“ ಕೆಂಡದಲ್ಲಿ ಅರಳಿದ ಕಮಲ”: ಇಬ್ಬನಿಯ ಹುಡುಗ ರಾಮು

ಅಲ್ಲೊಂದು ಪುಟ್ಟ ಸಂಸಾರ, ತಂದೆ-ತಾಯಿ, ಮಗಳು-ಮಗ ಈ ಪುಟ್ಟ ಸಂಸಾರದ ಸಂತಸಕ್ಕೆ ಕೊರತೆಯಿರಲಿಲ್ಲ, ಜೀವನದ ಹಾಯಿ ದೋಣಿ ಅಲೆ, ತೆರೆಗÀಳ ಸೆಳೆತವಿಲ್ಲದೆ ಬದುಕಿನ ಪಯಣ ಸಾಗಿತ್ತು. ತಂದೆ ವೈದ್ಯ ತಾಯಿ-ಗೃಹಿಣಿ, ಮಕ್ಕಳು ಬಲು ಬುದ್ದಿವಂತರು, ಚೂಟಿಯಾಗಿದ್ದರು ಬದುಕಿನಲ್ಲಿ ಮುಂದೊಂದು ದಿನ ಪ್ರಜ್ವಲಿಸುವ ನಕ್ಷತ್ರವಾಗುವ ಸುಳಿವು ಈಗಲೇ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ರೂಪಗೊಳ್ಳುತ್ತಿದ್ದರು, ಮಗಳ ಹೆಸರು ಶ್ವೇತಾ, ಹೆತ್ತ ಜೀವಗಳಿಗೆ ಜೀವಜಲ, ಗುರುಗಳಿಗೆ ಸದಾ ಮೆಚ್ಚಿನ ಶಿಷ್ಯೆ, ಚತುರೆ, ಬದುಕಿನಲ್ಲಿ ಗುರಿಯಡೆಗಿನ ತನ್ನ ರಾಮಬಾಣ ಹೂಡುವಲ್ಲಿ ಹಗಲಿರುಳೆಲ್ಲೆನ್ನದೆ … Read more

ಹೊಸ ವರ್ಷದ ರೆಸೊಲ್ಯೂಶನ್: ಚಂದನ್ ಶರ್ಮ ಡಿ.

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳನ್ನು ಹೇಳುತ್ತಾ… ಇಲ್ಲೊಬ್ಬ ೨೩ ವರ್ಷದ ಇಂಜೆನಿಯರಿ೦ಗ್ ಮುಗಿಸಿ ಕೊನೆಯ ವರ್ಷದ MBA ಅಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಯ ಹೊಸ ವರ್ಷದ ರೆಸೊಲ್ಯೂಶನ್ ಬಗ್ಗೆ ಹೇಳ್ಬೇಕು. ಅವನು Writer ಆಗಬೇಕಂತೆ! ಪಂಜು ಪತ್ರಿಕೆ ಇಂದ  ಲೇಖನ ಬರೆಯೋಕೆ ಸ್ಟಾರ್ಟ್  ಮಾಡ್ತಾನಂತೆ! ಚೇತನ್ ಭಗತ್ ಸ್ಪೂರ್ತಿ ಅಂತೆ! “ಚೇತನ್ ಭಗತ್ ನನ್ ತರಾನೆ; ಬಿ.ಇ ಮೆಕ್ಯಾನಿಕಲ್ ಅಂಡ್ ಒಃಂ ಇನ್ ಫೈನಾನ್ಸ್-ಮಾರ್ಕೆಟಿಂಗ್, ನಾನ್ಯಾಕೆ ನೆಕ್ಸ್ಟ್ ಚೇತನ್ ಭಗತ್ ಆಗಬಾರದು?!” ಅಬ್ಬಾ! ಹಿಂಗೆ ಹೇಳೋ ಇವನಿಗೆ ಎಷ್ಟು … Read more

ಬಡವರ ನಿರ್ಮೂಲನೆಯೋ, ಬಡತನದ ನಿರ್ಮೂಲನೆಯೋ !?: ಆಶಿಕ್ ಮುಲ್ಕಿ

(ಬಡವರು ಬಡವರಾಗಿಯೇ ಇರೋವುದು ಯಾರತಪ್ಪು ? ಬಡವರನ್ನು ಬಡವರೆಂದು ಕರೆದು ತುಳಿತಕ್ಕೊಳಪಡಿಸಿರೋವುದು ಸರ್ಕಾರವೇ ಎಂದರೆ ತಪ್ಪಾಗಲಾರದು. ಬಡತನಕ್ಕೆ ಕೇವಲ ಸರ್ಕಾರವಷ್ಟೆ ಹೊಣೆಯಲ್ಲ. ದಿನದಿಂದ ದಿನಕ್ಕೆ ಸಂಖ್ಯೆಯಲ್ಲೂ ಗಾತ್ರದಲ್ಲೂ ಹೆಚ್ಚುತ್ತಿರುವ ಎಂ.ಎನ್.ಸಿ ಕಂಪೆನಿಗಳೂ ಕೂಡ ಇದಕ್ಕೆ ಕುಮ್ಮಕ್ಕು ನೀಡಿತ್ತಿವೆ.)  ಹೌದು! ಇತ್ತೀಚಿನ ಪರಿಸ್ಥಿತಿ ನೋಡುವಾಗ ಇಂತಹಾ ಒಂದು ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ದಿನ ನಿತ್ಯ ಒಂದೊತ್ತು ಊಟ ಇಲ್ಲದೆ ಕಣ್ಣೀರಿಟ್ಟು ಜೀವನ ‘ಕಳೆಯುವ’ ಅದೆಷ್ಟೋ ಜನರು ನಮ್ಮ ಮುಂದೆ ಇದ್ದಾರೆ. ಆದರೆ ಅದು ನಮ್ಮ ಗಮನಕ್ಕೆ ಬರುವುದಿಲ್ಲಾ. … Read more

ನನ್ನ ಪ್ಯಾರಂಡ್ ಲೌಲಿ…: ಮಂಜುಳ ಎಸ್.

                 ಘಮ್ಮೆನ್ನುವ ಹಸಿ ಮೈಯ್ಯ ವಾಸನೆಯಿಂದ ಆಗ ತಾನೆ ಮಿಂದು ಎದ್ದಿದ್ದೆ, ಮಣ್ಣಿನ ಗೋಡೆಗೆ ಮೆತ್ತಿಸಿದ್ದ ಕನ್ನಡಿ ಮುಂದೆ ನಿಂತು, ಮುಖವನ್ನು ವೃತ್ತಾಕಾರವಾಗಿ ತಿರುಗಿಸುತ್ತಾ, ಕೀವುಗಟ್ಟಿದ ಮೊಡವೆಗಳೊಂದಿಗೆ ಮಾತಾಡುತ್ತಿದ್ದೆ. ಕಪ್ಪು ಚರ್ಮವನ್ನು ಬಿಳಿಯಾಗಿಸುವ ಕನಸು ಕಾಣುತ್ತಿದ್ದೆ. ಆಗಾಗ ಮಡಕೆತಳ ಎಂದು ಛೇಡಿಸುವ ಗೆಳತಿಯರ ಮಾತು, ಒಮೊಮ್ಮೆ ನಾನೇ ನಿಂಗೆ ಗತಿ ಕಣೇ ಎಂದು ರೇಗಿಸುವ ಮುವತ್ತೆರಡರ ಸೋದರ ಮಾವನ ಮಾತು, ನನ್ನ ಕನಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿತ್ತು. ಶಾಲೆಯಲ್ಲಿ … Read more

ಮಾದಕ ವ್ಯಸನಿಗಳನ್ನು ನಿರ್ವಹಿಸುವಲ್ಲಿ ಪಾಲಕರ ಪಾತ್ರ: ಪ.ನಾ.ಹಳ್ಳಿ.ಹರೀಶ್ ಕುಮಾರ್

ಜೀವಿಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮವನ್ನುಂಟು ಮಾಡುವ ಯಾವುದೇ ಸಂಯುಕ್ತ ಅಥವಾ ರಾಸಾಯನಿಕ ಪದಾರ್ಥವೇ ಮಾದಕವಸ್ತು. ಮಾದಕ ವಸ್ತುವು ನೇರವಾಗಿ ಮೆದುಳಿನ ಮೇಲೆ ಅಥವಾ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದ ಮೇಲೆ, ಗ್ರಹಿಕೆಯ ಮೇಲೆ, ಪ್ರಜ್ಞಾವಸ್ಥೆಯ ಮೇಲೆ, ಭಾವನಾಸ್ಥಿತಿಯ ಮೇಲೆ ಪರಿಣಾಮವನ್ನು ಬೀರುವಂತಹುದು.ಅದನ್ನು ದುರ್ಬಳಕೆ ಮಾಡುವ ಸಾಧ್ಯತೆಗಳಿದ್ದು ಅದು ವ್ಯಸನಿಗೆ ಮತ್ತು ಸಮಾಜಕ್ಕೆ ಕೆಟ್ಟದ್ದನ್ನು ಉಂಟುಮಾಡುವ ಸಾಮಥ್ರ್ಯ ಪಡೆದಿದೆ. ಮಧ್ಯಸಾರ, ಕೆಫಿನ್, ಬಾರ್ಬಿಚುರೇಟ್ಸ್, ಟ್ರಾಂಕ್ವಿಲೈಸರ್ಸ, ಕೊಕೇನ್, ಮಾರ್ಫಿನ್, ಹೆರಾಯಿನ್, ಕೋಡೇನ್, ಅಫೀಮು, ಪಿತೆಡೈನ್, ಗಾಂಜಾ, ಚರಸ್, … Read more

ಹೆಣ್ಣಿಗೆ ಯಾಕೆ ‘ವಿಧವೆ’ಯೆಂಬ ಹಣೆಪಟ್ಟಿ: ಬಾಬುರೆಡ್ಡಿ.ಕೆ.ಬಿ.

ನಮ್ಮ ಸಮಾಜದಲ್ಲಿ ಹೆಣ್ಣಿಗೆ ತನ್ನದೇ ಆದ ಸ್ಥಾನವನ್ನು ನೀಡಲಾಗಿದೆ. ಹೆಣ್ಣನ್ನು ಭಾರತದಂತಹ ದೇಶದಲ್ಲಿ ಹೆಚ್ಚಾಗಿ ಗೌರವಿಸುತ್ತಾರೆ. ಮಹಾಭಾರತ ಮತ್ತು ರಾಮಾಯಣಗಳಲ್ಲಿ  ಹೆಣ್ಣನ್ನು ಅತ್ಯಂತ ಗೌರವದಿಂದ ನೋಡಿರುವುದನ್ನು ನೋಡಬಹುದಾಗಿದೆ. ಹೆಣ್ಣನ್ನು ದೇಶದಲ್ಲಿ ದೇವರಿಗೆ ಹೋಲಿಸಲಾಗಿದೆ. ಮನುಷ್ಯ ಜನ್ಮವಾಘಬೇಕಾದರೆ ಮಹಿಳೆ ಪಾತ್ರ ಬಹಳ ಮುಖ್ಯವಾದುದಾಗಿದೆ. ಇಂತಹ ಸಂಧರ್ಭದಲ್ಲಿ ಮಹಿಳೆಯನ್ನು ಅತ್ಯಂತ ಕೀಳಾಗಿ ನೋಲು ಪ್ರಾರಂಬಿಸಿರುವುದು ಅವಮಾನಕರವಾದ ಸಂಗತಿಯಾಗಿದೆ. ಹೆಣ್ಣು ಎಂದ ತಕ್ಷಣ ಅವಳು ಹೀಗೇ ಇರಬೇಕು, ಅವಳು ಹಾಕುವ ಬಟ್ದಟೆಯಿಂದ ಹಿಡಿದು ಅವಳ ಜೀವನ ಪೂರ್ತಿಯಾಗಿ ಸ್ವತಂತ್ರ್ಯವಾಗಿ ಬದುಕಲು ಬಿಡುತ್ತಿಲ್ಲ … Read more

“ಕಣ್ತುಂಬ ನಿದ್ದೆಮಾಡಿ, ಸದಾ ಖುಷಿಯಾಗಿರಿ”: ಗೂಳೂರು ಚಂದ್ರು

ಪ್ರಕೃತಿ ಮನುಷ್ಯನಿಗೆ ಎಲ್ಲವನ್ನು ಸಮಾನಾವಾಗಿ ಕೊಟ್ಟಿದೆ.ಆ ಪ್ರಕೃತಿ ಕೊಟ್ಟಿರುವುದನೆಲ್ಲಾ ನಾವು ಸಮನಾಗೇ ಅನುಭವಿಸಬೇಕು,ಸ್ವಲ್ಪ ಹೆಚ್ಚು ಕಡಿಮೆಯಾದರೆ ನಮಗೆ ಆಪತ್ತು.  ಪ್ರಕೃತಿದತ್ತವಾಗಿ ಮನುಷ್ಯನಿಗೆ ಸಿಕ್ಕಿರುವುದರಲ್ಲಿ 'ನಿದ್ದೆ'ಯು ಒಂದು.ಒಬ್ಬ ಮನುಷ್ಯ ಕನಿಷ್ಠ 7ರಿಂದ 8ಗಂಟೆ ನಿದ್ದೆ ಮಾಡಲೇಬೇಕು.  ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ಅವನೆ ಕಾರಣನಾಗುತ್ತಾನೆ.ಈಗಿನ ಬ್ಯುಸಿ ಜೀವನದಲ್ಲಿ ನಿದ್ರೆಯನ್ನು ಕೆಲವರು ಮರೆತೆಬಿಟ್ಟಿದ್ದಾರೆ. ಈಗಿನ ಬಹುತೇಕರು ನಿದ್ದೆ ಮಾಡದೇ ಬಳಲುತ್ತಿದ್ದಾರೆ, ಒಂದಲ್ಲಾ ಒಂದು ಯೋಚನೆ, ಚಿಂತೆ ಅವರನ್ನು ಕಾಡುತ್ತಲೇ ಇರುತ್ತದೆ. ನೀವು ಕೆಲವರನ್ನು ಗಮನಿಸಿರಬೇಕು ಸದಾ ಏನನ್ನೋ ಕಳೆದುಕೊಂಡವರಹಾಗೆ ಇರುತ್ತಾರೆ, ವೈಯುಕ್ತಿಕ … Read more

ಪ್ರಸ್ತುತ ಮತ್ತು ಭವಿಷ್ಯ: ಶ್ರೀಮಂತ್ ರಾಜೇಶ್ವರಿ ಯನಗುಂಟಿ

ಮನುಷ್ಯನ ಪ್ರಜ್ಞೆಯೆನ್ನುವುದು ಪ್ರಸ್ತುತ ಮತ್ತು ಭವಿಷ್ಯದ ಬುನಾದಿಯೆನ್ನಬಹುದೆನೊ. ಪ್ರಸ್ತುತದಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಘಟನೆಗಳು ನಮ್ಮ ಈ ಪ್ರಜ್ಞೆಯ ಮೇಲೇ ಅವಲಂಬಿತವಾದದ್ದು. ಈ ಪ್ರಜ್ಞೆ ಸಹಜ ನೈಜತೆಯಿಂದ ಕೂಡಿದೆಯೋ ಅಥವ ಸೃಷ್ಟಿತ ನೈಜತೆಯಿಂದ ಕೂಡಿದೆಯೋ ಎನ್ನುವುದು ಭವಿಷ್ಯವನ್ನು ನಿರ್ಣಯಿಸುವ ಪ್ರಧಾನ ಅಂಶ. ಪ್ರಸ್ತುತದಲ್ಲಿ ಸಂಭವಿಸುತ್ತಿರುವ ಕಾರ್ಯಘಟನೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದಾಗ ಇದರ ಹಿಂದೆ ನನಗೇನೂ ಮನುಷ್ಯನ ಅಂಥಹ ಜಾಗೃತಿಯಿಂದ ಅಥವ ದೂರದೃಷ್ಟಿಯಿಂದ ಕೂಡಿದ ಪ್ರಜ್ಞೆ ಕೆಲಸ ಮಾಡುತ್ತಿಲ್ಲವೆನಿಸುತ್ತಿದೆ. ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ವೈಜ್ಞಾನಿಕ ರಂಗಗಳಲ್ಲಿ ತಲ್ಲಿನವಾಗಿರುವ ಮನುಷ್ಯನ ಪ್ರಜ್ಞೆ … Read more

“ಅವನಿ”ಯ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ

ಅವನಿ…ವಸುಂಧರೆಯ ಚಿಗುರುಗಳ ಸಾಹಿತ್ಯಿಕ ಪಯಣ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿದ್ಯಾರ್ಥಿ ಅಂತರ್ಜಾಲ ಪಾಕ್ಷೀಕ ಪತ್ರಿಕೆ  (www.avani.uahs.net)   ಈ ವರ್ಷ ಅಂತರರಾಷ್ಟ್ರೀಯ ಮಣ್ಣು ವರ್ಷ ಇದರ ಪ್ರಯುಕ್ತ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗದ ವಿದ್ಯಾರ್ಥಿಗಳ ಅಂತರ್ಜಾಲ ಪತ್ರಿಕೆಯಾದ “ಅವನಿ”ಯ ವತಿಯಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದೇವೆ. ಭಾಗವಹಿಸಲಿಚ್ಚಿಸುವವರು “ಮಣ್ಣು”(ಇದು ಕೇವಲ ಸಮಗ್ರ ವಿಷಯ: ಶೀರ್ಷಿಕೆಯ ಆಯ್ಕೆ ಲೇಖಕ/ಕವಿಯದ್ದು) ಈ ವಿಷಯದ ಮೇಲೆ ತಮ್ಮ ಕವನಗಳನ್ನು “ಅವನಿ”ಯ ಸಂಪಾದಕ ಮಂಡಳಿಗೆ ಜನವರಿ 25, … Read more

ಬಾಲೀ ಲೆಕ್ಕಾಚಾರ: ಸೂರಿ ಹಾರ್ದಳ್ಳಿ

‘ಬಾಲಿಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ನಿಮ್ಮ ವೀಸಾಕ್ಕೆ ‘ಆನ್ ಅರೈವಲ್ ವೀಸಾ’ದಂತೆ ತಲಾ 35 ಡಾಲರ್ ಕೊಡಬೇಕು,’ ಎಂದು ಮೇಕ್‍ಮೈಟ್ರಿಪ್‍ನವರು ತಪ್ಪಾಗಿ ಹೇಳುತ್ತಲೆ ನನ್ನ ತಲೆ ಬಿಸಿಯಾಗಿತ್ತು. ನೂರರ ನಾಲ್ಕು, ಅಂದರೆ ನಾಲ್ಕು ನೂರು ಡಾಲರ್ (ಅಮೆರಿಕದ್ದು) ಖರೀದಿಸಿದ್ದೆ. ತೆರಿಗೆ, ಕಮಿಷನ್ ಇತ್ಯಾದಿ ಸೇರಿ ಪ್ರತೀ ಡಾಲರ್‍ನ ವಿನಿಯಮ ಬೆಲೆ ರೂ. 65.79 ಆಗಿತ್ತು. ಒಬ್ಬರಿಗೆ ಮೂವತ್ತೈದು ಡಾಲರ್ ಎಂದರೆ ಮೂವರಿಗೆ ನೂರೈದು ಡಾಲರ್. ಅಕಸ್ಮಾತ್ ವೀಸಾ ಕೊಡುವಾತ ಚಿಲ್ಲರೆ ಇಲ್ಲ ಎಂದು ಐದು ಡಾಲರ್ ಚಿಲ್ಲರೆ … Read more

ಕಲಾತ್ಮಕ ನೇಯ್ಗೆಕಾರ ಗೀಜಗಹಕ್ಕಿ: ಪ.ನಾ.ಹಳ್ಳಿ..ಹರೀಶ್ ಕುಮಾರ್

ಮಕ್ಕಳೇ ಪಕ್ಷಿಲೋಕ ಬಹು ವೈವಿಧ್ಯಮಯವಾದುದು. ಪ್ರತೀ ಪಕ್ಷಿಯೂ ತನ್ನದೇ ಆದ ವಿಭಿನ್ನತೆಯನ್ನು ಹೊಂದಿರುತ್ತದೆ. ಅವುಗಳ ನೋಟ, ದೇಹರಚನೆ, ಗೂಡುಕಟ್ಟುವಿಕೆ ವೈವಿಧ್ಯವಾಗಿರುತ್ತದೆ. ಅಂತಹ ವೈವಿಧ್ಯತೆಯನ್ನು ಹೊಂದಿದ ಹಕ್ಕಿಗಳಲ್ಲಿ ವಿಶೇಷವಾದುದು ಗೀಜಗ ಹಕ್ಕಿ, ಗೀಜಗನ ಹಕ್ಕಿಯು ಪೆಸ್ಸಾರಿಡೇ ಕುಟುಂಬಕ್ಕೆ ಸೇರಿದ ಹಕ್ಕಿಯಾಗಿದ್ದು, ನೇಯ್ಗೆ ಹಕ್ಕಿ ಎಂದೇ ಚಿರಪರಿಚಿತ. ಆಪ್ರಿಕಾ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಾದ ಭಾರತ, ಶ್ರೀಲಂಕಾ ಮತ್ತು ಬರ್ಮಾಗಳಲ್ಲಿ  ಮಾತ್ರ ಕಂಡುಬರುವ ಗೀಜಗ ಹಕ್ಕಿಯು ನೋಡಲು ಗುಬ್ಬಿಯಷ್ಟೇ ಚಿಕ್ಕದು. ಇದು ಗುಬ್ಬಿಯ ಸಂತತಿಗೆ ಹತ್ತಿರವೂ ಹೌದು. ಈ ಹಕ್ಕಿಯು … Read more

ಬಲವಂತದ ಬ್ರಹ್ಮಚಾರಿಗಳು: ಕೃಷ್ಣವೇಣಿ ಕಿದೂರ್

                                             ನಾವು  ಕಾಸರಗೋಡಿನ   ಕನ್ನಡಿಗರು.    ಕರ್ನಾಟಕದ   ಉತ್ತರ  ಗಡಿಭಾಗದ   ಊರು ಕಾಸರಗೋಡು.  ಮನೆಗೊಬ್ಬರು, ಇಬ್ಬರ ಹಾಗೆ     ಗಲ್ಫ್ ನಲ್ಲಿ  ದುಡಿಯುವವರು   ಹೆಚ್ಚಿನ  ಮನೆಗಳಲ್ಲಿದ್ದಾರೆ.   ಅದರಿಂದ ,   ಅಲ್ಲಿನ   ದುಡ್ಡು  ಇಲ್ಲಿ ಭವ್ಯ   … Read more

ಪ್ರೀತಿಯೆಂದರೆ ಬರೀಯ ಭಾವವಲ್ಲ. . . ನಂಬಿಕೆ !: ಜಯಪ್ರಕಾಶ್ ಪುತ್ತೂರು

ಪ್ರೀತಿ ಬರಿಯ ಎರಡಕ್ಷರ ಅಷ್ಟೇ, ಅಷ್ಟೇನಾ? ಖಂಡಿತಾ ಅಲ್ಲ. ಬರೆಯುತ್ತಾ ಹೋದಂತೆ ಅದೊಂದು ಕಾದಂಬರಿ, ಬರೆದಷ್ಟು ಮುಗಿಯದು ಈ ಪ್ರೀತಿಗೆ ವ್ಯಾಖ್ಯಾನ. ಪ್ರೀತಿ ಒಂದು ಅವ್ಯಕ್ತ ಭಾವ, ಹೆಸರು ಹೇಳುತಿದ್ದಂತೆ ನಮ್ಮನ್ನು ನಾವೇ ಮರೆಸುವ ಸುಂದರ ಶಕ್ತಿ ಈ ಪ್ರೀತಿ. ಕೆಲವೊಮ್ಮೆ ಅನ್ನಿಸುತ್ತೆ ಮಾನವ ಏನೇನೋ ಕಂಡು ಹಿಡಿದ, ಕಂಡು ಹಿಡಿಯುತ್ತಲೇ ಇದ್ದಾನೆ, ಮತ್ತೆ ಈ ಪ್ರೀತಿನಾ ಯಾರು ಹುಡುಕಿದ್ರು? ಗೊತ್ತಾ ಖಂಡಿತಾ ಇಲ್ಲಾರಿ, ಮನಸಲ್ಲಿ ಹುಟ್ಟಿ ಮನಸಲ್ಲೇ ಸಂಚರಿಸೋ ಇದೊಂದು ತರಹ ವಿದ್ಯುತ್, ಇದನ್ನ ಯಾರು … Read more

ಎಳಸು ಮನಸು ಕಂಡ ಮೊದಲ ನೈಟ್ ಷೋ: ಎಚ್.ಕೆ.ಶರತ್

ಆ ದಿನವೇ ರಿಲೀಸ್ ಆದ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಮಾರ್ನಿಂಗ್ ಷೋಗೆ ಹೋಗೋಣವೆಂದರೆ ಕೆಲಸದ ಬಾಧೆ. ಎಲ್ಲ ಹಲ್ಲಂಡೆಗಳನ್ನು ಮುಗಿಸಿಕೊಂಡು ಹೊರಟಾಗ ಗಂಟೆ ಏಳಾಗಿತ್ತು. ನಗರ ತುಂಬಾ ಆಕ್ಟೀವ್ ಆಗಿತ್ತು. ಬಿಂಕದ ಮೊರೆ ಹೋದ ಯುವಕ-ಯುವತಿಯರು, ಹಗಲೆಲ್ಲ ಬೆವರು ಸುರಿಸಿ ಬೆಂದಿದ್ದ ಕೂಲಿ ಕಾರ್ಮಿಕರು, ನಾಲಿಗೆಯ ಚಪಲಕ್ಕೆ ಶರಣಾಗಿ ಗೋಬಿ, ಪಾನಿಪೂರಿ, ಕಬಾಬ್ ಗಾಡಿಗಳ ಮುಂದೆ ಕ್ಯೂ ನಿಂತ ನನ್ನಂಥ ತಿಂಡಿ ಪೋತರು… ಒಟ್ಟಾರೆ ನಗರದ ಮುಖ್ಯರಸ್ತೆ ರಂಗು ಬಳಿದುಕೊಂಡಿತ್ತು. ಥಿಯೇಟರ್‍ನ ಕಾಂಪೌಂಡ್ ಒಳಗೆ ಕಾಲಿಡೋಣವೆಂದರೆ … Read more

ಯುವ ಮನಸ್ಸಿಗೊಂದು ಕಿವಿಮಾತು: ವಸಂತ ಬಿ. ಈಶ್ವರಗೆರೆ.

ಯೌವನಾವಸ್ಥೆ ಪ್ರಾರಂಭದ ಪೂರ್ವದಲ್ಲೇ ವಿವಿಧ ಭಾವನೆಗಳು ಯುವ ಪೀಳಿಗೆಯ ಮನಸ್ಸಿನಲ್ಲಿ ಉದಯಿಸಿರುತ್ತವೆ, ಆದರೆ ಅವು ರೂಪ ಪಡೆದು ನಿಜವಾದ ಆಕಾರವನ್ನು ಪಡೆಯುವುದು ಬಣ್ಣದ ಬದುಕಿನ ಕಾಲೇಜು ಜೀವನಕ್ಕೆ ಕಾಲಿಟ್ಟ  ಆನಂತರ. ಒಂದೊಂದು ರೀತಿಯಲ್ಲಿ ಅವರ ಚಿಂತನೆಯ ಆವಿಷ್ಕಾರದ ರೂಪ ಕೆಲವು ಅವಘಡಗಳು ಸಂಭವಿಸಿ  ಉತ್ತಮ ರೀತಿಯ ಚಿಂತನೆಯನ್ನು ಮನಸ್ಸಿನಲ್ಲಿ ಮೂಡಿಸಬಹುದು. ಇಲ್ಲವೇ ಅವು ನಕಾರಾತ್ಮಕ ಚಿಂತನೆಯನ್ನು ಪಡೆದು ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗಲೂ ಪ್ರೇರೇಪಿಸ ಬಹುದು. ಯುವ ಮನಸ್ಸಿನ ಚಿಂತನೆಗಳು ಸಕಾರಾತ್ಮಕವಾಗಿದ್ದಾಗ ಅಂತಹ ವ್ಯಕ್ತಿಗಳಿಂದ ಸಮಾಜಕ್ಕೆ ಉತ್ತಮ ಮಹತ್ವ … Read more

ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ) ರವರಿಂದ “ಹೊಂಗೆ ಮರದಡಿ” ಕಥಾಸಂಕಲನ ಲೋಕಾರ್ಪಣೆ

ಚಿತ್ರದಲ್ಲಿ : ಹೊಂಗೆ ಮರದ ಕೃತಿ ಲೋಕಾರ್ಪಣೆ ಮಾಡಿದ, ಶ್ರೀ ಗಿರೀಶ್ ರಾವ್ ಹತ್ವಾರ್ (ಜೋಗಿ) ಯವರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಮಂಜುನಾಥ ಕೊಳ್ಳೇಗಾಲರವರು, 3K ಬಳಗದ ಅಧ್ಯಕ್ಷೆ ಶ್ರೀಮತಿ ರೂಪ ಸತೀಶ್ ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು.  ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಸಕ್ರಿಯವಾಗಿರುವ ಹಾಗು ಅಪಾರ ಕನ್ನಡ ಭಾಷಾಭಿಮಾನದ ಸಮಾನ ಮನಸ್ಕರಿಂದ ಕೂಡಿರುವ 3K – ಕನ್ನಡ ಕವಿತೆ ಕಥನ ಬಳಗದ ಮೂರನೇ ಪ್ರಸ್ತುತಿ "ಹೊಂಗೆ ಮರದಡಿ – ನಮ್ಮ ನಿಮ್ಮ ಕತೆಗಳು" ಎಂಬ 26 … Read more

ಚಿಂತೆ ಬಿಡಿ..ರಿಲ್ಯಾಕ್ಸ್ ಪ್ಲೀಸ್..: ಬಿ.ರಾಮಪ್ರಸಾದ್ ಭಟ್

ನೀವು ಸದಾ ಲವಲವಿಕೆಯಿಂದ, ಅತ್ಯುತ್ಸಾಹದಿಂದ ಇರಲು ಬಯಸುವುದು ನಿಜವೇ ಆದರೆ ವೃಥಾ ಚಿಂತಿಸುವುದನ್ನು ಕೈ ಬಿಡಬೇಕು. ಒಂದು ವೇಳೆ ಯಾವುದೇ ರೋಗಕ್ಕೆ ತುತ್ತಾದಾಗಲೂ ಸಹ ಕಳವಳಗೊಳ್ಳದೆ 'ಅಯ್ಯೋ ಈ ರೋಗ ಬಂದಿದೆಯಲ್ಲಪ್ಪಾ,ಏನು ಮಾಡುವುದು? ಹೇಗೆ? ವಾಸಿಯಾಗುವುದೋ ಇಲ್ಲವೋ?' ಎಂದು  ಪೇಲವ ಮುಖ ಮಾಡಿಕೊಂಡು ಚಿಂತೆಗೀಡಾಗದೆ ನೆಮ್ಮದಿಯಾಗಿ ಸಾವಧಾನ ಚಿತ್ತದಿಂದ ಇದ್ದರೆ ಆ ನೆಮ್ಮದಿಯ ಭಾವನೆಯೇ ನಮ್ಮ ದೇಹದ ಜೀವಕೋಶಗಳ ಮೇಲೆ ಪ್ರಭಾವ ಬೀರಿ ನಮ್ಮ ರೋಗಗಳನ್ನು ಕಡಿಮೆಗೊಳಿಸುವುದು. ಅಲ್ಲದೆ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಪ್ರತಿಯೊಬ್ಬ ಮನುಷ್ಯನ … Read more

ನಿರಂತರ ಪ್ರಕಾಶನದ ಹೊಸ ಪುಸ್ತಕ ಹಾಗೂ ಸೀಡಿ ‘ಹಾರೋಣ ಬಾ’ ಕುರಿತು

ನಿರಂತರ ಪ್ರಕಾಶನ  ಮೈಸೂರಿನ ನಿರಂತರ ಪ್ರಕಾಶನ ಕಳೆದ 20 ವರ್ಷಗಳಿಂದ ರಂಗಭೂಮಿ,ಸಾಹಿತ್ಯ, ಜಾನಪದ ಕ್ಷೇತ್ರಗಳಲ್ಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಎಚ್ಚರದ, ಕನಸಿನ ಸಮಯಗಳಲ್ಲಿ ಚಳುವಳಿಗಳಷ್ಟೇ ಪ್ರಮುಖವಾಗಿ ಪುಸ್ತಕಗಳೂ ಆವರಿಸಿವೆ. ಕಲಿಸಿವೆ ಓದುಗನೊಬ್ಬ ಸಮಾಜದ ಜತೆಗೆ  ನೇರವಾಗಿ ಮುಖಾಮುಖಿಯಾಗುವ ಇಂಥ ಸನ್ನಿವೇಶ ಸೃಷ್ಟಿಸುವÀÀ ಹೊಣೆ  ನಮ್ಮೆಲ್ಲರದ್ದು. ಪುಸ್ತಕ ಪ್ರಕಟಣೆ ಎನ್ನುವುದು ನಮ್ಮ ಇಂಥಹ ಚಟುವಟಿಕೆಗಳ ವಿಸ್ತರಣೆ ಎಂಬುದು ನಮ್ಮ ನಂಬಿಕೆ. ಜನ ಸಾಂಸ್ಕøತಿಕ ಪರಂಪರೆಯ ಕುರಿತ ಉತ್ತಮ, ಚಿಂತನಶೀಲ ಪುಸ್ತಕಗಳ ಪ್ರಕಟಣೆ ನಮ್ಮ ಆಶಯ. ಈ ಹಿನ್ನೆಲೆಯಲ್ಲಿ ಕೆಲಸ … Read more

ಕರ್ನಾಟಕ ಪರಿಶೆ (ಭಾಗ-3): ಎಸ್. ಜಿ. ಸೀತಾರಾಮ್, ಮೈಸೂರು

       ಕನ್ನಡ ಭಾಷೆಯನ್ನು ಅರಳಿಸುವ ಹೆಸರಿನಲ್ಲಿ, ಅದೇ ಖ್ಯಾತ ಸಾಹಿತಿಗಳನ್ನು ಉತ್ಸವಗಳಲ್ಲಿ ಮತ್ತೆಮತ್ತೆ ಮೆರೆಸಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಮೊದಲಾದ ಪದವಿ-ಪ್ರಶಂಸೆಗಳ ಸುಂಟರಮಳೆಯನ್ನು ಅವರ ಮೇಲೆ ಚಳಿಜ್ವರಬರುವಮಟ್ಟಿಗೆ ಸುರಿಸುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ. (“ರಾಜ್ಯಕವಿ” ಬಿರುದು ಯಾವ “ದಾತಾರ” ನೇತಾರರಿಗೂ ಏಕೋ ಇನ್ನೂ ಹೊಳೆದಿಲ್ಲ! ನಿಜಾರ್ಥದಲ್ಲಿ “ರಾಷ್ಟ್ರಕವಿ” ಎಂಬುವುದೂ “ರಾಜ್ಯಕವಿ” ಅಷ್ಟೇ ಅಲ್ಲವೇ?) ಕನ್ನಡ “ಅಕ್ಕ-ಡುಮ್ಮಿ” (‘ಅಕ್ಯಾಡಮಿ’- ಡಿ.ವಿ.ಜಿ. ಕರೆದಂತೆ), ಪರಿಷತ್ತು, ಪ್ರಾಧಿಕಾರ, ಪೀಠ, ವಿಶ್ವವಿದ್ಯಾನಿಲಯ, ಇಲಾಖೆ … Read more

ಡಾ||ಕ್ಲೀನ್, ವಾಷ್‍ರೂಮ್ ಟು ವಾರ್ಡ್‍ರೋಬ್

ಲಾಂಡ್ರಿ, ಡ್ರೈಕ್ಲೀನಿಂಗ್ ಈಗ ನಿಮ್ಮ ಬೆರಳ ತುದಿಯಲ್ಲಿ  ಭಾರತದ ಮೊಟ್ಟ ಮೊದಲ ಆನ್‍ಲೈನ್ ಲಾಂಡ್ರಿ ಬುಕಿಂಗ್ ವ್ಯವಸ್ಥೆಯನ್ನು ಬೆಂಗಳೂರು ಮೂಲದ ಕನ್ನಡಿಗ, ಜರಗನಹಳ್ಳಿ ಕಾಂತರಾಜುರವರು “ಡಾ||ಕ್ಲೀನ್, ವಾಷ್‍ರೂಮ್ ಟು ವಾರ್ಡ್‍ರೋಬ್” ಎಂಬ ಲಾಂಡ್ರಿ ಸರ್ವಿಸಸ್ ಸಂಸ್ಥೆಯನ್ನು ಪ್ರಾರಂಭಿಸಿ ಅಭಿವೃದ್ದಿಪಡಿಸಿದ್ದಾರೆ. ಇದರ ಮೂಲಕ ಗ್ರಾಹಕರು ತಮ್ಮ ದಿನನಿತ್ಯ ಬಳಕೆಯ ಎಲ್ಲಾ ತರಹದ ಬಟ್ಟೆಗಳನ್ನು ಕುಳಿತಲ್ಲಿಯೇ ಕೆಲವೇ ಸೆಕೆಂಡುಗಳಲ್ಲಿ ತಮ್ಮ ಸ್ಮಾರ್ಟ್‍ಫೋನ್‍ಗಳನ್ನು ಬಳಸಿ ಲಾಂಡ್ರಿ ಬುಕ್ ಮಾಡಿ ಸೇವೆಯನ್ನು ತಮಗೆ ಬೇಕಾದ ದಿನ ಮತ್ತು ಸಮಯಕ್ಕೆ ಪಡೆಯಬಹುದಾಗಿದೆ.  ಇಂದಿನ ಯಾಂತ್ರಿಕ … Read more