ಅಮೊರೆಸ್ ಪೆರ್ರೋಸ್:ವಾಸುಕಿ ರಾಘವನ್

  "ಅಮೊರೆಸ್ ಪೆರ್ರೋಸ್". ನಾನು ನೋಡಿದ ಮೊದಲ ಆಂಗ್ಲೇತರ ವಿಶ್ವಚಿತ್ರಗಳಲ್ಲಿ ಒಂದು. ಚಿತ್ರದ ಮೊದಲ ದೃಶ್ಯವೇ ಒಂದು ಟೆನ್ಸ್ ಕಾರ್ ಚೇಸ್. ಐದು ನಿಮಿಷದೊಳಗೆ ಒಂದು ಭೀಕರ ಕಾರ್ ಅಪಘಾತ ಆಗುತ್ತೆ. ಇದರಿಂದ ಮೂರು ಜನರ ಬದುಕಿನಲ್ಲಿ ಊಹಿಸಲಾಗದ ರೀತಿಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಈ ಮೂರು ಜನರ ಬದುಕು ಅಪಘಾತದ ಮುನ್ನ ಹೇಗಿರುತ್ತೆ, ಹೇಗೆ ಮೂರೂ ಜನರು ಅದೇ ಜಾಗದಲ್ಲಿ, ಅದೇ ಸಮಯದಲ್ಲಿ ಬರುವಂತೆ ಆಗುತ್ತೆ ಹಾಗೂ ಅಪಘಾತದ ನಂತರ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ. ಈ … Read more

ಕಥಾಸಂಗಮ:ವಾಸುಕಿ ರಾಘವನ್

ಪುಟ್ಟಣ್ಣ ಕಣಗಾಲ್ ಒಬ್ಬ ದೈತ್ಯ ಪ್ರತಿಭೆ. ನಿರ್ದೇಶಕನ ಸ್ಥಾನಕ್ಕೆ ಸಿಗಬೇಕಾದ ಮಾನ್ಯತೆ ತಂದುಕೊಟ್ಟವರು. ಸಾಮಾನ್ಯವಾಗಿ ಹೀರೋಗಳಿಂದ ಚಿತ್ರಗಳನ್ನು ಗುರುತಿಸುವ ವಾಡಿಕೆ ನಮ್ಮಲ್ಲಿ. ಆದರೆ “ಎಡಕಲ್ಲು ಗುಡ್ಡದ ಮೇಲೆ” ಚಂದ್ರಶೇಖರ್ ಪಿಚ್ಚರ್ ಅಂತ ಆಗಲೀ, “ಮಾನಸ ಸರೋವರ” ಶ್ರೀನಾಥ್ ಪಿಚ್ಚರ್ ಅಂತಾಗ್ಲೀ ಯಾರೂ ಹೇಳಲ್ಲ. ಅವೆಲ್ಲ ಗುರುತಿಸಿಕೊಳ್ಳೋದು ಪುಟ್ಟಣ್ಣ ಅವರ ಫಿಲಂಗಳು ಅಂತಲೇ! ಪುಟ್ಟಣ್ಣ ಅವರ ಅತ್ಯುತ್ತಮ ಚಿತ್ರಗಳು ಅನ್ನೋ ವಿಷಯ ಬಂದಾಗ ಸಾಕ್ಷಾತ್ಕಾರ, ಗೆಜ್ಜೆ ಪೂಜೆ, ಶರಪಂಜರ, ರಂಗನಾಯಕಿ, ನಾಗರಹಾವು, ಶುಭಮಂಗಳ, ಮಾನಸಸರೋವರ – ಇವು ಸಾಮಾನ್ಯವಾಗಿ … Read more

ನನ್ನ ಜೀವನವನ್ನು ಬದಲಿಸಿದ ಆ ಚಿತ್ರ:ವಾಸುಕಿ ರಾಘವನ್

  ಬಹುಶಃ 1998ರ ಆಗಸ್ಟ್ ಇರಬೇಕು. ಸೆಮಿಸ್ಟರ್ ಕೊನೆಯ ದಿನ ಕಾಲೇಜಿನಿಂದ ಹಾಲ್ ಟಿಕೆಟ್ ಇಸ್ಕೊಂಡು ಬರಕ್ಕೆ ಹೋಗಿದ್ದೆ. ವಾಪಸ್ಸು ಮನೆಗೆ ಬಾರೋವಾಗ ನನಗೇ ಗೊತ್ತಿಲ್ಲದಂತೆ ವುಡ್-ಲ್ಯಾಂಡ್ಸ್ ಥೀಯೇಟರ್ ಕಡೆಗೆ ನನ್ನ ಗಾಡಿ ತಿರುಗಿಸಿದ್ದೆ. ಆ ಚಿತ್ರದ ಬಗ್ಗೆ ಒಳ್ಳೆ ವಿಮರ್ಶೆ ಓದಿದ್ದೆನಾ ಅಥವಾ ಪರೀಕ್ಷೆ ಶುರು ಆಗೋದರ ಒಳಗೆ ಒಂದು ಸಿನಿಮಾ ನೋಡಿಬಿಡಬೇಕು ಅನ್ನೋ ಚಡಪಡಿಕೆ ಇತ್ತಾ ನೆನಪಿಗೆ ಬರ್ತಾ ಇಲ್ಲ. ನನಗೆ ಆಗ ಆ ಚಿತ್ರದ ನಿರ್ದೇಶಕನಾಗಲೀ, ನಟರಾಗಲೀ ಯಾರೂ ಗೊತ್ತಿರಲಿಲ್ಲ. ಆದರೆ ಚಿತ್ರಮಂದಿರದಲ್ಲಿ … Read more

ಯುದ್ಧವೆಂದರೆ ಬರೀ ಸೋಲು ಗೆಲುವಲ್ಲ: ವಾಸುಕಿ ರಾಘವನ್

ನಮ್ಮಲ್ಲಿ ಯುದ್ಧದ ಸಿನಿಮಾಗಳೇ ಬಹಳ ಅಪರೂಪ. ಐತಿಹಾಸಿಕ ಚಿತ್ರವಾದರೆ ಯುದ್ಧ ಅಂದರೆ ರಾಜರ ಕಾಲದ ಕಾಸ್ಟ್ಯೂಮ್ ಧರಿಸಿ ಮಾಡುವ ಫೈಟಿಂಗ್ ಅಷ್ಟೇ. ಈಗಿನ ಕಾಲದ ಕಥೆ ಆಗಿದ್ದರೆ ಅದು ಯಾವುದಾದರೊಂದು ಯುದ್ಧದ ಡಾಕ್ಯುಮೆಂಟರಿ ಥರ ಇರುತ್ತೆ. ಜೊತೆಗೆ ಅದೇ ಕ್ಲೀಷೆಗಳು – ಮಗನ ಬರುವಿಕೆಗಾಗಿ ಕಾಯುತ್ತಿರುವ ವಿಧವೆ ಅಮ್ಮ, ಪರ್ಸಿನಲ್ಲಿ ಇರೋ ಹೆಂಡತಿ ಫೋಟೋ ನೋಡ್ತಾ ಸಾಯೊ ಸೈನಿಕ, ಯೋಧರು ಅಂದರೆ ಬರೀ ಒಳ್ಳೆಯವರು ಅನ್ನೋ ಭಾಷಣ. ನಮ್ಮಲ್ಲಿ anti-war ಸಿನಿಮಾಗಳು ಇಲ್ಲವೇ ಇಲ್ಲ. ಸ್ವಲ್ಪ ಮಟ್ಟಿಗೆ … Read more

ಕನ್ನಡದಲ್ಲಿನ ‘ತುಂಟ’ ಚಿತ್ರಗೀತೆಗಳು: ವಾಸುಕಿ ರಾಘವನ್

  ಒಂದು ಹಾಡನ್ನ ಹೀಗೇ ಅಂತ ವಿಂಗಡಿಸೋದು ತುಂಬಾ ಕಷ್ಟ. ಒಬ್ಬರಿಗೆ ಮಜಾ ಕೊಡುವ ಹಾಡು ಇನ್ನೊಬ್ಬರಿಗೆ ಅತಿರೇಕ ಅನ್ನಿಸಬಹುದು. ಒಬ್ಬರ ‘ತುಂಟ’ ಹಾಡು ಇನ್ನೊಬ್ಬರಿಗೆ ಅಶ್ಲೀಲ ಅಥವಾ ‘ಪೋಲಿ ಹಾಡು’ ಅನ್ನಿಸಬಹುದು. ನನಗೆ ಈ ‘ತುಂಟ’ ಹಾಡುಗಳು ಬೇರೆ ಬೇರೆ ಕಾರಣಗಳಿಗೆ ಇಷ್ಟವಾಗಿವೆ – ಆಯ್ದುಕೊಂಡಿರುವ ವಿಷಯಗಳು, ವಿಷಯವನ್ನು ಹೇಳಿರುವ ರೀತಿ, ಪದಗಳಲ್ಲಿ ಪನ್ ಮಾಡಿರುವುದು, ಒಂದಕ್ಕಿಂತ ಹೆಚ್ಚು ಅರ್ಥ ಕೊಡುವ ಸಾಲುಗಳು ಅಥವಾ “ಹೀಗೂ ಉಂಟೇ” ಅನ್ನುವಂಥ ಅಸಂಬದ್ಧತೆ! ಇಲ್ಲಿದೆ ನೋಡಿ ನನ್ನ ಅಚ್ಚುಮೆಚ್ಚಿನ … Read more

ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್-ಫ್ಲೈ: ವಾಸುಕಿ ರಾಘವನ್

“ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್-ಫ್ಲೈ” 2007ರಲ್ಲಿ ತೆರೆಕಂಡ ಫ್ರೆಂಚ್ ಚಿತ್ರ ನನಗೆ ತುಂಬಾ ಪ್ರಿಯವಾದ ಚಿತ್ರಗಳಲ್ಲಿ ಒಂದು. ಪರಾಲಿಸಿಸ್ ಇಂದ ಇಡೀ ದೇಹದ ಸ್ವಾಧೀನ ಕಳೆದುಕೊಳ್ಳುತ್ತಾನೆ ಜೀನ್ ಡೊಮಿನಿಕ್ ಬಾಬಿ; ತನ್ನ ಎಡಗಣ್ಣನ್ನು ಹೊರತುಪಡಿಸಿ. ಕೇವಲ ಕಣ್ಣು ಮಿಟುಕಿಸಿ ಒಂದು ಪುಸ್ತಕವನ್ನು ಬರೆಯುತ್ತಾನೆ. ಇದೇನಪ್ಪಾ ನಂಬಲಸಾಧ್ಯವಾದ ಕಥೆ ಅಂದ್ರಾ? ನಿಮಗೆ ಆಶ್ಚರ್ಯ ಆಗಬಹುದು, ಇದು ಎಲ್ ಮ್ಯಾಗಜಿನ್ ಎಡಿಟರ್ ಒಬ್ಬನ ನೈಜ ಕಥೆಯನ್ನು ಆಧರಿಸಿದ ಚಿತ್ರ! ಚಿತ್ರ ಶುರು ಆಗುವುದು, ಮೂರು ವಾರದ ಕೋಮಾ … Read more

ಎಡ್ ವುಡ್ – ಹೀಗೂ ಒಬ್ಬ ನಿರ್ದೇಶಕ: ವಾಸುಕಿ ರಾಘವನ್

ನಿಮ್ಮ ಪ್ರಕಾರ ಅತ್ಯುತ್ತಮ ನಿರ್ದೇಶಕರು ಯಾರು ಅಂತ ಯಾರನ್ನಾದ್ರೂ ಕೇಳಿ. ಥಟ್ ಅಂತ ಉತ್ತರ ಸಿಗುತ್ತೆ ನಿಮ್ಗೆ – ಪುಟ್ಟಣ್ಣ ಕಣಗಾಲ್ ಅಂತಲೋ, ಸತ್ಯಜಿತ್ ರೇ ಅಂತಲೋ, ಸ್ಪೀಲ್ಬರ್ಗ್, ಕ್ಯೂಬ್ರಿಕ್, ಬರ್ಗ್ಮನ್, ನೋಲನ್ ಅಂತಲೋ – ಅವರವರ ಆಸಕ್ತಿ, ಅಭಿರುಚಿ, ವಯೋಮಾನ, ಚಿತ್ರವೈವಿಧ್ಯಗಳ ಪರಿಚಯಕ್ಕೆ ತಕ್ಕಂತೆ ಉತ್ತರಿಸುತ್ತಾರೆ. ಅದೇ ನಿಮ್ಮ ಪ್ರಕಾರ ಅತ್ಯಂತ ಕಳಪೆ ನಿರ್ದೇಶಕ ಯಾರು ಅಂತ ಕೇಳಿ ನೋಡಿ, ತಕ್ಷಣ ಉತ್ತರ ಕೊಡೋದು ಕಷ್ಟ ಆಗುತ್ತೆ. ಆದರೆ ಬಹಳಷ್ಟು ಚಿತ್ರಪ್ರೇಮಿಗಳು ಹಾಗು ವಿಮರ್ಶಕರ ಪ್ರಕಾರ … Read more

ಗರಂ ಹವಾ : ವಾಸುಕಿ ರಾಘವನ್

ನಮ್ಮ ದೇಶಕ್ಕೆ ತುಂಬಾ ದೊಡ್ಡ ಇತಿಹಾಸ ಇದೆ. ಆದರೆ ಅದಕ್ಕೆ ನ್ಯಾಯ ಒದಗಿಸುವಷ್ಟು ಸಂಖ್ಯೆಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ಚಿತ್ರಗಳು ಬಂದಿಲ್ಲ. ನಮ್ಮವೇ ಚಾರಿತ್ರಿಕ ಘಟನೆಗಳು, ರಾಜಕೀಯ ಸನ್ನಿವೇಶಗಳು, ಪ್ರಸಿದ್ಧ ವ್ಯಕ್ತಿಗಳು ನಮ್ಮ ನಿರ್ದೇಶಕರನ್ನು ಪ್ರೇರೇಪಿಸಿದ್ದು ಕಡಿಮೆ. ನಮ್ಮ ಗಾಂಧಿಯ ಬಗ್ಗೆ ಚಿತ್ರ ಮಾಡಲು ರಿಚರ್ಡ್ ಅಟ್ಟೆನ್ಬರೋ ಬರಬೇಕಾಯ್ತು. ಮಂಗಲ್ ಪಾಂಡೆ, ಭಗತ್ ಸಿಂಗ್, ವಲ್ಲಭಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್ ಎಲ್ಲರ ಬಗ್ಗೆ ಒಂದೋ ಎರಡೋ ಚಿತ್ರಗಳು. ನಮ್ಮಲ್ಲಾಗಿರೋ ಯುದ್ಧಗಳ ಬಗ್ಗೆ ಡಾಕ್ಯುಮೆಂಟರಿ ಥರದಲ್ಲಿ ಒಂದೊಂದು ಚಿತ್ರ ಅಷ್ಟೇ. … Read more

ಎದ್ದೇಳು ಮಂಜುನಾಥ – ಒಂದು ಅಪರೂಪದ ಚಿತ್ರ

“ಕನ್ನಡದ ಮಟ್ಟಿಗೆ ಒಂದು ಉತ್ತಮ ಪ್ರಯತ್ನ/ಚಿತ್ರ” – ಈ ವಾಕ್ಯವನ್ನು ನೀವು ತುಂಬಾ ಸಲ ಕೇಳಿರುತ್ತೀರ. ನೀವು ಬಳಸಿರುವ ಸಾಧ್ಯತೆಗಳೂ ಇವೆ. ಒಂದು ಕ್ಷಣ ಯೋಚಿಸಿ, ಹಿಂಗಂದ್ರೆ ನಿಜವಾದ ಅರ್ಥ ಏನು ಅಂತ. ‘ಫ್ರೆಂಚ್ ಮಟ್ಟಿಗೆ ಒಳ್ಳೆ ಚಿತ್ರ’ ಅಥವಾ ‘ಇಟಾಲಿಯನ್ ಮಟ್ಟಿಗೆ ಉತ್ತಮ ಪ್ರಯೋಗ’ ಅಂತೆಲ್ಲಾದ್ರೂ ಕೇಳಿದ್ದೀರಾ? ಅಥವಾ ‘ಕನ್ನಡದ ಮಟ್ಟಿಗೆ ಉತ್ತಮ ಪೇಂಟಿಂಗ್ ಇದು’ ಅಥವಾ ‘ಕನ್ನಡದ ಮಟ್ಟಿಗೆ ಉತ್ತಮ ಸಂಗೀತ ಇದು’ ಅಂತೇನಾದ್ರೂ? ಇಲ್ಲ ಅಲ್ವಾ? ಮತ್ತೆ ಕನ್ನಡ ಚಲನಚಿತ್ರಗಳಿಗೇಕೆ ಈ ವಾಕ್ಯಪ್ರಯೋಗ? … Read more

ಕಾಂಟೆಕ್ಸ್ಟ್

ಮನುಷ್ಯನ ಭಾವನೆಗಳು ಸಾರ್ವತ್ರಿಕ. ಆದರೆ ಅವುಗಳ ಅಭಿವ್ಯಕ್ತಿ ಬದಲಾಗುತ್ತದೆ – ಬೇರೆ ಬೇರೆ ದೇಶಗಳಲ್ಲಿ, ಭಾಷೆಗಳಲ್ಲಿ, ಕಾಲಘಟ್ಟಗಳಲ್ಲಿ ಕಾಣಬರುವ ರೀತಿಯಲ್ಲಿ ಭಿನ್ನತೆಯಿರುತ್ತದೆ. ಇದನ್ನು ‘ಕಾಂಟೆಕ್ಸ್ಟ್’ ಅಂತೀನಿ ನಾನು. ಈ ಕಾಂಟೆಕ್ಸ್ಟ್ ಗೊತ್ತಿದ್ದಾಗ ಮಾತ್ರ ಕೆಲವು ಪಾತ್ರಗಳು, ಸನ್ನಿವೇಶಗಳು, ಚಿತ್ರಗಳನ್ನು ಅಪ್ಪ್ರಿಶಿಯೇಟ್ ಮಾಡಲಿಕ್ಕೆ ಸಾಧ್ಯ! ಇದಕ್ಕೆ ಉದಾಹರಣೆಯಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಎರಡು  ಮಹಾನ್ ಚಿತ್ರಗಳ ಬಗ್ಗೆ ಹೇಳಲು ಇಷ್ಟಪಡುತ್ತೇನೆ – “೧೨ ಆಂಗ್ರಿ ಮೆನ್” ಹಾಗು “ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ”. ಪ್ರತಿಯೊಬ್ಬ … Read more

ವುಡೀ ಆಲೆನ್ ಮತ್ತು ವಾಸುಕಿ ರಾಘವನ್

  ಕೆಲವು ಚಿತ್ರಗಳೇ ಹಾಗೆ. ಮೊದಲ ಬಾರಿ ನೋಡಿದಾಗ ಅಷ್ಟೊಂದು ಅದ್ಭುತ ಅಂತ ಅನ್ನಿಸಿರೋಲ್ಲ. ಅದಕ್ಕೆ ನಾವು ನೋಡಿದಾಗಿನ ಮನಸ್ಥಿತಿ ಕಾರಣ ಇರಬಹುದು, ಅಥವಾ ಅಷ್ಟೊಂದು ವೈವಿಧ್ಯಮಯ ಚಿತ್ರಪ್ರಕಾರಗಳ ಪರಿಚಯ ಇಲ್ಲದಿರುವುದು ಕೂಡ. ನಂತರದ ಮರುವೀಕ್ಷಣೆಗಳಲ್ಲಿ ಆ ಚಿತ್ರಗಳು ಹೊಸ ಹೊಸ ಡೈಮೆನ್ಶನ್ ಗಳನ್ನು ತೋರುತ್ತವೆ. “ಅಯ್ಯೋ, ಇದನ್ನ ನಾನು ಗಮನಿಸಿಯೇ ಇರಲಿಲ್ಲ ಅಲ್ವಾ” ಅಂತ ನಮ್ಮನ್ನು ಚಕಿತಗೊಳಿಸುತ್ತವೆ. ಅಂತಹ ಒಂದು ಅದ್ಭುತ ಚಲನಚಿತ್ರ "ಆನೀ ಹಾಲ್". ಇದು ನನಗೆ ವೈಯಕ್ತಿಕವಾಗಿ ತುಂಬಾ ಪ್ರಿಯವಾದ ಚಿತ್ರವೂ ಹೌದು! … Read more