ನಮಸ್ಕಾರ,
ನಾನು ರಾಜಹಂಸ.
ಇತ್ತೀಚೆಗೆ ನಾನು ನನ್ನ ಮೊದಲ ಕನ್ನಡ ವಿಡಿಯೋ ಕಾದಂಬರಿಯನ್ನು ಪ್ರಕಟಿಸಿದ್ದೇನೆ. ಸಾಮಾನ್ಯವಾಗಿ ಕಾದಂಬರಿಗಳು ಪುಸ್ತಕ, ಇ-ಬುಕ್ ಅಥವಾ ಆಡಿಯೋ ಬುಕ್ ರೂಪದಲ್ಲಿ ಬರುತ್ತವೆ. ಆದರೆ, ನಾನು ಒಂದು ಹೊಸ ಪ್ರಯೋಗವಾಗಿ ದೃಶ್ಯ ಮತ್ತು ಕಥನವನ್ನು ಸಂಯೋಜಿಸಿ ವಿಡಿಯೋಗಳ ರೂಪದಲ್ಲಿ ಕಾದಂಬರಿಯನ್ನು ಪ್ರಕಟಿಸಿದ್ದೇನೆ.
ಈ ಕಾದಂಬರಿಯೂ ನನ್ನ ವೆಬ್‌ಸೈಟ್‌ನಲ್ಲಿ ವಿಡಿಯೋ ಮತ್ತು ಇ-ಬುಕ್ ರೂಪದಲ್ಲಿ ಲಭ್ಯವಿದೆ. ತಾವು ತಮ್ಮ ಅಮೂಲ್ಯ ಸಮಯದಲ್ಲಿ ಸ್ವಲ್ಪ ಸಮಯ ಮೀಸಲಿಟ್ಟು, ಮೊದಲು 2 ನಿಮಿಷಗಳ ಟ್ರೈಲರ್ ಮತ್ತು ಸುಮಾರು 9 ನಿಮಿಷಗಳ ಕಾದಂಬರಿಯ ಪರಿಚಯ ಮತ್ತು ಮೊದಲ ಅಧ್ಯಾಯದ ವಿಡಿಯೋವನ್ನು ವೀಕ್ಷಿಸಲು ವಿನಂತಿಸಿಕೊಳ್ಳುತ್ತೇನೆ. ತಮಗೆ ಇದು ಇಷ್ಟವಾದರೆ, ಕೂಪನ್ ಕೋಡ್ ಬಳಸಿ ಸಂಪೂರ್ಣ ಕಾದಂಬರಿಯನ್ನು ಉಚಿತವಾಗಿ ಪಡೆದುಕೋಬಹುದು.
ಟ್ರೈಲರ್: https://youtu.be/OkoVTyShV9A?si=MdA3d-9xyk6GxJ7j
ಕಾದಂಬರಿ ಪರಿಚಯ ವಿಡಿಯೋ: https://youtu.be/3Mc9zWK1vF8
ವೆಬ್‌ಸೈಟ್: https://rajahamsa.tech
ಕೂಪನ್ ಕೋಡ್: PREV100
ಈ ಪ್ರಯೋಗ ಖಂಡಿತ ನಿಮಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ನನ್ನಲ್ಲಿದೆ. ಇದು ನಮ್ಮ ಕನ್ನಡ ಸಾಹಿತ್ಯಕ್ಕೆ ಭವಿಷ್ಯದ ಹೊಸ ಮಾಧ್ಯಮವಾಗುವ ಸಾಮರ್ಥ್ಯ ಹೊಂದಿದೆ ಎಂದು ನಂಬಿದ್ದೇನೆ. ವಿಶೇಷವಾಗಿ, ಸಾಹಿತ್ಯದಿಂದ ದೂರವಾಗಿರುವ ಹೊಸ ಪೀಳಿಗೆಗೂ ಇದು ಹೊಸ ರೀತಿಯಲ್ಲಿ ಸಂಪರ್ಕ ಸಾಧಿಸಲು ನೆರವಾಗಬಹುದು. ಈ ವಿಭಿನ್ನ ಅನುಭವವನ್ನು ನೀವು ಸ್ವತಃ ನೋಡಿ, ಅನುಭವಿಸಬೇಕೆಂದು ವಿನಮ್ರವಾಗಿ ವಿನಂತಿಸುತ್ತೇನೆ.
ಧನ್ಯವಾದಗಳು
ಇಂತಿ ತಮ್ಮ ವಿಶ್ವಾಸಿ
ರಾಜಹಂಸ
