು ಬಿಟ್ಟು ಹಕ್ಕಿ ಅಂತೆ ನೋಡು ನಿನಗಾಗಿ ಬಂದಿದೆ ಓದು ಅಂತ ನನ್ನ ಕೈಯಲ್ಲಿ ಪುಸ್ತಕ ಕೊಟ್ಟಳು.

ಅದೇನೋ ಗೊತ್ತಿಲ್ಲ ಪುಸ್ತಕದ ಮುಖಪುಟ ನೋಡಿನೆ ಒಂದು ತರ ಇಂಟ್ರೆಸ್ಟಿಂಗ್ ಅನಿಸ್ತು.. ಅದು ಅಲ್ಲದೆಆ ಪುಸ್ತಕದ ಟೈಟಲ್ ನೋಡಿ ಅಬ್ಬಾ ಎಷ್ಟು ಅದ್ಬುತವಾದ ಹೆಸರು ಅಲ್ಲವೇ ( ಗೂಡು ಬಿಟ್ಟ ಹಕ್ಕಿ ) ಈ ಟೈಟಲ್ ನೋಡಿದ ಕೂಡಲೇ ಓದಬೇಕು ಅನ್ನುವ ಆಸೆ ಶುರುವಾಯಿತು. ಸಂಜೆ ಮನೆಗೆ ಬಸ್ಸಿನಲ್ಲಿ ಹೋಗುವಾಗ ಎಲ್ಲ ಅವರವರ ಮೊಬೈಲ್ ಜೊತೆ ಬ್ಯುಸಿ ಆಗಿದ್ದರು. ನಾನು ಪುಸ್ತಕ ಹಿಡಿದು ಕುಳಿತದ್ದನ್ನು ನೋಡಿ ನನ್ನನ್ನು ಕೆಲವರು ದಿಟ್ಟಿಸಿ ನೋಡುವುದಕ್ಕೆ ಶುರು ಮಾಡಿದರು, ಅದಕ್ಕೆ ತಲೆ ಕೆಡಿಸಿಕೊಳ್ಳದೆ ನನ್ನ ಪುಸ್ತಕದ ಪುಟ ತೆರೆದು ಓದುವುದಕ್ಕೆ ಶುರು ಮಾಡಿದೆ….

ಖಂಡಿತ ಆ ಪುಸ್ತಕ ಓದಿ ಮುಗಿಸೋಕೆ ಮೂರುದಿನ ನಾನೂ ತಗೊಂಡೆ ಆದ್ರೆ ಓದಿ ಮುಗಿಸುವುದರೊಳಗೆ ಲಾಸ್ಟ್ ಡೇ ಹನ್ನೆರಡು ಗಂಟೆ ಮೂವತ್ತು ನಿಮಿಷ ಆಸು ಪಾಸು ಆಗಿತ್ತು, ಆದರೆ ಅವತ್ತು ನನಗೆ ಗೊತ್ತಿಲ್ಲದೆ ನನ್ನ ಕಣ್ಣಲ್ಲಿ ನೀರು ತುಂಬಿ ಬಂತು ಇನ್ನೂ ಈ ಕಥೆ ಇರಬೇಕಿತ್ತು ನಾನು ಇನ್ನೂ ಆ ಕಥೆನಾ ಓದಬೇಕಿತ್ತು ಅಂತ ನನ್ನ ಮನಸ್ಸು ಒತ್ತಿ ಒತ್ತಿ ಹೇಳಿದ್ರು ಕಥೆ ಓದಿ ಮುಗಿಸಿ ಆಗಿತ್ತು.
ಪುಸ್ತಕದ ಕೊನೆಯ ಪುಟ ಮುಚ್ಚಿ ಪುಸ್ತಕವನ್ನ ತಬ್ಬಿ ಅತ್ತಿದ್ದು ಉಂಟು,

ಪುಟ್ಟಿ, ತಾತಯ್ಯ ಅಚ್ಚಳಿಯದಂತೆ ನನ್ನ ಮನಸಲ್ಲಿ ಗಾಡವಾಗಿ ಉಳಿದುಬಿಟ್ಟರು. ಬಿಡುವಿನ ಸಮಯದಲ್ಲಿ ಪದೆ ಪದೇ ಓದಬೇಕೆನ್ನುವ ಆಸೆ, ಚಡಪಡಿಕೆ, ಆ ಒಂದು ಅನುಭವ ಕಥೆಯಲ್ಲಿ ಬರುವಂತ ಸನ್ನಿವೇಶಗಳು ಇವೆಲ್ಲವೂ ಒಂದು ಬಾರಿ ಕಣ್ಣ ಮುಂದೆ ಬಂದಂತೆ ಆಗುತ್ತಿತ್ತು. ನಿಜವೇನೋ, ಕಣ್ಣ ಮುಂದೆ ನಡೆಯುತ್ತಿದೆಯೇನೋ ಅನಿಸುವಷ್ಟು ಕಥೆ ತುಂಬಾ ಚೆನ್ನಾಗಿತ್ತು.

ನಾನು ಹಲವಾರು ಪುಸ್ತಕಗಳನ್ನ ಓದಿದರೂ ನನ್ನ ಮನಸಲ್ಲಿ ಗಾಡವಾಗಿ ನಾಟಿದ್ದು ಅದು ಗೂಡು ಬಿಟ್ಟು ಹಕ್ಕಿ ಲೇಖಕಿ ಉಷಾ ನವರತ್ನರಾಮ್ ಅವರು ಬರೆದ ಹತ್ತು ಹಲವಾರು ಪುಸ್ತಕಗಳು ಆಸರೆ, ಬಂಧನ, ಯೌವನದ ಹೊನಲಲ್ಲಿ, ಆಸೆಗಳು, ನೂರಾರು, ಅಂಗೈಯಲ್ಲಿ ಅರಮನೆ ಈ ಎಲ್ಲ ಪುಸ್ತಕಗಳನ್ನ ಓದುವಾಗ ಇರುವಂತ ಖುಷಿ ಪುಸ್ತಕ ಓದಿ ಮುಗಿಸಿದಾಗ ಬರಿ ಭಾರವಾದ ಮನಸ್ಸು ಅಷ್ಟೇ..

“ಉಷಾ ನವರತ್ನರಾಮ್” ಅವರು ಬರೆದ ಈ “ಗೂಡು ಬಿಟ್ಟು ಹಕ್ಕಿ” ಲೇಖಕಿ ತೆಗೆದುಕೊಂಡಿರೋ ಕಥೆಯ ಮೊದಲನೆಯ ಪ್ಯಾರಾ ಇಂದ ಹಿಡಿದು . ಆ ಪುಸ್ತಕದಲ್ಲಿ ಬರುವಂತ ಸನ್ನಿವೇಶಗಳು.. ಪಾತ್ರಗಳು ಕೂಡ ನಮ್ಮನ್ನ ಪರಕಾಯ ಪ್ರವೇಶ ಮಾಡುತ್ತವೆ. ಮತ್ತು ಆ ಕಥೆಯಲ್ಲಿ ನಾನು ಇರುವಹಾಗೆ ಅನ್ನಿಸುವಷ್ಟು ಬರವಣಿಗೆ ಅದ್ಭುತವಾಗಿತ್ತು. ಪುಸ್ತಕ ಓದಿ ಮುಗಿಸಿರಬಹುದು ಆದರೆ ಆ ಪುಟ್ಟಿ ಎಷ್ಟು ಜಾಣೆ ಅವಳಸ್ಟೇ ನಾನು ಕೂಡ ಜಾಣೆಯಾಗಿರಬೇಕು ಎಲ್ಲರನ್ನ ಸಹಭಾವನೆಯಿಂದ ಪ್ರೀತಿಯಿಂದ ನೋಡಿಕೊಳ್ಳಬೇಕು ಅನ್ನುವಷ್ಟು ಆ ಪುಟ್ಟ ಪೋರಿ ನನ್ನ ಮನಸಲ್ಲಿ ಗಾಡವಾಗಿ ಮಾಸದಂತೆ ಉಳಿದು ಬಿಟ್ಟಳು ಅವಳು ಈಗ ಗೂಡು ಬಿಟ್ಟ ಹಕ್ಕಿ ಅಲ್ಲ ” ಗೂಡು ಸೇರಿದ ಹಕ್ಕಿ”

ದೀಪಾ ಜಿ ಎಸ್ ( ದೊಡ್ಡಿಕೊಪ್ಪ)

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
0
Would love your thoughts, please comment.x
()
x